ಮುಮುಕ್ಷುಪ್ಪಡಿ – ಸೂತ್ರಮ್ 31 ರಿಂದ 35:

ಸೂತ್ರಮ್ 31:

ಪರಿಚಯ: ಈ ಮೂರೂ ಪದಗಳಲ್ಲಿ ಯಾವ ಪದವು ಅತ್ಯಂತ ಮಹತ್ವದ್ದು ಎಂಬ ಪ್ರಶ್ನೆಗೆ ಲೋಕಾಚಾರ್ಯರು ಉತ್ತರಿಸುತ್ತಾರೆ – ಇದರಲ್ಲಿ ಮುಖ್ಯವಾದದ್ದು ಪ್ರಣವಮ್, ಸೂತ್ರ 31ರಲ್ಲಿ.

ಇದಿಲ್ ಮುದಱ್ಪದಮ್ ಪ್ರಣವಮ್.

ಸರಳ ವಿವರಣೆ: ಈ ಮಂತ್ರದಲ್ಲಿ ಮೊದಲನೆಯ ಶಬ್ದವಾದ ಪ್ರಣವಮ್ ಬಹಳ ಮುಖ್ಯವದದ್ದು ಎಂದು.

ವ್ಯಾಖ್ಯಾನಮ್: ನಾರಾಯನೋಪನಿಶತ್ ನಲ್ಲಿ ಶೃತಿ ಹೇಳಿರುವಂತೆ

“ಓಮಿತ್ಯಗ್ರೇ ವ್ಯಾಹರೇತ್”

(ಯಾವಾಗಲೂ ಪಠಿಸುವವರು ಓಂ ಎಂದು ಪ್ರಥಮವಾಗಿ ಹೇಳಬೇಕು)

ಸ್ಮೃತಿ ಹೇಳಿರುವಂತೆ,

ಪ್ರಣವಾದ್ಯಮ್ ನಮೋ ಮಧ್ಯಮ್ ನಾರಾಯಣ ಪದಾಂತಿಮಮ್।

ಮಂತ್ರಮಶ್ಟಾಕ್ಷರಮ್ ವಿದ್ಯಾತ್ ಸರ್ವ ಸಿದ್ಧಿಕರಮ್ ನೃಣಮ್॥

(ಅಶ್ಟಾಕ್ಷರ ಎಂಬುದು ಓಂ ಎಂಬ ಪ್ರಣವವನ್ನು ಪ್ರಥಮವಾಗಿ, ನಮಃ ಎಂಬ ಪದವನ್ನು ಮಧ್ಯದ ಶಬ್ದವಾಗಿ ಮತ್ತು ನಾರಾಯಣ ಎಂಬ ಪದವನ್ನು ಅಂತಿಮವಾಗಿ ಹೊಂದಿರುತ್ತದೆ. ಇದನ್ನು ಪಠಿಸುವವರಿಗೆ ಎಲ್ಲಾ ಸಿದ್ಧಿಗಳನ್ನು ನಿಖರವಾಗಿ ಕೊಡುತ್ತದೆ.

ಸೂತ್ರಮ್ – 32 

ಪರಿಚಯ: ಈಗ, ಪ್ರಣವದ ಅರ್ಥವನ್ನು ವಿಸ್ತರಿಸುವಾಗ, ಲೋಕಾಚಾರ್ಯರು ಇದರ ಮೂರು ದಿವ್ಯ ವರ್ಣಗಳನ್ನು ವಿವರಿಸಿದ್ದಾರೆ, ಅವುಗಳು, ಅ, ಉ, ಮ.

ಇದು ‘ಅ’ ಎನ್ಱುಮ್ ‘ಉ’ ಎನ್ಱುಮ್ ‘ಮ’ ಎನ್ಱುಮ್ ಮೂನ್ಱು ತಿರುವಕ್ಷರಮ್.

