ಶ್ರೀ:
ಶ್ರೀಮತೇ ಶಠಕೋಪಾಯ ನಮ:
ಶ್ರೀಮತೇ ರಾಮಾನುಜಾಯ ನಮ:
ಶ್ರೀಮದ್ ವರವರಮುನಯೇ ನಮ:
ಶ್ರೀ ವಾನಾಚಲ ಮಹಾಮುನಯೇ ನಮ:
ಕೆಲವು ಮೂಲ ಪದಗಳು (ಶ್ರಿವೈಷ್ಣವ ಪರಿಭಾಷೆ):
- ಆಚಾರ್ಯ, ಗುರು – ಆಧ್ಯಾತ್ಮಿಕ ಗುರು – ತಿರುಮಂತ್ರ ಉಪದೇಶ ಕೊಡುವವರು
- ಶಿಷ್ಯ – ಗುರುವಿನ ಕೆಳಗೆ ಅಭ್ಯಾಸ ಮಡುವವನು
- ಭಗವಾನ್ / ಭಗವಂತ – ಶ್ರೀಮನ್ ನಾರಾಯಣನ್
- ಅರ್ಚೈ/ಅರ್ಚಾ – ಎಂಪೆರುಮಾನಾರ್ ದಯೆಯುಳ್ಳ/ಕರುಣಾಮಯವಾದ ದೈವಿಕ ವಿಗ್ರಹಗಳು – ದೇವಾಲಯದಲ್ಲಿ, ಮನೆಯಲ್ಲಿ, ಮಠದಲ್ಲಿ ಇರುವ ದೈವಿಕ ವಿಗ್ರಹಗಳು
- ಎಂಪೆರುಮಾನ್, ಪೆರುಮಾಳ್, ಈಶ್ವರ – ಭಗವಾನ್ / ಭಗವಂತ/ ನನ್ನ ಒಡೆಯ
- ಎಂಪೆರುಮಾನಾರ್ – ಶೀ ರಾಮಾನುಜ – ಭಗವಾನ್ / ಭಗವಂತ / ಎಂಪೆರುಮಾನ್ – ಗಿಂತಲೂ ಹೆಚ್ಚು ಸಹಾನುಭೂತಿಯುಳ್ಳವರು (ಮೇಲುಮ್ ಕರುಣೈಯುಳ್ಳವರ್)
- ಪಿರಾನ್ – ದಯೆ / ಒಲವು ಕೊಡುವವನು – ದಯವು / ಸದಾಗಮ್ಯಮಾಯ್ ಇರುಪ್ಪವನ್
- ಪಿರಾಟ್ಟಿ, ತಾಯಾರ್ – ಶ್ರೀ ಮಹಾಲಕ್ಷ್ಮೀ
- ಮೂಲವರ್ – ಎಂಪೆರುಮಾನ್ ಅವರ ಪವಿತ್ರವಾದ ಗರ್ಭಗುಡಿಯೊಳಗೆ ಸ್ಥಾಪಿಸಿರುವ ವಿಗ್ರಹ
- ಉತ್ಸವರ್ – ಎಂಪೆರುಮಾನ್ ಅವರ ಪಂಚಲೋಹ (ಬೆರೆ ಲೋಹದಲ್ಲೂ ಇರಬಹುದು) ವಿಗ್ರಹ- ಮೆರವಣಿಗೆಗೆ ಹೋಗುವ ವಿಗ್ರಹಗಳು
- ಅಳ್ವಾರ್ಗಳು – ಸದಾ ಭಕ್ತಿಯಲ್ಲಿ ಮುಳುಗಿರುವವರು – ಭಗವಂತನ ಪರಿಪೂರ್ಣ ಆಶೀರ್ವಾದ ಹಾಗೂ ಅನುಗ್ರಹ ಪಡೆದ ವೈಷ್ಣವ ಸಂತರು. ಇವರುಗಳು ದ್ವಾಪರ ಯುಗದ ಹಂತದಿಂದ ಕಲಿ ಯುಗದ ಆರಂಭದವರೆಗೂ, ದಕ್ಷಿಣ (ಸೌತ್) ಭಾರತದಲ್ಲಿ ಜೀವಿಸಿದರು
- ಪೂರ್ವಾಚಾರ್ಯರ್ – ಶ್ರಿಮನ್ ನಾರಾಯಣನಿಂದ ಶ್ರೀವೈಷ್ಣವ ಸಂಪ್ರದಾಯದಲ್ಲಿ ಬಂದಿರುವ ಆಧ್ಯಾತ್ಮಿಕ ಗುರುಗಳು
- ಭಾಗವತರು, ಶ್ರೀವೈಷ್ಣವರು – ಭಗವಾನ್ ಶ್ರಿಮನ್ ನಾರಾಯಣನ ಸೇವಕರು
- ಅರೈಯರ್ – ಇವರು ಶ್ರೀವೈಷ್ಣವರು – ಭಗವಂತನ ಮುಂದೆ ದಿವ್ಯ ಪ್ರಭಂಧಗಳನ್ನು ಹಾಡಿನಲ್ಲಿ ಹಾಗು ಭಾವಭಂಗಿಯಲ್ಲಿ ಹೇಳುವವರು
- ಓರಾಣ್ ವಳಿ ಆಚಾರ್ಯರುಗಳು – ಕೆಲವು ಆಯ್ಕೆಯ ಆಚಾರ್ಯರುಗಳು – ಪೆರಿಯ ಪೆರುಮಾಳ್ ರಿಂದ ಮಣವಾಳ ಮಾಮುನಿಗಳವರೆಗೂ ಸಂಪ್ರದಾಯವನ್ನು ನಡೆಸಿಕೊಂಡು ಬಂದವರು:
- ಪೆರಿಯ ಪೆರುಮಾಳ್
- ಪೆರಿಯ ಪಿರಾಟ್ಟಿ
- ಸೇನೈ ಮುದಲಿಯಾರ್
- ನಮ್ ಆಳ್ವಾರ್
