ಶ್ರೀಃ ಶ್ರೀಮತೇ ಶಟಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ
ಸೂತ್ರಮ್ – 91
ಪರಿಚಯ: ಅವನಲ್ಲಿ ಇರುವ ನಂಬಿಕೆ “ನಮಃ” ಎಂಬ ಪದದ ಒಳ ಅರ್ಥವನ್ನು ತಿಳಿದುಕೊಂಡ ಬಳಿಕ ಮತ್ತು ತಿಳಿದುಕೊಳ್ಳುವ ಮೊದಲು ಇರುವ ವ್ಯತ್ಯಾಸವನ್ನು ಈಗ ವಿವರಿಸಲಾಗಿದೆ:
“ಈಶ್ವರ ತನಕ್ಕೇಯಾಯ್ ಇರುಕ್ಕುಮ್; ಅಚ್ಚಿತ್ತು ಪಿಱರ್ಕ್ಕೇಯಾಯ್ ಇರುಕ್ಕುಮ್; ಆತ್ಮಾ ತನಕ್ಕುಮ್ ಪಿಱರ್ಕ್ಕುಮ್ ಪೊದುವಾಯ್ ಇರುಕ್ಕುಮ್” ಎನ್ಱು ಮುಱ್ಪಟ್ಟ ನಿನೈವು; ಅಂಗನನ್ರಿಕ್ಕೇ, ಅಚ್ಚಿತ್ತೈ ಪೋಲೇ “ತನಕ್ಕೇಯಾಗ ಎನೈ ಕ್ಕೊಳ್ಳ ವೇಣುಮ್” ಎನ್ಗಿಱದು ನಮಸ್ಸಾಲ್.
ಸರಳ ಅರ್ಥ: ಜೀವಾತ್ಮವು ಮೊದಲು ಈ ರೀತಿಯಾಗಿ ಯೋಚಿಸುತ್ತದೆ: ಈಶ್ವರನು ತನಗಾಗಿ ಇರುತ್ತಾನೆ. ಜೀವವಿಲ್ಲದ ವಸ್ತುಗಳು ಬೇರೆಯವರಿಗಾಗಿ ಇರುತ್ತವೆ. ಆತ್ಮವು ತನಗಾಗಿ ಮತ್ತು ಬೇರೆಯವರಿಗಾಗಿ ಎಲ್ಲರಿಗೂ ಸಾಮಾನ್ಯವಾಗಿ ಅನ್ವಯಿಸುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ “ನಮಃ” ಎಂಬುದು ನಮಗೆ ಹೇಳಿಕೊಡುತ್ತದೆ “ಈಶ್ವರನು ಆತ್ಮವನ್ನು ಅವನಿಗೆ ತಕ್ಕ ಹಾಗೆ ಬಳಸಿಕೊಳ್ಳುತ್ತಾನೆ.”
