ಮುಮುಕ್ಷುಪ್ಪಡಿ – ಸೂತ್ರಮ್ 81 ರಿಂದ 90

ಶ್ರೀಃ ಶ್ರೀಮತೇ ಶಟಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ

ಪೂರ್ಣ ಸರಣಿ

<< ಹಿಂದಿನ ಲೇಖನವನ್ನು

ಸೂತ್ರಮ್ – 81

ಪರಿಚಯ: ಉಕಾರವು ತನ್ನ ಸ್ವಂತಕ್ಕೆ ಮತ್ತು ಪರರಿಗೆ ಸೇವಕತ್ವವನ್ನು ನಿವಾರಿಸಿದರೆ, ಇದನ್ನು ವಿವರಣೆ ಸಹಿತವಾಗಿ ವಿವರಿಸದಿದ್ದರೂ, ಆತ್ಮವು ತನ್ನದ್ದಲ್ಲ ಎಂಬುದನ್ನು ಏಕೆ ವಿವರಿಸಬೇಕು? ಎಂಬ ಪ್ರಶ್ನೆಗೆ ಲೋಕಾಚಾರ್ಯರು ಹೀಗೆ ಉತ್ತರಿಸುತ್ತಾರೆ.

ಪಿಱರ್ಕ್ಕು ಉರಿಯನಾನ ಅನ್ಱು ತನ್ ವೈಲಕ್ಷಣ್ಯತ್ತೈ ಕಾಟ್ಟಿ ಮೀಟ್ಕಲಾಮ್;

ತನಕ್ಕು ಎನ್ನುಮನ್ಱು ಯೋಗ್ಯತೈಯುಮ್ ಕೂಡ ಅೞಿಯುಮ್.

ಸರಳ ಅರ್ಥ: ಆತ್ಮವು ಇತರರಿಗೆ ಸೇವಕನಾಗಿರುವಾಗ ಕೂಡಾ ಎಂಪೆರುಮಾನರು ತಮ್ಮ ವಿಶಿಷ್ಟ ಗುಣಗಳಿಂದ ಅಂತಹ ಆತ್ಮವನ್ನು ಪರಿವರ್ತಿಸಬಹುದು. ಆದರೆ ತನ್ನಲ್ಲೇ ತಾನು ಮಗ್ನವಾಗಿರುವಾಗ, ಅಂತಹ ಆತ್ಮದ ರಕ್ಷಣೆಯು ಸಾಧ್ಯವಿಲ್ಲವಾಗುತ್ತದೆ ಮತ್ತು ಅಂತಹ ಆತ್ಮವು ರಕ್ಷಣೆಗೆ ಯೋಗ್ಯವಾಗಿರುವುದಿಲ್ಲ.

ವ್ಯಾಖ್ಯಾನಮ್: 

ಆತ್ಮವು ಇತರರಿಗೆ ಸೇವಕತ್ವವನ್ನು ಹೊಂದಿರುವಾಗ ಅಂತಹ ಆತ್ಮವು ಸೇವಕತ್ವಕ್ಕೆ ಸ್ವೀಕರಿಸಲ್ಪಡುತ್ತದೆ,  ಮತ್ತು ಪೆರುಮಾಳರು ಅವರ ಅತ್ಯುನ್ನತ ಗುಣಗಳಿಂದ ಎಲ್ಲರನ್ನೂ ರಕ್ಷಿಸುವ ಹೊಣೆಯುಳ್ಳವರಾದ್ದರಿಂದ ಮತ್ತು ಎಲ್ಲರಿಗೂ ಕಾರಣ ಕರ್ತರಾಗಿರುವುದರಿಂದ ಎಲ್ಲರ ಮುಖ್ಯಸ್ಥ ಅಧಿಕಾರಿಯಾದ್ದರಿಂದ, ಅಂತಹ ಆತ್ಮವನ್ನು ರಕ್ಷಿಸುತ್ತಾರೆ. ಆದರೆ ಆ ಆತ್ಮವು ಅಹಂಕಾರದಿಂದ (ಅಹಮ್ ಮೇ) ನಾನೇ ನನಗೆ ಸ್ವಂತ ಎಂದಾಗ ಪೆರುಮಾಳರು ಹೇಳುತ್ತಾರೆ “ತ್ವಮ್ ಮೇ” (ನೀನು ನನ್ನವನು), ಆದ್ದರಿಂದ ಅಂತಹ ಸರಿಪಡಿಸಲಾಗದ ಗುಣದಿಂದ ಅಂತಹ ಆತ್ಮವು ತನ್ನ ರಕ್ಷಣೆಯ ಯೋಗ್ಯತೆಯನ್ನು ಕಳೆದುಕೊಳ್ಳುತ್ತದೆ.

