ಶ್ರೀಕೃಷ್ಣ ಲೀಲೆಗಳ ಸಾರಾಂಶ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ

“ಅಜಾಯಮಾನೋ ಬಹುಧಾ ವಿಜಾಯತೇ” (ಜನ್ಮರಹಿತನಾದವನು ಹಲವಾರು ಜನ್ಮಗಳನ್ನು ಸ್ವೀಕರಿಸಿದನು) ಎಂದು  ವೇದಗಳು ಸಾರಿ ಹೇಳುತ್ತವೆ. ವೇದಗಳಿಂದ ಸ್ತುತಿಸಲ್ಪಡುವ ಭಗವಂತನು ತಾನು ವಿವಿಧ ರೂಪಗಳಿಂದ ಅವತರಿಸುತ್ತಾನೆ ಎಂದು ಹೇಳುತ್ತಾನೆ(“ಬಹೂನಿ ಮೇ ವ್ಯತೀತಾನಿ ಜನ್ಮಾನಿ”).

ವೈದಿಕರಲ್ಲಿ (ವೈದಿಕರು: ವೇದವನ್ನು ಅನುಸರಿಸುವವರು)ಶ್ರೇಷ್ಠರಾದ ಮತ್ತು ವೇದದ ಸಾರವನ್ನು ತಿಳಿದಿರುವ ನಮ್ಮಾಳ್ವರರು ಹೇಳುತ್ತಾರೆ , ಸನ್ಮಂ ಪಾಲ ಪಾಲ ಸೈಯ್ದು ಎಂದು ತಮ್ಮ ದಿವ್ಯ ಪ್ರಬಂಧದಲ್ಲಿ ಹಾಡಿದ್ದಾರೆ. 

ಈ ರೀತಿಯಾಗಿ ಭಗವಂತನು ನಾನಾವಿಧ ರೂಪಗಳಿಂದ ಅವತರಿಸುತ್ತಾನೆ ಎಂದು ವಿವರಿಸಲಾಗಿದೆ. ನಾವು (ಜೀವಾತ್ಮರು) ಪದೇ ಪದೇ ನಾನಾವಿಧವಾದ ಯೋನಿಗಳಲ್ಲಿ ನಮ್ಮ ಕರ್ಮಾನುಸಾರ ಜನ್ಮವನ್ನು ಪಡೆದು ಕೊಳ್ಳುತ್ತೇವೆ. ಆದರೆ ಭಗವಂತನು ತನ್ನ ಕೃಪೆಯಿಂದ ನಮ್ಮನ್ನು (ಜೀವಾತ್ಮರನ್ನು) ಉದ್ಧರಿಸಲು ಅವತರಿಸುತ್ತಾನೆ.  ಇದರಿಂದಾಗಿ  ತನ್ನ ಪ್ರತಿ ಅವತಾರದಲ್ಲಿ ಭಗವಂತನ ತೇಜಸ್ಸು ಹೆಚ್ಚುತ್ತದೆ. ಈ ಶ್ರೇಷ್ಠ ತತ್ತ್ವವನ್ನು ಆಳ್ವಾರರು ತೋರಿಸಿದ್ದಾರೆ.

