ಆಳ್ವಾರ್ ತಿರುನಗರಿಯ ವೈಭವ – ನಮ್ಮಾಳ್ವಾರ್ ಇತಿಹಾಸ ಹಾಗು ವೈಭವ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲಮಹಾಮುನಯೇ ನಮಃ

ಆಳ್ವಾರ್ ತಿರುನಗರಿಯ ವೈಭವ

<< ಹಿಂದಿನ ಲೇಖನವನ್ನು

ನಮ್ಮಾಳ್ವರರ ಅವತಾರದ ನಂತರ, ತಿರುಕ್ಕುರುಗೂರ್  ಆದಿಕ್ಷೇತ್ರವೆಂದು ಕರೆಯಲ್ಪಡುವ ಈ ದಿವ್ಯ ಕ್ಷೇತ್ರವು ಆಳ್ವಾರ್ ತಿರುನಗರಿ ಎಂದು ಪ್ರಸಿದ್ಧವಾಯಿತು. ಈಗ ನಾವು ನಮ್ಮಾಳ್ವಾರ್ ಅವರ ಚರಿತ್ರೆ ಮತ್ತು ಮಹಿಮೆಯನ್ನು ಆನಂದಿಸೋಣ.

ಭಗವಂತನು ಸಂಸಾರದಲ್ಲಿರುವ ಆತ್ಮಾಗಳನ್ನು ತನ್ನ ದಿವ್ಯಧಾಮವಾದ ಶ್ರೀವೈಕುಂಠವನ್ನು(ಭಗವಂತನ ನಿವಾಸ ಸ್ಥಾನ, ಇಲ್ಲಿಂದ ಆತ್ಮಾಗಳು ಸಂಸಾರಕ್ಕೆ ಮರಳುವುದಿಲ್ಲ) ಸೇರುವಂತೆ ಮಾಡಲು ಹಲವಾರು ಲೀಲೆಗಳನ್ನು ಮಾಡುತ್ತಾನೆ. ಭಗವಂತನು ಪ್ರಳಯ ಕಾಲದಲ್ಲಿ ನಾಶವಾದ ಜಗತ್ತನ್ನು ಮರುಸೃಷ್ಟಿಸಿ , ಆತ್ಮಾಗಳಿಗೆ ದೇಹ ಮತ್ತು ಇಂದ್ರಿಯಗಳನ್ನು ನೀಡುವುದು, ಅವರಿಗೆ ಶಾಸ್ತ್ರಗಳನ್ನು (ಧರ್ಮಗ್ರಂಥಗಳು) ನೀಡುವುದು, ಋಷಿಗಳ ಮೂಲಕ ಶಾಸ್ತ್ರಾರ್ಥಗಳನ್ನು ವಿವರಿಸುವುದು, ಸಂಸಾರಕ್ಕೆ ಒಳಗಾದ ಆತ್ಮಾಗಳನ್ನು ಉದ್ಧರಿಸಲು ವಿವಿಧ ರೂಪಗಳಲ್ಲಿ ಅವತಾರ ತಾಳುವುದು ಮುಂತಾದ ಲೀಲೆಗಳನ್ನು ಈತನು ಮಾಡುತ್ತಾನೆ. ಆದರೆ ಚೇತನರು ಆ ಭಗವಂತನನ್ನು ನಿರ್ಲಕ್ಷ್ಯಿಸಿದರು. ಆಗ ಸರ್ವೇಶ್ವರನು ಈ ಸಂಸಾರಿ ಚೇತನರನ್ನು ಹಿಡಿಯುವ ಬಗೆ ಏನೆಂದು ಚಿಂತಿಸಿದನು.ಒಬ್ಬ ಬೇಟೆಗಾರನು ಜಿಂಕೆಯನ್ನು ಬಳಸಿ ಮತ್ತೊಂದು ಜಿಂಕೆಯನ್ನು ಬಲೆಗೆ ಹಾಕುವಂತೆ,ಸಂಸಾರಿಗಳನ್ನು ಕೊಂಡೇ ಸಂಸಾರಿಗಳನ್ನು  ಉದ್ಧರಿಸಬೇಕೆಂದು ಕೆಲವು ಸಂಸಾರಿ ಚೇತನರನ್ನು ಆಯ್ಕೆ ಮಾಡಿ,ಅವರಿಗೆ ತನ್ನ ನಿರ್ಹೇತುಕ ಕೃಪೆಯಿಂದ ಭಕ್ತಿರೂಪಾಪನ್ನವಾದ ಜ್ಞಾನವನ್ನು ದಯಪಾಲಿಸಲು.ಇಂತಹ ಭಕ್ತಿರೂಪಾಪನ್ನವಾದ ಜ್ಞಾನವನ್ನು ಪಡೆದವರೇ “ಆಳ್ವಾರ್‌ಗಳು“.ಹೀಗಾಗಿ, ಆಳ್ವಾರ್‌ಗಳಿಗೆ (ಈಗ ಉಲ್ಲೇಖಿಸಿದ ಕೆಲವು ಆಯ್ದ ಆತ್ಮಾಗಳು) ಭಕ್ತಿಯನ್ನೂ ಜ್ಞಾನವನ್ನೂ, ಯಾವುದೇ ಒಂದಿಂಚಿನ ಅಜ್ಞಾನದ ಕುರುಹು ಇಲ್ಲದಂತೆ ನೀಡಲಾಯಿತು. ಎಮ್ಬೆರುಮಾನ್ ಈ ಆಳ್ವಾರ್‌ಗಳಿಗೆ ದಿವ್ಯ ಪಾಶುರಗಳನ್ನು (ದ್ರಾವಿಡ ವೇದಗಳು) ರಚಿಸುವಂತೆ ಮಾಡಿದನು ಮತ್ತು ಅವುಗಳ ಮೂಲಕ ಜಗತ್ತಿನ ಎಲ್ಲಾ ಚೇತನರಿಗೆ ಜ್ಞಾನವನ್ನು ಸೃಷ್ಟಿಸಿ, ಅವರು ಮೋಕ್ಷವನ್ನು (ಶ್ರೀ ವೈಕುಂಠ) ಪಡೆಯಲು ಸಹಾಯ ಮಾಡಬೇಕೆಂದು ಬಯಸಿದನು.

