ಅಂತಿಮೋಪಾಯ ನಿಷ್ಠೈ – 2 – ಆಚಾರ್ಯ ಲಕ್ಷಣಮ್/ವೈಭವಮ್

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ

ಅಂತಿಮೋಪಾಯ ನಿಷ್ಠೈ

<< ಹಿಂದಿನ ಲೇಖನವನ್ನು

ಆಚಾರ್ಯ ವೈಭವವು ವಿವರಿಸಲ್ಪಡುತ್ತಿದೆಆಚರ್ಯನನ್ನು ಆಶ್ರಯಿಸುವುದರ ಪೂರ್ವವಿದ್ದ ಅನಾದಿಕಾಲವು ಅನಂತ ಅಂಧಕಾರದ ರಾತ್ರಿಯಹಾಗೆ ಹಾಗು ನಿಜವಾದ ಆಚಾರ್ಯಾಶ್ರಯಣವು ನಿಜವಾದ ಸೂರ್ಯೋದಯ. ಇದನ್ನೇಪುಣ್ಯಾಮ್ಭೋಜ ವಿಕಾಸಾಯ ಪಾಪಧ್ವಾನ್ತ ಕ್ಷಯಾಯ ; ಶ್ರೀಮಾನ್ ಆವಿರಬೂತ್ಬೂಮೌ ರಾಮಾನುಜ ದಿವಾಕರಃ ಯಲ್ಲಿ ತಿಳಿಯುತ್ತೇವೆಸೂರ್ಯನನ್ನು ಕಂಡ ತವರೆಯು ಅರಳಿದಂತೆಯೆ, ನಮ್ಮ ಪಾಪಗಳು ಹಾಗು ಎಲ್ಲಾ ಅಂಧಕಾರವೂ ರಾಮಾನುಜರೆಂಬ ದಿವಕರದ ಆಗಮದಿಂದ ನಶಿಸುವುದು.
ಆದಿತ್ಯ ರಾಮ ದಿವಾಕರ ಅಚ್ಯುತ ಭಾನುಕ್ಕಳುಕ್ಕುಪ್ ಪೋಗಾತ ಉಳ್ಳಿರುಳ್ ನೀನ್ಗಿ,
ಸೋಶಿಯಾತ ಪಿಱವಿಕ್ಕಡಲ್ ವಱ್ಱಿ, ವಿಕಸಿಯಾತ ಪೋತಿಲ್ ಕಮಲ ಮಲರ್ನ್ತತು ವಕುಳ ಭೂಷಣ ಭಾಸ್ಕರೋದಯತ್ತಿಲೇ” (ಆಚರ್ಯ ಹೃದಯಮ್ ) – ರಾಮಕೃಷ್ಣಾವತಾರಗಳಿಂದ ನಶಿಸದ ಸಂಸಾರದ ಕತ್ತಲು/ ಅಜ್ಞಾನವು ನಮ್ಮಾೞ್ವಾರಿನ (ವಕುಳಾಭರಣನ್) ಅವತಾರದಿಂದ ನೀಗಿತು. ಆದ್ದರಿಂದ ಆಚಾರ್ಯನ ಅಗಮನವೇ ಸಂಸಾರದಲ್ಲಿನ ಅನಂತ ಅಂಧಕರಕ್ಕೆ ನಿವೃತ್ತಿ. ಭಾಗವತ ಕಾಟಕ್ಷವು ಒಬ್ಬನಮೇಲೆ ಬಿದ್ದ ತಕ್ಷಣವೇ ಸಂಸಾರ ನಿವೃತ್ತಿಗಾಗಿ ಸ್ವಪ್ರಯತ್ನವನ್ನು ಏನು ಅಪೇಕ್ಷಿಸದೆ, ಅದು
ಪರಮಪ್ರಾಪ್ಯಕ್ಕೆ ವಿರೋಧಿಗಳನ್ನು ದೂರಮಾಡುವುದು. ಆಚಾರ್ಯನ ಕೃಪೆಗೆಪಾತ್ರರಾದವರು ಮಹಾ ಪಾಪಕೃತ್ತರಾಗಿದ್ದರು ಅವರ ಕರ್ಮವೆಲ್ಲಾ ಆಚಾರ್ಯನ ಆಶ್ರಯಣದ ಕ್ಷಣ್ವೇ ಪೂರ್ಣವಾಗಿ ನಶಿಸಿ, ಪೂರ್ಣವಾಗಿ ಶುಧ್ದಗೊಂಡು ತದನಂತರ ಶ್ರೀಮನ್ನಾರಾಯಣನ ಧಾಮವಾದ ಪರಮಪದವನ್ನು ಹೋಂದುವರು. ಇದನ್ನೇ ಮುಂದಿನ ಉದಾಹರಣೆಗಳಿಂದಲೂ ಕಾಣಬಹುದು.

ಆರ್ತಿ ಪ್ರಭಂದಮ್ – 45
ನಾರಾಯಣನ್ ತಿರುಮಾಲ್ ನಾರಮ್ ನಾಮ್ ಎನ್ನುಮ್ ಮುಱೈ
ಆರಾಯಿಲ್ ನೆನ್ಜೇ ಅನಾದಿ ಅನ್ಱೋಸೀರಾರುಮ್
ಆಚಾರಿಯನಾಲೇ ಅನ್ಱೋ ನಾಮ್ ಉಯ್ನ್ದದು ಎನ್ಱು
ಕೂಚಾಮಲ್ ಎಪ್ಪೊೞುದುಮ್ ಕೂಱು
ಮನವೇ! ಶ್ರೀಮನ್ನಾರಾಯಣನು ಹಾಗು ನನ್ನ ನಡುವಿರುವ ಸಂಬಂಧವು ನಿತ್ಯವಾಗಿದ್ದರು ಅದನ್ನು ನಾವು ನಮ್ಮ
ಆಚಾರ್ಯರ
ದಿವ್ಯ ಉಪದೇಶದಿಂದಲೇ ಅದನ್ನು ಅರಿತು ಉಜ್ಜೀವಿಸಿದೆವು. ಆದ್ದರಿಂದ ನಾವು ಯಾವ ಭಯವುವಿಲ್ಲದೆ
ಆಚಾರ್ಯರಿಗೆ ಕೃತಜ್ಞತೆಯನ್ನು ಸಲ್ಲಿಸಬೇಕು.