ವ್ಯಾಖ್ಯಾನಮ್: ಈಶ್ವರನು ಶ್ರೀ ಗುಣರತ್ನಕೋಶಮ್ 28ರಲ್ಲಿ ಹೇಳಿರುವ ಹಾಗೆ, “ಸ್ವರೂಪಮ್ ಸ್ವಾತಂತ್ರ್ಯಮ್ ಭಗವತಃ” ಅವನು ತನಗೆ ತಾನೇ ಸರ್ವ ಸ್ವತಂತ್ರನು ಮತ್ತು ತನಗೆ ಮಾತ್ರ ಅವನು ಉಪಸ್ಥಿತನಾಗಿರುತ್ತಾನೆ. ಙ್ಞಾನದ ಅನುಪಸ್ಥಿತಿಯಿಂದ ಮತ್ತು ಬೇರೆಯವರ ಮೇಲಿನ ಅವಲಂಬನೆಯಿಂದ , ಅಜೀವ ವಸ್ತುಗಳು ಬೇರೆಯವರಿಗಾಗಿಯೇ ಇರುತ್ತವೆ. ಶೇಷತ್ವವು ಅಕಾರದಲ್ಲಿ ಚತುರ್ಥಿಯ ರೂಪದಲ್ಲಿರುವುದರಿಂದ , ಈ ಶೇಷತ್ವದಿಂದ ಮಕಾರದ ಪ್ರಭಾವದಿಂದ ಆತ್ಮವು ಙ್ಞಾನದ ಪ್ರಭಾವದಿಂದಲೂ ಸ್ವಾರ್ಥದಲ್ಲಿ ಮತ್ತು ಶೇಷತ್ವದ ಪ್ರಭಾವದಿಂದ ಸೇವಕತ್ವದಲ್ಲಿಯೂ ಓಲಾಡುತ್ತಿರುತ್ತದೆ. ಇದು “ನಮಃ” ಎಂಬ ಅರ್ಥವು ಅರಿವಿಗೆ ಬರುವ ಮುಂಚೆ . ಒಂದು ಸಾರಿ ನಮಃ ದ ಅರ್ಥವು ಆತ್ಮವನ್ನು ಪ್ರವೇಶಿಸಿದಾಗ ಅವನ ಶೇಷತ್ವಕ್ಕಾಗಿ ಆತ್ಮವು ಹಂಬಲಿಸುತ್ತದೆ. ಒಂದು ಜಡ ವಸ್ತುವಿನಂತೆ. ತಿರುವಾಯ್ಮೊೞಿ 2-9-4ರಲ್ಲಿ ಆೞ್ವಾರರು ಹೇಳಿರುವ ಹಾಗೆ :
“ತನಕ್ಕೇಯಾಗ ಎನೈ ಕೊಳ್ಳುಮ್ ಇದೇ” -“ತಾನು ಹೇಗೆ ಬಯಸುತ್ತಾನೋ ಹಾಗೆ ತನಗೆ ಬೇಕಾದಂತೆ ತೆಗೆದುಕೊಳ್ಳುತ್ತೇನೆ“ – ಅವನಿಗೆ ಇಷ್ಟವಿರುವ ಪ್ರಕಾರ.
ಸೂತ್ರಮ್ – 92
ಪರಿಚಯ: ಲೋಕಾಚಾರ್ಯರು ಆೞ್ವಾರರ ಪದವಾದ “ತನಕ್ಕೇಯಾಗ” ಎಂಬ ಪದದ ಅರ್ಥವನ್ನು ವಿವರಿಸುತ್ತಾರೆ.
ಅದಾವದು ಬೋಗ ದಶೈಯಿಲ್ ಈಶ್ವರನ್ ಅೞಿಕ್ಕುಮ್ ಪೋದು ನೋಕ್ಕ ವೇಣುಮ್ ಎನ್ಱು ಅೞಿಯಾದೊೞಿಗೈ.
ಸರಳ ಅರ್ಥ: ಈಶ್ವರನು ತಾನು ಆತ್ಮವನ್ನು ಆನಂದಿಸುವಾಗ, ಜೀವಾತ್ಮವು ಮಧ್ಯದಲ್ಲಿ ಬಂದು ಅವನನ್ನು ನಿಲ್ಲಿಸಬಾರದು.
