ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ
ಅಳಗಿಯ ವರದರ್ ನಾಯನಾರ್ ಅಡಿಯಲ್ಲಿ ಆಶ್ರಯ ಪಡೆಯುತ್ತಾರೆ
“ಶ್ರೀ ಸೌಮ್ಯ ಜಾಮಾತೃ ಮುನೀಶ್ವರಸ್ಯ ಪ್ರಸಾದ ಸಂಪತ್ ಪ್ರಥಮಾಸ್ಯಥಾಯ” ಎಂದು ಹೇಳಿರುವಂತೆ (ಶ್ರೀ ಸೌಮ್ಯಾಜಮಾತೃಮುನೀಶ್ವರರ ಕರುಣೆಯನ್ನು ಮೊದಲು ಸ್ವೀಕರಿಸಿದವರು) [ಅವರು ಅತ್ಯುನ್ನತ ಸನ್ಯಾಸ ಆಶ್ರಮವನ್ನು ಸ್ವೀಕರಿಸಿದ ನಂತರ, ಅಳಗಿಯ ಮನವಾಳ ಪೆರುಮಾಳ್ ನಾಯನಾರ್ ಅವರನ್ನು ಸೌಮ್ಯ ಜಾಮಾತೃ ಮುನಿ / ಮನವಾಳ ಮಾಮುನಿ ಎಂದು ಕರೆಯಲಾಯಿತು] , ಅಳಗಿಯ ವರದರ್, ಸೇನೈ ಮುದಲಿಯಾರ್ ಮತ್ತು ಇತರರು, ನಾಯನಾರರ ಮಹಿಮೆಗಳನ್ನು ಕೇಳಿದ ನಂತರ, ನಾಯನಾರರ ದೈವಿಕ ಪಾದಗಳ ಅಡಿಯಲ್ಲಿ ಆಶ್ರಯ ಪಡೆದರು. ಅವರಲ್ಲಿ, ಅಳಗಿಯ ವರದರ್ ಸನ್ಯಾಸಾಶ್ರಮವನ್ನು ಸ್ವೀಕರಿಸಿದರು ಮತ್ತು ಅವರಿಗೆ ರಾಮಾನುಜ ಜೀಯರ್ ಎಂಬ ಹೆಸರನ್ನು ನೀಡಲಾಯಿತು [ನಂತರದ ದಿನಗಳಲ್ಲಿ, ಅವರನ್ನು ಒಂಡ್ರಾನ ಶ್ರೀ ವಾನಮಾಮಲೈ ಜೀಯರ್ ಮತ್ತು ಪೊನ್ನಡಿಕ್ಕಾಲ್ ಜೀಯರ್ ಎಂದು ಕರೆಯಲಾಯಿತು]. ಅವರು ಪೆರಿಯ ತಿರುವಂದಾದಿ 31ನೇ ಪಾಸುರದಲ್ಲಿ ಹೇಳಿದಹಾಗೆ “ನಿಳಲುಮ್ ಅಡಿತಾರುಮ್ ಆನೋಮ್” (ನಾವು ಅವರ ನೆರಳು ಮತ್ತು ಪಾದರಕ್ಷೆಗಳಾದೇವು ), ಪ್ರತಿದಿನವು ನಿರಂತರವಾಗಿ ನಾಯನಾರರ ಪಾದರೇಖೆಗಳನ್ನು (ಪಾದಗಳ ಮೇಲಿನ ಗೆರೆಗಳು) ಪೂಜಿಸುವೆವು.
