ಶ್ರೀಃ ಶ್ರೀಮತೇ ಶಟಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ
ಸೂತ್ರಮ್ – 51
ಪರಿಚಯ: ಲೋಕಾಚಾರ್ಯರು ಇದರಿಂದ ಯಾವ ಅರ್ಥವನ್ನು ಸೂಚಿಸಲಾಗುತ್ತದೆ ಎಂದು 51ನೆಯ ಸೂತ್ರದಲ್ಲಿ ವಿವರಿಸಿದ್ದಾರೆ.
ಇತ್ತಾಲ್ ಈಶ್ವರನುಕ್ಕು ಶೇಷಮ್ ಎಂಗಿಱದು.
ಸರಳ ಅರ್ಥ: ಇದರಿಂದಾಗಿ, ಆತ್ಮವು ಈಶ್ವರನಿಗೆ ಸೇವಕತ್ವವನ್ನು (ಶೇಷಮ್) ಸೂಚಿಸುತ್ತದೆ.
ವ್ಯಾಖ್ಯಾನಮ್: ಇದು ಎಂಬುದು “ತಾದಾರ್ಥ್ಯೇ ಚತುರ್ಥಿ” (ನಾಲ್ಕನೆಯ ವಿಭಕ್ತಿ ಪ್ರತ್ಯಯವು ಇಲ್ಲಿ ‘ಇದು’ ಎಂದು ಸಂಬೋಧಿಸಲ್ಪಡುತ್ತದೆ) ಅರ್ಥವು ಆತ್ಮವು ಈಶ್ವರನಿಗೆ ಸೇವಕನಾಗಿರುವುದನ್ನು ಸೂಚಿಸುತ್ತದೆ.
ಸೂತ್ರಮ್ – 52
ಪರಿಚಯ: ಸಾಮಾನ್ಯವಾಗಿ ಸೇವಕತ್ವವು ಬಹಳ ಕಷ್ಟಕರವಾದ ನೋವನ್ನುಂಟು ಮಾಡುತ್ತದೆ ಎಂದು ನಂಬಿರುತ್ತಾರೆ. ಮನು 4-160 ಹೇಳುತ್ತಾರೆ: “ಸರ್ವಮ್ ಪರವಶಮ್ ದುಃಖಮ್” (ಸೇವಕತ್ವವು ದುಃಖವನ್ನುಂಟು ಮಾಡುತ್ತದೆ) ಆದ್ದರಿಂದ ಜನರು ಈ ಗೊಂದಲವನ್ನು ಪರಿಹರಿಸಿಕೊಳ್ಳುತ್ತಾರೆ. – ಸೇವಕತ್ವವಾಗಿಲ್ಲದಿರುವುದು ದುಃಖಕರವಾಗಿಲ್ಲವೇ? ಸರ್ವಮ್ ಪರವಶಮ್ ದುಃಖಮ್ ಸರ್ವಮ್ ಆತ್ಮವಶಮ್ ಸುಖಮ್ ಇತಿ ವಿದ್ಯಾತ್ ಸಮಾಸೇನ ಲಕ್ಷಣಮ್ ಸುಖ ದುಃಖಾಯೋ” (ಬೇರೆಯವರಿಂದ ನಿಯಂತ್ರಿಸಲ್ಪಡುವುದು ಎಲ್ಲಾ ರೀತಿಯಿಂದಲೂ ದುಃಖಕರ. ಸ್ವತಂತ್ರವಾಗಿರುವುದು ಎಲ್ಲಾ ರೀತಿಯಲ್ಲಿಯೂ ಸಂತೋಷಕರ. ನಾವು ಇದರಿಂದ ಸಂತೋಷದ ಮತ್ತು ದುಃಖದ ಅರ್ಥವನ್ನು ತಿಳಿದುಕೊಳ್ಳಬಹುದು.) “ಸೇವಾ ಶ್ವವೃತ್ತಿಃ” (ಬೇರೆಯವರಿಗೆ ಸೇವೆ ಸಲ್ಲಿಸುವುದೆಂದರೆ ನಾಯಿಯ ಕೆಲಸ) ಎಂದೂ ಹೇಳಲಾಗಿದೆ.
