ಮುಮುಕ್ಷುಪ್ಪಡಿ – ಸೂತ್ರಮ್ 71 ರಿಂದ 80

ಶ್ರೀಃ ಶ್ರೀಮತೇ ಷಟಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ

ಪೂರ್ಣ ಸರಣಿ

<< ಹಿಂದಿನ ಲೇಖನವನ್ನು

ಸೂತ್ರಮ್ – 71

ಪರಿಚಯ: ಮೊದಲು ಸೇವಕತ್ವವನ್ನು ಹೊಂದಿರುವ ಆತ್ಮದ ಗುಣ ಸ್ವಭಾವವನ್ನು ವಿವರಿಸುವುದು ಮುಖ್ಯವಾಗುತ್ತದೆ. ಏಕೆಂದರೆ ಅದಕ್ಕೆ ವಿಧೇಯತೆಯ ಗುಣ ಸ್ವಭಾವವನ್ನು ಹೊಂದಿರುತ್ತದೆ (ಶೇಷತ್ವ). ಪ್ರಣವವನ್ನು ವಿವರಿಸುವಾಗ ಏಕೆ ಮೊದಲು ಸೇವಕತ್ವವನ್ನು ವಿವರಿಸಿ ಅನಂತರ ಆತ್ಮವನ್ನು ವಿವರಿಸಬೇಕು?

ಮಣತ್ತೈಯುಮ್ ಒಳಿಯೈಯುಮ್ ಕೊಣ್ಡು ಪೂವೈಯುಮ್ ರತ್ನತ್ತೈಯುಮ್ ವಿರುಂಬುಮಾ ಪೋಲೇ 

ಶೇಷಮೆನ್ಱು ಆತ್ಮಾವೈ ಆಧರಿಕ್ಕಿಱದು;

ಅಲ್ಲಾದ ಪೋದು “ಉಯಿರಿನಾಲ್ ಕುಱೈವಿಲಮ್” ಎನ್ಗಿಱಪ್ಪಡಿಯೇ ತ್ಯಾಜ್ಯಮ್;

ಅದು ತೋನ್ಱ ಶೇಷತ್ವತ್ತೈ ಚೊಲ್ಲಿ ಪಿನ್ನೈ ಆತ್ಮಾವೈ ಚೊಲ್ಲುಗಿಱದು.

ಸರಳ ಅರ್ಥ: ನಮಗೆ ಹೇಗೆ ಹೂವುಗಳು ಮತ್ತು ರತ್ನಗಳು ಇಷ್ಟವಾಗುತ್ತವೆಯೋ ಅವುಗಳ ಸುಗಂಧದಿಂದ ಮತ್ತು ಪ್ರಕಾಶದಿಂದ ಹಾಗೆಯೇ ಆತ್ಮವನ್ನು ಮೆರೆಸಲಾಗುತ್ತದೆ ಏಕೆಂದರೆ ಅವುಗಳ ಸೇವಕತ್ವದಿಂದ. ಅದರ ದಾಸ್ಯತ್ವವನ್ನು ಬಿಟ್ಟುಬಿಟ್ಟರೆ ಆತ್ಮವು ‘ಉಯಿರಿನಾಲ್ ಕುಱೈವಿಲಮ್’ ನಲ್ಲಿ ಹೇಳಿದಂತಾಗುತ್ತದೆ. ನಾವು ಅಂತಹ ಆತ್ಮದ ಅನುಪಸ್ಥಿತಿಯಿಂದ ತೊಂದರೆ ಪಡುವುದಿಲ್ಲ. ಅಂತಹ ಅತ್ಮವೊಂದು ಇಲ್ಲದಿದ್ದರೆ ಯಾರಿಗೂ ನಷ್ಟವಿಲ್ಲ. ಇದರಿಂದ ಸೇವಕತ್ವವನ್ನು ಮೊದಲು ವಿವರಿಸಿ, ಅನಂತರದಲ್ಲಿ ಆತ್ಮವನ್ನು ವಿವರಿಸಲಾಗಿದೆ. 