ಶ್ರೀವಚನ ಭೂಷಣಮ್ಸೂತ್ರ 408 ಹಾಗು 409.
ಉನ್ಣ್ಡಪೋತೊರು ವಾರ್ತ್ತೈಯುಮ್ ಉಣ್ಣಾತಪೋತೊರು ವಾರ್ತ್ತೈಯುಮ್ ಚೊಲ್ಲುವಾರ್ ಪತ್ತುಪ್ಪೇರುನ್ಣ್ಡಿರೇ,
ಅವರ್ಗಳ್ ಪಾಸುರಮ್ ಕೋಣ್ಡನ್ಱು ಇವ್ವರ್ತ್ತಮ್ ಅಱುತಿಯಿಡುವತು
ಭಗವದನುಭವವಿರುವಾಗ ಭಾಗವತರನ್ನು ಶ್ಲಾೞ್ಹಿಸುವವರು, ಹಾಗು ತದಲಾಭದಲ್ಲಿ (ವಿರಹದ ತೀವ್ರ ದುಃಖದಿಂದ) ಅವರನ್ನು ನಿಂದಿಸುವವರು 10 ಆೞ್ವಾರ್ಗಳಿದ್ದಾರೆ. ಇವರ ವಚನಗಳಿಂದ ಆಚಾರ್ಯವೈಭವವು ಸ್ಥಾಪಿತ ವಾಗುವುದಿಲ್ಲ.
ಅವರ್ಗಳೈಚ್ ಚಿರಿತ್ತಿರುಪ್ಪಾರ್ ಒರುವರುನ್ಣ್ಡಿಱೇ; ಅವರ್ ಪಾಸುರಮ್ ಕೊನ್ಣ್ಡು ಇವ್ವರ್ತ್ತಮ್
ಅಱುತಿಯಿಡಕ್ಕಡವೋಮ್
ಅವರನ್ನು ನೋಡಿ ನಗುವಂತೆ ಇರುವವರು ನಮ್ಮಾೞ್ವಾರ ಸ್ತುತಿಯಲ್ಲೇ ಇರುವವರು ಮಧುರಕವಿ ಆೞ್ವಾರ್.
ನಾವು ಅವರ ಪದಗಳಿಂದ ಆಚಾರ್ಯ ವೈಭವವನ್ನು ಸ್ಥಾಪಿಸುವೆವು.
ಅನುವಾಧಕರ ಟಿಪ್ಪಣಿ:
ಮಧುರಕವಿ ಆೞ್ವಾರ್ ಕಣ್ಣಿನುಣ್ ಚಿರುತ್ತಾಂಬುವಿನ ಕೊನೆಯಪಾಸುರದಲ್ಲಿ ತಮ್ಮ ವಚನವನ್ನು ವಿಶ್ವಾಸಿಸಿ
ನಮ್ಮಾೞ್ವಾರನ್ನು ಭಕ್ತಿಯಿಂದ ಅನುಚರಿಸುವವರು ಖಚಿತವಾಗಿ ಶ್ರೀವೈಕುಂಠವನ್ನು (ಪರಮಪದವನ್ನು) ಕಾಣುವವರು.

ಅನುವಾಧಕರ ಟಿಪ್ಪಣಿ: ಕೆಳಗಿನ (ವಿಸ್ತರ) ಭಾಗದಲ್ಲಿ ಲೇಖಕರು ಎಮ್ಪೆರುಮಾನಿನ ವಿಷಯದಲ್ಲಿ ನಮ್ಮಾೞ್ವಾರಿನ ವಚನವನ್ನು ಹಾಗು ಅದರ ಸಮಾನವಾದ ನಮ್ಮಾೞ್ವಾರಿನ ವಿಷಯಕ ಮಧುರಕವಿ ಆೞ್ವಾರಿನ ವಚನವನ್ನು ಹೋಲಿಸುತಿದ್ದಾರೆ. ಹೋಲಿಕೆಯಿಂದ ಆಚಾರ್ಯವೈಭವವು ಭಾಗವದ್_ವೈಭವಕ್ಕಿಂತಲು ಶ್ರೇಷ್ಠವಾದದ್ದು ಎಂದು ಸುಲಭವಾಗಿ ಅರಿಯಬಹುದು. ಪ್ರಕಾಶಿತ ಗ್ರಂಥದಲ್ಲಿ ಭಾಗ/ ವಾಕ್ಯವು ಪೂರ್ಣವಾಗಿ ಲಭಿಸುತಿಲ್ಲ ಹಾಗು ಮೂಲ ಗ್ರಂಥದಲ್ಲೇ ಲುಪ್ತವೇಂದು ತಿಳಿಯುತ್ತದೆ.

 

 

ಪರಮಾಚಾರ್ಯರಾದ ನಮ್ಮಾೞ್ವಾರ್-ವಚನ

ಅಪ್ಪೊೞುತೈಕ್ಕಪ್ಪೊೞುತು ಎನ್ ಆರಾವಮುತಮ್ – ಕ್ಷಣಕ್ಷಣಕ್ಕು ಭಗವಾನ್ ನನ್ನ ದಿವ್ಯಾಮೃತನಾಗಿದ್ದಾನೆ

ಮಾಲುಕ್ಕು ನಾವುಡೈಯೇನ್ – (ಎಮ್ಪೆರುಮಾನಿನ ಸ್ತುತಿಯಲ್ಲಿ) ಹರ್ಷಿಸುವ ನಾಲಿಗೆಯನ್ನು ಹೋಂದಿದ್ದೇನೆ

ಅಡಿಕ್ಕೀೞ್ ಅಮರ್ನ್ತು ಪುಗುನ್ತೇನ್ – ತಿರುವೇಂಕಟಮುಡೈಯಾನಿನ ಪಾದಕಮಲದಲ್ಲಿ ಆಶ್ರಯಿಸಿದೆ

ಕಣ್ಣನಲ್ಲಾಲ್ ದೆಯ್ವಮಿಲ್ಲೈ- ಕಣ್ಣನ್ ಎಮ್ಪೆರುಮಾನನ್ನು ಬಿಟ್ಟು ದೈವವಂದಿಲ್ಲ

ಪಾಡಿ ಇಳೈಪ್ಪಿಲಮ್ – ಭಗವಾನಿನ ವೈಭವವನ್ನು ಹಾಡುವುದನ್ನು ಎಂದು ನಿಲ್ಲಿಸೆನು.

ಇನ್ಗೇ ತಿರಿನ್ತೇರ್ಕ್ಕಿೞುಕ್ಕುಟ್ರೇನ್ – ಭಗವಾನನ್ನು ಈ ಲೋಕದಲ್ಲೆ ಆರಾದಿಸುವವರಿಗೆ ಹಾವ ಕೊರೆಯಿದೆ

ಉರಿಯ ತೊಣ್ಡನ್– ಭಗವತ್-ದಾಸರ ಸೂಕ್ತ ದಾಸನು

ತಾಯಾಯ್ತ್ ತನ್ತೈಯಾಯ್– ಭಗವಾನ್ ನನಗೆ ತಂದೆ ತಾಯಿಯಾಗಿದ್ದಾನೆ (ಪ್ರೀತಿ ಹಾಗು ಅಕ್ಕರೆಯಿಂದ ಕೂಡಿದ್ದಾನೆ).