- ನಾಥಮುನಿಗಳ್
- ಉಯ್ಯಕೊಂಡಾರ್
- ಮಣಕ್ಕಾಲ್ ನಂಬಿ
- ಆಳವಂದಾರ್ (ಯಾಮುನಾಚಾರ್ಯ)
- ಪೆರಿಯ ನಂಬಿ
- ಎಂಪೆರುಮಾನಾರ್ (ಭಗವತ್ ರಾಮಾನುಜ)
- ಎಂಬಾರ್
- ಭಟ್ಟರ್
- ನಂಜಿಯರ್
- ನಮ್ ಪಿಳ್ಳೈ
- ವಡಕ್ಕು ತಿರುವೀದಿ ಪಿಳ್ಳೈ
- ಪಿಳ್ಳೈ ಲೋಕಾಚಾರ್ಯರ್
- ತಿರುವಾಯ್ಮೋಳಿ ಪಿಳ್ಳೈ
- ಅಳಗಿಯ ಮನವಾಳ ಮಾಮುನಿಗಳ್ (ಶ್ರೀ ವರವರಮುನಿ)
- ದಿವ್ಯ ಪ್ರಭಂಧಮ್ – ಆಳ್ವಾರ್ಗಳ ಪಾಶುರಗಳನ್ನು ಅರುಳಿಚ್ಹೆಯಲ್ ಎಂದು ಕರೆಯಲ್ಪಡುತ್ತದೆ
- ದಿವ್ಯ ದಂಪತಿ – ಶ್ರೀಮನ್ ನಾರಾಯಣನ್ ಮತ್ತು ಶ್ರೀ ಮಹಾಲಕ್ಷ್ಮೀ
- ದಿವ್ಯ ದೇಶಮ್ – ಆಳ್ವಾರ್ಗಳು ವೈಭವೀಕರಿಸಿದ ಭಗವಂತನ ಕ್ಷೇತ್ರ
- ದಿವ್ಯ ಸೂಕ್ತಿ, ಶ್ರೀ ಸೂಕ್ತಿ – ಭಗವಂತ/ಆಳ್ವಾರ್/ಆಚಾರ್ಯನ್ ಮಾತುಗಳು/ಉಪದೇಶಗಳು
- ಅಭಿಮಾನ ಸ್ಥಳಗಳು – ಪೂರ್ವಾಚಾರ್ಯರುಗಳಿಗೆ ಪ್ರಿಯವಾದ ಭಗವಂತನ ಸ್ಥಳಗಳು
- ಪಾಶುರಮ್ – ಪದ್ಯ/ಶ್ಲೋಕ
- ಪದಿಗಮ್ – ದಶಕ(10 ಪದ್ಯಗಳ/ಪಾಶುರಮ್ ಸಂಗ್ರಹ)
- ಪತ್ತು – ನೂರು (100 ಪಾಶುರಮ್/ಪದ್ಯಗಳ ಸಂಗ್ರಹ)
ಶ್ರೀ ವೈಷ್ಣವರು ಸಾಮಾನ್ಯವಾಗಿ ಉಪಯೊಗಿಸುವ ಪದಗಳು – ಅದರ ನಿರ್ದಿಷ್ಟ ಅರ್ಥಗಳು
- ಕೋಯಿಲ್ – ಶ್ರೀರಂಗಂ
- ತಿರುಮಲೈ – ತಿರುವೆಂಕಟಮ್, ತಿರುಮಾಲಿರುನ್ಚೋಲೈ
- ಪೆರುಮಾಳ್ ಕೋಯಿಲ್ – ಕಾಂಚೀಪುರಂ
- ಪೆರುಮಾಳ್ – ಶ್ರೀ ರಾಮ
- ಇಳಯ ಪೆರುಮಾಳ್ – ಲಕ್ಷ್ಮಣ
- ಪೆರಿಯ ಪೆರುಮಾಳ್ – ಶ್ರೀರಂಗನಾಥನ್ (ಮೂಲವರ್)
- ನಮ್ ಪೆರುಮಾಳ್ – ಶ್ರೀರಂಗನಾಥನ್ (ಉತ್ಸವರ್)
- ಆಳ್ವಾರ್ – ನಮ್ ಆಳ್ವಾರ್
- ಸ್ವಾಮಿ – ಶ್ರೀ ರಾಮಾನುಜ
- ಜೀಯರ್, ಪೆರಿಯ ಜೀಯರ್ – ಮಣವಾಳ ಮಾಮುನಿಗಳ್
- ಗುಣಮ್ – ಭಗವತ್ ಗುಣಗಳು
- ಪರತ್ವಮ್ – ಪ್ರಾಬಲ್ಯ
- ಸೌಲಭ್ಯಮ್ – ಸುಲಭವಾಗಿ ಲಭಿಸುವ
- ಸೌಶೀಲ್ಯಮ್ – ಹೃದಯ ವೈಶಾಲ್ಯ
- ಸೌಂದರ್ಯಮ್ – ದೈಹಿಕ ಸೌಂದರ್ಯ
- ವಾತ್ಸಲ್ಯಮ್ – ವಾತ್ಸಲ್ಯ
- ಮಾಧುರ್ಯಮ್ – ಮಾಧುರ್ಯ
- ಕೃಪೈ, ಕರುಣೈ, ದಯಾ, ಅನುಕಂಪ – ಕರುಣೆ,ದಯೆ
- ರೂಪಮ್ – ಆಕಾರ/ರೂಪ
- ಸ್ವರೂಪಮ್ – ಸ್ವಭಾವ
- ಮೋಕ್ಷಮ್ – ಮೋಕ್ಷ – ಸಂಸಾರ ಬಂಧನದಿಂದ ಬಿಡುಗಡೆ.
- ಭಗವತ್ ಕೈಂಕರ್ಯ ಮೋಕ್ಷಮ್ – ಸಂಸಾರ ಬಂಧನದಿಂದ ಬಿಡುಗಡೆಯಾದಮೇಲೆ ಶಾಶ್ವತವಾಗಿ ಪರಮಪದದಲ್ಲಿ ಸೇವೆಯಲ್ಲಿ ತೊಡಗಿರುವುದು.