ಭಗವಂತನ ಅನಂತಕೋಟಿ ಅವತಾರಗಳಲ್ಲಿ,  ಹತ್ತು ಅವತಾರಗಳನ್ನು (ದಶಾವತಾರಗಳು) ಸ್ತುತಿಸಲ್ಪಟ್ಟಿವೆ.ತಿರುಮಂಗೈ ಆಳ್ವಾರರು ಇದನ್ನು ಒಂದೇ ವಾಕ್ಯದಲ್ಲಿ ಸುಂದರವಾಗಿ ಹೀಗೆ ವಿವರಿಸಿದ್ದಾರೆ “ಮಿನ್ನೋಡು ಆಮೈ ಕೀಳ್ ಅರಿ ಕುರಾಳಾಯ್ ಮುನ್ನಂ ಇರಾಮನಾಯ್ ತಾನಾಯಪ್ಪಿನ್ನುಮ್ ಇರಾಮನಾಯ್ತು ದಾಮೋದರನುಮಾಯ್ ಕಲ್ಕಿಯುಮ್ ಆನಾನ್”(ಎಂಬೆರುಮಾನ್/ಭಗವಂತನು ತಾನು ಮತ್ಸ್ಯ(ಮೀನು), ಕೂರ್ಮ(ಆಮೆ),ವರಾಹ(ಕಾಡು ಹಂದಿ),ವಾಮನ,ಪರಶುರಾಮ(ಮೊದಲನೆಯ ರಾಮ),ತನೇ ಸ್ವತಃ ಶ್ರೀರಾಮನಾಗಿ, ಬಲರಾಮ (ತದನಂತರದ ರಾಮಾವತಾರ),ಕೃಷ್ಣ-ದಾಮೋದರ ಮತ್ತು ಕಲ್ಕಿ).ಈ ದಶಾವತಾರದಲ್ಲಿ, ಶ್ರೀರಾಮಾವತಾರ ಮತ್ತು ಶ್ರೀಕೃಷ್ಣಾವತಾರಕ್ಕೆ ನಮ್ಮ ಪೂರ್ವಾಚಾರ್ಯರು ಮತ್ತು ಹಿರಿಯರು ಹೆಚ್ಚಾಗಿ ಹಾಡಿ ಹೊಗಳಿದ್ದಾರೆ. ಈ ಎರಡು ಅವತಾರಗಳಲ್ಲಿ, ದ್ವಾಪರಯುಗದ ಅಂತ್ಯದಲ್ಲಿ ಸಂಭವಿಸಿದ ಸಾಮೀಪ್ಯದಿಂದಾಗಿ ಶ್ರೀಕೃಷ್ಣಾವತಾರವು ಋಷಿಗಳನ್ನು, ಆಳ್ವಾರರು ಮತ್ತು ಆಚಾರ್ಯರನ್ನು ಅಪಾರವಾಗಿ ಆಕರ್ಷಿಸಿತು. ನಿರ್ದಿಷ್ಟವಾಗಿ ಹೇಳುವುದಾದರೆ, ಶ್ರೀಕೃಷ್ಣನ ಬಾಲ್ಯದ ವಿನೋದಗಳಲ್ಲಿ ಆಕರ್ಷಿತರಾಗದವರು ಯಾರೂ ಇಲ್ಲ. ಭಗವಂತನು ಕಠಿಣ ಹೃದಯದ ವ್ಯಕ್ತಿಗಳನ್ನು ಸಹ ಕರಗಿಸುವ ಅದ್ಭುತ ಲೀಲೆಗಳಲ್ಲಿ ತೊಡಗಿಸಿಕೊಂಡಿದ್ದಾನೆ.

ಶ್ರೀ ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಕರುಣೆಯಿಂದ ಹೇಳುತ್ತಾನೆ “ನನ್ನ ಜನ್ಮ ಮತ್ತು ಲೀಲೆಗಳನ್ನು ನಿಜವಾಗಿಯೂ ಅರ್ಥಮಾಡಿಕೊಂಡವರು ಖಂಡಿತವಾಗಿಯೂ ನನ್ನನ್ನು ತಲುಪುತ್ತಾರೆ”. ಆದ್ದರಿಂದ, ಶ್ರೀ ಭಾಗವತದ ದಶಾಮ ಸ್ಕಂಧ (ಹತ್ತನೇ ಅಧ್ಯಾಯ) ದಲ್ಲಿ ತೋರಿಸಿರುವ ಅನುಕ್ರಮದಲ್ಲಿ ನಾವು ಕೃಷ್ಣಾವತಾರವನ್ನು ಮುಂದಿನ ದಿನಗಳಲ್ಲಿ ಸರಳ ರೀತಿಯಲ್ಲಿ ನಮ್ಮ ಪೂರ್ವಾಚಾರ್ಯರು ತೋರಿಸಿದ ಅಂಶಗಳ ಮೂಲ ತತ್ವಗಳನ್ನು ನೋಡುತ್ತೇವೆ.

ಅಡಿಯೇನ್ ಕಸ್ತೂರಿರಂಗನ್ ರಾಮಾನುಜ ದಾಸನ್

ಮೂಲ : https://granthams.koyil.org/krishna-leela-english/

ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org