ಆಳ್ಗಿನ್ಱಾನ್ ಆೞಿಯಾನ್ – ದಿವ್ಯವಾದ ಚಕ್ರವನ್ನು ಧರಿಸುವ ಭಗವಾನ್ ನನ್ನನ್ನು ನಿಯಾಮಿಸುವವನು.

ಕಡಿಯನಾಯ್ಕ್ ಕನ್ಜನೈಕ್ ಕೊನ್ಱ ಪಿರಾನ್ – ಕಂಸನನ್ನು ಕೋಂದ ಮಹೋಪಕಾರಕನು ಭಗವಾನ್ (ಇಲ್ಲಿ ಆೞ್ವಾರ್ ಭಾಗವತರು ಭಗವಾನ್ ಇತರ ಭಾಗವತರಿಗೆ ಮಾಡಿದ ಉಪಕಾರಗಳನ್ನು ತಮಗೆ ಮಾಡಿದಂತಯೇ ನೆನಯಬೇಕೆಂದು ಸೂಚಿಸುತಿದ್ದಾರೆ)

ಯಾನೇ ಎನ್ತನತೇ ಎನ್ಱಿರುನ್ತೇನ್ ನಾನು ಅಹಂಕಾರ-ಮಮಕಾರಗಳಿಂದಿದ್ದೆ.

ಎಮರೇೞೆೞುಪಿಱಪ್ಪುಮ್ ಆಸತಿರಿತುಪೆಟ್ರು – ಭಗವಾನಿಂದ ನಾನು ಹಲವಾರು ಜನ್ಮಗಳಿಗೆ ಪರಮ ಕೃಪೆಯಿಂದ ಅನುಗ್ರಹೀತನಾಗಿದ್ದೆನೆ.

ಎನ್ನಾಲ್ ತನ್ನೈ ಇನ್ತಮಿೞ್ ಪಾಡಿಯ ಈಸನ್ – ಭಗವಾನ್ ನನ್ನ ವಚನದಿಂದ ತನ್ನನ್ನು ಸ್ತುತಿಸಿಗೋಂಡನು

ಒಟ್ಟುಮೋ ಇನಿ ಎನ್ನೈ ನೆಗಿೞ್ಕ್ಕವೇ – ಭಗವಾನ್ ನನ್ನ ನಿಷ್ಠೆಯಿಂದ ಕೆಳಗೆ ಪತಿಸಲು (ಬೀಳಲು) ಬಿಡುವನೋ ?

ಮಯರ್ವಱ ಮತಿನಲಮ್ ಅರುಳಿನನ್ – ಭಗವಾನ್ ನನ್ನನ್ನು ದಿವ್ಯ ಹಾಗು ನಿರ್ದೋಶ ಜ್ಞಾನದಿಂದ ಅನುಗ್ರಹಿಸಿದ

ಅರುಳುಡೈಯವನ್ – ಭಗವಾನ್ ಕರುಣಾವಾನ್

ಪೇರೇನೆನ್ಱು ಎನ್ ನೆನ್ಜು ನಿಱೈಯಪ್ ಪುಗುನ್ತಾನ್ – ಭಗವಾನ್ ನನ್ನ ಹೃದಯದಲ್ಲಿ ಪ್ರವೇಶಿ ತಾನು ಎಂದು ಹೋಗನೆಂದು ಘೋಷಿಸಿದನು.

ವೞುವಿಲಾ ಅಡಿಮೈ ಚೆಯ್ಯ ವೇಣ್ಡುಮ್ ನಾಮ್ – ನಾವು ಭಗವಾನಿಗೆ ನಿರ್ದೋಶ ಕೈಂಕರ್ಯವನ್ನು ಮಾಡಬೇಕು.

ಪೊರುಳಲ್ಲಾತ ಎನ್ನೈಪ್ ಪೊರುಳಾಕ್ಕಿ ಅಡಿಮೈ ಕೊಣ್ಡಾಯ್- ಭಗವಾನ್ ನನ್ನನ್ನು ಅಜ್ಞಾನದಿಂದ ಜ್ಞಾನಕ್ಕೆ ತಂದು ಅವನ ಕೈಂಕರ್ಯದಲ್ಲೆ ನಿರತನಾಗಿಸಿದ.

ಆರಾತ ಕಾತಲ್ – ಅಂತಗೊಳದ ಭಗವತ್-ಪ್ರೀತಿ

ಕೋಲಮಲರ್ಪ್ಪಾವೈಕ್ಕನ್ಬಾಗಿಯ ಎನ್ ಅನ್ಬೇಯೋ- (ಶ್ರಿಮಹಲಕ್ಶ್ಮಿಗೆ ಪ್ರಿಯನಾದ) ಭಗವಂತನಿಗೆ ನಾನು ಪ್ರಿಯನು.

 

ಶ್ರೀ ಮದುರಕವಿ ಆೞ್ವಾರ್-ವಚನ

ತೆನ್ಕುರುಕೂರ್ ನಂಬಿ ಎನ್ಱಕ್ಕಾಲ್ ಅಣ್ಣಿಕ್ಕುಮ್
ಅಮುತೂರುಮ್ ಎನ್ ನಾವುಕ್ಕೇ
–ನಾನು ನಮ್ಮಾೞ್ವಾರಿನ ನಾಮಗಳಾನ್ನು ಹೇಳಿದ ಕೂಡಲೇ ಅಮೃತ-ಸದೃಶವಾಗಿವೆ.

ನಾವಿನಾಲ್ ನವಿಟ್ರು ಇನ್ಬಮೆಯ್ತಿನೇನ್ – ನಮ್ಮಾೞ್ವಾರಿನ ವೈಭವವನ್ನು ನುಡಿದು ಆನಂದಿಸಿದೆ.

ಮೇವಿನೇನ್ ಅವನ್ ಪೊನ್ನಡಿ ಮೆಯ್ಮ್ಮೈಯೇ- ನಮ್ಮಾೞ್ವಾರಿನ ಸುವರ್ಣ ಪಾದಗಳಲ್ಲಿ ಪೂರ್ಣವಾಗಿ ಶರಣಾಗಿದ್ದೇನೆ.

ದೇವು ಮಟ್ರಱಿಯೇನ್ – ನಮ್ಮಾೞ್ವಾರನ್ನು ಬಿಟ್ಟರೆ ನಾನು ಇನ್ನೋಂದು ದೈವವನ್ನು ನಾನು ಅರಿಯೇನು.

ಪಾಡಿತ್ ತಿರಿವನೇ – ನಮ್ಮಾೞ್ವಾರಿನ ವೈಭವವನ್ನು ಹಾಡುತ್ತಾ ಸಂಚರಿಸುವೆನು.