- ಕೈವಲ್ಯಮ್ – ಸಂಸಾರ ಬಂಧನದಿಂದ ಬಿಡುಗಡೆಯಾದಮೇಲೆ ಶಾಶ್ವತವಾಗಿ ಸ್ವಯಂ ಸ೦ತೋಷದಲ್ಲಿ ಕಳೆಯುವುದು
- ಕರ್ಮ – ಕ್ರಿಯೆ – ಪುಣ್ಯ / ಪಾಪ ಎಂತಲೂ ಅರ್ಥ
- ಶಾಸ್ತ್ರಮ್ – ನಮ್ಮ ದಿನ ನಿತ್ಯ ಕರ್ಮ/ಕ್ರಿಯೆಗಳಿಗೆ ಮಾರ್ಗದರ್ಶನ ಕೊಡುವ ಅಧಿಕೃತ ಗ್ರಂಥಗಳು – ವೇದ, ವೇದಾಂತ, ಪಂಚರಾತ್ರಮ್, ಇತಿಹಾಸ, ಪುರಾಣ, ಆಳ್ವಾರ್ ದಿವ್ಯ ಪ್ರಬಂಧಗಳು, ಆಚಾರ್ಯಗಳ ಕೃತಿಗಳು– ಸ್ತೋತ್ರ, ವ್ಯಾಖ್ಯಾನ
- ಕರ್ಮ ಯೋಗಮ್, ಜ್ಞಾನ ಯೋಗಮ್, ಭಕ್ತಿ ಯೋಗಮ್ – ಭಗವಂತನನ್ನು ಸೇರಲು ಮಾರ್ಗ
- ಪ್ರಪತ್ತಿ, ಶರಣಾಗತಿ – ಶರಣಾಗತಿ – ಭಗವಂತನೆ ಉಪಾಯ
- ಆಚಾರ್ಯ ನಿಷ್ಟೈ – ಪ್ರಪನ್ನನ್ನು ಆಚಾರ್ಯರ ಪಾದ ಕಮಲದಲ್ಲಿ ಆಶ್ರಯ ಪಡೆದಿರುವುದರಿಂದ ಅವರನ್ನು ಆಚಾರ್ಯ ನಿಷ್ಟರ್ಗಳೆಂದು ಕರೆಯುವರು
- ಆಚಾರ್ಯ ಅಭಿಮಾನಮ್ – ಆಚಾರ್ಯರ ಅಭಿಮಾನ ಪಡೆಯುವುದು
- ಪಂಚ ಸಂಸ್ಕಾರಮ್ (ಸಮಾಶ್ರಯಣಮ್) – ನಮ್ಮನ್ನು ಸಂಸಾರ ಮತ್ತು ಪರಮಪದ ಕೈಂಕರ್ಯ/ಸೇವೆಗೆ ಸಿದ್ಧಪಡಿಸಲು ನಡೆಯುವ ಶುದ್ಧೀಕರಣ ಪ್ರಕ್ರಿಯೆ. ಇದರಲ್ಲಿ ಕೆಳಗಿನ ವಿಷಯಗಳು ಒಳಗೊಂಡಿದೆ:
- ತಾಪ (ಬಿಸಿ)- ಶಂಖ ಚಕ್ರ ಲಾಂಚನಮ್ – ನಮ್ಮ ಭುಜದ ಮೇಲೆ ಇಡುವ ಶಂಖ ಚಕ್ರ ಮುದ್ರಣ. ನಾವು ಎಂಪೆರುಮಾನಾರ್ ಸ್ವತ್ತು ಎಂದು ಗುರುತಿಸಬಲ್ಲದು.
- ಪುಣ್ಡ್ರ (ಚಿಹ್ನೆ) – ದ್ವಾದಶ ಊರ್ಧ್ವ ಪುಣ್ಡ್ರ ಧಾರಣಮ್ – ದೇಹದ 12 ಅಂಗಾಂಗಗಳಲ್ಲಿ ತಿರುಮಣ್ ಮತು ಶ್ರೀಚೂರ್ಣವನ್ನು ಧರಿಸಿಕೊಳ್ಳುವುದು.
- ನಾಮ (ಹೆಸರು) – ದಾಸ್ಯ ನಾಮಮ್ – ಆಚಾರ್ಯರ್ ಹೊಸ ಹೆಸರನ್ನು ಇಡುವುದು – ರಾಮಾನುಜ ದಾಸನ್, ಶ್ರಿವೈಷ್ಣವ ದಾಸನ್, ಮಧುರಕವಿ ದಾಸನ್.