ಸರಳ ವಿವರಣೆ: ಇದು ಮೂರು ದಿವ್ಯ ಅಕ್ಷರಗಳಾದ ಅ, ಉ ಮತ್ತು ಮ ಗಳನ್ನು ಹೊಂದಿದೆ.

ವ್ಯಾಖ್ಯಾನಮ್: ಈ ಪ್ರಣವವನ್ನು ವಿಂಗಡಿಸಿದಾಗ ಇದು ಮೂರು ಅಕ್ಷರಗಳನ್ನು ಹೊಂದಿದ್ದು, ಅವುಗಳು ಮೂರು ಅರ್ಥಗಳನ್ನು ಬಹಿರಂಗ ಪಡಿಸುತ್ತದೆ. ಇವು ಮೂರನ್ನು ಒಟ್ಟು ಸೇರಿಸಿದಾಗ ಒಂದೇ ಅಕ್ಷರವಾಗುತ್ತದೆ, ಒಂದೇ ಪದವಾಗುತ್ತದೆ ಮತ್ತು ಒಂದೇ ಅರ್ಥವನ್ನು ಕೊಡುತ್ತದೆ.

ಸೂತ್ರಮ್ – 33:

ಪರಿಚಯ: ಲೋಕಾಚಾರ್ಯರು ಈ ಮೂರೂ ಅಕ್ಷರಗಳ ಜನನವನ್ನು ಮೂರು ಮಡಿಕೆಗಳ ಉದಾಹರಣೆಯಿಂದ ವಿವರಿಸಲು ಹೊರಡುತ್ತಾರೆ.

ಮೂನ್ಱು ತಾೞಿಯಿಲೇ ತಯಿರೈ ನಿಱೈತುಕ್ ಕಡೈನ್ದು ವೆಣ್ಣೈ ತಿರಟ್ಟಿನಾರ್ ಪೋಲೇ
ಮೂನ್ಱು ವೇದತ್ತಿಲುಮ್ ಮೂನ್ಱು ಅಕ್ಷರತ್ತೈಯುಮ್ ಎಡುತ್ತದು.

ಸರಳ ಅರ್ಥ: ಮೂರು ಕೊಡಗಳಲ್ಲಿ ಮೊಸರನ್ನು ಕಡೆದು ಬೆಣ್ಣೆಯನ್ನು ತೆಗೆಯುವಂತೆ, ಮೂರು ಅಕ್ಷರಗಳನ್ನು ಮೂರು ವೇದಗಳಿಂದ ಆರಿಸಲಾಯಿತು.

ವ್ಯಾಖ್ಯಾನಮ್: 

ಅಥರ್ವವೇದದಲ್ಲಿ ಉಲ್ಲೇಖಿಸಿರುವಂತೆ ವೇದಮ್ ಗೋಪದ ಬ್ರಾಹ್ಮಣಮ್ ಪೂರ್ವ ಭಾಗಮ್ ಪ್ರಪಾತಕ 1 ಬ್ರಾಹ್ಮಣಮ್ 6

ಭೂರಿತಿ ರಿಗ್ ವೇದಾದಜಾಯತ । ಭುವ ಇತಿ ಯಜುರ್ ವೇದಾತ್ ।
ಸುವರಿತಿ ಸಾಮ ವೇದಾತ್ ।  ತಾನಿ ಶುಕ್ರಾಣ್ಯಭ್ಯತಪತ್ ।
ತೇಭ್ಯೋ ಅಭಿತಭ್ತೇಭ್ಯಸ್ ತ್ರಯೋ ವರ್ಣ ಅಜಾಯಂತ ॥
ಅಕಾರ ಉಕಾರ ಮಕಾರ ಇತಿ । ತಾನೇಕಧಾ ಸಮಭರತ್ ತದೇತದೋಮಿತಿ  ॥