ಶೇಷತ್ವಮ್ ದುಕ್ಕ ರೂಪಮಾಗವನ್ಱೋ ನಾಟ್ಟಿಲ್ ಕಾಣ್ಗಿಱದು ಎನ್ನಿಲ್
ಸರಳ ಅರ್ಥ: ನಮ್ಮ ಸುತ್ತ ಮುತ್ತಲೂ ನೋಡಿದರೆ ಸೇವಕತ್ವ ಮನೋಭಾವನೆ ಇಲ್ಲದಿರುವುದು ದುಃಖಕರವಾಗಿಲ್ಲವೇ?
ಸೂತ್ರಮ್ – 53
ಪರಿಚಯ: ಲೋಕಾಚಾರ್ಯರು ಹೇಳುತ್ತಾರೆ ಈ ರೀತಿಯನ್ನು ಸಾಧಿಸಲಾಗುವುದಿಲ್ಲ. ನಮಗೆ ಪ್ರೀತಿಪಾತ್ರರಾಗುವವರಿಗೆ ಸೇವೆ ಸಲ್ಲಿಸುವುದು ನೋವಿನ ವಿಷಯವಲ್ಲ. ಆದರೆ ಅಂತಹ ವ್ಯಕ್ತಿಗೆ ಸೇವೆಯನ್ನು ಸಲ್ಲಿಸುವುದು ಆಹ್ಲಾದಕರವಾಗಿರುತ್ತದೆ. ಇದನ್ನು ನಮ್ಮ ಸುತ್ತ ಮುತ್ತಲೂ ನೋಡಬಹುದು.
ಅನ್ದ ನಿಯಮಮ್ ಇಲ್ಲೈ ; ಉಗಂದ ವಿಷಯತ್ತುಕ್ಕು ಶೇಷಮಾಯ್ ಇರುಕ್ಕುಮ್ ಇರುಪ್ಪು ಸುಗಮ್ ಆಗ ಕಾಣ್ಗಯಾಲೇ.
ಸರಳ ಅರ್ಥ: ನಾವು ಅದರಂತೆ ವಿಶ್ಲೇಷಿಸಲಾಗುವುದಿಲ್ಲ. ನಾವು ಮೆಚ್ಚಿರುವ ಪ್ರೀತಿಸುವ ವ್ಯಕ್ತಿಗೆ ಸೇವಕರಾಗಿರುವುದು ಆನಂದಮಯವಾದ ವಿಷಯ.
ವ್ಯಾಖ್ಯಾನಮ್:
ನಮ್ಮಾೞ್ವಾರ್ ತಿರುವಾಯ್ ಮೊೞಿ 4-1-5 “ಪಣ್ಣಿಮಿನ್ ತಿರುವರುಳ್” (ನಿನ್ನ ಕರುಣೆಯನ್ನು ನನಗೆ ಪರಿಪಾಲಿಸು) ಎಂದು ಹೇಳಿದ್ದಾರೆ. ಆದ್ದರಿಂದ ಸೇವಕತ್ತ್ವವು ದುಃಖಕರವಾದುದ್ದಲ್ಲ. ಆದರೆ ಸಂಸಾರದಲ್ಲಿ ಪ್ರೀತಿಪಾತ್ರರಾದವರಿಗೆ ಸೇವೆ ಸಲ್ಲಿಸುವುದು ಆನಂದಮಯವಾದ ಅನುಭವವಾಗಿರುತ್ತದೆ.
ಸೂತ್ರಮ್ – 54
ಪರಿಚಯ: “ಯಾವ ವ್ಯಕ್ತಿಗೆ ನಾವು ಸೇವ ಮಾಡುತ್ತೇವೋ ಆ ವ್ಯಕ್ತಿಯ ಗುಣಗಳಿಂದ ಆ ಸೇವೆಯು ಆನಂದಮಯವಾಗುವುದಿಲ್ಲವೇ?” ಎಂಬ ಪ್ರಶ್ನೆಗೆ ಲೋಕಾಚಾರ್ಯರು ಉತ್ತರಿಸುತ್ತಾರೆ.
