ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ
ಸೂತ್ರಮ್ – 26:
ಪರಿಚಯ: ಈಗ ಲೋಕಾಚಾರ್ಯರು ಈ ಮಂತ್ರದ ಅರ್ಥವನ್ನು ಎರಡು ವಿಧದಲ್ಲಿ ನೀಡಿದ್ದಾರೆ:
ಇದು ತನ್ನಿಲ್ ಸೊಲ್ಲುಗಿಱ ಅರ್ಥಮ್ – ಸ್ವರೂಪಮುಮ್ ಸ್ವರೂಪಾನುರೂಪಮಾನ ಪ್ರಾಪ್ಯಮುಮ್, ಸ್ವರೂಪಮುಮ್ ಉಪಾಯಮುಮ್ ಪಲಮುಮ್ ಎನ್ನವುಮಾಮ್.
ಸರಳ ಅರ್ಥ: ಈ ಮಂತ್ರದಿಂದ ತಿಳಿಯುವ ಅರ್ಥವೇನೆಂದರೆ ನಮ್ಮ ಮೂಲಸ್ವರೂಪವೇನೆಂದರೆ (ಸ್ವರೂಪ : ಶೇಷತ್ವಮ್, ಸೇವಕತ್ವಮ್), ನಮ್ಮ ಗುರಿಯು (ಅದೇನೆಂದರೆ ಪ್ರಾಪ್ಯಮ್ ಅಥವಾ ಭಗವಂತನು) ನಮ್ಮ ಸ್ವಭಾವಕ್ಕೆ ತಕ್ಕಂತೆ ಅನುಗುಣವಾಗಿರಬೇಕು.;
ಸ್ವಭಾವ (ಸ್ವರೂಪ), ದಾರಿ (ಉಪಾಯಮ್ ಅಥವಾ ಮಾರ್ಗ) ಮತ್ತು ಪ್ರಯೋಜನ (ಫಲಮ್ ಅಥವಾ ಕೈಂಕರ್ಯಮ್).
ವ್ಯಾಖ್ಯಾನಮ್ : ಅದೇನೆಂದರೆ ಈ ಮಂತ್ರದಿಂದ ತಿಳಿಯಲ್ಪಡುವ ಅರ್ಥವು ಎರಡು ಬಗೆಗಳಾಗಿವೆ:
- ಸ್ವರೂಪಮ್ (ಸೇವಕತ್ವಮ್) ಮತ್ತು ಜೀವಾತ್ಮದ ಪಾರತಂತ್ರ್ಯ (ಎಂಪೆರುಮಾನರ ಮೇಲೆ ಸಂಪೂರ್ಣ ಅವಲಂಬನೆ); ಪ್ರಾಪ್ಯಮ್ – ಕೈಂಕರ್ಯದ (ಸೇವೆಯ) ರೂಪ.
- ಸೇವಕತ್ವದ ಸ್ವರೂಪ (ಶೇಷತ್ವ), ಮಾರ್ಗವು (ಉಪಾಯ) ಸ್ವರೂಪಕ್ಕೆ ಅನುಗುಣವಾಗಿರುವುದು, ಉಪಾಯದ ಫಲ (ಪ್ರಯೋಜನ).
ಈ ಎರಡು ವಿವರಣೆಗಳಲ್ಲಿ, ಮೊದಲನೆಯ ವಿವರಣೆಯು:
ಪ್ರಣವಮ್ (ಓಂ) ಮತ್ತು ನಮಃ – ಇವುಗಳು ಸ್ವರೂಪದ ಬಗ್ಗೆ ಹೇಳುತ್ತವೆ; ನಾರಾಯಣ ಶಬ್ದವು ಪ್ರಾಪ್ಯದ ಬಗ್ಗೆ (ಗುರಿ) ಹೇಳುತ್ತದೆ.
