ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ
ಸೂತ್ರಮ್ – 36
ಪರಿಚಯ: ಎಂಪೆರುಮಾನರು ರಕ್ಷಕರಾಗಿರುವಾಗ, ರಕ್ಷಕತ್ವವೆಂದರೇನು? ಎಂದು ಲೋಕಾಚಾರ್ಯರು ಕೇಳುತ್ತಾರೆ ಮತ್ತು ಅದನ್ನು ಸೂತ್ರ 36ರಲ್ಲಿ ವಿವರಿಸುತ್ತಾರೆ:
ರಕ್ಷಿಕ್ಕೈಯಾವದು ವಿರೋಧಿಯೈಪ್ ಪೋಕ್ಕುಗೈಯುಮ್ ಅಪೇಕ್ಷಿತ್ತದೈಕ್ ಕೊಡುಕ್ಕೈಯುಮ್
ಸರಳ ಅರ್ಥ: ರಕ್ಷಕತ್ವವೆಂಬುದು ವಿರೋಧಿಗಳನ್ನು ಪರಿಹರಿಸುವುದು ಮತ್ತು ಅಪೇಕ್ಷಿಸುವುದನ್ನು ಕೊಡುವುದು.
ವ್ಯಾಖ್ಯಾನಮ್: ರಕ್ಷಣೆಯು ಎರಡು ಪ್ರಕಾರದ್ದಾಗಿದೆ. ಕೆಟ್ಟದ್ದನ್ನು ನಿವಾರಿಸುವುದು ಮತ್ತು ಒಳ್ಳೆಯದನ್ನು ದಯಪಾಲಿಸುವುದು. ಆದ್ದರಿಂದ ಈಶ್ವರನ ರಕ್ಷಕತ್ವವೆಂದರೆ ಚೇತನಗಳಿಗೆ ಕಷ್ಟಗಳನ್ನು ಕೊಡುವ ವೈರಿಗಳನ್ನು ನಿವಾರಿಸುವುದು ಮತ್ತು ಆನಂದದ ಅನುಭವವನ್ನು ಕೊಡುವುದು.
ಸೂತ್ರಮ್ – 37
ಪರಿಚಯ: ಅವನು ಯಾವ ರೀತಿಯ ವೈರಿಗಳನ್ನು ಪರಿಹರಿಸುತ್ತಾನೆ? ಮತ್ತು ಅವರ ಯಾವ ಆಸೆಗಳನ್ನು ಪೂರೈಸುತ್ತಾನೆ? ಲೋಕಾಚಾರ್ಯರು ಇದು ಚೇತನಗಳ ಅವಸ್ಥೆಗೆ ಅನುಗುಣವಾಗಿರುತ್ತದೆಯೆಂದು 37ನೆಯ ಸೂತ್ರದಲ್ಲಿ ವಿವರಿಸುತ್ತಾರೆ.
ಇವೈ ಇರಣ್ಡುಮ್ ಚೇತನರ್ ನಿನ್ಱ ನಿನ್ಱ ಅಳವುಕ್ಕು ಈಡಾಯ್ ಇರುಕ್ಕುಮ್.
ಸರಳ ಅರ್ಥ: ಈ ಎರಡು, ವೈರಿಗಳು ಮತ್ತು ಅಪೇಕ್ಷಿತವದದ್ದು, ಪ್ರತಿಯೊಂದು ಚೇತನದ ಈಗಿನ ಸ್ಥಿತಿಯನ್ನು ಅವಲಂಬಿಸಿರುತ್ತದೆ.
ವ್ಯಾಖ್ಯಾನಮ್: ಅದೇನೆಂದರೆ, ಈ ಎರಡೂ (ವೈರಿ ಮತ್ತು ಹಿತವು) ಆ ಚೇತನದ ಆಧ್ಯಾತ್ಮಿಕ ಸ್ಥಿತಿಯ ಮೇರೆಗೆ ಇರುತ್ತದೆ.
