ಮುಮುಕ್ಷುಪ್ಪಡಿ – ಸೂತ್ರಮ್ 42 ರಿಂದ 50

ಶ್ರೀಃ ಶ್ರೀಮತೇ ಶಟಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ 

ಸೂತ್ರಮ್ – 42 

ಪರಿಚಯ : ಇದರ ಅರ್ಥವನ್ನು ಇನ್ನೂ ಬಲಪಡಿಸುವುದಕ್ಕಾಗಿ ಪಿರಾಟ್ಟಿಯ ಜೊತೆಗೆ ಅಕಾರ ಮತ್ತು ಮಕಾರ ಗಳಿಗೆ ಇರುವ ಸಂಬಂಧವನ್ನು ಈಶ್ವರ ಮತ್ತು ಚೇತನಗಳಿಗೆ ಅನುಗುಣವಾಗಿ  ಲೋಕಾಚಾರ್ಯರು ನಿರೂಪಸುತ್ತಾರೆ.

ಭರ್ತಾ ವಿನ್ ಒಡೈ ಯ ಪಡುಕೈಯೈಯುಮ್ ಪ್ರಜೈಯಿನೊಡೈಯ ತೊಟ್ಟಿಲೈ ಯುಮ್ ವಿಡಾದೆ ಇರುಕ್ಕುಮ್ ಮಾತಾವೈ 

ಪೋಲೆ ಪ್ರಥಮ ಚರಮ ಪದಂಗಳೈ ವಿಡಾದೇ ಇರುಕ್ಕುಮ ಇರುಪ್ಪು 

ಸರಳ ಅರ್ಥ: ಅವಳ ಜೊತೆ ಇರುವ ‘ಅ’ ಎಂಬ ಮೊದಲ ಅಕ್ಷರ ಮತ್ತು ‘ಮ’ ಎಂಬ ಕೊನೆಯ ಅಕ್ಷರಗಳ ಸಂಬಂಧ ಹೇಗೆ ಒಬ್ಬ ಮಡದಿಯು ತನ್ನ ಪತಿಯ ಹಾಸಿಗೆಯನ್ನೂ ಬಿಡದೆ ಹಾಗೆಯೇ ತನ್ನ ಮಗುವಿನ ತೊಟ್ಟಿಲನ್ನೂ ತೂಗುವಳೋ ಹಾಗೆ ಇರುತ್ತದೆ. 

ವ್ಯಾಖ್ಯಾನಂ : ಹೇಗೆಂದರೆ, ಒಬ್ಬ ಮಡದಿಯು ತನ್ನ ಪತಿಯ ಆನಂದಕ್ಕಾಗಿ ಹಾಸಿಗೆಯನ್ನೂ ಬಿಡದೆ ಮತ್ತು ತನ್ನ ಮಗುವಿನ ರಕ್ಷಕಳಾಗಿ  ಅವಳ ಮಗುವಿನ ತೊಟ್ಟಿಲನ್ನೂ ಬಿಡದೆ ತೂಗುವಂತೆ ಶ್ರೀ ಮಹಾಲಕ್ಷ್ಮಿಯು ಅ – ಕಾರದೊಂದಿಗಿನ ಸಂಬಂಧವಾದ ದಿವ್ಯ ಪತಿಯಾದ ಈಶ್ವರನೊಂದಿಗೂ ಮತ್ತು ಮ-ಕಾರ ದೊಂದಿಗಿನ ಸಂಬಂಧವಾದ ಎಲ್ಲಾ ಚೇತನದೊಂದಿಗಿನ ರಕ್ಷಕತ್ವವನ್ನು ತಾನು ಅವುಗಳ ತಾಯಿಯಂತೆ ಸಂಭಾಳಿಸುತ್ತಾಳೆ. 

ಸೂತ್ರಮ್ – 43 

ಪರಿಚಯ: ಲೋಕಾಚಾರ್ಯರು ಇದನ್ನು ಯಶೋದೆಯು ನಂದಗೋಪ ಮತ್ತು ಕೃಷ್ಣ ಇಬ್ಬರನ್ನೂ ಬಿಡದೆ ಇಬ್ಬರಿಗೂ ತನ್ನ ಗಮನವನ್ನು ಕೊಡುವಂತಹ ಒಂದು ಉದಾಹರಣೆಯನ್ನು ಕೊಡುತ್ತಾರೆ. 

ಶ್ರೀ ನಂದಗೋಪರೈಯುಮ್ ಕೃಷ್ಣನೈಯುಮ್ ವಿಡಾದ ಯಶೋದೈ ಪಿರಾಟ್ಟಿ ಯೈ ಪೋಲೇ 

ಸರಳ ಅರ್ಥ : ಹೇಗೆ ತಾಯಿ ಯಶೋದೆಯು ತನ್ನ ಮಗುವಾದ ಕೃಷ್ಣನನ್ನೂ ಮತ್ತು ತನ್ನ ಪತಿಯಾದ ನಂದಗೋಪರನ್ನೂ ನಿರ್ಲಕ್ಷಿಸದೆ ಕಾಯುವಂತೆ. 

ವ್ಯಾಖ್ಯಾನಂ:

ಶ್ರೀ ಮಹಾಲಕ್ಷ್ಮಿಯು ಯಶೋದೆಯಂತೆ ನಂದಗೋಪಾಲರನ್ನೂ ಅವರ ಸಂತೋಷಕ್ಕಾಗಿ  ಅವರನ್ನು ಬಿಡದೆ ಮತ್ತು ಕೃಷ್ಣ ನನ್ನೂ ಅವನ ತಾಯಿಯಾಗಿ ರಕ್ಷಣೆ ಮಾಡುತ್ತಾ ಅವರಿಬ್ಬರ ಮಧ್ಯದಲ್ಲಿ ಮಲಗುವಂತೆ ಹಾಗೂ ತಿರುಪ್ಪಾವೈ ನಲ್ಲಿ ‘ಅಂಬರಮೇ’ ಎಂಬ ಪಾಸುರದಲ್ಲಿ ಬರುವಂತೆ ಅವಳು ಎಂಪೆರುಮಾನ ಮತ್ತು ಎಲ್ಲಾ ಜೀವಾತ್ಮಗಳಿಗೂ ನಡುವಿನ ಸೇತುವೆಯಂತೆ ಇರುತ್ತಾಳೆ. 

ಸೂತ್ರಮ್ – 44 

ಪರಿಚಯ : ಲೋಕಾಚಾರ್ಯರು ಅತ್ಯಂತ ಕರುಣೆಯಿಂದ ನಮ್ಮ ಗೊಂದಲವನ್ನು ಪರಿಹಾರಿಸುತ್ತಾರೆ : ನಾವೆಲ್ಲರೂ ಭಗವಂತನ ಸೇವೆಗೆ ಮೀಸಲ್ಪಟ್ಟವರು ಎಂದು ಹೇಳಿಕೆಯಲ್ಲಿದ್ದರೂ ಮತ್ತು ಅವಳ ಹೆಸರು ಅದರಲ್ಲಿ ಉಲ್ಲೇಖಿಸದಿದ್ದರೂ, ನಾವೆಲ್ಲರೂ ಅವಳಿಗೂ ಸೇವಕರೆಂದು ಹೇಗೆ ನಂಬುವುದು?

ಒರುವನ್ ಅಡಿಮೈ ಕೊಲ್ಲುಮ್ ಪೋದು ಎನ್ರನ್ರೆ ಆವನ ಓಲೈ ಎೞುದುವುದು;

ಆಗಿಲುಮ್ ಪಣಿ ಸೆಯ್ವದು ಗೃಹಿಣಿಕ್ಕಿಱೆ;

ಅದು ಪೋಲೇ ನಾಮ್ ಪಿರಾಟ್ಟಿಕ್ಕು ಅಡಿಮೈಯೈ ಇರುಕ್ಕುಮ್ ಬಡಿ

ಸರಳ ಅರ್ಥ: ಮನೆಯ ಯಜಮಾನನು ಸೇವಕರಿಗೆ ಕೆಲಸವನ್ನು ಕೊಟ್ಟಿದ್ದರೂ, ಆ ಕೆಲಸವನ್ನು ಆ ಮನೆಯ ಯಜಮಾನಿಯ ಅಪ್ಪಣೆಯಂತೆ ಮಾಡುವುದು ಸೇವಕನ ಕರ್ತವ್ಯವಾಗಿರುತ್ತದೆ. ಹಾಗೆ ನಾವೆಲ್ಲರೂ ಶ್ರೀ ಮಹಾಲಕ್ಷ್ಮಿಯ ಸೇವೆಗೆ ಅನುವಾಗಿರುತ್ತೇವೆ.

ವ್ಯಾಖ್ಯಾನಮ್: 

ಯಾವಾಗ ಮನೆಯ ಯಜಮಾನನು ತನ್ನ ಸೇವಕರಿಗೆ ಅವರ ಕೆಲಸಗಳನ್ನು ಕೊಟ್ಟಿರುತ್ತಾನೆ. ಆದರೆ ಅವನು ತನ್ನ ಹೆಂಡತಿಗಾಗಿ ಕೆಲಸದವರನ್ನು ನೇಮಿಸಿರುವುದಿಲ್ಲ. ಆದರೂ ಆ ಯಜಮಾನಿಯು ಹೇಳಿದ ಕೆಲಸಗಳನ್ನು ಮಾಡುವುದು ಆ ಕೆಲಸಗಾರರ ಕರ್ತವ್ಯವಾಗಿರುತ್ತದೆ. ಆದ್ದರಿಂದ ಅ-ಕಾರವು ನಮ್ಮ ಸೇವಕತ್ವವನ್ನು ಈಶ್ವರನಿಗೆ ಸೂಚಿಸಿದ್ದರೂ ನಾವೆಲ್ಲರೂ ಅವಳಿಗೂ ಸಹ ಸೇವಕರಾಗಿರುತ್ತೇವೆ.

ಸೂತ್ರಂ – 45

ಪರಿಚಯ: ಎಮ್ಪೆರುಮಾನರಿಗೆ ಮತ್ತು ಶ್ರಿ ಮಹಾಲಕ್ಷ್ಮಿಗೆ ಇರುವ ಬಿಡಿಸಲಾರದ ಬಂಧವನ್ನು ಲೋಕಾಚಾರ್ಯರು ಈ ತತ್ತ್ವಗಳಿಂದ ಪ್ರತಿಪಾದಿಸುತ್ತಾರೆ.

ಆಗ, ಪಿರಿತ್ತು ನಿಲೈ ಇಲ್ಲೈ.

ಸರಳ ಅರ್ಥ: ಆದ್ದರಿಂದ ಅವರಿಬ್ಬರನ್ನೂ ಬೇರೆ ಬೇರೆಯಾಗಿ ನೋಡುವುದಕ್ಕೆ ಅರ್ಥವಿಲ್ಲ.

ಸೂತ್ರಮ್ – 46

ಪರಿಚಯ: ಎಂಪೆರುಮಾನರ ಮತ್ತು ಶ್ರೀ ಮಹಾಲಕ್ಷ್ಮಿಯ ಬಿಡಿಸಲಾರದ ಬಂಧನಕ್ಕೆ ಲೋಕಾಚಾರ್ಯರು ಎರಡು ಉದಾಹರಣೆಗಳನ್ನು ಕೊಡುತ್ತಾರೆ.

ಪ್ರಬೈಯೈಯುಮ್ ಪ್ರಬಾವಾನೈಯುಮ್, ಪುಷ್ಪತ್ತೈಯುಮ್ ಮಣತ್ತೈಯುಮ್ ಪೋಲೇ

ಸರಳ ಅರ್ಥ: ಪ್ರಭೆ ಮತ್ತು ಅದರ ಮೂಲ ವಸ್ತು ಹಾಗೂ ಹೂವು ಮತ್ತು ಅದರ ಸುಗಂಧದ ಹಾಗೆ.

ವ್ಯಾಖ್ಯಾನಮ್: ಪ್ರಭೆ ಮತ್ತು ಅದರ ಜನಕ ವಸ್ತು ಮತ್ತು ಹೂವು ಮತ್ತದರ ಸುಗಂಧವನ್ನು ಹೇಗೆ ಬೇರೆ ಬೇರೆಯಾಗಿ ವಿಂಗಡಿಸಿ ಹೇಳಲಾರೆವೋ, ಹೂವು ಮತ್ತು ಅದರ ಸುಗಂಧವನ್ನು ಬೇರ್ಪಡಿಸಲಾಗದೋ ಹಾಗೆ ಎಂಪೆರುಮಾನರನ್ನು ಮತ್ತು ಶ್ರೀ ಮಹಾಲಕ್ಷ್ಮಿಯನ್ನು ಬೇರೆ ಬೇರೆಯಾಗಿ ವಿಂಗಡಿಸಲು ಸಾಧ್ಯವಿಲ್ಲ. ಇದನ್ನು ರಾಮಾಯಣದ ಸುಂದರಕಾಂಡ 21-15 ರಲ್ಲಿ ಉಲ್ಲೇಖಿಸಲಾಗಿದೆ.

“ಅನನ್ಯ ರಾಘವೇಣಾಹಮ್ ಭಾಸ್ಕರೇನ ಪ್ರಭಾ ಯಥಾ।”

ಶ್ರೀ ರಾಮಾಯಣಮ್ ಯುದ್ಧ ಕಾಂಡಮ್ 121-16:

“ಅನನ್ಯಾಹಿ ಮಯಾ ಸೀತಾ ಭಾಸ್ಕರೇನ ಪ್ರಭಾ ಯಥಾ”

(ಸೀತೆಯು ನನ್ನಿಂದ ಬೇರ್ಪಡಿಸಲಾಗದವಳು ಹೇಗೆ ಭಾಸ್ಕರನಿಂದ ಪ್ರಭೆಯು)

ಮತ್ತೂ, ಶ್ರೀ ಪರಾಶರ ಭಟ್ಟರ್ ಶ್ರೀ ಗುಣರತ್ನ ಕೋಶಮ್ – 29ನಲ್ಲಿ ಹೇಳಿರುವಂತೆ:

“ಪ್ರಸೂನಮ್ ಪುಷ್ಯಂತೀಮಪಿ ಪರಿಮಳರ್ದ್ಧಿಮ್ ಜಿಗಧಿಶುಃ”

(ಓಹ್! ಕಮಲಾ ! ನಿನ್ನ ಜೊತೆಗೆ ಹೊಂದಿರುವ ಸಂಬಂಧದಿಂದಲೇ ಈಶ್ವರನಿಗೆ ಮಂಗಲಮ್ (ವಿಶೇಷವಾದ, ಪವಿತ್ರವಾದ) ಎಂಬ ಅರ್ಥವಿದೆ. ನಿನ್ನ ಹೆಸರಿನಲ್ಲಿ ಶ್ರೀ ಇರುವುದರಿಂದ, ನಿನಗೆ ಮಂಗಳ ಎಂಬ ಪದವು ಅನ್ವಯವಾಗುವುದಿಲ್ಲ, ಆದರೆ ಆ ಪದವು ನಿನಗೆ ಸಹಜವಾಗಿ ಸೂಕ್ತವಾಗಿದೆ. ಹೇಗೆ ಯಾವ ಕವಿಯೂ ಹೂವಿನ ಪರಿಮಳವನ್ನು ಕುರಿತು ಹೊಗಳುತ್ತಾನೋ, ಹೂವು ತನ್ನ ಪರಿಮಳದಿಂದಲೇ ಆ ಶ್ರೇಷ್ಠತೆಯನ್ನು ಪಡೆದಿದೆ. ಬೇರೆ ಯಾವ ಕಾರಣದಿಂದಲೂ ಅಲ್ಲ.)

ಈ ಕವಿತೆಯಲ್ಲಿ ಭಟ್ಟರ್ ಈಶ್ವರನನ್ನು ಹೂವಾಗಿಯೂ, ಮತ್ತು ಶ್ರೀ ಮಹಾಲಕ್ಷ್ಮಿಯನ್ನು ಅದರ ಪರಿಮಳವಾಗಿಯು ಹೋಲಿಸುತ್ತಾರೆ. ಆದ್ದರಿಂದ ಪೆರುಮಾಳ್ ಮತ್ತು ಪಿರಾಟ್ಟಿಯು ಒಬ್ಬರಿಂದ ಒಬ್ಬರು ಬೇರ್ಪಡಿಸಲಾಗದವರು ಹೇಗೆ ಹೂವು ಮತ್ತು ಅದರ ಸುಗಂಧವು.

ಸೂತ್ರಮ್ – 47

ಪರಿಚಯ: ಈಶ್ವರ ಮತ್ತು ಪಿರಾಟ್ಟಿಯ ಒಗ್ಗಟ್ಟಿನ ಗುಣವನ್ನು ಪರಿಗಣಿಸಿ, ಲೋಕಾಚಾರ್ಯರು ಈ ಮಿಲನವನ್ನು ಜೀವಿಗಳಿಗೆ  ಸೂಕ್ತವಾದ ಪ್ರಾಪ್ಯ (ಗಳಿಸಬಹುದಾದ ಗುರಿ) ಎಂದು ವೈಭವೀಕರಿಸುತ್ತಾರೆ.

ಆಗ ಇಚ್ಚೇರ್ಥಿ ಉದ್ಧೇಶ್ಯಮಾಯ್ ವಿಟ್ಟದು

ಸರಳ ಅರ್ಥ: ಆದ್ದರಿಂದ ಈ ಸಂಯೋಜನೆಯು ತಲುಪಲು ಸಾಧ್ಯವಾಗುವ ಗುರಿಯಾಗಿದೆ.

ವ್ಯಾಖ್ಯಾನಮ್: ಈ ದಂಪತಿಗಳ ಸಂಯೋಜನೆಯಿಂದ  (ಪೆರುಮಾಳ್ ಮತ್ತು ಪಿರಾಟ್ಟಿ) ಮಹತ್ತರವಾದ ಗುರಿಯನ್ನು ಗಳಿಸಲು ಸಾಧ್ಯವಾಗಿದೆ. ಅವರನ್ನು ಒಬ್ಬೊಬ್ಬರಾಗಿ ಬಯಸುವುದು ಸಮಂಜಸವಲ್ಲ. ಅವರನ್ನು ಬೇರೆ ಬೇರೆಯಾಗಿ ಆಸೆ ಪಟ್ಟರೆ, ಸನಿಹವಾಗಲು ಪ್ರಯತ್ನಿಸಿದರೆ ರಾವಣ ಮತ್ತು ಶೂರ್ಪಣಖರಿಗೆ ಆದ ಕಥೆಯೇ ಆಗುತ್ತದೆ. ಅವರಿಬ್ಬರನ್ನೂ ಸೇರಿಸಿ ಬಯಸಿದರೆ ಮತ್ತು ಸನಿಹಿತರಾದರೆ ವಿಭೀಷಣರಂತೆ ಮೆರೆಯಬಹುದು. ಅವರ ಜೀವನವು ಅರಳುತ್ತದೆ.

ಸೂತ್ರಮ್ – 48

ಪರಿಚಯ: ಲೋಕಾಚಾರ್ಯರು ಮೊದಲ ಅಕ್ಷರವಾದ ಅ-ಕಾರದ ಅಸ್ತಿತ್ವದ ಕಾರಣವನ್ನು ಸ್ತಿತಪಡಿಸುತ್ತಾರೆ.

ಇದಿಲೇ ಚತುರ್ಥಿ ಎಱಿಕ್ ಕೞಿಯುಮ್.

ಸರಳ ಅರ್ಥ: ಈ ಪದದಲ್ಲಿ ನಾಲ್ಕನೆಯ ಚತುರ್ಥಿಯು ಕೂಡುತ್ತದೆ ಮತ್ತು ಮಾಯವಾಗುತ್ತದೆ.

ವ್ಯಾಖ್ಯಾನಮ್: ಅ-ಕಾರದಲ್ಲಿ ನಾಲ್ಕನೆಯ ವಿಭಕ್ತಿಯು ಕೂಡಿಕೊಳ್ಳುತ್ತದೆ ಮತ್ತು ವ್ಯಾಕರಣಕ್ಕೆ ಅನುವ್ಯಯವಾಗಿ ಮಾಯವಾಗುತ್ತದೆ.

ಸೂತ್ರಮ್ – 49

ಪರಿಚಯ: ಯಾರಾದರೂ ಕೇಳಬಹುದು: ಎಲ್ಲಾ ವಿಭಕ್ತಿಯನ್ನು ಬಿಟ್ಟು ಏಕಾಗಿ ನಾಲ್ಕನೆಯ ವಿಭಕ್ತಿಯು ಮಾತ್ರ ಸೇರಿಸಲ್ಪಡುತ್ತದೆ ಮತ್ತು ತಕ್ಷಣವೇ ಮರೆಯಾಗುತ್ತದೆ?

ಚತುರ್ಥಿ ಏಱಿನಪ್ಪಡಿ ಎನ್? ಎನ್ನಿಲ್,

ಸರಳ ಅರ್ಥ: ಏಕೆ ಚತುರ್ಥಿಯೇ ಆಗಬೇಕು ಎಂದು.

ಸೂತ್ರಮ್ – 50

ಪರಿಚಯ: ಈ ಪ್ರಶ್ನೆಗೆ ಲೋಕಾಚಾರ್ಯರು 50ನೆಯ ಸೂತ್ರದಲ್ಲಿ ಉತ್ತರಿಸುತ್ತಾರೆ.

ನಾರಾಯಣ ಪದತ್ತುಕ್ಕು ಸಂಗ್ರಹಮಾಯ್ ಇರುಕ್ಕೈಯಾಲೇ

ಸರಳ ಅರ್ಥ:  ಅ- ಕಾರವು ನಾರಾಯಣ ಪದದ ಸಾರಾಂಶವಾಗಿರುವುದರಿಂದ ನಾಲ್ಕನೆಯ ವಿಭಕ್ತಿಯನ್ನು (ಚತುರ್ಥಿಯನ್ನು) ಆಯ್ದುಕೊಳ್ಳಲಾಗಿದೆ.

ವ್ಯಾಖ್ಯಾನಮ್:  ಏಕೆಂದರೆ ಈ ಸ್ವರವು ನಾರಾಯಣ ಎಂಬ ಪದದ ಸಾರಾಂಶವಾಗಿರುವುದರಿಂದ ನಾಲ್ಕನೆಯ ವಿಭಕ್ತಿಯು ಇಲ್ಲಿಯೂ ಪ್ರಸ್ತುತವಾಗಿದೆ. ಇಲ್ಲವಾದರೆ ಈ ಎರಡೂ ಪದಗಳು ಸಾರಾಂಶ ಮತ್ತು ವಿಸ್ತಾರದ ಸಂಬಂಧವಾಗಿ ವಾಗಿ ಪ್ರಸ್ತುತ ಪಡಿಸಲು ಸಾಧ್ಯವಿಲ್ಲ.

ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