ವ್ಯಾಖ್ಯಾನಮ್: ಆೞ್ವಾರರು ತಿರುವಾಯ್ಮೊೞಿ 9-6-7ರಲ್ಲಿ ಹೇಳಿರುವ ಹಾಗೆ “ಆಟ್ಕೊಳ್ವಾನೊತ್ತು ಎನ್ ಉಯಿರ್ ಉಣ್ಡ ಮಾಯನ್”, ಈಶ್ವರನು ಆತ್ಮವನ್ನು ಆನಂದಿಸುವಾಗ, ಅವನು ಜೀವದ ಹಂತಕ್ಕೆ ಇಳಿದು ಬಂದು ಅದರ ಜೊತೆಗೆ ಸಮ್ಮಿಳನಗೊಂಡು ಆನಂದಿಸುತ್ತಾನೆ. ಅವನು ಜೀವವನ್ನು ತನ್ನ ಸೇವೆಗಾಗಿ ಅತೀವ ಪ್ರೇಮದಿಂದ ಎತ್ತಿಕೊಂಡರೂ, ಅವನು ಜೀವದ ಆಶ್ರಯತೆಯನ್ನು ನಿವಾರಿಸುತ್ತಾನೆ. ಈ ರೀತಿಯಾದ ಜಂಜಾಟದಲ್ಲಿ ಜೀವಾತ್ಮವು ಹಿಂಜರಿಯಬಾರದು ತನ್ನ ಕೀಳರಿಮೆಯಿಂದ. ಆನಂದಿಸುವ ಪರಮಾತ್ಮನಿಗೆ ತನ್ನನ್ನು ಒಪ್ಪಿಸಿ ತನ್ನ ಕೀಳರಿಮೆಯನ್ನು ಮರೆಯಬೇಕು.
ಸೂತ್ರಮ್ – 93
ಪರಿಚಯ: ಈಶ್ವರನು ತನ್ನನ್ನು ಆಶ್ರಯಿಸಿದ ಆತ್ಮದ ದಾಸ್ಯತ್ವವನ್ನು ಏಕೆ ನಾಶ ಮಾಡುತ್ತಾನೆ? ಎಂಬ ಪ್ರಶ್ನೆಗೆ ಲೋಕಾಚಾರ್ಯರು ವಿವರಿಸುತ್ತಾರೆ:
ಅೞಿಕ್ಕೈಕ್ಕು ಹೇತು ಕೀೞೇ ಸೊಲ್ಲಿಱ್ಱು; ಮೇಲುಮ್ ಸೊಲ್ಲುಮ್.
ಸರಳ ಅರ್ಥ: ಅಂತಹ ದಾಸ್ಯತ್ವದ ನಾಶವನ್ನು ಮೊದಲೇ ಹೇಳಿರುವೆವು, ಅದನ್ನು ಇನ್ನೂ ವಿವರಿಸಲಾಗುವುದು.
ವ್ಯಾಖ್ಯಾನಮ್: ಪ್ರಣವದಲ್ಲಿ ಆತ್ಮದ ರೂಪವನ್ನು (ಗುರುತನ್ನು) ಸೇವಕತ್ವವೆಂದು ಹೇಳಲಾಗಿದೆ. ಈಶ್ವರನು ಜೀವಾತ್ಮವನ್ನು ಒಪ್ಪಿಕೊಳ್ಳುವಾಗ, ಜೀವವು ಅತ್ಯಂತ ವಿನಮ್ರವಾಗಿರಬಾರದು. ಇದನ್ನು ಚತುರ್ಥಿಯಲ್ಲಿ “ಕಿಂಕರ ಸ್ವಭಾವ” ವೆಂದು ಗುರುತಿಸಲಾಗಿದೆ. ಈಶ್ವರನು ಪ್ರೇಮದಿಂದ ಆತ್ಮವನ್ನು ತೆಗೆದುಕೊಳ್ಳುವಾಗ ಜೀವಾತ್ಮವು ನಿರ್ಲಕ್ಷ್ಯವಾಗಿರಬಾರದು ಎಂದು ಹೇಳಿದ್ದಾರೆ.
ಸೂತ್ರಮ್ – 94
ಪರಿಚಯ: ಈಗ ಅವನ ಮೇಲಿನ ಗಾಢವಾದ ನಂಬಿಕೆಯ ಜೊತೆಗೆ ಅವನ ಸರ್ವ ಶ್ರೇಷ್ಠತ್ವದ ಬಗ್ಗೆ ಇರುವ ಸ್ವೀಕೃತಿಯನ್ನು ಲೋಕಾಚಾರ್ಯರು ದೀರ್ಘವಾದ ಟಿಪ್ಪಣಿಯೊಂದಿಗೆ ವಿವರಣೆಯನ್ನು ನೀಡುತ್ತಾರೆ.
