ಆಳ್ವಾರ್ ತಿರುನಗರಿಯ ವೈಭವ – ಉತ್ಸವಗಳು

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ:

ಆಳ್ವಾರ್ ತಿರುನಗರಿಯ ವೈಭವ

<< ಹಿಂದಿನ ಲೇಖನವನ್ನು

ಪ್ರತಿದಿನವು,ತಾಮ್ರಪರಣಿ ನದಿಯ ನೀರಿನಿಂದ ಆಳ್ವಾರರಿಗೆ ತಿರುಮಂಜನವು(ಅಭಿಷೇಕ) ನಡೆಯುತ್ತದೆ. ವರ್ಷವಿಡೀ ಭಗವಂತನು, ತಾಯರರು,ಆಳ್ವಾರರು ಮತ್ತು ಆಚಾರ್ಯರರು ವಿವಿಧ ಉತ್ಸವವನ್ನು ಆನಂದದಿಂದ ಸ್ವೀಕರಿಸುತ್ತಾರೆ.
ಈ ಉತ್ಸವಾದಿಗಳ ಬಗ್ಗೆ ವಿಸ್ತಾರವಾಗಿ ಈ ತಿಳಿದುಕೊಳ್ಳೋಣ :

ಮಾಸೋತ್ಸವಗಳು

  1. ಅಮಾವಾಸ್ಯೆ : ಪೆರುಮಾಳ್ ಉತ್ಸವ
  2. ಏಕಾದಶಿ (ಶುಕ್ಲ ಪಕ್ಷ ಮತ್ತು ಕೃಷ್ಣ ಪಕ್ಷದ 11ನೇ ದಿನ) ತಾಯಾರ್ ಪೆರುಮಾಳ್ ಉತ್ಸವ
  3. ದ್ವಾದಶಿ (ಶುಕ್ಲ ಪಕ್ಷ ಮತ್ತು ಕೃಷ್ಣ ಪಕ್ಷದ 12ನೇಯ ದಿನ): ಆಳ್ವಾರರ ಉತ್ಸವ
  4. ಪೌರ್ಣಮಿ: ಆಳ್ವಾರರ ಉತ್ಸವ
  5. ಪುನರ್ವಸು ನಕ್ಷತ್ರ : ಶ್ರೀರಾಮ ದೇವರ ಉತ್ಸವ
  6. ಉತ್ತರಾ ನಕ್ಷತ್ರ : ಪೆರುಮಾಳ್ ತಾಯಾರ್ ಉತ್ಸವ
  7. ತಿರುವಿಸಾಗಂ(ವಿಶಾಖ ನಕ್ಷತ್ರ): ಪೆರುಮಾಳ್ ಮತ್ತು ಆಳ್ವಾರರ ಉತ್ಸವ
  8. ತಿರುವೋಣಂ(ಶ್ರವಣಾ ನಕ್ಷತ್ರ): ಪೆರುಮಾಳ್ ಉತ್ಸವ

ನಾಲಾಯಿರ ದಿವ್ಯ ಪ್ರಬಂಧದ ಪಾರಾಯಣ ಕ್ರಮ

ಪ್ರತಿ ಮಾಸದಲ್ಲೂ, 4000 ದಿವ್ಯ ಪ್ರಬಂಧ ಸೇವಾಕಾಲ ಕ್ರಮ(4000 ದಿವ್ಯ ಪ್ರಬಂಧಗಳನ್ನು ಪಠಿಸುವ ವಿಧಾನ)ವನ್ನು ಯೋಜಿಸಲಾಗುತ್ತದೆ.ಯಾವುದೇ ಆಳ್ವಾರರ ಶಾತ್ತುಮೊರೈ (ಕೊನೆಯ ಎರಡು ಅಥವಾ ಮೂರು ಪಾಶುರಗಳ ಪಠಣ) ಆ ಆಳ್ವಾರರ ದಿವ್ಯ ನಕ್ಷತ್ರ ದಿನದಂದು ನಡೆಯುವಂತೆ ನಿಯೋಜಿಸಲಾಗಿದೆ.

