ಕೃಷ್ಣ ಲೀಲೆಗಳ ಸಾರಾಂಶ – 13 – ಧೇನುಕಾಸುರ ವಧೆ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ

ಕೃಷ್ಣ ಲೀಲೆಗಳ ಸಾರಾಂಶ

<< ಬ್ರಹ್ಮನ ಗರ್ವಭಂಗ

ಕೃಷ್ಣ ಮತ್ತು ಬಲರಾಮ ತಮ್ಮ ಗೆಳೆಯರೊಂದಿಗೆ ಕಾಡಿನಲ್ಲಿ ಸಂತೋಷದಿಂದ ಆಡುತ್ತಿದ್ದರು. ಒಮ್ಮೆ ಹಾಗೆ ಆಡುತ್ತಿರುವಾಗ, ಅವರ ಗೆಳೆಯರಾದ ಗೋಪಾಲಕರು, ತಾಳವನ ಎಂಬ ಸ್ಥಳದಲ್ಲಿ (ತಾಳೆ ಮರಗಳ ತೋಪು) ಸಿಹಿ ಹಣ್ಣುಗಳು ಹೇರಳವಾಗಿವೆ ಎಂದು ಹೇಳಿದರು. ಆದರೆ ಅಲ್ಲಿ ಧೇನುಕಾಸುರ ಎಂಬ ಕತ್ತೆಯ ರೂಪದಲ್ಲಿರುವ ರಾಕ್ಷಸನಿಂದ ತೊಂದರೆಯಾಗುತ್ತಿದೆ ಎಂದರು. ಈ ಧೇನುಕ ಕೃಷ್ಣನ ಆಗಮನಕ್ಕಾಗಿ ಕಾಯುತ್ತಿದ್ದ. ಅವನನ್ನು ಕಂಸ ಕಳುಹಿಸಿದ್ದನು ಮತ್ತು ಕೃಷ್ಣ ಅಲ್ಲಿಗೆ ಬಂದಾಗ ಅವನನ್ನು ಕೊಲ್ಲಲು ಹೊಂಚುಹಾಕಿದ್ದನು.

ಇದನ್ನು ತಿಳಿದ ಕೃಷ್ಣ ಮತ್ತು ಬಲರಾಮ ತಕ್ಷಣ ತಾಳವನಕ್ಕೆ ಹೋದರು. ಬಲರಾಮ ಹಣ್ಣುಗಳಿಂದ ತುಂಬಿದ ಮರಗಳನ್ನು ಅಲುಗಾಡಿಸಲು ಪ್ರಾರಂಭಿಸಿದನು. ಮರಗಳಿಂದ ಹಣ್ಣುಗಳು ಕೆಳಗೆ ಬೀಳತೊಡಗಿದವು. ಈ ಶಬ್ದವನ್ನು ಕೇಳಿದ ಧೇನುಕಾಸುರ ಬಲರಾಮನ ಕಡೆಗೆ ಓಡಿ ಬಂದನು. ಬಲರಾಮನು ಅವನ ಹಿಂಗಾಲುಗಳನ್ನು ಹಿಡಿದು ಮೇಲೆತ್ತಿ ಎಸೆದನು. ಧೇನುಕಾಸುರ ಒಂದು ಮರಕ್ಕೆ ಅಪ್ಪಳಿಸಿ ಕೆಳಗೆ ಬಿದ್ದು ಸತ್ತನು. ಇನ್ನಷ್ಟು ರಾಕ್ಷಸರು ದಾಳಿ ಮಾಡಲು ಬಂದರು, ಕೃಷ್ಣ ಮತ್ತು ಬಲರಾಮ ಅವರೆಲ್ಲರನ್ನೂ ಲೀಲಾಜಾಲವಾಗಿ ಸಂಹರಿಸಿದರು.

ಈ ಪ್ರಸಂಗವನ್ನು ಆಳ್ವಾರರು ತಮ್ಮ ಅನೇಕ ಪಾಶುರಗಳಲ್ಲಿ ಕೃಷ್ಣನೇ ಧೇನುಕಾಸುರನನ್ನು ಕೊಂದಿದ್ದಾನೆ ಎಂದು ವಿವರಿಸಿದ್ದಾರೆ.