ಅಕಾರತ್ತಿಲೇ ಕಲ್ಯಾಣಗುಣಂಗಳೈ ಸೊಲ್ಲುಗೈಯಾಲೇ ಶೇಷತ್ವಮುಮ್ ಗುಣತ್ತಾಲೇ ವಂದದು.
ಸರಳ ಅರ್ಥ: ಅ-ಕಾರವು ಸ್ಪಷ್ಟ ಪಡಿಸುವಂತೆ, ಅವನ ಕಲ್ಯಾಣ ಗುಣಗಳಿಂದಲೇ ಶೇಷತ್ವವು (ಅವನಿಗೆ ಮಾಡುವ ಸೇವೆಯು) ಯೋಗ್ಯವಾಗಿದೆ.
ವ್ಯಾಖ್ಯಾನಮ್: ಈ ಶೇಷತ್ವವು ಈಶ್ವರನ ಅನೇಕ ಕಲ್ಯಾಣ ಗುಣಗಳಿಂದ ಬಂದಿದೆ. ಇವೇ ಒಬ್ಬ ರಕ್ಷಕನ ಗುಣಗಳಾಗಿವೆ. ಎಲ್ಲರನ್ನೂ ರಕ್ಷಿಸುವ ಅವನ ಗುಣದಿಂದಲೇ ಅವನು ಸೇವೆಗಳಿಗೆ ಅತ್ಯಂತ ಸೂಕ್ತನಾಗಿರುತ್ತಾನೆ. ಆದ್ದರಿಂದ, ಅಭಿಪ್ರಾಯವೇನೆಂದರೆ ಆ ಸೇವೆಯು ಖಂಡಿತವಾಗಿಯೂ ಆನಂದಮಯವಾಗಿರುತ್ತದೆ.
ಸೂತ್ರಮ್ – 55
ಪರಿಚಯ: ಆದರೆ, ಅವನ ಗುಣಗಳ ಕಾರಣದಿಂದ ನಮಗೆ ಶೇಷತ್ವವು ಬಂದಿದೆ, ಆದರೆ ನಮ್ಮ ಆಂತರೀಯ ಸ್ವಭಾವದಿಂದ ಶೇಷಕತ್ವವು ಬಂದಿಲ್ಲವೇ? ಎಂಬ ಪ್ರಶ್ನೆಗೆ ಲೋಕಾಚಾರ್ಯರು ವಿವರಿಸುತ್ತಾರೆ.
ಶೇಷತ್ವಮೇ ಆತ್ಮಾವುಕ್ಕು ಸ್ವರೂಪಮ್.
ಸರಳ ಅರ್ಥ: ಸೇವಕತ್ವ (ಶೇಷತ್ವ) ಒಂದೇ ಆತ್ಮದ ಗುರುತು. (ಆತ್ಮದ ಸ್ವರೂಪವು, ಗುಣವು)
ವ್ಯಾಖ್ಯಾನಮ್:
ವಿಷ್ಣುತತ್ವಮ್ ನಲ್ಲಿ ವಿವರಿಸಿರುವಂತೆ, ತಮ್ಮ ಪ್ರೀತಿಪಾತ್ರರಿಗೆ ಸೇವೆ ಸಲ್ಲಿಸುವುದು ಆನಂದಕರವಾದ ವಿಷಯ ಎಂಬ ಉಲ್ಲೇಖನವು ಪರಮಾತ್ಮನ ಕೊಡುವ ಗುಣವನ್ನು ಒತ್ತಿ ಹೇಳುತ್ತದೆ.