ತಿರಿತನ್ತಾಗಿಲುಮ್ ದೇವ ಪಿರಾನುಡೈಕ್ ಕರಿಯಕೋಲತ್ ತಿರುವುರುಕ್ ಕಾಣ್ಬನ್ ನಾನ್ – ಮತ್ತೆ ನಿತ್ಯಸೂರಿಗಳ ನಾಥನನ್ನು ಈ ಲೋಕದಲ್ಲೇ ನೋಡುವೆ(ಆರಾದಿಸುವೆ). ಆಚಾರ್ಯನಿಷ್ಠರಾದ ಮಧುರಕವಿ ಆೞ್ವಾರ್, ಅವರ ಆಚಾರ್ಯರಿಗೆ ಪ್ರಿಯವಾದದ್ದೆಂದು ಎಮ್ಪೆರುಮಾನನ್ನು ಆರಾದಿಸುವರು.

ನಮ್ಬಿಕ್ಕಾಳುರಿಯನ್ – (ಭಗವಾನಿನ ದಾಸರಾದ) ನಮ್ಮಾೞ್ವಾರಿನ ಸೂಕ್ತ ದಾಸನು.

ಅನ್ನೈಯಾಯ್ ಅತ್ತನಾಯ್- ನಮ್ಮಾೞ್ವಾರೇ ನನಗೆ ತಂದೆ ತಾಯಿಯಾಗಿದ್ದಾರೆ (ಪ್ರೀತಿ ಹಾಗು ಅಕ್ಕರೆಯಿಂದ ಕೂಡಿದ್ದಾರೆ).

ಎನ್ನೈಯಾಣ್ಡಿಡುಮ್ ತನ್ಮೈಯಾನ್– ನನ್ನನ್ನು ನಿಯಾಮಿಸುವವರು ನಮ್ಮಾೞ್ವಾರ್

ಸಡಗೋಪನ್ – ಜನ್ಮಕಾಲದಲ್ಲಿ ನಮ್ಮನ್ನು ವ್ಯಾಪಿಸುವ ಶಠವೆಂಬ ಅಜ್ಞಾನ ವಿಶೇಷವನ್ನು ನಮ್ಮಾೞ್ವಾರ್ ದೂರಗೋಳಿಸಿದರು

ನಮ್ಬಿನೇನ್ ಪಿಱರ್ ನನ್ ಪೊರುಳ್ ತನ್ನೈಯುಮ್ ನಮ್ಬಿನೇನ್ ಮಡವಾರೈಯುಮ್ ಮುನ್ಬೆಲಾಮ್- ಅತ್ಮವನ್ನು (ಭಗವಂತನದೆಂದು {ಅವನಿಗೆ ಸೇರಿದ್ದದೆಂದು/ ಅವರದೆಂದು} ಅರಿಯದೆ) ನನ್ನದೆಂದು ತಿಳಿದೆ ಹಾಗು ಸ್ತ್ರಿಯರು ನನು ಅನುಭವಿಸಲೆಂದಿದ್ದಾರೆ ಎಂದು ತಿಳಿದಿದ್ದೆ.

ಇನ್ಱು ತೊಟ್ಟುಮ್ ಎೞುಮೈಯುಮ್ ಎಮ್ಪಿರಾನ್ -ನಮ್ಮಾೞ್ವಾರೇ ಇಂದಿನಿಂದ ಅನೇಕ ಜನ್ಮಗಳಿಗೆ ನನಗೆ ನಾಥರಾಗಿದ್ದಾರೆ.

ನಿನ್ಱು ತನ್ ಪುಗೞ್ ಏಟ್ಟ್ರ ಅರುಳಿನಾನ್ – ನಾನು ಅವರನ್ನು ಸ್ತುತಿಸಲು ನಮ್ಮಾೞ್ವಾರ್ ನನ್ನನ್ನು ಅನುಗ್ರಹಿಸಿದರು.

ಎನ್ಱುಮೆನ್ನೈ ಇಗೞ್ವಿಲನ್ ಕಾಣ್ಮಿನೇ – ನಮ್ಮಾೞ್ವಾರ್ ಎಂದೂ ನನ್ನನ್ನು ನನ್ನ ನಿಷ್ಠೆಯಿಂದ ಅಧೋಗಮನವನ್ನು (ಕೆಳಗೆ ಪತಿಸುವುದು) ಬಿಡರು.

ಎಣ್ಡಿಸೈಯುಮ್ ಅಱಿಯ ಇಯಮ್ಬುಕೇನ್ ಒಣ್ತಮಿೞ್ಚ್ ಶಟಗೋಪನ್ ಅರುಳೈಯೇ – ನಾನು (ನನಗೆ ನಿರ್ದೋಶ್ಸ ಜ್ಞಾನವನ್ನು ಪ್ರಸಾದಿಸಿದ) ಆೞ್ವಾರಿನ ದಿವ್ಯ ದಯೆಯನ್ನು ಎಲ್ಲ ದಿಶೆಯಲ್ಲು ಪ್ರಚಾರಿಸುವೆ.

ಅರುಳ್ಕಣ್ಡೀರ್ ಇವ್ವುಲಗಿನಿಲ್ ಮಿಕ್ಕತೇ – ನಮ್ಮಾೞ್ವಾರಿನ ದಯೆ ಪೂರ್ಣ ಜಗತ್ತಿಗಿಂತಲು ಶ್ರೇಷ್ಟವಾದದ್ದು.

ನಿಱ್ಕಪ್ಪಾಡಿ ಎನ್ನೆನ್ಜುಳ್ ನಿಱುತ್ತಿನಾನ್ – (ಭಗವತರನ್ನು ಸೇವಿಸುವುದಾದ- ಭಾಗವತ ಶೇಷತ್ವವಾದ) ಶಾಸ್ತ್ರದ ಸಾರವನ್ನು ಬೋಧಿಸುವುದರಿಂದ ನನ್ನ ಹೃದಯದಲ್ಲಿ ಸದಾ ನೆಲಸಿಬಿಟ್ಟರು.

ಆಟ್ಪುಕ್ಕ ಕಾತಲ್ ಅಡಿಮೈಪ್ ಪಯನನ್ಱೇ –ಶೇಷತ್ವದಿಂದ ಜನಿಸಿದ ಭಕ್ತಿ (ಪ್ರೀತಿ/ ಅಕ್ಕರೆ)

ಪಯನನ್ಱಾಗಿಲುಮ್ ಪಾನ್ಗಲ್ಲರಾಗಿಲುಮ್ ಚೆಯಲ್ ನನ್ಱಾಗತ್ ತಿರುತ್ತಿಪ್ ಪಣಿ ಕೊಳ್ವಾನ್ – ನಾನು ಯಾವುದಕ್ಕು ಅರ್ಹನಾಗದಿದ್ದರೂ ನಮ್ಮಾೞ್ವಾರ್ ನನ್ನನ್ನು ಶುಧ್ದಗೊಳಿಸಿ ತಮ್ಮ ಸೇವೆಯಲ್ಲಿ ನಿರತರಾಗಿಸಿದರು.