- ಮಂತ್ರ – ಮಂತ್ರೋಪದೇಶಮ್ – ಆಚಾರ್ಯರಿಂದ ರಹಸ್ಯ ಮಂತ್ರೋಪದೇಶ ಪಡೆಯುವುದು – ಮಂತ್ರ ಎಂದರೆ ದುಃಖ/ಸಂಕಟವನ್ನು ಶಮನಗೊಳಿಸುವ ಶಕ್ತಿ. ಕೆಳಗಿನ 3 ರಹಸ್ಯ ಮಂತ್ರಗಳು ನಮ್ಮನ್ನು ಸಂಸಾರ ಬಂಧನದಿಂದ ಬಿಡುಗಡೆ ಮಾಡುತ್ತದೆ:
- ತಿರುಮಂತ್ರಮ್
- ದ್ವಯಮ್
- ಚರಮಶ್ಲೋಕಮ್
- ಯಾಗ – ದೇವ ಪೂಜಾ – ತಿರುವಾರಾಧನ ಕ್ರಮವನ್ನು ಕಲಿಯುವುದು
- ಹೆಚ್ಚಿನ ವಿವರಗಳಿಗಾಗಿ – https://granthams.koyil.org/2015/12/rahasya-thrayam/
- ಕೈಂಕರ್ಯಮ್ – ಭಗವಾನ್, ಆಳ್ವಾರ್, ಆಚಾರ್ಯನ್, ಭಾಗವತರ ಸೇವೆ
- ತಿರುವಾರಾಧನಮ್ – ಎಂಪೆರುಮಾನ್ ಪೂಜೆ
- ತಿರುವುಳ್ಳಮ್ – ದೈವಿಕ ಹೃದಯ / ಬಯಕೆ
- ಶೇಷಿ – ಒಡೆಯ/ಯಜಮಾನ
- ಶೇಷ – ಸೇವಕ
- ಶೇಷತ್ವಮ್ – ಎಂಪೆರುಮಾನ್ ಸೇವೆಗೆ ಸಿದ್ಧವಾಗಿ ಇರುವುದು
- ಪಾರತಂತ್ರಿಯಮ್ – ಎಂಪೆರುಮಾನ್ (ಭಗವಂತ) ಸೇವೆಗೆ ಸಂಪೂರ್ಣವಾಗಿ ಮೀಸಲಾಗಿರುವುದು
- ಸ್ವಾತಂತ್ರಿಯಮ್ – ಸ್ವತಂತ್ರ
- ಪುರುಷಕಾರಮ್ – ಶಿಫಾರಸು/ಸೂಚನೆ/ಸಮಾಧಾನ – ಅರ್ಹತೆ ಇಲ್ಲದ ಜೀವಾತ್ಮಾವನ್ನು ಒಪ್ಪಿಕೊಳ್ಳಲು ಶ್ರೀ ಮಹಾಲಕ್ಷ್ಮೀ ಅಮ್ಮನವರು (ತಾಯಾರ್), ಎಂಪೆರುಮಾನಿಗೆ (ಭಗವಂತ) ಶಿಫಾರಸು ಮಾಡುತ್ತಾರೆ ಎಂದು ಪರಿಗಣಿಸಲಾಗುತ್ತದೆ. ಆಚಾರ್ಯರನ್ನು ಶ್ರೀ ಮಹಾಲಕ್ಷ್ಮೀ ಅಮ್ಮನವರ (ತಾಯಾರ್) ಪ್ರತಿನಿಧಿ ಎಂದು ಪರಿಗಣಿಸಲಾಗಿದೆ. ಇದನ್ನು ಯಾರು ನಿರ್ವಹಿಸುತ್ತಾರೋ, ಅವರಿಗೆ ಕೆಳಗಿನ 3 ಗುಣಗಳು ಇರಬೆಕು:
- ಕೃಪೈ – ಬಳಲುತ್ತಿರುವ ಜೀವಾತ್ಮಗಳ ಮೇಲೆ ಕರುಣೆ.
- ಪಾರತಂತ್ರಿಯಮ್ – ಎಂಪೆರುಮಾನ್ (ಭಗವಂತ) ಸೇವೆಗೆ ಸಂಪೂರ್ಣವಾಗಿ ಆಶ್ರಿತ ಸ್ಥಿತಿಯಲ್ಲಿ ಇರುವುದು.
- ಅನನ್ಯರ್ಹತ್ವಮ್ – ಸಂಪೂರ್ಣವಾಗಿ ಎಂಪೆರುಮಾನ್ (ಭಗವಂತ) ಸೇವೆಗೆ ಮೀಸಲಾಗಿರುವುದು
- ಅನ್ಯ ಶೇಷತ್ವಮ್ – ಯಾರಿಗಾದರೂ ಸೇವೆ ಮಾಡುವುದು (ಎಂಪೆರುಮಾನ್ (ಭಗವಂತ) ಮತ್ತು ಭಾಗವತರನ್ನು ಬಿಟ್ಟು)
- ವಿಷಯಾಂತರಮ್ – ಲೌಕಿಕ ಸಂತೋಷಗಳು/ ವಿಷಯಗಳು
- ದೇವತಾಂತರಮ್ – ಬೇರೆ/ಇತರ ಜೀವಾತ್ಮವನ್ನು ದೇವಾ ಎಂದು ತಪ್ಪಾಗಿ ತಿಳಿದುಕೊಳ್ಳುವುದು (ಎಂಪೆರುಮಾನ್ (ಭಗವಂತ) ) ಈ ಲೌಕಿಕ ಪ್ರಪಂಚವನ್ನು ಸುಗಮವಾಗಿ ಕಾರ್ಯಮಾಡಲು ಅನೇಕ ಜೀವಾತ್ಮವನ್ನು ನೇಮಕ ಮಾಡಿದ್ಹಾನೆ. ಅವರುಗಳು ಕೂಡ ಕರ್ಮಾನುಸಾರವಾಗಿ ಈ ಲೌಕಿಕ ಪ್ರಪಂಚಕ್ಕೆ ಬದ್ಧರಾಗಿರುತ್ತಾರೆ
- ಸ್ವಗತ ಸ್ವೀಕಾರಮ್ – ಎಂಪೆರುಮಾನ್ (ಭಗವಂತ)/ಆಚಾರ್ಯರನ್ನು ಒಪ್ಪಿಕೊಳ್ಳುವುದು
- ಪರಗತ ಸ್ವೀಕಾರಮ್ – ಭಗವಾನ್/ಆಚಾರ್ಯ ಅವರ ಸ್ವೈಚ್ಚೆ ಇಂದ ನಮ್ಮನ್ನು ಒಪ್ಪಿಕೊಳ್ಳುವುದು..
