ಶ್ರೀಮತೇ ಶಠಗೋಪಯ ನಮಃ ,ಶ್ರೀಮತೇ ರಾಮಾನುಜಾಯ ನಮಃ, ಶ್ರೀಮದ್ ವರವರಮುನಯೇ ನಮಃ , ಶ್ರೀವಾನಾಚಲ ಮಹಾಮನಯೇ ನಮಃ
<< ಪೂತನ ಸಂಹಾರ

ಶ್ರೀಕೃಷ್ಣನು ಸ್ವಲ್ಪ ದೊಡ್ಡವನಾದ ಮೇಲೆ ತಾನೇ ಅಂಗತ್ತನಾಗಲು ಪ್ರಾರಂಭಿಸಿದ ಸಮಯದಲ್ಲಿ ಮತ್ತೊಂದು ದಿವ್ಯವಾದ ಲೀಲೆ ಎಂದರೆ ಶಕತಾಸುರ ವಧೆ.ಈ ಘಟನೆಯನ್ನು ಅನೇಕ ಕಡೆಗಳಲ್ಲಿ ಆಳ್ವಾರರು ಸಹ ಆನಂದಿಸಿದ್ದಾರೆ ಮತ್ತು ಸುಂದರವಾದ ವ್ಯಕ್ತಪಡಿಸಿದ್ದಾರೆ. ನಮ್ಮಾಳ್ವಾರ್ ಅವರು ತಮ್ಮ ತಿರುವಾಯ್ಮೊಳಿ ೬.೯.೪ಯಲ್ಲಿ.
“ತಳನ್ದುರ್ಮ್ ಮುರಿನ್ದುಮ್ ಶಗಡವಶುರರ್ ಉಡಲ್ ವೇರಾ ಪಿಳನ್ದು ವೀಯ ತ್ತಿರುಕ್ಕಾಲ್ ಆಣ್ಡ ಪೆರುಮಾನ್!”(ಓ ಪ್ರಭುವೇ ನಿನ್ನ ದಿವ್ಯ ಚರಣದ ಪ್ರಹಾರದಿಂದ ಶಕಟಾಸುರನ ದೇಹವು ದೃಢತೆಯನ್ನು ಕಳೆದುಕೊಳ್ಳುವಂತೆ ಮಾಡಿ ತನ್ಮೂಲಕ ತನ್ನ ರೂಪವನ್ನು ಕಳೆದುಕೊಳ್ಳುವಂತೆ ಮಾಡಲು, ಅವನ ದೇಹವು ಎರಡು ಭಾಗವಾಗಿ ತುಂಡುತುಂಡಾಯಿತು ).
ಒಮ್ಮೆ ತಾಯಿ ಯಶೋದೆಯಯು ಎತ್ತಿನ ಗಾಡಿಯ ಚಕ್ರದ ಅಡಿಯಲ್ಲಿ, ತೊಟ್ಟಿಲು ಕಟ್ಟಿ ಶ್ರೀಕೃಷ್ಣನನ್ನು ಅಲ್ಲಿ ಮಲಗಿಸಿ ತನ್ನ ಕೆಲಸದಲ್ಲಿ ಮಗ್ನಳಾದಳು. ಆ ಸಮಯದಲ್ಲಿ, ಕಂಸನಿಂದ ಕಳುಹಿಸಲ್ಪಟ್ಟ ರಾಕ್ಷಸನು ಕೃಷ್ಣನನ್ನು ಕೊಲ್ಲಲು ಸುಲಭವಾದ ಮಾರ್ಗವನ್ನು ಕುರಿತು ಯೋಚಿಸುತ್ತಿದ್ದನು ಮತ್ತು ಗಾಡಿಯ ಚಕ್ರವನ್ನು ಪ್ರವೇಶಿಸಿದನು. ಅವನು ಶ್ರೀಕೃಷ್ಣನನ್ನು ಕೊಲ್ಲುವ ಉದ್ದೇಶದಿಂದ ಅವನ ಕಡೆಗೆ ತಿರುಗಲು ಪ್ರಾರಂಭಿಸಿದನು. ಅದೇ ಕ್ಷಣದಲ್ಲಿ, ಕೃಷ್ಣನು ಎಚ್ಚರಗೊಂಡು, ತನ್ನ ದಿವ್ಯ ಪಾದಗಳನ್ನು ಗಾಳಿಯಲ್ಲಿ ಒದೆಯುತ್ತಾ ತಾಯಿಯ ಹಾಲಿಗಾಗಿ ಅಳಲು ಪ್ರಾರಂಭಿಸಿದನು. ಆ ಶಕತಾಸುರನು ಎಂಪೆರುಮಾನಿನ ದಿವ್ಯ ಪಾದಗಳ ಸಮೀಪಕ್ಕೆ ಬಂದು ದಿವ್ಯ ಪಾದಗಳಿಂದ ಒದೆಯಲ್ಪಟ್ಟನು. ಅವನು ತಕ್ಷಣವೇ ದುರ್ಬಲನಾದನು, ತುಂಡುಗಳಾಗಿ ಮುರಿದು ನೆಲದ ಮೇಲೆ ಬಿದ್ದನು. ಬಂಡಿಯೂ ಕೂಡ ತಕ್ಷಣ ಕಳಚಿ ಬಿದ್ದಿತು. ಇದನ್ನು ನೋಡಿದ ತಾಯಿ ಯಶೋದೆ ಕೃಷ್ಣನ ಬಳಿಗೆ ಓಡಿ ಬಂದು ಅವನನ್ನು ಎತ್ತಿಕೊಂಡು ಅಎತ್ತಿಕೊಂಡಳು. ಕೃಷ್ಣನು ಭಗವಂತನ ಕೃಪೆಯಿಂದ ಮಾತ್ರ ರಕ್ಷಿಸಲ್ಪಟ್ಟನು ಎಂದು ಅಲ್ಲಿದ್ದವರೆಲ್ಲರೂ ಭಾವಿಸಿದ್ದರು.
ಈ ಲೀಲಾಸಾರವೇನೆಂದರೆ :
- ಭಗವಂತನ ದಿವ್ಯ ಪಾದಗಳು ನಮಗೆ ರಕ್ಷಾಕವಚವಾಗಿರುವಂತೆ, ಅವನಿಗೂ ಸಹ ಅವನ ಪಾದಗಳು ರಕ್ಷಾಕವಚವಾಗಿದೆ.
- ಭಗವಂತನು ದುಷ್ಟರ ಶಿಕ್ಷೆಗಾಗಿ ಪ್ರತ್ಯೇಕವಾಗಿ ಪ್ರಯತ್ನ ಮಾಡಬೇಕಾಗಿಲ್ಲ, ಅವನು ಅದನ್ನು ಅನಾಯಾಸವಾಗಿ ಸಾಧಿಸಬಹುದು.
- ಭಗವಂತನಿಗೆ ದುಷ್ಟ ಸಂಹಾರ ಮಾಡುವುದಕ್ಕೆ ಯಾವುದೇ ವಿಶೇಷ ಆಯುಧಗಳ ಅಗತ್ಯವಿಲ್ಲ. ಅವನು ತನ್ನ ದಿವ್ಯ ಮಂಗಳ ರೂಪದಿಂದ/ದಿವ್ಯಾಂಗಗಳ ಸಾಮರ್ಥ್ಯದಿಂದಲೇ ಅದನ್ನು ಮಾಡಬಹುದು .
ಅನುವಾದ – ಅಡಿಯೇನ್ ಕಸ್ತೂರಿರಂಗನ್ ರಾಮಾನುಜ ದಾಸನ್
ಪುರಾವೆ ಓದುವಿಕೆ – ಅಡಿಯೇನ್ ಹೇಮಲತಾ ರಾಜನ್ ರಾಮಾನುಜ ದಾಸಿ
ಮೂಲ : https://granthams.koyil.org/2023/08/26/krishna-leela-4-english/
ಆರ್ಕೈವ್ ಮಾಡಲಾಗಿದೆ – https://granthams.koyil.org
ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org