ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ
ಸೂತ್ರಮ್ – 21
ಪರಿಚಯ: ಲೋಕಾಚಾರ್‍ಯರು, ಈ ಮೂರು ಪದರದ ಉಪಾಯಗಳನ್ನು ಮೀರಿದವರಿಗೆ ಮಂತ್ರವು ಏನನ್ನು ಕೊಡುತ್ತದೆ ಎಂದು ವಿವರಿಸಲು ಮುಂದುವರೆಯುತ್ತಾರೆ.
ಪ್ರಪತ್ತಿಯಿಲೇ ಇೞಿಂದವರ್ಗಳುಕ್ಕು ಸ್ವರೂಪ ಜ್ಞಾನತ್ತೈ ಪಿಱಪ್ಪಿತ್ತು ಕಾಲಕ್ಷೇಪತ್ತುಕ್ಕುಮ್ ಬೋಗತ್ತುಕ್ಕುಮ್ ಹೇತುವೈ ಇರುಕ್ಕುಮ್.
ಸರಳ ಅರ್ಥ: ಯಾರು ಪ್ರಪತ್ತಿಯನ್ನು (ಸಂಪೂರ್ಣ ಶರಣಾಗತಿ) ಅಳವಡಿಸಿಕೊಂಡಿರುತ್ತಾರೋ, ಇದು ಆತ್ಮದ ಬಗ್ಗೆ ಜ್ಞಾನವನ್ನು (ಸ್ವರೂಪ ಜ್ಞಾನ ಅಥವಾ ಶೇಷತ್ವಮ್) ಉತ್ಪಾದಿಸುತ್ತದೆ. ಮತ್ತು ಇದು ಕಾಲದ ಸರಿಯಾದ ಬಳಕೆಯನ್ನು ಮತ್ತು ಆನಂದವನ್ನು ಪಡೆಯಲು (ಎಂಪೆರುಮಾನರ) ಕಾರಣವಾಗುತ್ತದೆ.
ವ್ಯಾಖ್ಯಾನಮ್: ಆಚರಿಸಲು ಕಷ್ಟವಾಗಿರುವಂತಹ ಈ ಮೊದಲು ವಿಸ್ತಾರವಾಗಿ ವಿವರಿಸಿರುವ ಆಚರಣೆಗಳು ಅವುಗಳು ಕ್ಲಿಷ್ಟವಾಗಿರುವುದಲ್ಲದೆ, ಆತ್ಮದ ನೈಜ ಸ್ವಭಾವಕ್ಕೆ ತದ್ ವಿರುದ್ಧವಾಗಿರುವುವು. ಯಾರು ಪ್ರಪತ್ತಿಯನ್ನು ಮಾತ್ರ ಸಂಪೂರ್ಣವಾಗಿ ಅವಲಂಬಿತರಾಗಿರುತ್ತಾರೋ, ಅದನ್ನು ಸುಲಭವಾಗಿ ಅಳವಡಿಸಿಕೊಳ್ಳಲೂ ಸಾಧ್ಯ, ಮತ್ತು ಅದು ಆತ್ಮದ ಒಳ ಸ್ವರೂಪಕ್ಕೆ ಸಮವಾಗಿ, ಪೂರಕವಾಗಿ ಅದನ್ನು ಆಚರಿಸುವವರಿಗೆ ತನ್ನ , ಭಗವಂತನ ಮತ್ತು ತಾನು ಭಗವಂತನ ಮೇಲೆ ಇರುವ ಸಂಪೂರ್ಣ ಅವಲಂಬನೆಯ ಜ್ಞಾನವನ್ನು ಪ್ರತಿಪಾದಿಸುತ್ತದೆ. ರಹಸ್ಯವಾಗಿರುವ ಆಳವಾದ ಸೂತ್ರಗಳ ಮೇಲೆ ಧ್ಯಾನಿಸುವುದನ್ನು ಆನಂದಿಸುವಂತೆ ಮತ್ತು ಸಮಯವನ್ನು ಸರಿಯಾಗಿ ವ್ಯಯಗೊಳ್ಳುವಂತೆ ಮಾಡುತ್ತದೆ. ತಿರುಮಂಗೈ ಆಳ್ವಾರರು ಪೆರಿಯ ತಿರುಮೊೞಿ 6-10-6 ರಲ್ಲಿ ಈ ಮಂತ್ರವು ಹೇಗೆ ಆನಂದವನ್ನು ಕೊಡುತ್ತದೆ ಎಂದು ಹೇಳಿದ್ದಾರೆ:
“ಎನಕ್ಕು ಎನ್‍ಱುಮ್ ತೇನುಮ್ ಪಾಲುಮ್ ಅಮುದಮಾನ ತಿರುಮಾಲ್ ತಿರುನಾಮಮ್”
(ತಿರುಮಾಲಿನ ದಿವ್ಯ ನಾಮವು ನನಗೆ ನಿರಂತರವಾಗಿ ಸವಿಯಾಗಿರುವ ಜೇನು, ಹಾಲು , ಅಮೃತದಂತೆ.) ಯಾರು ಈ ಮೂರು ಪದಾರ್ಥಗಳನ್ನು ಸೇವಿಸುತ್ತಾರೋ ಅವರಿಗೆ ಸಹಜವಾಗಿ ಸವಿಯಿರುವಂತೆ, ಅವನ ನಾಮವೂ ತನ್ನಲ್ಲಿಯೇ ಪರಮಾನಂದವನ್ನು ಹೊಂದಿದೆ ಮತ್ತು ಪ್ರಪನ್ನಾಧಿಕಾರಿಗಳಿಗೆ ಅಮಿತವಾದ ಆನಂದವನ್ನು ಉಂಟುಮಾಡುತ್ತದೆ.