ಸೂತ್ರಮ್ – 38:
ಪರಿಚಯ: ಲೋಕಾಚಾರ್ಯರು ಇದನ್ನು 38ನೆಯ ಸೂತ್ರದಲ್ಲಿ ಅತ್ಯಂತ ಕರುಣೆಯಿಂದ ಸ್ಪಷ್ಟಪಡಿಸುತ್ತಾರೆ.
ಸಂಸಾರಿಗಳುಕ್ಕು ವಿರೋಧಿ ಶತೃಪೀಡಾಧಿಗಳ್, ಅಪೇಕ್ಷಿತಮ್ ಅನ್ನಪಾನಾಧಿಗಳ್; ಮುಮುಕ್ಷುಕ್ಕಳುಕ್ಕು ವಿರೋಧಿ ಸಂಸಾರ ಸಂಬಂಧಮ್, ಅಪೇಕ್ಷಿತಮ್ ಪರಮಪದ ಪ್ರಾಪ್ತಿ; ಮುಕ್ತರ್ಕ್ಕುಮ್ ನಿತ್ಯರ್ಕ್ಕುಮ್ ವಿರೋಧಿ ಕೈಂಕರ್ಯ ಹಾನಿ, ಅಪೇಕ್ಷಿತಮ್ ಕೈಂಕರ್ಯ ವೃದ್ಧಿ.
ಸರಳ ಅರ್ಥ: ಸಂಸಾರಿಗಳಿಗೆ ವಿರೋಧಿಗಳು ವೈರಿಗಳು ಮತ್ತು ರೋಗಗಳು, ವೃದ್ಧಾಪ್ಯ ಮತ್ತು ಮರಣ. ಅಪೇಕ್ಷಿತವಾದದ್ದು ಆಹಾರ ಮತ್ತು ಪಾನೀಯಗಳು. ಮುಮುಕ್ಷುಗಳಿಗೆ (ಈ ಸಂಸಾರದಿಂದ ಮುಕ್ತಿಯನ್ನು ಬಯಸುವವರಿಗೆ) ವಿರೋಧಿಗಳು ಸಂಸಾರಿಕ ಸಂಬಂಧಗಳು, ಅಪೇಕ್ಷಿತವಾದದ್ದು ಪರಮಪದವನ್ನು ಸೇರುವುದು. ಮುಕ್ತರಿಗೆ ಮತ್ತು ನಿತ್ಯರಿಗೆ ಅನಪೇಕ್ಷಿತವು ಭಗವಂತನಿಗೆ ಸೇವೆಯಲ್ಲಿ ಅಡಚಣೆಗಳು ಮತ್ತು ಅಪೇಕ್ಷಿತವು ಆ ಕೈಂಕರ್ಯವು ಹಲವು ಮಡ ಹೆಚ್ಚುವುದು.
ವ್ಯಾಖ್ಯಾನಮ್: ಅದೇನೆಂದರೆ ಸಂಸಾರಿಗಳಿಗೆ ತಮ್ಮ ದೇಹವೇ ಆತ್ಮ ಮತ್ತು ಇಂದ್ರಿಯಗಳ ಆನಂದವೇ ಎಲ್ಲವೂ ಮತ್ತು ಅದೇ ಅಂತ್ಯವೂ ಆಗಿದೆ ಎಂದು ಊಹಿಸುತ್ತಾರೆ. ವಿರೋಧಿಗಳು ರೋಗಗಳು, ಶತೃಗಳು ಮತ್ತು ಅಪೇಕ್ಷಿತವಾದದ್ದು ಅನ್ನ ಪಾನೆಂದ್ರಿಯಗಳು ಎಂದು ತಿಳಿದುಕೊಂಡಿರುತ್ತಾರೆ. ಅಡಚಣೆಗಳು ರೋಗಗಳು, ವೃದ್ಧಾಪ್ಯ, ಕಷ್ಟಗಳನ್ನು ತಾಪತ್ರಯಗಳೆಂದು ಪರಿಗಣಿಸುತ್ತಾರೆ. ಅನ್ನ ಆಹಾರಾದಿಗಳೆಂದರೆ ಅವು ಆಭರಣಗಳು ಮತ್ತು ವಸ್ತ್ರಗಳನ್ನೂ ಒಳಗೊಂಡಿದೆ.
