ಅಂತಿಮೋಪಾಯ ನಿಷ್ಠೈ

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ

ಶಾಸ್ತ್ರವು, ಯಾವ ವಿಚ್ಛೇದವು ಇಲ್ಲದೆ ಭಗವಾನಿಗೆ ಕೈಂಕರ್ಯ ಮಾಡುವುದೇ ಪರಮಪ್ರಾಪ್ಯವಾಗಿ ಸ್ಥಾಪಿಸಿದೆ. ಈ ಕೈಂಕರ್ಯಪ್ರಾಪ್ತಿಗೆ ಹಲವಾರು ಉಪಾಯಗಳು ವಿಧಿಸಲ್ಪಟ್ಟರು, ಭಕ್ತಿ ಹಾಗು ಪ್ರಪತ್ತಿ ಮುಖ್ಯವಾದವು. ಆದರೆ ಭಕ್ತಿ ಪ್ರಪತ್ತಿಗಳನ್ನೂ ಮೀರಿ ಪೂರ್ಣವಾಗಿ ಆಚರ್ಯನನ್ನೇ ಆಲಂಬಿಸಿರುವುದು ಪರಮ ನಿಃಶ್ರೇಯಸ್ಸಿಗೆ ಪರಮ ಹಾಗು ಸುಲಭವಾದ ಮಾರ್ಗ.

ಆಚಿನೋತಿ ಯಃ ಶಾಸ್ತ್ರಾರ್ಥಮ್ ಆಚರೇ ಸ್ಥಾಪಯತಿ ಅಪಿ |
ಸ್ವಯಮ್ ಆಚರತೆ ಯಸ್ಮಾದ್ ಆಚಾರ್ಯಸ್ ತೇನ ಕೀರ್ತಿತಃ ||

ಸರಳ ಅನುವಾದ: ಆಚಾರ್ಯನಾರೆಂದರೆ – ಶಾಸ್ತ್ರಾರ್ಥವನ್ನು ಪೂರ್ಣವಾಗಿ ಅರಿತು, ಶಾಸ್ತ್ರದಲ್ಲಿ ಹೇಳಲ್ಪಟ್ಟ ತತ್ತ್ವಗಳನ್ನು ಸ್ಥಾಪಿಸಿ, ತಾನು ಸ್ವತಃ ಆಚರಿಸುವವನು. ಶಾಸ್ತ್ರವನ್ನು ಅನುಸರಿಸಿ ಪೂರ್ವಾಚಾರ್ಯರು, (ಒಬ್ಬ) ಆಚಾರ್ಯನು ಶ್ರೀಮನ್ನಾರಾಯಣಿಗೆ ಪರತಂತ್ರರಾಗಿದ್ದು ಹಾಗು ಪೂರ್ಣವಾಗಿ ಭಗವತ್-ಪರತ್ವವನ್ನು ಅಂಗೀಕರಿಸುವವನೆಂದು ಹೇಳಿದ್ದಾರೆ. ಹಾಗು (ಒಬ್ಬ) ಆಚಾರ್ಯನು ಜ್ಞಾನ, ಭಕ್ತಿ, ವೈರಾಗ್ಯಗಳಲ್ಲೇ ಸ್ಥಿತನಾಗಿ ಉಪಾಯಾಂತರಗಳನ್ನು (ಶ್ರೀಮನ್ನಾರಾಯಣನು ಬಿಟ್ಟು ಇತರ ಉಪಾಯಗಳು) ಉಪೇಯಾಂತರಗಳನ್ನೂ (ಶ್ರೀಮನ್ನಾರಾಯಣ ಹಾಗು ಅವನ ಭಕ್ತರ ಸೇವೆಯನ್ನು ಬೇರೆ ಉಪೇಯಗಳು) ಹಾಗು ದೇವಾಂತರಗಳನ್ನು (ಇತರ ದೇವತಗಳು) ವರ್ಜಿಸಬೇಕು. ನಮ್ಮ ಪೂರ್ವಾಚಾರ್ಯರೆಲ್ಲರು ಇಂತಹ ಗುಣಗಳನ್ನು ಪ್ರಕಾಶಿಸುವ ಉದಾಹರಣೆಗಳಾಗಿದ್ದಾರೆ.