ಸೂತ್ರಮ್ – 22
ಪರಿಚಯ: ಲೋಕಾಚಾರ್‍ಯರು ನಂತರದಲ್ಲಿ ಈ ಮಂತ್ರದಿಂದ ಆಕಾಂಕ್ಷಿಗಳು ಅವರಿಗೆ ಸೂಕ್ತವಾದ ಎಲ್ಲಾ ಜ್ಞಾನವನ್ನೂ ಪಡೆಯಲು ಅತ್ಯಂತ ಅನುಕೂಲಕರವಾಗಿದೆ ಎಂದು 22ನೆಯ ಸೂತ್ರದಲ್ಲಿ ತಿಳಿಸಿದ್ದಾರೆ.
“ಮಱ್ಱೆಲ್ಲಾಮ್ ಪೇಸಿಲುಮ್” ಎಂಗಿಱಪಡಿಯೇ ಅಱಿಯ ವೇಣ್ಡುಮ್ ಅರ್ಥಮೆಲ್ಲಾಮ್ ಇದುಕ್ಕುಳ್ಳೇ ಉಣ್ಡು.
ಸರಳ ಅರ್ಥ: ನಾವು ತಿಳಿಯಲೇಬೇಕಾದ ಎಲ್ಲಾ ನಿಗೂಢ ರಹಸ್ಯಗಳನ್ನು ಈ ಮಂತ್ರವು ಹೊಂದಿದೆ. “ಮಱ್ಱೆಲ್ಲಾಮ್ ಪೇಸಿಲುಮ್” ಎಂಬ ಪಾಸುರದಲ್ಲಿ ಇದನ್ನು ತಿಳಿಯಪಡಿಸಿದೆ.
ವ್ಯಾಖ್ಯಾನಮ್: ತಿರುಮಂಗೈ ಆಳ್ವಾರರು ಅಷ್ಟಾಕ್ಷರ ಮಹಾ ಮಂತ್ರವನ್ನು ಪೆರಿಯ ತಿರುಮೊೞಿ 8-10-3 ರಲ್ಲಿ ಹೀಗೆ ಹೇಳಿದ್ದಾರೆ:
“ನಿನ್ ತಿರು ಎಟ್ಟು ಎೞುತ್ತುಮ್ ಕಱ್ಱು ಮಱ್ಱೆಲ್ಲಾಮ್ ಪೇಸಿಲುಮ್”
(ಬೇರೆ ಇದೇ ವಿಷಯಕ್ಕೆ ಸಂಬಂಧಿತವಾದದನ್ನು ಮಾತನಾಡುವಾಗ, ಈ ನಿನ್ನ ಅಷ್ಟಾಕ್ಷರ ಮಂತ್ರದ ಅರ್ಥವನ್ನು ಕಲಿಯುತ್ತೇವೆ.)
…ಏಕೆಂದರೆ ಈ ಮಂತ್ರವು ಆತ್ಮದ ಉನ್ನತಿಗಾಗಿ ಅವಶ್ಯಕವಾದ ಎಲ್ಲಾ ವಿಶಿಷ್ಟವಾದ ಅರ್ಥವನ್ನೂ , ವಿಷಯಗಳನ್ನೂ ಹೊಂದಿದೆ.