ಮುಮುಕ್ಷುಗಳಿಗೆ ಈ ಲೌಕಿಕ ಜೀವನವು ಜಿಗುಪ್ಸೆಯನ್ನು ತರಿಸುತ್ತದೆ. ಅವರು ನಿತ್ಯವಾದ ಪರಮಪದವನ್ನು ಹೊಂದಲು ಹಂಬಲಿಸುತ್ತಾರೆ. ಅಡಚಣೆಗಳು ಅಜ್ಞಾನ ಮತ್ತು ಪಾಪ ಕರ್ಮಗಳಾಗಿವೆ. ಅಪೇಕ್ಷಿತವಾದದ್ದು ಪರಮಪದವಾಗಿದ್ದು ಅದರಿಂದ ದಿವ್ಯ ಅನುಭೂತಿಯನ್ನು ಪಡೆಯಲು ಆಸಕ್ತರಾಗಿರುತ್ತಾರೆ.
ಮುಕ್ತರಿಗೆ (ಒಂದು ಕಾಲದಲ್ಲಿ ಸಂಸಾರಿಗಳಾಗಿ, ನಂತರದಲ್ಲಿ ಮುಕ್ತಿ ಪಡೆದವರು) ಮತ್ತು ನಿತ್ಯರಿಗೆ (ಸದಾಕಾಲ ಪರಮಪದದಲ್ಲಿಯೇ ವಾಸಿಸುವವರಿಗೆ) ಬೇಡವಾದದ್ದು ಅಡೆತಡೆಯಿಲ್ಲದೆ ಸ್ವಾಮಿಯನ್ನು ಸೇವೆ ಮಾಡುವಾಗ ಬರುವ ಅಡಚಣೆಗಳು. ಅಪೇಕ್ಸಿತವದದ್ದು ಅಂತಹ ಸೇವೆಯು ಬಹು ಪಟ್ಟು ವೃದ್ಧಿಯಾಗುವುದು.
ಆದ್ದರಿಂದ ಲೋಕಾಚಾರ್ಯರು ಈಶ್ವರನು ಅವರವರಿಗೆ ತಕ್ಕ ಹಾಗೆ ಅಡಚಣೆಗಳನ್ನು ನಿವಾರಿಸಿ, ಅವರಿಗೆ ಬೇಕಾದುದ್ದನ್ನು ಪ್ರಸಾದಿಸಲಿ ಏಕೆಂದರೆ ಅವನೇ ಎಲ್ಲರ ರಕ್ಷಕನಾಗಿರುತ್ತಾನೆ (ಸರ್ವ ರಕ್ಷಕ).
ಸೂತ್ರಮ್ – 39
ಪರಿಚಯ: ಈಶ್ವರನೇ ನಮ್ಮೆಲ್ಲರ ರಕ್ಷಕನೇ? ಮಾತಾಪಿತೃಗಳು, ಪ್ರಕೃತಿ, ಇತರ ದೇವತೆಗಳು ರಕ್ಷಿಸುವುದಿಲ್ಲವೇ? ಲೋಕಾಚಾರ್ಯರು ಈಶ್ವರನನ್ನು ಬಿಟ್ಟರೆ ಯಾರೂ ರಕ್ಷಕರಲ್ಲ ಎಂಬುದನ್ನು ಖಚಿತ ಪಡಿಸುತ್ತಾರೆ. ಇದನ್ನು ಪ್ರಪನ್ನ ಪರಿತ್ರಾಣಮ್ ಎಂಬ ಗ್ರಂಥದಲ್ಲಿ ಸೂತ್ರ 39ರ ಮೂಲಕ ವಿವರಿಸುತ್ತಾರೆ.:
ಈಶ್ವರ ಒೞಿಂದವರ್ಗಳ್ ರಕ್ಷಕರಲ್ಲರ್ ಎನ್ನುಮಿದಮ್ ಪ್ರಪನ್ನ ಪರಿತ್ರಾಣತ್ತಿಲೇ ಸೊನ್ನೋಮ್.