ಎರಡನೆಯ ವಿವರಣೆಯು:
ಪ್ರಣವವು ಶೇಷತ್ವದ ಬಗ್ಗೆ ಹೇಳುತ್ತದೆ. ನಮಃ ಶಬ್ದವು ಉಪಾಯ (ಮಾರ್ಗ) ದ ಬಗ್ಗೆ ಹೇಳುತ್ತದೆ. ನಾರಾಯಣ ಶಬ್ದವು ಫಲ (ಉಪಯೋಗದ ) ಬಗ್ಗೆ ಹೇಳುತ್ತದೆ.
ಸೂತ್ರಮ್ – 27
ಪರಿಚಯ: ಫಲದ ಸ್ವರೂಪವೇನು (ಗುರಿ, ಉಪಯೋಗ) ಎಂಬ ಪ್ರಶ್ನೆಗೆ ಲೋಕಾಚಾರ್ಯರು 27ನೆಯ ಸೂತ್ರದಲ್ಲಿ ವಿವರಿಸುತ್ತಾರೆ.
ಪಲಮಿರುಕ್ಕುಂಪಡಿ ಪ್ರಮೇಯಶೇಕರತ್ತಿಲುಮ್ ಅರ್ಚಿರಾಧಿಗತಿಯಿಲುಮ್ ಸೊನ್ನೋಮ್.
ಸರಳ ಅರ್ಥ: ಫಲದ ಸ್ವರೂಪ ವನ್ನು ವಿವರವಾಗಿ ಪ್ರಮೇಯ ಶೇಕರಮ್ ಮತ್ತು ಅರ್ಚಿರಾದಿ ಗತಿಯಲ್ಲಿಯೂ ವಿವರಿಸಿದ್ದೇವೆ.
ವ್ಯಾಖ್ಯಾನಮ್: ಆತ್ಮವು ಸಾಧಿಸಬಹುದಾದ ಗುರಿ ಅಥವಾ ಉಪಯೋಗವೇನೆಂದರೆ, ಪರಮಪದವನ್ನು(ಶ್ರೀ ವೈಕುಂಠವನ್ನು) ಅರ್ಚಿರಾದಿ ಮಾರ್ಗದಲ್ಲಿ ತಲುಪುವುದು ಮತ್ತು ಪ್ರೀತಿ ಮತ್ತಿತರೆ ಎಲ್ಲಾ ರೀತಿಯ ಸೇವೆಗಳನ್ನು ಪ್ರಭುವಿಗೆ ಅವನ ಸಂತೋಷಕ್ಕಾಗಿ ಮಾಡುವುದನ್ನು ಸಂಕ್ಷಿಪ್ತವಾಗಿ ಪ್ರಮೇಯ ಶೇಕರಮ್ ನಲ್ಲಿಯೂ ಮತ್ತು ಅದನ್ನು ವಿವರವಾಗಿ ಅರ್ಚಿರಾದಿಗತಿಯಲ್ಲಿ ಗ್ರಂಥಿಸಿದ್ದಾರೆ. ಜಿಙ್ಞಾಸುಗಳು ಮತ್ತು ಆಸಕ್ತರು ಈ ಗ್ರಂಥಗಳಿಂದ ಉಪಯೋಗ ಪಡೆದುಕೊಳ್ಳಬಹುದು.
ಸೂತ್ರಮ್ – 28
ಪರಿಚಯ: ಲೋಕಾಚಾರ್ಯರು ಮತ್ತೂ ವಿವರಿಸಿದ್ದಾರೆ:
ಇದು ತಾನ್ ಎಟ್ಟು ತಿರುವಕ್ಷರಮಾಯ್ ಮೂನ್ಱು ಪದಮಾಯ್ ಇರುಕ್ಕುಮ್.
ಸರಳ ಅರ್ಥ: ಈ ಮಂತ್ರವು ಎಂಟು ಅಕ್ಷರವುಳ್ಳದ್ದಾಗಿದೆ ಮತ್ತು ಮೂರು ಪದಗಳಿಂದ ಕೂಡಿದೆ.