ವ್ಯಾಖ್ಯಾನಮ್: ನಾವು ಹೂವನ್ನು ಇಷ್ಟಪಡುತ್ತೇವೆ ಅದರ ಸುವಾಸನೆಯಿಂದ ಮತ್ತು ರತ್ನವನ್ನು ಅದರ ಹೊಳೆಯುವ ಸ್ವಭಾವದಿಂದ. ಇದೇ ರೀತಿ ಆತ್ಮವು ಅದರ ಸೇವಕತ್ವದಿಂದ ಆಚರಿಸಲ್ಪಡುತ್ತದೆ. ಆತ್ಮಕ್ಕೆ ಭಗವಂತನ ಸೇವಕತ್ವವು ಇಲ್ಲದಿದ್ದರೆ, ಅದರಿಂದ ಏನೂ ಉಪಯೋಗವಿಲ್ಲದೇ, ಅದನ್ನು ತ್ಯಾಜ್ಯ ವಸ್ತುವನ್ನಾಗಿಸುತ್ತದೆ. ಆದ್ದರಿಂದ ಆತ್ಮದ ಸೇವಕತ್ವದ (ಭಗವಂತನ ಮೇಲಿನ)  ಮಹತ್ವದ ಪ್ರಾಮುಖ್ಯತೆಯನ್ನು ತಿಳಿಸುವುದಕ್ಕಾಗಿ, ಶೇಷತ್ವವನ್ನು ಪ್ರಥಮವಾಗಿ ನಂತರದಲ್ಲಿ ಆತ್ಮವನ್ನು ವಿವರಿಸಲಾಗಿದೆ.

ಸೂತ್ರಮ್ – 72

ಪರಿಚಯ: ಈಗ ಲೋಕಾಚಾರ್ಯರು ಮೂರು ಶಬ್ದಗಳನ್ನು ಒಳಗೊಂಡ ಪ್ರಣವದ ಅರ್ಥವನ್ನು ಸಾರಂಶಿಸಿದ್ದಾರೆ.

ಆಗ ಪ್ರಣವತ್ತಾಲ್ ‘ಕಣ್ಣಪುರಮ್ ಒನ್ಱುಡೈಯಾನುಕ್ಕ ಅಡಿಯೇನ್ ಒರುವರ್ಕ್ಕು ಉರಿಯೇನೋ’ ಎನ್ಗಿಱಪ್ಪಡಿಯೇ ಜೀವ ಪರ ಸಂಬಂಧಮ್ ಸೊಲ್ಲಿಱ್ಱು.

ಸರಳ ಅರ್ಥ: ಆದ್ದರಿಂದ ಪ್ರಣವ ಮಂತ್ರದಿಂದ ಜೀವಾತ್ಮ ಮತ್ತು ಪರಮಾತ್ಮನ ನಡುವೆ ಇರುವ ಸಂಬಂಧವನ್ನು ತಿರುಮಂಗೈ ಆೞ್ವಾರರು ಅವರ ಪಾಸುರದಲ್ಲಿ ಹೇಳಿದ್ದಾರೆ:

“ಕಣ್ಣಪುರಮ್ ಒನ್ಱು ಉಡೈಯಾನುಕ್ಕು ಅಡಿಯೇನ್ ಒರುವರ್ಕ್ಕು ಉರಿಯೇನೋ”

ವ್ಯಾಖ್ಯಾನಮ್: ಪ್ರಣವ ಮಂತ್ರದಲ್ಲಿ, ತಿರುಮಂಗೈ ಆೞ್ವಾರರು ನಾಲ್ಕನೆಯ ಚತುರ್ಥಿಯಲ್ಲಿರುವ ಅಕಾರದ ಅರ್ಥವನ್ನು “ಕಣ್ಣಪುರಮ್ ಒನ್ಱು ಉಡೈಯಾನುಕ್ಕು” ಎಂಬ ಪಾಸುರದಲ್ಲಿ ನೀಡಿದ್ದಾರೆ. ಶೇಷತ್ವ (ಸೇವಕತ್ವ)ವನ್ನು ಮಕಾರದ ‘ಅಡಿಯೇನ್’ ಎಂಬುದರಿಂದಲೂ ಅನನ್ಯ ಶೇಷತ್ವವನ್ನು (ಬೇರೆಯವರಿಗೆ ಶರಣಾಗಲಾರೆ ಎಂಬ ತತ್ತ್ವ) ಉಕಾರದಲ್ಲಿಯೂ “ಒರುವರ್ಕ್ಕು ಉರಿಯೇನೋ” ಎಂಬುದರಿಂದಲೂ ಉಲ್ಲೇಖಿಸಿದ್ದಾರೆ.