  1. ರೋಹಿಣ ನಕ್ಷತ್ರ : ಅಮಲನಾದಿಪ್ಪಿರಾನ್
  2. ಮೃಗಶಿರಾ ನಕ್ಷತ್ರ : ಯಾವುದೇ ಪಾರಾಯಣವಿಲ್ಲ
  3. ಆರ್ದ್ರಾ ನಕ್ಷತ್ರ : ಇರಾಮಾನುಜ ನೂತ್ತಾಂದಾದಿ
  4. ಪುನರ್ವಸು ನಕ್ಷತ್ರ: ಪೆರುಮಾಳ್ ತಿರುಮೊಳಿ, ತಿರುವಾಯ್ಮೊಳಿ ಮೊದಲನೆಯ ಶತಕ
  5. ಪುಷ್ಯ ನಕ್ಷತ್ರ : ತಿರುವಾಯ್ಮೊಳಿ ಎರಡನೆಯ ಶತಕ
  6. ಆಶ್ಲೇಷ ನಕ್ಷತ್ರ: ನಾನ್ಮುಗನ್ ತಿರುವಂದಾದಿ , ತಿರುವಾಯ್ಮೊಳಿ ಮೂರನೇ ಶತಕ
  7. ಮಖಾ ನಕ್ಷತ್ರ: ತಿರುಚ್ಚನ್ದವಿರುತ್ತಮ್,ತಿರುವಾಯ್ಮೊಳಿ ನಾಲ್ಕನೇ ಶತಕ
  8. ಪೂರ್ವ ಫಾಲ್ಗುಣಿ ನಕ್ಷತ್ರ: ನಾಚ್ಚಿಯಾರ್ ತಿರುಮೊಳಿ, ತಿರುವಾಯ್ಮೊಳಿ ಐದನೇ ಶತಕ
  9. ಉತ್ತರಾ ಫಾಲ್ಗುಣಿ ನಕ್ಷತ್ರ: ತಿರುಪ್ಪಲ್ಲಾಂಡು ,ಪೆರಿಯಾಳ್ವರ್ ತಿರುಮೊಳಿ ಮೊದಲನೆಯ ಶತಕ, ,ತಿರುವಾಯ್ಮೊಳಿ ಆರನೇ ಶತಕ
  10. ಹಸ್ತಾ ನಕ್ಷತ್ರ: ಪೆರಿಯಾಳ್ವರ್ ತಿರುಮೊಳಿ ಎರಡನೆಯ ಶತಕ, ತಿರುವಾಯ್ಮೊಳಿ ಏಳನೇ ಶತಕ
  11. ಚಿತ್ರಾ ನಕ್ಷತ್ರ : ಪೆರಿಯಾಳ್ವರ್ ತಿರುಮೊಳಿ ಮೂರನೆಯ ಶತಕ, ತಿರುವಾಯ್ಮೊಳಿ ಎಂಟನೇ ಶತಕ
  12. ಸ್ವಾತಿ ನಕ್ಷತ್ರ: ಪೆರಿಯಾಳ್ವರ್ ತಿರುಮೊಳಿ ನಾಲ್ಕನೇ ಮತ್ತ ಐದನೆಯ ಶತಕ, ತಿರುವಾಯ್ಮೊಳಿ ಒಂಬತ್ತನೇ ಶತಕ
  13. ವಿಶಾಖ ನಕ್ಷತ್ರ :ತಿರುವಿರುತ್ತಂ, ತಿರುವಾಸಿರಿಯಂ, ಪೆರಿಯ ತಿರುವಂದಾದಿ, ತಿರುವಾಯ್ಮೊಳಿ ಹತ್ತನೇ ಶತಕ
  14. ಅನುರಾಧ ನಕ್ಷತ್ರ :ಯಾವುದೇ ಪಾರಾಯಣವಿಲ್ಲ
  15. ಜ್ಯೇಷ್ಠ ನಕ್ಷತ್ರ : ತಿರುಮಾಲೈ, ತಿರುಪಳ್ಳಿಯೆಳುಚ್ಚಿ
  16. ತಿರುಮೂಲಾ ನಕ್ಷತ್ರ: ಉಪದೇಶ ರತ್ನಮಾಲೈ, ತಿರುವಾಯ್ಮೊಳಿ ನೂತ್ತಾಂದಾದಿ
  17. ಪೂರ್ವಾಷಾಢ ನಕ್ಷತ್ರ : ಪೆರಿಯ ತಿರುಮೊಳಿ ಮೊದಲನೆಯ ಶತಕ
  18. ಉತ್ತರಾಷಾಢ ನಕ್ಷತ್ರ: ಪೆರಿಯ ತಿರುಮೊಳಿ ಎರಡನೆಯ ಶತಕ
  19. ಶ್ರವಣಾ ನಕ್ಷತ್ರ : ಪೆರಿಯ ತಿರುಮೊಳಿ ಮೂರನೆಯ ಶತಕ , ಮೊದಲ್ ತಿರುವಂದಾದಿ
  20. ಧನಿಷ್ಠ ನಕ್ಷತ್ರ : ಪೆರಿಯ ತಿರುಮೊಳಿ ನಾಲ್ಕನೆಯ ಶತಕ, ಇರಂಡಾಮ್ ತಿರುವಂದಾದಿ
  21. ಶತಭಿಷ ನಕ್ಷತ್ರ : ಪೆರಿಯ ತಿರುಮೊಳಿ ಐದನೇ ಶತಕ, ಮೂನ್ರಾಮ್ ತಿರುವಂದಾದಿ
  22. ಪೂರ್ವ ಭಾದ್ರ ನಕ್ಷತ್ರ: ಪೆರಿಯ ತಿರುಮೊಳಿ ಆರನೇ ಶತಕ
  23. ಉತ್ತರ ಭಾದ್ರ ನಕ್ಷತ್ರ: ಪೆರಿಯ ತಿರುಮೊಳಿ ಏಳನೇ ಶತಕ
  24. ರೇವತಿ ನಕ್ಷತ್ರ : ಪೆರಿಯ ತಿರುಮೊಳಿ ಎಂಟನೆಯ ಶತಕ
  25. ಅಶ್ವಿನಿ ನಕ್ಷತ್ರ : ಪೆರಿಯ ತಿರುಮೊಳಿ ಒಂಭತ್ತನೆಯ ಶತಕ, ತಿರುವೆಳುಕೂತ್ತಿರುಕ್ಕೈ ,ಶಿರಿಯ ತಿರುಮಡಲ್
  26. ಭರಣೀ ನಕ್ಷತ್ರ : ಪೆರಿಯ ತಿರುಮೊಳಿ ಹತ್ತನೇ ಶತಕ, ಪೆರಿಯ ತಿರುಮಡಲ್
  27. ಕೃತ್ತಿಕಾ ನಕ್ಷತ್ರ : ಪೆರಿಯ ತಿರುಮೊಳಿ ಹನ್ನೊಂದನೇ ಶತಕ, ತಿರುಕ್ಕುರುನ್ದಾಣ್ಡಗಮ್,ತಿರುನೆಡುನ್ದಾಣ್ಡಕಮ್