ಅಂತಹ ಆಳ್ವಾರ್ ‌ಗಳಲ್ಲಿ ನಮ್ಮಾಳ್ವಾರ್‌ರನ್ನು ಮುಖ್ಯಸ್ಥರು ಎಂದು ಪರಿಗಣಿಸಲಾಗುತ್ತದೆ. ಮಾರನ್, ಮಗಿಳ್ಮಾರನ್, ಶಠಕೋಪನ್, ನಾವೀರನ್, ಪರಾಂಕುಶನ್, ವಕುಳಾಭರಣನ್, ಶಠಜಿತ್, ಕುರುಗೂರ್ ನಂಬಿ ಮುಂತಾದ ದಿವ್ಯನಾಮಗಳಿಂದ ನಮ್ಮಾಳ್ವರರು ಕರೆಯಲ್ಪಡುತ್ತಾರೆ.

ಕಲಿಯುಗದ ಆರಂಭದ ಕೆಲವು ದಿನಗಳ ನಂತರ, ಅವರು ಕಾರಿಯಾರ್ ಮತ್ತು ಉಡಯನಂಗೈ ಅವರ ಮಗನಾಗಿ, ಅಳ್ವಾರ್ ತಿರುನಗರಿಯ ಬಳಿ ಇರುವ ಅಪ್ಪನ್ ಕೋಯಿಲ್ ಎಂಬ ಸ್ಥಳದಲ್ಲಿ, ವೈಶಾಖ ತಿಂಗಳಿನಲ್ಲಿ, ವಿಶಾಖ ತಿರುನಕ್ಷತ್ರದಲ್ಲಿ ಅವತರಿಸಿದರು. ಕಾರಿಯಾರ್ ಮತ್ತು ಉಡಯನಂಗೈಯರ ಕುಟುಂಬಗಳು ತಲೆಮಾರುಗಳಿಂದ ತಿರುಮಾಲ್ ( ಭಗವಂತನು ಶ್ರೀ ಮಹಾಲಕ್ಷ್ಮಿದೇವಿಯ  ಭರ್ತಾ ಎಂದು ಸೂಚಿಸುವ ಪದ) ಭಕ್ತರಾಗಿದ್ದರು. ಮಗುವನ್ನು ಪಡೆಯಲು ವರವನ್ನು ಕೋರಿ, ಕಾರಿಯಾರ್ ಮತ್ತು ಉಡಯನಂಗೈ ತಿರುಕ್ಕುರುಂಗುಡಿ ನಂಬಿ (ತಿರುಕ್ಕುರುಂಗುಡಿಯಲ್ಲಿರುವ ಎಂಪೆರುಮಾನ್) ಗೆ ಹೋಗಿ ಪೂಜಿಸಿದರು. ಭಗವಂತನೇ ತಮ್ಮ ಮಗನಾಗಿ ಜನ್ಮ ತಾಳುತ್ತೇನೆ ಎಂದು ಅವರಿಗೆ ತಿಳಿಸಿದನು. ಇದನ್ನು ಗುರುಪರಂಪರೆ ಗ್ರಂಥದಲ್ಲಿ (ಆಳ್ವಾರ್‌ಗಳು ಮತ್ತು ಆಚಾರ್ಯರ ಐತಿಹಾಸಿಕ ಚರಿತ್ರೆಯನ್ನು ನೀಡುವ ಗ್ರಂಥ) ನಾವು ಓದಿದ್ದೇವೆ.ಇದರ ಜೊತೆಗೆ ಅವರ ಅಸಾಧಾರಣ ಮಹತ್ವದಿಂದಾಗಿ, ಆಚಾರ್ಯರು ನಮ್ಮಾಳ್ವಾರ್ ಎಮ್ಬೆರುಮಾನನ ಅವತಾರವೋ ಅಥವಾ ನಿತ್ಯಸುರಿಗಳಲ್ಲಿ ಒಬ್ಬರೋ ಎಂದು ಆಶ್ಚರ್ಯಪಡುತ್ತಿದ್ದರು.