ವ್ಯಾಖ್ಯಾನಮ್: ಶಾಸ್ತ್ರಗಳಲ್ಲಿ ಹೇಳಿರುವ ಹಾಗೆ ಈ ಮಂತ್ರವು ಎಂಟು ಅಕ್ಷರಗಳನ್ನೂ ಮತ್ತು ಮೂರು ಪದಗಳನ್ನೂ ಒಳಗೊಂಡಿದೆ.
ಓಮ್ ಇತ್ಯೇಕಾಕ್ಷರಮ್।
ನಮ ಇತಿ ದ್ವೇ ಅಕ್ಷರೇ ॥
ನಾರಾಯಣೇತಿ ಪಂಚಾಕ್ಷರಾಣಿ।
ಇತ್ಯಷ್ಟಕ್ಷರಮ್ ಛಂದಸಾ ಗಾಯತ್ರೀ ಚೇತಿ॥
(ನಾರಾಯಣೋಪನಿಶತ್: ಓಮ್ ಎಂಬುದು ಒಂದು ಅಕ್ಷರ; ನಮಃ ಎಂಬುದು ಎರಡು ಅಕ್ಷರ; ನಾರಾಯಣ ಎಂಬುದು ಐದು ಅಕ್ಷರ; ಆದ್ದರಿಂದ ಈ ಮಂತ್ರವು ಎಂಟು ಅಕ್ಷರದ್ದಾಗಿದೆ. ಮತ್ತು ಇದರಲ್ಲಿ ಗಾಯತ್ರೀ ಎಂಬ ಛಂದಸ್ಸಿದೆ.)
ಓಮಿತ್ಯಗ್ರೇ ವ್ಯಾಹರೇತ್।
ನಮ ಇತಿ ಪಶ್ಚಾತ್।
ನಾರಾಯಣಾದ್ಯುಪರಿಷ್ಟಾತ್।
(ನಾರಾಯಣೋಪನಿಶತ್: ಓಮ್ ಎಂದು ಮೊದಲು ಹೇಳಲು ಬದ್ಧನಾಗಿರುತ್ತಾನೆ. ನಂತರ ನಮಃ ಮತ್ತು ತದ ನಂತರ ‘ನಾರಾಯಣಾಯ’ ಎಂದು)
ಶೃತಿಯು (ವೇದವು) ಅಷ್ಟಾಕ್ಷರವು ಓಮ್ ಎಂಬ ಒಂದು ಅಕ್ಷರದ ಪದವನ್ನು ಒಳಗೊಂಡಿದೆ; ಓಮಿತ್ಯೇಕಾಕ್ಷರಮ್ ; ನಮ ಇತಿ ದ್ವೇ ಅಕ್ಷರೇಃ – ನಮಃ ಎಂಬ ಪದವು ಎರಡು ಅಕ್ಷರಗಳನ್ನು ಹೊಂದಿದೆ. ನಾರಾಯಣಾಯೇತಿ ಪಂಚಾಕ್ಷರಾಣಿ : ನಾರಾಯಣಾಯ ಎಂಬ ಐದು ಅಕ್ಷರಗಳುಳ್ಳ ಪದವನ್ನು ಒಳಗೊಂಡಿದೆ. ಒಂದೇ ಪದವಾದ ನಾರಾಯಣಾಯ ಎಂಬುದನ್ನು ನಾರ ಎಂಬ ಶಬ್ದವಾಗಿ ಸೀಳಿ ಅದನ್ನು ಷಡಾಕ್ಷರವಾಗಿ (ಆರು ಅಕ್ಷರಗಳುಳ್ಳ ಪದವಾಗಿ) ಮಾಡುವುದು ಅಥವಾ ಅದನ್ನು ಅಷ್ಟಾಕ್ಷರ ಎಂದು ಪ್ರಣವವನ್ನು ಬಿಟ್ಟು ಹೇಳುವುದು ಅವೈದಿಕವಾಗಿದೆ. ಅದನ್ನು ಆಧಾರಿಸಬಾರದು.
