ಶ್ರೀವೈಷ್ಣವಕ್ಕೆ ಒಂದು ಸರಳ ಮಾರ್ಗದರ್ಶಿ – ರಹಸ್ಯ ತ್ರಯ – ಮೂರು ರಹಸ್ಯಗಳು

ಶ್ರೀಃ
ಶ್ರೀಮತೇ ಶಠಕೋಪಾಯ ನಮಃ
ಶ್ರೀಮತೇ ರಾಮಾನುಜಾಯ ನಮಃ
ಶ್ರೀಮದ್ವರವರಮುನಯೇ ನಮಃ
ಶ್ರೀ ವಾನಾಚಲಮಹಾಮುನಯೇ ನಮಃ

ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ

<< ದಿವ್ಯಪ್ರಬಂಧಗಳು ಮತ್ತು ದಿವ್ಯದೇಶಗಳು

ಪಂಚಸಂಸ್ಕಾರದ ಒಂದು ಭಾಗವಾಗಿ ಮಂತ್ರೋಪದೇಶವು ಮಾಡಲ್ಪಡುತ್ತದೆ. ಅದರಲ್ಲಿ, ೩ ರಹಸ್ಯಗಳು ಆಚಾರ್ಯರಿಂದ ಶಿಷ್ಯರಿಗೆ ಬೋಧಿಸಲ್ಪಡುತ್ತವೆ. ಅವುಗಳೆಂದರೆ:

  • ತಿರುಮಂತ್ರ – ನಾರಾಯಣ ಋಷಿಯು ನರ ಋಷಿಗೆ (ಇಬ್ಬರೂ ಭಗವಂತನ ಅವತಾರಗಳು) ಬದರಿಕಾಶ್ರಮದಲ್ಲಿ ಪ್ರಕಟಪಡಿಸಿದುದು.

ಓಂ ನಮೋ ನಾರಾಯಣಾಯ

 ಸರಳ ಅರ್ಥ:
ಭಗವಂತನ ಸ್ವಾಮ್ಯದಲ್ಲಿರುವ ಜೀವಾತ್ಮನು ಕೇವಲ ಭಗವಂತನ ಸಂತೋಷಕ್ಕಾಗಿಯೇ ಜೀವಿಸಬೇಕು, ಅವನು ಎಲ್ಲರ ಪ್ರಭುವಾದ ನಾರಾಯಣನ ಸೇವೆಯನ್ನು ಮಾಡಬೇಕು.

  • ದ್ವಯಮ್ – ವಿಷ್ಣು ಲೋಕದಲ್ಲಿ ಶ್ರೀಮನ್ ನಾರಾಯಣನು ಶ್ರೀ ಮಹಾಲಕ್ಷ್ಮಿಗೆ ಪ್ರಕಟಪಡಿಸಿದುದು.

ಶ್ರೀಮನ್ ನಾರಾಯಣ ಚರಣೌ ಶರಣಂ ಪ್ರಪದ್ಯೇ
ಶ್ರೀಮತೇ ನಾರಾಯಣಾಯ ನಮಃ ।।

ಸರಳ ಅರ್ಥ:
ನಾನು ಶ್ರೀ ಮಹಾಲಕ್ಷ್ಮಿಯ ಪತಿಯಾದ ಶ್ರೀಮನ್ ನಾರಾಯಣನ ಪಾದಾರವಿಂದಗಳಲ್ಲಿ ಶರಣಾಗಿದ್ದೇನೆ. ನಾನು ಶ್ರೀ ಮಹಾಲಕ್ಷ್ಮಿ ಮತ್ತು ಶ್ರೀಮನ್ ನಾರಾಯಣನ ನಿಸ್ವಾರ್ಥ ಸೇವೆ ಮಾಡಲು ಪ್ರಾರ್ಥಿಸುತ್ತೇನೆ.

  • ಚರಮ ಶ್ಲೋಕ (ಭಗವದ್ಗೀತೆಯಿಂದ) – ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಬಹಿರಂಗಪಡಿಸಿದುದು.

ಸರ್ವಧರ್ಮಾನ್ ಪರಿತ್ಯಜ್ಯ ಮಾಂ ಏಕಂ ಶರಣಂ ವ್ರಜ
ಅಹಂ ತ್ವಾ ಸರ್ವಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ ।।

ಸರಳ ಅರ್ಥ:
ಎಲ್ಲಾ ಉಪಾಯಗಳನ್ನು ಸಂಪೂರ್ಣವಾಗಿ ತೊರೆದು ನನಗೆ ಮಾತ್ರ ಶರಣಾಗತನಾಗು; ನಾನು ನಿನ್ನನ್ನು ಎಲ್ಲಾ ಪಾಪಗಳಿಂದ ಮುಕ್ತಗೊಳಿಸುತ್ತೇನೆ, ಚಿಂತಿಸಬೇಡ.

ಈ ೩ ರಹಸ್ಯಗಳ ನಡುವೆ ಎರಡು ವಿಧವಾದ ಸಂಬಂಧಗಳು ಮುಮುಕ್ಷುಪ್ಪಡಿ ವ್ಯಾಖ್ಯಾನದಲ್ಲಿ ಮಾಮುನಿಗಳಿಂದ ವಿವರಿಸಲ್ಪಟ್ಟಿವೆ (ದ್ವಯ ಮಹಾಮಂತ್ರವನ್ನು ವಿವರಿಸುವ ಪ್ರಾರಂಭದಲ್ಲಿ):

ವಿಧಿ – ಅನುಷ್ಠಾನ (ಸಿದ್ಧಾಂತ – ಆಚರಣೆ) – ತಿರುಮಂತ್ರವು ಜೀವಾತ್ಮ ಮತ್ತು ಪರಮಾತ್ಮರ ನಡುವಿನ ಸಂಬಂಧವನ್ನು ವಿವರಿಸುತ್ತದೆ; ಚರಮ ಶ್ಲೋಕವು ಜೀವಾತ್ಮನನ್ನು ಪರಮಾತ್ಮನಿಗೆ ಶರಣಾಗುವಂತೆ ಆಜ್ಞಾಪಿಸುತ್ತದೆ; ದ್ವಯವು, ಆ ಶರಣಾಗತನಾದ ಜೀವಾತ್ಮನು ಯಾವಾಗಲೂ ನೆನಪಿನಲ್ಲಿಡಬೇಕಾದುದು/ಪಠಿಸಬೇಕಾದುದು.

ವಿವರಣ – ವಿವರಣಿ (ವಿಸ್ತಾರ – ಸಂಕ್ಷಿಪ್ತ ನಿರೂಪಣೆ) – ತಿರುಮಂತ್ರದಲ್ಲಿ ‘ನಮೋ ನಾರಾಯಣಾಯ’ ಪ್ರಣವವನ್ನು ವಿವರಿಸುತ್ತದೆ; ದ್ವಯ ಮಹಾಮಂತ್ರವು ತಿರುಮಂತ್ರವನ್ನು ವಿವರಿಸುತ್ತದೆ; ಚರಮ ಶ್ಲೋಕವು ಅದನ್ನು ಮತ್ತಷ್ಟು ವಿವರಿಸುತ್ತದೆ.

ಈ ೩ ರಹಸ್ಯಗಳಲ್ಲಿ, ದ್ವಯ ಮಹಾಮಂತ್ರವು ನಮ್ಮ ಆಚಾರ್ಯರುಗಳಿಂದ ಬಹುವಾಗಿ ವೈಭವೀಕರಿಸಲ್ಪಟ್ಟಿದೆ ಮತ್ತು ಸತತವಾಗಿ ಧ್ಯಾನಿಸಲ್ಪಟ್ಟಿದೆ. ಅದು ಮಂತ್ರರತ್ನವೆಂದು ವೈಭವೀಕರಿಸಲ್ಪಟ್ಟಿದೆ. ಇದೊಂದು ಮಾತ್ರವೇ ಶ್ರೀ ಮಹಾಲಕ್ಷ್ಮಿಯ ಪುರುಷಕಾರ ಭೂತಾ (ಶಿಫಾರಸು ಮಾಡುವ ಅಧಿಕಾರ) ಪಾತ್ರವನ್ನು ಸಂಪೂರ್ಣವಾಗಿ/ಸ್ಪಷ್ಟವಾಗಿ ಪ್ರದರ್ಶಿಸುತ್ತದೆ.

ಅದಲ್ಲದೆ, ಶ್ರೀ ಮಹಾಲಕ್ಷ್ಮಿ ಮತ್ತು ಶ್ರೀಮನ್ ನಾರಾಯಣರ ಸಂತೋಷಕ್ಕಾಗಿ ಮಾತ್ರವೇ ನಿರಂತರ ಸೇವೆ ಮಾಡುವುದು ಅಂತಿಮ ಧ್ಯೇಯವೆಂದು ವಿವರಿಸಲ್ಪಟ್ಟಿದೆ. ವರವರಮುನಿ ದಿನಚರ್ಯದಲ್ಲಿ ದೇವರಾಜ ಗುರು (ಎರುಮ್ಬಿ ಅಪ್ಪಾ) ಮಣವಾಳ ಮಾಮುನಿಗಳ ದಿವ್ಯ ಕ್ರಿಯೆಗಳನ್ನು ದಾಖಲಿಸಿದ್ದಾರೆ. ೯ನೆಯ ಶ್ಲೋಕದಲ್ಲಿ ಅವರು ಹೀಗೆ ಎತ್ತಿ ತೋರಿಸಿದ್ದಾರೆ:

ಮಂತ್ರ ರತ್ನ ಅನುಸಂಧಾನ ಸಂತತ ಸ್ಪುರಿತಧರಂ  |
ತದರ್ಥಿತ ತತ್ವ ನಿದ್ಯಾನ ಸನ್ನದ್ಧ ಪುಲಕೋದ್ಗಮಮ್ ||

ಅರ್ಥಾತ್: ಮಾಮುನಿಗಳ ತುಟಿಗಳು ನಿರಂತರವಾಗಿ ದ್ವಯ ಮಹಾಮಂತ್ರವನ್ನು ಪಠಿಸುತ್ತಿರುತ್ತವೆ. ಅವರ ಶರೀರವು ದ್ವಯದ ಅರ್ಥಗಳ (ತಿರುವಾಯ್ಮೊಳಿಯಲ್ಲದೆ ಬೇರಲ್ಲ) ನಿರಂತರ ಧ್ಯಾನದಿಂದಾಗಿ ದಿವ್ಯ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿದೆ. ಇಲ್ಲಿ ನೆನಪಿಲ್ಲಿಡಬೇಕಾದ ವಿಷಯವೆಂದರೆ ದ್ವಯ ಮಹಾಮಂತ್ರವು ಎಂದಿಗೂ ಸ್ವತಂತ್ರವಾಗಿ ಪಠಿಸಲ್ಪಡುವುದಿಲ್ಲ – ನಾವು ಯಾವಾಗಲೂ ಗುರುಪರಂಪರಾ ಮಂತ್ರವನ್ನು (ಅಸ್ಮದ್ ಗುರುಭ್ಯೋ ನಮಃ … ಶ್ರೀಧರಾಯ ನಮಃ) ಮೊದಲು ಪಠಿಸಿ ತದ ನಂತರವೇ ದ್ವಯ ಮಹಾಮಂತ್ರವನ್ನು ಪಠಿಸಬೇಕು.

ನಮ್ಮ ಅನೇಕ ಪೂರ್ವಾಚಾರ್ಯರುಗಳು, ಪರಾಶರ ಭಟ್ಟರು (ಅಷ್ಟ ಶ್ಲೋಕೀ) ಮೊದಲ್ಗೊಂಡು, ಪೆರಿಯವಾಚ್ಚಾನ್ ಪಿಳ್ಳೈ (ಪರಂತ ರಹಸ್ಯಮ್), ಪಿಳ್ಳೈ ಲೋಕಾಚಾರ್ಯರ್ (ಶ್ರೀಯಃಪತಿ ಪಡಿ, ಯಾದೃಚ್ಛಿಕ ಪಡಿ, ಪರಂತ ಪಡಿ, ಮುಮುಕ್ಷುಪ್ಪಡಿ), ಅಳಗಿಯ ಮಣವಾಳ ಪೆರುಮಾಳ್ ನಾಯನಾರ್ (ಅರುಳಿಚ್ಚೆಯಲ್ ರಹಸ್ಯಮ್), ಮಣವಾಳ ಮಾಮುನಿಗಳ್ (ಮುಮುಕ್ಷುಪ್ಪಡಿಯ ಮೇಲೆ ವ್ಯಾಖ್ಯಾನ), ಇತ್ಯಾದಿ, ರಹಸ್ಯ ತ್ರಯವನ್ನು ಬಹು ವಿಶದವಾಗಿ ವಿವರಿಸಿದ್ದಾರೆ. ಆ ಅನೇಕ ಅದ್ಭುತವಾದ ಪ್ರಬಂಧಗಳಲ್ಲಿ ಮುಮುಕ್ಷುಪ್ಪಡಿಯು ಅತ್ಯಂತ ನಿಖರವಾದ ಸಾಹಿತ್ಯವಾಗಿ ಎದ್ದು ಕಾಣುತ್ತಿದೆ ಮತ್ತು ಶ್ರೀವೈಷ್ಣವರಿಗೆ ಅತಿ ಮುಖ್ಯ ಕಾಲಕ್ಷೇಪ ಗ್ರಂಥವಾಗಿ ನಿರ್ಧರಿಸಲ್ಪಟ್ಟಿದೆ (ಒಬ್ಬ ಆಚಾರ್ಯರ ಕೆಳಗೆ ಅಧ್ಯಯನ ಮಾಡಬೇಕಾದುದು).

ರಹಸ್ಯ ತ್ರಯವು ತತ್ತ್ವ ತ್ರಯಮ್ ಮತ್ತು ಅರ್ಥ ಪಂಚಕಮ್ ಇವುಗಳ ಮೇಲೆ ಕೇಂದೀಕೃತವಾಗಿದ್ದು, ಶ್ರೀವೈಷ್ಣವರು ಸ್ಪಷ್ಟವಾಗಿ ತಿಳಿದುಕೊಳ್ಳಲು ಅತ್ಯಂತ ಮಹತ್ವದ್ದಾಗಿದೆ.

ಆಳ್ವಾರ್ ತಿರುವಡಿಗಳೇ ಶರಣಮ್
ಎಂಪೆರುಮಾನಾರ್ ತಿರುವಡಿಗಳೇ ಶರಣಮ್
ಪಿಳ್ಳೈ ಲೋಕಾಚಾರ್ಯರ್ ತಿರುವಡಿಗಳೇ ಶರಣಮ್
ಜೀಯರ್ ತಿರುವಡಿಗಳೇ ಶರಣಮ್

ಅಡಿಯೇನ್ ಪಾರ್ಥಸಾರಥಿ ರಾಮಾನುಜ ದಾಸನ್

ಪಿಳ್ಳೈ ಲೋಕಾಚಾರ್ಯರ್ ತಿರುವಡಿಗಳೇ ಶರಣಮ್

ಜೀಯರ್ ತಿರುವಡಿಗಳೇ ಶರಣಮ್
ಜೀಯರ್ ತಿರುವಡಿಗಳೇ ಶರಣಮ್

ಅಡಿಯೇನ್ ಪಾರ್ಥಸಾರಥಿ ರಾಮಾನುಜ ದಾಸನ್

ಮೂಲ: https://ponnadi.blogspot.sg/2015/12/rahasya-thrayam/

ರಕ್ಷಿತ ಮಾಹಿತಿ:  https://granthams.koyil.org

ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಧರ್ಮಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – https://pillai.koyil.org

 

2 thoughts on “ಶ್ರೀವೈಷ್ಣವಕ್ಕೆ ಒಂದು ಸರಳ ಮಾರ್ಗದರ್ಶಿ – ರಹಸ್ಯ ತ್ರಯ – ಮೂರು ರಹಸ್ಯಗಳು”

Leave a Comment