ಇನ್ನಿನೈವು ಪಿಱಂದ ಪೋದೇ ಕೃತಕೃತ್ಯನ್; ಇನ್ನಿನೈವು ಇಲ್ಲಾದ ಪೋದು ಎಲ್ಲಾ ದುಷ್ಕೃತಂಗಳುಮ್ ಕೃತಮ್; ಇನ್ನಿನೈವಿಲೇ ಎಲ್ಲಾ ಸುಕೃತಂಗಳುಮ್ ಉಣ್ಡು; ಇದು ಇನ್ಱಿಕ್ಕೇ ಇರುಕ್ಕ ಪಣ್ಣುಮ್ ಯಙ್ಞಾದಿಗಳುಮ್ ಪ್ರಾಯಶ್ಚಿತ್ಯಾದಿಗಳುಮ್ ನಿಷ್ಪ್ರಯೋಜನಂಗಳ್;
ಇದು ತನ್ನಾಲೇ ಎಲ್ಲಾ ಪಾಪಂಕಳುಮ್ ಪೋಮ್; ಎಲ್ಲಾ ಪಲಂಗಳುಮ್ ಉಣ್ಡಾಮ್.
ಸರಳ ಅರ್ಥ: ಈ ಯೋಚನೆಯು ಒಬ್ಬನಿಗೆ ಬಂದರೆ, ಅವನು ಎಲ್ಲಾ ಪವಿತ್ರ ಕಾರ್ಯಗಳನ್ನೂ ಮಾಡಿದಂತೆ; ಈ ನೆನಪು ಅವನಿಗೆ ಬರದಿದ್ದರೆ, ಅವನು ಎಲ್ಲಾ ರೀತಿಯ ಪಾಪ ಕೃತ್ಯಗಳನ್ನು ಮಾಡಿದಂತೆ; ಈ ಒಂದು ಯೋಚನೆಯು ಅವನಿಗೆ ಇಲ್ಲದಿದ್ದರೆ, ಅವನು ಮಾಡಿದ ಅತ್ಯಂತ ಶ್ರೇಷ್ಠವಾದ ಕೃತ್ಯಗಳೂ ಅದೆಲ್ಲವೂ ಅತ್ಯಂತ ಹೀನವಾಗುತ್ತವೆ, ಅಥವಾ ಅವು ನಿಷ್ಪ್ರಯೋಜನವಾಗುತ್ತದೆ. ಅವನಿಗೆ ಈ ಯೋಚನೆಯು ಬಂದಿತೆಂದರೆ, ಅವನ ಎಲ್ಲಾ ಪಾಪಗಳೂ ತೊಳೆದುಹೋಗುತ್ತವೆ ಮತ್ತು ಶುಭವಾದ ಫಲವು ದೊರಕುತ್ತದೆ.
ವ್ಯಾಖ್ಯಾನಮ್: ಯಾರಿಗಾದರೂ “ನನ್ನನ್ನು ತನ್ನ ಸಂತೋಷಕ್ಕಾಗಿ ಈಶ್ವರನು ತೆಗೆದುಕೊಳ್ಳುತ್ತಾನೆ” ಎಂಬ ಯೋಚನೆಯು ಬಂದರೆ “ತನಕ್ಕೇಯಾಗ ಎನೈ ಕೊಳ್ಳುಮ್ ಇದೇ” ಎಂದು ಜೀವಾತ್ಮಕ್ಕೆ ಯೋಚನೆಯು ಬಂದಾಗ ಆ ಜೀವಾತ್ಮವು ಸಂಪೂರ್ಣ ಶರಣಾಗತಿಯನ್ನು ಹೊಂದಿ ತನ್ನನ್ನು ತಾನು ಅಭಿವೃದ್ಧಿ ಪಡಿಸಿಕೊಳ್ಳಲು ಇರುವ ಅರ್ಹತೆಯನ್ನು ಹೊಂದುತ್ತಾನೆ.