- ನಿರ್ಹೇತುಕ ಕೃಪಾ – ಜೀವಾತ್ಮನ ಪ್ರಚೋದನೆ ಇಲ್ಲದೆ ಭಗವಂತನ ನಿರಂತರ ಕರುಣೆ
- ಸಹೇತುಕ ಕೃಪಾ – ಜೀವಾತ್ಮನ ಸ್ವಂತ ಪ್ರಯತ್ನದಿಂದ ಭಗವಂತನ ನಿರಂತರ ಕರುಣೆಗೆ ಪ್ರಚೋದಿಸುವುದು
- ನಿತ್ಯ – ನಿತ್ಯ ಸೂರಿಯರು – ಪರಮಪದದಲ್ಲಿ ಎಂಪೆರುಮಾನ್ ಸೇವೆ ಸದಾಕಾಲ ನಿರಂತರವಾಗಿ ಮಾಡುವವರು. ಅವರುಗಳು ಸದಾಕಾಲ ಶುದ್ಧ ಮತ್ತು ಶಾಶ್ವತವಾಗಿ ಪರಮಪದದಲ್ಲಿ ಇರುವವರು
- ಮುಕ್ತ – ಲೌಕಿಕ ಪ್ರಪಂಚದಲ್ಲಿ ಸಿಲುಕಿಕೊಂಡು ಕ್ರಮೇಣ ಕರ್ಮಗಳಿಂದ ಮುಕ್ತನಾಗಿ ಪರಮಪದವನ್ನು ಸೇರುವ ಜೀವಾತ್ಮ. ಇದರಿಂದ ಅವರುಗಳು ಸದಾಕಾಲ ಶುದ್ಧ ಮತ್ತು ಶಾಶ್ವತವಾಗಿ ಪರಮಪದದಲ್ಲಿ ಇರುವವರು
- ಬದ್ದ – ಲೌಕಿಕ ಪ್ರಪಂಚದಲ್ಲಿ ಸಿಲುಕಿಕೊಂಡಿರುವವರು – ಸಂಸಾರಿ
- ಮುಮುಕ್ಷು – ಮೋಕ್ಷವನ್ನು ಇಚ್ಚೇ ಪಡುವವರು
- ಪ್ರಪನ್ನ – ಎಂಪೆರುಮಾನ್/ಭಗವಂತನಿಗೆ ಶರಣಾಗತನಾಗಿರುವವ:
- ಆರ್ತ ಪ್ರಪನ್ನ – ಲೌಕಿಕ ಪ್ರಪಂಚದ ದುಃಖಗಳಿಂದ ಒಮ್ಮೆಗೆ ಬಿಡುಗಡೆ/ಮುಕ್ತಿ ಪಡೆಯಬೇಕು ಎಂಬ ಇಚ್ಚೇ ಉಳ್ಳವವರು
- ದ್ರುಪ್ತ ಪ್ರಪನ್ನ – ಭಗವಂತನಲ್ಲಿ ಶರಣಾಗತಿಯಾಗಿ, ಭಗವಂತನಿಗೂ ಮತ್ತು ಭಾಗವತರಿಗೂ ಸ್ವಲ್ಪ ಕಾಲ ಈ ಲೌಕಿಕ ಪ್ರಪಂಚದಲ್ಲಿ ಸೇವೆ ಮಾಡಿ, ನಂತರ ಕ್ರಮೇಣ ಪರಮಪದದಲ್ಲಿ ಸೇವೆ ಮಾಡಲು ಇಚ್ಚೇ ಉಳ್ಳವರು
- ತೀರ್ಥಮ್ – ಪವಿತ್ರ ತೀರ್ಥ
- ಶ್ರೀಪಾದ ತೀರ್ಥಮ್ – ಚರಣಾಮೃತಮ್ – ಆಚಾರ್ಯನ್ ಕಮಲ ಪಾದಗಳನ್ನು ತೊಳೆದಿರುವ ನೀರು/ತೀರ್ಥ
- ಭೋಗಮ್ – ಭಗವಂತನಿಗೆ ನೈವೆದ್ಯಕ್ಕೆ ಇರುವ ಆಹಾರ (ಅಥವಾ ಯಾವುದಾದರು ತಿನ್ನುವ ಪದಾರ್ಥ)
- ಪ್ರಸಾದಮ್ – ಭಗವಂತನಿಗೆ ನೈವೆದ್ಯವಾಗಿರುವ ಆಹಾರ. ಇದನ್ನು ತರುವಾಯ ಶ್ರೀ ವೈಷ್ಣವರು ಸೇವಿಸುತ್ತಾರೆ
- ಉಚ್ಚಿಷ್ಟಮ್– ಉಳಿದಿರುವ ಪ್ರಸಾದಮ್ – ವಿನಿಯೋಗವಾಗಿ ಉಳಿದಿರುವ ಪ್ರಸಾದ – ಮತ್ತವರು ಉಂಡು ಉಳಿದಿರುವ ಪ್ರಸಾದವೆಂದು ಅರ್ಥವಾಗುತ್ತದೆ. ಸಂದರ್ಭವನ್ನು ನೋಡಿ ಅರ್ಥವನ್ನು ತಿಳಿಯಬೇಕು
- ಪಡಿ – ಭೋಗಮ್
- ಸಾತ್ತುಪ್ಪಡಿ – ತೇದ ಶ್ರೀಗಂಧ
- ಶಟಾರಿ, ಶ್ರೀ ಸಟಕೋಪಮ್, ಇತ್ಯಾದಿ. – ಶ್ರೀಮನ್ ನಾರಾಯಣನ ಪಾದ ಕಮಲಗಳು. ನಮ್ಮಾಳ್ವಾರರನ್ನು ಶ್ರೀ ಸಟಕೋಪಮ್ ಎಂದು ಕರೆಯಲಾಗುತ್ತದೆ. ಅವರನ್ನು ಎಂಪೆರುಮಾನ್ ಪಾದ ಕಮಲಗಳೆಂದು ಪರಿಗಣಿಸಲಾಗಿದೆ