ಸ್ವತ್ವಮ್ ಆತ್ಮನಿ ಸಂಜಾತಮ್ ಸ್ವಾಮಿತ್ವಮ್ ಬ್ರಹ್ಮಾಣಿ ಸ್ಥಿತಮ್ ।
ಆತ್ಮದಾಸ್ಯಮ್ ಹರೇ ಸ್ವಾಮ್ಯಮ್ ಸ್ವಭಾವಮ್ ಚ ಸದಾ ಸ್ಮರ ॥
(ಆತ್ಮವು ಬೇರೊಬ್ಬರ ಆಸ್ತಿಯಾಗಿ ಸೇರಿಸಿಕೊಳ್ಳುವುದು ಸಹಜವಾದ ಗುಣವಾಗಿದೆ. ಒಡೆಯನಾಗುವುದು ಬ್ರಹ್ಮಮ್ ನ ಸಹಜವಾದ ಗುಣವಾಗಿದೆ. ಇದೊಂದೇ ಇವರಿಬ್ಬರಿಗೂ ಇರುವ ನಂಟು. ನಾನು ಬೇರೆ ಏನನ್ನೂ ಒಪ್ಪಿಕೊಳ್ಳುವುದಿಲ್ಲ. ನಿಮಗೆ ಮುಕ್ತಿಯಲ್ಲಿ ಆಸಕ್ತಿಯಿದ್ದರೆ ಮತ್ತು ನಿಮ್ಮ ಅಸ್ತಿತ್ವದ ಅಸೆಯಿದ್ದರೆ, ಯಾವಾಗಲೂ ಆತ್ಮದ ಶೇಷತ್ವದ ಮತ್ತು ಹರಿಯ ಸರ್ವೊತ್ತಮದ ಬಗ್ಗೆ ಆಲೋಚಿಸಿ.)
ಹಾರಿತ ಸ್ಮೃತಿಯಲ್ಲಿ ಈ ರೀತಿಯಾಗಿ ಉಲ್ಲೇಖಿಸಿದ್ದಾರೆ:
ದಾಸಭೂತಾಃ ಸ್ವತಃ ಸರ್ವೇಃ ಆತ್ಮಾನಃ ಪರಮಾತ್ಮನಃ ।
ನಾನ್ಯತಾ ಲಕ್ಷಣಮ್ ತೇಷಾಂ ಬಂಧೇ ಮೋಕ್ಷೇ ತಥೈವ ಚ ॥
(ಎಲ್ಲಾ ಆತ್ಮಗಳೂ ಪರಮಾತ್ಮನಿಗೆ ಸಹಜವಾಗಿ ದಾಸ್ಯದಲ್ಲಿದೆ. ಸಂಸಾರದಲ್ಲಿ ಮತ್ತು ಮೋಕ್ಷದಲ್ಲಿ ಬೇರೆ ರೀತಿಯ ಅಸ್ತಿತ್ವವಿಲ್ಲವೇ ಇಲ್ಲ.)
ಆದ್ದರಿಂದ ಎಲ್ಲಾ ಶಾಸ್ತ್ರಗಳೂ ಆತ್ಮದ ದಾಸ್ಯವನ್ನೇ ತನ್ನ ಒಳಗೂಡಿದ ಗುಣವಾಗಿ ಹೇಳುತ್ತವೆ. ಆದ್ದರಿಂದ ಇದೊಂದೇ ಆತ್ಮದ ಪರಿಚಯವಾಗುತ್ತದೆ.
ಸೂತ್ರಮ್ – 56
ಪರಿಚಯ: ಆತ್ಮಕ್ಕೆ ದಾಸ್ಯವು ಒಂದೇ ಗುಣವೇ? ಅದಕ್ಕೆ ಙ್ಞಾನ ಮತ್ತು ಆನಂದಮ್ ಎಂಬ ಇತರೆ ಗುಣಗಳಿಲ್ಲವೇ? ಎಂಬ ಪ್ರಶ್ನೆಗೆ ಲೋಕಾಚಾರ್ಯರು ಹೇಳುತ್ತಾರೆ: ಶೇಷತ್ವದ ಅನುಪಸ್ಥಿತಿಯಲ್ಲಿ ಆತ್ಮಕ್ಕೆ ಯಾವ ಗುಣವಾಗಲೀ, ಗುರುತಾಗಲೀ ಇಲ್ಲ.
ಶೇಷತ್ವಮ್ ಇಲ್ಲಾದ ಪೋದು ಸ್ವರೂಪಮ್ ಇಲ್ಲೈ.
ಸರಳ ಅರ್ಥ: ಎಲ್ಲಿ ಆತ್ಮಕ್ಕೆ ಶೇಷತ್ವಮ್ ಇಲ್ಲದೇ ಇರುವುದೋ, ಅಲ್ಲಿ ಅದಕ್ಕೆ ಯಾವ ಗುರುತೂ (ಸ್ವರೂಪ) ಇರುವುದಿಲ್ಲ.