ಅವನಿಗೆ ಈ ಯೋಚನೆಯು ಬರದಿದ್ದರೆ, ಈ ಒಂದು ನಂಬಿಕೆಯ ರಹಿತನಾಗಿ ಎಲ್ಲಾ ರೀತಿಯ ಪಾಪ ಕರ್ಮಗಳನ್ನು ಮಾಡುವುದಕ್ಕೆ ಸಮ. ಏಕೆಂದರೆ ಪಾರತಂತ್ರ್ಯ ಪ್ರತಿಪತ್ತಿಯ (ಸಂಪೂರ್ಣ ಶರಣಾಗತಿ ಮತ್ತು ಈಶ್ವರನ ಮೇಲೆ ಸಂಪೂರ್ಣ ಅವಲಂಬನೆ) ಕೊರತೆಯಿಂದ ಮಹಾಭಾರತದ ಆದಿ ಪರ್ವಮ್ 74-28ರಲ್ಲಿ ಹೇಳಿರುವಂತೆ “ಕಿಮ್ ತೇನ ನ ಕೃತಮ್ ಪಾಪಮ್ ಚೋರೇಣ ಆತ್ಮಾಪಹಾರಿಣಾ”
(ಭಗವಂತನಿಗೆ ಸ್ವಂತದ್ದಾಗಿರುವ ಆತ್ಮವನ್ನು ತನ್ನದು ಎಂದು ಪರಿಗಣಿಸುವವನ ಚೋರತನ ಯಾವುದಕ್ಕೆ ಸಮಾನ?) ತನ್ನ ಆತ್ಮವನ್ನು ತಾನೇ ಅಪಹರಿಸಿಕೊಂಡು ಹೋಗುವವನೇ ನಿಜವಾದ ಕಳ್ಳ.
ಆದರೆ ಅವನಿಗೆ ಈಶ್ವರನ ಸರ್ವ ಶ್ರೇಷ್ಠತ್ವದ ಬಗ್ಗೆ ಮನವರಿಕೆಯಾದಾಗ, ಈಶ್ವರನು ಆ ಜೀವಾತ್ಮದ ಬಗ್ಗೆ ಸಂತೋಷಗೊಂಡು, ಆ ಜೀವಾತ್ಮವು ಎಲ್ಲಾ ರೀತಿಯ ಪುಣ್ಯ ಕರ್ಮಗಳನ್ನು ಮಾಡಿದ ಸಾರ್ಥಕತೆ ಉಂಟಾಗುತ್ತದೆ.
ಅವನಿಗೆ ಈ ರೀತಿಯ ಯೋಚನೆಯು ಬರದಿದ್ದರೆ, ಭಗವಂತನನ್ನು ಸಂತೋಷಪಡಿಸಲು ಮಾಡುವ ಎಲ್ಲಾ ರೀತಿಯ ಸಮರ್ಪಣೆಗಳೂ, ಯಾಗ ಯಙ್ಞಗಳೂ, ಪ್ರಾಯಶ್ಚಿತ್ತ ಪರಿಹಾರಗಳಾದ ಕೃಚ, ಚಾಂದ್ರಾಯಣಾ ಮುಂತಾದುವುಗಳೆಲ್ಲವೂ ನಿಷ್ಪ್ರಯೋಜನವಾಗುತ್ತವೆ. ಏಕೆಂದರೆ ಅವುಗಳು ಭಗವಂತನನ್ನು ಮೆಚ್ಚಿಸಲಾಗುವುದಿಲ್ಲ, ಅವುಗಳಿಂದ ಮಾಡಿದ ಪಾಪಗಳೂ ಪರಿಹಾರವಾಗುವುದಿಲ್ಲ.
ಈಶ್ವರನ ಸರ್ವಾಧಿಕಾರದ ಮೇಲೆ ಸಂಪೂರ್ಣ ನಂಬಿಕೆ ಮತ್ತು ಅವಲಂಬನೆ ಉಂಟಾದರೆ, ಅವನನ್ನು ಮೆಚ್ಚಿಸಬಹುದು.ಇದಕ್ಕೆ ಮುಂದೆ ಮಾಡಿದ ಸಂಚಿತ ಪಾಪಗಳು ನಿವಾರಣೆಯಾಗುತ್ತವೆ. ಭಗವಂತನು ತನ್ನ ಭಕ್ತರಿಗೆ ಒಳ್ಳೆಯದನ್ನು ಮಾಡಲು ಕಾಯುತ್ತಿರುತ್ತಾನೆ. ಆೞ್ವಾರರು ಪೆರಿಯ ತಿರುವಂದಾದಿ 53 ರಲ್ಲಿ ಹೇಳಿದ್ದಾರೆ:
“ಉನ್ ಅಡಿಯಾರ್ಕ್ಕು ಏನ್ ಸೆಯ್ವನ್ ಎನ್ಱೇ ಇರುತ್ತಿ ನೀ” (ತನ್ನ ಭಕ್ತರಿಗೆ ಏನಾದರೂ ಶುಭವನ್ನು ಮಾಡಬೇಕೆಂದು ನಿರಂತರವಾಗಿ ಭಗವಂತನು ಕಾಯುತ್ತಲೇ ಇರುತ್ತಾನೆ. ಆದ್ದರಿಂದ ಸಂಸಾರದ ನಿರಂತರ ಚಕ್ರವನ್ನು ಮುರಿಯುವುದರಿಂದಲೇ, ಭಗವಂತನ ನಿರಂತರ ಸೇವೆಯನ್ನು ಮಾಡಲು ಫಲವನ್ನು (ಕೈಂಕರ್ಯ ಪ್ರಾಪ್ತಿ) ಹೊಂದುವವರೆಗೂ ಅವನು ಸಹಾಯ ಮಾಡುತ್ತಾನೆ. (ಅದಕ್ಕಾಗಿ ಕಾಯುತ್ತಿರುತ್ತಾನೆ.)
ಈ ರೀತಿಯಾಗಿ ಲೋಕಾಚಾರ್ಯರು “ನಮಃ” ಎಂಬ ಮಧ್ಯ ಪದದ ಅರ್ಥವನ್ನು ವಿವರವಾಗಿ ಮತ್ತು ಬಹು ವಿಸ್ತಾರವಾಗಿ ವಿವರಿಸಿದ್ದಾರೆ.
ಸೂತ್ರಮ್ – 95
ಪರಿಚಯ: ಈಗ ಲೋಕಾಚಾರ್ಯರು “ನಾರಾಯಣ” ಎಂಬ ಪದದ ಅರ್ಥವನ್ನು ಕೊಡಲು ಪ್ರಾರಂಭಿಸುತ್ತಾರೆ, ನಾರಾಯಣ ಎಂಬ ಶಬ್ದದಿಂದಲೇ.
ನಾರಾಯಣನ್ ಎನ್ಱದು – ನಾರಂಗ್ಕಳುಕ್ಕು ಅಯನಮ್ ಎನ್ಱಪಡಿ.
ಸರಳ ಅರ್ಥ: “ನಾರಾಯಣನ್” ಏಕೆಂದರೆ ನಾರರಿಗೆ ಅವನು ಆಶ್ರಯ ನೀಡುತ್ತಾನೆ.
ವ್ಯಾಖ್ಯಾನಮ್: “ನಾರಾಯಣ” ಎಂಬ ಶಬ್ದವು ಎರಡು ರೀತಿಯ ರೂಪಗಳಿಗೆ ಸಾಮಾನ್ಯವಾಗಿರುತ್ತದೆ “ನಾರಾಣಾಮ್ ಅಯನಮ್ ಯಃ ಸಃ ನಾರಾಯಣಃ” ಮತ್ತು “ನಾರಾಃ ಅಯನಮ್ ಯಸ್ಯ ಸಃ ನಾರಾಯಣಃ” ಅವರು ಮೊದಲು ತತ್ ಪುರುಷ ಸಮಾಸವನ್ನು ತೆಗೆದುಕೊಳ್ಳುತ್ತಾರೆ , ಅದರಲ್ಲಿ ನಮಗೆ ಎಲ್ಲ ರೀತಿಯ ನಾರ ವಸ್ತುಗಳಿಗೆ ನಾರಾಯಣನು ಆಶ್ರಯವಾಗಿರುತ್ತಾನೆ ಎಂಬ ಅರ್ಥವು ಬರುತ್ತದೆ.