ಮದುರಕವಿಗಳ್ – ನಮ್ ಆಳ್ವಾರ್ ಪಾದ ಕಮಲ.- ಶ್ರೀ ರಾಮಾನುಜಮ್ – ನಮ್ ಆಳ್ವಾರ್ ಪಾದ ಕಮಲ ಆಳ್ವಾರ್ ತಿರುನಗರಿಯಲ್ಲಿ
- ಶ್ರೀ ರಾಮಾನುಜಮ್ – ಎಲ್ಲಾ ಆಳ್ವಾರರ ಪಾದ ಕಮಲ
- ಮುದಲಿಯಾಣ್ಡಾನ್ – ಶ್ರೀ ರಾಮಾನುಜರ ಪಾದ ಕಮಲ
- ಪೊನ್ನಡಿಯಾಮ್ ಸೆನ್ಕಮಲಮ್ – ಮಾಮುನಿಗಳ ಪಾದ ಕಮಲ
- ಸಾಮಾನ್ಯವಾಗಿ ಪಟ್ಟ/ವಿಶ್ವಾಸಉಳ್ಳ ಶಿಷ್ಯನನ್ನು ಗುರುಗಳ ಪಾದ ಕಮಲವೆಂದು ಪರಿಗಣಿಸಲಾಗುತ್ತದೆ. ಉದಾಹರಣೆ: ಪರಾಸರ ಭಟ್ಟರ್, ಎಂಬಾರರ ಪಾದ ಕಮಲ, ನನ್ಜೀಯರ್ ಭಟ್ಟರರ ಪಾದ ಕಮಲ, ನಂಪಿಳ್ಳೈ ನನ್ಜೀಯರರ ಪಾದ ಕಮಲ, ಇತ್ಯಾದಿ…
- ವಿಭೂತಿ – ಸಂಪತ್ತು/ಸಿರಿ
- ನಿತ್ಯ ವಿಭೂತಿ – ಪರಮಪದಮ್/ಶ್ರೀವೈಕುಂಟಮ್
- ಲೀಲಾ ವಿಭೂತಿ – ಸಂಸಾರ – ಲೌಕಿಕ ಸಂತೋಷಗಳು/ ಲೌಕಿಕ ಪ್ರಪಂಚ
- ಅಡಿಯೇನ್, ದಾಸನ್ – ನಾನು/ನನ್ನ ಅನ್ನುವ ಬದಲಿಗೆ ವಿನಮ್ರವಾಗಿ ಹೇಳುವುದು
- ದೇವರೀರ್, ದೇವರ್, ಶ್ರೀಮಾನ್ – ಮತೊಬ್ಬ ಶ್ರೀವೈಷ್ಣವರನ್ನು ಕರೆಯುವ ವಿಧಿ – ನಿಮ್ಮ ಕೃಪೆ
- ಎಳ್ಹುನ್ದರಳುತಲ್ – ಬರಬೇಕು, ಕುಳಿತುಕೊಳಬೇಕು
- ಕಣ್ ವಳರುತಲ್ – ನಿದ್ರಾವಸ್ಥೆ
- ನೀರಾಟ್ಟಮ್ – ಸ್ನಾನ
- ಶಯನಮ್ – ವಿಶ್ರಮಿಸು
- ಶ್ರೀಪಾದಮ್ – ಪಲ್ಲಕ್ಕಿಯಲ್ಲಿ ಭಗವಾನ್/ಆಳ್ವಾರ್/ಆಚಾರ್ಯರನ್ನು ಒಯ್ಯುವುದು
- ತಿರುವಡಿ – ಪಾದ ಕಮಲ (ಹನುಮಂತ ಎಂದು ಆಗುತ್ತದೆ)
- ವ್ಯಾಖ್ಯಾನಮ್ – ವ್ಯಾಖ್ಯಾನ
- ಉಪನ್ಯಾಸಮ್ – ಉಪನ್ಯಾಸ
- ಕಾಲಕ್ಷೇಪಮ್ – ಗ್ರಂಥಗಳಲ್ಲಿ ಇರುವುದನ್ನು ಓದಿ, ಅದರ ಮೂಲ ಪಠ್ಯದ ಆಧಾರದಮೆಲೆ, ಅರ್ಥ ಮತ್ತು ವಿವರಣೆಯನ್ನು ಕೊಡುವುದು
- ಅಶ್ಟ ದಿಗ್ಗಜರ್ – ಶಿಷ್ಯರನ್ನು ಶ್ರೀವೈಷ್ಣವ ಸಂಪ್ರದಾಯಕ್ಕೆ ಉಪಕ್ರಮಿಸಲು ಮತ್ತು ಸತ್ ಸಂಪ್ರದಾಯವನ್ನು ವ್ಯಾಪಕವಾಗಿ ಪ್ರಚಾರಮಾಡಲು, ಮಣವಾಳ ಮಾಮುನಿಗಳವರು 8 ಆಚಾರ್ಯರುಗಳನ್ನು ಸ್ಥಾಪಿಸಿದರು.
- 74 ಸಿಂಹಾಸನಾಧಿಪತಿ – ಶಿಷ್ಯರನ್ನು ಶ್ರೀವೈಷ್ಣವ ಸಂಪ್ರದಾಯಕ್ಕೆ ಉಪಕ್ರಮಿಸಲು ಮತ್ತು ಸತ್ ಸಂಪ್ರದಾಯವನ್ನು ವ್ಯಾಪಕವಾಗಿ ಪ್ರಚಾರಮಾಡಲು, ಶ್ರಿ ರಾಮಾನುಜರು 74 ಆಚಾರ್ಯರುಗಳನ್ನು ಸ್ಥಾಪಿಸಿದರು.
