ಮುಮುಕ್ಷುಪ್ಪಡಿ – ಪರಿಚಯ

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ

ಪೂರ್ಣ ಸರಣಿ

ತನಿಯನ್‍ಗಳು

ಶ್ರೀಶೈಲೇಶ ದಯಾಪಾತ್ರಮ್ ಧೀ ಭಕ್ತ್ಯಾದಿ ಗುಣಾರ್ಣವಮ್
ಯತೀಂದ್ರಪ್ರವಣಮ್ ವಂದೇ ರಮ್ಯಜಾಮಾತರಮ್ ಮುನಿಮ್

ಲೋಕಾಚಾರ್‍ಯ ಗುರವೇ ಕೃಷ್ಣ ಪಾದಸ್ಯ ಸೂನವೇ
ಸಂಸಾರ ಭೋಗಿ ಸಂಧಷ್ಟ ಜೀವ ಜೀವಾತವೇ ನಮಃ

ಮಣವಾಳ ಮಾಮುನಿಗಳ ಅವರ ಮುಮುಕ್ಷುಪ್ಪಡಿ ವ್ಯಾಖ್ಯಾನಕ್ಕೆ ಪರಿಚಯ

ಶ್ರೀಮಹಾಲಕ್ಷ್ಮಿಯ ಪ್ರೀತಿಯ ಸರ್ವೇಶ್ವರನು, ನಿತ್ಯ, ಮುಕ್ತ ಮತ್ತು ಶ್ರೀವೈಕುಂಠದಲ್ಲಿರುವ ಭಕ್ತರ ಸಂಗದಲ್ಲಿ ಅತ್ಯಂತ ಆನಂದಮಯವಾಗಿರುವನು. ಅವನು ಸಂಸಾರದಲ್ಲಿರುವ ಅನೇಕ ಜನರನ್ನು ಕಂಡು, ಅವರೂ ಸಹ ಆ ನಿತ್ಯಸೂರಿಗಳ ಹಾಗೆ ಪರಮಾನಂದವನ್ನು ಪಡೆಯಲು ಮತ್ತು ಅವನಿಗೆ ನಿರಂತರ ಸೇವೆ ಸಲ್ಲಿಸಲು ಯೋಗ್ಯರಾಗಿದ್ದರೂ, ಆ ಸಂಸಾರಿಗಳು ಅಜ್ಞಾನದಲ್ಲಿ ತಮಗೆ ಆಗುತ್ತಿರುವ ನಷ್ಟವನ್ನೂ ಸಹ ಕಂಡುಕೊಳ್ಳದೆ, ರೆಕ್ಕೆಯಿಲ್ಲದಿರುವ ಹಕ್ಕಿಗಳ ಹಾಗೆ ತಮ್ಮ ಇಂದ್ರಿಯಗಳನ್ನು ಪರಮಾತ್ಮನಿಗೆ ಅರ್ಪಿಸದೆ, ಜಡ ವಸ್ತುಗಳಿಂದ ತಮ್ಮನ್ನು ತಾವು ಬೇರ್ಪಡಿಸಲಾಗದೇ ಇದ್ದಾಗ, ಸರ್ವೇಶ್ವರನು ಕನಿಕರದಿಂದ ವೇದಗಳನ್ನು ಅವರಿಗೆ ಕೊಟ್ಟು, ಅವುಗಳ ಜೊತೆಗೆ ಅದರ ಪುರಾತನವಾದ ಸ್ಮೃತಿ , ಇತಿಹಾಸ, ಪುರಾಣ ಇತರೆಗಳನ್ನೆಲ್ಲಾ ಕೊಟ್ಟ ಮೇಲೂ, ಅವುಗಳ ಒಳ ಅರ್ಥಗಳನ್ನು ಅರ್ಥೈಸಿಕೊಳ್ಳಲು ಕ್ಲಿಷ್ಟಕರವಾದ ಮತ್ತು ನಮ್ಮ ಪರಿಪಾಠದಲ್ಲಿ ಅಳವಡಿಸಿಕೊಳ್ಳಲು ಕಷ್ಟವಾದದ್ದರಿಂದ, ಮತ್ತು ಸಂಕೀರ್ಣವಾದ ಮತ್ತು ಸೂಕ್ಷ್ಮವಾದ ಸಂಗತಿಗಳನ್ನು ಅರ್ಥ ಮಾಡಿಕೊಳ್ಳಲು ಮತ್ತು ಮನನ ಮಾಡಲು ಅವರ ಅಸಹಾಯಕತೆಯನ್ನು ಕಂಡುಕೊಳ್ಳುತ್ತಾನೆ. ಆದ್ದರಿಂದ ತಾನೇ ಆಚಾರ್‍ಯನ ಪಾತ್ರದಲ್ಲಿ ಅವರಿಗೆ ಅರ್ಥ ಮಾಡಿಸುವ ಸಲುವಾಗಿ ಸ್ವರೂಪಮ್ ( ಅವನ ಮೂಲ ಗುಣ), ಉಪಾಯಮ್ (ಗುರಿಯನ್ನು ಸಾಧಿಸಲು ಇರುವ ಮಾರ್ಗ), ಮತ್ತು ಪುರುಷಾರ್ಥಮ್ (ಗುರಿಯಿಂದ ಆಗುವ ಪ್ರಯೋಜನ) – ಇವುಗಳನ್ನು ರಹಸ್ಯ ತ್ರಯಮ್‍ನ ಮೂಲಕ (ಮೂರು ನಿಗೂಢ ರಹಸ್ಯ ಶ್ಲೋಕಗಳು) ಅವರಿಗೆ ಜ್ಞಾನೋದಯವನ್ನು ಮಾಡುತ್ತಾನೆ.