ಸರಳ ಅರ್ಥ: ಪ್ರಪನ್ನ ಪರಿತ್ರಾಣ ಎಂಬ ಗ್ರಂಥದಲ್ಲಿ ಈಶ್ವರನನ್ನು ಬಿಟ್ಟರೆ ಯಾರೂ ರಕ್ಷಕರಲ್ಲ ಎಂಬುದನ್ನು ವಿವರಿಸಲಾಗಿದೆ.
ವ್ಯಖ್ಯನಮ್: ಅದೇನೆಂದರೆ, ಪ್ರಪನ್ನ ಪರಿತ್ರಾಣಮ್ ಎಂಬ ಗ್ರಂಥದಲ್ಲಿಯೇ ( ಪಿಳ್ಳೈ ಲೋಕಾಚಾರ್ಯರು ಬರೆದಿರುವ) ಈಶ್ವರನೊಬ್ಬನೇ ನಮಗೆ ಪ್ರತಿಯಾಗಿ ಏನನ್ನೂ ಬಯಸದ ಏಕೈಕ ರಕ್ಷಕನೆಂದು ಬಹಳ ವಿವರವಾಗಿ ಮತ್ತು ತಂದೆ ತಾಯಿಯರು ಮತ್ತು ಬಂಧುಗಳು ನಮಗೆ ಒಂದು ಕಾರಣಕ್ಕಾಗಿ ಸಂಬಂಧವನ್ನು ಹೊಂದುತ್ತಾರೆ. ಕರ್ಮಗಳು ಮತ್ತು ಇತರ ದೇವತೆಗಳು ಅವರ ಸಂಕುಚಿತವಾದ ಶಕ್ತಿಯಿಂದ ನಮ್ಮನ್ನು ರಕ್ಷಿಸಲಾರರು ಎಂದು ವಿವರಿಸಿದ್ದಾರೆ.
ಸೂತ್ರಮ್ – 40:
ಪರಿಚಯ: ನಂತರ, ಲೋಕಾಚಾರ್ಯರು ಸ್ವಾಮಿಯ ಗುಣಗಳನ್ನು ವಿಸ್ತರಿಸುತ್ತಾ, ದಿವ್ಯ ತಾಯಿ ಮಹಾಲಕ್ಷ್ಮಿಯ ದಿವ್ಯ ಪತಿಯಾದ ಸ್ವಾಮಿಯ ಗುಣಗಳನ್ನು ಮಂತ್ರದ ಆಳವಾದ ಅರ್ಥದಿಂದ ಸೂತ್ರ 40ರಲ್ಲಿ ಹೇಳುತ್ತಾರೆ:
ರಕ್ಷಿಕ್ಕುಮ್ ಪೋದು ಪಿರಾಟ್ಟಿ ಸನ್ನಿಧಿ ವೇಣ್ಡುಗೈಯಾಲೇ ಇದಿಲೇ ಶ್ರೀಸಂಬಂಧಮುಮ್ ಅನುಸಂಧೇಯಮ್.
ಸರಳ ಅರ್ಥ: ಈ ಮಂತ್ರದಲ್ಲಿ ಶ್ರೀ (ಮಹಾಲಕ್ಷ್ಮಿ ಪಿರಾಟ್ಟಿಯೊಂದಿಗಿನ) ಸಂಬಂಧವನ್ನೂ ನೆನಪಿಸಿಕೊಳ್ಳಲಾಗುತ್ತದೆ ಏಕೆಂದರೆ ಅವಳ ಸಾನ್ನಿಧ್ಯವು ಯಾರನ್ನಾದರೂ ರಕ್ಷಿಸಬೇಕಾದರೆ ಅತ್ಯಂತ ಅವಶ್ಯಕ.
