ಕೃಷ್ಣ ಲೀಲೆಗಳ ಸಾರಾಂಶ – 15 – ಪ್ರಲಂಬಾಸುರನ ವಧೆ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ

ಕೃಷ್ಣ ಲೀಲೆಗಳ ಸಾರಾಂಶ

<< ಕಾಳಿಂಗ ಮರ್ದನ ಘಟನೆ

ಕೃಷ್ಣ  ಮತ್ತು ಬಲರಾಮರು  ತಮ್ಮ ಸ್ನೇಹಿತರೊಂದಿಗೆ ವೃಂದಾವನದಲ್ಲಿ ಸಂತೋಷದಿಂದ ಆಡುತ್ತಿದ್ದರು. ಒಂದು ದಿನ, ಪ್ರಲಂಬ ಎಂಬ ರಾಕ್ಷಸನು ಗೋಪಾಲಕನ ವೇಷದಲ್ಲಿ ಅವರ ಗುಂಪಿಗೆ ಸೇರಿಕೊಂಡನು. ಹೇಗಾದರೂ ಕೃಷ್ಣನನ್ನು ಕೊಲ್ಲಬೇಕು ಎಂದು ಅವನು ಯೋಚಿಸುತ್ತಿದ್ದನು. ಅವನನ್ನು ನೋಡಿದ ಬಲರಾಮನು ಅವನನ್ನು ಕೊಲ್ಲಲು ನಿರ್ಧರಿಸಿದನು.

ಆ ಸಮಯದಲ್ಲಿ, ಅವರು ಒಂದು ಕ್ರೀಡೆಯನ್ನು ಆಡಲು ಪ್ರಾರಂಭಿಸಿದರು. ಈ ಆಟದ ನಿಯಮ ಏನೆಂದರೆ, ಸೋತವರು ಗೆದ್ದವರನ್ನು ತಮ್ಮ ಭುಜದ ಮೇಲೆ ಹೊತ್ತುಕೊಂಡು ಹೋಗಬೇಕು. ಕೃಷ್ಣ ಒಂದು ತಂಡದ ನಾಯಕನಾದನು ಮತ್ತು ಬಲರಾಮ ಇನ್ನೊಂದು ತಂಡದ ನಾಯಕನಾದನು. ಪ್ರಲಂಬಾಸುರ ಕೃಷ್ಣನ ತಂಡಕ್ಕೆ ಸೇರಿಕೊಂಡನು. ಕೃಷ್ಣನ ತಂಡವು ಸೋತ ನಂತರ, ಸೋತ ತಂಡದಲ್ಲಿದ್ದ ಪ್ರಲಂಬಾಸುರನು ಗೆದ್ದ ತಂಡದ ನಾಯಕನಾದ ಬಲರಾಮನನ್ನು ಹೊತ್ತುಕೊಂಡು ಹೋಗಬೇಕಾಯಿತು. ಪ್ರಲಂಬಾಸುರನು ಬಲರಾಮನನ್ನು ಹೊತ್ತುಕೊಂಡು ವೇಗವಾಗಿ ಓಡಿಹೋಗಿ ಕೊಲ್ಲಲು  ಯೋಚಿಸಿದನು.

ಬಲರಾಮನನ್ನು ಹೊತ್ತ ತಕ್ಷಣ, ಅವನ ಉದ್ದೇಶಗಳನ್ನು ತಿಳಿದಿದ್ದ ಬಲರಾಮನು ತನ್ನ ಭಾರವನ್ನು ಹೆಚ್ಚಿಸುತ್ತಾ ಹೋದನು. ಪ್ರಲಂಬಾಸುರನಿಗೆ ಅಷ್ಟು ಭಾರವನ್ನು ಹೊರಲು ಸಾಧ್ಯವಾಗಲಿಲ್ಲ. ಆ ಭಾರದಿಂದ ಅವನು ಕೆಳಕ್ಕೆ ಕುಗ್ಗುತ್ತಿದ್ದಾಗ, ಬಲರಾಮನು ಅವನ ತಲೆಯ ಮೇಲೆ ಭಾರೀ ಹೊಡೆತ ನೀಡಿ ಅವನನ್ನು ಕೊಂದನು.