ಆದ್ದರಿಂದ ಜೀವ ಪರ – ಶೇಷ ಶೇಷಿ ಎಂಬ ಸಂಬಂಧವನ್ನು ಕಲಿಯನ್ ರವರ ನುಡಿಗಳ ಮೂಲಕ ಅರ್ಥೈಸಿದ್ದಾರೆ.

ಸೂತ್ರಮ್ – 73

ಪರಿಚಯ: ಮತ್ತು ಪೆರುಮಾಳ್ ಮತ್ತು ಪಿರಾಟ್ಟಿಯ ಒಗ್ಗಟ್ಟನ್ನು ಮತ್ತು ಜೀವಾತ್ಮವು ಸಲ್ಲಿಸುವ ಸೇವೆಯನ್ನು ಸ್ವೀಕರಿಸುವುದನ್ನು ಪೊಯ್ಗೈ ಆೞ್ವಾರರ ಪಾಸುರದ ಮೂಲಕ ಲೋಕಾಚಾರ್ಯರು ವೈಭವೀಕರಿಸಿದ್ದಾರೆ.

ಇತ್ತಾಲ್ “ತಾಮರೈಯಾಳ್ ಕೇಳ್ವನ್ ಒರುವನೈಯೇ ನೋಕ್ಕುಮ್ ಉಣರ್ವು” ಎನ್ಱದಾಯಿಱ್ಱು.

ಸರಳ ಅರ್ಥ: ಇದರಿಂದ ಪೋಯ್ಗೈ ಆೞ್ವಾರರ ಪಾಸುರವಾದ “ತಾಮರೈಯಾಳ್ ಕೇಳ್ವನ್ ಒರುವನೈಯೇ ನೋಕ್ಕುಮ್ ಉಣರ್ವು” ಎಂಬುದನ್ನು ಙ್ಞಾಪಿಸಿಕೊಳ್ಳುತ್ತೇವೆ.

ವ್ಯಾಖ್ಯಾನಮ್: ಈ ಪ್ರಣವ ಮಂತ್ರದಿಂದ “ತಾಮರೈಯಾಲ್ ಕೇಳ್ವನ್” ಅಂದರೆ ಶ್ರೀ ಮಹಾಲಕ್ಷ್ಮಿಯ ದಿವ್ಯ ಪತಿಯಾದ ಪೆರುಮಾಳನ್ನು ಅಕಾರದಿಂದ ಸೂಚಿಸುತ್ತದೆ. “ಒರುವನೈ ನೋಕ್ಕುಮ್ ಉಣರ್ವು” ಎಂಬುದು ಚತುರ್ಥಿ ವಿಭಕ್ತಿಯನ್ನೂ ಮತ್ತು ಉಕಾರವು ಅವನಿಗೆ ಮಾತ್ರ ಸೇವಕರಾಗಿರುವುದನ್ನು ಸೂಚಿಸುತ್ತದೆ. “ಉಣರ್ವು” ಙ್ಞಾನವನ್ನೂ ಅದು ಆತ್ಮವು ಜೀವ ಪರ ಸಂಬಂಧವನ್ನು ಸಾಕ್ಷಿಯಾಗಿ ಸೂಚಿಸುತ್ತದೆ.

