ಕೃಷ್ಣ ಲೀಲೆಗಳ ಸಾರಾಂಶ – 5 – ತೃಣಾವರ್ತನ ಉದ್ಧಾರ

ಶ್ರೀಮತೇ ಶಠಗೋಪಯ ನಮಃ ,ಶ್ರೀಮತೇ ರಾಮಾನುಜಾಯ ನಮಃ, ಶ್ರೀಮದ್ ವರವರಮುನಯೇ ನಮಃ , ಶ್ರೀವಾನಾಚಲ ಮಹಾಮನಯೇ ನಮಃ

ಕೃಷ್ಣ ಲೀಲೆಗಳ ಸಾರಾಂಶ

<< ಶಕಟಾಸುರ ವಧೆ

ಕೃಷ್ಣನು  ಕೌಮಾರಾವಸ್ಥೆಗೆ ಬರುತ್ತಿದ್ದ ಸಮಯದ ಒಂದು ಘಟನೆಯನ್ನು ಈಗ ನಾವು ನೋಡೋಣ. ಗೋಕುಲದಲ್ಲಿ, ಒಮ್ಮೆ ಕೃಷ್ಣನು ನೆಲದ ಹಾಸಿನ ಮೇಲೆ ಕುಳಿತಿದ್ದನು. 

ಕಂಸನಿಂದ ಕಳುಹಿಸಲ್ಪಟ್ಟ ತೃಣಾವರ್ತನೆಂಬ ರಾಕ್ಷಸನು ಅಲ್ಲಿಗೆ ಬಂದನು. ಅವನು ದೊಡ್ಡ ಬಿರುಗಾಳಿಯ ರೂಪವನ್ನು ತಾಳಿ  ಕೃಷ್ಣನನ್ನು ಕೊಲ್ಲಲು ಬಯಸಿದ್ದನು. ಮೊದಲಿಗೆ ಅವನು ಅಲ್ಲಿ ದೊಡ್ಡ ಬಿರುಗಾಳಿಯನ್ನು ಸೃಷ್ಟಿಸಿ ಎಲ್ಲೆಡೆ ಧೂಳು ಹರಡುವಂತೆ ಮಾಡಿದನು. ಅವನು ಕೃಷ್ಣನನ್ನು ಎತ್ತಿಕೊಂಡು ಆಕಾಶಕ್ಕೆ ಹಾರಿದನು. ಆ ಧೂಳಿನಿಂದ ಪಟ್ಟಣದ ಎಲ್ಲಾ ನಿವಾಸಿಗಳ ಕಣ್ಣುಗಳನ್ನು ಮುಚ್ಚಿದನು. ಎಲ್ಲರಿಗೂ ಭಯವನ್ನುಂಟುಮಾಡಲು ಭಯಾನಕವಾದ ಶಬ್ದವನ್ನು ಸಹ ಮಾಡಿದನು. 

ಆ ಸಮಯದಲ್ಲಿ ಅಲ್ಲಿದ್ದ ತಾಯಿ ಯಶೋದೆಗೆ ಕೃಷ್ಣನು ಕಾಣಿಸಲಿಲ್ಲ ಮತ್ತು ಪರಿಸ್ಥಿತಿ ಅರ್ಥವಾಗಲಿಲ್ಲ. ಅವಳು ಕೆಳಗೆ ಬಿದ್ದು ಅಳಲು ಪ್ರಾರಂಭಿಸಿದಳು. ಅಲ್ಲಿದ್ದ ಗೋಪಿಕೆಯರು ಸಹ ಯಶೋಧೆಯೊಂದಿಗೆ ಸೇರಿ ಅಳಲು ಪ್ರಾರಂಭಿಸಿದರು.

 ಆಕಾಶಕ್ಕೆ ಹಾರಿದ ತೃಣಾವರ್ತನು ಕೃಷ್ಣನನ್ನು ಕೊಲ್ಲಲು ಪ್ರಯತ್ನಿಸಿದನು. ಆದರೆ ಕೃಷ್ಣನು ತನ್ನನ್ನು ತಾನೇ ತುಂಬಾ ಭಾರವಾಗಿಸಿಕೊಂಡನು ಮತ್ತು ರಾಕ್ಷಸನಿಗೆ ಅವನನ್ನು ಹೊತ್ತುಕೊಳ್ಳಲು ಕಷ್ಟವಾಗುವಂತೆ ಮಾಡಿದನು. ನಂತರ, ಕೃಷ್ಣನ ಭಾರವನ್ನು ಹೊರಲು ಸಾಧ್ಯವಾಗದೆ, ಅವನು  ಉಸಿರುಕಟ್ಟಿ , ದೊಡ್ಡ ಶಬ್ದದೊಂದಿಗೆ ನೆಲಕ್ಕೆ ಬಿದ್ದು ಸತ್ತನು. ಅದನ್ನು ನೋಡಿ ಅಲ್ಲಿ ನೆರೆದಿದ್ದ ಜನರು ಭಯಭೀತರಾದರು. ಅಲ್ಲಿದ್ದ ಗೋಪಿಕೆಯರು, ಅಪಾಯವಿಲ್ಲದೆ ಮತ್ತು ನಗುತ್ತಾ ರಾಕ್ಷಸನ ಮೇಲೆ ಕುಳಿತಿದ್ದ ಕೃಷ್ಣನನ್ನು ನೋಡಿ, ಅವನನ್ನು ಎತ್ತಿಕೊಂಡು ಯಶೋದೆಗೆ ಒಪ್ಪಿಸಿದರು. 

ಈ ಲೀಲೆಯ ಸಾರಾಂಶ

●  ಭಗವಂತನ ಮೇಲೆ ದಾಳಿ ಮಾಡಲು ಬರುವ ಶತ್ರುವಿನ ಶಕ್ತಿಯು ಎಷ್ಟೇ ದೊಡ್ಡದಾಗಿದ್ದರೂ,ಅವನು ಅಂತಹ ಶತ್ರುಗಳನ್ನು ಸುಲಭವಾಗಿ ನಾಶಪಡಿಸುತ್ತಾನೆ. ವನು ಅಂತಹ ಶತ್ರುಗಳನ್ನು ಸುಲಭವಾಗಿ ನಾಶಪಡಿಸುತ್ತಾನೆ. 

● ಪ್ರತಿ ಬಾರಿ ಅಪಾಯ ಬಂದಾಗಲೂ, ಭಗವಂತನು ತನ್ನನ್ನು ಮತ್ತು ಈ ಜಗತ್ತನ್ನು ರಕ್ಷಿಸುತ್ತಾನೆ. ಆದ್ದರಿಂದ, ನಾವು ಸಂಪೂರ್ಣವಾಗಿ ಅವನಿಗೆ ಶರಣಾಗಬೇಕು.

ಅನುವಾದ – ಅಡಿಯೇನ್ ಕಸ್ತೂರಿರಂಗನ್ ರಾಮಾನುಜ ದಾಸನ್
ಪುರಾವೆ ಓದುವಿಕೆ – ಅಡಿಯೇನ್ ಹೇಮಲತಾ ರಾಜನ್ ರಾಮಾನುಜ ದಾಸಿ

ಮೂಲ : https://granthams.koyil.org/2023/08/26/krishna-leela-5-english/

ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org

Leave a Comment