ಈ ಮೂರು ರಹಸ್ಯಗಳಲ್ಲಿ, ತಿರುಮಂತ್ರ ಉಪದೇಶವನ್ನು ಬದರೀಕಾಶ್ರಮದಲ್ಲಿ ಅವನದೇ ಅವತಾರವಾದ ನರನಿಗೆ ಮಾಡುತ್ತಾನೆ. ದ್ವಯ ಉಪದೇಶವನ್ನು ವಿಷ್ಣುಲೋಕದಲ್ಲಿ (ಶ್ರೀ ವೈಕುಂಠ) ಅವನ ದಿವ್ಯ ಮಡದಿಯಾದ ಶ್ರೀ ಮಹಾಲಕ್ಷ್ಮಿಗೆ ಮಾಡುತ್ತಾನೆ. ಚರಮ ಶ್ಲೋಕ (ಅಂತಿಮ ಶ್ಲೋಕ) ವನ್ನು ಅವನ ಭಕ್ತನಾದ ಅರ್ಜುನನಿಗೆ ಅವನ ಸಾರಥಿಯಾಗಿ ಮಾಡುತ್ತಾನೆ. ಈ ಎಲ್ಲಾ ಕಾರಣಗಳಿಂದಾಗಿ ಅವನನ್ನು ನಾವು ಮೊದಲ ಆಚಾರ್‍ಯನೆಂದು ಗುರುಪರಂಪರೆಯ ಶ್ಲೋಕದಲ್ಲಿ “ಲಕ್ಷ್ಮೀನಾಥ ಸಮಾರಂಭಾಮ್” ಎಂದು ಆರಂಭಿಸಿ ಜ್ಞಾಪಿಸಿಕೊಳ್ಳುತ್ತೇವೆ.