(‘ಭೂಃ’ ಎಂಬುದು ರಿಗ್ವೇದದ ಸಾರವಾಗಿ ಬಂದಿದೆ; ‘ಭುವಃ’ ಎಂಬುದು ಯಜುರ್ವೇದದ ಸಾರವಾಗಿ ಬಂದಿದೆ;
‘ಸುವಃ’ ಎಂಬುದು ಸಾಮ ವೇದದ ಸಾರವು; ಪ್ರಜಾಪತಿಯು ಈ ಮೂರೂ ಅಪ್ಪಟ ಚಿನ್ನದ ತುಂಡುಗಳನ್ನು ಕರಗಿಸಿದ್ದಾರೆ. ಅವುಗಳು: ‘ಭೂಃ ಭುವಃ ಸುವಃ’ ; ಇವುಗಳನ್ನು ಕರಗಿಸಿದಾಗ, ಅವುಗಳ ಸಾರವು ‘ಅ ಉ ಮ’ ಎಂದು ಬಂದಿದೆ. ಅವನು ಅದನ್ನು ಪ್ರಣವ ಓಂಕಾರವಾಗಿ ಅಳವಡಿಸಿದ್ದಾರೆ.)

ಅಥರ್ವ ವೇದದಲ್ಲಿ ಮನು 2-76 ರಲ್ಲಿ ಹೇಳಿರುವಂತೆ:

ಅಕಾರನ್ಚ್ಯಪ್ಯುಕಾರನ್ಚ ಮಕಾರಂಚ ಪ್ರಜಾಪತಿಃ ।
ವೇದತ್ರಯಾನ್ನಿರಬೃಹತ್ ಭೂರ್ಭುವಸ್ ಸ್ವರಿತೀತಿ ಚ ॥

(ಪ್ರಜಾಪತಿಯು ಮೂರು ವೇದಗಳಿಂದ ಮೂರು ಪದಗಳನ್ನು ತೆಗೆದುಕೊಂಡು, ಭೂಃ ಭುವಃ ಸುವಃ, ತನ್ನ ಸಂಕಲ್ಪದಿಂದಲೇ ಈ ಮೂರೂ ಪದಗಳನ್ನು ಅಪ್ಪಟ ಚಿನ್ನವನ್ನು ಕರಗಿಸುವಂತೆ ಕರಗಿಸಿ, ಅವುಗಳನ್ನು ಪವಿತ್ರಗೊಳಿಸಿ ಮೂರು ಅಕ್ಷರಗಳನ್ನು ನಿರ್ಮಿಸಿದನು ಅಕಾರ, ಉಕಾರ ಮತ್ತು ಮಕಾರ).

ಲೋಕಾಚಾರ್ಯರು ವಿವರಿಸುತ್ತಾರೆ: ನಾರಾಯಣನು ರಿಗ್, ಯಜುರ್ ಮತ್ತು ಸಾಮ ವೇದಗಳಿಂದ  ಮೂರು ಶಬ್ದಗಳಾದ ‘ಭೂಃ ಭುವಃ ಸುವಃ’ ಎಂಬುದನ್ನು ನಿರ್ಮಿಸಿ, ಅವುಗಳನ್ನು ಚಿನ್ನವನ್ನು ಕರಗಿಸಿ ಪರಿಶುದ್ಧವನ್ನಾಗಿಸುವಂತೆ, ಪವಿತ್ರವಾಗಿಸಿ, ಮೂರು ಅಕ್ಷರಗಳನ್ನು ಅ, ಉ ಮತ್ತು ಮ ಎಂಬುವುದನ್ನು ತನ್ನ ಸಂಕಲ್ಪದಿಂದಲೇ ಸೃಷ್ಟಿಸಿದನು. ಮೂರು ಮೊಸರು ಮಡಿಕೆಗಳಾದ ವೇದಗಳನ್ನು ಕಡೆದು ಬೆಣ್ಣೆಯನ್ನು ತೆಗೆಯುವಂತೆ.