ವ್ಯಾಖ್ಯಾನಮ್: ಅದೇನೆಂದರೆ, ಲಕ್ಷ್ಮಿ ತಂತ್ರಮ್ ನ 28-14ರಲ್ಲಿ ಉಲ್ಲೇಖಿಸಿರುವಂತೆ:
ಲಕ್ಷ್ಮ್ಯಾ ಸಹ ಹೃಶೀಕೇಶೋ ದೇವ್ಯಾ ಕಾರುಣ್ಯ ರೂಪಯಾ ।
ರಕ್ಷಕಸ್ ಸರ್ವ ಸಿದ್ಧಾಂತೇ ವೇದಾಂತೇಪಿ ಚ ಗೀಯತೇ ॥
(ಹೃಷೀಕೇಶಾ, ಕರುಣೆಯ ಪ್ರತಿರೂಪವಾಗಿರುವ ಮಹಾಲಕ್ಷ್ಮಿಯೊಂದಿಗೆ ನೀನು ಒಬ್ಬನೇ ರಕ್ಷಕನೆಂದು ಕರೆಯಲ್ಪಟ್ಟವನು. ಎಲ್ಲಾ ಸಿದ್ಧಾಂತಗಳಲ್ಲಿಯೂ, ವೇದಾಂತಗಳಲ್ಲಿಯೂ (ಮಂತ್ರಗಳಲ್ಲಿ, ಆಗಮಗಳಲ್ಲಿ ಮತ್ತು ತಂತ್ರಗಳಲ್ಲಿಯೂ ಇದನ್ನು ಪಾಂಚರಾತ್ರದಲ್ಲಿ ಉಲ್ಲೇಖಿಸಲಾಗಿದೆ.)
ಅವಳನ್ನೂ ಇದರಲ್ಲಿ ನೆನಪಿಸಿಕೊಳ್ಳಲಾಗುತ್ತದೆ ಏಕೆಂದರೆ ರಕ್ಷಿಸುವ ಸಮಯದಲ್ಲಿ ಅವನು ಜೀವಿಗಳ ನ್ಯೂನ್ಯತೆಗಳಿಂದ(ಪಾಪಗಳಿಂದ) ಅತ್ಯಂತ ಕೋಪಗೊಂಡು ಅಥವಾ ಅವನ ಶ್ರೇಷ್ಠವಾದ ಸರ್ವ ಸ್ವತಂತ್ರದಿಂದ ಎಲ್ಲಾ ಆತ್ಮಗಳನ್ನು ನಿರ್ಲಕ್ಷಿಸಿದರೆ, ಅಂತಹ ಸನ್ನಿವೇಶದಲ್ಲಿ ಅವಳು ಪುರುಷಕಾರದ ಅಧಿಕಾರದಿಂದ ಅವನ ದಯೆಗೆ ಪಾತ್ರರಾಗುವಂತೆ ಮಾಡುವುದು ಅವಳ ಕೊನೆಯಿಲ್ಲದ ಕರುಣೆಯಿಂದಲೇ. ಅವಳ ಉಪಸ್ಥಿತಿಯು ಅತ್ಯಂತ ಅನಿವಾರ್ಯವಾಗಿದ್ದು ಪೆರುಮಾಳನ್ನು ಒಲಿಯುವಂತೆ ಮಾಡುವುದಕ್ಕಾಗಿ ಅವಳನ್ನೂ ಅಕಾರದಲ್ಲಿ ಸ್ಮರಿಸಲಾಗಿದೆ.