ರಹಸ್ಯತ್ರಯಮ್, ಉಚ್ಛಾರಣೆಯಲ್ಲಿ ಸಂಕ್ಷಿಪ್ತವಾಗಿದ್ದರೂ ಇದು ಆಚಾರ್‍ಯರ ಮೂಲಕ ನೇರವಾಗಿ ಉಪದೇಶಿಸಿದರೆ ಮಾತ್ರ ಅರ್ಥವಾಗುತ್ತದೆ. ಎಲ್ಲರೂ ಉದ್ಧಾರವಾಗುವುದು ಇವುಗಳ ಆಳ ಅರ್ಥಗಳನ್ನು ತಿಳಿದು ಮಾತ್ರ ಎಂದು ಪಿಳ್ಳೈ ಲೋಕಾಚಾರ್‍ಯರು ನಮ್ಮ ಮೇಲಿರುವ ಸಹಾನುಭೂತಿಯಿಂದ ಮೊದಲಿನ ಪೂರ್ವಾಚಾರ್‍ಯರಂತೆ ಒಂದರ ನಂತರ ಒಂದಂತೆ ಬಹಳ ಸಂಕ್ಷಿಪ್ತವಾಗಿ ಆದರೆ ಅರ್ಥವಾಗುವ ರೀತಿಯಲ್ಲಿ ಹೇಳಿದ್ದಾರೆ. ಅವರು ಮೂರು ಪುಸ್ತಕಗಳಲ್ಲಿ ರಹಸ್ಯ ತ್ರಯದ ಈ ಮೂರು ರಹಸ್ಯಗಳನ್ನು ಮೊದಲೇ ಬರೆದಿದ್ದರೂ, ಅವುಗಳಲ್ಲಿ ಯಾದೃಚಿಕಪ್ಪಡಿ ಎಂಬುದು ಬಹಳ ಸಂಕ್ಷಿಪ್ತವಾಗಿದೆ. ಪರಂತಪ್ಪಡಿ ಎಂಬುದು ಅತ್ಯಂತ ದೀರ್ಘವಾಗಿದೆ. ಶ್ರಿಯಃಪತಿಪ್ಪಡಿ ಈ ಎರಡೂ ನ್ಯೂನ್ಯತೆಗಳನ್ನು ಹೊರತುಪಡಿಸಿದರೂ, ಅದು ಅತ್ಯಂತ ಸಂಸ್ಕೃತೀಕರಣವಾಗಿದೆ. ಆದ್ದರಿಂದ ಬಹಳ ಕ್ಲಿಷ್ಟವಾಗಿದೆ. ಆದ್ದರಿಂದ ಪಿಳ್ಳೈ ಲೋಕಾಚಾರ್‍ಯರು ಈ ಮೂರೂ ನ್ಯೂನ್ಯತೆಗಳಿಂದ ಮುಕ್ತವಾಗಿ ಈ ಗದ್ಯವನ್ನು ರಚಿಸಿದ್ದಾರೆ. ಈ ಕಾರಣದಿಂದಲೇ ಮುಮುಕ್ಷುಪ್ಪಡಿ ಅದರ ಸಂತತಿಯ ಅನೇಕ ಪುಸ್ತಕಗಳಿಗಿಂತಲೂ ಹೆಚ್ಚಾಗಿ ಓದಲ್ಪಡುತ್ತದೆ. ಈ ಮೊದಲು ಇರುವ ಮೂರು ಗದ್ಯಗಳಲ್ಲಿ ಬಿಟ್ಟು ಹೋದಂತಹ ಅನೇಕ ಅಂಶಗಳನ್ನು ಇದರಲ್ಲಿ ಉಲ್ಲೇಖಿಸಲಾಗಿದೆ. ಆದ್ದರಿಂದ ಇದು ಹೆಚ್ಚು ಜನಪ್ರಿಯವಾಗಿದೆ.

ಈ ರೀತಿಯಾಗಿ ಮಾಮುನಿಗಳ ಮುಮುಕ್ಷುಪ್ಪಡಿಯ ಪರಿಚಯ ಅವತಾರಿಕಾ ಸಂಪೂರ್ಣವಾಗಿದೆ.

ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ

ಮೂಲ : https://granthams.koyil.org/2020/01/21/mumukshuppadi-introduction-english/

ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org

 

2 thoughts on “ಮುಮುಕ್ಷುಪ್ಪಡಿ – ಪರಿಚಯ”

Leave a Comment