ವಿರೋಧಿ ಪರಿಹಾರನ್ಗಳ್

ಶ್ರೀಃ ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮತ್ ವರವರಮುನಯೇ ನಮ: ಶ್ರೀ ವಾನಾಛಲ ಮಹಾಮುನಯೆ ನಮ

ಜಗಧಾಚಾರ್ಯ ಶ್ರೀ ರಾಮಾನುಜ ಅವರನ್ನು “ಕಾರೇಯ್  ಕರುಣೈ  ಇರಾಮಾನುಸ” ಎಂದು ವೈಭವೀಕರಿಸಲಾಗಿದೆ – ಮೋಡಗಳಂತಹ ಅತ್ಯಂತ ಕರುಣಾಮಯಿ, ಅದು ಎಲ್ಲರಿಗೂ ಮಳೆಯನ್ನು  ಅನುಗ್ರಹಿಸುತ್ತದೆ (ರಾಮಾನುಸ ನೂಱ್ಱಂದಾಧಿ – 25) ಮತ್ತು “ಧಯೈಕ ಸಿಂಧು” – ಕರುಣೆಯ ಸಾಗರ (ಅನುಕಂಪದ ಸಾಗರ). ಆದಿ ಶೇಷನ ಅವತಾರ, ಅವರನ್ನು ಜನಪ್ರಿಯವಾಗಿ ಉಡಯವರ್ ,ಎಂಪೆರುಮಾನಾರ್,ಶ್ರೀ ಭಾಷ್ಯಕಾರರ್, ಯತಿರಾಜ, ಇತ್ಯಾದಿ ಎಂದು ಕರೆಯುತ್ತಾರೆ. 

ಶ್ರೀ ರಾಮಾನುಜ – ತಿರುಮಲೈ

ಮಾಮುನಿಗಳು ಎಂಪೆರುಮಾನಾರ್ ಅವರ ಕರುಣೆಯ ಶ್ರೇಷ್ಠತೆಯನ್ನು ಉಪಧೇಶ  ರತ್ನ ಮಾಲೈ 37 ನೇ ಪಾಸುರಂನಲ್ಲಿ ಸಂತೋಷದಿಂದ ಬಹಿರಂಗಪಡಿಸುತ್ತಾರೆ.

ಒರಾಣ್ ವೞಿಯಾಯ್ ಉಪದೇಸಿತ್ತಾರ್ ಮುನ್ನೋರ್
ಏರಾರ್ ಎತಿರಾಸರ್ ಇನ್ನರುಳಾಲ್
ಪಾರುಲಗಿಲ್ ಆಸೈಯುಡೈಯೊರ್ಕ್ಕೇಲ್ಲಾಂ ಆರಿಯರ್ಗಾಳ್ ಕೂರುಂ ಎನ್ಱು
ಪೇಸಿ ವರಂಬಱುತ್ತಾರ್ ಪಿನ್

ಎಂಪೆರುಮಾನಾರ್ ಮೊದಲು ಆಚಾರ್ಯರು ದೈವಿಕ ಜ್ಞಾನವನ್ನು ಇತರರಿಗೆ ಬೋಧಿಸುವಲ್ಲಿ ಬಹಳ ಆಯ್ದವರಾಗಿದ್ದರು. ಅವರು ನಿರೀಕ್ಷಿತ ಶಿಷ್ಯರನ್ನು ಸಂಪೂರ್ಣವಾಗಿ ಪರೀಕ್ಷೆಗೆ ಒಳಪಡಿಸುತ್ತಾರೆ ಮತ್ತು ಅರ್ಹ ಅಭ್ಯರ್ಥಿಗಳು  ಮಾತ್ರ ದೈವಿಕ ಜ್ಞಾನವನ್ನು ಪಡೆಯುವಂತೆ  ಖಚಿತಪಡಿಸಿಕೊಳ್ಳುತ್ತಿದ್ದರು . ಆದರೆ ಎಂಪೆರುಮಾನಾರ್  ತಮ್ಮ ಅಪರಿಮಿತ ಮತ್ತು ಸಹಜ ಸಹಾನುಭೂತಿಯಿಂದ, ಕಲಿಯಲು ಬಯಸುವವರಿಗೆ ದೈವಿಕ ತತ್ವಗಳನ್ನು ವಿವರಿಸಿದರು. ಅವರು ಸ್ಥಾಪಿಸಿದ ಅನೇಕ ಆಚಾರ್ಯರಿಗೂ ಹಾಗೆಯೇ ಮಾಡಲು ಸೂಚಿಸಿದರು. ಹೀಗಾಗಿ ಅವರನ್ನು “ಕೃಪಾ ಮಾತ್ರ ಪ್ರಸನ್ನ ಆಚಾರ್ಯರು” ಎಂದು ವೈಭವೀಕರಿಸಲಾಯಿತು – ಜೀವಾತ್ಮಗಳ  ಬಗ್ಗೆ ಸಹಾನುಭೂತಿಯಿಂದ ತುಂಬಿದವರು. ಅವರ ಕಾಲದಿಂದ, ಈ ಶ್ರೀವೈಷ್ಣವ ದರ್ಶನಂ ಅನ್ನು ಎಂಪೆರುಮಾನಾರ್ ಧರ್ಶನಂ ಎಂದು ಕರೆಯಲ್ಪಡುತ್ತದೆ ಮತ್ತು ಅದು ಹೆಚ್ಚಿನ ಎತ್ತರವನ್ನು ತಲುಪಿದೆ .