ಈ ಘಟನೆಯನ್ನು ಆಂಡಾಳ್ ನಾಚ್ಚಿಯಾರ್ ಅವರು ನಾಚ್ಚಿಯಾರ್ ತಿರುಮೊಳಿಯಲ್ಲಿ “ಪಿಲಂಬನ್ ತನ್ನೈ  ಬಲದೇವನ್ ವೆನ್ರ” (ಪ್ರಲಂಬಾಸುರನನ್ನು ಬಲರಾಮನು ಸೋಲಿಸಿದನು) ಎಂದು ಮತ್ತು ಪೆರಿಯಾಳ್ವಾರ್ ಅವರು ಪೆರಿಯಾಳ್ವಾರ್ ತಿರುಮೊಳಿಯಲ್ಲಿ “ತೇನುಗನ್ ಪಿಲಂಬನ್ ಕಾಳಿಯನ್ ಎನ್ನುಮ್” (ಧೇನುಕಾಸುರ, ಪ್ರಲಂಬಾಸುರ ಮತ್ತು ಕಾಳಿಯ ಎಂದು ಕರೆಯಲ್ಪಡುವವರನ್ನು ಸೋಲಿಸಿದವನೇ) ಎಂದು ತಮ್ಮ ಕಾರುಣ್ಯದಿಂದ  ಉಲ್ಲೇಖಿಸಿದ್ದಾರೆ.

ಈ ಘಟನೆಯಲ್ಲಿನ ಸಾರಾಂಶ :  

  • ಪೆರಿಯಾಳ್ವಾರ್ ಅವರು, ಬಲರಾಮನು ಮಾಡಿದ ಲೀಲೆಯು (ಕಾರ್ಯವು) ಅವರ ನಡುವಿನ ಅತೀ ನಿಕಟ ಸಂಬಂಧದ ಕಾರಣದಿಂದಾಗಿ ಕೃಷ್ಣನು ಮಾಡಿದಂತೆಯೇ ಆಗಿದೆ ಎಂದು ಹೇಳುತ್ತಿದ್ದಾರೆ.ಅದೇ ರೀತಿಯಲ್ಲಿ, ಶ್ರೀರಾಮಾವತಾರದಲ್ಲಿ, ಲಕ್ಷ್ಮಣನು ಶೂರ್ಪನಖಿಯ ಕಿವಿ ಮತ್ತು ಮೂಗನ್ನು ಛೇದಿಸಿದಾಗ, ಆ ಕಾರ್ಯವನ್ನು ಶ್ರೀರಾಮನಿಗೆ ಆರೋಪಿಸಲಾಯಿತು.                                                                                                               
  • ಎಂಪೆರುಮಾನ್ (ಭಗವಂತನು) ಅಪಾಯದಲ್ಲಿರುವಾಗ, ಆತನಿಗೆ ಏನೂ ಆಗದಂತೆ ಆತನ ಭಕ್ತರು ಮೊದಲು ನಿಂತು ಆತನನ್ನು ರಕ್ಷಿಸಲು ಪ್ರಯತ್ನಿಸುತ್ತಾರೆ. ಇಲ್ಲಿ, ಬಲರಾಮನು ಕೃಷ್ಣನಿಗೆ ಬಂದ ಅಪಾಯವನ್ನು ದೂರ ಮಾಡಿದನು.

ಅನುವಾದ – ಅಡಿಯೇನ್ ಕಸ್ತೂರಿರಂಗನ್ ರಾಮಾನುಜ ದಾಸನ್
ಪುರಾವೆ ಓದುವಿಕೆ – ಅಡಿಯೇನ್ ಹೇಮಲತಾ ರಾಜನ್ ರಾಮಾನುಜ ದಾಸಿ

ಮೂಲ – https://granthams.koyil.org/2023/09/20/krishna-leela-15-english/

ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org

Leave a Comment