ಸೂತ್ರಮ್ – 74

ಪರಿಚಯ: ಅಕಾರದಲ್ಲಿ ಅವನ ಎಲ್ಲದಕ್ಕೂ ಕಾರಣವಾದ ಜಗತ್ ಕಾರಣತ್ವವನ್ನು ತಿಳಿಯಪಡಿಸುತ್ತದೆ. ಇದರ ಇನ್ನೊಂದು ಅರ್ಥವನ್ನು ಈಗ ಬಹಿರಂಗ ಪಡಿಸುತ್ತಾರೆ.

ಅಕಾರತ್ತಾಲುಮ್ ಮಕಾರತ್ತಾಲುಮ್ ರಕ್ಷಕನೈಯುಮ್ ರಕ್ಷತ್ತೈಯುಮ್ ಸೊಲ್ಲಿಱ್ಱು; 

ಚತುರ್ಥಿಯಾಲುಮ್ ಉಕಾರತ್ತಾಲುಮ್, ರಕ್ಷಣ ಹೇತುವಾನ ಪ್ರಾಪ್ತಿಯೈಯುಮ್ ಪಲತ್ತೈಯುಮ್ ಸೊಲ್ಲಿಱ್ಱು.

ಸರಳ ಅರ್ಥ: ರಕ್ಷಕನ ಬಗ್ಗೆ ಅಕಾರದಲ್ಲಿಯೂ, ರಕ್ಷಿಸಲ್ಪಡುವವರ (ಜೀವ) ಬಗ್ಗೆ ಮಕಾರದಲ್ಲಿಯೂ ಹೇಳಿದ್ದೇವೆ. ಚತುರ್ಥಿ ವಿಭಕ್ತಿಯು ಮತ್ತು ಉಕಾರವು ಗುರಿಯ ಬಗ್ಗೆ (ಪ್ರಾಪ್ತಿ, ರಕ್ಷಣೆಯ ಕಾರಣ) ಮತ್ತು ಫಲ (ಉಪಯೋಗ) ಅದೇನೆಂದರೆ ಕೈಂಕರ್ಯಮ್ ಮತ್ತು ಸೇವೆಯನ್ನು ಸಲ್ಲಿಸುವುದರ ಬಗ್ಗೆ ಹೇಳುತ್ತದೆ.

ವ್ಯಾಖ್ಯಾನಮ್: ಆದ್ದರಿಂದ ಅಕಾರವು ಈಶ್ವರನ ಬಗ್ಗೆ ಹೇಳಿದರೆ, ಮಕಾರವು ರಕ್ಷಣೆಯನ್ನು ಪಡೆಯುವ ಜೀವಾತ್ಮದ ಬಗ್ಗೆ ಹೇಳುತ್ತದೆ. ಚತುರ್ಥಿ ವಿಭಕ್ತಿಯು (ದೆಸೆಯಿಂದ) ಮತ್ತು ಉಕಾರವು ಪ್ರಾಪ್ತಿಯ ಬಗ್ಗೆ ಹೇಳುತ್ತದೆ. ಜೀವಾತ್ಮಕ್ಕೆ ಅಂತಹ ರಕ್ಷಣೆಯಿಂದ ಉಪಯೋಗವಾದ ಕೈಂಕರ್ಯವನ್ನು ಅವನಿಗೆ ಮಾತ್ರ ಎಂಬುದನ್ನು ಉಕಾರವು ಸ್ಪಷ್ಟ ಪಡಿಸುತ್ತದೆ.

ಸೂತ್ರಮ್ – 75

ಪರಿಚಯ: ಈಗ ಲೋಕಾಚಾರ್ಯರು ಇನ್ನುಮುಂದೆ ಬರುವ ಪದಗಳಿಗೆ ಅರ್ಥವನ್ನು ಕೊಡುತ್ತಾರೆ. ಹೇಗೆ ಉಳಿದ ಮಂತ್ರದ ಭಾಗವು ಪ್ರಣವದ ವಿವರವನ್ನು ವಿಸ್ತರಿಸುತ್ತದೆ ಎಂಬುದನ್ನು ತಿಳಿಸಿದ್ದಾರೆ.

ಇನಿಮೇಲ್ ಪ್ರಣವತ್ತೈ  ವಿವಕ್ಕಿಱದು.