ಎಂಪೆರುಮಾನಾರ್ ಅಸಂಖ್ಯಾತ ಶಿಷ್ಯರನ್ನು ಹೊಂದಿದ್ದರು. ಅವರಿಂದ ಸ್ಥಾಪಿಸಲ್ಪಟ್ಟ 74 ಆಚಾರ್ಯರು, 12000 ಗೃಹಸ್ಥರು, 700 ಸನ್ಯಾಸಿಗಳು ಮತ್ತು ಸಾವಿರಾರು ಶ್ರೀವೈಷ್ಣವರು (ಅವರಿಗೆ ಸಂಪೂರ್ಣವಾಗಿ ಶರಣಾದ ಪುರುಷರು ಮತ್ತು ಮಹಿಳೆಯರು) ಅವರ ಕಾಲದಲ್ಲಿ ಉಪಸ್ಥಿತರಿದ್ದರು. ತನ್ನ ಉದಾತ್ತ  ಸ್ವಭಾವದಿಂದ, ಅವರು ಸತ್ಸಂಪ್ರದಾಯದಲ್ಲಿ ಪುರುಷ ಮತ್ತು ಸ್ತ್ರೀಯರನ್ನು ಸತ್ಸಂಪ್ರದಾಯದಲ್ಲಿ ಪಾಲಿಸಲು ಇದ್ದ ನಿರ್ಬಂಧಗಳನ್ನು ತೆಗೆದುಹಾಕಿದರು ಮತ್ತು ಬಂಧಿತ ಆತ್ಮಗಳ ದುಃಖಗಳನ್ನು ನೋಡಿ, ಉನ್ನತಿಯ ಸ್ವಲ್ಪ  ಬಯಕೆಯನ್ನು   ಹೊಂದಿರುವ ಯಾರಿಗಾದರೂ  ನಿಜವಾದ ಮಾರ್ಗವನ್ನು  ತೋರಿಸಬೇಕು ಎಂದು ಅವರು ಸ್ಥಾಪಿಸಿದರು.. “ರಾಮಾನುಜಾರ್ಯ ದಿವ್ಯಾಜ್ಞ ವರ್ಧತಾಂ  ಅಬಿವರ್ಧತಾಂ” ಎಂದು ಹೇಳಿದಂತೆ, ಅವರು ಪ್ರತಿಯೊಬ್ಬರ ಉನ್ನತಿಗಾಗಿ ಈ ದೈವಿಕ ಆದೇಶಗಳನ್ನು ನೀಡಿದರು.