ಸೂತ್ರಮ್ – 29
ಪರಿಚಯ: ಈ ಮೂರು ಪದಗಳು ಯಾವುದನ್ನು ವರ್ಣಿಸುತ್ತವೆ ಎಂಬ ಸಂಶಯವನ್ನು ಲೋಕಾಚಾರ್ಯರು ಮೂರು ಪದಗಳು ಮೂರು ಅರ್ಥಗಳನ್ನು ಕೊಡುತ್ತವೆ ಎಂದು 29ನೆಯ ಸೂತ್ರದಲ್ಲಿ ವಿವರಿಸಿದ್ದಾರೆ.
ಮೂನ್ಱು ಪದಮುಮ್ ಮೂನ್ಱು ಅರ್ಥತ್ತೈ ಚೊಲ್ಲುಗಿಱದು.
ಸರಳ ಅರ್ಥ: ಮೂರು ಪದಗಳು ಮೂರು ಅರ್ಥಗಳನ್ನು ಕೊಡುತ್ತವೆ.
ವ್ಯಾಖ್ಯಾನಮ್: ಸೂತ್ರಮ್ 26ರಲ್ಲಿ ವಿವರಿಸಿರುವ ಹಾಗೆ ಅದರ ಅರ್ಥಗಳನ್ನು ಮುಂದೆ ಹೇಳಲಾಗುತ್ತದೆ.
ಸೂತ್ರಮ್ – 30
ಪರಿಚಯ: ಲೋಕಾಚಾರ್ಯರು ಅವನ್ನು ಶೇಷತ್ವಮ್(ಸೇವಕತ್ವ, ದಾಸತ್ವ) , ಪಾರತಂತ್ರ್ಯಮ್ (ಎಂಪೆರುಮಾನರ ಮೇಲೆ ಸಂಪೂರ್ಣ ಅವಲಂಬನೆ) ಮತ್ತು ಕೈಂಕರ್ಯಮ್ (ಅವನಿಗೆ ಸೇವೆಯನ್ನು ಸಲ್ಲಿಸುವುದು) ಎಂದು ವರ್ಣಿಸಿದ್ದಾರೆ.
ಅದಾವದು ಶೇಷತ್ವಮುಮ್, ಪಾರತಂತ್ರ್ಯಮುಮ್, ಕೈಂಕರ್ಯಮುಮ್.
ಸರಳ ಅರ್ಥ: ಶೇಷತ್ವಮ್ (ಭಗವಂತನ ಆಙ್ಞಾಧಾರಿಗಳು), ಪಾರತಂತ್ರ್ಯಮ್ (ಅವನನ್ನು ಬಿಟ್ಟರೆ ಬೇರೆ ಆಶ್ರಯ ಇಲ್ಲದಿರುವುದು) ಕೈಂಕರ್ಯಮ್ (ಸೇವೆ ಸಲ್ಲಿಸುವುದು).
ವ್ಯಾಖ್ಯಾನಮ್: ಇದಕ್ಕೆ ಹಿಂದೆ ಬಂದಿರುವ ಸ್ವರೂಪ, ಸ್ವರೂಪಕ್ಕೆ ತಕ್ಕನಾದ ಪ್ರಾಪ್ಯ ಇದನ್ನು ವಿವರಿಸುತ್ತದೆ.
ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ.
ಮೂಲ : https://srivaishnavagranthams.wordpress.com/mumukshuppadi/
ಆರ್ಕೈವ್ ಮಾಡಲಾಗಿದೆ – https://srivaishnavagranthamskannada.wordpress.com
ಪ್ರಮೇಯಮ್ (ಗುರಿ) – http://koyil.org
ಪ್ರಮಾಣಮ್ (ಗ್ರಂಥಗಳು) – http://srivaishnavagranthams.wordpress.com