ಟಿಪ್ಪಣಿಗಳು

ನಿತ್ಯ ಸೇವಾಕಾಲಗಳು

ಪೆರುಮಾಳ್ ಸನ್ನಿಧಿ- ರಾತ್ರಿ- ತಿರುಪ್ಪಲ್ಲಾಂಡು, ಶೆನ್ನಿಯೋಂಗು(ಪೆರಿಯಾಳ್ವಾರ್ ತಿರುಮೊಳಿ 5.4)

ಆಳ್ವಾರರ ಸನ್ನಿಧಿ – ಪ್ರಾತಃ ಕಾಲ-ಕಣ್ಣಿನುನ್ ಶಿರುತ್ತಾಂಬು, ತಿರುಪ್ಪಾವೈಯನ್ನು ಮೊದಲು ಪಾರಾಯಣ ಮಾಡುತ್ತಾರೆ, ತದನಂತರ ಪಾಶುರಗಳನ್ನು ಹಿಂದೆ ತಿಳಿಸಿದಂತೆ, ಆ ದಿನದ ದಿವ್ಯ ನಕ್ಷತ್ರವನ್ನು ಆಧರಿಸಿ ಪಾಶುರಗಳ ಪಾರಾಯಣ ಮಾಡಲಾಗುತ್ತದೆ.
ಆಳ್ವಾರರ ಸನ್ನಿಧಿ -ರಾತ್ರಿ-ಕಣ್ಣಿನುನ್ ಶಿರುತ್ತಾಂಬು, ಏಳೈ ಏದಲನ್ (ಪೆರಿಯ ತಿರುಮೊಳಿ 5.8),ಆಳಿಯಿಳ (ತಿರುವಾಯ್ಮೊಳಿ 7.4)

ಅನಧ್ಯಯನ ಕಾಲದ (ನಾಲಾಯಿರ ದಿವ್ಯಪ್ರಬಂಧವನ್ನು ಪಠಿಸದ ಕಾಲ) ದೈನಂದಿನ ಸೇವೆಗಳು

ಪೆರುಮಾಳ್ ಸನ್ನಿಧಿ -4000 ತನಿಯನ್ ಗಳು (ವಿಶೇಷ ಸ್ತೋತ್ರಗಳು)
ಆಳ್ವಾರರ ಸನ್ನಿಧಿ -ಪಾತ್ರಃ ಕಾಲ- ಉಪದೇಶ ರತ್ನಮಾಲೈ;
ರಾತ್ರಿ– ಇರಾಮಾನುಜ ನೂತ್ತಂದಾದಿ

ಧನುರ್ಮಾಸ (ಮಾರ್ಗಳಿ ತಿಂಗಳು)– ಪೆರುಮಾಳ್ ಮತ್ತು ಆಳ್ವಾರರ ಸನ್ನಿಧಿಗಳಲ್ಲಿ ತಿರುಪ್ಪಳ್ಳಿಯೆಳುಚ್ಚಿ ಮತ್ತು ತಿರುಪ್ಪಾವೈ ಪಾರಾಯಣ

ಮಾಸೋತ್ಸವಗಳು (ತಮಿಳು ತಿಂಗಳ ಪ್ರಕಾರ)

ಚಿತ್ತಿರೈ (ಮೇಷ ಮಾಸ)

  1. ಪೆರುಮಾಳ್ ಬ್ರಹ್ಮೋತ್ಸವ- 10 ದಿನಗಳು-ಚಿತ್ತಿರೈ ಮಾಸದ ಆರ್ದ್ರಾ ನಕ್ಷತ್ರ ದಿನದಂದು ರಾತ್ರಿಯ ಉತ್ಸವದಲ್ಲಿ, ಆಳ್ವಾರರು ಭಗವಂತನ ಸಹಿತ, ಭಗವಂತನ ಮುಖಾರವಿಂದವನ್ನು ನೋಡಿಕೊಂಡು ಹೋಗುತ್ತಾರೆ. ಇದೇ ಚಿತ್ತಿರೈ ಮಾಸದ ಪುನರ್ವಸು ನಕ್ಷತ್ರದ ದಿನದಂದು ,ರಾತ್ರಿಯಲ್ಲಿ ಭಗವಾನ್ ಶ್ರೀರಾಮ ಚಂದ್ರನು ಮಾಡ ಬೀದಿಗಳ ಮೂಲಕ ಮೆರವಣಿಗೆಯಲ್ಲಿ ಹೋಗುತ್ತಾನೆ. 9ನೇ ದಿನ-ಚಿತ್ತಿರೈ ತಿರುತೇರು(ದೇವರ ರಥೋತ್ಸವ),ಮಿಕ್ಕ ಆದಿಪ್ಪಿರಾನಿಗೆ 10ನೇ ದಿನ ಚಿತ್ತಿರೈ ಉತ್ತರಂ-ತೀರ್ಥವಾರಿ(ತಾಮ್ರಪರಣಿಯ ನದಿಯಲ್ಲಿ ದೇವರ ದಿವ್ಯ ಸ್ನಾನ) .
  2. ಮಧುರಕವಿ ಆಳ್ವಾರರ ತಿರುನಕ್ಷತ್ರ -ಚಿತ್ತಿರೈ ಮಾಸದ ಚಿತ್ರಾ ನಕ್ಷತ್ರದಂದು ಅವತಾರೋತ್ಸವ.
  3. ಎಮ್ಬೆರುಮಾನರ್ ತಿರು ಅವತಾರೋತ್ಸವಂ (ರಾಮಾನುಜ ಜಯಂತಿ) 11 ದಿನಗಳು. 10ನೇ ದಿನದಂದು , ತಿರುವಾಧಿರೈ/ಆರ್ದ್ರಾ ನಕ್ಷತ್ರದಂದು, ಉಡಯವರರು ಆದಿನಾಥರ್ ಸನ್ನಿಧಿಗೆ ತೆರಳಿ ಮಂಗಳಾಶಾಸನ ಕೈಗೊಳ್ಳುತ್ತಾರೆ.
  4. ಚಿತ್ರಾ ಪೌರ್ಣಮಿ-2 ದಿನಗಳು-ಪೌರ್ಣಮಿ ದಿನದಂದು ಭಗವಂತನ ಮೆರವಣಿಗೆಯಲ್ಲಿ ಹೋಗುತ್ತಾನೆ. ಪ್ರಥಮಿಯ ದಿನ (ಪೌರ್ಣಮಿಯ ಮರುದಿನ) ಆಳ್ವಾರರು ಎಲ್ಡಲಕ್ಕಲ್ಲಿಗೆ ರಥೋತ್ಸವದ ಮೇರೆಗೆ ಆಗಮಿಸುತ್ತಾರೆ.
  5. ಶ್ರೀ ವೈಕುಂಠಂ ಪೆರುಮಾಳ್ ಬ್ರಹ್ಮೋತ್ಸವ 5ನೇ ದಿನ -ಪೊಳಿಂದ್ರ ನಿನ್ರ ಪಿರಾನ್ ಸಹಿತ ಆಳ್ವಾರರು ಶ್ರೇಷ್ಠ ವೈಕುಂಠಂ ದಿವ್ಯ ದೇಶಕ್ಕೆ (ಆಳ್ವಾರ್ ತಿರುನಗರಿಯ ಬಳಿ ಇರುವ ಒಂದು ದಿವ್ಯ ದೇಶ)ಮೆರವಣಿಗೆಯ ಮೇರೆಗೆ ಹೋಗುತ್ತಾರೆ.