ಸೂತ್ರಮ್ – 82

ಪರಿಚಯ: ಇಲ್ಲಿ ನಮಃ ಎಂಬ ಪದದ ಸ್ಥಾನವೇನು? ಎಂಬ ಪ್ರಶ್ನೆಗೆ ಲೋಕಾಚಾರ್ಯರು ಹೇಳುತ್ತಾರೆ: ಅದು ಅಡಚಣೆಗಳನ್ನು ನಿವಾರಿಸುತ್ತದೆ.

ಇತ್ತಾಲ್ ವಿರೋಧಿಯೈ ಕೞಿಕ್ಕಿಱದು.

ಸರಳ ಅರ್ಥ: ಇದು ಅಡಚಣೆಗಳನ್ನು ನಿವಾರಿಸುತ್ತದೆ.

ಸೂತ್ರಮ್ – 83

ಪರಿಚಯ: ವಿರೋಧಿಗಳು ಒಂದಾ ಅಥವಾ ಒಂದಕ್ಕಿಂತಾ ಹೆಚ್ಚು ಇದೆಯೆ? ಎಂಬ ಪ್ರಶ್ನೆಗೆ ಲೋಕಾಚಾರ್ಯರು ಹೇಳುತ್ತಾರೆ:

ವಿರೋಧಿತಾನ್ ಮೂನ್ಱು.

ಸರಳ ಅರ್ಥ: ವಿರೋಧಿಗಳು ಮೂರು.

ಸೂತ್ರಮ್ – 84

ಪರಿಚಯ: ಆ ಮೂರು ವಿರೋಧಿಗಳು ಯಾವುವು? ಎಂಬ ಪ್ರಶ್ನೆಗೆ ಲೋಕಾಚಾರ್ಯರು ಉತ್ತರಿಸುತ್ತಾರೆ: ಅವು ಯಾವುವೆಂದರೆ ಸ್ವರೂಪ ವಿರೋಧಿ (ನಮ್ಮ ಗುರುತಾದ ಸೇವಕತ್ವವನ್ನು ವಿರೋಧಿಸುವುದು, ತಡೆಯನ್ನು ತರುವುದು), ಉಪಾಯ ವಿರೋಧಿ (ಗುರಿಯನ್ನು ತಲುಪಲು ಇರುವ ಅಡಚಣೆಗಳು), ಮತ್ತು ಪ್ರಾಪ್ಯ ವಿರೋಧಿ (ಭಗವಂತನಿಗೆ ನಿರಂತರ ಸೇವೆಯನ್ನು ಸಲ್ಲಿಸಲು ಇರುವ ಅಡಚಣೆಗಳು).

ಅದಾವದು – ಸ್ವರೂಪ ವಿರೋಧಿಯುಮ್, ಉಪಾಯ ವಿರೋಧಿಯುಮ್, ಪ್ರಾಪ್ಯ ವಿರೋಧಿಯುಮ್.

ಸರಳ ಅರ್ಥ: ಸ್ವರೂಪ ವಿರೋಧಿ, ಉಪಾಯ ವಿರೋಧಿ ಮತ್ತು ಪ್ರಾಪ್ಯ ವಿರೋಧಿ.