ಸೂತ್ರಮ್ – 23
ಪರಿಚಯ: ಲೋಕಾಚಾರ್‍ಯರು ಕೇಳುತ್ತಾರೆ, “ಯಾವ ಅರ್ಥಗಳನ್ನೂ ವಿಷಯಗಳನ್ನೂ ತಿಳಿದುಕೊಳ್ಳಬೇಕು?” ಮತ್ತು ಅವರೇ ಅದಕ್ಕೆ ಉತ್ತರವನ್ನು 23ನೆಯ ಸೂತ್ರದಲ್ಲಿ ವಿವರಿಸುತ್ತಾರೆ.
ಅದಾವದು ಅಂಜರ್ಥಮ್.
ಸರಳ ವಿವರಣೆ: ಅದು ಏನೆಂದರೆ, ಅರ್ಥ ಪಂಚಕಮ್ (ಐದು ಅವಶ್ಯಕ ಅರ್ಥಗಳು).
ವ್ಯಾಖ್ಯಾನಮ್: ಆ ಐದು ಅರ್ಥಗಳು ಯಾವುವೆಂದರೆ : ಆತ್ಮದ ಸ್ವರೂಪ (ಸ್ವ ಸ್ವರೂಪಮ್), ಈಶ್ವರನ ಸ್ವಭಾವ (ಪರ ಸ್ವರೂಪಮ್), ಮುಟ್ಟಬೇಕಾದ ಗುರಿಯ ಸ್ವರೂಪ (ಪುರುಷಾರ್ಥ ಸ್ವರೂಪಮ್), ಗುರಿಯನ್ನು ಮುಟ್ಟಲು ಇರುವ ಮಾಧ್ಯಮದ ಸ್ವರೂಪ (ಉಪಾಯ ಸ್ವರೂಪಮ್), ಅಂತಹ ಗುರಿಯನ್ನು ಮುಟ್ಟಲು ಇರುವ ಅಡೆತಡೆಗಳ ಸ್ವರೂಪ (ವಿರೋಧಿ ಸ್ವರೂಪಮ್).
ಇದನ್ನು ಹಾರಿತ ಸ್ಮೃತಿ 8-141 ರಲ್ಲಿ ವಿವರಿಸಲಾಗಿದೆ:
ಪ್ರಾಪ್ಯಾಸ ಬ್ರಹ್ಮಣೋ ರೂಪಮ್ ಪ್ರಾಪ್ತುಶ್ಚ ಪ್ರತ್ಯಗಾತ್ಮನಃ
ಪ್ರಾಪ್ತ್ಯುಪಾಯಮ್ ಪಲಮ್ ಪ್ರಾಪ್ತೇಸ್ತಥಾ ಪ್ರಾಪ್ತಿ ವಿರೋಧಿ ಚ।
ವದಂತಿ ಸಕಲಾ ವೇದಾಃ ಸೇತಿಹಾಸ ಪುರಾಣಕಾಃ
ಮುನಯಶ್ಚ ಮಹಾತ್ಮನೋ ವೇದ ವೇದಾರ್ಥ ವೇದಿನಃ॥
ಎಲ್ಲಾ ವೇದಗಳೂ ಮತ್ತು ಶಾಸ್ತ್ರಗಳೂ ಈ ಐದು ವಿಷಯಗಳನ್ನೇ ಎಂದರೆ ಅರ್ಥ ಪಂಚಕಮ್ ನನ್ನು ಪ್ರತಿಷ್ಠಾಪಿಸುತ್ತದೆ. ಶಾಸ್ತ್ರಗಳಲ್ಲಿ ಬಹಳ ವಿಸ್ತಾರವಾಗಿರುವ ಅರ್ಥ ಪಂಚಕಮ್‍ನನ್ನು ಈ ಮಂತ್ರದಲ್ಲಿ ಸೂಕ್ಷ್ಮವಾಗಿ ತೋರಿಸಲಾಗಿದೆ ಆದ್ದರಿಂದ ಈ ಮಂತ್ರದಲ್ಲೂ ಇವು ಪ್ರಸ್ತುತವಿದೆ ಎಂದು ಹೇಳಬಹುದು. ಪ್ರಣವಮ್ ನಮ್ಮ ಒಳ ಆತ್ಮವನ್ನೂ ಅದರ ಸ್ವಭಾವವವನ್ನೂ ತೋರಿಸುತ್ತದೆ. ನಮಃ ಎಂಬುದು ವಿರೋಧಿಯನ್ನು (ಅಡಚಣೆಗಳನ್ನು) ಮತ್ತು ಉಪಾಯವನ್ನು (ಮಾಧ್ಯಮವನ್ನು) ಸೂಚಿಸುತ್ತದೆ. ನಾರಾಯಣ ಎಂಬುದು ಸ್ವಾಮಿಯ ಸ್ವಭಾವವನ್ನು (ಪರ ಸ್ವರೂಪ) ತೋರಿಸುತ್ತದೆ. ಮತ್ತು ಆಯ ಎಂಬುದು ನಮ್ಮ ಗುರಿಯನ್ನು (ಪಲ ಸ್ವರೂಪವನ್ನು) ತೋರಿಸಿಕೊಡುತ್ತದೆ.