ಪೆರಿಯಾಳ್ವಾರ್ ತಮ್ಮ ಪೆರಿಯಾಳ್ವಾರ್ ತಿರುಮೊಳಿಯಲ್ಲಿ “ಧೇನುಕನ್ ಆವಿ ಸೆಗುತ್ತುಪ್ ಪನಂಗನಿ ತಾನ್ ಎರಿಂದಿಟ್ಟ” (ಧೇನುಕನನ್ನು ತಾಳೆ ಮರಗಳಿಗೆ ಎಸೆದು ಕೊಂದನು) ಎಂದು ಹೇಳಿದ್ದಾರೆ.

ಆಂಡಾಳ್ ತಮ್ಮ ನಾಚ್ಚಿಯಾರ್ ತಿರುಮೊಳಿಯಲ್ಲಿ “ಕಾಟ್ಟೈನಾಡಿತ್ ಧೇನುಗನುಂ ಕಳಿರುಂ ಪುಳ್ಳುಂ ಉಡನ್ ಮಡಿಯ ,ವೇಟ್ಟೆಯಾಡಿ ವರುವಾನೈ ವಿರುಂದಾವನತ್ತೇ ಕಂಡೋಮೇ” (ಕಾಡಿಗೆ ಹೋಗಿ ಧೇನುಕ, ಕುವಲಯಾಪೀಡ ಆನೆ ಮತ್ತು ಬಕಾಸುರನನ್ನು ಕೊಂದು ಈ ರೀತಿ ಬೇಟೆಯಾಡಿ ಬರುತ್ತಿದ್ದ ಕೃಷ್ಣನನ್ನು ನಾವು ವೃಂದಾವನದಲ್ಲಿ ನೋಡಿದೆವು) ಎಂದು ವರ್ಣಿಸಿದ್ದಾರೆ.

ಇದಲ್ಲದೆ, ತಿರುಮಳಿಶೈ ಆಳ್ವಾರ್ 80ನೇ ಪಾಶುರದಲ್ಲಿ ಈ ಧೇನುಕಾಸುರ ವಧೆಯನ್ನು ವಿವರವಾಗಿ ವಿವರಿಸಿದ್ದಾರೆ: “ವಾಶಿಯಾಗಿ ನೇಸಮಿನ್ರಿ ವಂದೆದಿರ್ಂದ ಧೇನುಕನ್ ನಾಶವಾಗಿ ನಾಳ್ ಉಲಪ್ಪ ನನ್ಮೈ ಸೇರ್ ಪನಂಗನಿಕ್ಕು ವೀಸಿ ಮೇಲ್ ನಿಮಿರ್ಂದ ತೋಳಿಲ್ ಇಲ್ಲೈ ಆಕ್ಕಿನಾಯ್ ಕಳರ್ಕು ಆಸೈಯಾಮ್ ಅವರ್ಕ್ಕಳಾಲ್ ಅಮರರ್ ಆಗಲಾಗುಮೇ” (ಕತ್ತೆಯ ರೂಪದಲ್ಲಿ ಬಂದ ಧೇನುಕಾಸುರನನ್ನು ತಾಳೆ ಹಣ್ಣುಗಳಿಗೆ ಎಸೆದು ಕೊಂದ ಕೃಷ್ಣನ ದಿವ್ಯ ಪಾದಗಳನ್ನು ಆಶ್ರಯಿಸುವುದನ್ನು ಹೊರತುಪಡಿಸಿ ಮೋಕ್ಷಕ್ಕೆ ಬೇರೆ ಮಾರ್ಗವಿಲ್ಲ).

ಈ ಘಟನೆಯ ಮುಖ್ಯ ಸಾರಾಂಶವೇನೆಂದರೆ:

  • ಭಗವಂತನನ್ನು ನಾಶಪಡಿಸುವ ಯಾವುದೇ ಪ್ರಯತ್ನ ವಿಫಲಗೊಳ್ಳುತ್ತದೆ.                                                          
  • ನಾವು ಭಗವಂತನನ್ನು ನಮ್ಮ ಮಿತ್ರನಾಗಿ ಸ್ವೀಕರಿಸಿದಾಗ, ಅದೃಷ್ಟವು ನಮ್ಮನ್ನು ಹಿಂಬಾಲಿಸುತ್ತವೆ.

ಅನುವಾದ – ಅಡಿಯೇನ್ ಕಸ್ತೂರಿರಂಗನ್ ರಾಮಾನುಜ ದಾಸನ್
ಪುರಾವೆ ಓದುವಿಕೆ – ಅಡಿಯೇನ್ ಹೇಮಲತಾ ರಾಜನ್ ರಾಮಾನುಜ ದಾಸಿ

ಮೂಲ : https://granthams.koyil.org/2023/09/12/krishna-leela-13-english/

ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org

Leave a Comment