ಅವರ ಕೊನೆಯ ಕ್ಷಣಗಳಲ್ಲಿ, ಎಂಪೆರುಮಾನಾರ್ ಅವರು ತಮ್ಮ ಶಿಷ್ಯರಿಗೆ ಪ್ರತ್ಯೇಕವಾಗಿ ಮತ್ತು ಸಾಮೂಹಿಕವಾಗಿ, ಸಾಮಾನ್ಯವಾಗಿ ಚರಮ ಸಂದೇಶಂ  (ಅಂತಿಮ ಸೂಚನೆಗಳು) ಎಂದು ಕರೆಯಲ್ಪಡುವ ಅಮೂಲ್ಯವಾದ ಸೂಚನೆಗಳನ್ನು ನೀಡಿದರು. ಇವುಗಳನ್ನು 6000 ಪಡಿ ಗುರುಪರಂಪರ ಪ್ರಭಾವಂ , ವಾರ್ತಾ ಮಾಲೈ, ಪ್ರಪನ್ನಾಮೃತಂ ಇತ್ಯಾದಿಗಳಲ್ಲಿ ದಾಖಲಿಸಲಾಗಿದೆ. ಇವುಗಳ ಹೊರತಾಗಿ, ವಂಗಿ ಪುರತ್ತು ನಂಬಿಗೆ ಅವರ ನೇರ ಸೂಚನೆಗಳನ್ನು “ವಿರೋಧಿ ಪರಿಹಾರಂಗಳ್ ” ಎಂಬ ಗ್ರಂಥದಲ್ಲಿ ದಾಖಲಿಸಲಾಗಿದೆ – ಅಡೆತಡೆಗಳು/ವಿಘ್ನಗಳ ನಿವಾರಣೆ. ವಿರೋಧಿ ಎಂದರೆ ಅಡೆತಡೆಗಳು/ವಿಘ್ನಗಳು. ಪರಿಹಾರ ಎಂದರೆ ತೆಗೆಯುವಿಕೆ/ನಿರ್ಮೂಲನೆ. ಈ ಗ್ರಂಥಂ 83 ವಾಕ್ಯಮ್‌ಗಳನ್ನು (ವಾಕ್ಯಮ್‌ಗಳು/ವಾಕ್ಯಗಳು) ಮತ್ತು ಪ್ರತಿ ವಾಕ್ಯಮ್‌ಗೆ ಒಂದು ವ್ಯಾಖ್ಯಾನವನ್ನು ಒಳಗೊಂಡಿದೆ ಹಾಗೂ ಇವುಗಳನ್ನು ಎಂಪೆರುಮಾನಾರ್ ಅವರಿಂದ ಪಡೆದ ಸೂಚನೆಗಳ ಆಧಾರದ ಮೇಲೆ ವಂಗಿ ಪುರತ್ತು ನಂಬಿ ಸ್ವತಃ ಸಂಕಲಿಸಿದ್ದಾರೆ. ಈ ಪ್ರತಿಯೊಂದು ವಾಕ್ಯಗಳು ತತ್ತ್ವಶಾಸ್ತ್ರ, ಅಭ್ಯಾಸ (ಮಲಗುವುದು, ತಿನ್ನುವುದು, ಇತ್ಯಾದಿ) ಇತ್ಯಾದಿಗಳ ಒಂದು ನಿರ್ದಿಷ್ಟ ಅಂಶಕ್ಕೆ ಸಂಬಂಧಿಸಿವೆ ಮತ್ತು ವಂಗಿ ಪುರತ್ತು ನಂಬಿಯವರ ವ್ಯಾಖ್ಯಾನವು ಆ ಪ್ರತಿಯೊಂದು ಅಂಶಗಳಿಗೆ ವಿವಿಧ ಜಟಿಲತೆಗಳನ್ನು ವಿಸ್ತಾರವಾಗಿ ವಿವರಿಸುತ್ತದೆ.

