ಶ್ರೀಕೃಷ್ಣ ಲೀಲೆಗಳ ಸಾರಾಂಶ – 1 – ಶ್ರೀಕೃಷ್ಣನ ಜನನ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ

ಶ್ರೀಕೃಷ್ಣ ಲೀಲೆಗಳ ಸಾರಾಂಶ

ಭಗವಂತನ ನಿರ್ಹೇತುಕ ಕೃಪೆಯಿಂದ ಭಕ್ತಿರೂಪಾಪನ್ನವಾದ ಜ್ಞಾನವನ್ನು ಪಡೆದ ಆಳ್ವಾರರು ಮತ್ತು ಭೂಮಿ ಪಿರಾಟ್ಟಿಯ/ದೇವಿಯ ಅವತಾರರಾದ ಆಂಡಾಳ್ ನಾಚ್ಚಿಯಾರ್, ಅವರು ಕೃಷ್ಣಾವತಾರವನ್ನು ವಿಶೇಷವಾಗಿ ಈ ರೀತಿ ತಮ್ಮ  ಪಾಶುರಗಳಲ್ಲಿ ಹಾಡಿ ಹೊಗಳಿದ್ದಾರೆ “ಆಟ್ಕುಲತ್ತು ತೋನ್ರಿಯ ಆಯರ್ ಕೋವಿನೈ”(ನಮ್ಮನ್ನು ಉದ್ಧಾರಿಸಲು ರಾಜ ಗೋಪಾಲನಾಗಿ ಅವತರಿಸಿದವನು),”ಪಿರಾನ್ದಾವಾರೂಮ್”(ಅದ್ಭುತವಾಗಿ ಅವತರಿಸಿದವನು),”ಮನ್ನಿನ್ ಬಾರಿ ನಿಕ್ಕುದಾರ್ಕೆ ವಡಮದುರೈಪ್ಪಿರನ್ದಾನ್”( ಭೂ ಭಾರವನ್ನು ನಾಶ ಮಾಡಲು ಉತ್ತರ ಭಾರತದ ಮಥುರೆಯಲ್ಲಿ ಶ್ರೀಕೃಷ್ಣ ನು ಅವತರಿಸಿದವನು) ಮತ್ತು “ಒರುತ್ತಿ ಮಾಗನಾಯ್ ಪ್ಪಿರಂದು”(ಶ್ರೀದೇವಕೀ ದೇವಿಯ ಪುತ್ರನಾಗಿ ಜನಿಸಿದವನು).

ಭಗವಂತನು ಅವತರಿಸುವುದು ಆತನ ಕರುಣೆಯಿಂದ ಮಾತ್ರವೆಂದು ನಾವು ಈಗಾಗಲೇ ನೋಡಿದ್ದೇವೆ. ಹೇಗೆ ಒಬ್ಬ ತಾಯಿಯು ತನ್ನ ಮಗು ಬಾವಿಯಲ್ಲಿ ಬಿದ್ದಾಗ ಸ್ವತಃ ಆ ಮಗುವಿನ ರಕ್ಷಣೆಗಾಗಿ ತಾನು ಸಹ ಬಾವಿಗೆ ಹಾರುತ್ತಾಳೋ, ಅದೇ ರೀತಿ ಭಗವಂತನು ಜೀವಾತ್ಮರನ್ನು ಕಷ್ಟಕಾರ್ಪಣ್ಯಗಳ ಸಂಕೋಲೆಯಿಂದ ಬಿಡಿಸಲು ಈ ಲೀಲಾವಿಭೂತಿಯಲ್ಲಿ ಅವತರಿಸುತ್ತಾನೆ. ಹೀಗೆ ಅವನು ಅವತರಿಸಿ ,ತನ್ನ ದಿವ್ಯಲೀಲೆಗಳಿಂದ ಜನರ ಚಿತ್ತವನ್ನು ತನ್ನ ಹತ್ತಿರ ಸೆಳೆಯುತ್ತಾನೆ.

ಭಗವಂತನ ಅವತಾರಗಳು ಮತ್ತು ದಿವ್ಯಲೀಲಿಗಳ ಹಿರಿಮೆಗಳೆಂದರೆ:

•ಅಂತಹ ಭಗವಂತನು ಈ ಲೀಲಾವಿಭೂತಿಯಲ್ಲಿ ಅವತರಿಸಿದನೆಂದು ನಾವು ಅರಿತುಕೊಂಡರೆ, ನಮಗೆ ಈ ಭೌತಿಕ ಪ್ರಪಂಚದಲ್ಲಿ ಇನ್ನು ಮುಂದೆ ಜನ್ಮವಿಲ್ಲ.

•ಭಗವಂತನು ಇಲ್ಲಿ ಹುಟ್ಟಿ ತಾಯಿಯ ಸ್ತನ್ಯಪಾನ ಮಾಡಿದನು ಎಂದು ಅರಿತರೆ ,ನಾವು ತಾಯಿಯ ಸ್ತನ್ಯಪಾನ ಮಾಡಲು ಇಲ್ಲಿ ಹುಟ್ಟುಬೇಕಾಗಿಲ್ಲ.

•ಭಗವಂತನು ಲೀಲಾವಿನೋದಾರ್ಥವಾಗಿ ನವನೀತವನ್ನು ಕದ್ದು ಅದರಿಂದಾಗಿ ಒರಳಿಗೆ ಕಟ್ಟಿಸಿಕೊಂಡು, ಪೆಟ್ಟು ತಿಂದು ಅಳುತ್ತಾನೆ ಎಂದು ಅರಿತರೆ ನಮಗೆ ಸಂಸಾರದ ಬಂಧನವಿರುವುದಿಲ್ಲ.

ದ್ವಾಪರಯುಗದ ಅಂತ್ಯದಲ್ಲಿ  ಕಂಸ, ಜರಾಸಂಧರಂತಹ ದುಷ್ಟರ ಉಪತಳದಿಂದಾಗಿ, ಬ್ರಹ್ಮಾದಿ ದೇವತೆಗಳು ಸರ್ವೇಶ್ವರನಾದ,ಕ್ಷಿರಾಬ್ಧಿವಾಸನಾದ ಶ್ರೀಮನ್ನಾರಾಯಣನ ಮೊರೆ ಹೋದರು ಮತ್ತು ಹೇಗೆ ಪ್ರಾರ್ಥಿಸಿದರು “ಹೇ ದೇವಾದಿ ದೇವ ದುಷ್ಟ ಶಿಕ್ಷಣ ಶಿಷ್ಟ ರಕ್ಷಣಾರ್ಥಕ್ಕಾಗಿ ಈ ಭೂಲೋಕದಲ್ಲಿ ಅವತರಿಸಿ ಧರ್ಮವನ್ನು ಸ್ಥಾಪಿಸಬೇಕು”.

ಎಂಬೆರುಮಾನ್(ಭಗವಂತನು) ಅವರನ್ನು ಸಮಾಧಾನಪಡಿಸಿ ತಾನು ಸೂಕ್ತ ಕಾಲದಲ್ಲಿ ಅವತರಿಸಿ ಭೂಭಾರವನ್ನು ನಾಶ ಮಾಡುವುದಾಗಿ ವಚನ ನೀಡಿ ಕಳುಹಿಸಿದನು.

ದೇವಕಿ ದೇವಿ ಮತ್ತು ಶ್ರೀ ವಸುದೇವ ತಮ್ಮ ಪೂರ್ವಜನ್ಮ ದಲ್ಲಿ ಭಗವಂತನನ್ನು ಪ್ರಾರ್ಥಿಸಿದರು ಮತ್ತು ಭಗವಂತನು ಸ್ವತಃ ತಮ್ಮ ಪುತ್ರನಾಗಿ ಜನಿಸಬೇಕೆಂಬ ವರವನ್ನು ಪಡೆದಿದ್ದರು.ಆದ್ದರಿಂದ ಭಗವಂತನು ಈ ದಂಪತಿಗಳಿಗೆ ಪುತ್ರನಾಗಿ ಅವತರಿಸುವುದಾಗಿ ನಿರ್ಧರಿಸಿದನು. ಕಂಸನು ತನ್ನ ಭಗಿನಿಯಾದ(ಸಹೋದರಿ) ದೇವಕೀಯನ್ನು ವಸುದೇವನೊಂದಿಗೆ ವೈಭವದಿಂದ ವಿವಾಹವನ್ನು ನೆರವೇರಿಸಿದನು. ಕಂಸನು ನವದಂಪತಿಗಳನ್ನು ತನ್ನ ರಥದಲ್ಲಿ ಪಟ್ಟಣಕ್ಕೆ ಕರೆತಂದನು. ಆ ಸಮಯದಲ್ಲಿ  ಆಕಾಶವಾಣಿಯು ಕೇಳಿಸಿತು,  ಅದು ಹೇಳಿತು”ಓ ಕಂಸ!ದೇವಕಿಯ ಅಷ್ಟಮ ಗರ್ಭದಿಂದ ಜನಿಸುವ ಪುತ್ರನಿಂದ ನಿನ್ನ ಮರಣವು ಸಂಭವಿಸುತ್ತದೆ”.ಇದನ್ನು ಕೇಳಿದ ಕಂಸನು ಬಹಳ ವಿಚಲಿತನಾದನು ಮತ್ತು ಕೋಪದಿಂದ ತನ್ನ ಖಡ್ಗದಿಂದ ಇಬ್ಬರನ್ನು ಕೊಲ್ಲಲು ಹೊರಟರು.ಆ ಸಮಯದಲ್ಲಿ ಶ್ರೀವಸುದೇವ ಪ್ರಾರ್ಥಿಸಿದರು “ಓ ಕಂಸ!ನಾವು ನಿನಗೆ ಯಾವುದೇ ಅಹಿತವನ್ನು ಉಂಟುಮಾಡುವುದಿಲ್ಲ ನಮಗೆ ಜನಿಸುವ ಶಿಶುಗಳನ್ನೆಲ್ಲ ನಿನಗೆ ಒಪ್ಪಿಸುತ್ತೇವೆ”. ಈ ಪ್ರಸ್ತಾಪವನ್ನು ಒಪ್ಪಿ ಅವರನ್ನು ಜೀವಂತವಾಗಿ ಉಳಿಸಿದರು.

ತರುವಾಯ ಕಂಸನು ಅವರಿಬ್ಬರನ್ನೂ ಕಾರಾಗೃಹದಲ್ಲಿ ಬಂಧಿಸಿದನು. ತದನಂತರ ದೇವಕಿಯು ತನ್ನ ಮಕ್ಕಳನ್ನು ಒಂದೊಂದಾಗಿ ಜನ್ಮ ನೀಡುತ್ತಿದ್ದಂತೆ ಕಂಸನು ಆ ಮಕ್ಕಳನ್ನು ಕೊಲ್ಲುತ್ತಿದ್ದನು. ಏಳನೇ ಮಗುವಾಗಿ ಭಗವಂತನ ಅಂಶ ಮತ್ತು ಆದಿಶೇಷನ ಪೂರ್ಣಾವತಾರನಾದ ಬಲರಾಮನು ದೇವಕಿಯ ಗರ್ಭವನ್ನು ಪ್ರವೇಶಿಸಿದನು. ಆದರೆ ಭಗವತ್ ಸಂಕಲ್ಪ ದಿಂದ  ಬಲರಾಮನನ್ನು ಶ್ರೀವಸುದೇವನ ಮತ್ತೋರ್ವ ಪತ್ನಿಯಾದ ರೋಹಿಣಯ ಗರ್ಭಕ್ಕೆ ವರ್ಗಾಯಿಸಲಾಯಿತು.ಆ ಸಮಯದಲ್ಲಿ ರೋಹಿಣಯು ಶ್ರೀವಸುದೇವನ ಹತ್ತಿರದ ಬಂಧುವಾದ ನಂದಗೋಪನ ಪಟ್ಟಣವಾದ ಗೋಕುಲದಲ್ಲಿ ವಾಸಿಸುತ್ತಿದ್ದಳು.ಅಲ್ಲಿಯೇ ಬಲರಾಮನಿಗೆ ಜನ್ಮ  ನೀಡಿದಳು.

ಅಷ್ಟಮ ಪುತ್ರನಾಗಿ , ಭಗವಂತನ ಸ್ವತಃ ದೇವಕಿಯ ಗರ್ಭದವನ್ನು ಶ್ರೀಕೃಷ್ಣನಾಗಿ ಪ್ರವೇಶಿಸಿದನು. ಆವಣಿ/ಸಿಂಹಮಾಸದಲ್ಲಿ, ರೋಹಿಣಿ ನಕ್ಷತ್ರ, ಅಷ್ಟಮೀ ತಿಥಿಯಲ್ಲಿ, ಶ್ರೀಕೃಷ್ಣನು ಮಧ್ಯರಾತ್ರಿಯಲ್ಲಿ  ಉತ್ತರದ ಮಥುರೆಯಲ್ಲಿ ಅವತರಿಸಿದನು.ಅವನು ತನ್ನ ಮೂಲ ರೂಪವಾದ ಚತುರ್ಭುಜ ವಿಷ್ಣು ರೂಪದಲ್ಲಿ ಶಂಖ,ಚಕ್ರ ಇತ್ಯಾದಿ ಆಯುಧಗಳನ್ನು ಧರಿಸಿ ಕಾಣಿಸಿಕೊಂಡನು.ಇದನ್ನು ನೋಡಿದ ದೇವಕಿ ಮತ್ತು ವಸುದೇವರು ಆಶ್ಚರ್ಯಚಕಿತರಾದರು ಮತ್ತು ಆನಂದಗೊಂಡರು.ಅದೇ ಸಮಯದಲ್ಲಿ ಅವರು ಶ್ರೀಕೃಷ್ಣನ ಸುರಕ್ಷತೆಯ ಬಗ್ಗೆ ಭಯಗೊಂಡರು.ಅವರು ಭಗವಂತನು ತನ್ನ ಅಲೌಕಿಕ ರೂಪವನ್ನು ಮರೆಮಾಡಿ,  ಮಾನವ ರೂಪದಲ್ಲಿ ಪ್ರಕಟಗೊಳ್ಳಲು ಪ್ರಾರ್ಥಿಸಿದರು ಮತ್ತು ಅವರು ಒತ್ತಾಯಿಸಿದರು.ತರುವಾಯ ವಸುದೇವನ ಸಂಕೋಲೆಯಗಳು ಮುರಿದವು, ಕಾವಲುಗಾರರು ಮೂರ್ಛೆ ಹೋದರು.ಭಗವಂತನ ಕೃಪೆಯಿಂದ ಬಾಗಿಲುಗಳು ತಾವಾಗಿಯೇ ತೆರೆದುಕೊಂಡವು. ಆಗ ಭಗವಂತನು ವಸುದೇವನಿಗೆ ಹೇಳಿದನು “ನನ್ನನ್ನು ಯಮುನಾ ನದಿಯ ಇನ್ನೊಂದು ದಡಲ್ಲಿರುವ ಗೋಕುಲಕ್ಕೆ ಕಳೆದುಕೊಂಡು ಹೋಗಿ ಮತ್ತು ನನ್ನನ್ನು ಯಶೋಧ ನಂದಗೋಪನೊಂದಿಗೆ ಇರಿಸಿ; ಯಶೋಧೆಯು ಜನ್ಮ ನೀಡಿದ ನೋಡಿದ ಹೆಣ್ಣುಮಗುವನ್ನು ಇಲ್ಲಿಗೆ ಕರೆತನ್ನಿ “.

ವಸುದೇವನನು ಭಗವಂತನ ವಾಣಿಯನ್ನು ಅನುಸರಿಸಿ  ಶ್ರೀಕೃಷ್ಣನನ್ನು ತನ್ನ ತಲೆಯ ಮೇಲೆ ಬುಟ್ಟಿಯಲ್ಲಿ ಹೊತ್ತುಕೊಂಡು ಯಮುನಾ ದಡವನ್ನು ತಲುಪಿದನು. ಅವನು ಯಮುನಾದಲ್ಲಿ ದೊಡ್ಡ ಮಳೆ ಮತ್ತು ಪ್ರವಾಹವನ್ನು ವೀಕ್ಷಿಸಿದರು ಮತ್ತು ದಿಗ್ಭ್ರಮೆಗೊಂಡರು. ಭಗವಂತನ ಕೃಪೆಯಿಂದ ಯಮುನೆಯ ಮಧ್ಯದಲ್ಲಿ ಒಂದು ದಾರಿ ಕಾಣಿಸಿತು; ಆದಿಶೇಷನು ಕೃಷ್ಣನಿಗೆ ಕೊಡೆಯಾಗಿ ನಿಂತನು; ಅವನು ಇನ್ನೊಂದು ಬದಿಗೆ ದಾಟಿ ನಂದಗೋಪನ ಅರಮನೆಯನ್ನು ತಲುಪಿದನು. ಆ ಸಮಯದಲ್ಲಿ, ಯಶೋಧ ಯೋಗ ಮಾಯಾ (ದುರ್ಗಾ) ಗೆ ಜನ್ಮ ನೀಡಿದ್ದಳು. ವಸುದೇವರು ಶ್ರೀಕೃಷ್ಣನನ್ನು ಇರಿಸಿದರು ಮತ್ತು ಹೆಣ್ಣು ಮಗುವನ್ನು ತೆಗೆದುಕೊಂಡು ಬೇಗನೆ ಸೆರೆಮನೆಗೆ ಮರಳಿದರು. ಅವನು ಅಲ್ಲಿಗೆ ಪ್ರವೇಶಿಸಿದ ತಕ್ಷಣ, ಎಲ್ಲವೂ ಹಿಂದಿನ ಸ್ಥಿತಿಗೆ ಮರಳಿತು ಮತ್ತು ದೇವಕಿ ಮತ್ತು ವಸುದೇವರು ಇಬ್ಬರೂ ಎಲ್ಲವನ್ನೂ ಮರೆತು ಅಳಲು ಪ್ರಾರಂಭಿಸಿದರು. ಕಾವಲುಗಾರರು ಹೋಗಿ ಎಂಟನೆಯ ಮಗುವಿನ ಜನನದ ಬಗ್ಗೆ ಕಂಸನಿಗೆ ತಿಳಿಸಿದರು. ಕಂಸನು ತಕ್ಷಣ ಅಲ್ಲಿಗೆ ಬಂದು ಮಗುವನ್ನು ಹಿಡಿದು “ನಾನು ಈ ಮಗುವನ್ನು ಕೊಂದು ಅಪಾಯದಿಂದ ಮುಕ್ತನಾಗುತ್ತೇನೆ” ಎಂದು ಹೇಳಿದನು. ಮಗುವು ಆಕಾಶಕ್ಕೆ ಹಾರಿತು, ದುರ್ಗೆಯ ರೂಪವನ್ನು ಮರಳಿ ಪಡೆದುಕೊಂಡಿತು ಮತ್ತು “ನಿನ್ನನ್ನು ಕೊಲ್ಲಲು ಹುಟ್ಟಿದವನು ಸುರಕ್ಷಿತವಾಗಿ ಬದುಕುತ್ತಾನೆ. ಸೂಕ್ತ ಸಮಯದಲ್ಲಿ ನಿನ್ನನ್ನು ಕೊಲ್ಲುತ್ತಾನೆ” ಎಂದು ಹೇಳಿ ಮಾಯವಾದಳು. ಕಂಸನು ಕೋಪಗೊಂಡು ತನ್ನ ಕಾವಲುಗಾರರಿಗೆ ನವಜಾತ ಶಿಶುಗಳನ್ನು ಎಲ್ಲೆಡೆ ಹುಡುಕುವಂತೆ ಆದೇಶಿಸಿದನು.

ಈಗ ಗೋಕುಲದಲ್ಲಿ ಯಶೋಧೆಯು ಸುಂದರವಾದ ಗಂಡು ಮಗುವಿಗೆ ಜನ್ಮ  ನೀಡಿದ ವಾರ್ತೆಯನ್ನು ಕೇಳಿದ ಗೋಕುಲದ ಎಲ್ಲಾ ಗೋಪ-ಗೋಪಿಯರು ಶ್ರೀಕೃಷ್ಣನ ಜನ್ಮ ದಿನವನ್ನು ಸಂಭ್ರಮದಿಂದ ಕೊಂಡಾಡಿದರು.

ಅಡಿಯೇನ್ ಕಸ್ತೂರಿರಂಗನ್ ರಾಮಾನುಜ ದಾಸನ್

ಮೂಲ : https://granthams.koyil.org/2023/08/22/krishna-leela-1-english/

ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org

Leave a Comment