ಸೂತ್ರಮ್ – 24
ಪರಿಚಯ: ಲೋಕಾಚಾರ್ಯರು ಮುಂದುವರೆಸಿ ಈ ಮಂತ್ರದ ಶ್ರೇಷ್ಟತೆಯನ್ನು 24ನೆಯ ಸೂತ್ರದಲ್ಲಿ ವಿವರಿಸಿದ್ದಾರೆ.
ಪೂರ್ವಾಚಾರ್ಯಂಗಳ್, ಇಧಿಲ್ ಅರ್ಥಮ್ ಅಱಿವಧಱ್ಕು ಮುಂಬು, ತಂಗಳೈ ಪಿಱನ್ದಾರ್ಗಳಾಗ ನಿನೈತ್ತಿಱಾರ್ಗಳ್; ಇದಿಲ್ ಅರ್ಥ ಜ್ಙಾನಮ್ ಪಿಱನ್ದ ಪಿನ್ಬು “ಪಿಱನ್ದ ಪಿನ್ ಮಱನ್ದಿಲೇನ್” ಎನ್ಗಿಱಪಡಿಯೇ ಇತ್ತೈ ಒೞಿಯ ವೇಱೊನ್ಱಾಲ್ ಕಾಲಕ್ಷೇಪಮ್ ಪಣ್ಣಿ ಅಱಿಯಾರ್ಗಳ್.
ಸರಳ ವಿವರಣೆ: ಪೂರ್ವಾಚಾರ್ಯರು ತಮ್ಮನ್ನು ತಾವು ಎಂದಿಗೂ ಈ ಅರ್ಥವನ್ನು ಅರಿಯುವುದಕ್ಕೆ ಮುಂದು ಹುಟ್ಟಿರುವುದಾಗಿ ಪರಿಗಣಿಸಿರುವುದಿಲ್ಲ. ಈ ಅರ್ಥವನ್ನು ತಿಳಿದ ಬಳಿಕ ಇದರ ಬಗ್ಗೆ ಧ್ಯಾನಿಸುವುದನ್ನು ಬಿಟ್ಟು ಮತ್ತೊಂದನ್ನು ಮಾಡುವುದರ ಬಗ್ಗೆ ಯೋಚಿಸಿರುವುದಿಲ್ಲ.
ವ್ಯಾಖ್ಯಾನಮ್: ನಮ್ಮ ಪೂರ್ವಾಚಾರ್‍ಯರುಗಳಾದ ನಾಥಮುನಿ, ಯಾಮುನಾಚಾರ್‍ಯರು, ಯತಿರಾಜರು ಮುಂತಾದವರು ಈ ಮಂತ್ರದ ಅರ್ಥವನ್ನು ತಿಳಿಯುವ ಮುಂದೆ ಹುಟ್ಟಿರುವುದಾಗಿ ತಮ್ಮನ್ನು ತಾವು ಪರಿಗಣಿಸಿರುವುದಿಲ್ಲ; ಈ ಅರ್ಥವನ್ನು ಅರಿತ ಬಳಿಕ ತಿರುಮೞಿಸೈ ಆೞ್ವಾರರು ತಮ್ಮ ದಿವ್ಯ ಸೂಕ್ತಿ ತಿರುಚ್ಚಂದವೃತ್ತಮ್ 64ನೆಯ ಪಾಸುರದಲ್ಲಿ ಹೇಳಿರುವ ಹಾಗೆ “ ಪಿಱನ್ದ ಪಿನ್ ಮಱನ್ದಿಲೇನ್” (ಇದನ್ನು ಅರಿತ ಬಳಿಕ ಅರ್ಥವನ್ನು ಮರೆತಿಲ್ಲ), ಎಂಬಂತೆ ಅವರುಗಳೆಲ್ಲಾ ಈ ಮಂತ್ರವನ್ನು ಮರೆತಿಲ್ಲ; ಇದನ್ನು ಹೊರೆತಾಗಿ, ಅವರು ತಮ್ಮ ಅಮೂಲ್ಯವಾದ ವೇಳೆಯನ್ನು ಬೇರೆ ಯಾವುದೇ ಗದ್ಯವನ್ನು ತಿಳಿದುಕೊಳ್ಳಲು ಬಳಸಿಲ್ಲ. ಅವರು ಈ ಮಂತ್ರವನ್ನು ವೇದಗಳನ್ನು ಪಠಿಸುವಾಗಲೂ, ಶಾಸ್ತ್ರಗಳನ್ನು