ಎಂಪೆರುಮಾನಾರ್ – ವಂಗಿ ಪುರತ್ತು ನಂಬಿ

ಶ್ರೀವೈಷ್ಣವರಿಗೆ ಈ ಗ್ರಂಥವು ಅತ್ಯಂತ ಪ್ರಾಮುಖ್ಯತೆ ಹೊಂದಿದ್ದು ನಾವು ಸಂಧಿಸುವ ದಿನನಿತ್ಯ ಸವಾಲುಗಳ ಸೂಕ್ಷ್ಮ ವಿಷಯಗಳನ್ನು ಪ್ರಕಟಿಸುತ್ತದೆ.ನಮ್ಮ ಪ್ರತಿಯೊಂದು ಸ್ಥಿತಿ ಮತ್ತು ಚಟುವಟಿಕೆಗಳಲ್ಲಿ ನಮ್ಮನ್ನು ನಾವು ನಡೆಸಿಕೊಳ್ಳುವ ಬಗ್ಗೆ ಹಲವಾರು ಸಂದೇಹಗಳು ನಮ್ಮ ಮನಸ್ಸಿನಲ್ಲಿ ಇರುತ್ತವೆ, ಈ ಗ್ರಂಥವು ನಮಗೆ ತಕ್ಕ ವರ್ತನೆಯ ಮತ್ತು ವ್ಯವಹಾರಗಳ ಸಂಕ್ಷಿಪ್ತ ವಿಸ್ತಾರವಾದ ವಿವರಣೆ ನೀಡುತ್ತದೆ.

ಈ ಗ್ರಂಥವನ್ನು ಮೂಲತಃ ಶ್ರೀಶೈಲ ಅತ್ತಂಗಿ ತಿರುಮಲೈ ಶ್ರೀಮಾನ್ ಶ್ರೀ ಉ . ವೇ .ವಿಧ್ವಾನ್ ತಿರುವೆಂಕಟ ತಾಥಾಚಾರ್ಯ ಸ್ವಾಮಿಗಳು ಪರಿಶೀಲಿಸಿದ್ದಾರೆ ಮತ್ತು ಭಾಗವತ ವಿಧೇಯನ್ ಭಾಷ್ಯಮ್ ರಾಮಾನುಜ ದಾಸನ್  ಅವರಿಂದ 1914 ರಂದು  ಪ್ರಕಟಿಸಲಾಗಿದೆ. ಇದು  ಶ್ರೀ  ಬಿಎಸ್ಎಸ್ ಅಯ್ಯಂಗಾರ್ ಸ್ವಾಮಿ ಅವರು ಆಂಗ್ಲ ಭಾಷೆಯಲ್ಲಿ ಬರೆದ ವ್ಯಾಖ್ಯಾನದೊಂದಿಗೆ  ಗ್ರಂಥದ ಸಂಕ್ಷಿಪ್ತ ಅನುವಾದ       

ಶ್ರೀ . ಉ . ವೇ . ವಿ ವಿ ರಾಮಾನುಜಂ ಸ್ವಾಮಿಯವರು ಈ ವ್ಯಾಖ್ಯಾನಂಗೆ ವಿಸ್ತಾರವಾದ ವಿವರಣೆಗಳನ್ನು ಬರೆದಿದ್ದಾರೆ. ಶ್ರೀ ಉ . ವೇ . ಬಿಎಸ್ಎಸ್ ಅಯ್ಯಂಗಾರ್ ಅವರ ಈ ಗ್ರಂಥದ ಆಂಗ್ಲ  ಅನುವಾದವನ್ನು ನೋಡಿದಾಗ , ಅವರುಶ್ರೀ ಉ . ವೇ.  ಡಾ. ಎಂ ವರದರಾಜನ್ ಸ್ವಾಮಿ ಅವರ ಸಹಾಯದಿಂದ  ತೆಲುಗು ಲಿಪಿಯಲ್ಲಿ ಬರೆದ ಮೂಲ ಪ್ರತಿಯನ್ನು ಸ್ವಾಧೀನಪಡಿಸಿಕೊಂಡರು ಮತ್ತು  ಅವರು ತಮಿಳು ಭಾಷೆಯಲ್ಲಿ ಮೂಲ ಪ್ರತಿಯನ್ನು ಬರೆದರು  . ತರುವಾಯ, ಅವರು ವ್ಯಾಖ್ಯಾನಮ್‌ಗೆ ವಿಸ್ತಾರವಾದ ವಿವರಣೆಗಳನ್ನು ಬರೆದರು ಮತ್ತು ಅವುಗಳನ್ನು ತಮ್ಮ ಯತಿರಾಜ ಪಾಧುಕಾ ಪತ್ರಿಕೆಯ ಭಾಗವಾಗಿ ಸರಣಿಯಾಗಿ ಬಿಡುಗಡೆ ಮಾಡಿದರು. ಅಂತಿಮವಾಗಿ ಅವರು ಈ ಗ್ರಂಥವನ್ನು ಪುಸ್ತಕವಾಗಿ ಪ್ರಕಟಿಸಿದರು ಮತ್ತು ಏಪ್ರಿಲ್ 2010 ರಲ್ಲಿ ಅದನ್ನು ಬಿಡುಗಡೆ ಮಾಡಿದರು. ವಾನಮಾಮಲೈ ವಿಧ್ವಾನ್ ಶ್ರೀ ಉ .ವೇ .ಎನ್ ಎಸ್ ಕೃಷ್ಣನ್ ಅಯ್ಯಂಗಾರ್ ಸ್ವಾಮಿ ಯವರೊಂದಿಗೆ ಈ ವಿಷಯದ ಬಗ್ಗೆ ಅವರು ನಡೆಸಿದ ಅನೇಕ ಚರ್ಚೆಗಳನ್ನು ಅವರು ಕೃತಜ್ಞತೆಯಿಂದ ಮುನ್ನುಡಿಯಲ್ಲಿ ಸ್ಮರಿಸುತ್ತಾರೆ. ಶ್ರೀಮತ್  ಪರಮಹಂಸ ಇತ್ಯಾದಿ ಕಲಿಯನ್ ವಾನಮಾಮಲೈ ರಾಮಾನುಜ ಜೀಯರ್ ಅವರು ಈ ಪ್ರಕಟಣೆಗೆ ತಮ್ಮ ಶ್ರೀಮುಖಮ್ (ಶುಭ ಸೂಚನೆ) ಯನ್ನು ಶ್ರೀ ಯು.ವಿ. ವಿ ವಿ ರಾಮಾನುಜಂ ಸ್ವಾಮಿ ಮತ್ತು ನಮ್ಮ ಸತ್ ಸಂಪ್ರದಾಯಕ್ಕೆ ಅವರ ದಣಿವರಿಯದ ಕೊಡುಗೆಗಳಿಗೆ ಅಪಾರ ಶ್ಲಾಘನೆ ನೀಡಿದ್ದಾರೆ .