ವ್ಯಾಖ್ಯಾನಮ್: ಈ ಸೂತ್ರದಿಂದ ಅವರು ಆತ್ಮದ ಗುರುತನ್ನು ಉಲ್ಲೇಖಿಸುವ ಪ್ರಣವದ (ಓಂ) ಬಗ್ಗೆ ಇರುವ ವಿರೋಧಿಗಳನ್ನು ತೋರಿಸುತ್ತಾರೆ. ಆತ್ಮದ ದಾರಿಗೆ ಮತ್ತು ಮಾರ್ಗಕ್ಕೆ ಇರುವ ಅಡಚಣೆಗಳನ್ನು ತೋರಿಸುತ್ತಾರೆ (ನಮಃ); ಮತ್ತು ಕೈಂಕರ್ಯ ಪ್ರಾಪ್ತಿಗೆ ಇರುವ ಅಡಚಣೆಗಳನ್ನು ತೋರಿಸುತ್ತಾರೆ (ನಾರಾಯಣ) ; ಹೇಗೆ ಕಾಗೆಯು ತನ್ನ ಒಂದೇ ಒಂದು ಕಣ್ಣಿನಿಂದ ವಸ್ತುಗಳನ್ನು ಅಳೆಯುತ್ತದೆಯೋ, (ಕಾಕಾಶಿ ನ್ಯಾಯ – ಕಾಗೆಯು ತನ್ನ ಒಂದೇ ಕಣ್ಣಿನಿಂದ ಎರಡೂ ಕಡೆಗಳಲ್ಲಿ ನೋಡುತ್ತದೆ) ಹಾಗೆಯೇ ಮಧ್ಯದಲ್ಲಿರುವ ಪದವು (ನಮಃ) ಎಂಬುದು ಸ್ವರೂಪ ವಿರೋಧಿಗಳನ್ನೂ (ಮೊದಲನೆಯ ಪದದಿಂದ ಗುರುತಿಸಲ್ಪಡುವ) ಹಾಗೂ ಪ್ರಾಪ್ಯ ವಿರೋಧಿಯನ್ನೂ (ಕೊನೆಯ ಪದದಿಂದ ತೋರಿಸಲ್ಪಡುವ) ತೊಡೆದು ಹಾಕುತ್ತದೆ.

ಸೂತ್ರಮ್ – 85

ಪರಿಚಯ: ಈ ಮೂರು ವಿರೋಧಿಗಳನ್ನು ತೊಡೆದು ಹಾಕುವುದರಿಂದ ಆಗುವ ಪ್ರಯೋಜನವೇನು ಮತ್ತು ಅದರ ಮುಖ್ಯತ್ವವೇನು ಎಂಬ ಪ್ರಶ್ನೆಗೆ ಲೋಕಾಚಾರ್ಯರು ವಿವರಿಸುತ್ತಾರೆ:

ಸ್ವರೂಪ ವಿರೋಧಿ ಕೞಿಗೈಯಾವದು “ಯಾನೇ ನೀ ಎನ್ ಉಡೈಮೈಯುಮ್ ನೀಯೇ” ಎನ್ಱಿರುಕ್ಕೈ;

ಉಪಾಯ ವಿರೋಧಿ ಕೞಿಗೈಯಾವದು “ಕಳೈವಾಯ್ ತುನ್ಬಮ್ ಕಳೈಯಾದೊೞಿವಾಯ್ ಕಳೈಗಣ್ ಮಱ್ಱಿಲೇನ್” ಎನ್ಱಿರುಕ್ಕೈ;

ಪ್ರಾಪ್ಯ ವಿರೋಧಿ ಕೞಿಗೈಯಾವದು “ಮಱ್ಱಿ ನಮ್ ಕಾಮಂಗ್ಕಳ್ ಮಾಱ್ಱು”

ಸರಳ ಅರ್ಥ: ಸ್ವರೂಪ ವಿರೋಧಿಯನ್ನು ನಿವಾರಿಸುವುದು “ಯಾನೇ ನೀ ಎನ್ ಉಡೈಮೈಯುಮ್ ನೀಯೇ” ಎಂಬುದರಿಂದ; ಉಪಾಯ ವಿರೋಧಿಯನ್ನು ತೆಗೆದುಹಾಕುವುದು “ಕಳೈವಾಯ್ ತುನ್ಬಮ್ ಕಳೈಯಾದೊೞಿವಾಯ್ ಕಳೈಗಣ್ ಮಱ್ಱಿಲೇನ್” ಎಂದು ಹೇಳುವುದರಿಂದ.; ಪ್ರಾಪ್ಯ ವಿರೋಧಿಯನ್ನು ನಿವಾರಿಸುವುದು “ಮಱ್ಱೈ ನಮ್ ಕಾಮಂಗಳ್ ಮಾಱ್ಱು” ಎಂಬುದರಿಂದ.

ವ್ಯಾಖ್ಯಾನಮ್: ಸ್ವರೂಪಕ್ಕೆ ವಿರೋಧಿಯದುದು “ಯಾನೇ ಎನ್ದನದೇ” (ನಾನು ನನ್ನದೇ, ನನ್ನ ಸ್ವಂತದ್ದು) ಎಂಬ ಆಲೋಚನೆ. ಇದನ್ನು ತೊಡೆದು ಹಾಕುವುದು ಹೇಗೆಂದರೆ “ಯಾನೇ ನೀ ಎನ್ ಉಡೈಮೈಯುಮ್ ನೀಯೇ” ಎಂಬ ತಿಳುವಳಿಕೆ. ಅಂದರೆ ಆತ್ಮ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲವೂ ಅವನದು ಮತ್ತು ಅವನದಾಗಿಯೇ ಇರುತ್ತದೆ ಎಂಬ ತಿಳುವಳಿಕೆಯ ಅರಿವು ಮೂಡಿದಾಗ.;

ಮಾರ್ಗಕ್ಕೆ (ಮಾಧ್ಯಮಕ್ಕೆ) ಅಡಚಣೆಯೆಂದರೆ ಉಪಾಯ ವಿರೋಧಿ ಎಂದರೆ ಆತ್ಮವು ತನ್ನನ್ನು ತಾನೇ ರಕ್ಷಿಸಿಕೊಳ್ಳಲು ಮಾಡುವ ಪ್ರಯತ್ನ. ಸ್ವರಕ್ಷಣೆ ಸ್ವ ಅನ್ವಯಮ್; ಇದನ್ನು ತೊಡೆದು ಹಾಕುವುದಕ್ಕಾಗಿ “ಕಳೈವಾಯ್ ತುನ್ಬಮ್ ಕಳೈಯಾದೊೞಿವಾಯ್ ಕಳೈಗಣ್ ಮಱ್ಱಿಲೇನ್” ಎಂದರೆ ತೊಂದರೆಯು ನಿವಾರಣೆಯಾಗುತ್ತದೆಯೋ ಇಲ್ಲವೋ, ತನಗೆ ಮತ್ತೊಂದು ಆಶ್ರಯವಿಲ್ಲ ಎಂದು ನಂಬುವುದು ಮತ್ತು ಅದಕ್ಕೆ ತಕ್ಕನಾಗಿ ನಡೆದುಕೊಳ್ಳುವುದು; ಪ್ರಾಪ್ಯ ವಿರೋಧಿಗೆ ಅಡಚಣೆಯಾಗುವುದು ನಾವು ಮಾಡುವ ಸೇವೆಯಿಂದ ನಮಗೆ ಸಂತೋಷವಾಗುವುದು ಎಂದು ನಂಬುವುದು. ಇದನ್ನು ನಿವಾರಿಸುವುದು “ಮಱ್ಱೈ ನಮ್ ಕಾಮಂಗಳ್ ಮಾಱ್ಱು” ಎಂದು ಭಗವಂತನನ್ನು ಬೇಡುವುದು, ಅಂದರೆ ನಮಗೆ ಬೇರೆ ಆಸೆಗಳನ್ನು, ನಿನ್ನ ಸಂತೋಷವನ್ನು ಬಿಟ್ಟು ಬೇರೆಯದೆಲ್ಲವನ್ನೂ ತೊಡೆದುಹಾಕು ಎಂದು ಬೇಡುವುದು ಮತ್ತು ಅದರಂತೆ ಇರುವುದು.

ಸೂತ್ರಮ್ – 86

ಪರಿಚಯ: ಸ್ವರೂಪ, ಉಪಾಯ ಮತ್ತು ಪುರುಷಾರ್ಥಗಳಿಗೆ ವಿರೋಧಿಯಾಗಿರುವುದು ಆತ್ಮದ ಸೊಕ್ಕು (ಅಹಂಕಾರ) ಮತ್ತು ತಾನು ತನ್ನದೇ ಎಂಬ ಮಮಕಾರ. ಆದ್ದರಿಂದ ಲೋಕಾಚಾರ್ಯರು ಈ ಭಾವಗಳ ಕ್ರೂರತೆಯನ್ನು ಪರಿಚಯಿಸಿ, ಮತ್ತು ಅದನ್ನು ಮೀರಿದರೆ ಉಂಟಾಗುವ ಪ್ರಯೋಜನವನ್ನು ತೋರಿಸಿಕೊಡುತ್ತಾರೆ.

ಮಃ ಎನ್ಗೈ ಸ್ವರೂಪ ನಾಶಮ್; ನಮಃ ಎನ್ಗೈ ಸ್ವರೂಪ ಉಜ್ಜೀವನಮ್.

ಸರಳ ಅರ್ಥ: ಮಃ ಎಂಬುದು ತನ್ನನ್ನು ತಾನು ನಾಶಪಡಿಸುವುದು. ನಮಃ ಎಂಬುದು ನಮ್ಮನ್ನು ತಾವೇ ಉದ್ಧರಿಸುವುದು.