ಸಾಮಾನ್ಯವಾಗಿ ಶಿಶುವು ತಾಯಿಯ ಗರ್ಭದಲ್ಲಿರುವಾಗ ಪರಿಪೂರ್ಣ ಜ್ಞಾನಾನಂದದಿಂದ ಕೂಡಿ ಮತ್ತೆ ಗರ್ಭವಾಸವಾಯಿತಲ್ಲಾ ಎಂದು ಪರಿತಪಿಸುತ್ತದೆ.ಆ ಮಗುವು ಜನಿಸುವ ಕಾಲದಲ್ಲಿ ಶಠವೆಂಬ ವಾಯುವಿಶೇಷವು ಮಗುವಿನ ಮೇಲೆ ಬೀಸಿ ಅದರ ಜ್ಞಾನವನ್ನು ಅಳಿಸಿಹಾಕುವುದು.ಎಲ್ಲವನ್ನೂ ಸಾಕ್ಷಾತ್ಕಾರ ಮಾಡಿಕೊಂಡ ಮಗುವಿಗೆ ಅಜ್ಞಾನದ ಕಗ್ಗತ್ತಲು ಮೂಡಿ ಅದು ಅಳತೊಡಗುತ್ತದೆ. ಆದರೆ ಆಳ್ವಾರ್ ಅವತರಿಸುವ ಕಾಲದಲ್ಲಿ, ಅಜ್ಞಾನವನ್ನು ಮೂಡಿಸುವ ಶಠವೆಂಬ ವಾಯು ಇವರಮೇಲೂ ಆವಿರ್ಭವಿಸಲು ಹುಂಕಾರದಿಂದ ಹೋಡೆದೋಡಿಸಿದರು.ಆದ್ದರಿಂದ ಇವರಿಗೆ ಶಠಕೋಪನ್  ಎಂದೂ ಹೆಸರಾಯಿತು.

ಇವರು ಇತರ ಮಕ್ಕಳಂತೆ ಜನಿಸಿದ ಕೂಡಲೇ, ನಮ್ಮಾಳ್ವಾರ್ ಅಳಲು ಅಥವಾ ಹಾಲು ಕುಡಿಯಲು ಪ್ರಯತ್ನಿಸಲಿಲ್ಲ. ಅವರ ಪೋಷಕರು ಅವರನ್ನು ತಿರುಕುರುಗೂರ್ ಆದಿನಾಥರ್ ದೇವಾಲಯದಲ್ಲಿರುವ ಎಮ್ಬೆರುಮಾನಿಗೆ ಸಮರ್ಪಿಸಿ, ಭಗವಂತನಿಗಾಗಿ ಮಾತ್ರ ಇರಬೇಕೆಂದು ನಿರ್ಧರಿಸಿ, ತಿರುಪ್ಪುಳಿ ಆಳ್ವಾರ್ ಎಂದು ಕರೆಯಲ್ಪಡುವ ಹುಣಸೆ ಮರದ ಕೆಳಗೆ ಬಿಟ್ಟು ಹೋದರು.ಅವರು ಇದೇ ಮರದ ಪೊಟರೆಯಲ್ಲಿ ತದೇಕಮಗ್ನರಾಗಿ ಯೋಗದೆಶೆಯಲ್ಲಿ ಅನ್ನಾಹಾರವಿಲ್ಲದೆ 16 ವರ್ಷಗಳ ಕಾಲ ಭಗವಂತನ ಧ್ಯಾನ ಮಾಡುತ್ತಾ, ತೇಜಸ್ವಿಯಾಗಿ ಕಂಗೊಳಿಸಿದರು.

ವಿಶೇಷ ಸೂಚನೆ : ಮಧುರ ಕವಿ ಆಳ್ವಾರರು ನಮ್ಮಾಳ್ವರರಿಗಿಂತ ಮೊದಲು ಅವತರಿಸಿದರು,ಇವರು ಆಳ್ವಾರ್ ತಿರುನಗರಿಯ ಬಳಿ ಇರುವ ತಿರುಕ್ಕೋಲುರಿನಲ್ಲಿ ಜನಿಸಿದರು.