ಸೂತ್ರಮ್ – 57
ಪರಿಚಯ: ಅವರು ಬರುವ ಎರಡು ವಾಕ್ಯಗಳಲ್ಲಿ ಶೇಷತ್ವದ ಅನುಪಸ್ಥಿತಿಯಲ್ಲಿ ಏನೆಲ್ಲಾ ಅಪಚಾರಗಳು ನಡೆಯುತ್ತವೆ ಎಂದು ವಿಶ್ಲೇಷಿಸಿದ್ದಾರೆ.
ಆತ್ಮಾಪಹಾರಮ್ ಆವದು ಸ್ವತಂತ್ರಮ್ ಎಂಗಿಱ ನಿನೈವು;
ಸ್ವತಂತ್ರಮಾಮ್ ಪೋದು ಇಲ್ಲೈಯಾಯ್ ವಿಡುಮ್;
ಸರಳ ಅರ್ಥ: ತನ್ನ ಆತ್ಮವು ತನಗೇ ಸ್ವಂತವಾದುದು (ಆತ್ಮದ ಲೂಟಿ ಮಾಡುವುದು) ಸ್ವತಂತ್ರದ ಯೋಚನೆಯನ್ನು ವೃದ್ಧಿಗೊಳಿಸುತ್ತದೆ. ಅದು ಒಂದು ಸಾರಿ ಸ್ವತಂತ್ರವಾದರೆ ಅದರ ಗುರುತು ನಾಶವಾಗಿ ಬಿಡುತ್ತದೆ.
ಭಾರತಮ್ – ಆದಿಯ 74-28 ರಲ್ಲಿ ಉಲ್ಲೇಖಿಸಿರುವಂತೆ:
ಯೋ ಅನ್ಯಥಾ ಸಂತಮ್ ಆತ್ಮಾನಮ್ ಅನ್ಯಥಾ ಪ್ರತಿಪದ್ಯತೇ।
ಕಿಮ್ ತೇನ ನ ಕೃತಮ್ ಪಾಪಮ್ ಚೋರೇಣ ಆತ್ಮಾಪಹಾರಿಣಾ॥
(ಆತ್ಮವು ಭಗವಂತನಿಗೆ ಸೇರಿದುದ್ದಾಗಿದೆ. ಯಾವಾಗ ಒಬ್ಬ ವ್ಯಕ್ತಿಯು ಈ ಆತ್ಮವು ತನ್ನದೇ ಎಂದು ಭಾವಿಸುತ್ತಾನೋ, ಆ ವ್ಯಕ್ತಿಯು ಯಾವ ಪಾಪವನ್ನು ಮಾಡಿಲ್ಲ? [ಇದರ ಅರ್ಥವೇನೆಂದರೆ, ಅಂತಹ ಪಾಪವು ಅತ್ಯಂತ ಹೀನವಾದುದು. ಅದಕ್ಕಿಂತ ಕೆಳಮಟ್ಟದ ಕಾರ್ಯವು ಇರುವುದಿಲ್ಲ.)
ತನ್ನನ್ನು ತಾನೇ ಲೂಟಿ ಮಾಡುವುದು ಎಂದರೆ ಒಬ್ಬನು ತನ್ನ ಆತ್ಮವು ತನಗೇ ಸೇರಿದ್ದು ಎಂಬ ಅಂತರ್ಗತ ಸ್ವತಂತ್ರವನ್ನು ವೃದ್ಧಿಸುವುದು. ಆ ಒಂದು ಸ್ವತಂತ್ರ ಎಂಬ ವಿಷಯದಿಂದ ಆ ವ್ಯಕ್ತಿಯ ಅಂತರ್ಗತ ನಿಯಮವಾದ ಸ್ವಾಮಿತ್ವವು ನಷ್ಟವಾಗಿ ಅಂತಹ ವ್ಯಕ್ತಿಯು ಅಸನ್ನೇವ ಎಂದರೆ ಅಸ್ತಿತ್ವವೇ ಇಲ್ಲದವನಾಗುತ್ತಾನೆ. ಆದ್ದರಿಂದ ಆತ್ಮವು ಅಸ್ತಿತ್ವದಲ್ಲಿರಬೇಕಾದರೆ ದಾಸ್ಯತ್ವವು ಅದರಲ್ಲಿರಬೇಕು.