ಮಾಮುನಿಗಳ ಈಡು ಕಾಲಕ್ಷೇಪ ಗೋಷ್ಠಿ ಹಾಗು ನಂಪೆರುಮಾಳ್ ಮಾಮುನಿಗಳನ್ನು ಗೌರವಿಸುತ್ತಿರುವುದು

ಪಿಳ್ಳೈ ಲೋಕಾಚಾರ್ಯರು ಪೂರ್ವಾಚಾರ್ಯರಿಂದ ಬೋದಿತವಾದ ಶಾಸ್ತ್ರದ ಸಾರವನ್ನು ಶ್ರೀವಚನ ಭೂಷಣ ದಿವ್ಯ ಶಾಸ್ತ್ರದಲ್ಲಿ ಪ್ರಕಾಶಿಸಿದ್ದಾರೆ. ಇಲ್ಲಿ ಅಂತಿಮವಾಗಿ “ಆಚಾರ್ಯ ಅಭಿಮಾನಮೇ ಉತ್ತಾರಕಮ್” ಎಂದು ಶಿಷ್ಯನ ಕೈಂಕರ್ಯಪ್ರಾಪ್ತಿಯ ಪರಮನಿಃಶ್ರೇಯಸ್ಸಿಗೆ ಆಚಾರ್ಯನ ಕರುಣೆಯೇ ಪರಮ ಉಪಾಯವೆಂದು ಅವರು ಸ್ಥಾಪಿಸಿದ್ದಾರೆ. ಈ ತತ್ತ್ವವನ್ನು ಪರವಸ್ತು ಪಟ್ಟರ್ಪಿರಾನ್ ಜೀಯರ್ (ಮಣವಾಳ ಮಾಮುನಿಗಳ ಶ್ರೇಷ್ಠ ಶಿಷ್ಯರಲ್ಲಿ ಒಬ್ಬರು) “ಅಂತಿಮ ಉಪಾಯ ನಿಷ್ಠೈ” ಎಂಬ ಗ್ರಂಥದಲ್ಲಿ ಸುಂದರ ರೀತಿಯಲ್ಲಿ ವಿವರಿಸಿದ್ದಾರೆ. ಅಂತಿಮ= ಪರಮ/ಚರಮ, ನಿಷ್ಠೈ= ದೃಡ ಅದ್ಯವಸಾಯ/ಆಲಂಬನೆ. “ಪೂರ್ಣವಾಗಿ ಆಚಾರ್ಯನನ್ನೇ (ಪರಮ ಉಪಾಯ{ವೇಂದು}) ಆಲಂಬನೆ”, ಎಂದು ಅರ್ಥ. ನಮ್ಪಿಳ್ಳೈಯಿಂದ ಉಪನ್ಯಸಿತವಾದ ಈಡು ವ್ಯಾಖ್ಯಾನವು ವಡಕ್ಕು ತಿರುವೀದಿ ಪಿಳ್ಳೈಯಿಂದ ಲಿಖಿತವಾದ ರೀತಿಯಲ್ಲೇ, ಮಾಮುನಿಗಳ ನೇರ ಉಪ್ದೇಶವನ್ನು ಅನುಸರಿಸೇ ಗ್ರಂಥವು ಪೂರ್ಣವಾಗಿ ಲಿಖಿತವಾಗಿದೆ ಎಂದು, ಪರವಸ್ತು ಪಟ್ಟರ್ಪಿರಾನ್ ಜೀಯರ್ ಅವರೇ ತಾನು ಲೇಖನೀ-ತಾಲಪತ್ರದ ಸದೃಶಮಾತ್ರವೇ ಎಂದು ಹೇಳಿದ್ದಾರೆ. ಆದರಿಂದ ಮಾಮುನಿಗಳ ನೇರ ಉಪದೇಶವೆಂದೆ ಸ್ವೀಕರಿಸಬೇಕೆಂದು ಗ್ರಂಥಕಾರರ ಅಭಿಪ್ರಾಯ.