ತತ್ವಶಾಸ್ತ್ರದ ಸಂಬಂಧಿತ ಪದಗಳು:
- ವಿಶಿಷ್ಟಾದ್ವೈತಮ್ – ಬ್ರಹ್ಮಮ್ (ಭಗವಾನ್)/ ಭಗವಂತನ ಚಿತ್ ಮತ್ತು ಅಚಿತ್ ಲಕ್ಷಣಗಳನ್ನು ವಿವರಿಸುವ ತತ್ವಶಾಸ್ತ್ರ
- ಸಿದ್ಧಾಂತಮ್ – ಸಿದ್ಧಾಂತ
- ಮಿಥುನಮ್ – ದ೦ಪತಿಗಳು – ಪೆರುಮಾಳ್ ಮತ್ತು ಪಿರಾಟ್ಟಿ
- ಏಕಾಯನಮ್ – ನಾರಾಯಣನ ಶ್ರಿಯ:ಪತಿತ್ವಕ್ಕೆ (ಶ್ರೀ ಮಹಾಲಕ್ಷ್ಮೀ ಅಮ್ಮನವರ ಒಡೆಯ) ಪ್ರಾಮುಖ್ಯತೆ ನೀಡದೆ, ಅವನ ಪ್ರಾಬಲ್ಯವನ್ನು ಒಪ್ಪಿಕೊಳ್ಳುವುದು
- ಮಾಯಾವಾದಮ್ –
- ಆಸ್ತಿಕ – ಶಾಸ್ತ್ರವನ್ನು ಪ್ರಮಾಣಮ್ ಎಂದು ಒಪ್ಪಿಕೊಳ್ಳುವವರು
- ನಾಸ್ತಿಕ – ಶಾಸ್ತ್ರವನ್ನು ಪ್ರಮಾಣಮ್ ಎಂದು ಒಪ್ಪಿಕೊಳ್ಳದವರು
- ಭಾಹ್ಯ – ಶಾಸ್ತ್ರವನ್ನು ಪ್ರಮಾಣಮ್ ಎಂದು ಒಪ್ಪಿಕೊಳ್ಳದವರು
- ಕುದ್ರುಶ್ಟಿ – ಶಾಸ್ತ್ರವನ್ನು ಪ್ರಮಾಣಮ್ ಎಂದು ಒಪ್ಪಿಕೊಂಡು, ಅನುಕೂಲಕ್ಕೆತಕ್ಕಂತೆ ತಪ್ಪು ಅರ್ಥಕೊಡುವುದು
- ಆಪ್ತ – ನಂಬಲಾರ್ಹ ಮೂಲ/ಜೊತೆ
- ಪ್ರಮಾ – ಮಾನ್ಯ ಜ್ಞಾನ
- ಪ್ರಮೇಯಮ್ – ಮಾನ್ಯ ಜ್ಞಾನದ ವಸ್ತು
- ಪ್ರಮಾತಾ – ಮಾನ್ಯ ಜ್ಞಾನವನ್ನು ಕೊಡುವವರು
- ಪ್ರಮಾಣಮ್ – ಮಾನ್ಯ ಜ್ಞಾನವನ್ನು ಪಡೆಯವ ರೀತಿ/ಮಾರ್ಗ
- ಪ್ರತ್ಯಕ್ಷಮ್ – ಇಂದ್ರಿಯಗಳಿಂದ ನೇರ ವೀಕ್ಷಣೆಯನ್ನು ಪಡೆಯುವುದು
- ಅನುಮಾನಮ್ – ಹಿಂದಿನ ವೀಕ್ಷಣೆಯ ಆಧಾರದಮೇಲೆ ಪಡೆದ ಜ್ಞಾನ
- ಶಬ್ದಮ್ – ಶಾಸ್ತ್ರಗಳು ಹೇಳಿರುವ ಪದಗಳು/ವಾಕ್ಯಗಳು
- ತತ್ವ ತ್ರಯಮ್ – ಪ್ರಪನ್ನನ್ನು ತಿಳಿದುಕೊಳ್ಳಬೇಕ್ಕಾದ 3 ವಾಸ್ತವಿಕತೆ
- ಚಿತ್, ಚೇತನಮ್, ಜೀವಾತ್ಮಾ – ಆತ್ಮ, ಚೇತನ, ಜೀವಾತ್ಮಾ
- ಅಚಿತ್, ಅಚೇತನಮ್, ಪ್ರಕ್ರುತಿ – ಭೌತಿಕ ವಸ್ತು, ನಿರ್ಜೀವ
- ಈಶ್ವರ – ಭಗವಾನ್ ಶ್ರೀಮನ್ ನಾರಾಯಣನ್.
- ಹೆಚ್ಚಿನ ವಿವರಗಳಿಗಾಗಿ – https://granthams.koyil.org/thathva-thrayam-english/
- ರಹಸ್ಯ ತ್ರಯಮ್- 3 ರಹಸ್ಯ ಮಂತ್ರಗಳು – ಪಂಚಸಂಸ್ಕಾರದ ಸಮಯದಲ್ಲಿ ಆಚಾರ್ಯರು ಉಪದೇಶ ಮಾಡುವ ಮಂತ್ರಗಳು (ಹೆಚ್ಚಿನ ವಿವರಗಳಿಗಾಗಿ – https://granthams.koyil.org/2015/12/rahasya-thrayam/).
- ತಿರುಮಂತ್ರಮ್ – ಅಷ್ಟಾಕ್ಷರ ಮಹಾ ಮಂತ್ರ
- ದ್ವಯಮ್- ದ್ವಯ ಮಹಾ ಮಂತ್ರಮ್
- ಚರಮ ಸ್ಲೋಕಮ್- “ಸರ್ವ ದರ್ಮಾನ್ ಪರಿತ್ಯಜ್ಯ…” ಗೀತಾ ಸ್ಲೋಕ. ರಾಮ ಚರಮ ಸ್ಲೋಕ (ಸಕ್ರುದೇವ ಪ್ರಪನ್ನಾಯ) ಮತ್ತು ವರಾಹ ಚರಮ ಸ್ಲೋಕ (ಸ್ತಿತೇ ಮನಸಿ).
- ಅರ್ತ ಪಂಚಕಮ್ – 5 ಅಗತ್ಯಯುಳ್ಳ ತತ್ವಗಳು – ಪಂಚಸಂಸ್ಕಾರದ ಸಮಯದಲ್ಲಿ ಆಚಾರ್ಯರು ಉಪದೇಶ ಮಾಡುವರು (ಹೆಚ್ಚಿನ ವಿವರಗಳಿಗಾಗಿ – https://granthams.koyil.org/2015/12/artha-panchakam/).
