ಕೃಷ್ಣ ಲೀಲೆಗಳ ಸಾರಾಂಶ

ಶ್ರೀ: ಶ್ರೀಮತೇ ಶಠಕೋಪಾಯ ನಮಃ  ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ

ವೇದಗಳ ಪ್ರಕಾರ “ಅಜಾಯಮಾನ: ಬಹುಧಾ ವಿಜಾಯಾತೇ” (ಒಂದು ಜನ್ಮವನ್ನು ತೆಗೆದುಕೊಳ್ಳದವನು ಅನೇಕ ಜನ್ಮಗಳನ್ನು ಸ್ವೀಕರಿಸುತ್ತಾನೆ); ವೇದದ ಮೂಲಕ ತಿಳಿದಿರುವ ಭಗವಾನ್, “ಬಹುನಿಮೇ ವ್ಯಥಿತಾನಿ ಜನ್ಮಾನಿ” (ನಾನು ಅನೇಕ ಜನ್ಮಗಳನ್ನು ಹೊಂದಿದ್ದೇನೆ ) ಎಂದು ಹೇಳುತ್ತಾರೆ; ನಮ್ಮಾಳ್ವಾರ್, ವೈಧಿಕರಲ್ಲಿ ಅತ್ಯುತ್ತಮ (ವೇದವನ್ನು ಅನುಸರಿಸುವವರು) ಮತ್ತು ವೇದದ ಸಾರವನ್ನು ತಿಳಿದವರು, ” ಸನ್ಮಮ್ ಪಲ ಪಲ ಸೆಯ್ದು” (ಅನೇಕ ಜನ್ಮಗಳನ್ನು ಸ್ವೀಕರಿಸುವುದು) ಹೇಳುತ್ತಾರೆ; ಈ ರೀತಿಗಳಲ್ಲಿ, ಭಗವಂತನು ಅನೇಕ ಜನ್ಮಗಳನ್ನು ಸ್ವೀಕರಿಸುತ್ತಾನೆ ಎಂದು ವಿವರಿಸಲಾಗಿದೆ. ನಾವು ಪುನರಾವರ್ತಿತವಾಗಿ ಜನ್ಮ ತೆಗೆದುಕೊಳ್ಳುತ್ತೇವೆ ಮತ್ತು ನಮ್ಮ ಕರ್ಮ ಕಾರಣದಿಂದ ಬಳಲುತ್ತೇವೆ. ಆದರೆ ಭಗವಾನ್ ನಮ್ಮನ್ನು ಉದ್ಧಾರ ಮಾಡಲು ಅವತರಿಸುತ್ತಿರುವುದರಿಂದ , ಅವರ ಕರುಣೆಯಿಂದ, ಪ್ರತಿ ಜನ್ಮದಲ್ಲಿ ಅವರ ತೇಜಸ್ಸು ಹೆಚ್ಚುತ್ತಿದೆ. ಈ ಶ್ರೇಷ್ಠ ತತ್ವವನ್ನು ಶಾಸ್ತ್ರ ಮತ್ತು ಆಳ್ವಾರರು ತೋರಿಸಿದ್ದಾರೆ.

