ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ
ಶ್ರೀಮನ್ನಾರಾಯಣನು ಆಯ್ದ ಕೆಲವು ಜೀವಾತ್ಮಗಳಿಗೆ ದೋಷವಿಲ್ಲದ ದಿವ್ಯಜ್ಞಾನವನ್ನು, ಪರಿಪೂರ್ಣ ಭಕ್ತಿಯನ್ನು ಅನುಗ್ರಹಿ, ಅವರನ್ನು ಆಳ್ವಾರರುಗಳನ್ನಾಗಿ ಸೃಷ್ಠಿಸಿದನು. ಆಳ್ವಾರರು ಶ್ರೀಮನ್ನಾರಾಯಣನನ್ನು ಕೊಂಡಾಡಿ ಸ್ತುತಿಸುವ ಅನೇಕ ಪದ್ಯಗಳನ್ನು (ಪಾಶುರಮ್) ರಚಿಸಿದ್ದಾರೆ. ಈ ಪದ್ಯಗಳು ಸುಮಾರು ೪೦೦೦ ಶ್ಲೋಕಗಳವರೆಗೆ ಒಟ್ಟುಗೂಡುತ್ತವೆ ಆದ್ದರಿಂದ ಅವುಗಳನ್ನು ೪೦೦೦ ದಿವ್ಯ ಪ್ರಬಂಧ ಎಂದು ಕರೆಯಲಾಗುತ್ತದೆ. ದಿವ್ಯ ಎಂದರೆ ದೈವಿಕ, ಅತಿಮಾನುಷ ಮತ್ತು ಪ್ರಬಂಧ ಎಂದರೆ ಸಾಹಿತ್ಯ (ಭಗವಂತನನ್ನೇ ಸೆರೆಹಿಡಿಯುವಂಥದ್ದು, ಅವನ ಭಕ್ತಿಯಲ್ಲಿ ಪೂರ್ಣವಾಗಿ ಮುಳುಗಿ ಅನುಭವಿಸಿದ ದಿವ್ಯಾನುಭವಗಳನ್ನು ಒಳಗೊಂಡದ್ದು). ಆಳ್ವಾರರು ತಮ್ಮ ಪದ್ಯಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ (ಸ್ಥಳಗಳು) ಅರ್ಚಾರೂಪದಲ್ಲಿರುವ ಭಗವಂತನನ್ನು ವೈಭವೀಕರಿಸಿದ್ದಾರೆ. ಆ ಕ್ಷೇತ್ರಗಳು ದಿವ್ಯದೇಶಗಳೆಂದು (ಪವಿತ್ರ ಸ್ಥಳಗಳು) ಪ್ರಸಿದ್ಧವಾದವು. ದಿವ್ಯದೇಶಗಳು ಒಟ್ಟು ೧೦೮ ಇವೆ. ಅವುಗಳಲ್ಲಿ ೧೦೬, ಭರತ ದೇಶದ (ನೇಪಾಳ ಸೇರಿದಂತೆ) ವಿವಿಧ ಪ್ರದೇಶಗಳಲ್ಲಿ ಅಸ್ತಿತ್ವದಲ್ಲಿವೆ. ಕ್ಷೀರಾಬ್ಧಿ (ಕ್ಷೀರಸಾಗರ) ಭೌತಿಕ ಕ್ಷೇತ್ರದಲ್ಲಿ (ಪ್ರಾಕೃತ ಜಗತ್ತು) ನೆಲೆಗೊಂಡಿದ್ದರೂ, ನಮಗೆ ತಲುಪಲು ತುಂಬಾ ದೂರದಲ್ಲಿದೆ. ಪರಮಪದವು ವಿಮೋಚನೆಯ (ಮುಕ್ತಿ, ಮೋಕ್ಷ) ನಂತರ ತಲುಪುವ ಆಧ್ಯಾತ್ಮಿಕ ಕ್ಷೇತ್ರವಾಗಿದೆ. ಶ್ರೀರಂಗವನ್ನು ಪ್ರಧಾನ ದಿವ್ಯದೇಶವೆಂದು ಪರಿಗಣಿಸಲಾಗಿದೆ ಮತ್ತು ತಿರುಮಲ, ಕಾಂಚಿಪುರಂ, ತಿರುವಳ್ಳಿಕ್ಕೇಣಿ, ಆಳ್ವಾರ್ ತಿರುನಗರಿ ಇತ್ಯಾದಿ, ಕೆಲವು ಪ್ರಮುಖ ದಿವ್ಯದೇಶವೆಂದು. ಭಗವಂತನು ಐದು ನೆಲೆಗಳನ್ನು (ರೂಪಗಳನ್ನು) ಹೊಂದಿದ್ದಾನೆ – ಪರವಾಸುದೇವ ಮೂರ್ತಿಯಾಗಿ ಪರಮಪದದಲ್ಲಿ, ವ್ಯೂಹಮೂರ್ತಿಯಾಗಿ ಕ್ಷೀರಾಬ್ದಿಯಲ್ಲಿ, ಅಂತರ್ಯಾಮಿಯಾಗಿ (ಸಕಲ ಚೇತನರ ಒಳಗೆ ವಾಸಿಸುವ), ವಿಭವಮೂರ್ತಿಯಾಗಿ (ಶ್ರೀ ರಾಮ ಕೃಷ್ಣಾದಿ ಅವತಾರಗಳು) , ಅರ್ಚಾರೂಪಿಯಾಗಿ. ಇವುಗಳಲ್ಲಿ ಅರ್ಚಾವತಾರವೇ ಉದಾತ್ತವಾದ, ಪರಿಪೂರ್ಣವಾದ ನೆಲೆಯಾಗಿದೆ. ಇದು ಸಕಲ ಚೇತನರೂ ಸದಾಕಾಲವೂ ಭಗವಂತನನ್ನು ಅನುಭವಿಸಲು ಸುಲಭಸಾಧ್ಯವಾದ ನೆಲೆಯಾಗಿದೆ. ನಮ್ಮ ಪೂರ್ವಾಚಾರ್ಯರು ಧಿವ್ಯಾಧೇಶಗಳನ್ನು ತಮ್ಮ ಜೀವನವನ್ನಾಗಿ ಮಾಡಿಕೊಂಡಿದ್ದರು ಮತ್ತು ಅಂತಹ ದಿವ್ಯದೇಶಗಳಲ್ಲಿ ಭಗವಾನ್ ಮತ್ತು ಭಾಗವತರ ಸೇವೆಯಲ್ಲಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಹೆಚ್ಚಿನ ಮಾಹಿತಿಗಾಗಿ https://koyil.org ಗೆ ಭೇಟಿ ಕೊಡಿ.