ಸರಳ ಅರ್ಥ: ಈಗ ನಾವು ಪ್ರಣವದ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.

ವ್ಯಾಖ್ಯಾನಮ್: ವಿವರವಾಗಿ ಅರ್ಥೈಸುವುದೆಂದರೆ, ಆಗಲೇ ವಿವರಿಸಿರುವ ಅರ್ಥವನ್ನು ಮತ್ತೂ ವಿವರಿಸುವುದು ಎಂದು ಸೂಚಿಸಲಾಗಿದೆ. ಜೀಯರ್ ರವರು “ದೀಪಪ್ರಕಾಸಮ್” ಮತ್ತು “ವಾದಿಕೇಸರಿ ಕಾರಿಕೈ” ನಲ್ಲಿ ಉಲ್ಲೇಖಿಸಿರುವ ಹಾಗೆ:

ಉಕ್ತಾರ್ಥ ವಿಶಧೀಕಾರ ಯುಕ್ತಾರ್ಥಾಂತರ ಬೋಧನಮ್।

ಮತಮ್ ವಿವರಣಮ್ ತತ್ರ ಮಹಿತಾನಾಮ್ ಮನೀಷಿಣಾಮ್॥

(ವ್ಯಾಖ್ಯಾನಮ್ ಎಂದರೆ ತಿಳಿದಿರುವ ಹಿರಿಯರು ಈಗಾಗಲೇ ತಿಳಿದುರುವ ಸಿದ್ಧಾಂತವನ್ನು ಉದಾಹರಣೆಯ ಮೂಲಕ ತಿಳಿಯಪಡಿಸುವುದು)

ಮತ್ತು ರಹಸ್ಯತ್ರಯ ವಿವರಣಮ್ ನಲ್ಲಿ ಇದರ ಬಗ್ಗೆ ವಿಸ್ತಾರವಾಗಿ ವಿವರಿಸಲಾಗಿದೆ.

ಸೂತ್ರಮ್ – 76

ಪರಿಚಯ: ವಿಸ್ತಾರವಾಗಿ ವಿವರಿಸುವ ಪರಿ ಏನು? ಲೋಕಾಚಾರ್ಯರು ಉಕಾರವನ್ನು ತೆಗೆದುಕೊಂಡು ವಿವರಿಸುತ್ತಾರೆ.

ಉಕಾರತ್ತೈ ವಿವರಿಕ್ಕಿಱದು ನಮಸ್ಸು; ಅಕಾರತ್ತೈ ವಿವರಿಕ್ಕಿಱದು ನಾರಾಯಣ ಪದಮ್;

ಮಕಾರತ್ತೈ ವಿವಕ್ಕಿಱದು ಚತುರ್ಥಿ; ನಾರ ಪದಮ್ ಎನ್ಱುಮ್ ಸೊಲ್ಲುವಾರ್ಗಳ್.

ಸರಳ ಅರ್ಥ: ಉಕಾರವು “ನಮಃ” ಎಂಬ ಪದದಿಂದ ವಿವರಿಸಲ್ಪಡುತ್ತದೆ. ಅಕಾರವು ನಾರಾಯಣ ಪದದಿಂದ ವಿವರಿಸಲ್ಪಡುತ್ತದೆ. ಮಕಾರವು ಚತುರ್ಥಿಯಿಂದಲೂ ನಾರ ಎಂಬ ಪದದಿಂದಲೂ ವಿವರಿಸಲ್ಪಡುತ್ತದೆ.