ಈ ಪರಿಚಯ ವಿಭಾಗವನ್ನು ಮುಖ್ಯವಾಗಿ ಶ್ರೀ ಉ.ವೇ ವಿ ವಿ ರಾಮಾನುಜಂ ಸ್ವಾಮಿಯವರ ಪುಸ್ತಕ ಪರಿಚಯ ಆಧರಿಸಿ ಬರೆಯಲಾಗಿದೆ. ಇದು ಪ್ರತಿ ವಿಷಯವನ್ನು ವಿವರವಾಗಿ ಚರ್ಚಿಸುವ ಸುದೀರ್ಘ ಲೇಖನಗಳ ಸರಣಿಯಾಗಿದೆ. ಈ ತತ್ವಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳಲು ಉತ್ಸುಕರಾಗಿರುವ ಅನೇಕ ಶ್ರೀವೈಷ್ಣವರ ಅನುಕೂಲಕ್ಕಾಗಿ ಸರಳವಾದ ಭಾಷೆಯಲ್ಲಿ  ತತ್ವಗಳನ್ನು ಸಾಧ್ಯವಾದಷ್ಟು ಉತ್ತಮವಾಗಿ ಪ್ರಸ್ತುತಪಡಿಸಲು ಆಡಿಯೇನ್ ಪ್ರಯತ್ನಿಸುತ್ತೇನೆ . ಅಸ್ಮದಾಚಾರ್ಯರ ಕೃಪೆಯಿಂದ ಶ್ರೀ ಯು.ವಿ.ವಿ. ರಾಮಾನುಜಂ ಸ್ವಾಮಿಗಳು ನೀಡಿದ ಸರಳವಾದ ತಮಿಳಿನ ವಿವರಣೆಗಳ ಸಹಾಯದಿಂದ ಅಡಿಯೇನ್ ಈ ಕೆಲಸವನ್ನು ಪ್ರಾರಂಭಿಸುತ್ತಿದ್ದೇನೆ .   