ಸೂತ್ರಮ್ – 34:

ಪರಿಚಯ: ಲೋಕಾಚಾರ್ಯರು ಹೇಳುತ್ತಾರೆ “ಆದ್ದರಿಂದ ಇದು ಎಲ್ಲಾ ವೇದಗಳ ಸಾರವಾಗಿದೆ” ಎಂದು.

ಆಗೈಯಾಲ್, ಇದು ಸಕಲ ವೇದ ಸಾರಮ್.

ಸರಳ ವಿವರಣೆ:  ಆದ್ದರಿಂದ ಇದು ಎಲ್ಲಾ ವೇದಗಳ ಸಾರವಾಗಿದೆ.

ವ್ಯಾಖ್ಯಾನಮ್:  ಮೂರು ಅಕ್ಷರಗಳು ಮೂರು ಬೇರೆಯ ವೇದಗಳಿಂದ ಬಂದಿದೆಯಾದ್ದರಿಂದ , ಈ ಮೂರೂ ವರ್ಣಗಳ ಸಂಗಮವಾದ ಶಬ್ದವು ಎಲ್ಲಾ ವೇದಗಳ ಸಾರವಾಗಿದೆ.

ಆದ್ದರಿಂದ, ಸೂತ್ರ 26 ರಿಂದ 34 ರ ವರೆಗೂ ಲೋಕಾಚಾರ್ಯರು ಇವುಗಳನ್ನು ನಿರೂಪಿಸಿದ್ದಾರೆ:

  1. ಈ ಮಂತ್ರದ ವ್ಯಾಕ್ಯಾರ್ಥ.
  2. ಈ ಮಂತ್ರದ ನಿಗದಿಯಾದ ಅಕ್ಷರಗಳ ಸಂಖ್ಯೆ.
  3. ಶಬ್ದಗಳ ಸಂಖ್ಯೆ.
  4. ಮೂರು ಶಬ್ದಗಳು ಮೂರು ಅರ್ಥಗಳನ್ನು ಹೊಂದಿರುವ ಬಗ್ಗೆ
  5. ಅವುಗಳಲ್ಲಿ ಪ್ರಮುಖವಾದ ಪದವು ಮತ್ತು ಅದು ಮೂರು ಅಕ್ಷರಗಳನ್ನು ಹೊಂದಿರುವ ಬಗ್ಗೆ.
  6. ಈ ಮೂರೂ ಅಕ್ಷರಗಳು ವೇದದ ಸಾರವಾಗಿ ಜನಿಸಿರುವುದರಿಂದ, ಅವುಗಳ ಸಮ್ಮಿಲನವಾದ ಪದ ಪ್ರಣವವು ಸಕಲ ವೇದದ ಸಾರವಾಗಿದೆ.

ಸೂತ್ರಮ್ – 35:

ಪರಿಚಯ: ಈಗ ಲೋಕಾಚಾರ್ಯರು ಈ ಮೂರೂ ಅಕ್ಷರಗಳ ಅರ್ಥಗಳನ್ನು ವಿವರಿಸಲು ನಿರ್ಧರಿಸುತ್ತಾರೆ ಮತ್ತು ‘ಅ’ ಎಂಬ ಅಕ್ಷರದಿಂದ ಸೂತ್ರ 35ನ್ನು ಪ್ರಾರಂಭಿಸುತ್ತಾರೆ.

ಇದಿಲ್ ಅಕಾರಮ್-ಸಕಲ ಶಬ್ದತ್ತುಕ್ಕುಮ್ ಕಾರಣಮಾಯ್ ನಾರಾಯಣ ಪದತ್ತುಕ್ಕು ಸಂಗ್ರಹಮಾಯ್
ಇರ್ರುಕ್ಕಯಾಲೇ, ಸಕಲ ಜಗತ್ತುಕ್ಕುಮ್ ಕಾರಣಮಾಯ್ ಸರ್ವ ರಕ್ಷಕನಾನ ಎಂಪೆರುಮಾನೈಚ್ ಚೊಲ್ಲುಗಿಱದು.