ದಿವ್ಯ ಪ್ರಬಂದವು ವೇದ/ವೇದಾಂತದ ಸಾರವನ್ನು ಸರಳ ಮತ್ತು ಪರಿಶುದ್ಧವಾದ ತಮಿಳು ಭಾಷೆಯಲ್ಲಿ ಒಳಗೊಂದು ದಿವ್ಯಸೂಕ್ತಿಯಾಗಿ ಹೊರಹೊಮ್ಮಿದೆ. ಈ ದಿವ್ಯ ಪ್ರಬಂಧಗಳ ಸಂಪೂರ್ಣ ಉದ್ದೇಶವು ಜೀವಾತ್ಮರ ಅಜ್ಞಾನವನ್ನು ಸಂಪೂರ್ಣವಾಗಿ ಕಳೆದು, ಭಕ್ತಿರೂಪಾಪನ್ನವಾದ ಜ್ಞಾನವನ್ನು ನೀಡಿ ಉನ್ನತಿಯನ್ನು ನೀಡುವುದೇ ಆಗಿದೆ. ಆಳ್ವಾರರ ಕಾಲದ ನೂರಾರು ವರ್ಷಗಳ ನಂತರ, ನಾಥಮುನಿಗಳಿಂದ ಪ್ರಾರಂಭವಾಗಿ ಅನೇಕ ಆಚಾರ್ಯರು, ಶ್ರೀ ರಾಮಾನುಜರನ್ನು ಕೇಂದ್ರೀಕರಿಸಿ ಮಾಮುನಿಗಳವರೆಗೆ ಕಾಣಿಸಿಕೊಂಡು ಆಳ್ವಾರರ ದಿವ್ಯ ಸಂದೇಶವನ್ನು ಸಾರಿದರು. ಮಂದಬುದ್ಧಿಯುಳ್ಳ ಜನರು ಆಳ್ವಾರರ ಪದ್ಯಗಳನ್ನು ಸರಳವಾದ ತಮಿಳು ಹಾಡುಗಳೆಂದು ಪರಿಗಣಿಸಿದರೂ, ಅಪರಿಮಿತ ಜ್ಞಾನವುಳ್ಳ ಆಚಾರ್ಯರು ಈ ಪದ್ಯಗಳು ಸರ್ವ ಶಾಸ್ತ್ರಾರ್ಥ ಸಾರತಮವಾದ, ಪರಮತಾತ್ಪರ್ಯವನ್ನು ನಿರೂಪಿಸುವ, ಶ್ರೀಮಾನ್ ನಾರಾಯಣನೇ ಸಾಧನ (ಈ ಭೌತಿಕ ಪ್ರಪಂಚದಿಂದ ಜೀವಾತ್ಮರನ್ನು ಮೇಲಕ್ಕೆತ್ತಲು) ಮತ್ತು ಗುರಿ (ಪರಮಪದದಲ್ಲಿ – ಆಧ್ಯಾತ್ಮಿಕ ಜಗತ್ತಿನಲ್ಲಿ ಶ್ರೀಮಾನ್ ನಾರಾಯಣನಿಗೆ ಶಾಶ್ವತ ಸೇವೆಯ ನಿಜವಾದ ಸ್ವರೂಪದಲ್ಲಿ ನೆಲೆಗೊಳ್ಳಲು) ಎಂದು ಸ್ಥಾಪಿಸಿದರು. ನಮ್ಮ ಪೂರ್ವಾಚಾರ್ಯರು ದಿವ್ಯ ಪ್ರಬಂಧಗಳನ್ನು ಸಂಪೂರ್ಣವಾಗಿ ಆಸ್ವಾದಿಸಿದರು ಮತ್ತು ಅವರ ಸಮಗ್ರ ಜೀವನವನ್ನು ದಿವ್ಯಪ್ರಬಂದದ ಕಲಿಕೆ, ಕಲಿಸುವುದು ಮತ್ತು ಈ ದಿವ್ಯ ವಾಕ್ಯಗಳಿಗನುಸಾರವಾಗಿ ತಮ್ಮನ್ನು ತೊಡಗಿಸಿಕೊಳ್ಳುವುದರಲ್ಲಿ ಮುಡಿಪಾಗಿಟ್ಟಿದ್ದರು.