ವ್ಯಾಖ್ಯಾನಮ್: ಅದೇನೆಂದರೆ, “ನಮಃ” ಎಂಬ ಪದವು ಉಕಾರವನ್ನು ವಿವರಿಸುತ್ತದೆ ಏಕೆಂದರೆ, ಅದು ತನ್ನನ್ನೂ ಮತ್ತು ಪರರನ್ನೂ ಹೊರತುಪಡಿಸುತ್ತದೆ ಭಗವಂತನಿಗೆ ಸೇವೆ ಸಲ್ಲಿಸುವಾಗ. (ಅನನ್ಯ ಶೇಷತ್ವಮ್); ನಾರಾಯಣ ಎಂಬ ಪದವು ಅಕಾರವನ್ನು ವಿವರಿಸುತ್ತದೆ. ರಕ್ಷಕನಾದ ಈಶ್ವರನ ಗುರುತುಗಳು, ಜೀವಿಗಳು ಮತ್ತು ನಿರ್ಜೀವಿಗಳು ಎಲ್ಲವೂ ಅವನ ಕೆಳಗೆ ರಕ್ಷಣೆಯನ್ನು ಪಡೆಯುವುದರ ಬಗ್ಗೆ, ರಕ್ಷಕನಾದ ಅವನ ಪವಿತ್ರವಾದ ಗುಣಗಳ ಬಗ್ಗೆ ಮತ್ತು ಯಾವ ರೀತಿಯ ರಕ್ಷಣೆಯನ್ನು ನೀಡುತ್ತಾನೆ ಎಂಬುದರ ಬಗ್ಗೆ. ಮೀಮಾಂಸಕ ಹೇಳಿಕೆಗಳಲ್ಲಿ ಉಲ್ಲೇಖಿಸಿರುವ ಹಾಗೆ:

ನಾಕಿಂಚಿತ್ ಕುರ್ವತಃ ಶೇಷತ್ವಮ್

(ಯಾರು ಸೇವೆಯನ್ನು ಮಾಡುವುದಿಲ್ಲವೋ, ಅವರಿಗೆ ಶೇಷತ್ವಮ್ ಇರುವುದಿಲ್ಲ)

ಅಕಿಂಚಿತ್ಕರಸ್ಯ ಶೇಷತ್ವಾನುಪಪತ್ತಿಃ

(ಶೇಷತ್ವವು ಸೇವೆ ಸಲ್ಲಿಸದವರಿಗೆ ಸೂಕ್ತವಲ್ಲ)

ಸ್ವಲ್ಪವೂ ಸೇವೆಯನ್ನು ಸಲ್ಲಿಸದವರು ಶೇಷತ್ವವು ಅಪೂರ್ಣವಾಗುವುದಲ್ಲದೇ, ಚತುರ್ಥಿಯು ಈ ಸೇವೆಯನ್ನು ಸೂಚಿಸುವುದಿಲ್ಲ. ಮಕಾರವು ಸೇವಕತ್ವವನ್ನು ಪ್ರತಿನಿಧಿಸುತ್ತದೆ ಹಾಗೆಯೇ ನಾರ ಎನ್ನುವ ಪದ ನಿತ್ಯತ್ವವನ್ನು ಪ್ರತಿನಿಧಿಸುತ್ತದೆ. ಆತ್ಮದ ಏಕವಚನ ಮತ್ತು ಬಹುವಚನ (ಏಕ ರೂಪತ್ವ ಮತ್ತು ಬಹು ರೂಪತ್ವ) ವನ್ನು ನಾರ ಎಂಬ ಪದವು ಮಕಾರದಂತೆಯೇ ಪ್ರತಿನಿಧಿಸುತ್ತದೆ.

ಸೂತ್ರಮ್ – 77

ಪರಿಚಯ: ಅಕ್ಷರಗಳು ವರ್ಣಮಾಲೆಯಲ್ಲಿ ಹೇಗೆ ಉಪಸ್ಥಿತವೋ ಅದರ ಪ್ರಕಾರವಾಗಿರದೇ, ಪ್ರತಿರೂಪವಾದ (ವಿರುದ್ಧ) ಪ್ರಕಾರದಲ್ಲಿರುವುದೇಕೆ ಎಂಬ ಪ್ರಶ್ನೆಗೆ ಲೋಕಾಚಾರ್ಯರು ಉತ್ತರಿಸುತ್ತಾರೆ.

ಅಡೈವೇ ವಿವರಿಯಾದೊೞಿಗಿಱದು ವಿರೋಧಿ ಪೋಯ್ ಅನುಬವಿಕ್ಕ ವೇಣ್ಡುಗೈಯಾಲೇ.