ಆಂಡಾಳ್ ನಾಚ್ಚಿಯಾರ್ ತಿರುಪ್ಪಾವೈಯ ಕೊನೆಯಲ್ಲಿ ಎಂಪೆರುಮಾನ್ ಅವರಿಗೆ ಸೇವೆ ಮಾಡುವಾಗ ಅವರು ಅಡೆತಡೆಗಳನ್ನು ನಿವಾರಿಸುವಂತೆ ಪ್ರಾರ್ಥಿಸುತ್ತಾರೆ. ಅವಳು ಎಂಪೆರುಮಾನ್‌ಗೆ ಹೇಳುತ್ತಾಳೆ “ಉನಕ್ಕೇ  ನಾಮ್ ಅಚ್ಚೈವೋಮ್ ಮಱ್ಱೈ  ನಮ್ ಕಾಮಂಗಳ್  ಮಾಱೃ  ” – ಸಂಪೂರ್ಣವಾಗಿ ನಿಮ್ಮ ಸಂತೋಷಕ್ಕಾಗಿ  ಸೇವೆ ಮಾಡಲು ನನ್ನನ್ನು ಆಶೀರ್ವದಿಸಿ (ಎಂಪೆರುಮಾನ್ ಸೇವೆ ಮಾಡುವಾಗ ಸ್ವಂತ ಸಂತೋಷವನ್ನು ಪೂರೈಸುವ ಬಯಕೆಯ ಛಾಯೆಯಿಲ್ಲ). ನಮ್ಮ ದಿನನಿತ್ಯದ ಜೀವನದಲ್ಲಿ ನಾವು ಎದುರಿಸುತ್ತಿರುವ ಅಡೆತಡೆಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವುದು ಮತ್ತು ಅವುಗಳನ್ನು ತೊಡೆದುಹಾಕಲು ಹೇಗೆ ಬಹಳ ಮಹತ್ವದ್ದಾಗಿದೆ, ಇದರಿಂದಾಗಿ ನಾವು ಎಂಪೆರುಮಾನ್ ಸಂತೋಷಕ್ಕಾಗಿ ಅಸ್ತಿತ್ವದಲ್ಲಿರುವ ಮತ್ತು ಸಂಪೂರ್ಣವಾಗಿ ಸೇವೆ ಮಾಡುವ ಸ್ಥಿತಿಯನ್ನು ತಲುಪಲು ಬಯಸುತ್ತೇವೆ.