ಸೂತ್ರಮ್ – 96
ಪರಿಚಯ: ನಾರಗಳು ಎಂದರೆ ಯಾವುವು? ಎಂಬ ಪ್ರಶ್ನೆಗೆ ಲೋಕಾಚಾರ್ಯರು ವಿವರಣೆಯನ್ನು ನೀಡುತ್ತಾರೆ.
ನಾರಂಗಳಾವನ – ನಿತ್ಯವಸ್ತುಕ್ಕಳಿನುಡೈಯ ತಿರಳ್.
ಸರಳ ಅರ್ಥ: ನಾರಾಗಳೆಂದರೆ ಶಾಶ್ವತವಾಗಿರುವ (ನಾರದಿರುವ) ವಸ್ತುಗಳ ಗುಂಪು.
ವ್ಯಾಖ್ಯಾನಮ್: “ನಾರಾ” ಎಂಬ ಪದವು “ನರ”, “ನಾರ” ಮತ್ತು “ನಾರಾಃ” ಎಂಬ ಪದಗಳಿಂದ ಜನ್ಯವಾಗಿದೆ. ಇದರಲ್ಲಿ “ರ” ಎಂಬ ಅಕ್ಷರವು ಮೃತವಾಗುವ (ನಶ್ವರ) ವಸ್ತುಗಳನ್ನು ಸೂಚಿಸುತ್ತದೆ. “ನ” ಎಂಬುದು ಅಂತಹ ನಶ್ವರತೆಯನ್ನು ಕಳೆದುಹಾಕುತ್ತದೆ. (ವಿರುದ್ಧವಾಗಿಸುತ್ತದೆ). “ಅಣ್” ಎಂಬ ಪ್ರತ್ಯಯವನ್ನು ಉಪಯೋಗಿಸಿದಾಗ ಮತ್ತು ಮೊದಲನೆಯ ಪದವನ್ನು ದೀರ್ಘಗೊಳಿಸಿದಾಗ “ನಾರ” – ಶಾಶ್ವತವಾಗಿರುವ ವಸ್ತುಗಳ ಗುಂಪನ್ನು ಸೂಚಿಸುತ್ತದೆ. ಅದರ ಬಹುವಚನವೇ “ನಾರಾಃ” – ಎಂಬುದು ಅಂತಹ ಗುಂಪುಗಳ ಸಮೂಹವನ್ನೇ (ಗುಚ್ಛ) ಸೂಚಿಸುತ್ತದೆ.
ಆದ್ದರಿಂದ ನಿತ್ಯ ಎಂಬ ಪದವು ಶಾಶ್ವತತೆಯನ್ನು (ನರ) ಸೂಚಿಸಿದರೆ, ವಸ್ತು ಎಂಬ ಪದವು ನಾರ ಎಂಬುದನ್ನೂ, ತಿರಳ್ (ಗುಚ್ಛ) ಎಂಬುದು ಬಹುವಚನವನ್ನು ಸೂಚಿಸುತ್ತದೆ. ಅದೇನೆಂದರೆ, ಒಂದಕ್ಕಿಂತಾ ಹೆಚ್ಚು ಸಮೂಹಗಳನ್ನು ಗುರುತಿಸುತ್ತದೆ.
ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ.
ಮೂಲ : https://granthams.koyil.org/2020/09/22/mumukshuppadi-suthrams-91-96-english/
ಆರ್ಕೈವ್ ಮಾಡಲಾಗಿದೆ – https://granthams.koyil.org
ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org