ನಾಯನಾರ್ ಕೃಪೆಯಿಂದ ಶ್ರೀರಂಗವನ್ನು ತಲುಪುತ್ತಾರೆ
ಅವರು ಹೀಗೆ ತಮ್ಮ ನಂಬಿಕಸ್ಥ ಶಿಷ್ಯರೊಂದಿಗೆ ಇರುವಾಗ ನಾಯನಾರ್ ಅವರು “ನಮ್ಮ ಜೀವನಾಡಿಯಾಗಿರುವ ನಮ್ ಪೆರುಮಾಳ್‌ನನ್ನು ನಾವು ನಿರಂತರವಾಗಿ ಪೂಜಿಸುತ್ತಿರಬೇಕು, ಅವರನ್ನು ಸ್ತುತಿಸುತ್ತಿರಬೇಕು, ದೇಹವು ಕೆಳಗೆ ಬೀಳುವವರೆಗೆ ಶ್ರೀರಂಗದಲ್ಲಿ ನೆಲೆಸಬೇಕು; ಇದೊಂದೇ ನಮಗೆ ಸೂಕ್ತವಲ್ಲವೇ?” ಎಂದು ಹೇಳಿದರು. ತಕ್ಷಣವೇ ಅವರು ಆಳ್ವಾರರ ಸನ್ನಿಧಿಯನ್ನು ತಲುಪಿ, ಅವರ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡಿ, “ನೀವು ಅವರನ್ನು ಹೊಗಳಿದ್ದರಿಂದ [ತಿರುವಾಯ್ಮೋಳಿ 10.7.5] “ನಣ್ಣಾವಸುರರ್ ನಲಿವೆಯ್ದ ನಲ್ಲ ಅಮರರ್ ಪೊಲಿವೆಯ್ದ ಎನ್ನಾದನಗಳೆನ್ನುಮ್ ನನ್ಮುನಿವರ್ ಇನ್ಬಮ್ ತಲೈ ಸಿರಪ್ಪ ಪಣ್ಣಾರ್”.(ಪ್ರತಿಕೂಲವಾದ ರಾಕ್ಷಸ ಜನರು ಸಂಹಾರವಾಗಲು, ಅನುಕೂಲಕರವಾದ ಸ್ವರ್ಗೀಯ ಜನರು ಸಂತೋಷವಾಗಿರಲು ಮತ್ತು ಸರ್ವೇಶ್ವರನಿಗೆ ಹೆಚ್ಚು ಮಂಗಳಕರ ಗುಣಗಳಿಗಾಗಿ ಪ್ರಾರ್ಥಿಸುವ ಋಷಿಗಳು, ರಾಗದೊಂದಿಗೆ ಹಾಡುತ್ತಾರೆ …) . ನಂಪೆರುಮಾಳ್ ಅವರು ಹಿಂದೆ [ಆಕ್ರಮಣಕ್ಕೆ ಮೊದಲು] ಹೊಂದಿದ್ದ ಎಲ್ಲಾ ಮಹತ್ತರವಾದ ವಸ್ತುಗಳನ್ನು ಈಗ ನೋಡುತ್ತಿದ್ದಾರೆ. ಅಡಿಯೇನ್ ಪೆರುಮಾಳ್ ಅವರನ್ನು ಪೂಜಿಸಲು ಬಯಸುತ್ತೇನೆ. ಅಡಿಯೇನ್ ದೇವರೀರಿನ (ನಿಮ್ಮ ಶ್ರೇಷ್ಠತೆ’) ಅನುಮೋದನೆಯನ್ನು ಬಯಸುತ್ತೇನೆ”; ನಮ್ಮಾಳ್ವಾರ್ ಅವರ ಮನವಿಯನ್ನು ಪುರಸ್ಕರಿಸಿದರು.
ತರುವಾಯ, ಶ್ಲೋಕದಲ್ಲಿ ಹೇಳಿರುವಂತೆ:
ತಥಾ ಗತಿಪಯೈರ್ದಿವಸೈ ಸಗುರುರ್ ದಿವ್ಯದರ್ಶನ:
ಆಜಗಾಮ ಪರಂಧಾಮ ಶ್ರೀರಂಗಂ ಮಂಗಳಂ ಭುವ:
(ಕೆಲವು ದಿನಗಳ ನಂತರ, ದಿವ್ಯ ರೂಪವನ್ನು ಹೊಂದಿದ್ದ ನಾಯನಾರ್, ಪರಮ ದೈವಿಕ ನೆಲೆ ಮತ್ತು ಭೂಮಿಗೆ ಮಂಗಳಕರವಾದ ಸ್ಥಳವಾದ ಶ್ರೀರಂಗವನ್ನು ತಲುಪಿದರು), ನಾಯನಾರ್ ತಮ್ಮ ಶಿಷ್ಯರೊಂದಿಗೆ ಶ್ರೀರಂಗಕ್ಕೆ ತೆರಳಿದರು. ದಾರಿಯಲ್ಲಿ, ಶ್ರೀವಿಲ್ಲಿಪುತ್ತೂರ್‌ನಲ್ಲಿರುವ ಎಂಪೆರುಮಾನ್ ಅವರ ದಿವ್ಯ ಪಾದಗಳನ್ನು ನೋಡುವ ಸಲುವಾಗಿ, “ವಿಲ್ಲಿಪುತ್ತೂರ್ ಉರೈವನ್ ಪೊನ್ನಡಿ ಕಾಣ್ಬದೋರ್ ಆಸೈನಾಲೇ ” (ಶ್ರೀವಿಲ್ಲಿಪುತ್ತೂರಿನಲ್ಲಿ ನೆಲೆಸಿರುವವರ ದಿವ್ಯವಾದ ಚಿನ್ನದಂತಹ ಪಾದಗಳನ್ನು ಪೂಜಿಸುವ ಬಯಕೆಯಿಂದ) ಅವರು ಶ್ರೀವಿಲ್ಲಿಪುತ್ತೂರ್, ತಲುಪಿ ವಡಪೆರುಂಕೋಯಿಲ್ ಉಡೈಯಾನ್ (ಆಲದ ಎಲೆಯ ಮೇಲೆ ಮಲಗಿರುವ ದೊಡ್ಡ ದೇವಾಲಯವನ್ನು ಹೊಂದಿರುವವನು) ಮತ್ತು ಪೆರಿಯಾಳ್ವಾರರನ್ನು ನಮಸ್ಕರಿಸಿದರು. ನಂತರ, ಅವರು ಅನ್ನವಯಲ್ ಪುದುವೈ ಆಂಡಾಳ್ ಅನ್ನು (ಶ್ರೀವಿಲ್ಲಿಪುತ್ತೂರಿನಲ್ಲಿ ವಾಸಿಸುವ ಆಂಡಾಳ್, ಇದು ಹಂಸಗಳನ್ನು ಹೊಂದಿರುವ ಕ್ಷೇತ್ರಗಳಿಂದ ಸುತ್ತುವರೆದಿದೆ) ಪೂಜಿಸಿದರು, ಆಕೆಯ ತನಿಯನ್ ಹೇಳಿ ಅವಳನ್ನು ಸ್ತುತಿಸಿದರು. ನೀಳಾತುಂಗ ಸ್ತನಗಿರಿ…. ಗೋದಾ ತಸ್ಯೈ ನಮ ಇದಮಿದಂ ಭೂಯ:
(ನಪ್ಪಿನ್ನೈ ಪಿರಾಟ್ಟಿಯ (ನೀಲಾ ದೇವಿ) ಎದೆಯ ಮೇಲೆ ಒರಗಿರುವ ಕಣ್ಣನ್ (ಕೃಷ್ಣ) ಮೇಲೆ ಹಾಡಿದ ಆಂಡಾಳ್ ಅವರಿಗೆ ಈ ನಮಸ್ಕಾರವು ಶಾಶ್ವತವಾಗಿ ಉಳಿಯಲಿ. ಶ್ಲೋಕದಲ್ಲಿ ಹೇಳಿರುವಂತೆ ಆಂಡಾಳ್ ಪೂಜೆಯ ನಂತರ
ದೇವಸ್ಯ ಮಹಿಷೀಮ್ ದಿವ್ಯಾಮ್ ಆದೌ ಗೋದಾಮುಪಾಸತತ್
ಯನ್ಮೌಳಿಮಾಲಿಕಾಮೇವ ಸ್ವೀಕರೋತಿ ಸ್ವಯಂ ಪ್ರಭು :
(ಮೊದಲು ಅವರು ಗೋದಾ ದೇವಿಯನ್ನು ಆರಾಧಿಸಿದರು (ಆಂಡಾಳ್), ಅವರು ಅಳಗಿಯ ಮನವಾಳನ ದೈವಿಕ ಪತ್ನಿ, ಮತ್ತು ಅವಳ ದಿವ್ಯವಾದ ಕೇಶರಾಶಿಯನ್ನು ಅಲಂಕರಿಸಿದ ಮಾಲೆಯನ್ನು ಅಳಗಿಯ ಮನವಾಳನು ಸಂತೋಷದಿಂದ ಧರಿಸುತ್ತಾನೆ). ಅವರು ಅಲ್ಲಿಂದ ಹೊರಟು ತಿರುಮಾಲಿರುಂಜೋಲೈಗೆ ಹೋಗಿ ಆರಾಧಿಸಲು ಇಚ್ಚಿಸಿದರು. “ನೆರಿಪಡವದುವೇ ನಿನೈವದು ನಲಮೇ” ಎಂದು ಅರುಳಿಚ್ಛೆಯಲ್ ನಲ್ಲಿ ಹೇಳಿರುವಂತೆ (ತಿರುಮಾಲಿರುಂಜೋಲೈಗೆ ಹೋಗಲು ನೆನೆಯುವುದೇ ಉತ್ತಮವಾದ ಚಿಂತನೆ) ಆ ಸ್ಥಳವನ್ನು ತಲುಪಿ ಅಳಗರ್ (ಸರ್ವೇಶ್ವರನ ಉತ್ಸವ ಮೂರ್ತಿಯ ಹೆಸರು) ದೇವಾಲಯವನ್ನು ಪ್ರವೇಶಿಸಿದರು, ಎಂಪೆರುಮಾನ್ ಅವರ ದಿವ್ಯ ಪಾದಗಳನ್ನು ಪೂಜಿಸಿದರು, ಅಲ್ಲಿ ಅರ್ಪಿಸಿದ ಪವಿತ್ರ ತೀರ್ಥ ಸೇರಿದಂತೆ ದೈವಿಕ ಪ್ರಸಾದಗಳನ್ನು ತೆಗೆದುಕೊಂಡು ಸುಂದರಬಾಹುಸ್ತವಂನಲ್ಲಿ ಕೂರತ್ ಆಳ್ವಾರರ ಶ್ಲೋಕವನ್ನು ನೆನಪಿಸಿಕೊಂಡರು.
ವಿಗ್ಯಾಪನಂ ವನಗಿರೀಶ್ವರ ! ಸತ್ಯರೂಪಮ್ ಅಂಗೀಕುರುಷ್ವ ಕರುಣಾರ್ಣವ ಮಾಮಕೀನಾಮ್
ಶ್ರೀರಂಗಧಾಮನಿ ಯಥಾಪುರಮೇಶಸೋಹಮ್ ರಾಮಾನುಜಾರ್ಯವಶಕ : ಪರಿವರ್ತಿಶೀಯ
(ಓಹ್ ಕರುಣೆಯ ಸಾಗರದಂತಿರುವ ತಿರುಮಾಲಿರುಂಜೋಲೈ ಸುಂದರ ಪ್ರಭುವೇ! ನಿಮ್ಮ ದಿವ್ಯ ಮನಸ್ಸಿನಿಂದ ನೀವು ನನ್ನ ಪ್ರಾಮಾಣಿಕ ಮನವಿಯನ್ನು ದಯಪಾಲಿಸಬೇಕು. ನೀವು ಕರುಣೆಯ ಧಾರೆಯನ್ನು ಸುರಿಸಬೇಕು, ಇದರಿಂದ ಅಡಿಯೇನ್ ಎಂಪೆರುಮಾನಾರ್ ಅವರ ದಿವ್ಯ ಪಾದಗಳ ಕೆಳಗೆ ಹಿಂದಿನ ಕಾಲದಂತೆಯೇ ಶ್ರೀರಂಗಂ ದೇವಸ್ಥಾನದಲ್ಲಿ ಬದುಕಲು ಸಾಧ್ಯವಾಗುತ್ತದೆ ). ನಂತರ ಅವರು ತಿರುವರಂಗತ್ತು ಎಮ್ಮಾನ್ (ಶ್ರೀರಂಗಂನಲ್ಲಿರುವ ನನ್ನ ಪ್ರಭು) ಸೇವೆಯನ್ನು ಮಾಡುವ ಸಲುವಾಗಿ ಶ್ರೀರಂಗಕ್ಕೆ ಉತ್ಸಾಹದಿಂದ ತೆರಳಿದರು.
ಅನುವಾದ – ಅಡಿಯೇನ್ ಸುಭದ್ರಾ ರಾಮಾನುಜ ದಾಸಿ
ಪುರಾವೆ ಓದುವಿಕೆ -ಅಡಿಯೇನ್ ಕೊದೈ ರಾಮಾನುಜ ದಾಸಿ
ಮೂಲ : https://granthams.koyil.org/2021/08/13/yathindhra-pravana-prabhavam-29-english/
ಆರ್ಕೈವ್ ಮಾಡಲಾಗಿದೆ – https://granthams.koyil.org
ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org