ಮುಯಲ್ಗಿನ್ಱೇನ್ ಉನ್ತನ್ ಮೊಯ್ಕೞರ್ಕ್ಕನ್ಬೈಯೇ – ನಿಮ್ಮ ಪಾದಪಂಕಜಗಳಲ್ಲಿ ಪ್ರೀತಿ/ಸಂಗವನ್ನು (ಭಕ್ತಿಯನ್ನು) ಜನಿಸಲು ಪ್ರಯತ್ನಿಸುತಿದ್ದೇನೆ.

ತೆನ್ಕುರುಗೂರ್ನಗರ್ ನಮ್ಬಿಕ್ಕನ್ಬನಾಯ್ – ಆೞ್ವಾರ್ ತಿರುನಗರಿಯನ್ನು ನಿಯಮಿಸುವ ನಮ್ಮಾೞ್ವಾರಿಗೆ ನಾನು ಪ್ರಿಯನು

ಅನುವಾದಕರ ಟಿಪ್ಪಣಿ: ಮುಂದೆ ಬರುವ ಭಾಗವು ಆಚಾಯ ಲಕ್ಷಣವನ್ನು ಹಾಗು ವೈಭವವನ್ನು ಮಣವಾಳ ಮಾಮುನಿಗಳ ವ್ಯಾಖ್ಯನದೊಂದಿಗೆ ತಿಳಿಯಲ್ತಕ್ಕದಾದ ಪಿಳ್ಳೈ ಲೋಕಾಚಾರ್ಯರ ಶ್ರೀವಚನ ಭೂಷಣ ದಿವ್ಯ ಶಾಸ್ತ್ರದಿಂದ (ಅದರಿಂದ ಉದಾಹರಿಸಿ) ಪ್ರಕಾಶಿಸಲ್ಪಡುವುದು

ಸೂತ್ರಮ್ 308 – ಆಚಾರ್ಯನು ಶಿಷ್ಯನಿಗೆ ಹಿತೋಪದೇಶವನ್ನು ಮಾಡುವ ಕಾಲದಲ್ಲಿ ತನ್ನ ಬಗ್ಗೆ, ಶಿಷ್ಯನ ಬಗ್ಗೆ ಹಾಗು ಫಲದ ಬಗ್ಗೆ ವಿಪರೀತವಾಗಿ ತಿಳಿಯಬಾರದು, ಅದನ್ನು ಮಾಡಿದಲ್ಲಿ ಆಚಾರ್ಯನ °°° ತೋರುವುದು.

ಸೂತ್ರಮ್ 309 – ತನ್ನನ್ನು ವಿಪರೀತವಾಗಿ ತಿಳಿಯುವುದು (ತನ್ನ ಆಚಾರ್ಯನ ಶಿಷ್ಯನೆಂದು ಭಾವಿಸದೆ) ತನ್ನನ್ನೇ ಆಚಾರ್ಯನೆಂಶು ತಿಳಿಯುವುದು, ಶಿಷ್ಯನ ನು ವಿಪರೀತವಾಗಿ ತಿಳಿಯುವುದೆಂದರೆ (ಅವನನ್ನು ತನ್ನ ಆಚಾರ್ಯನ ಶಿಷ್ಯನೆಂದು ಭಾವಿಸದೆ) ತನ್ನ ಶಿಷ್ಯನೆಂದು ಭಾವಿಸುವುದು, ಹಾಗು ಫಲವನ್ನು ವಿಪರೀತವಾಗಿ ತಿಳಿಯುವುದೆಂದರೆ ದೃಷ್ಠ ಸಾಮ್ಸಾರಿಕ ಫಲವನ್ನಾಗಲಿ, ಶಿಷ್ಯನ ಉಜ್ಜೀವನವನ್ನಾಗಲಿ, ಅವನನ್ನು ಭಗವತ್ಕೈಂಕರ್ಯದಲ್ಲಿ ನಿರತಾಗಿಸುವುದಕ್ಕಾಗಲಿ , ಸಂಸಾರದಲ್ಲಿ ಇರುವವೇಳೆಯಲ್ಲಿ ಶಿಷ್ಯನು ಆಚಾರ್ಯನನ್ನು ಅನುವರ್ತಿಸುವುದೆಂಬ ಸಹವಾಸವಾಕ್ಕಾಗಲಿ ಫಲವೆಂದು ತಿಳಿಯುವುದು.

ಸೂತ್ರ 310 – ಆಚಾರ್ಯನು ಹಿಂದೆ ಹೆಳಿದಂತೆ ಫಲವನ್ನು (ವಿಪರೀತವಾಗಿ) ತಿಳಿಯಬಾರದು, ಅದು ಸಹಜವಾಗಿಯೇ ಸಿದ್ಧಿಸುವುದು. (ಆಚಾರ್ಯನ ಅಗತ್ಯತೆಗಳಿಗೆ ಯತ್ನಿಸುವ) ಶಿಷ್ಯನ ಇಚ್ಛೆಯಿಂದ ದೃಷ್ಠ ಪ್ರಯೊಜನವು ಸಿದ್ಧಿಸುವುದು, ಭಗವದ್ ಇಚ್ಛೆಯಿಂದ ಶಿಷ್ಯನು ಉಜ್ಜೀವಿಸುವನು, ಶಿಷ್ಯನಿಂದ ಭಗವದ್ ಕೈಂಕರ್ಯವು ಆಚಾರ್ಯನ ಇಚ್ಛೆಯಿಂದ ಸಿದ್ಧಿಸುವುದು, ಶಿಷ್ಯನ ಉಪಕಾರ ಸ್ಮೃತಿಯಿಂದ ಸಂಸಾರದಲ್ಲಿ ಇರುವವೇಳೆಯಲ್ಲಿ ಆಚಾರ್ಯನ ಸಹವಾಸವು ಸಿದ್ಧಿಸುವುದು.

ಸೂತ್ರ 311 – (ಭಗವಾನಿನ ಕ್ಷೇಮವಾನು ಆಷಿಸುವ ಮಂಗಳಾಶಾಡನವಾದ) ಸಾಕ್Sಕಾತ್ ಫಲವು ಆಚಾರ್ಯನ ಇಚ್ಛೆಯಿಂದಲೇ ಸಿದ್ಧಿಸುವುದು °°°

ಸೂತ್ರ 312 – ಆಚಾರ್ಯ-ಶಿಷ್ಯ ಸಂಬಂದವು ಮೇಲಿನಂತಿರದಿದ್ದಲ್ಲಿ ಆಚಾರ್ಯ-ಶಿಷ್ಯರನ್ನು ಹಾಗೆ ಕರೆಯುವುದು ಸೂಕ್ತವಲ್ಲ.

ಸೂತ್ರ 313 – ಆಚಾರ್ಯನು ತನ್ನ ಶಿಷ್ಯನ ವಿಷಯದಲ್ಲಿ ಕೃಪೆಯು, ತನ್ನ ಆಚಾರ್ಯನಿಗೆ (ಸ್ವಾಚಾರ್ಯನಿಗೆ) ಪೂರ್ಣ ಪರತಂತ್ರನಾಗಿರಬೇಕು.

ಸೂತ್ರ 314 – ಶಿಷ್ಯನ ಸ್ವರೂಪವು ಆಚಾರ್ಯನ ಕೃಪೆಯಿಂದ ಸಿದ್ಧಿಸುವುದು ಹಾಗು ಆಚಾರ್ಯನ ಸ್ವರೂಪವು ಸ್ವಾಚರ್ಯನಲ್ಲಿ ಪೂರ ಪಾರತಂತ್ರ್ಯತೆಯಿಂದ ಸಿದ್ಧಿಸುವುದು.

ಸೂತ್ರ 315 – ತಿರುಮಂತ್ರದ ( ಡ್ವಯ ಹಾಗು ಚರಮ ಶ್ಲೋಕದ) ಅರ್ಥಗಳನ್ನು ಉಪದೇಶಿಸುವವನು ಸಾಕ್ಷಾತ್ ಆಚಾರ್ಯನು

ಸೂತ್ರ 316 – ಭಗವಾನನ್ನೆ ಸ್ತುತಿಸುವ ಆದರೆ ಸಾಂಸಾರಿಕ ಪ್ರಯೋಜನಗಳನ್ನು ಉದ್ದೇಶಿಸುವ ಮನ್ತ್ರದ ಉಪದೇಷ್ಟಾಗಳು (ಉಪದೇಶಿಸುವವರು) ಆಚಾರ್ಯನೆನ್ನಲ್ಲು ಸೂಕ್ತರಲ್ಲ.
( ಅನುವಾದಕರ ಟಿಪ್ಪಣಿ- ಮುಂದೆ ಬರುವ ಸೂತ್ರಗಳಲ್ಲಿ ತಿರುಮಂತ್ರವನ್ನು ಬಿಟ್ಟು ಇತರ ಮಂತ್ರಗಳು ಪೂರ್ಣವಲ್ಲ ಹಾಗು ಪರಮ ಪ್ರಾಪ್ಯವಾದ ಭಗವದ್-ಕೈಂಕರ್ಯದಲ್ಲಿ ಪೂರ್ಣತಃ ಉದ್ದೇಶಿಸದು ಎಂಬ ವಿಷಯವು ವಿವರಿಸಲ್ಪಟ್ಟಿದೆ- ಮುಮುಕ್ಷುಪ್ಪಡಿಯಲ್ಲೂ ಇದೇ ವಿಷಯವು ಸ್ಪಷ್ಟವಾಗಿ ವಿವರಿಸಲ್ಪಟ್ಟಿದೆ. )

ಸೂತ್ರ 328 – ಆಚಾರ್ಯನು ಶಿಷ್ಯನ ಉಜ್ಜೀವನಕ್ಕೆ ಯತ್ನಿಸಬೇಕು.

ಸೂತ್ರ 333 – ಆಚಾರ್ಯನು ಶಿಷ್ಯನ ಸ್ವರೂಪವನ್ನು ಪೋಷಿಸಬೇಕು (ಆತ್ಮಾ).

ಸೂತ್ರ 335 – ಶಿಷ್ಯನ ಶರೀರ ಅವಶ್ಯಕತೆಗಳನ್ನು ಪೋಷಿಸುವುದು ಆಚಾರ್ಯಸ್ವರೂಪ ವಿರುದ್ಧ.

ಸೂತ್ರ 337 – ಆಚಾರ್ಯನು ತನ್ನ ಸಂಪತ್ತಿನಿಂದ/ ಡ್ರವ್ಯದಿಂದ ಶಿಷ್ಯನ ಶರೀರ ಅವಶ್ಯಕತೆಗಳನ್ನು ಪೋಷಿಸಬೇಕು (ಅಂದರೆ ಶಿಷ್ಯನು ತನ್ನ ಎಲ್ಲ ಸಂಪತ್ತು/ ದ್ರವ್ಯವನ್ನು ಆಚಾರ್ಯನಿಗೆ ಸೇರಿದವೆಂದು ಸಮರ್ಪಿಸಬೇಕು.

ಸೂತ್ರ 338 – ಆಚಾರ್ಯನು ಶಿಷ್ಯನ್ನ ಸಂಪತ್ತನ್ನು/ದ್ರವ್ಯವನ್ನು ಸ್ವೀಕರಿಸಬಾರದು, (ಶಿಷ್ಯನು ಸ್ವೇಚ್ಛಯಾ ಸಮರ್ಪಿಸಿದಿದಲ್ಲಿ ಅಥವಾ ಇನ್ನು ಅದು ತನಗೆ ಸೇರಿದೇಂದು ಭಾವಿಸಿದಲ್ಲಿ, ಆಚಾರ್ಯನು ಸ್ವೀಕರಿಸಬಾರದು).

ಸೂತ್ರ 339 – (ಹಿಂದಿನ ಸೂತ್ರದಲ್ಲಿ ಹೇಳಿದಂತೆ) ಸ್ವೀಕರಿಸಿದಲ್ಲಿ ಕೃಪಣನೇನಿಸುವನು.

ಸೂತ್ರ 340 – ನಿಜವಾದ ಆಚಾರ್ಯನು ಆಧ್ಯಾತ್ಮಿಕ ನಿಧಿಯಲ್ಲಿ ತೃಪ್ತನಾದ ಕಾರಣ ಇಂತಃ ದ್ರವ್ಯವನ್ನು ಸ್ವೀಕರಿಸನು.

ಸೂತ್ರ 341 – ತೃಪ್ತನಾದ ಕಾರಣ ಅವನ್ನಲ್ಲಿ ಆಚಾರ್ಯತ್ವವು ಪ್ರಕಾಶಿಸುವದು.

ಸೂತ್ರ 427 – ಭಗವದ್-ಪ್ರಪತ್ತಿ ಅವನ ಕೈಗಳನ್ನು ಹಿಡಿದು ಸಹಾಯ ಪ್ರಾರ್ಥಿಸುವಂತೆ; ಆಚರ್ಯನಲ್ಲಿ ಪ್ರಪತ್ತಿ ಅವನ ಪಾದಪಂಕಜಗಳನ್ನು ಹಿಡಿದು ಸಹಾಯ ಪ್ರಾರ್ಥಿಸಿದಂತೆ (ಇವರಡರಲ್ಲಿ ಇದೇ ಲೇಸು).