  • ಭಾಗ 1 ( ಬುನಾದಿ ) – https://granthams.koyil.org/2021/12/25/virodhi-pariharangal-1-kannada/
  • ಭಾಗ 2 (ಉಪಾಯಾಂತರಂ ಮತ್ತು ದೇವತಾಂತರಂ ) – https://granthams.koyil.org/2022/01/29/virodhi-pariharangal-2-kannada/
  • ಭಾಗ 3  ( ಉಪಾಯ ವಿರೋಧಿ ಮತ್ತು ಉಪೇಯ ವಿರೋಧಿ ) – https://granthams.koyil.org/2022/01/30/virodhi-pariharangal-3-kannada/
  • ಭಾಗ 4 (ಮುಖ್ಯ ಪ್ರಮಾಣ ವಿರೋಧಿ, ಯಾವದಾತ್ಮಭಾವ ವಿರೋಧಿ, ನಿತ್ಯ / ಅನಿತ್ಯ ವಿರೋಧಿಗಳು) – https://granthams.koyil.org/2022/03/14/virodhi-pariharangal-4-kannada/
  • ಭಾಗ 5 ( ಸ್ವಸ್ವರೂಪ ,ಪರಸ್ವರೂಪ , ಸ್ವಾನುಭವ , ಪರಾನುಭವ , ಸಂಶ್ಲೇಷ / ವಿಶ್ಲೇಷ ವಿರೋಧಿಗಳು) – https://granthams.koyil.org/2022/05/02/virodhi-pariharangal-5-kannada/
  • ಭಾಗ 6 (ವಿಷಯ,ವಿಶ್ವಾಸ, ಪ್ರವೃತ್ತಿ,ನಿವೃತ್ತಿ ವಿರೋಧಿಗಳು) – https://granthams.koyil.org/2022/10/07/virodhi-pariharangal-6-kannada/
  • ಭಾಗ 7 (ಶಯನ ಮತ್ತು ಉತ್ಥಾನ ವಿರೋಧಿಗಳು) – https://granthams.koyil.org/2022/11/08/virodhi-pariharangal-7-kannada/
  • ಭಾಗ 8 (ಗತಿ ಮತ್ತು ಸ್ಥಿತಿ ವಿರೋಧಿಗಳು – ಹೆಚ್ಚು ಕಡಿಮೆ ವರ್ತನೆಗೆ ಸಂಬಂದಿಸಿದ ವಿಷಯಗಳು) – https://granthams.koyil.org/2023/01/21/virodhi-pariharangal-8-kannada/
  • ಭಾಗ 9 ( ಆವಶ್ಯಕ , ಶರೀರ ಶುದ್ಧಿ ಮತ್ತು ಸ್ನಾನ ವಿರೋಧಿಗಳು – ಸ್ವಚ್ಛತೆಗೆ ಸಂಬಂದಿಸಿದ ವಿಷಯಗಳು ) – https://granthams.koyil.org/2023/02/21/virodhi-pariharangal-9-kannada/
  • ಭಾಗ 10 (ಅನುಷ್ಠಾನ ವಿರೋಧಿ – ಸಾಮಾನ್ಯ ಮತ್ತು ವಿಶೇಷ ಧರ್ಮ) – https://granthams.koyil.org/2023/03/01/virodhi-pariharangal-10-kannada/
  • ಭಾಗ 11 ( ಲಕ್ಷಣ ವಿರೋಧಿ – ವ್ಯಕ್ತಿತ್ವ ,ಗೋಚರ,ವರ್ತನೆ ಇತ್ಯಾದಿ ) –  
  • ಭಾಗ 12 (ಸ್ಮರಣ ವಿರೋಧಿ – ಧ್ಯಾನ/ ಯೋಚನೆ )-
  • ಭಾಗ 13 ( ಸಂಕೀರ್ತನ ವಿರೋಧಿ -ಹಾಡುವುದು / ಮಾತನಾಡುವುದು )-
  • ಭಾಗ 14 ( ಶ್ರವಣ ವಿರೋಧಿ – ಆಲಿಸುವುದು, ಕೇಳುವುದು )-
  • ಭಾಗ 15 ( ಸೇವಾ ವಿರೋಧಿ – ಎಂಪೆರುಮಾನನ್ನು ಪೂಜಿಸುವುದು )-
  • ಭಾಗ 16 ( ಸಮಾರಾಧನ ವಿರೋಧಿ – ಮನೆಯಲ್ಲಿ ಎಂಪೆರುಮಾನನ್ನು ಪೂಜಿಸುವುದು  )-
  • ಭಾಗ 17 ( ವಂದನ ವಿರೋಧಿ – ನಮಸ್ಕರಿಸುವುದು )-
  • ಭಾಗ 18 ( ಅಂಜಲಿ ವಿರೋಧಿ – ಕೈಗೂಡಿಸಿ ನಮಸ್ಕರಿಸುವುದು ) –
  • ಭಾಗ 19 ( ಕಾಲಕ್ಷೇಪ ವಿರೋಧಿ – ಉಪನ್ಯಾಸಗಳನ್ನು ಕೇಳುತ್ತಾ ಕಾಲ ಕಳೆಯುವುದು )-
  • ಭಾಗ 20 (ಆರ್ಜನ ವಿರೋಧಿ – ಸ್ವತ್ತು ಸಂಪಾದನೆ )-
  • ಭಾಗ 21 ( ಗೃಹ ವಿರೋಧಿ- ಮನೆ ಮತ್ತು ಕ್ಷೇತ್ರ ವಿರೋಧಿ – ನೆಲ/ ಭೂಮಿ )-
  • ಭಾಗ 22 (ಭೋಜನ ವಿರೋಧಿ – ತಧಿಯಾರಾದನಂ /ಶ್ರೀವೈಷ್ಣವರಿಗೆ ಆಹಾರ ನೀಡುವುದು )-
  • ಭಾಗ 23 ( ಭೋಜ್ಯ ವಿರೋಧಿ – ಊಟ ಮಾಡುವುದು )-
  • ಭಾಗ 24( ತೀರ್ಥ ವಿರೋಧಿ – ಪೆರುಮಾಳ್ ತೀರ್ಥಂ ಮತ್ತು ಶ್ರೀಪಾದ ತೀರ್ಥಂ )
  • ಭಾಗ 25 ( ಪ್ರಸಾದ ವಿರೋಧಿ – ಭಗವತ್ / ಭಾಗವತ ಪ್ರಸಾದಂ ) –
  • ಭಾಗ 26 (ಉಕ್ತಿ ವಿರೋಧಿ – ಭಾಷೆ/ ವಾಕ್ )
  • ಭಾಗ 27 ( ಸಂಬಂಧ ವಿರೋಧಿ -ಬಂದುತ್ವ)
  • ಭಾಗ 28 (ಸ್ನೇಹ ವಿರೋಧಿ –ಮಮತೆ  ಮತ್ತು ಭಕ್ತಿ ವಿರೋಧಿ- ಭಕ್ತಿನಿಷ್ಠೆ )
  • ಭಾಗ 29 ( ದಾಸ್ಯ ವಿರೋಧಿ – ಸೇವೆ)
  • ಭಾಗ 30 ( ಸಖ್ಯ ವಿರೋಧಿ- ಗೆಳೆತನ )
  • ಭಾಗ 31 (ಸಮರ್ಪಣ ವಿರೋಧಿ )
  • ಭಾಗ 32 ( ದರ್ಶನ ವಿರೋಧಿ – ತತ್ವ )
  • ಭಾಗ 33  (ಆಶ್ರಮ ವಿರೋಧಿ – ಬದುಕಿನ ಹಂತಗಳು )
  • ಭಾಗ 34 (ಜಾತಿ ವಿರೋಧಿ – ಜನ್ಮ )
  • ಭಾಗ 35 (ಆಪ್ತ ವಿರೋಧಿ -ನಂಬಿಕೆಯ ಸೂತ್ರಗಳು )
  • ಭಾಗ 36 ( ಅನಾಪ್ತ ವಿರೋಧಿ ನಂಬಿಕೆಗೆ ಅರ್ಹವಿಲ್ಲದ ಸೂತ್ರಗಳು )
  • ಭಾಗ 37 ( ಸಿದ್ಧಾಂತ ವಿರೋಧಿ – ಉಪದೇಶ – ಭಾಗ 1 )
  • ಭಾಗ 38 ( ಸಿದ್ಧಾಂತ ವಿರೋಧಿ – ಉಪದೇಶ – ಭಾಗ 2)
  • ಭಾಗ 39 ( ಸಿದ್ಧಾಂತ ವಿರೋಧಿ – ಉಪದೇಶ – ಭಾಗ 3 ಮುಕ್ತಾಯ )
  • ಭಾಗ 40 (ತತ್ವ ವಿರೋಧಿ – ಸತ್ಯ/ವಾಸ್ತವ -ಭಾಗ 1)
  • ಭಾಗ 41 (ತತ್ವ ವಿರೋಧಿ – ಸತ್ಯ/ವಾಸ್ತವ -ಭಾಗ 2)
  • ಭಾಗ 42  (ತತ್ವ ವಿರೋಧಿ – ಸತ್ಯ/ವಾಸ್ತವ -ಭಾಗ 3)
  • ಭಾಗ 43 (ಪಂಸ್ತ್ವ ವಿರೋಧಿ ಪುರುಷೋಚಿತ )
  • ಭಾಗ 44 ( ಅಂತಿಮ ದಾಸ ವಿರೋಧಿ – ಅಂತಿಮ ಗಳಿಗೆ )
  • ಭಾಗ 45 ( ಅವಿಶ್ವಾಸ , ಸಂಗ ,ಸಂತಾನ , ವರ್ಣ ,ಜಪ , ಮತ್ತು ಆರಾಧನ ವಿರೋಧಿಗಳು )
  • ಭಾಗ 46 ( ಪತಿತ್ವ, ವರ್ಜನೀಯ ಮತ್ತು ಅವರ್ಜನೀಯ ವಿರೋಧಿಗಳು )
  • ಮುಕ್ತಾಯ 

ಅನುವಾದ : ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಮೂಲ : https://granthams.koyil.org/virodhi-pariharangal-english/

ಅರ್ಖೈವ್ ಮಾಡಲಾಗಿದೆ :  https://granthams.koyil.org 

ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಶಾಸ್ತ್ರ ) – https://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – https://acharyas.koyil.org