ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮ:
ನಮ್ಮ ಶ್ರೀವೈಷ್ಣವ ಸಂಪ್ರದಾಯದಲ್ಲಿ ಶ್ರೀ ಕುರುಗಾಪುರೀ ಎಂದೂ ಕರೆಯಲ್ಪಡುವ ಆಳ್ವಾರ್ ತಿರುನಗರಿ ದಿವ್ಯ ಕ್ಷೇತ್ರಕ್ಕೆ ಹಲವಾರು ವೈಶಿಷ್ಟ್ಯಗಳಿವೆ. ಪೂರ್ವದಲ್ಲಿ ಆದಿಕ್ಷೇತ್ರ, ಕುರುಗಾಪುರಿ, ಶ್ರೀ ನಗರಿ ಎಂದು ಖ್ಯಾತವಾಗಿತ್ತು. ಇಲ್ಲಿ ಪ್ರಪನ್ನ ಜನ ಕೂಟಸ್ಥರಾದ (ಭಗವಂತನಲ್ಲಿ ಪ್ರಪತ್ತಿ ಮಾಡಿದವರಲ್ಲಿ ಪ್ರಧಾನರು) ನಮ್ಮಾಳ್ವಾರರ ಅವತಾರದ ನಂತರ ಆಳ್ವಾರ್ ತಿರುನಗರಿಯೆಂದು ಪ್ರಸಿದ್ದವಾಯಿತು. ನಾವು ಈ ಕ್ಷೇತ್ರದ ವೈಭವನ್ನು ಇಲ್ಲಿ ಅನುಭವಿಸೋಣ.
ಆಳ್ವಾರ್ ತಿರುನಗರಿಯು ಪ್ರಾಚೀನ ಕ್ಷೇತ್ರವಾಗಿದ್ದು, ಶ್ರಿಯಃಪತಿಯಾದ (ಮಹಾಲಕ್ಷ್ಮಿಯ ಪತಿ) ಸರ್ವೇಶ್ವರನಿಂದ ಅಜ್ಞಾನದ ಲೇಶವಿಲ್ಲದಂತೆ ಜ್ಞಾನ ಭಕ್ತಿಗಳನ್ನು ಅನುಗ್ರಹಿಸಲ್ಪಟ್ಟ ಆಳ್ವಾರ್‌ಗಳಲ್ಲಿ ಅಗ್ರಗಣ್ಯರಾದ ನಮ್ಮಾಳ್ವಾರಿನ ಅವತಾರ ಸ್ಥಳ. ನಮ್ಮಾಳ್ವಾರ್-ಮಂಗಳಾಶಾಸನದಿಂದ (ಪ್ರಬಂಧಗಳಿಂದ ಸ್ತುತಿಸುವುದು) 108 ದಿವ್ಯ ದೇಶಗಳಲ್ಲಿ ಒಂದಾಗಿ ಕೊಂಡಾಡಲ್ಪಡುತ್ತಿದೆ. 4000 ವರ್ಷಗಳ ಪೂರ್ವವೇ ಶ್ರೀ ರಾಮಾನುಜರ ದಿವ್ಯ ವಿಗ್ರಹವು ನಮ್ಮಾಳ್ವಾರಿನ ಅನುಗ್ರಹ ಹಾಗೂ ಮಧುರಕವಿ ಆಳ್ವಾರಿನ ತಪಃ ಪ್ರಭಾವದಿಂದ ತಾಮ್ರಪರಣಿ ನದಿಯಿಂದ ಆವಿರ್ಭಸಿದ ಸ್ಥಳವೆಂದು ಪ್ರಖ್ಯಾತವಾಗಿದೆ.
ಯತಿಪತಿ ಪುನರಾವತಾರರಾದ ಹಾಗೂ ಶ್ರೀರಂಗದ ರಂಗನಾಥನಿಗೆ ಆಚಾರ್ಯರಾದ ಮಣವಾಳ ಮಾಮುನಿಗಳು ಅವತರಿಸಿದ ಕ್ಷೇತ್ರವೆಂಬ(ಆಳ್ವಾರ್ ತಿರುನಗರಿ) ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಕ್ಷೇತ್ರವು ಭಗವಂತನ ನಿವಾಸವಾಗಿಯೂ ಮತ್ತು ಆಳ್ವಾರ್ ಆಚಾರ್ಯರ ಅವತಾರದ ಸ್ಥಳವಾಗಿರುವುದರಿಂದ “ಮುಪ್ಪುರಿಯೂಟ್ಟಿಯ ಸ್ಥಳ”ವೆಂದು ಇಂದಿಗೂ ಕೊಂಡಾಡಲ್ಪಡುತ್ತಿದೆ.
ಈ ಶ್ರೀವೈಷ್ಣವ ದಿವ್ಯ ದೇಶದಲ್ಲಿ ಹಲವಾರು ಮಹಾಮಹಿಮರು ಅವತರಿಸಿ, ಕೈಂಕರ್ಯನಿಷ್ಠರಾಗಿ ಬಾಳಿಬದುಕಿದರು.
ಇಂದಿಗೂ ಸಹ ಇವರ ಮಾರ್ಗದರ್ಶನದಂತೆ ಕೈಂಕರ್ಯವು ಆಚರಿಸಲ್ಪಡುತ್ತಿದೆ.
ತಮಿಳುನಾಡಿನ ತುತ್ತುಕ್ಕುಡಿ ಜಿಲ್ಲೆಯ ತಿರುನಲ್ವೇನಿ ಹಾಗೂ ತಿರುಚ್ಚೆಂದೂರ್ ಮಾರ್ಗದಲ್ಲಿ ಬರುವ “ನವ ತಿರುಪತಿಗಳಲ್ಲಿ” ಪ್ರಧಾನವಾದ ಕ್ಷೇತ್ರವಾಗಿದೆ.
ಈ ದಿವ್ಯದೇಶದ ಕುರಿತಾದ ಹಲವಾರು ಅದ್ಭುತ ಘಟನೆಗಳನ್ನು ನಾವು ತಿಳಿದುಕೊಂಡು ಸಂಭ್ರಮಿಸೋಣ.
- ಪ್ರಾಚೀನ ಇತಿಹಾಸ
- ನಮ್ಮಾಳ್ವಾರ್ ಇತಿಹಾಸ ಹಾಗೂ ವೈಭವ
- ನಮ್ಮಾಳ್ವಾರರ ದಿವ್ಯ ಯಾತ್ರೆ
- ಮಣವಾಳ ಮಾಮುನಿಗಳ ದಿವ್ಯ ಚರಿತ್ರೆ ಮತ್ತು ವೈಭವ
- ಸನ್ನಿಧಿಗಳು
- ಉತ್ಸವಗಳು
ಅಡಿಯೇನ್ ಕಸ್ತೂರಿ ರಂಗನ್ ರಾಮಾನುಜ ದಾಸನ್
ಅಡಿಯೇನ್ ಆಳವಂದಾರ್ ರಾಮಾನುಜ ದಾಸನ್
ಮೂಲ : https://granthams.koyil.org/azhwarthirunagari-vaibhavam-english/
ಆರ್ಕೈವ್ ಮಾಡಲಾಗಿದೆ – https://granthams.koyil.org
ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org