ಪಠಿಸುವಾಗಲೂ, ಮತ್ತು ಆೞ್ವಾರರ ಅಮೃತಧಾರೆಗಳನ್ನು ಅನುಭವಿಸುವಾಗಲೂ ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಅವರು ತಮ್ಮ ಇಡೀ ಜೀವನವನ್ನು ಈ ಮಂತ್ರವನ್ನು ಧ್ಯಾನಿಸುವಲ್ಲೇ ಕಳೆದರು ಎಂಬುದು ಉತ್ಪ್ರೇಕ್ಷೆಯಲ್ಲ.
ಸೂತ್ರಮ್ – 25
ಪರಿಚಯ: ಈ ಮಂತ್ರದ ಪ್ರಭಾವದಿಂದ ಇಚ್ಛಿತ ಗುರಿಯನ್ನು ತಲುಪಲು ಸಾಧ್ಯವಾಗುವಾಗ, ಏಕೆ ಅವರು ಇದರ ಒಳ ಅರ್ಥವನ್ನು ಅರಿಯಲು ಮತ್ತು ಅದರಲ್ಲಿ ಮುಳುಗಿಹೋಗುತ್ತಾರೆ? ಎಂಬ ಪ್ರಶ್ನೆಗೆ ಲೋಕಾಚಾರ್‍ಯರು 25ನೆಯ ಸೂತ್ರದಲ್ಲಿ ಅದರ ಕಾರಣವನ್ನು ವಿವರಿಸಿದ್ದಾರೆ.
ವಾಚಕತ್ತಿಱ್‍ಕಾಟ್ಟಿಲ್ ವಾಚತ್ತಿಲೇ ಊನ್ಱುಗೈಕ್ಕಡಿ ಈಶ್ವರನೇ ಉಪಾಯೋಪೇಯಮ್ ಎನ್ಱು ನಿನೈತ್ತಿರುಕ್ಕೈ.
ಸರಳ ಅರ್ಥ: ಆ ಪದಗಳಲ್ಲಿ ಮುಳುಗಿರುವುದರ ಬದಲು, ಪದಾರ್ಥದಲ್ಲಿ (ಆ ವಸ್ತುವಲ್ಲಿ) ಮುಳುಗುವುದಕ್ಕೆ ಕಾರಣ; ಈಶ್ವರನೇ ಉಪಾಯಮ್ (ದಾರಿ, ಮಾರ್ಗ) ಮತ್ತು ಉಪೇಯಮ್ (ಗಮ್ಯಸ್ಥಾನ, ಗುರಿ) ಎಂದು ಅವರು ತಿಳಿದಿರುವುದರಿಂದ.
ವ್ಯಾಖ್ಯಾನಮ್: ಈ ಪದಕ್ಕೇ ಅಂತಹ ಶಕ್ತಿಯಿದ್ದರೂ, ಅದೇ ಮರ್ಗವೂ ಮತ್ತು ಗುರಿಯೂ, ಮತ್ತು ಅದನ್ನು ಸಾಧಿಸಲು ಪೂರಕವಾಗಿದ್ದರೂ ಹಾಗೂ ಅದಕ್ಕೆ ಮಿಗಿಲಾಗಿದ್ದರೂ, ನಮ್ಮ ಆಚಾರ್‍ಯರುಗಳು ಆ ಪದಾರ್ಥದಲ್ಲಿಯೇ ಮುಳುಗಿದ್ದರು (ಸ್ವಾಮಿಯಲ್ಲಿಯೇ) ಏಕೆಂದರೆ ಅನ್ಯರಂತೆ ಅವರು ಈ ಮಂತ್ರವನ್ನು ಸ್ವಾಮಿಯನ್ನು ಪಡೆಯಲು ಬೇರೆ ವಿಧಗಳನ್ನು ಅವರು ಪರಿಗಣಿಸದೇ ಆಚಾರ್ಯರು ಈಶ್ವರನಿಗೇ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದರು ಮಾರ್ಗ ಮತ್ತು ಗುರಿ ಎರಡೂ ಆಗಿ.