ಸರಳ ವಿವರಣೆ: ಇವುಗಳಲ್ಲಿ ‘ಅ’ ಅಕ್ಷರವು ಎಲ್ಲಾ ಪದಗಳ ಮೂಲವಾಗಿದೆ ಅದರಂತೆಯೇ ನಾರಾಯಣ ಶಬ್ದವನ್ನು ಅದು ಪ್ರತಿಬಿಂಬಿಸುತ್ತದೆ. ನಾರಾಯಣ ಶಬ್ದವು ಇಡೀ ಬ್ರಹ್ಮಾಂಡಕ್ಕೆ ಕಾರಣವಾಗಿದೆ ಮತ್ತು ಅದರ ರಕ್ಷಕನಾಗಿದೆ.

ವ್ಯಾಖ್ಯಾನಮ್: ಅದೇನೆಂದರೆ, ‘ಅ’ ಎಂಬ ಅಕ್ಷರವು ಎಲ್ಲಾ ಪದಗಳ ಮೂಲರೂಪವಾಗಿದೆ. ವಿಷ್ಣು ಪುರಾಣದ 1-5-63ರಲ್ಲಿ ಹೇಳಿರುವ ಹಾಗೆ,

ನಾಮ ರೂಪಂಚ ಭೂತಾನಾಮ್ ಕೃತ್ಯಾನಾಂಚ ಪ್ರಪಂಚನಮ್  ।
ವೇದ ಶಬ್ದೇಭ್ಯ ಏವಾಧೌ ದೇವಾಧೀನಾಮ್ ಚಕಾರ ಸಃ ॥

(ಪ್ರಜಾಪತಿಯು, ಸೃಷ್ಟಿಯ ಸಮಯದಲ್ಲಿ,  ನಾಲ್ಕು ರೀತಿಯ ಜೀವಿಗಳಿಗೂ ಅವು ದೇವತೆಗಳು, ಮನುಷ್ಯರು, ಮೃಗಗಳು ಮತ್ತು ಸಸ್ಯಗಳ ರೂಪ ಮತ್ತು ಅವುಗಳ ಚಟುವಟಿಕೆಗಳಿಗೆ ಹೆಸರುಗಳನ್ನು ಕೊಡುವಾಗ, ವೇದಗಳಿಂದ ಬರುವ ಶಬ್ದಗಳಿಂದಲೇ ಅವುಗಳಿಗೆ ಹೆಸರನ್ನು ಕೊಡಲಾಯಿತು. ಆದ್ದರಿಂದ ಈ ಪ್ರಪಂಚದಲ್ಲಿರುವ ಎಲ್ಲಾ ಶಬ್ದಗಳೂ ವೇದದಿಂದ ಹುಟ್ಟಿರುವುದು ಮತ್ತು ವೇದವೇ ಅವಕ್ಕೆ ಮೂಲ ಬೇರಿನಂತಿದೆ.

ಈ ಪ್ರಪಂಚದಲ್ಲಿರುವ ಎಲ್ಲಾ ಪ್ರಾಪಂಚಿಕ ವಸ್ತುಗಳ ಹೆಸರುಗಳೂ ವೇದದಿಂದ ಜನಿತವಾಗಿದೆ. ಇದನ್ನು ಲಘ್ವತ್ರಿ ಸ್ಮೃತಿಯಿಂದ ಸ್ಪಷ್ಟ ಪಡಿಸಲಾಗಿದೆ:

ಪ್ರಣವಾದ್ಯಾಸ್ ತಥಾ ವೇದಃ

(ಎಲ್ಲಾ ವೆದಗಳ ಪ್ರಾರಂಭದಲ್ಲಿ ಮತ್ತು ಅಂತ್ಯದಲ್ಲಿ ಪ್ರಣವವಿರುತ್ತದೆ. ಎಲ್ಲಾ ಪದಗಳೂ ಸಹಃ ಪ್ರಣವವೇ ಆಗಿರುತ್ತದೆ. ಆದ್ದರಿಂದ ನಾವು ಪ್ರಣವವನ್ನು ಅಭ್ಯಾಸಿಸಬೇಕು.)