ಪ್ರಬಂದ | ಲೆಖಕರು | ಪಾಶುರಗಳ ಎಣಿಕೆ |
ಮೊದಲನೇ ಸಾವಿರ (ಮುದಲಾಯಿರಂ)
ತಿರುಪ್ಪಲ್ಲಾಂಡು | ಪೆರಿಯಾಳ್ವಾರ್ | ೧೨ |
ಪೆರಿಯಾಳ್ವಾರ್ | ತಿರುಮೊಳಿ | ೪೬೧ |
ತಿರುಪ್ಪಾವೈ | ಆಂಡಾಳ್ | ೩೦ |
ನಾಚ್ಚಿಯಾರ್ ತಿರುಮೊಳಿ | ಆಂಡಾಳ್ | ೧೪೩ |
ಕಣ್ಣಿನುನ್ ಚಿರುತ್ತಾಮ್ಬು | ಮಧುರಕವಿ ಆಳ್ವಾರ್ | ೧೧ |
ಪೆರುಮಾಳ್ ತಿರುಮೊಳಿ | ಕುಲಶೇಖರ ಆಳ್ವಾರ್ | ೧೦೫ |
ತಿರುಚ್ಚಂದ ವಿರುತ್ತಮ್ | ತಿರುಮಳಿಸೈಪ್ಪಿರಾನ್ | ೧೨೦ |
ತಿರುಮಾಲೈ | ತೊಂಡರಡಿಪ್ಪೊಡಿ ಆಳ್ವಾರ್ | ೪೫ |
ತಿರುಪ್ಪಳ್ಳಿಯೆಳುಚ್ಚಿ | ತೊಂಡರಡಿಪ್ಪೊಡಿ ಆಳ್ವಾರ್ | ೧೦ |
ಅಮಲನಾದಿಪಿರಾನ್ | ತಿರುಪ್ಪಾಣ್ ಆಳ್ವಾರ್ | ೧೦ |
ಎರಡನೇ ಸಾವಿರ (ಇರಂಡಾಮ್ ಆಯಿರಂ)
ಪೆರಿಯ ತಿರುಮೊಳಿ | ತಿರುಮಂಗೈ ಆಳ್ವಾರ್ | ೧೦೮೪ |
ತಿರುಕ್ಕುರುಂತಾಂಡಗಮ್ | ತಿರುಮಂಗೈ ಆಳ್ವಾರ್ | ೨೦ |
ತಿರುನೆಡುಂತಾಂಡಗಮ್ | ತಿರುಮಂಗೈ ಆಳ್ವಾರ್ | ೩೦ |
ಇಯರ್ಪಾ
ಮುದಲ್ ತಿರುವಂದಾದಿ | ಪೊಯ್ಗೈ ಆಳ್ವಾರ್ | ೧೦೦ |
ಇರಂಡಾಮ್ ತಿರುವಂದಾದಿ | ಬೂತತ್ತಾಳ್ವಾರ್ | ೧೦೦ |
ಮೂನ್ರಾಮ್ ತಿರುವಂದಾದಿ | ಪೇಯ್ ಆಳ್ವಾರ್ | ೧೦೦ |
ನಾನ್ಮುಗಂ ತಿರುವಂದಾದಿ | ತಿರುಮಳಿಸೈ ಆಳ್ವಾರ್ | ೯೬ |
ತಿರುವಿರುತ್ತಮ್ | ನಮ್ಮಾಳ್ವಾರ್ | ೧೦೦ |
ತಿರುವಾಸಿರಿಯಮ್ | ನಮ್ಮಾಳ್ವಾರ್ | ೭ |
ಪೆರಿಯ ತಿರುವಂದಾದಿ | ನಮ್ಮಾಳ್ವಾರ್ | ೮೭ |
ತಿರುವೆಳುಕೂಟ್ರಿರುಕೈ | ತಿರುಮಂಗೈ ಆಳ್ವಾರ್ | ೧ |
ಸಿರಿಯ ತಿರುಮಡಲ್ | ತಿರುಮಂಗೈ ಆಳ್ವಾರ್ | ೧ |
ಪೆರಿಯ ತಿರುಮಡಲ್ | ತಿರುಮಂಗೈ ಆಳ್ವಾರ್ | ೧ |
ರಾಮಾನುಜ ನೂತ್ತಂದಾದಿ | ತಿರುವರಂಗತ್ತುಅಮುದನಾರ್ | ೧೦೮ |
ನಾಲ್ಕನೇ ಸಾವಿರ (ನಾಂಗಾಮ್ ಆಯಿರಂ)
ತಿರುವಾಯ್ಮೊಳಿ | ನಮ್ಮಾಳ್ವಾರ್ | ೧೧೦೨ |
ಅಡಿಯೇನ್ ಗೋದಾ ರಾಮಾನುಜ ದಾಸಿ
ಮೂಲ : https://granthams.koyil.org/2023/05/18/4000-dhivyaprabandham-english/
ಆರ್ಕೈವ್ ಮಾಡಲಾಗಿದೆ – https://granthams.koyil.org
ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org