ಪಿಳ್ಳೈ ಲೋಕಾಚಾರ್ಯರು, ಮಣವಾಳ ಮಾಮುನಿಗಳು ಹಾಗು ಪರವಸ್ತು ಪಟ್ಟರ್ಪಿರಾನ್ ಜೀಯರ್

ಈ ಆಚಾರ್ಯ ನಿಷ್ಟೆ ಮಧುರಕವಿ ಆೞ್ವಾರ್ ನಮ್ಮಾೞ್ವಾರಿನ ವಿಷಯದಲ್ಲಿ, ಆಂಡಾಳ್ ಪೆರಿಆಳ್ವಾರ್ ವಿಷಯದಲ್ಲಿ, ದೈವವಾರಿ ಆಂಡಾನ್ ಆಳವಂದಾರಿನ ವಿಷಯದಲ್ಲಿ, ವಡುಗ ನಂಬಿಗಳು ಎಮ್ಪೆರುಮಾನಾರಿನ ವಿಷಯದಲ್ಲಿ ಮುಂತಾದಿಗಳಲ್ಲಿ ವ್ಯಕ್ತವಾಗಿದೆ. ಈ ನಿಷ್ಠೆಯೇ ಚರಮ ಪರ್ವ ನಿಷ್ಠೆಂದೂ ಕರೆಯಲ್ಪಡುತ್ತದೆ. ಭಗವಾನನ್ನೇ ಪೂರ್ಣವಾಗಿ ಆಲಂಬಿಸುವುದನ್ನು ಪ್ರಥಮ ಪರ್ವ ನಿಷ್ಠೆಯೆಂದು, ಆಚಾರ್ಯನ ವಿಷಯದಲ್ಲಿ ಇದನ್ನು ಮಾಡುವುದನ್ನು ಚರಮ ಪರ್ವ ನಿಷ್ಠೆಯೆಂದು ಕರೆಯಲ್ಪಡುತ್ತದೆ. ನಮ್ಮ ಆೞ್ವಾರ್ ಆಚಾರ್ಯರು ಚರಮ ಪರ್ವ ನಿಷ್ಠೆಯನ್ನು ತಮ್ಮ ಪೂರ್ವ ಉಪದೇಶವನ್ನು ನಮಗೆ ಹಲವಾರು ದಿವ್ಯ ಪ್ರಬಂದಗಳಲ್ಲಿ ಹಾಗು ಶ್ರೀಸೂಕ್ತಿಗಳಲ್ಲಿ ನಮಗೆ ನೀಡಿದ್ದಾರೆ.

[ಮೂಲ ಅನುವಾದಕರ ವಚನದ ಆದಿ —]ಇಂತಹ ಹಲವಾರು ಲೇಖಗಳನ್ನು ರಚಿಸಲು ಪ್ರೋತ್ಸಾಹಿಸಿದ ಶ್ರೀವೈಷ್ಣವರಿಗೆ ಅಡಿಯೇನ್ ಧನ್ಯವಾದಗಳಾನ್ನು ಸಲ್ಲಿಸುತ್ತೇನೆ. ಇಂತಹ ಶ್ರೀವೈಷ್ಣವರ, ನಮ್ಮ ಪೂರ್ವಾಚಾರ್ಯರ, ಆೞ್ವಾರ್ಗಳ, ಶ್ರೀ-ಭೂ-ನೀಳ ಸಮೇತ ಎಮ್ಪೆರುಮಾನಿನ ಅನುಗ್ರಹದಿಂದ ವಿಶಾಲವಾದ ಶ್ರೀವೈಷ್ಣವ ಸಮುದಾಯಕ್ಕೆ ಅಡಿಯೇನ್ ಸಮರ್ಪಿಸುತಿದ್ದೇನೆ. ಅಸ್ಮದಾಚಾರ್ಯನ್ ಶ್ರೀಮತ್ ಪರಮಹಂಸ ಇತ್ಯಾದಿ ವಾನಮಾಮಲೈ ಪಟ್ಟರ್ಪಿರಾನ್ ರಾಮಾನುಜ ಜೀಯರ್ ಸ್ವಾಮಿಗಳ (29ನೇ ಪಟ್ಟಮ್) ಪಾದಪಂಕಜಗಳಲ್ಲಿ ಚಿಕ್ಕ ಕೈಂಕರ್ಯವನ್ನು ಸಮರ್ಪಿಸುವ ಅವಕಾಶವನ್ನು ಪ್ರಸಾದಿಸಿದ ಶ್ರಿಯಃಪತಿ, ಆೞ್ವಾರ್, ಆಚಾರ್ಯರಿಗೆ ಧನ್ಯನಾಗಿದ್ದೇನೆ. ಸಂಕೃತ ಶ್ಲೋಕಗಳಿಗೆ ಹಾಗು ಪ್ರಮಾಣಗಳಿಗೆ ಸಕಾಲದಲ್ಲಿ ಸುಂದರ ಅನುವಾದವನ್ನು ನೀಡಿದ ಶ್ರೀ ರಂಗನಾಥನ್ ಸ್ವಾಮಿಗಳಿಗೆ (ಬೆಂಗಳೂರು -https://antaryami.netಇನ ಸುಂಪಾದಕರು) ಧನ್ಯನಾಗಿದ್ದೆನೆ. ಮೋದಲನೇ ಅಧ್ಯಾಯದ ಪ್ರಮಾಣ ಶ್ಲೋಕಗಳನ್ನು ಟೈಪು ಮಾಡಿದ ಶ್ರೀ ಸಂತಾನಮ್ ಸ್ವಾಮಿಗಳಿಗೂ ಧನ್ಯವಾದಗಳು. […ಮೂಲ ಅನುವಾದಕರ ವಚನ: ಮುಕ್ತಾಯ]

ಈ ವಿಷಯದಲ್ಲಿ ಪೂರ್ವಾಚಾರ್ಯರ ವೈಭವವನ್ನು ಲೇಖನಗಳಿಂದ ಈ ಗ್ರಂಥವನ್ನು ಅನುಭವಿಸೋಣ.

