ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ
ಶ್ರೀವೈಷ್ಣವ ಸಂಪ್ರದಾಯದಲ್ಲಿ, ಮುಮುಕ್ಷುವಿನ (ಮುಕ್ತಿಯನ್ನು ಹುಡುಕುವವನಿಗೆ) ಜ್ಞಾನವನ್ನು ಅಭಿವೃದ್ಧಿ ಪಡಿಸುವುದರಲ್ಲಿ ರಹಸ್ಯ ತ್ರಯಮ್ ಒಂದು ಪ್ರಮುಖ ಪಾತ್ರ ವಹಿಸುತ್ತದೆ. ರಹಸ್ಯ ತ್ರಯಮ್ ಪವಿತ್ರವಾದ, ರಹಸ್ಯವಾದ ಮಂತ್ರಗಳ ಸಂಗ್ರಹಣ. ಅವುಗಳು, ತಿರುಮಂತ್ರಮ್ (ಅಷ್ಟಾಕ್ಷರಮ್), ದ್ವಯ ಮಹಾ ಮಂತ್ರಮ್ ಮತ್ತು ಗೀತಾ ಚರಮ ಶ್ಲೋಕಮ್. ಈ ರಹಸ್ಯ ತ್ರಯಮ್‍ನನ್ನು ಕೂಲಂಕುಶವಾಗಿ ವಿವರಿಸುವ ಅನೇಕ ಪವಿತ್ರವಾದ ಶ್ಲೋಕಗಳಿವೆ. ದಿವ್ಯಪ್ರಬಂಧಮ್ – ಆಳ್ವಾರರ 4000 ಪಾಸುರಗಳ ಸಂಗ್ರಹಣೆಯು ರಹಸ್ಯ ತ್ರಯಮ್‍ನನ್ನು ವಿವಿಧ ಕಡೆಗಳಲ್ಲಿ ಸುಂದರವಾಗಿ ವಿವರಿಸುತ್ತದೆ. ನಮ್ಮ ಆಚಾರ್‍ಯ ಪರಂಪರೈನಲ್ಲೂ ಕೂಡಾ ರಹಸ್ಯ ತ್ರಯಮ್‍ನ ನಿಗೂಢ ಅರ್ಥಗಳನ್ನು ವಿವರಿಸುವುದರಲ್ಲೇ ಕೇಂದ್ರೀಕೃತವಾಗಿದೆ.
ಎಂಪೆರುಮಾನಾರಾದ, ಶ್ರೀ ರಾಮಾನುಜಾಚಾರ್‍ಯರು ನಮ್ಮ ಸಂಪ್ರದಾಯದಲ್ಲಿ ಅತ್ಯಂತ ಪ್ರಮುಖರಾದ ಆಚಾರ್‍ಯರು, ಅವರೂ ಸಹ ರಹಸ್ಯ ತ್ರಯಮ್‍ನನ್ನು ಅವರ ಆಚಾರ್‍ಯರಿಂದ ಕಲಿತು ಅವರ ಅನೇಕ ಶಿಷ್ಯರಿಗೆ ಅದನ್ನು ಕಲಿಸಿದರು. ಮತ್ತು ಅವರು ತಮ್ಮ ವೈಭವಕರವಾದ ನಾಮವಾದ ‘ಎಂಪೆರುಮಾನಾರ್’ ಎಂಬ ಹೆಸರನ್ನು ತಿರುಕ್ಕೋಷ್ಠಿಯೂರ್ ನಂಬಿ ಅವರಿಂದ, ಚರಮ ಶ್ಲೋಕಕ್ಕೆ ಅರ್ಥವನ್ನು ಅರಿಯಲು ಆಸಕ್ತಿಯಿರುವವರಿಗೆ ಅದನ್ನು ಬಹಿರಂಗ ಪಡಿಸುವಾಗ ಅವರಿಗೆ ಈ ಹೆಸರು ಬಂತು. ಪರಾಶರ ಭಟ್ಟರ್ ಅಷ್ಟ ಶ್ಲೋಕೀ ಯನ್ನು ರಚಿಸಿರುವರು. ಅದು ರಹಸ್ಯ ತ್ರಯಮ್‍ನನ್ನು ಎಂಟು ಶ್ಲೋಕಗಳಲ್ಲಿ ಅದ್ಭುತವಾಗಿ ವಿವರಿಸುತ್ತದೆ. ಪೆರಿಯ ವಾಚ್ಚಾನ್ ಪಿಳ್ಳೈರವರು ಅವರ ಗ್ರಂಥಗಳಲ್ಲಿ ರಹಸ್ಯ ತ್ರಯಮ್‍ನನ್ನು ಅತ್ಯಂತ ಸುಂದರವಾಗಿ ವಿವರಿಸಿದ್ದಾರೆ. ಆದರೆ ಈ ಎಲ್ಲಾ ವ್ಯಕ್ತಿತ್ವಗಳನ್ನೂ ಮೀರಿ, ಪಿಳ್ಳೈ ಲೋಕಾಚಾರ್‍ಯರು ಭವಿಷ್ಯದ ಜನತೆಯ ಉಪಯೋಗಕ್ಕಾಗಿ ಈ ರಹಸ್ಯಗಳನ್ನು ಅತ್ಯಂತ ಜಾಗರೂಕತೆಯಿಂದ ವಿಸ್ತಾರವಾಗಿ ಅತ್ಯಂತ ಸ್ಪಷ್ಟತೆಯಿಂದ ದಾಖಲೀಕರಿಸಿದ್ದಾರೆ. ಅವರ ಪ್ರಸಿದ್ಧ ಹದಿನೆಂಟು ರಹಸ್ಯ ಗ್ರಂಥಗಳು ನಮ್ಮ ಸಂಪ್ರದಾಯದಲ್ಲಿ ಅತ್ಯಂತ ಅಮೂಲ್ಯವಾದ ಸಾಹಿತ್ಯವಾಗಿದ್ದು, ಅರಿಯಲೇಬೇಕಾದ ಪ್ರತಿಯೊಂದು ಮಹತ್ವದ ವಿಷಯಗಳನ್ನು ಹೊರ ತೆಗೆದು ಹೇಳಲಾಗಿದೆ. ಈ ಹದಿನೆಂಟು ರಹಸ್ಯ ಗ್ರಂಥಗಳಲ್ಲಿ ಅನೇಕ ಗ್ರಂಥಗಳು ರಹಸ್ಯ ತ್ರಯಮ್‍ನ ಬಗ್ಗೆ ಉಲ್ಲೇಖಿಸುತ್ತವೆ. ಈ ಗ್ರಂಥಗಳಲ್ಲಿ ಮುಮುಕ್ಷುಪ್ಪಡಿ ಅತ್ಯಂತ ಶ್ರೇಷ್ಠವಾದುದು. ಮಣವಾಳ ಮಾಮುನಿಗಳ್ ಅತ್ಯಂತ ಸುಂದರವಾದ ಮತ್ತು ವಿಸ್ತಾರವಾದ ವ್ಯಾಖ್ಯಾನವನ್ನು ಈ ಮುಮುಕ್ಷುಪ್ಪಡಿಗೆ ನೀಡಿದ್ದಾರೆ. ವಂಗೀಪುರಮ್ ಶಡಗೋಪನ್ ಸ್ವಾಮಿಗಳು ಈ ವ್ಯಾಖ್ಯಾನವನ್ನು ಆಂಗ್ಲಕ್ಕೆ ಅನುವಾದಿಸಿದ್ದಾರೆ. ಈಗ ನಾವು ಆಳ್ವಾರರ, ಎಂಪೆರುಮಾನರ, ಪಿಳ್ಳೈ ಲೋಕಾಚಾರ್‍ಯರ, ಜೀಯರ್ (ಮಾಮುನಿಗಳ್) ಮತ್ತು ಜೀಯರ್ (ಪೊನ್ನಡಿಕ್ಕಾಳ್ ಜೀಯರ್) ರವರ ಪಾದಾರವಿಂದಗಳಲ್ಲಿ ನಮಸ್ಕರಿಸಿ ಈ ಅದ್ಭುತವಾದ ಲೇಖನವನ್ನು ಸಂಪೂರ್ಣಗೊಳಿಸಲು ಪ್ರಾರ್ಥಿಸುತ್ತೇವೆ.
- ಪರಿಚಯ
- ಸೂತ್ರಮ್ 1 ರಿಂದ 3
- ಸೂತ್ರಮ್ 4 ರಿಂದ 6
- ಸೂತ್ರಮ್ 7 ರಿಂದ 12
- ಸೂತ್ರಮ್ 13 ರಿಂದ 15
- ಸೂತ್ರಮ್ 16 ರಿಂದ 20
- ಸೂತ್ರಮ್ 21 ರಿಂದ 25
- ಸೂತ್ರಮ್ 26 ರಿಂದ 30
- ಸೂತ್ರಮ್ 31 ರಿಂದ 35
- ಸೂತ್ರಮ್ 36 ರಿಂದ 41
- ಸೂತ್ರಮ್ 42 ರಿಂದ 50
- ಸೂತ್ರಮ್ 51 ರಿಂದ 59
- ಸೂತ್ರಮ್ 60 ರಿಂದ 70
- ಸೂತ್ರಮ್ 71 ರಿಂದ 80
- ಸೂತ್ರಮ್ 81 ರಿಂದ 90
- ಸೂತ್ರಮ್ 91 ರಿಂದ 96
- ಸೂತ್ರಮ್ 97 ರಿಂದ 100
- ಸೂತ್ರಮ್ 101 ರಿಂದ 110
- ಸೂತ್ರಮ್ 111 ರಿಂದ 115
- ಸೂತ್ರಮ್ 116 ರಿಂದ 120
- ಸೂತ್ರಮ್ 121 ರಿಂದ 130
- ಸೂತ್ರಮ್ 131 ರಿಂದ 140
- ಸೂತ್ರಮ್ 141 ರಿಂದ 150
- ಸೂತ್ರಮ್ 151 ರಿಂದ 160
- ಸೂತ್ರಮ್ 161 ರಿಂದ 170
- ಸೂತ್ರಮ್ 171 ರಿಂದ 177
- ಸೂತ್ರಮ್ 178 ರಿಂದ 184
- ಸೂತ್ರಮ್ 185 ರಿಂದ 190
- ಸೂತ್ರಮ್ 191 ರಿಂದ 200
- ಸೂತ್ರಮ್ 201 ರಿಂದ 210
- ಸೂತ್ರಮ್ 211 ರಿಂದ 220
- ಸೂತ್ರಮ್ 221 ರಿಂದ 230
- ಸೂತ್ರಮ್ 231 ರಿಂದ 240
- ಸೂತ್ರಮ್ 241 ರಿಂದ 250
- ಸೂತ್ರಮ್ 251 ರಿಂದ 260
- ಸೂತ್ರಮ್ 261 ರಿಂದ 270
- ಸೂತ್ರಮ್ 271 ರಿಂದ 280
ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ
ಮೂಲ : https://granthams.koyil.org/mumukshuppadi-english/
ಆರ್ಕೈವ್ ಮಾಡಲಾಗಿದೆ – https://granthams.koyil.org
ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org