ಆ ಸಮಯದಯಲ್ಲಿ, ಬ್ರಾಹ್ಮಣೋತ್ತಮರಾದ ಮಧುರಕವಿ ಆಳ್ವಾರ್, ಉತ್ತರ ಭಾರತದ ತೀರ್ಥಯಾತ್ರೆಗೆ ಹೋಗಿದ್ದರು. ದೈವ ಕೃಪೆಯಿಂದ, ಅವರು ದಕ್ಷಿಣಾಕಾಶದಲ್ಲಿ ಕಾಂತಿಯನ್ನು ಕಂಡು, ಅದನ್ನು ಹಿಂಬಾಲಿಸಿ, ಕಾಂತಿಯಿಂದ ಕೂಡಿದ ತಿರುಪ್ಪುಳಿ ಆಳ್ವಾರ್ ಕೆಳಗೆ ಕುಳಿತಿದ್ದ ನಮ್ಮಾಳ್ವಾರವರನ್ನು ಕಂಡರು. ಆಗ ಮಧುರಕವಿ ಆಳ್ವಾರರು ಒಂದು ಪುಟ್ಟ ಕಲ್ಲನ್ನು ಆಳ್ವಾರರ ಮುಂದೆ ಎಸೆಯಲು, ಆಳ್ವಾರರು ಕಣ್ಣುಗಳನ್ನು ತೆರೆದು ಕಟಾಕ್ಷಿಸಿದರು. ಇವರ ಜ್ಞಾನ ಸಂಪನ್ನತೆಯನ್ನು ಅರಿಯಲು “ಶೆತ್ತತಿನ್ ವಯಿತ್ತಿಲ್ ಶಿರಿಯದು ಪಿರನ್ದಾಲ್, ಎತ್ತೈತಿನ್ರು ಎಂಗೇ ಕಿಡುಕ್ಕುಮ್”,ಎಂದು ಪ್ರಶ್ನಿಸಲು “ಅತ್ತೂರಿನ ಅಂಗೇ ಕಿಡುಕ್ಕುಮ್” ಎಂಬ ಉತ್ತರದಿಂದ ಪುಳಕಿತರಾಗಿ ಇವರು ಸಾಮಾನ್ಯ ವ್ಯಕ್ತಿಯಗಳಲ್ಲ,  ಸರ್ವಜ್ಞರೆಂದೇ ನಿಶ್ಚಯಿಸಿ ಸಾಷ್ಟಾಂಗಪ್ರಣಾಮ ಪೂರ್ವಕವಾಗಿ ತಮ್ಮನ್ನು ಶಿಷ್ಯನಾಗಿ ಅಂಗೀಕರಿಸಿಮಬೇಕೆಂದು ಪ್ರಾರ್ಥಿಸಿದರು. ನಮ್ಮಾಳ್ವಾರರು ಈ ಕೆಳಗಿನ ನಾಲ್ಕು ಪ್ರಬಂಧಗಳನ್ನು ಪಠಿಸಿದಂತೆ, ಮಧುರಕವಿ ಆಳ್ವಾರ್ ತಾಳೆ ಎಲೆಯ ಮೇಲೆ ಅವುಗಳ ಪ್ರತಿಗಳನ್ನು ಮಾಡಿದರು:  

  1. ತಿರುವಿರುತ್ತಮ್- ಋಗ್ವೇದ ಸಾರ
  2. ತಿರುವಾಶಿರಿಯಮ್- ಯಜುರ್ವೇದ ಸಾರ
  3. ಪೆರಿಯ ತಿರುವನ್ದಾದಿ-ಅಥರ್ವಣ ವೇದ ಸಾರ
  4. ತಿರುವಾಯ್ಮೊಳಿ-ಸಾಮವೇದ ಸಾರ.