ಸರಳ ಅರ್ಥ: ಅದು ವರ್ಣಮಾಲೆಯಲ್ಲಿನ ಪ್ರಕಾರವಾಗಿರದೇ ವಿರುದ್ಧವಾಗಿರುವುದು ನಮ್ಮ ತೊಂದರೆಗಳು ಮತ್ತು ಅಡಚಣೆಗಳು (ವಿರೋಧಿ ಸ್ವರೂಪಗಳು) ನಿವಾರಣೆಯಾದ ಬಳಿಕ ನಿಜವಾದ ಸಂತೋಷವು ಸಿಗುವ ಹಾಗೆ.

ವ್ಯಾಖ್ಯಾನಮ್: ವಿವರಣೆಯು ಅಕ್ಷರಗಳ ಪ್ರಕಾರವಾಗಿಲ್ಲದೇ “ನಾರಾಯಣ” ಎಂಬ ಶಬ್ದದಲ್ಲಿ ಏಕೆಂದರೆ ಸೇವಕತ್ವದ ಅನುಭವವಾಗುವುದು ಅಡಚಣೆಗಳ ನಿವಾರಣೆಯಾದ ಬಳಿಕ ಉದಾಹರಣೆಗೆ ಅಹಂಕಾರ ಮತ್ತು ಮಮಕಾರ. ಮಮಕಾರವೆಂದರೆ ನಮ್ಮ ದೇಹವನ್ನೇ ಆತ್ಮವೆಂದುಕೊಳ್ಳುವುದು ಮತ್ತು ಆತ್ಮವು ಸರ್ವ ಸ್ವತಂತ್ರವೆಂದುಕೊಳ್ಳುವುದು ಮತ್ತು ಅದು ಇತರರ ಮೇಲೆ ಅವಲಂಬನೆಯಾಗಿದೆ ಎಂದು ಕೊಳ್ಳುವುದು) ಇವೆಲ್ಲವೂ ನಮಃ ಎಂಬ ಪದದಿಂದ ಮುಕ್ತವಾಗುತ್ತದೆ.

ಸೂತ್ರಮ್ – 78

ಪರಿಚಯ: ಈಗ ಲೋಕಾಚಾರ್ಯರು ನಮಃ ಎಂಬ ತಿರುಮಂತ್ರದ ಮಧ್ಯಭಾಗವಾದ ಪದಕ್ಕೆ ಅರ್ಥವನ್ನು ಕೊಡುತ್ತಾರೆ. ಮೊದಲು ಅವರು ನಮಃ ಎಂಬ ಪದವನ್ನು ಎರಡು ಪದಗಳಾಗಿ ವಿಂಗಡಿಸುತ್ತಾರೆ. “ನ” ಮತ್ತು “ಮಃ”.

ನಮಸ್ಸು – ನ ಎನ್ಱುಮ್ ಮಃ ಎನ್ಱುಮ್ ಇರಣ್ಡು ಪದಮ್.

ಸರಳ ಅರ್ಥ: “ನಮಃ” ಎಂಬ ಪದವು ಎರಡು ಪದಗಳಿಂದ ಉಂಟಾಗಿದೆ. “ನ” ಮತ್ತು “ಮಃ”.

ಸೂತ್ರಮ್ – 79

ಪರಿಚಯ: ಈ ಎರಡೂ ಪದಗಳ ಅರ್ಥವೇನು ಎಂಬ ಪ್ರಶ್ನೆಗೆ ಲೋಕಾಚಾರ್ಯರು ಉತ್ತರಿಸುತ್ತಾರೆ “ಮಃ” ಎಂಬ ಶಬ್ದದಿಂದ.

ಮಃ ಎಂಗಿಱ ಇತ್ತಾಲ್, ತನಕ್ಕು ಉರಿಯನ್ ಎಂಗಿಱದು; ನ ಎನ್ಱು ಅತ್ತೈ ತವಿರ್ಕ್ಕಿಱದು.