ಆದ್ದರಿಂದ ಮೂರನೆಯ ಸೂಕ್ತಿಯಿಂದ ಇದುವರೆಗೆ ಲೋಕಾಚಾರ್‍ಯರು ಅತ್ಯಂತ ಅದ್ಭುತವಾಗಿ ವಿವರಿಸಿದ್ದಾರೆ:
- ಈ ಮಂತ್ರವು ಅತ್ಯಂತ ಶ್ರೇಷ್ಠವಾದ ಮಂತ್ರವಾಗಿರುವುದರಿಂದ ಇದನ್ನು ಬೇರೆ ಪದಗಳನ್ನು ಉಚ್ಛರಿಸುವಂತೆ ಸಾಮಾನ್ಯವಾಗಿ ಉಚ್ಚರಿಸಬಾರದು.
- ಈ ಮಂತ್ರವು ತಾನು ಒಂದೇ ಮಂತ್ರವಾಗಿದೆ ಏಕೆಂದರೆ ಇದನ್ನು ಈಶ್ವರನು ತಾನೇ ಗುರು ಮತ್ತು ಶಿಷ್ಯನಾಗಿ ಬಹಿರಂಗ ಪಡಿಸಿರುತ್ತಾನೆ.
- ಇದರ ಸಾಟಿಯಿಲ್ಲದ ಸ್ಥಾನವು ಇತರ ಮಂತ್ರಗಳಿಗೆ ಮತ್ತು ಶಾಸ್ತ್ರಗಳಿಗೆ ಹೋಲಿಸಿದಾಗ.
- ಇದರ ಅಸಾಧಾರಣ ಶಕ್ತಿ ಸಾಮರ್ಥ್ಯವು ಇದನ್ನು ಸರಿಯಾದ ಮರ್ಯಾದೆಯೊಂದಿಗೆ ಪಠಿಸದೇ ಇದ್ದಾಗಲೂ.
- ಭಕ್ತರ ಎಲ್ಲಾ ಅಪೇಕ್ಷೆಗಳನ್ನೂ ಪೂರೈಸುವ ಸಾಮರ್ಥ್ಯವು.
- ಕರ್ಮ ಮತ್ತು ಇತರ ಯೋಗಗಳಿಗೆ ಪೂರಕವಾಗಿರುವ ಸ್ವಭಾವ.
- ಪವಿತ್ರವಾದ ಮತ್ತು ಗುಟ್ಟಾಗಿರುವ ವಿಷಯಗಳನ್ನು ಕಲಿಸಲು ಮತ್ತು ಯಾರು ಕಲಿಯುತ್ತರೋ ಅವರಿಗೆ ಶ್ರೇಷ್ಠತೆಯನ್ನು ಪರಿಕಲ್ಪಿಸುವ ಸಾಮರ್ಥ್ಯವನ್ನು ಹೊಂದಿರುವ
- ನಮ್ಮ ಮನಸ್ಸಿನಲ್ಲಿ ಅತ್ಯಂತ ಉನ್ನತವಾದ ಭಾವನೆಗಳನ್ನು ಹುಟ್ಟಿಸಲು ಸಹಕಾರಿಯಾಗಿರುವ ಇದರ ಸ್ವಭಾವ.
ಆದ್ದರಿಂದ ಎಲ್ಲರಿಗೂ ಈ ಮಂತ್ರದ ಶ್ರೇಷ್ಠತೆಯನ್ನು ತಿಳಿಯ ಪಡಿಸಲು ಅವರು ಈ ಸೂಕ್ತಿಗಳನ್ನು ಬರೆದಿರುತ್ತಾರೆ.
ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ
ಮೂಲ : https://granthams.koyil.org/2020/06/10/mumukshuppadi-suthrams-21-25/
ಆರ್ಕೈವ್ ಮಾಡಲಾಗಿದೆ – https://granthams.koyil.org
ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org
1 thought on “ಮುಮುಕ್ಷುಪ್ಪಡಿ ಸೂತ್ರಮ್ 21 – 25”