ನಮ್ಮಾಳ್ವಾರರ ಈ ನಾಲ್ಕು ಪ್ರಬಂಧಗಳು ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವಣ ವೇದಗಳಿಗೆ ಸಮಾನವಾಗಿವೆ. ಇದೇ ಕಾರಣದಿಂದ ಅವರನ್ನು “ವೇದಂ ತಮಿಳ್ ಸೇಯ್ದ ಮಾರನ್” ಎಂದು ಕರೆಯುತ್ತಾರೆ (ಕರುಣಾಮಯರಾದ ಆಳ್ವಾರರು ಸಂಸ್ಕೃತ ವೇದಗಳ ಅರ್ಥವನ್ನು ತಮಿಳಿನಲ್ಲಿ ರಚಿಸಿದರು). ಇತರ ಆಳ್ವಾರ್‌ಗಳ ಪ್ರಬಂಧಗಳು ಕೇವಲ ವೇದಗಳ ಪರಿಶಿಷ್ಟಗಳು. ನಾಲ್ಕು ಸಾವಿರ ದಿವ್ಯ ಪ್ರಬಂಧಗಳ  ಸಾರವೇ ತಿರುವಾಯ್ಮೊಳಿ ಎಂದು ಕೊಂಡಾಡಲಾಗುತ್ತದೆ. ನಮ್ಮ ಪೂರ್ವಾಚಾರ್ಯರ (ಗುರುಗಳು) ಎಲ್ಲಾ ವ್ಯಾಖ್ಯಾನಗಳು (ವಿವರಣೆಗಳು) ಮತ್ತು ರಹಸ್ಯ ಗ್ರಂಥಗಳು ತಿರುವಾಯ್ಮೊಳಿಯನ್ನೇ ಆಧಾರವಾಗಿ ಹೊಂದಿವೆ. ಈ ರೀತಿಯ ಉನ್ನತ ಶ್ರೀಸೂಕ್ತಿಗೆ (ದಿವ್ಯ ಕೃತಿ) ಐದು ವ್ಯಾಖ್ಯಾನಗಳು ಮತ್ತು ವಿವರಣಾ ಕೃತಿಗಳು ಲಭ್ಯವಿದೆ, ಇದು ಎಮ್ಬೆರುಮಾನನ ಅನುಗ್ರಹದ  ಫಲವಾಗಿದೆ.

ಆಳ್ವಾರ್ (ಇಲ್ಲಿ ಈ ಪದವು ನಿರ್ದಿಷ್ಟ ಆಳ್ವಾರ್ ಹೆಸರಿನಿಂದ ಮುಂಚಿತವಾಗಿಲ್ಲದಿದ್ದರೆ ನಮ್ಮಾಳ್ವಾರ್ ಅವರನ್ನೇ ಸೂಚಿಸುತ್ತದೆ) ಈ ಭೂಮಿಯಲ್ಲಿ ಮೂವತ್ತೆರಡು ವರ್ಷಗಳ ಕಾಲ ವಾಸಿಸಿದರು, ಸಂಸಾರದ (ಭೌತಿಕ ಲೋಕ) ಯಾವುದೇ  ಆಸಕ್ತಿ  ಇಲ್ಲದೆ ನಿರಂತರವಾಗಿ ಎಮ್ಬೆರುಮಾನನ ಮೇಲೆ ಧ್ಯಾನ ಮಾಡುತ್ತಿದ್ದರು. ಆಳ್ವಾರರು ಹುಣಸೆ ಮರದ ಕೆಳಗೆ ಕುಳಿತು ಮಂಗಳಾಶಸನಗಳನ್ನು ರಚಿಸಿದರು. ಅನಂತರ ಶ್ರೀರಂಗಾದಿ ದಿವ್ಯದೇಶಗಳ ಅರ್ಚಾಮೂರ್ತಿಗಳೂ ಇವರಿದ್ದಲ್ಲಿಗೇ ಬಿಜಯ ಮಾಡಿ ಇವರ ಮಂಗಳಾಶಸನಗಳನ್ನು ಸ್ವೀಕರಿಸಿದರು. ಅಲ್ಲದೆ, ತಮ್ಮ ದಿವ್ಯ ಕೃಪೆಯಿಂದ , ಆಳ್ವಾರ್ ತಮ್ಮ ದಿವ್ಯ ಪ್ರಬಂಧಗಳಲ್ಲಿ ಎಲ್ಲಾ ಶಾಸ್ತ್ರಗಳ ರಹಸ್ಯಾರ್ಥವನ್ನು ಸುಲಭವಾಗಿ, ವಿಸ್ತಾರವಾಗಿ ತಿಳಿಸಿದರು.ಅವರು ಅಂತಹ ಶ್ರೇಷ್ಠತೆಯನ್ನು ಹೊಂದಿರುವ ಕಾರಣ, ದಿವ್ಯ ಪ್ರಬಂಧದ ವ್ಯಾಖ್ಯಾನಗಳನ್ನು ಅನುಗ್ರಹಿಸಿದ ನಮ್ಮ ಪೂರ್ವಾಚಾರ್ಯರು ಹೇಳುತ್ತಾರೆ, ಕುರುಗೂರ್ ಎಂಬ ಹೆಸರು  ನಮ್ಮ ಕಿವಿ ಬಿದ್ದಾಗ ಅಥವಾ ತಿರುವಾಯ್ಮೋಳಿಯ ಫಲಶ್ರುತಿಯಲ್ಲಿ ಕುರುಗೂರ್ ಎಂದು ಪಠಿಸಿದಾಗ, ನಾವು ಅಂಜಲಿ ಬದ್ಧರಾಗಿ ದಕ್ಷಿಣ ದಿಕ್ಕಿನಲ್ಲಿರುವ ಆಳ್ವಾರ್ ತಿರುನಗರಿಗೆ ನಮಸ್ಕರಿಸಬೇಕು.