ಈ ಅವತಾರಗಳಲ್ಲಿ , ಹತ್ತು ಅವತಾರಗಳನ್ನು ಪ್ರಾಥಮಿಕವಾಗಿ ವೈಭವೀಕರಿಸಲಾಗಿದೆ. ತಿರುಮಂಗೈ ಆಳ್ವಾರರು ಇದನ್ನು ಒಂದೇ ವಾಕ್ಯದಲ್ಲಿ ಸುಂದರವಾಗಿ ವಿವರಿಸುತ್ತಾರೆ ” ಮೀನೋಡು ಆಮೈ ಕೇಜ್ಹಲ್ ಅರಿ ಕುರಳಾಯ್ ಮುನ್ನಮ್ ಇರಾಮನಾಯ್ತ್ ತಾನಾಯ್ ಪಿನ್ನುಮ್ ಇರಾಮನಾಯ್ತ್ ದಾಮೋದರನುಮಾಯ್ ಕರ್ಕಿಯುಮ್ ಆನಾನ್ ” (ಎಂಪೆರುಮಾನ್ ಮೀನು, ಆಮೆ, ಕಾಡುಹಂದಿ, ಸಿಂಹ, ಕುಬ್ಜ (ವಾಮನ). ಪರಶುರಾಮ (ಮೊದಲ ರಾಮ), ಸ್ವತಃ ಶ್ರೀರಾಮ, ಬಲರಾಮ (ನಂತರದ ರಾಮ), ದಾಮೋದರ ಮತ್ತು ಕಲ್ಕಿ).ಇವುಗಳಲ್ಲಿಯೂ ಸಹ, ಶ್ರೀ ರಾಮಾವತಾರ ಮತ್ತು ಕೃಷ್ಣಾವತಾರವನ್ನು ನಮ್ಮ ಹಿರಿಯರು ಬಹಳವಾಗಿ ವೈಭವೀಕರಿಸಿದ್ದಾರೆ. ಇವುಗಳ ನಡುವೆಯೂ, ದ್ವಾಪರಯುಗದ ಅಂತ್ಯದಲ್ಲಿ ಸಂಭವಿಸಿದ ಸಾಮೀಪ್ಯದಿಂದಾಗಿ, ಕೃಷ್ಣಾವತಾರವು ಋಷಿಗಳನ್ನು , ಆಳ್ವಾರರು ಮತ್ತು ಆಚಾರ್ಯರನ್ನು ಅಪಾರವಾಗಿ ಆಕರ್ಷಿಸಿತು. ನಿರ್ದಿಷ್ಟವಾಗಿ ಹೇಳುವುದಾದರೆ, ಕೃಷ್ಣನ ಬಾಲ್ಯದ ವಿನೋದಗಳಲ್ಲಿ ಆಕರ್ಷಿತರಾಗದವರು ಯಾರೂ ಇಲ್ಲ. ಎಂಪೆರುಮಾನ್ ಅವರು ಕಠಿಣ ಹೃದಯದ ವ್ಯಕ್ತಿಗಳನ್ನು ಸಹ ಕರಗಿಸುವ ಅದ್ಭುತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಶ್ರಿಮದ್ಭಗವದ್ಗೀತೆಯಲ್ಲಿ ಕೃಷ್ಣನು ಕರುಣೆಯಿಂದ ಹೇಳುತ್ತಾನೆ “ನನ್ನ ಜನ್ಮ ಮತ್ತು ಚಟುವಟಿಕೆಗಳನ್ನು ನಿಜವಾಗಿಯೂ ಅರ್ಥಮಾಡಿಕೊಂಡವರು ಖಂಡಿತವಾಗಿಯೂ ನನ್ನನ್ನು ತಲುಪುತ್ತಾರೆ”. ಆದ್ದರಿಂದ, ಶ್ರೀ ಭಾಗವತದ ದಶಮ ಸ್ಕಂಧ (ಹತ್ತನೇ ಅಧ್ಯಾಯ) ದಲ್ಲಿ ತೋರಿಸಿರುವ ಅನುಕ್ರಮದಲ್ಲಿ ನಾವು ಕೃಷ್ಣಾವತಾರವನ್ನು ಮುಂದಿನ ದಿನಗಳಲ್ಲಿ ಸರಳ ರೀತಿಯಲ್ಲಿ ನಮ್ಮ ಪೂರ್ವಾಚಾರ್ಯರು ತೋರಿಸಿದ ಅಂಶಗಳ ಮೂಲ ತತ್ವಗಳನ್ನು ನೋಡುತ್ತೇವೆ.