ಲಕ್ಷ್ಮಿಯ ಬದಲು ಲೋಕಾಚಾರ್ಯರು ಶ್ರೀ ಎಂಬ ಶಬ್ದದ ಉಪಯೋಗವನ್ನು ಮಾಡುತ್ತಾರೆ, ಏಕೆಂದರೆ:
ಶ್ರಯತ ಇತಿ ಶ್ರೀಃ
(ಅವನ ಕೆಳಗೆ ನಿರಂತರ ಆಶ್ರಯ ಪಡೆಯುವುದಕ್ಕಾಗಿ)
ಶ್ರಿಯತ ಇತಿ ಶ್ರೀಃ
(ಎಲ್ಲಾ ಜೀವಿಗಳಿಗೂ ನಿರಂತರವಾಗಿ ಆಶ್ರಯವಾಗಿರುವುದಕ್ಕಾಗಿ)
ಸೂತ್ರಮ್ – 41
ಪರಿಚಯ: ಲೋಕಾಚಾರ್ಯರು ಲಕ್ಷ್ಮಿಯು ನಾರಾಯಣನ ಜೊತೆಗೆ ಪೂಜ್ಯನೀಯವಾದ ಅಧಿಕಾರವುಳ್ಳವಳು ಎಂದು ಈ ಸೂತ್ರದಿಂದ ಸಿದ್ಧಪಡಿಸುತ್ತಾರೆ:
ಅತ್ರ ಬಗವತ್ ಸೇನಾಪದಿಮಿಶ್ರರ್ ವಾಕ್ಯಮ್: “ಅವನ್ ಮಾರ್ಬು ವಿಟ್ಟು ಪಿರಿಯಿಲ್ ಇವ್ವಕ್ಷರಮ್ ವಿಟ್ಟು ಪಿರಿವದು”
ಸರಳ ಅರ್ಥ: ಇಲ್ಲಿ ನಾವು ಶ್ರೀ ಭಗವತ್ ಮಿಶ್ರರ ಹೇಳಿಕೆಯನ್ನು ಸ್ಮರಿಸಬೇಕು :”ಅಕಾರದ ಜೊತೆಗೆ ಇರುವ ಸಂಬಂಧವು ಯಾವಾಗ ಕೊನೆಗೊಳ್ಳುತ್ತದೆ ಎಂದರೆ, ಶ್ರೀಲಕ್ಷ್ಮಿಯು ನಾರಾಯಣನ ದಿವ್ಯ ವಕ್ಷಸ್ಥಲವನ್ನು ಬಿಟ್ಟು ಬಿಟ್ಟರೆ”
ವ್ಯಾಖ್ಯಾನಮ್: ಅತೀವ ವಿದ್ವಾನರಾದ ಶ್ರೀ ಸೇನಾಪತಿ ಜೀಯರ್ ಅವರು ಹೇಳಿದ್ದಾರೆ: ” ಅಗಲಗಿಲ್ಲೇನ್ ಇಱೈಯುಮ್ ಎನ್ಱು (ಒಂದು ಕ್ಷಣವೂ ಅವನನ್ನು ಬಿಟ್ಟಿರಲಾರೆ) – ಎಂದು ಹೇಳುವ ಪಿರಾಟ್ಟಿಯು ಅ ಎಂಬ ಅಕ್ಷರದಿಂದ ಯಾವಾಗ ಬೇರೆಯಾಗುತ್ತಾಳೆಂದರೆ, ಅವನನ್ನು ಬಿಟ್ಟು ಹೋಗುವಂದು.
ಆದ್ದರಿಂದ, ಅವಳ ಅವನೊಂದಿಗಿನ ಸಂಬಂಧವು ನಿರಂತರವಾದದ್ದು ಅವನ ದಿವ್ಯ ವಕ್ಷಸ್ಥಲದಲ್ಲಿ. ಯಾವಾಗ ಅವನು ಭಕ್ತರನ್ನು ರಕ್ಷಿಸಲು ಎದ್ದು ಬರುತ್ತಾನೋ, ಅವಳೂ ಅವನೊಡನೆ ಬರುತ್ತಾಳೆ(ಅವನ ದಿವ್ಯ ವಕ್ಷಸ್ಥಲದೊಂದಿಗೆ) ಆದ್ದರಿಂದ ಅವಳ ಉಪಸ್ಥಿತಿಯು ಅ ಕಾರದಲ್ಲಿ ನಿರಂತರವಾಗಿರುತ್ತದೆ.
ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ.
ಮೂಲ : https://granthams.koyil.org/2020/06/18/mumukshuppadi-suthrams-36-41-english/
ಆರ್ಕೈವ್ ಮಾಡಲಾಗಿದೆ – https://granthams.koyil.org
ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org
1 thought on “ಮುಮುಕ್ಷುಪ್ಪಡಿ – ಸೂತ್ರಮ್ 36 ರಿಂದ 41”