ತೈತ್ತಿರೀಯ ನಾರಾಯಣಮ್ ನಲ್ಲಿ 10-24 ರ ಪ್ರಕಾರ:

ಓಂಕಾರ ಪ್ರಭವಾ ವೇದಾಃ

(ವೇದಗಳು ಪ್ರಣವದಿಂದಲೇ ಜನಿಸಿವೆ)

ತಸ್ಯ ಪ್ರಕೃತಿ ಲೀನಸ್ಯಃ  ।

(ಪ್ರಣವವು ಸ್ವ ಜನಿತವಾಗಿದೆ, ಅದು ತನ್ನಿಂದ ತಾನೇ ಜನಿಸಿದೆ)

ವೇದಗಳ ಪ್ರಾರಂಭದಲ್ಲಿ ಮತ್ತು ಅಂತ್ಯದಲ್ಲಿ ಪಠಿಸುವ ಓಂಕಾರವು ವೇದವನ್ನು ಸಬಲಗೊಳಿಸುತ್ತದೆ. ಆ ಪ್ರಣವದಲ್ಲಿ ಮಹೇಶ್ವರನು ತಾನೇ ಅರ್ಥವಾಗಿರುತ್ತಾನೆ.

ವಾಮನ ಪುರಾಣದಲ್ಲಿ ಹೇಳಿರುವ ಹಾಗೆ:

ಅಕಾರೋ ವೈ ಸರ್ವಾ ವಾಕ್

(ಎಲ್ಲಾ ಪದಗಳೂ ‘ಅ’ ಎಂಬ ಅಕ್ಷರದ ವಿವಿಧ ರೂಪಗಳಾಗಿದೆ).

ಸಮಸ್ತ ಶಬ್ದ ಮೂಲತ್ವಾದಕಾರಸ್ಯ ಸ್ವಭಾವತಃ

(‘ಅ’ ಎಂಬುದು ಎಲ್ಲಾ ಅಕ್ಷರಗಳ ಸಹಜವಾಗಿ ಮೂಲ ಸ್ವರೂಪವಾಗಿರುವಂತೆ, ಬ್ರಹ್ಮಮ್ ಎಂಬುದು ಎಲ್ಲದರ ಕಾರಣವಾಗಿದೆ. ಆದ್ದರಿಂದ ಆ ‘ಅ’ಕಾರ ಮತ್ತು ಬ್ರಹ್ಮಮ್ ರ ನಡುವಿನ ಸಂಬಂಧವು ಒಂದು ಪದ ಮತ್ತು ಅದರ ಅರ್ಥವೆಂದಾಗಿದೆ.)

ಸರ್ವೆಶ್ವರನು ಎಲ್ಲಾ ಬ್ರಹ್ಮಾಂಡಗಳಿಗೂ ಜನಕನಾಗಿರುತ್ತಾನೆ, ಅವನು ಎಲ್ಲಾ ಚೇತನ ಮತ್ತು ಅಚೇತನಗಳಿಗೂ ರಕ್ಷಕನಾಗಿರುತ್ತಾನೆ. ಎಲ್ಲದರ ಶರೀರವೂ ಅವನೇ ಆಗಿರುತ್ತಾನೆ, ಈ ಎಲ್ಲಾ ಅರ್ಥಗಳೂ ‘ನಾರಾಯಣ’ ಎಂಬ ಪದದಿಂದ ಅರ್ಥವಾಗುತ್ತದೆ ಮತ್ತು ‘ಅ’ ಎಂಬ ಅಕ್ಷರವು ಈ ‘ನಾರಾಯಣ’ ಎಂಬ ಪದದ ಸಾರಾಂಶವಾಗಿದೆ.