ಅವರ ಅವತಾರದಿಂದ ಮೂವತ್ತೆರಡು ವರ್ಷಗಳ ಕಾಲದ ನಂತರ, ಆಳ್ವಾರರು ಪರಮಪದಕ್ಕೆ(ಶ್ರೀವೈಕುಂಠ) ತೆರುಳಲು ಬಯಸಿದರು.ಇದನ್ನು ತಿಳಿದು, ಮಧುರಕವಿ ಆಳ್ವಾರ್ ತನ್ನ ಆಚಾರ್ಯ (ಗುರು) ಲೋಕವನ್ನು ತೊರೆಯಲಿದ್ದಾರೆ ಎಂದು ದುಃಖಿತರಾದರು. ನಿರಂತರವಾಗಿ ನಮ್ಮಾಳ್ವಾರ್ ಅವರನ್ನು ಪೂಜಿಸುತ್ತಿದ್ದರೂ ಸಹ, ಮಧುರಕವಿ ಆಳ್ವಾರ್ ನಮ್ಮಾಳ್ವಾರರ ಒಂದು ವಿಗ್ರಹವನ್ನು (ಮೂರ್ತಿ) ಸೃಷ್ಟಿಸಿ ತಮಗೆ ನೀಡಬೇಕೆಂದು ಪ್ರಾರ್ಥಿಸಿದರು. ನಮ್ಮಾಳ್ವಾರ್ ಮಧುರಕವಿ ಆಳ್ವಾರ್ ಅವರಿಗೆ ತಾಮ್ರಪರಣಿ ನದಿಯ ನೀರನ್ನು ಕುದಿಸಿದರೆ ಅವರಿಗೆ ವಿಗ್ರಹ ಸಿಗುತ್ತದೆ ಎಂದು ಹೇಳಿದರು.

ಮಧುರಕವಿ ಆಳ್ವಾರ್ ಅವರು ಅದನ್ನು ಅನುಸರಿಸಿ ವಿಗ್ರಹವನ್ನು ಪಡೆದರು. ವಿಗ್ರಹದ ಕೈಗಳು ಅಂಜಲಿ ಮುದ್ರೆಯಲ್ಲಿರುವುದನ್ನು ನೋಡಿ, ಮಧುರಕವಿ ಆಳ್ವಾರ್ ನಮ್ಮಾಳ್ವಾರ್ ಅವರನ್ನು “ದೇವರೀರ್ ನನ್ನ ಆಚಾರ್ಯರಾಗಿರುವುದರಿಂದ ಉಪದೇಶ ಮುದ್ರೆಯಲ್ಲಿ (ಕಲಿಸುವ ಭಂಗಿಯಲ್ಲಿ ಕೈಗಳನ್ನು ಹಿಡಿದು) ದೇವರೀರರನ್ನು ಪೂಜಿಸಲು ನಾನು ಬಯಸಿದ್ದೇನೆ. ಈ ಅಂಜಲಿ ಮುದ್ರೆಯಲ್ಲಿ ಇರಲು ಕಾರಣವೇನು?” ಎಂದು ಕೇಳಿದರು. ನಮ್ಮಾಳ್ವಾರ್ ಉತ್ತರಿಸಿ, “ಅವರು ಭವಿಷ್ಯದಾಚಾರ್ಯರು (ಭವಿಷ್ಯದಲ್ಲಿ ಗುರುವಾಗಲಿರುವವರು) ನಾಲ್ಕು ಸಾವಿರ ವರ್ಷಗಳ ನಂತರ ಅವತರಿಸುವ ಒಬ್ಬ ಮಹಾನ್ ಆಚಾರ್ಯರು” ಎಂದು ಹೇಳಿದರು. ಈ ರೀತಿ ಭಗವದ್ರಾಮಾನುಜರು ಅವತರಿಸುತ್ತಾರೆಂದು ಭವಿಷ್ಯ ನುಡಿದರು. ಈಗ ಇದೇ ವಿಗ್ರಹವನ್ನು ನಾವು ರಾಮಾನುಜ ಚತುರ್ವೇದಿಮಂಗಲದಲ್ಲಿ  ಭವಿಷ್ಯದಾಚಾರ್ಯರ ಸನ್ನಿಧಿಯಲ್ಲಿ ಪೂಜಿಸುವ ದಿವ್ಯವಿಗ್ರಹ. ನಂತರ ನಮ್ಮಾಳ್ವಾರ್ ಮತ್ತೊಮ್ಮೆ ತಾಮ್ರಪರಣಿ ನದಿಯ ನೀರನ್ನು ಕುದಿಸಲು ಮಧುರಕವಿ ಆಳ್ವಾರಿಗೆ ಸೂಚಿಸಿದರು. ಮಧುರಕವಿ ಆಳ್ವಾರ್ ಅವರ ಸೂಚನೆಯನ್ನು ಪಾಲಿಸಿ ನಮ್ಮಾಳ್ವಾರ್ ಅವರ ಸುಂದರ ದಿವ್ಯರೂಪವನ್ನು ಪಡೆದರು. ಮಧುರಕವಿ ಆಳ್ವಾರ್ ಸಂತೋಷದಿಂದ ಸ್ವೀಕರಿಸಿದ ಈ ವಿಗ್ರಹವೇ ನಾವು ಪ್ರತಿದಿನ ಆಳ್ವಾರ್ ತಿರುನಗರಿಯಲ್ಲಿ ಪೂಜಿಸುವ ವಿಗ್ರಹ.