ಸೂತ್ರ 430 – ಭಗವಾನಿಗೂ ಸ್ವಯಮ್ ಆಚಾರ್ಯನಾಗಲು ಇಷ್ಟ.

ಸೂತ್ರ- 431 – ಆದ್ದರಿಂದಲೇ, ತಾನೇ ನಮ್ಮ ಗುರುಪರಂಪರೆಯಲ್ಲಿ ಪ್ರಥಮಾಚಾರ್ಯನಾಗಿಯು, ಭಗವದ್ಗೀತೆಯ ಉಪದೇಷ್ಟಾವಾಗಿಯು ಹಾಗು ವಿಭೀಷಣ ಶರಣಾಗತಿಯನ್ನು ಅಂಗೀಕರಿಸಿದನು.

ಸೂತ್ರ- 432 – ಆಚಾರ್ಯನಿಗೆ ಸೂಕ್ತ ಪ್ರತ್ಯುಪಕಾರವನ್ನು ನೀಡಲು, ಇನೋಬ್ಬ ಭಗವಾನ್ ಹಾಗು ಇನ್ನೋಂದು ಲೀಲಾವಿಭೂತಿ ಹಾಗು ನಿತ್ಯವಿಭೂತಿಯ ಯುಗ್ಮವು ಲಬ್ದವಾದಾಗ.

ಸೂತ್ರ- 433 – ಭಗವದಾಶ್ರಯಣ/ ಸಂಬಂಧವು (ಸಂಸಾರದಲ್ಲಿ ನಮ್ಮ ನಿರಂತರ ಜನ್ಮಗಳ ಯಾತ್ರೆಯರೂಪದಲ್ಲಿರುವ) ಬಂಧಕ್ಕು ಹಾಗು ಮೋಕ್ಷಕ್ಕು ಕಾರಣಾವಾಗಿದೆ, ಆದರೆ ಆಚಾರ್ಯ-ಆಶ್ರಯಣ / ಸಂಬಂಧವು ಮೋಕ್ಷವಂದಕ್ಕೇ ಹೇತುವಾಗಿದೆ.

ಸೂತ್ರ- 437- ತನ್ನ ಆಚರ್ಯನ ಸಂಬಂಧವಿಲ್ಲದಲ್ಲಿ ಶಿಷ್ಯನಲ್ಲಿ ಜ್ಞಾನ-ವೈರಾಗ್ಯಗಳಿದ್ದರೂ ಅವು ಕಾರ್ಯಕರಗಳಾಗವು.

ಸೂತ್ರ- 378- ಒಬ್ಬ ಸ್ತ್ರೀಗೆ ಮಂಗಲ್ಯಸೂತ್ರವಿದಲ್ಲಿ (ಪತಿಯು ಜೀವಂತವಾಇದಲ್ಲಿ) ಅವಳಲ್ಲಿ ಇತರ ಆಭರಣಗಳು ಶೋಭಿಸುವವು, ಮಾಂಗಲ್ಯಸೂತ್ರ ವಿರಹಿತೆಯಾಗಿರುವಾಗ (ಪತಿಯು ಜೀವಂತವು ಜೀವಂತವಿಲ್ಲದ ಕಾಲದಲ್ಲಿ) ಆ ಆಭರಣಗಳೇ (ಧರಿಸಲಾಗದ ಕಾರಣ) ತಪಿಸುವವು.

ಸೂತ್ರ- 439 – ಆಚಾರ್ಯ ಸಂಬಂಧವಿಲ್ಲದೆ ಭಗವತ್ಸಂಬಂಧವಿಲ್ಲ.

ಸೂತ್ರ- 443 – “ಅನಾದಿ ಕಾಲದಿಂದ ‘ನಾನೇ ರಕ್ಷಕನೇಂಧು’ ಭಾವಿಸುವುದರಿಂದ ಭಗವದ್ ಆಭಿಮುಖ್ಯ ರಹಿತರಾದ ಜೀವಾತ್ಮರಿಗೆ, ಆಚಾರ್ಯನ ದಯೇಯೇ ಮೋಕ್ಷಕ್ಕೆ ಉಪಾಯವು. ”, ಎಂದು ವಡಕ್ಕು ತಿರುವೀದಿಪ್ ಪಿಳ್ಳೈ ಹಲವಾರುಬಾರಿ ಉದಾಹರಿಸುವರು.

ಸೂತ್ರ- 447 – ಆಚಾರ್ಯನ ಕರುಣೇಯೋಂದೆ ಶಿಷ್ಯನ ಉಜ್ಜೀವನಕ್ಕೇ ದಾರಿ.

ಸೂತ್ರ- 460 – ಆಚಾರ್ಯಾಭಿಮಾನದ ವಿಷಯದಲ್ಲಿ ಉದಾಹರಿಸಿರುವ ಪ್ರಮಾಣಗಳು ಧ್ಯೇಯ.

ನಾಚಿಯಾರ್ ತಿರುಮೊೞಿ 10.10 – ನಲ್ಲವೆನ್ ತೋೞಿ – ಇಲ್ಲಿ ಆಣ್ಡಾಳ್ ಕೃಷ್ಣನನ್ನು ಪೆಟಿಯಾೞ್ವಾರಿನ ಭಗವಾನೆಂದು ಘೋಷಿಸಿ ಅವರು ಕೃಷ್ಣನನ್ನು ತಂದರೆ ಅವನನ್ನು ಸ್ವೀಕರಿಸುವಳೆಂದು ಹೇಳಿದರು.

ನಾನ್ಮುಗನ್ ತಿರುವಂತಾದಿ 18 – ಮಾಱಾಯ ದಾನವನೈ – ಇಲ್ಲಿ ತಿರುಮೞಿಸೈ ಅೞ್ವಾರ್ ನರಸಿಂಹನಲ್ಲಿ ಪೂರ್ಣವಾಗಿ ಶರಣಾದ ಭಕ್ತರನ್ನು ಶ್ಲಾಘಿಸಿ, ಇಂತಹ ಭಕ್ತರನ್ನು ಪೂರ್ಣವಾಗಿ ಆಶ್ರಯಿಸಿ ಅವರ ಕರುಣೆಯನ್ನೇ ಅಪೇಕ್ಷಿಸುವುದು ಉತ್ತಮ.

ಸ್ತೋತ್ರ ರತ್ನಮ್ – ಅಕೃತ್ರಿಮ ತ್ವ ಚರಣಾರವಿಂದ – ಇಲ್ಲಿ ಆಳವಂದಾರ್ ಭಗವಾನ್ ತಮ್ಮ ಜ್ಞಾನ ಭಕ್ತಿಗಳಿಂದಲ್ಲದೆ ಭಗವಾನಿಗೆ ತುಂಬಾ ಪ್ರಿಯವಾದ ನಾಥಮುನಿಗಳೊಂದಿಗೆ ಸಂಬಂಧದಿಂದಲೇ ಸ್ವೀಕರಿಸಬೇಕು.