ತೈತ್ತಿರೀಯ ಭೃಗುವಲ್ಲಿ 1-1 ರಲ್ಲಿ ಹೇಳಿರುವಂತೆ : 

ಯಥೋ ವಾ ಇಮಾನಿ ಭೂತಾನಿ ಜಾಯಂತೇ ಯೇ ನ ಜಾತನಿ ಜೀವಂತಿ

(ಬ್ರಹ್ಮಮ್ ನಿಂದ ಎಲ್ಲಾ ವಸ್ತುಗಳೂ ಹುಟ್ಟಿರುವಂತೆ, ಅವುಗಳು ಜೀವಿಸಿರಲು ಕಾರಣವಾಗಿರುವ ಆಧಾರವು ಮತ್ತು ಅವುಗಳು ಕೊಳೆತಾಗ (ಹಾಳಾದಾಗ) ಮುಟ್ಟುವುದೂ ಬ್ರಹ್ಮವನ್ನೇ).

ವಿಷ್ಣು ಪುರಾಣ 1-2-70 ರಲ್ಲಿ ಹೇಳಿರುವ ಹಾಗೆ:

ಸ ಏವ ಸೃಜ್ಯಸ್ ಚ ಸರ್ಗ ಕರ್ತಾ ಸ ಏವ ಪಾತ್ಯತ್ತಿ ಚ ಪಾಲ್ಯತೇ ಚ

ಎಲ್ಲವನ್ನೂ ಸೃಷ್ಟಿಸಿದವನು ವಿಷ್ಣು, ಏನನ್ನು ಸೃಷ್ಟಿಸಿದನು ಎಂಬುದೂ ವಿಷ್ಣು, ಪ್ರಳಯ ಕಾಲದಲ್ಲಿ ಎಲ್ಲವನ್ನೂ ಅವನೊಬ್ಬನೇ ನುಂಗುವನು, ಸರ್ವ ಶ್ರೇಷ್ಠನಾದ ವಿಷ್ಣುವೇ ಎಲ್ಲಾ ವರಗಳನ್ನು ಕೊಡುವ ಬ್ರಹ್ಮನೂ ಅವನೇ, ಅವನು ಇಡೀ ಅಸಂಖ್ಯಾತ ಬ್ರಹ್ಮಾಂಡವನ್ನೇ ತನ್ನ ಶರೀರವನ್ನಾಗಿ ಮಾಡಿಕೊಂಡಿದ್ದಾನೆ.

ಈ ಎಲ್ಲಾ ಪ್ರಮಾಣಗಳೂ ಅವನನ್ನೇ ಎಲ್ಲಾ ಸೃಷ್ಟಿಗಳ ಜನಕ ಮತ್ತು ರಕ್ಷಕನೆಂದು ಸ್ಪಷ್ಟೀಕರಿಸುತ್ತದೆ. ಆದ್ದರಿಂದ ಈ ಅಕ್ಷರವು ಪ್ರಕೃತಿಯ ಸೃಷ್ಟಿಯನ್ನು ಸೂಚಿಸುತ್ತದೆ(ಕ್ರಿಯಾ ಪದದ ಮೂಲಪದ). ಮತ್ತು ಅದರ ರಕ್ಷಣೆಯನ್ನು. (ರಕ್ಷಕತ್ವವನ್ನು) ಧಾತುವು ಸೂಚಿಸುತ್ತದೆ. ‘ಅ’ ಎಂಬ ಅಕ್ಷರವು ನಾರಾಯಣ ಎಂಬ ಶಬ್ದದ ಸಾರಾಂಶವನ್ನು ಸೂಚುಸುತ್ತದೆ ಎಂದು ಹೇಳುವಾಗ ಅದು ನಾರಾಯಣ ಎಂಬ ಶಬ್ದದ ಗುಣವನ್ನೂ ಹೊಂದಿರಬೇಕು ಅದರ ಮೂಲ ರೂಪದಲ್ಲಿ ಎಂದು ಈ ಮೂಲಕ ಸಾಧಿಸಲಾಗಿದೆ.

ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ.