ಕೃಷ್ಣ ಲೀಲೆಗಳ ಸಾರಾಂಶ – 6 – ಯಶೋದ ಕೃಷ್ಣನ ಬಾಯಿಯಲ್ಲಿ ಇಡೀ ಬ್ರಹ್ಮಾಂಡವನ್ನು ನೋಡಿದ ಪ್ರಸಂಗ

ಶ್ರೀಮತೇ ಶಠಗೋಪಯ ನಮಃ ,ಶ್ರೀಮತೇ ರಾಮಾನುಜಾಯ ನಮಃ, ಶ್ರೀಮದ್ ವರವರಮುನಯೇ ನಮಃ , ಶ್ರೀವಾನಾಚಲ ಮಹಾಮನಯೇ ನಮಃ

ಕೃಷ್ಣ ಲೀಲೆಗಳ ಸಾರಾಂಶ

<< ತೃಣಾವರ್ತನ ಉದ್ಧಾರ

ಕೃಷ್ಣ ಮತ್ತು ಬಲರಾಮ ಚೆನ್ನಾಗಿ ಅಂಬೆಗಾಲಿಡಲು ಪ್ರಾರಂಭಿಸಿದರು. ಅವರು ಎಲ್ಲೆಂದರಲ್ಲಿ ತೆವಳುತ್ತಾ ಹೋದರು, ಮಣ್ಣಿನಲ್ಲಿ ಆಡಿದರು, ತಮ್ಮ ತಾಯಂದಿರಾದ ಯಶೋದೆ ಮತ್ತು ರೋಹಿಣಿಯ ಬಳಿಗೆ ಮರಳಿದರು, ಅವರ ತೊಡೆಯ ಮೇಲೆ ಹತ್ತಿ ಸುಂದರವಾಗಿ ಹಾಲು ಕುಡಿದರು.

ಸಾಮಾನ್ಯವಾಗಿ, ಗೋಪಾಲಕರ  ಕುಲದಲ್ಲಿ, ಸ್ನಾನ ಮುಂತಾದ ಆಚಾರಗಳು ಕಡಿಮೆ. ಭಗವಾನ್ ಶ್ರೀಕೃಷ್ಣ ಗೋಪಾಲಕರ ಮುಖ್ಯಸ್ಥನಾಗಿ ಅವತರಿಸಿದ್ದರಿಂದ, ಅವನು ಅಂತಹ ಒಳ್ಳೆಯ ಆಚಾರಗಳನ್ನು ಸಂಪೂರ್ಣವಾಗಿ ತ್ಯಜಿಸಿದ್ದನು. ಯಶೋದೆ ಅವನಿಗೆ ಸ್ನಾನ ಮಾಡಿಸಲು ಬಹಳ ಕಷ್ಟಪಡುತ್ತಿದ್ದಳು. ಪೆರಿಯಾಳ್ವಾರ್ ತಿರುಮೊಳಿಯಲ್ಲಿ, ಪೆರಿಯಾಳ್ವಾರ್ ಯಶೋದಾ ಮಾತೆಯ ಮನೋಭಾವದಲ್ಲಿ ಕೃಷ್ಣನ ತಿರುಮಂಜನದ ಲೀಲೆಯನ್ನು  ” ವೆಣ್ಣಯ್  ಅಳೈಂದ ಕುಣುಂಗುಮ್” ಎಂಬಲ್ಲಿಂದ ಪ್ರಾರಂಭಿಸಿ ಹತ್ತು ಪಾಶುರಗಳನ್ನು ಹಾಡಿದ್ದಾರೆ.

ಈ ರೀತಿಯಾಗಿ, ಸ್ವಲ್ಪ ಸಮಯದ ನಂತರ, ಕೃಷ್ಣ ನಿಲ್ಲಲು ಮತ್ತು ನಡೆಯಲು ಸಹ ಪ್ರಾರಂಭಿಸಿದನು. ಅಂದಿನಿಂದ ಅವನ ತುಂಟಾಟವು ಪ್ರಾರಂಭವಾಯಿತು. ಅವನು ಯಾವಾಗಲೂ ಹುಡುಗಿಯರ ಕೂದಲನ್ನು ಎಳೆಯುವುದು, ಅವರ ಬಟ್ಟೆಗಳನ್ನು ಎಳೆಯುವುದು, ಬೆಣ್ಣೆಯನ್ನು ಕದಿಯುವುದು, ಮಡಕೆಗಳನ್ನು ಒಡೆಯುವುದು, ಹಸುಗಳು ಮತ್ತು ಕರುಗಳನ್ನು ಕೆಣಕುವುದು ಮುಂತಾದ ತುಂಟಾಟಗಳಲ್ಲಿ ತೊಡಗುತ್ತಿದ್ದನು.

ಒಮ್ಮೆ, ಎಲ್ಲಾ ಮಕ್ಕಳು ಮಣ್ಣಿನ ರಸ್ತೆಯಲ್ಲಿ ಆಟವಾಡುತ್ತಿದ್ದಾಗ, ಕೃಷ್ಣ ಸ್ವಲ್ಪ ಮಣ್ಣನ್ನು ತೆಗೆದುಕೊಂಡು ತಿಂದನು. ಅಲ್ಲಿ ನೆರೆದಿದ್ದ ಮಕ್ಕಳು ಯಶೋದೆ ಮಾತೆಯ ಬಳಿಗೆ ಹೋಗಿ ದೂರು ನೀಡಿದರು. ಅದನ್ನು ಕೇಳಿದ ತಕ್ಷಣ, ಅವಳು ಕೋಪದಿಂದ ಕೃಷ್ಣನ ಕಡೆಗೆ ಹೋಗಿ “ನೀನು ಮಣ್ಣನ್ನು ಏಕೆ ತಿಂದೆ?” ಎಂದು ಕೇಳಿದಳು. ಕೃಷ್ಣ “ನಾನು ಅದನ್ನು ಮಾಡಲೇ ಇಲ್ಲ” ಎಂದು ಉತ್ತರಿಸಿದನು. ಅವಳು “ಬಾ! ನಿನ್ನ ಬಾಯಿ ತೆರೆ, ನಾನು ನೋಡಬೇಕು” ಎಂದಳು. ಅವನು ತನ್ನ ತಾಯಿಯನ್ನು ಸ್ವಲ್ಪ ದಿಗ್ಭ್ರಮೆಗೊಳಿಸಲು ಯೋಚಿಸಿದನು. ಅವನು ತನ್ನ ಬಾಯಿಯನ್ನು ತೆರೆದು ಇಡೀ ಜಗತ್ತನ್ನು, ತನ್ನನ್ನು ಮತ್ತು ಅವಳನ್ನು ತನ್ನ ಬಾಯಿಯೊಳಗೆ ತೋರಿಸಿದನು. ಅವಳು ದಿಗ್ಭ್ರಮೆಗೊಂಡಳು ಮತ್ತು ಇತರ ಗೋಪಿಕೆಯರನ್ನು ಅದನ್ನು ನೋಡಲು ಕರೆದಳು. ಅವರೆಲ್ಲರೂ ಆ ಅದ್ಭುತ ದೃಶ್ಯವನ್ನು ನೋಡಿ ದಿಗ್ಭ್ರಮೆಗೊಂಡರು. ಆದರೆ ಒಂದು ಕ್ಷಣದೊಳಗೆ, ಅವನು ಈ ಘಟನೆಯನ್ನು ಎಲ್ಲರು ಮರೆಯುವುದು ಮಾಡಿದನು.

ಪೆರಿಯಾಳ್ವಾರ್ ತಮ್ಮ ಪೆರಿಯಾಳ್ವಾರ್ ತಿರುಮೊಳಿಯಲ್ಲಿ””ವಾಯುಳ್ ವೈಯಗಂ ಕಣ್ದ ಮದ ನಲ್ಲಾರ್ ಆಯರ್ ಪುತ್ತಿರನ್ ಅಲ್ಲನ್ ಅರುಂದೈವಂ ಪಾಯ ಸೀರುಡೈಪ್ ಪಣ್ಬುಡೈಪ್ ಪಾಲಗನ್ ಮಾಯನ್ ಎನ್ರು ಮಗಿಳ್ನ್ದರ್ ಮಾದರೇ” (ಗೋಕುಲದ ಸದ್ಗುಣಿ ಸ್ತ್ರೀಯರು ಕೃಷ್ಣನ ಬಾಯಿಯಲ್ಲಿ ಜಗತ್ತನ್ನು ಕಂಡರು; ಅವರು “ಕೃಷ್ಣ ಕೇವಲ ಗೋಪ ಬಾಲಕನಲ್ಲ, ಆದರೆ ಅದ್ಭುತವಾದ ಮತ್ತು ಮಂಗಳಕರ ಗುಣಗಳನ್ನು ಹೊಂದಿರುವ ಪರಮಾತ್ಮ” ಎಂದು ಯೋಚಿಸಿ ಅದರ ಬಗ್ಗೆ ಚರ್ಚಿಸಿ ಸಂತೋಷಪಟ್ಟರು) ಎಂದು ಈ ಘಟನೆಯನ್ನು ಆನಂದಿಸಿ ಕರುಣೆಯಿಂದ ವಿವರಿಸಿದ್ದಾರೆ.

ಈ ಘಟನೆಯ ಸಾರಾಂಶ:

  • ಎಂಬೆರುಮಾನ್ ಕೃಷ್ಣಾವತಾರದಲ್ಲಿ ತನ್ನ ಸರಳತೆ ಮತ್ತು ಶ್ರೇಷ್ಠತೆ ಎರಡನ್ನೂ ತೋರಿಸಿದನು.
  • ಎಂಬೆರುಮಾನ್ ತನ್ನ ಭಕ್ತರಿಗೆ ತನ್ನ ಅದ್ಭುತ ಲೀಲೆಗಳಿಂದ  ಆನಂದಪಡುತ್ತಾನೆ.

ಅನುವಾದ – ಅಡಿಯೇನ್ ಕಸ್ತೂರಿರಂಗನ್ ರಾಮಾನುಜ ದಾಸನ್
ಪುರಾವೆ ಓದುವಿಕೆ – ಅಡಿಯೇನ್ ಹೇಮಲತಾ ರಾಜನ್ ರಾಮಾನುಜ ದಾಸಿ

ಮೂಲ : https://granthams.koyil.org/2023/08/28/krishna-leela-6-english/

ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org

Leave a Comment