ಆದ್ದರಿಂದ ಲೋಕಾಚಾರ್ಯರು ಅ-ಕಾರ ಎಂಬ ಅಕ್ಷರದ ಅರ್ಥವನ್ನು ಈ ರೀತಿಯಾಗಿ ವಿವರಿಸಿದ್ದಾರೆ:
ಈಶ್ವರನ ಕಾರಣತ್ವ ( ಎಲ್ಲದರ ಕಾರಣವಾಗಿರುವುದು, ಅ- ಎಂಬ ಅಕ್ಷರವು ಎಲ್ಲಾ ಬೇರೆ ಅಕ್ಷರಗಳಿಗೆ ಮೂಲ ಅಕ್ಷರವಾದಂತೆ.)
ಈಶ್ವರನ ರಕ್ಷಕತ್ವ (ಎಲ್ಲರನ್ನೂ ರಕ್ಷಣೆ ಮಾಡುವುದು) ವು ಅವ ರಕ್ಷಣೆ ಎಂಬ ಮೂಲ ಪದದಿಂದ ಪ್ರಾಪ್ತವಾದುದು.
ಶ್ರೀಯಃ ಪತಿತ್ವ ( ಶ್ರೀ ಮಹಾಲಕ್ಷ್ಮಿಯ ದಿವ್ಯ ಪತಿಯಾಗಿರುವುದು)
ಚೇತನ ಮತ್ತು ಈಶ್ವರನ ಸಂಬಂಧವು ಶೇಷ ಮತ್ತು ಶೇಷೀ ಎಂಬ ಗಾಢವಾದ ನಂಬಿಕೆಯಿಂದ ಉಂಟಾದದ್ದು.
ಸೂತ್ರಮ್ – 58
ಪರಿಚಯ: ಮುಂದೆ ಲೋಕಾಚಾರ್ಯರು ಉ ಕಾರದ ಅರ್ಥವನ್ನು ವಿವರಿಸಲಾರಂಭಿಸುತ್ತಾರೆ. ಅದರ ಸ್ಥಾನ ಓಮ್ ಎಂಬ (ಅ ಉ ಮ್) ಪದದಲ್ಲಿ ಮತ್ತು ಅದರ ಮಹತ್ವ.
ಸ್ಥಾನಪ್ರಮಾಣತ್ತಾಲೇ ಉಕಾರಮ್ ಅವಧಾರಣಾರ್ಥಮ್.
ಸರಳ ಅರ್ಥ: ಅದರ ಸ್ಥಾನದಿಂದ, ಉ ಎಂಬ ಅಕ್ಷರವು ಅವಧಾರಮ್ ನನ್ನು ಸೂಚಿಸುತ್ತದೆ.
ವ್ಯಾಖ್ಯಾನಮ್: ತೈತ್ತಿರೀಯ ನಾರಾಯಣದಲ್ಲಿ ಹೇಳಿರುವ ಹಾಗೆ:
ತದೇವ ಭೂತಮ್ ತದು ಭವ್ಯಮಾ ಇದಮ್ ।
ತದೇವ ಅಗ್ನಿಸ್ ತದ್ ವಾಯುಸ್ ತದ್ ಸೂರ್ಯಸ್ ತದು ಚಂದ್ರಮಾಃ॥
(ತೈತ್ತಿರೀಯ ನಾರಾಯಣ : ಪರಮಾತ್ಮನು ಭೂತಕಾಲ, ವರ್ತಮಾನಕಾಲ ಮತ್ತು ಭವಿಷ್ಯವು. ಅದು ಅಳಿಸಲಾರದ ಪರಮಾಕಾಶ, ಸರ್ವೋತ್ತಮನಾದ ಬ್ರಹ್ಮನು ಅಗ್ನಿಯು, ವಾಯುವು, ಸೂರ್ಯನು ಮತ್ತು ಚಂದ್ರನು ತಾನೇ ಆಗಿರುತ್ತಾನೆ.)