ಸರಳ ಅರ್ಥ: “ಮಃ” ಎಂದರೆ ನಾನು ಮತ್ತು ನನ್ನದು ಎಂದು, “ನ” ಎಂಬ ಶಬ್ದ ಅದನ್ನು ನಿವಾರಣೆ ಮಾಡುತ್ತದೆ.

ವ್ಯಾಖ್ಯಾನಮ್: “ಮಃ” ಎಂಬ ಶಬ್ದವು ಆರನೇ ವಿಭಕ್ತಿಯನ್ನು ಹೊಂದಿದೆ ಮತ್ತು ಈ ಮಕಾರವು ತನ್ನ ಬಗ್ಗೆಯೇ ಹೇಳುತ್ತದೆ, ನಾನು, ನನ್ನದು ಎಂದು. ” ನಾನು ನನಗೇ ಸೇರಿದ್ದು”, ನಕಾರವು ಇದನ್ನು ನಿಷೇಧವಾಗಿಸುತ್ತದೆ. (ನಿಷೇಧವಾಚಿ) ಆದ್ದರಿಂದ ಅಂತಹ ಸ್ವಂತಿಕೆಯು ನಿಷೇಧವಾಗುತ್ತದೆ.

ಸೂತ್ರಮ್ – 80

ಪರಿಚಯ: ಲೋಕಾಚಾರ್ಯರು ಈಗ ಈ ಎರಡೂ ಪದಗಳನ್ನು ಒಟ್ಟುಗೂಡಿಸುತ್ತಾರೆ ಮತ್ತು ಅದರಿಂದ ಅರ್ಥವನ್ನು ತೆಗೆಯುತ್ತಾರೆ.

ಆಗ ನಮಃ ಎನ್ಗಿಱ ವಿತ್ತಾಲ್ ‘ತನಕ್ಕು ಉರಿಯನ್ ಅನ್ಱು’ ಎನ್ಗಿಱದು.

ಸರಳ ಅರ್ಥ: ಆದ್ದರಿಂದ ‘ನಮಃ’ ಎಂಬ ಶಬ್ದವು ‘ನನ್ನದಲ್ಲ’ ಎಂಬ ಅರ್ಥವನ್ನು ಹೊರಪಡಿಸುತ್ತದೆ.

ವ್ಯಾಖ್ಯಾನಮ್: ಯಾವ ಕ್ರಮದಲ್ಲಿ ನಮಃ ಎಂಬ ಪದವು ಪ್ರಸ್ತುತವಾಗಿದೆಯೋ ಅದರ ಪ್ರಕಾರವಲ್ಲದೇ, ಪೂರ್ಣ ಶಬ್ದವಾದ ‘ನಮಃ’ ಎಂಬ ಪದಕ್ಕೆ ಅರ್ಥವನ್ನು ಕೊಡುತ್ತಾರೆ. ಏಕೆಂದರೆ ಒಂದು ವಸ್ತುವನ್ನು ನಿವಾರಣೆ ಮಾಡುವುದನ್ನು ನಮ್ಮಾೞ್ವಾರರು ತಿರುವಾಯ್ಮೊೞಿಯಲ್ಲಿ ‘ವೀಡುಮಿನ್ ಮುಱ್ಱವುಮ್’ ಎಂಬ ಪಾಸುರದಲ್ಲಿ ಯಾವುದ್ದನ್ನು ನಿಷೇಧಿಸಲಾಗಿದೆಯೋ, ಅವೆಲ್ಲವನ್ನೂ ಬಿಟ್ಟುಬಿಡಬೇಕು ಎಂದು ಹೇಳಿದ್ದಾರೆ. ಲೋಕಾಚಾರ್ಯರೇ ತಮ್ಮ ‘ಪರಂದಪಡಿ’ ಎಂಬ ಗ್ರಂಥದಲ್ಲಿ ಇದನ್ನು ಉಲ್ಲೇಖಿಸಿದ್ದಾರೆ.

ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ.

ಮೂಲ : https://granthams.koyil.org/2020/06/23/mumukshuppadi-suthrams-71-80-english/

ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org

Leave a Comment