  1. ಶ್ರೀಕೃಷ್ಣನ ಜನನ
  2. ಪೆರಿಯಾಳ್ವಾರ್ ಕೃಷ್ಣಾನುಭವ / ಶ್ರೀಕೃಷ್ಣನ ಜನ್ಮೋತ್ಸವ
  3. ಪೂತನ ಸಂಹಾರ
  4. ಶಕಟಾಸುರ ವಧೆ 
  5. ತೃಣಾವರ್ತನ ಉದ್ಧಾರ 
  6. ಯಶೋದ ಕೃಷ್ಣನ ಬಾಯಿಯಲ್ಲಿ ಇಡೀ ಬ್ರಹ್ಮಾಂಡವನ್ನು ನೋಡಿದ ಪ್ರಸಂಗ 
  7. ನವನೀತ ಚೋರ ಕೃಷ್ಣ
  8. ಯಮಳಾರ್ಜುನರ ಶಾಪ ವಿಮೋಚನೆ 
  9. ಕೃಷ್ಣನ ವೃಂದಾವನ ಪ್ರವೇಶ ಮತ್ತು ದೈತ್ಯರ ವಧೆ 
  10. ದಧಿಭಾಂಡನು ಪಡೆದ ಆಶೀರ್ವಾದ 
  11. ಅಘಾಸುರ ವಧೆ
  12. ಬ್ರಹ್ಮನ ಗರ್ವಭಂಗ
  13. ಧೇನುಕಾಸುರ ವಧೆ
  14. ಕಾಳಿಂಗ ಮರ್ದನ ಘಟನೆ
  15. ಪ್ರಲಂಬಾಸುರನ ವಧೆ
  16. ಕೃಷ್ಣನು ಗೋಪಾಲಕನಾಗಿ ಆಡಿದ ಲೀಲೆ
  17. ವೇಣುಗೋಪಾಲನ ವೇಣುಗಾನ
  18. ಗೋಪಿಕೆಯರ ವಸ್ತ್ರಾಪಹರಣ ಮತ್ತು ಅದರ ಸಾರ
  19. ಕೃಷ್ಣ, ಬಲರಾಮ ಮತ್ತು ಋಷಿಪತ್ನಿಯರ ಕಥೆ
  20. ಗೋವರ್ಧನ ಗಿರಿಧಾರಿ
  21. ರಾಸ ಕ್ರೀಡೆ
  22. ಕೃಷ್ಣನ ಅದ್ಭುತ ಲೀಲೆ: ಕುಡಕ್ಕೂತ್ತು (ಮಡಕೆ ಕುಣಿತ)
  23. ಅರಿಷ್ಟಾಸುರ, ಕೇಶಿ ಮತ್ತು ವ್ಯೋಮಾಸುರರ ವಧೆ
  24. ಕೃಷ್ಣ ಮತ್ತು ನಪ್ಪಿನ್ನೈ ಪಿರಾಟ್ಟಿ (ನೀಳಾದೇವಿ)
  25. ಕಂಸನ ಭಯ ಮತ್ತು ಪಿತೂರಿ
  26. ಅಕ್ರೂರನ ಯಾತ್ರೆ
  27. ಮಥುರೆಯಲ್ಲಿ ಕೃಷ್ಣನ ನಿಗ್ರಹಾನುಗ್ರಹ
  28. ಕುವಲಯಾಪೀಡ ವಧೆ
  29. ಚಾಣೂರ-ಮುಷ್ಟಿಕ ಸಂಹಾರ
  30. ಕಂಸ ವಧೆ
  31. ದೇವಕಿ-ವಸುದೇವರ ಬಂಧನ ವಿಮೋಚನೆ
  32. ಸಾಂದೀಪನಿ ಮುನಿಗಳ ಬಳಿ ಗುರುಕುಲ ವಾಸ
  33. ದ್ವಾರಕೆಯ ನಿರ್ಮಾಣ ಮತ್ತು ಮುಚುಕುಂದನಿಗೆ ಅನುಗ್ರಹ

ಮೂಲ – https://granthams.koyil.org/krishna-leela-english/

ಅನುವಾದ – ಅಡಿಯೇನ್ ಸುಭದ್ರಾ ರಾಮಾನುಜ ದಾಸಿ, ಅಡಿಯೇನ್ ಕಸ್ತೂರಿರಂಗನ್ ರಾಮಾನುಜ ದಾಸನ್
ಪುರಾವೆ ಓದುವಿಕೆ – ಅಡಿಯೇನ್ ಹೇಮಲತಾ ರಾಜನ್ ರಾಮಾನುಜ ದಾಸಿ

ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org