ಆದ್ದರಿಂದ ಉ-ಕಾರವು ಈ ಮಹತ್ವದ ಅರ್ಥವನ್ನು ಸ್ಪಷ್ಟ ಪಡಿಸುತ್ತದೆ.
ಸೂತ್ರಮ್ – 59
ಪರಿಚಯ: ಈ ಮಹತ್ವವು ಸಾಧಾರಣವಾಗಿ ಅಯೋಗ ವ್ಯಾಚ ಛೇಧ ಅಥವಾ ಅನ್ಯ ಯೋಗ ವ್ಯವಚ ಛೇಧ. (ಒಬ್ಬನ ಅಥವಾ ಒಂದರ ಮಹತ್ವವನ್ನು ಸಾರುವುದು ಅಥವಾ ಇತರರನ್ನು ನಿವಾರಿಸಿ ಅದನ್ನು ಪ್ರಮುಖವಾಗಿಸುವುದು.
ಇದರ ಮಹತ್ವದ ಅರ್ಥವೇನು? ಉ ಕಾರದ ಸ್ಥಾನದ ಮಹತ್ವವೇ? ಎಂದು ಲೋಕಾಚಾರ್ಯರು ವಿವರಿಸಿದ್ದಾರೆ.
ಇತ್ತಾಲ್ ಪಿಱರ್ಕ್ಕು ಶೇಷಮ್ ಅನ್ಱು ಎಂಗಿಱದು.
ಸರಳ ಅರ್ಥ: ಇದರಿಂದ, ಬೇರೆಯವರಿಗೆ ದಾಸ್ಯವು ನಿರಾಕರಿಸಲ್ಪಟ್ಟಿದೆ.
ವ್ಯಾಖ್ಯಾನಮ್:
ಉ-ಕಾರದ ಮಹತ್ವವು ಇದನ್ನು ಸ್ಪಷ್ಟಪಡಿಸಿದೆ: ಈಶ್ವರನನ್ನು ಬಿಟ್ಟರೆ ಬೇರೆಯವರಿಗೆ ದಾಸ್ಯವು ಸಲ್ಲದು. ಇಲ್ಲಿ ಪ್ರಶ್ನೆಯೇನೆಂದರೆ ನಾಲ್ಕನೆಯ ವಿಭಕ್ತಿಯು ಇಲ್ಲಿ ಪ್ರಸ್ತುತವಾಗಿದ್ದು, (ಆಯ ಎಂಬ ವಿಭಕ್ತಿಯು ನಾರಾಯಣಾಯ ಎಂಬ ಪದದಲ್ಲಿ) ಈ ವಿಭಕ್ತಿಯು ನಾರಾಯಣನಿಗೆ ಮಾತ್ರ ಅನ್ವಯವಾಗುತ್ತದೆಯೋ ಅಥವ ಬೇರೆಯವರಿಗೂ ಅನ್ವಯಿಸುತ್ತದೆಯೋ?
ಆದರೆ ರೂಢಿಯಲ್ಲಿ, ಮನೆ, ನೆಲ, ಮಕ್ಕಳು, ಸೇವಕರು ಎಂದು ಒಬ್ಬನಿಗೆ ಇದ್ದರೂ, ಅದು ಬೇರೆಯವರಿಗೂ ಅನ್ವಯವಾಗುತ್ತದೆ. ಆದ್ದರಿಂದ, ನಮಗೆ ಗೊಂದಲವುಂಟಾಗಬಹುದು. ಇಂತಹ ದಾಸ್ಯತ್ವವು ಈಶ್ವರ ಮತ್ತು ಬೇರೆ ಆತ್ಮಕ್ಕೆ ಅನ್ವಯವಾಗುತ್ತದೆಯೋ ಎಂದು. ಆದರಿಂದ ಉಕಾರವು ಅಂತಹ ಸಂಶಯವನ್ನು ನಿವಾರಿಸುತ್ತದೆ. ಒಂದೇ ಸಲಕ್ಕೆ ಆತ್ಮಕ್ಕೆ ಇಬ್ಬರ ದಾಸ್ಯತ್ವವು ಸಾಧ್ಯವಿಲ್ಲವೆಂದು.
ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ.