ಶ್ರೀಕೃಷ್ಣ ಲೀಲೆಗಳ ಸಾರಾಂಶ – 2 – ಪೆರಿಯಾಳ್ವಾರ್ ಕೃಷ್ಣಾನುಭವ / ಶ್ರೀಕೃಷ್ಣನ ಜನ್ಮೋತ್ಸವ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ

ಶ್ರೀಕೃಷ್ಣ ಲೀಲೆಗಳ ಸಾರಾಂಶ

<< ಶ್ರೀಕೃಷ್ಣನ ಜನನ

ಪೆರಿಯಾಳ್ವಾರ್, ತಾಯಿ ಯಶೋದೆಯ ಮಾತೃಭಾವದಲ್ಲಿ, ಶ್ರೀಕೃಷ್ಣನ ಲೀಲೆಗಳನ್ನು ಆನಂದಿಸಿದರು ಮತ್ತು ಸುಂದರವಾದ ಪಾಶುರಗಳ ರೂಪದಲ್ಲಿ ನಮಗೆ ಪ್ರಸ್ತುತಪಡಿಸಿದರು. ಅವರ ಪೆರಿಯಾಳ್ವಾರ್ ತಿರುಮೊಳಿಯಲ್ಲಿ ಹಲವು ಪದಿಗಗಳಲ್ಲಿ ಅವರು ಶ್ರೀಕೃಷ್ಣನ ಅನೇಕ ಲೀಲೆಗಳನ್ನು ಆನಂದಿಸಿದರು ಮತ್ತು ಅವುಗಳನ್ನು  ವಿಸ್ತಾರವಾಗಿ ವಿವರಿಸಿದರು.

ಪೆರಿಯಾಳ್ವಾರ್ ತಿರುಮೊಳಿಯಲ್ಲಿ “ವಣ್ಣ ಮಾಡಙ್ಗಳ್ ಶೂಳ್ ತಿರುಕ್ಕೋಟ್ಟಿಯೂರ್ ಕಣ್ಣನ್ ಕೇಶವನ್ ನಮ್ಬಿಪಿರನ್ದನಿಲ್, ಎಣ್ಣೆಯ್ ಶುಣ್ಣಮ್ ಎದಿರೆದಿಲ್ ತೂವಿಡ ಕಣ್ಣನ್ ಮುತ್ತಮ್ ಕಲನ್ದಳರಾಯಿತ್ತೇ” ಎಂದು ಪ್ರಾರಂಭಿಸಿದ್ದಾರೆ (ವರ್ಣರಂಜಿತವಾದ ಕಟ್ಟಡಗಳಿಂದ ಸುತ್ತುವರಿದರುವ ತಿರುಕ್ಕೋಟ್ಟಿಯೂರಿನಲ್ಲಿ, ಕೇಶವನೆಂದು ಕರೆಯಲ್ಪಡುವ ಪೂರ್ಣನಾದ ಭಗವಂತನು ಶ್ರೀಕೃಷ್ಣನಾಗಿ ಅವತರಿಸಿದನು; ಎಣ್ಣೆ ಮತ್ತು ಬಣ್ಣನ ನೀರನ್ನು ಪರಸ್ಪರ ಎಸೆಯಲಾಯಿತು ಮತ್ತು ಕೃಷ್ಣನ ಸ್ಥಳದ ಮುಂಭಾಗದ ಅಂಗಳವು ಕೆಸರಾಯಿತು), ಭಗವಂತನ ಜನ್ಮವನ್ನು ಅಲ್ಲಿನ ಜನರು ಹೀಗೆ ಆಚರಿಸಿದರು ಎಂಬುದನ್ನು ಅವರು ನಮಗೆ ದೃಶ್ಯೀಕರಿಸಲು ಸುಂದರವಾದ ನಿರೂಪಣೆಯಲ್ಲಿ ತೋರಿಸುತ್ತಾರೆ.

  • ತದನಂತರ, ಗೋಪಾ ಗೋಪಿಯರು ತಮ್ಮ  ಮುಖ್ಯಸ್ಥರಾದ ನಂದಗೋಪರು ಮತ್ತು ಅವರ ಪತ್ನಿಯಾದ ಯಶೋದ ಪಿರಾಟ್ಟಿಯ ಮಗವಿನ ಜನನನಿಂದ ಆನಂದತುಂದಿಲರಾಗಿ ಬಣ್ಣನ ಎರಚ್ಚುತ್ತಾ ಸಂಭ್ರಮದಿಂದ ನೃತ್ಯ ಗೀತೆಗಳಿಂದ ಆಚರಿಸಿದರು .
  • ಗೋಪಾಲಕರೆಲ್ಲರೂ ಒಬ್ಬೊಬ್ಬರಾಗಿ ಬಂದು ಶ್ರೀಕೃಷ್ಣನನ್ನು ಕೈಗೆತ್ತಿಕೊಂಡು ಮುದ್ದಾಡಿದರು. ಅವರು ಗಳಿಸಿದ ಆನಂದಕ್ಕೆ ಮಿತಿಯೇ ಇರಲಿಲ್ಲ .
  • ಬ್ರಹ್ಮ, ರುದ್ರ ಇಂದ್ರ ಮತ್ತು ಇತರೆ ದೇವಾನುದೇವತೆಗಳು ಬಂದು ಶ್ರೀಕೃಷ್ಣನಿಗೆ ಅನೇಕ ವಸ್ತುಗಳನ್ನು ಉಡುಗೊರೆಯಾಗಿ ನೀಡಿದರು.
  • ಪೆರಿಯಾಳ್ವಾರರು ಶ್ರೀಕೃಷ್ಣನು ಚಂದ್ರನನ್ನು ನೋಡುವುದು, ತಾಯಿ ಯಶೋದೆಯ ಬೆನ್ನಿನ ಮೇಲೆ ತೂಗನೀಡಿದನ್ನು, ಕೈ ಚಪ್ಪಾಳೆ ತಟ್ಟುವುದು, ಅಂಬೆಗಾಲುಗಳಿಂದ ನಡೆಯುವುದನ್ನು, ಯಶೋದೆ ದೇವಿಯ ಸ್ತನ್ಯಪಾನ ಮಾಡುವುದನ್ನು , ಶ್ರೀಕೃಷ್ಣನ ಕರ್ಣಾವೇಧ ಸಂಸ್ಕಾರ, ಶ್ರೀಕೃಷ್ಣನ ತಿರುಮಂಜನ, ಕೇಶಾಲಂಕಾರ, ಪುಷ್ಪಾಲಂಕಾರ, ಶ್ರೀಕೃಷ್ಣನಿಗೆ ದೃಷ್ಟಿ ತೆಗೆಯುವುದು,  ನವನೀತವನ್ನು ಅಪಹರಿಸಿ ಇದರಿಂದ ಸಿಕ್ಕಿಬೇಳುವುದು,  ದಾನವ ಸಂಹಾರ, ವೇಣುನಾದ ಮಾಡುವುದು, ದನ-ಕರುಗಳನ್ನು  ಮೇಯಿಸುವುದನ್ನು, ಗೋಪಿಕಾ ಸ್ತ್ರೀಯರ ಜೊತೆಗೂಡಿ ರಾಸಕ್ರೀಡೆ ಮುಂತಾದ ಅನೇಕ ಲೀಲೆಗಳನ್ನು ತೋರಿಸಿದ್ದಾರೆ. ಇತರ ಆಳ್ವಾರರು ಸಹ ಶ್ರೀಕೃಷ್ಣನ ಜನನ ಮತ್ತು  ಲೀಲೆಗಳನ್ನು  ಆನಂದಿಸಿದ್ದಾರೆ.

“ಉಣ್ಣುಂ ಶೋರು, ಪರುಹುನೀರ್ ತಿನ್ನುಂ ವೆತ್ತಿಲೈಯುಂ ಎಲ್ಲಾಂ ಕಣ್ಣನ್” ಕೃಷ್ಣನಿಗೆ ಬೆಣ್ಣೆ, ತುಪ್ಪ, ಹಾಲು ಮತ್ತು ಮೊಸರು ತುಂಬಾ ಇಷ್ಟವಿತ್ತು. ನಮ್ಮಾಳ್ವಾರರು, ಶ್ರೀಕೃಷ್ಣ ಬೆಣ್ಣೆಯನ್ನು ಕದ್ದು ಸಿಕ್ಕಿಬಿದ್ದ ಘಟನೆಯನ್ನು ಧ್ಯಾನಿಸಿದರು ಮತ್ತು ಆರು ತಿಂಗಳ ಕಾಲ ಪ್ರಜ್ಞಾಹೀನರಾಗಿದ್ದರು. ನಮ್ಮಾಳ್ವಾರ್, ತಿರುಮಂಗೈ ಆಳ್ವಾರ್ ಮತ್ತು ಕುಲಶೇಖರಾಳ್ವಾರ್ ತಮ್ಮ ಪಾಸುರಗಳಲ್ಲಿ ಕೃಷ್ಣನೊಂದಿಗೆ ಪ್ರಣಯ ಕೋಪವನ್ನು ವಿವರವಾಗಿ ಅನುಭವಿಸಿದ್ದಾರೆ. ಶ್ರೀಮಾನ್ ನಾಥಮುನಿಗಳಿಂದ ಪ್ರಾರಂಭವಾಗುವ ಆಚಾರ್ಯರು ಕೃಷ್ಣಾವತಾರದಲ್ಲಿ ಆಳವಾಗಿ ತಲ್ಲೀನರಾಗಿದ್ದರು.

ಕೃಷ್ಣಾವತಾರವನ್ನು ಆಸ್ವಾದಿಸುವಾಗಲೂ, ಆಳ್ವಾರರು ಮತ್ತು ಆಚಾರ್ಯರು, ಅರ್ಚಾವತಾರಕ್ಕೆ ಸಂಬಂಧಿಸಿದಂತೆ ಅವನನ್ನು ಆನಂದಿಸಿದರು. ವಿಭವ ಅವತಾರವನ್ನು ಆನಂದಿಸಲು ಸಾಧ್ಯವಾಗದವರಿಗೆ ಆರ್ಚಾವತಾರವನ್ನು ಪ್ರತಿನಿಧಿಯಾಗಿ ವೈಭವೀಕರಿಸಲಾಗಿದೆ.

ತರುವಾಯ, ನಾವು ಎಂಪೆರುಮಾನ್‌ನ/ಭಗವಂತನ ಪ್ರತಿಯೊಂದು ಲೀಲೆಯನ್ನು ಮತ್ತು ಆ ಪ್ರತಿಯೊಂದು ಲೀಲೆಗಳಲ್ಲಿ ಸಾರವನ್ನು ನೋಡುತ್ತೇವೆ.

ಅಡಿಯೇನ್ ಕಸ್ತೂರಿರಂಗನ್ ರಾಮಾನುಜ ದಾಸನ್

ಮೂಲ : https://granthams.koyil.org/2023/08/23/krishna-leela-2-tamil/

ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org

Leave a Comment