- ಜೀವಾತ್ಮಾ- ಚೇತನಾತ್ಮಕ
- ಪರಮಾತ್ಮಾ – ಭಗವಾಂತ
- ಉಪೇಯಮ್, ಪ್ರಾಪ್ಯಮ್ – ಸಾಧಿಸಬೆಕಾದ ಗುರಿ – ಕೈಂಕರ್ಯಮ್
- ಉಪಾಯಮ್ – ಗುರಿಯನ್ನು ಸಾಧಿಸಲು ಹಿಡಿದಿರುವ/ಉಪಯೊಗಿಸುವ ಮಾರ್ಗ
- ವಿರೋಧಿ – ಗುರಿಯನ್ನು ಸಾಧಿಸುವಾಗ ಬರುವ ಅಡಚಣೆಗಳು
- ಆಕಾರ ತ್ರಯಮ್ – ಜೀವಾತ್ಮಾ ಅವಶ್ಯವಾಗಿ ತಿಳಿದುಕೊಳ್ಳಬೆಕಾದ 3 ಗುಣಗಳು:
- ಅನನ್ಯ ಶೇಷತ್ವಮ್– ಭಗವಂತನೊಬ್ಭನೆ ಒಡೆಯನೆಂದು ಒಪ್ಪಿಕೊಳ್ಳುವುದು
- ಅನನ್ಯ ಶರಣತ್ವಮ್ – ಭಗವಂತನೊಬ್ಭನೆ ಆಶ್ರಯ
- ಅನನ್ಯ ಭೋಗ್ಯತ್ವಮ್ – ಭಗವಂತನೊಬ್ಭನೆ ಸಂತೋಶವನ್ನು ಅನುಭವಿಸುವುದು
- ಸಾಮಾನಾದಿಕರಣ್ಯಮ್- ಒಂದು ಅಥವಾ ಹೆಚ್ಚಿನ ಲಕ್ಷಣ/ಗುಣಗಳಿಗೆ ಒಂದೇ ತಳಹದಿ/ಆಧಾರ ಹೊಂದಿರುವುದು. ಉದಾಹರಣೆ: ಮ್ರುದ್ ಗಟಮ್ (ಮಣ್ಣಿನ ಮಡಿಕೆ) – ಮಡಿಕೆ ಆಧಾರ, ಮಣ್ಣು ಮತ್ಹು ಮಡಿಕೆ 2 ಲಕ್ಷಣಗಳು. ಮತ್ತೊಂದು ಉದಾಹರಣೆ: “ಶುಕ್ಲ: ಪಟ:” (ಬಿಳಿ ಬಟ್ಟೆ) – ಬಟ್ಟೆ ಆಧಾರವಾಗುವುದು, ಇದರಲ್ಲಿ 2 ಗುಣ/ಲಕ್ಷಣ ಇದೆ “ಬಿಳಿ” & “ಬಟ್ಟೆ”. ಸಾಮಾನಾದಿಕರಣ್ಯಮ್ ಎನ್ನುವುದು ಒಂದು ವಿವರವಾದ ವಿಷಯ, ಸಂಸ್ಕ್ರತ ವಿದ್ವಾಂಸರಿಂದ ಇನ್ನೂ ಹೆಚ್ಚಾಗಿ ತಿಳಿದುಕೊಳ್ಳಬಹುದು.
- ವೈಯದಿಕರಣ್ಯಮ್ – ಎರಡು ಅಥವಾ ಹೆಚ್ಚಿನ ಅಂಶಗಳಿಗೆ ವಿವಿಧ ಆಧಾರ/ತಳಹದಿಗಳು. ಇದರ ವಿವರವಾದ ವಿಷಯ, ಸಂಸ್ಕ್ರತ ವಿದ್ವಾಂಸರಿಂದ ಇನ್ನೂ ಹೆಚ್ಚಾಗಿ ತಿಳಿದುಕೊಳ್ಳಬಹುದು.
- ಸಮಶ್ಟಿ ಸೃಷ್ಟಿ – ಭಗವಂತನು ಪಂಚ ಭೂತಗಳಿಂದ ಸೃಷ್ಟಿ ಮಾಡಿ, ಅದಕ್ಕೆ ಬ್ರಹ್ಮನಾಗಿ/ಬ್ರಹ್ಮನಂತೆ ಜೀವಾತ್ಮವನ್ನು ಇಡುತ್ತಾನೆ. ಇಲ್ಲಿಯವರೆಗೆ ಸಮಷ್ಟಿ ಸೃಷ್ಟಿ ಎಂದು ಕರಿಯಲ್ಪಡುತ್ತದೆ.
- ವ್ಯಶ್ಟಿ ಸೃಷ್ಟಿ – ಭಗವಂತನು ಬ್ರಹ್ಮನಿಗೆ, ಋಷಿಗಳಿಗೆ,ಇತ್ಯಾದಿ.., ಇವರುಗಳಿಗೆ (ಅಂತರ್ಯಾಮಿಯಾಗಿ ಇದ್ದುಕೊಂಡು) ವಿವಿಧವರ್ಣದ ರೂಪಗಳನ್ನು ಒಂದಿರುವ ಸೃಷ್ಟಿಗಳನ್ನು ಸೃಷ್ಟಿಸಲು ಅಧಿಕಾರ ನೀಡುವನು.
- ವ್ಯಶ್ಟಿ ಸಂಹಾರಮ್- ಭಗವಂತನು ರುದ್ರರಿಗೆ (ಶಿವ), ಅಗ್ನಿ ದೇವರಿಗೆ , ಇತ್ಯಾದಿ, ಇವರುಗಳಿಗೆ (ಅಂತರ್ಯಾಮಿಯಾಗಿ ಇದ್ದು ಕೊಂಡು) ನಾಶಮಾಡುವ ಅಧಿಕಾರ ನೀಡುವನು
- ಸಮಶ್ಟಿ ಸಂಹಾರಮ್ – ಭಗವಂತನೆ ಎಲ್ಲಾ ಪಂಚ ಭೂತಗಳಿಂದ ಸೃಷ್ಟಿಸಿರುವ ಸೃಷ್ಟಿಯನ್ನು ಮತ್ತಿತರ ಎಲ್ಲಾ ಸೃಷ್ಟಿಗಳನ್ನು ತಾನೆ ನಾಶ ಮಾಡುವನು.
ಹೆಚ್ಚಿನ ವಿವರಗಳಿಗೆ: https://kaarimaaran.com/downloads/
ಆಳ್ವಾರ್ ತಿರುವಡಿಗಳೇ ಶರಣಮ್
ಎಂಪೆರುಮಾನಾರ್ ತಿರುವಡಿಗಳೇ ಶರಣಮ್
ಜೀಯರ್ ತಿರುವಡಿಗಳೇ ಶರಣಮ್
ಜೀಯರ್ ತಿರುವಡಿಗಳೇ ಶರಣಮ್
ಅಡಿಯೆನ್ ಶ್ರೀನಿವಾಸನ್ ರಾಮಾನುಜ ದಾಸನ್
ಮೂಲ: https://granthams.koyil.org/readers-guide-english/
ರಕ್ಷಿತ ಮಾಹಿತಿ: https://granthams.koyil.org
ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಧರ್ಮಗ್ರಂಥಗಳು) – https://granthams.koyil.org
ಪ್ರಮಾತಾ (ಭೋಧಕರು) – https://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – https://pillai.koyil.org