ವೈಯ್ಯಾಶಿ (ವೃಷಭ ಮಾಸ)

  1. ನಮ್ಮಾಳ್ವಾರರ ತಿರು ಅವತಾರ ಉತ್ಸವ-10 ದಿನಗಳು; 5ನೇ ದಿವಸ ನವ ತಿರುಪತಿಯಲ್ಲಿರುವ ಪೆರುಮಾಳರಿಗೆ ಗರುಡ ಸೇವೆ; ಆ ದಿನದಂದು ನಮ್ಮಾಳ್ವಾರರಿಗೆ ಹಂಸ ವಾಹನ ಸೇವೆ;ಅಂದು ಮಧುರ ಕವಿ ಆಳ್ವಾರರಿಗೆ ಪರಂಗಿ ನಾಲ್ಕಾಲಿಯಲ್ಲಿ (ಒಂದು ವಿಶೇಷವಾದ ಆಸನ) ಮೆರವಣಿಗೆಯಲ್ಲಿ ಹೋಗುತ್ತಾರೆ. 7ನೇ ದಿವಸ ಭವಿಷ್ಯತ್ ಆಚಾರ್ಯ ಸನ್ನಿಧಿಯಲ್ಲಿ ಆಳ್ವಾರರು ಮತ್ತು ರಾಮಾನುಜರು ಒಂದೇ ಪೀಠದ ಮೇಲೆ ಆಸೀರಾಗಿ ತಿರುಮಂಜನ ಸೇವೆ/ಅಭಿಷೇಕವನ್ನು ಸ್ವೀಕರಿಸುತ್ತಾರೆ.8ನೇ ದಿನದಂದು ಅಪ್ಪನ್ ಕೋಯಿಲ್ ನಲ್ಲಿ (ಆಳ್ವಾರರ ಜನ್ಮ ಸ್ಥಳ) ಅಂಬೆಗಾಲಿನ ಕೃಷ್ಣನ ಅಲಂಕಾರವನ್ನು ಸ್ವೀಕರಿಸುತ್ತಾರೆ;9ನೇ ದಿನ ವೈಯ್ಯಾಶಿ, ತಿರುತೇರು
  2. ವೈಯ್ಯಾಶಿ ಉತ್ರಾಡ್ಡಿ – ವರ್ಷಾಭಿಷೇಕಂ (ವರ್ಷಕ್ಕೊಮ್ಮೆ, ಸಂಪ್ರೋಕ್ಷಣೆ ನಡೆಸುವ ದಿನ)

ಆಣಿ (ಮಿಥುನ ಮಾಸ)

  1. ಆಣಿ ಮಾಸದ ಮೊದಲ ದಿನ -ಮುಪ್ಪಳಂ(ಮೂರು ಬಗೆಯ ಹಣ್ಣುಗಳನ್ನು ಸಮರ್ಪಿಸಲಾಗುತ್ತದೆ, ಇದು ಬೇಸಿಗೆಯ ಅಂತ್ಯವನ್ನು ಸೂಚಿಸುತ್ತದೆ).
  2. ವಸಂತೋತ್ಸವ-10 ದಿನಗಳು,ಆಣಿ ಉತ್ತರಂ ಅಂದು ಶಾತ್ತುಮೊರೈ.
  3. ಆಣಿ ಅನುಶಂ- ಶ್ರೀಮನ್ನಾಥಮುನಿಗಳ ತಿರುನಕ್ಷತ್ರ.
  4. ಆಣಿ ಕಿಟ್ಟೈ- ಜ್ಯೇಷ್ಠಾಭಿಷೇಕಂ- ಈ ಅಭಿಷೇಕವನ್ನು ಏನು ತೆರೆಗಳನ್ನು ಮುಚ್ಚಿ ಮಾಡಲಾಗುತ್ತದೆ.
  5. ಆಣಿ ತಿರುಮೂಲಂ :ತಿರುಪ್ಪುಳಿ ಆಳ್ವಾರರ ತಿರುನಕ್ಷತ್ರ (ದಿವ್ಯವಾದ ಹುಣಸೆ ಮರ).

ಆಡಿ (ಕರ್ಕಾಟಕ ಮಾಸ)

  1. ತಿರುವಾಡಿಪ್ಪುರಂ: ಕುರುಗೂರ್ ನಾಚ್ಚಿಯಾರರು ರಥೋತ್ಸವದ ಅಂಗವಾಗಿ ಉಡಯವರ್ ಕೋಯಿಲ್ ಗೆ ತೆರಳುತ್ತಾರೆ.
  2. ಪಕ್ಷಿ ರಾಜರ್ ಉತ್ಸವಂ-10 ದಿನಗಳು-ಶಾತ್ತಮೊರೈಯನ್ನು ಆಡಿ ಸ್ವಾತಿಯಂದು ನೆರವೇರಿಸಿಲಾಗುತ್ತದೆ.
  3. ಆಡಿ ಉತ್ರಾಡಂ-ಆಳಗರ್ ಉತ್ಸವ.

ಆವಣಿ(ಸಿಂಹ ಮಾಸ)

  1. ತಿರುಪ್ಪವಿತ್ರೋತ್ಸವಂ (ದೈವಿಕ ಶುದ್ಧಿಕರಣ ಉತ್ಸವ)-9 ದಿನಗಳು- ಆವಣಿ ಶುಕ್ಲಪಕ್ಷ ಏಕಾದಶಿ (ಅಮಾವಾಸ್ಯೆಯ ನಂತರ 11ನೇ ದಿನ) ಗೆ ಪ್ರಾರಂಭವಾಗುತ್ತದೆ. 9ನೇ ದಿನ – ಮಿಕ್ಕ ಅಧಿಪ್ಪಿರಾನ್ ತಿರ್ಥವಾರಿ.
  2. ಶ್ರೀ ಪಾಂಚರಾತ್ರ ಶ್ರೀಜಯಂತಿ – ಪುರಾಣ ಪಠಣ (ಭಾಗವತ ಮಹಾಪುರಾಣದಿಂದ ದಶಮ ಸ್ಕಂದ ಪಠನ), ಕಣ್ಣನ್ ಮೆರವಣಿಗೆ ದೇವಾಲಯದ ಒಳಗೆ; ಮರುದಿನ – ಉರಿಯಾಡಿ (ಭಕ್ತರಿಂದ ಆಡುವ ಆಟ) – ಪೆರುಮಾಳ್, ತಾಯಾರ್, ಆಳ್ವಾರ್, ಕಣ್ಣನ್ ಉತ್ಸವಗಳು.
  3. ತಿರುಕ್ಕೋಳೂರ್ ವೈತ್ತ ಮಾನಿಧಿಪ್ಪೆರುಮಾಳ್ ಬ್ರಹ್ಮೋತ್ಸವ – 9ನೇ ದಿನ – ಆಳ್ವಾರ್ ಮೆರವಣಿಗೆ ತಿರುಕ್ಕೋಳೂರಿಗೆ – ತಿರುತೇರಿನ ಮೇಲೆ ದಿವ್ಯ ದೃಷ್ಟಿ (ದೈವಿಕ ರಥ).

ಪುರಟ್ಟಾಶಿ(ಕನ್ಯಾ ಮಾಸ)

  1. ನವರಾತ್ರಿ ಉತ್ಸವಂ- 9 ದಿನಗಳು
  2. ವಿಜಯ ದಶಮಿ-ಬೇಟೆಗೆ ತೆರಳುವುದು.
  3. ಪುರಟ್ಟಾಸಿ ತಿರುವೋಣಂ-ವೇದಾಂತಾಚಾರ್ಯರು – ಆದಿನಾಥರ್ ಆಳ್ವಾರ್ ದೇವಾಲಯಕ್ಕೆ ಮೆರವಣಿಗೆ ನಡೆಸಿ ಮಂಗಳಾಸಾಸನ ಕಾರ್ಯಕ್ರಮ ನಡೆಸುವುದು.

ಐಪ್ಪಶಿ (ತುಲಾ ಮಾಸ)

  1. ಐಪ್ಪಶಿ ಮೊದಲನೆಯ ದಿನ -ವೆನ್ನೀರ್ಕ್ಕಾಪ್ಪು ಆರಂಭ (ಬಿಸಿನೀರಿನ ರಕ್ಷೆ).
  2. ಊಂಜಲ್ ಉತ್ಸವ-10 ದಿನಗಳು-ಐಪ್ಪಶಿ ಉತ್ತರಂ ದಿನ ಶಾತ್ತುಮೊರೈ.
  3. ಮಣವಾಳ ಮಾಮುನಿಗಳ ಉತ್ಸವ – 12 ದಿನಗಳು – ತಿರುಮೂಲ ದಿನದಂದು, ಮಾಮುನಿಗಳು ಆದಿನಾಥರ್ ಆಳ್ವಾರ್ ದೇವಾಲಯಕ್ಕೆ ಮೆರವಣಿಗೆಯಲ್ಲಿ ಹೋಗಿ ಮಂಗಳಾಶಾಸನ ಕಾರ್ಯಕ್ರಮ ನಡೆಸುತ್ತಾರೆ.
  4. ಪೂರದಂ – ಸೇನೈ ಮುದಲಿಯಾರ್ ತಿರುನಕ್ಷತ್ರ.
  5. ತಿರುವೋಣಂ – ಪೊಯ್ಗೈ ಆಳ್ವಾರ್ ತಿರುನಕ್ಷತ್ರ.
  6. ತಿರುವೋಣಂ – ಪಿಳ್ಳೈ ಲೋಕಾಚಾರ್ಯರ ತಿರುನಕ್ಷತ್ರ – 11 ದಿನಗಳು – ತಿರುವೋಣಂ ದಿನದಂದು, ಪಿಳ್ಳೈ ಲೋಕಾಚಾರ್ಯರು ಆದಿನಾಥರ್ ಆಳ್ವಾರ್ ದೇವಾಲಯಕ್ಕೆ ಮೆರವಣಿಗೆಯಲ್ಲಿ ಹೋಗಿ ಮಂಗಳಾಶಾಸನ ಕಾರ್ಯಕ್ರಮ ನಡೆಸುತ್ತಾರೆ.
  7. ಅವಿಟ್ಟಂ – ಭೂದತ್ತಾಳ್ವಾರ್ ತಿರುನಕ್ಷತ್ರ.
  8. ಸದಾಯಂ – ಪೇಯಾಳ್ವಾರ್ ತಿರುನಕ್ಷತ್ರ.
  9. ದೀಪಾವಳಿ – ಆಳ್ವಾರ್‌ಗಳು ಮತ್ತು ಆಚಾರ್ಯರು ಆದಿನಾಥರ್ ಆಳ್ವಾರ್ ದೇವಾಲಯಕ್ಕೆ ಮೆರವಣಿಗೆಯಲ್ಲಿ ಹೋಗುತ್ತಾರೆ.

ಕಾರ್ತಿಕೈ (ವೃಶ್ಚಿಕ ಮಾಸ)

  1. ಕಾರ್ತಿಕೈ ನಕ್ಷತ್ರ-ತಿರುಮಂಗೈ ಆಳ್ವಾರರ ತಿರುನಕ್ಷತ್ರ.
  2. ರೋಹಿಣಿ ನಕ್ಷತ್ರ- ತಿರುಪ್ಪಾಣಾಳ್ವಾರ್ ತಿರುನಕ್ಷತ್ರ.
  3. ಶ್ರೀ ಪಾಂಚರಾತ್ರ ತಿರುಕಾರ್ತಿಕೈ ದೀಪಂ – ಸೊರ್ಕ್ಕಪ್ಪಣೈ, ಆಳ್ವಾರರ ದಿವ್ಯಗಂಟಲಿಗೆ ಎಣ್ಣೆ ಹಚ್ಚುವುದು, ಅನಧ್ಯಯನ ಕಾಲ (ನಾಲಾಯಿರಂ ಪಠನ ನಿಲ್ಲುವಾಗ) ಮರುದಿನ ಪ್ರಾರಂಭವಾಗುತ್ತದೆ.
  4. ಶುಕ್ಲ ಪಕ್ಷ ಏಕಾದಶಿ (ಅಮಾವಾಸ್ಯೆಯ ನಂತರ 11ನೇ ದಿನ) – ಕೈಶಿಕ ಏಕಾದಶಿ – ಆಳ್ವಾರ್‌ಗಳು ಮತ್ತು ಆಚಾರ್ಯರು ಆದಿನಾಥರ್ ಆಳ್ವಾರ್ ದೇವಾಲಯಕ್ಕೆ ಮೆರವಣಿಗೆಯಲ್ಲಿ ಹೋಗುತ್ತಾರೆ.
  5. ಕೈಶಿಕ ದ್ವಾದಶಿ – ಕೈಶಿಕ ಪುರಾಣ ಪಠಣ (ಪುರಾಣ ಪಠಣ), ಅಣ್ಣಾವಿಯಾರ್ ಬ್ರಹ್ಮರಥ (ಮಧುರಕವಿ ಆಳ್ವಾರರ ವಂಶಸ್ಥರನ್ನು ಪಲ್ಲಕ್ಕಿಯಲ್ಲಿ ಕೊಂಡೊಯ್ಯುವುದು), ಪೆರುಮಾಳ್ ಗರುಡ ಸೇವೆ, ಆಳ್ವಾರ್ ಹಂಸ ವಾಹನ.

ಮಾರ್ಗಳಿ (ಧನುರ್ಮಾಸ)

  1. ಮಾಸದ ಮೊದಲನೆಯ ದಿನ : ತಿರುಪ್ಪಳ್ಳಿಯೆಳುಚ್ಚಿಯ ಪ್ರಾರಂಭ, ಧನುರ್ಮಾಸ ಕ್ರಮಮ್.
  2. ಅಮಾವಾಸ್ಯೆಯ ನಂತರದ ಮೊದಲ ದಿನ ತಿರು ಅಧ್ಯಯನ ಆರಂಭವಾಗುತ್ತದೆ (ಅಂದಿನ ಒಂದು ಭಾಗವೇ ಉಳಿದಿದ್ದರೂ ಸಹ ಪ್ರಾರಂಭವಾಗುತ್ತದೆ); 21 ದಿನಗಳು – ಪಗಲ್ ಪತ್ತು (ಹಗಲಿನಲ್ಲಿ 10 ದಿನಗಳ ಉತ್ಸವ) 9 ಅಥವಾ 10 ಅಥವಾ 11 ದಿನಗಳವರೆಗೆ ಇರುತ್ತದೆ. ಪಗಲ್ ಪತ್ತಿನ ಸಮಯದಲ್ಲಿ, ಪ್ರತಿದಿನ, ಆಳ್ವಾರ್‌ಗೆ ಎರಡು ದಿವ್ಯ ಅಲಂಕಾರಗಳು.ದಶಮಿಯ ದಿನ ಆಳ್ವಾರರು ಶಯನ ಭಂಗಿಯಲ್ಲಿರುತ್ತಾರೆ, ಎಮ್ಬೆರುಮಾನರರು ನಾಚ್ಚಿಯಾರ್ ದಿವ್ಯಾಲಂಕಾರದಲ್ಲಿ ಕಂಗೊಳಿಸುತ್ತಾರೆ.
  3. ಶುಕ್ಲ ಪಕ್ಷ ಏಕಾದಶಿ (11ನೇ ದಿನ) – ವೈಕುಂಠ ಏಕಾದಶಿ. ಪೊಳಿಂದು ನಿನ್ರ ಪಿರಾನ್ – ಶಯನ ತಿರುಕ್ಕೋಲದಲ್ಲಿ ಇರುತ್ತಾನೆ. ತಿರುವಾಯ್ಮೊಳಿ ಪಠಣದ ಆರಂಭದ ವ್ಯವಸ್ಥೆಯ ಬಗ್ಗೆ ಪೆರುಮಾಳ್ ಕೇಳಿಸಿಕೊಳ್ಳುತ್ತಾನೆ.
  4. ಇರಾಪತ್ತಿನಲ್ಲಿ – ಪ್ರತಿದಿನ ತಿರುಮುಡಿ ಸೇವೆ (ಎಮ್ಬೆರುಮಾನ್ ತನ್ನ ದಿವ್ಯ ಪಾದಗಳನ್ನು ಆಳ್ವಾರರ ದಿವ್ಯ ತಲೆಯ ಮೇಲೆ ಇಟ್ಟುಕೊಂಡು ತನ್ನ ಕರುಣೆಯನ್ನು ಸುರಿಸುವ ಸಂಕೇತವಾಗಿ). ತಿರುವಾದಿರೈ ದಿನದಂದು, ಆಳ್ವಾರ್ ಮತ್ತು ಎಮ್ಬೆರುಮಾನಾರ್‌ಗೆ ಜಂಟಿ ತಿರುಮಂಜನಂ (ದಿವ್ಯ ಸ್ನಾನ). 8ನೇ ದಿನ – ತಿರುವೆಡುಪರಿ (ತಿರುಮಂಗೈ ಆಳ್ವಾರ್ ಕುದುರೆಯ ಮೇಲಿರುವ ಎಮ್ಬೆರುಮಾನನ ಸುತ್ತಲೂ ಪ್ರದಕ್ಷಿಣೆ ಮಾಡುತ್ತಾರೆ). 10ನೇ ದಿನ – ನಮ್ಮಾಳ್ವಾರ್ ಮೋಕ್ಷಂ(ಮುಕ್ತಿ). 11ನೇ ದಿನ – ವೀಡು ವಿಡೈ ತಿರುಮಂಜನಂ (ಮೋಕ್ಷದಿಂದ ಹಿಂದಿರುಗಿದ ನಂತರ ದಿವ್ಯ ಸ್ನಾನ).
  5. ಮುಂದಿನ ತಿರುವಿಶಾಖ – ಅನಧ್ಯಯನ ಕಾಲದ ಅಂತ್ಯ.
  6. ಕೇತ್ತೈ/ಜ್ಯೇಷ್ಠ ನಕ್ಷತ್ರ- ತೊಂಡರಡಿಪ್ಪೊಡಿ ಆಳ್ವಾರ್ ತಿರುನಕ್ಷತ್ರ.

ತೈ (ಮಕರ ಮಾಸ)

  1. ಸಂಕ್ರಾಂತಿ- ವಂಗಕ್ಕಡಲ್ (ತಿರುಪ್ಪಾವೈನ ಕಡೆಯ ಪಾಶುರ)ಮತ್ತು ತಿರುಪ್ಪಳ್ಳಿಯೆಳುಚ್ಚಿಯ ಶಾತ್ತುಮೊರೈ.
  2. ಕನೂ ಹಬ್ಬ ತಾಯಾರ್ ಗಳಿಗೆ ತೀರ್ಥವಾರಿ.
  3. ಮಖಂ – ತಿರುಮೊಳಿಶೈ ಆಳ್ವಾರರ ತಿರುನಕ್ಷತ್ರ.
  4. ತಿರುನಕ್ಷತ್ರ ಹಸ್ತಂ-ಕೂರತ್ತಾಳ್ವಾನ್ ಆದಿನಾಥ/ಆಳ್ವಾರ್ ದೇವಾಲಯಕ್ಕೆ ಭೇಟಿ ನೀಡಿ ಮಂಗಳಾಶಾಸನ ಮಾಡುತ್ತಾರೆ.

ಮಾಸಿ (ಕುಂಭ ಮಾಸ)

  1. ಮಾಸಿ ಉತ್ಸವದ ಮೊದಲ ದಿನ- ವೆನ್ನೀರ್ ಕಾಪ್ಪು (ಬೆಚ್ಚನೆಯ ನೀರಿನ ರಕ್ಷಣೆ).
  2. ಪ್ಲವೋತ್ಸವ (ತೆಪ್ಪೋತ್ಸವ – ತೇಲುವ ಹಬ್ಬ) – ಪ್ರತಿಷ್ಠೋತ್ಸವ (ಆಳ್ವಾರರ ದೈವಿಕ ವಿಗ್ರಹದ ಸ್ಥಾಪನೆಯ ದಿನ) – 13 ದಿನಗಳು. 7ನೇ ದಿನ – ಆಳ್ವಾರ್ ಎಮ್ಬೆರುಮಾನಾರ್‌ಗೆ ಸೇರ್ತಿ ತಿರುಮಂಜನಂ (ಭವಿಷ್ಯದಾಚಾರ್ಯ ಸನ್ನಿಧಿಯಲ್ಲಿ ನೆಡುಸುತ್ತಾರೆ).
  3. 9ನೇ ದಿನ – ತಿರುತ್ತೇರ್. 10ನೇ ದಿನ – ಪೆರುಮಾಳ್ ತೆಪ್ಪೋತ್ಸವ. 11ನೇ ದಿನ – ಆಳ್ವಾರ್ ಮತ್ತು ಆಚಾರ್ಯರ ತೆಪ್ಪೋತ್ಸವ.
  4. 12ನೇ ದಿನ – ಮಾಸಿ ವಿಶಾಖ – ಆಳ್ವಾರ್ ತನ್ನ ದೈವಿಕ ರೂಪದಲ್ಲಿ ತೀರ್ಥವಾರಿ. 13ನೇ ದಿನ – ಆಳ್ವಾರ್ ತಿರುತ್ತೋಳೈವಿಳ್ಳಿ ಮಂಗಲಕ್ಕೆ (ದೈವಿಕ ವಾಸಸ್ಥಳ) ಮೆರವಣಿಗೆಯ ನಂತರ ಶಾತ್ತುಮೊರೈ. ತಿರುತ್ತೋಳೈವಿಳ್ಳಿ ಮಂಗಲ ಅಧ್ಯಯನ ಉತ್ಸವ ಶಾತ್ತುಮೊರೈ.
  5. ಪುನರ್ವಸು ನಕ್ಷತ್ರ : ಕುಲಶೇಖರ ಆಳ್ವಾರರ ತಿರುನಕ್ಷತ್ರ.
  6. ಮೃಗಶಿರಾ ನಕ್ಷತ್ರ: ತಿರುಕ್ಕಚ್ಚಿ ನಂಬಿಗಳು (ಭವಿಷ್ಯದಾಚಾರ್ಯ ಸನ್ನಿಧಿಯಿಂದ) ಮಂಗಳಾಶಾಸನಕ್ಕಾಗಿ ಆದಿನಾಥ ಆಳ್ವಾರ್ ದೇವಾಲಯಕ್ಕೆ ರಥದಲ್ಲಿ ಬರುತ್ತಾರೆ.

ಪಂಗುನಿ(ಮೀನ ಮಾಸ)

  1. ಪಂಗುನಿ – ಪೆರುಮಾಳ್ ಬ್ರಹ್ಮೋತ್ಸವ – 10 ದಿನಗಳು. 9ನೇ ದಿನ – ತಿರುತ್ತೇರ್. 10ನೇ ದಿನ – ಪಂಗುಣಿ ಉತ್ತರಂ – ಮಿಕ್ಕ ಅದಿಪ್ಪಿರಾಣ್ ತೀರ್ಥವಾರಿ.
  2. ಉತ್ತರಂ – ಆದಿ ನಾಚ್ಚಿಯಾರ್ ಉಡಯವರ್ ಕೋಯಿಲಿಗೆ ಮೆರವಣಿಗೆ ಹೋಗುತ್ತಾರೆ.
  3. ಯುಗಾದಿ- ಆಳ್ವಾರ್‌ಗಳು ಮತ್ತು ಆಚಾರ್ಯರು ಆದಿನಾಥ ಆಳ್ವಾರ್ ದೇವಾಲಯಕ್ಕೆ ಮೆರವಣಿಗೆ ಹೋಗುತ್ತಾರೆ. ಹೊಸ ಪಂಚಾಂಗದ ಪಠಣ ಮತ್ತು ಶ್ರವಣ.

ಟಿಪ್ಪಣಿಗಳು

  1. ಉತ್ಸವದ ಐದನೇ ದಿನದಂದು ಸಾಮಾನ್ಯವಾಗಿ, ಪೆರುಮಾಳ್ ಗರುಡ ಸೇವೆಯಲ್ಲಿ ಮೆರವಣಿಗೆ ಹೊರಡುತ್ತಾರೆ, ಆಳ್ವಾರ್ ಹಂಸ ವಾಹನದಲ್ಲಿ ಮೆರವಣಿಗೆ ಹೊರಡುತ್ತಾರೆ.
  2. ನಾಲ್ಕು ಉತ್ಸವಗಳಲ್ಲೂ, ಗರುಡ/ಹಂಸ ಧ್ವಜಾರೋಹಣವು ಉತ್ಸವದ ಆರಂಭವನ್ನು ಸೂಚಿಸುತ್ತದೆ.ನಾಲ್ಕು ಉತ್ಸವಗಳಲ್ಲೂ, ತಿರುತ್ತೇರ್ (ದಿವ್ಯ ರಥದ ಒಳಗೆ ಮೆರವಣಿಗೆ) ಇರುತ್ತದೆ.
  3. ಆದಿನಾಥ ಆಳ್ವಾರ್ ದೇವಾಲಯದಲ್ಲಿ ತೀರ್ಥವಾರಿ ಇದ್ದಾಗೆಲ್ಲಾ ಭವಿಷ್ಯದಾಚಾರ್ಯ ಸನ್ನಿಧಿಯಲ್ಲಿ ತಿರುಮಣ್ಕಾಪು (ಹಣೆಯ ಮೇಲೆ ದೈವಿಕ ಗುರುತು ಹಚ್ಚುವುದು) ಇರುತ್ತದೆ.

ಆಧಾರ ಗ್ರಂಥ- ಕಾರಿಮಾರನ್ ಕಾಲೈಕ್ಕಪ್ಪಗಂನಾಟ್ಕುರಿಪ್ಪು

ಆಳ್ವಾರ್ , ಎಮ್ಬೆರುಮಾನರ್, ಲೋಕಾಚಾರ್ಯರರ್, ಜೀಯರ್ ತಿರುವಡಿಗಳೇ ಶರಣಂ

ಅಡಿಯೇನ್ ಕಸ್ತೂರಿ ರಂಗನ್ ರಾಮಾನುಜ ದಾಸನ್

ಮೂಲ : https://granthams.koyil.org/2022/12/07/azhwarthirunagari-vaibhavam-6-english/

ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org

Leave a Comment