  • ಭಾಗ 1 – ಆಚಾರ್ಯ ವೈಭವ ಹಾಗು ಶಿಷ್ಯ ಲಕ್ಷಣ -ಪ್ರಮಾಣಗಳು
  • ಭಾಗ 2 – ಮಧುರಕವಿ ಆೞ್ವಾರ್ ಹಾಗು ಪಿಳ್ಳೈ ಲೋಕಾಚಾರ್ಯರ ಪದಗಳಿಂದ ಆಚಾರ್ಯ ವೈಭವ
  • ಭಾಗ 3 – ಅರುಳಾಳ ಪೆರುಮಾಳ್ ಎಂಪೆರುಮಾನಾರ್, ತಿರುವರಂಗತು ಅಮುದನಾರ್, ಪಿಳ್ಳೈ
  • ಲೋಕಾಚಾರ್ಯರ್ ಹಾಗು ಮಾಮುನಿಗಳ ಪದಗಳಿಂದ ಶಿಷ್ಯ ಲಕ್ಷಣ
  • ಭಾಗ 4- ವಡುಗ ನಮ್ಬಿ ಹಾಗು ಅರುಳಾಳ ಪೆರುಮಾಳ್ ಎಮ್ಪೆರುಮಾನಾರಿನ ವಿಷಯದಲ್ಲಿ
  • ಎಂಪೆರುಮಾನಾರಿನ ಕೃಪೆ ಹಾಗು ಅವರ ಪಾರತಂತ್ರ್ಯ
  • ಭಾಗ 5- ಭಟ್ಟರ್, ನಂಜೀಯರ್ ಹಾಗು ನಂಪಿಳ್ಳೈ- ಆದರ್ಶ ಆಚಾರ್ಯ-ಶಿಷ್ಯ ಸಂಬಂಧದ ಉದಾಹರಣೆಗಳು
  • ಭಾಗ 6- ಆಚಾರ್ಯನಿಗೆ ಭಗವಾನಿಗಿಂತ ಶ್ರೇಷ್ಠವಾದ ಸ್ಥಾನ
  • ಭಾಗ 7- ನಂಪಿಳ್ಳೈ ವೈಭವ – 1
  • ಭಾಗ 8- ಆನಿ ತಿರುಮೂಲಮ್ – ರಮ್ಯಜಾಮಾತೃ (ಶ್ರೀರಂಗನಾಥನ್) ಹಾಗು ರಮ್ಯಜಾಮಾತೃ ಮುನಿ (ಮಾಮುನಿಗಳು)
  • ಭಾಗ 9- ನಂಪಿಳ್ಳೈ ವೈಭವ – 2
  • ಭಾಗ 10- ಶ್ರೀ ರಾಮಾನುಜರ ಶಿಷ್ಯರ ನಿಷ್ಠೈ
  • ಭಾಗ 11- ಎಂಬಾರ್ ಹಾಗು ಎಂಪೆರುಮಾನಾರಿನ ಶಿಷ್ಯರ ಇತರ ಶಿಷ್ಯರ ನಿಷ್ಠೈ
  • ಭಾಗ 12- ಆಚಾರ್ಯನು ಭಗವಾನಿನ ಅವತಾರ
  • ಭಾಗ 13- ಆಚಾರ್ಯ ಅಪಚಾರದ ವಿವರಣೆ
  • ಭಾಗ 14- ಭಾಗವತ ಅಪಚಾರದ ವಿವರಣೆ
  • ಭಾಗ 15- ಆಚಾರ್ಯ/ಭಾಗವತ ಪ್ರಸಾದ ಹಾಗು ಶ್ರೀಪಾದ ತೀರ್ಥದ ವೈಭವ
  • ಭಾಗ 16- ಜನ್ಮದ ನಿರಪೇಕ್ಷವಾಗಿ ಭಾಗವತರ ವೈಭವ
  • ಭಾಗ 17- ಭಾಗವತರ ನಿರ್ಹೇತುಕ ಕರುಣೆ
  • ಭಾಗ 18- ಆಚಾರ್ಯ ನಿಷ್ಠೆಯ ವೈಭವ

ಅಡಿಯೇನ್ ಆಳವಂದಾರ್ ರಾಮಾನುಜ ದಾಸನ್

ಮೂಲ : https://granthams.koyil.org/anthimopaya-nishtai-english/

ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org