ಪುರಾಣ ಶ್ಲೋಕ – ಪಷುರ್ ಮನುಷ್ಯ ಪಕ್ಷೀವಾ – (ಶಾಸ್ತ್ರೋಕ್ತವಾದ ರೀತಿಯಲ್ಲಿ ಜ್ಞಾನವನ್ನು ಅರ್ಜಿಸಲು ಅರ್ಹವೋ ಅರ್ಹವಲ್ಲವೋ) ಜನ್ಮದ ಯಾವ ನಿಯತಿಯೂಯಿಲ್ಲದೆ ಪಷುವೋ, ಮನುಷ್ಯನೋ ಅಥವಾ ಪಕ್ಷಿಯೋ ಒಬ್ಬ ವೈಷ್ಣವನ ಸಂಬಂದವೇ ಸುಲಭವಾಗಿ ಪರಮಪದವನ್ನು ಪ್ರಸಾದಿಸುವುದು.

ಸೂತ್ರ 461 – ಆಚಾರ್ಯಾಭಿಮಾನವು ಪ್ರಪತ್ತಿಯ ಹಾಗೆಯೇ ಸ್ವತಂತ್ರ ಉಪಾಯವಾಗಿಯೂ ಇತರ ಉಪಾಯಗಳಿಗೆ ಸಹಕಾರಿಯಾಗಿಯೂ ಇರುವುದು.

ಸೂತ್ರ 462 – ಭಕ್ತಿಯನ್ನು ಮಾಡಲು ಅಶಕ್ತನಿಗೆ ಪ್ರಪತ್ತಿ; ಪ್ರಪತ್ತಿಯನ್ನು ಮಾಡಲೂ ಅಶಕ್ತನಿಗೆ ಆಚಾರ್ಯಾಭಿಮಾನವಿದೆ.

ಸೂತ್ರ 463 – ಆಚಾರ್ಯಾಭಿಮಾನವು ಮೋದಲು (ಭಾಗವತ ಶೇಷತ್ವವಾಗಿರುವ ) ನಮ್ಮ ಸ್ವರೂಪವನ್ನು ಚಿಗುರುವಂತೆ ಮಾಡುವುದು; ಆನಂತರ ಭಗವಾನ್/ ಭಾಗವತರಲ್ಲಿ ಅನನ್ಯಶರಣತ್ವವನ್ನು ಅರಿತು ಪುಷ್ಪಿತವನ್ನಾಗಿ ಮಾಡಿ ಭಗವದ್-ಭಾಗವತ-ಕೈಂಕರ್ಯದಲ್ಲಿ ನಿರತರನ್ನಾಕ್ಕಿ ಫಲವನ್ನು ಉಂಟುಮಾಡಿವುದು.

ಅನುವಾದಕರ ಟಿಪ್ಪಣಿ: ಮೆಲಿನ ಭಾಗದಲ್ಲಿ ಶ್ರೀವಚನ ಭೂಷಣ ದಿವ್ಯಶಾಸ್ತ್ರದಿಂದ ಆರಿಸಲ್ಪಟ್ಟ ಸೂತ್ರಗಳ ಸರಳ ಅನುವಾದ ನೀಡಲಾಗಿದೆ, ಆದರೆ ಹಲವಾರು ಸೂತ್ರಗಳ ಪೂರ್ಣ ಹಾಗು ವಿಶೇಷ ಅರ್ಥಗಳು ಆಚಾರ್ಯಮುಖೇನ ಶ್ರೋತವ್ಯವಾಗಿವೆ.
ಪೆರಿಯವಾಚ್ಚಾನ್ ಪಿಳ್ಳೈ, “ಸಹಿಸುವವನು ಆಚಾರ್ಯನಲ್ಲ, ಸಾಂಸಾರಿಕ ಭೋಗಗಳನ್ನು ಸ್ವೀಕರಿಸುವವನು ಆಚಾರ್ಯನಲ್ಲ, ಯಾರು (ಶಿಷ್ಯನ ಹಿತಕ್ಕಾಗಿ) ಉಪದೇಶಿಸಿ ಶಿಷ್ಯನನ್ನು ನಿಯಂತ್ರಿಸುವವನೇ ನಿಜವಾದ ಆಚಾರ್ಯನು.” ### ಅಂತಹ ಆಚಾರ್ಯನು ಸಂಸಾರಿಕ ವಿಷಯಗಳನ್ನೇ ವಿವರಿಸುವರು. ಆಚಾರ್ಯನಿಗೆ ಜೀವಾತ್ಮನ ಉದ್ಧಾರೆವೇ ಲಕ್ಷ್ಯ. ಸಂಸಾರ ಸಾಗರದಲ್ಲಿ ತಾನೆ ಮುಳುಗುವವನು ಆಚಾರ್ಯನಲ್ಲ ಆದರೆ ಯಾರು ಭಗವದ್-ಜ್ಞಾನದ (ಹಾಗು ಅನುಷ್ಠಾನದ) ಪೂರ್ಣತೆಯಿಂದ ತಾನು ಸುರಾಕ್ಷಿತನಾಗಿ ಇತರರ ರಕ್ಷಣೆಗೂ ಸಹಾಯಿಸುವನು. ಶಿಷ್ಯನಿಗೆ ಆಚಾರ್ಯನ ದಿವ್ಯರೂಪದ ಧ್ಯಾನವೇ ಸಾಕು- ತಾನು ಆಚಾರ್ಯನಿಂದ ಜ್ಞಾನ-ಉಪದೇಶಗಳು ಪಡೆಯುವುದೂ ಅಗತ್ಯವಿಲ್ಲ. ಹೇಗೆ ಗರುಡ ಮಂತ್ರದ ಧ್ಯಾನವು ಸರ್ಪದ ವಿಷವನ್ನು ನಿವಾರಿಸುವುದೋ, ಹಾಗೆಯೆ ಆಚಾರ್ಯನ ರೂಪವು ಸಂಸಾರವಿಷವನ್ನು ನಿವಾರಿಸುವುದು. ಆಚಾರ್ಯನು ಮಾನ್ಯನು, ಸಾಂಸಾರಿಕ ಧನ, ಕಾಮಾದಿಗಳಲ್ಲಿ ಸಂಗವಿಲ್ಲದೆ ಹಾಗು ಶಿಷ್ಯನ ಜ್ಞಾನವನ್ನು ವೃದ್ಧಿಸಬೇಕು.

ಅಡಿಯೇನ್ ಆಳವಂದಾರ್ ರಾಮಾನುಜ ದಾಸನ್

ಮೂಲ : https://granthams.koyil.org/2013/06/anthimopaya-nishtai-2/

ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org

Leave a Comment