ಇದಾದ ನಂತರ, ಎಮ್ಬೆರುಮಾನನೇ ಬಂದು ನಮ್ಮಾಳ್ವಾರನ್ನು ಪರಮಪದಕ್ಕೆ (ಶ್ರೀವೈಕುಂಠ) ಕರೆದುಕೊಂಡು ಹೋದರು. ನಂತರ, ಮಧುರಕವಿ ಆಳ್ವಾರ್ ನಮ್ಮಾಳ್ವಾರ್ ವಿಗ್ರಹವನ್ನು ಆದಿನಾಥ ಪೆರುಮಾಳ ದೇವಾಲಯದ ಒಳಗೆ ಪ್ರತಿಷ್ಠಾಪಿಸಿ, ಮುಂಭಾಗದ ದಿವ್ಯ ಮಂಟಪ, ಆವರಣದ ಗೋಡೆ ಮತ್ತು ಗೋಪುರವನ್ನು ನಿರ್ಮಿಸಿದರು. ಪ್ರತಿದಿನವೂ ಅವರು ವಿವಿಧ ಪುಷ್ಷಮಾಲೆಗಳನ್ನು ನಮ್ಮಾಳ್ವಾರ್ ವಿಗ್ರಹಕ್ಕೆ ಸಮರ್ಪಿಸಿ ಸಂತೋಷಪಡುತ್ತಿದ್ದರು. ನಮ್ಮಾಳ್ವಾರ್ ರಚಿಸಿದ ಪಾಶುರಗಳನ್ನು ಅವರು ಹಾಡುತ್ತಾ, ಅವು ವಿಶ್ವಾದ್ಯಂತ ಎಲ್ಲೆಡೆ ಹರಡುವಂತೆ ಮಾಡಿದರು. ಅವರು “ಕಣ್ಣಿನುನ್ ಶಿರುತ್ತಾಂಬು” ಎಂಬ ಶೀರ್ಷಿಕೆಯೊಂದಿಗೆ ನಮ್ಮಾಳ್ವಾರ್ ಮೇಲೆ ಹನ್ನೊಂದು ಪಾಶುರಗಳನ್ನು ಅತಿಯಾದ ಭಕ್ತಿಯಿಂದ ರಚಿಸಿದರು. ಇಂದಿನವರೆಗೂ, ಮಧುರಕವಿ ಆಳ್ವಾರ್ ವಂಶದವರು “ಅಣ್ಣಾವಿಯಾರ್” ಎಂಬ  ತಿರುನಾಮದೊಂದಿಗೆ ನಿರಂತರವಾಗಿ ಆಳ್ವಾರ್ ತಿರುನಗರಿಯಲ್ಲಿ ಕೈಂಕರ್ಯ  ಮಾಡುತ್ತಿದ್ದಾರೆ. 

ನಾವು ಇಲ್ಲಿ ನಮ್ಮಾಳ್ವಾರ್ ಅವರ ಶ್ರೇಷ್ಠತೆಯನ್ನು ಸ್ವಲ್ಪ ಮಟ್ಟಿಗೆ ಆನಂದಿಸಿದೆವು.

ನಮ್ಮಾಳ್ವರರ ತನಿಯನ್ :

ಮಾತಾ ಪಿತಾ ಯುವತಯ ಸ್ತನಯಾವಿಭೂತಿಃ
ಸರ್ವಂ ಯೆದೇವ ನಿಯಮೇನ ಮದನ್ವಯಾನಾಂ |
ಆದ್ಯಸ್ಯನಃ ಕುಲಪತೇಃ ವಕುಳಾಭಿರಾಮಂ
ಶ್ರೀಮತ್ತದಂಘ್ರಿಯುಗಳಂ ಪ್ರಣಮಾಮಿ ಮೂರ್ಧ್ನಾ ||

ನಮ್ಮಾಳ್ವರರ ವಾೞಿ ತಿರುನಾಮಮ್:

ತಿರುಕ್ಕುರುಗೈಪ್ ಪೆರುಮಾಳ್ ತನ್ ತಿರುತ್ತಾಳ್ಗಳ್ ವಾೞಿಯೇ
ತಿರುವಾನ ತಿರುಮುಗತ್ತುಚ್ಚೆವಿಯೆನ್ನುಮ್ ವಾೞಿಯೇ
ಇರುಕ್ಕುಮೊಳಿ ಎನ್ನೆನ್ಜಿಲ್ ತೇಕ್ಕಿನಾನ್ ವಾೞಿಯೇ
ಎನ್ದೈ ಎದಿರಾಸರ್ಕ್ಕು ಇರೈವನಾರ್ ವಾೞಿಯೇ
ಕರುಕ್ಕುಳಿಯಿಲ್ ಪುಗಾ ವಣ್ಣಮ್ ಕಾತ್ತರುಳ್ವೋನ್ ವಾೞಿಯೇ
ಕಾಸಿನಿಯಿಲ್ ಆರಿಯನೈಕ್ ಕಾಟ್ಟಿನಾನ್ ವಾೞಿಯೇ
ವರುತ್ತಮರ ವಂದ್ದೆನ್ನೈ ವಾಳ್ವಿತ್ತಾನ್ ವಾೞಿಯೇ
ಮದುರಕವಿ ತಮ್ ಪಿರಾನ್ ವಾಳಿ ವಾಳಿ ವಾೞಿಯೇ

ಆನ ತಿರುವೈರುತ್ತಮ್ ನೂರುಮ್ ಅರುಳಿನಾನ್ ವಾೞಿಯೇ
ಆಸಿರಿಯಮ್ ಈಳು ಪಾಟ್ಟು ಅಳಿತ್ತ ಪಿರಾನ್ ವಾೞಿಯೇ
ಈನಮ್ ಅರಾ ಅನ್ದಾದಿ ಎಣ್ಬತ್ತುಯಿಳು ಈನ್ದಾನ್ ವಾೞಿಯೇ
ಇಲಗು ತಿರುವಾಯ್ಮೊಳಿ ಆಯಿರತ್ತು ನೂರು ಇರಣ್ಡು ಉರೈತ್ತಾಣ್ ವಾೞಿಯೇ
ವಾನ್ ಅಣಿಯುಮ್ ಮಾಮಾಡಕ್ಕುರುಗೈ ಮಣ್ಣನ್ ವಾೞಿಯೇ
ವೈಗಾಸಿ ವಿಸಾಗತ್ತಿಲ್ ವನ್ದು ಉದಿತ್ತಾನ್ ವಾೞಿಯೇ
ಸೇನೈಯರ್ ಕೋನ್ ಅವದಾರಮ್ ಸೆಯ್ದ ವಳ್ಳಲ್ ವಾೞಿಯೇ
ತಿರುಕ್ಕುರುಗೈಚ್ ಚಟಕೋಪನ್ ತಿರುವಡಿಗಲ್ ವಾೞಿಯೇ

ಮೇದಿನಿಯಿಲ್ ವೈಗಾಸಿ ವಿಶಾಗತ್ತೋನ್ ವಾೞಿಯೇ,
ವೇದತ್ತೈ ಶೆಂತಮಿಳಿಲ್ ವಿರಿತ್ತುರೈತ್ತಾನ್ ವಾೞಿಯೇ,
ಆದಿಗುರುವಾಯ್ ಬುವಿಯಿಲ್ ಅವತರಿತ್ತೋನ್ ವಾೞಿಯೇ,
ಅನವರತಮ್ ಸೇನೈಯರ್ಕೋನ್ ಅಡಿ ತೋಳುವೋನ್ ವಾೞಿಯೇ,
ನಾಥನುಕ್ಕು ನಾಲಾಯಿರಮ್ ಉರೈತ್ತಾನ್ ವಾೞಿಯೇ,
ನನ್ ಮಧುರಕವಿ ವಣಂಗುಮ್ ನಾವೀರನ್ ವಾೞಿಯೇ,
ಮಾಧವನ್ ಪೊರ್ ಪಾದುಗೈಯಾಯ್ ವಳರ್ನ್ದು ಅರುಳ್ವೋನ್ ವಾೞಿಯೇ,
ಮಗಿಳ್ ಮಾರನ್ ಶಠಗೋಪನ್ ವೈಯಗತ್ತಿಲ್ ವಾೞಿಯೇ.

ಅಡಿಯೇನ್ ಕಸ್ತೂರಿ ರಂಗನ್ ರಾಮಾನುಜ ದಾಸನ್

ಮೂಲ : https://granthams.koyil.org/2022/12/03/azhwarthirunagari-vaibhavam-2-english/

ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org

Leave a Comment