ವ್ಯಾಖ್ಯಾನಮ್: ಅಹಿರ್ಬುದ್ನ್ಯ ಸಂಹಿತಿ  52-25 ಯಲ್ಲಿ ಹೇಳಿರುವ ಹಾಗೆ :

ಚೇತನಸ್ಯ ಮಮ್ಯಮ್ ಸ್ವಸ್ಮಿನ್ ಸ್ವೀಯೇ ಚ ವಸ್ತುನಿ ।

ಮಮ ಇತ್ಯಕ್ಷರ ದ್ವಂದ್ವಮ್ ತದಾ ಮಮ್ಯಸ್ಯ ವಾಚಕಮ್॥

(ಯಾವಾಗ ತನ್ನ ಮತ್ತು ತನಗೆ ಸಂಬಂಧಿಸಿದ ವಸ್ತುಗಳ ಬಗ್ಗೆ ನಾನು ನನ್ನದು ಎಂಬ ಆಲೋಚನೆ ಮನಸ್ಸಿನಲ್ಲಿ ಉಂಟಾಗುತ್ತದೆಯೋ, ಆಗ ಮಮ ಎಂಬ ಶಬ್ದವು ಅಹಂಕಾರ ಮತ್ತು ಮಮಕಾರಗಳನ್ನು ಸೂಚಿಸುತ್ತದೆ.)

‘ಮ’ ಎಂಬ ಅಕ್ಷರವು ಅಹಂಕಾರ ಮತ್ತು ಮಮಕಾರ ಎರಡನ್ನೂ ಹೊಂದಿರುವುದರಿಂದ, ಇದರಲ್ಲಿ ಆಸಕ್ತಿಯನ್ನು ಹೊಂದಿದವರು ಸ್ವಯಮ್ ನಾಶಕ್ಕೆ ಕಾರಣರಾಗುತ್ತಾರೆ. ಇದರಿಂದ ದೂರವಿರುವುದು ಅತಿ ಪ್ರಯೋಜನಕಾರಿಯಾಗಿದೆ.

ಮಹಾಭಾರತಮ್ ಶಾಂತಿ ಪರ್ವಮ್ 13-4 ರಲ್ಲಿ ಉಲ್ಲೇಖಿಸಿರುವ ಹಾಗೆ:

ದ್ವಯಾಕ್ಷರಸ್ತು ಭವೇನ್ ಮೃತ್ಯುಃ ತ್ರಕ್ಷರಮ್ ಬ್ರಹ್ಮಣಃ ಪದಮ್।

ಮಮೇತಿ ದ್ವಯಕ್ಷರೋ ಮೃತ್ಯುಃ   ನ ಮಮೇತಿ ಚ ಶಾಶ್ವತಮ್॥

(ಎರಡು ಅಕ್ಷರಗಳಾದ ಮಮ ಎಂಬುದು ಸಾವನ್ನು ತರುತ್ತದೆ. “ನ ಮಮ” ಎಂಬ ಮೂರು ಅಕ್ಷರಗಳು ನಿರಂತರತೆಯನ್ನು ತರುತ್ತದೆ.)

ಸೂತ್ರಮ್ – 87

ಪರಿಚಯ: ಲೋಕಾಚಾರ್ಯರು ಹೇಳುತ್ತಾರೆ: ನಮಃ ಎಂಬ ಶಬ್ದವು ಸ್ವರೂಪ, ಉಪಾಯ ಮತ್ತು ಪುರುಷಾರ್ಥಗಳಿಗೆ ಇರುವ ಅಡಚಣೆಗಳನ್ನು ನಿವಾರಿಸುವುದರ ಜೊತೆಗೆ ಸ್ವರೂಪ, ಉಪಾಯ ಮತ್ತು ಫಲಗಳಿಗೆ ಶೋಭೆಯನ್ನು ತರುತ್ತದೆ.

ಇದು ತಾನ್ ಸ್ವರೂಪತ್ತೈಯುಮ್, ಉಪಾಯತ್ತೈಯುಮ್, ಪಲತ್ತೈಯುಮ್ ಕಾಟ್ಟುಮ್.

ಸರಳ ಅರ್ಥ: ಇದು (ನಮಃ) ಸ್ವರೂಪ, ಉಪಾಯ ಮತ್ತು ಫಲ (ಕೈಂಕರ್ಯ) ಗಳನ್ನು ತೋರಿಸುತ್ತದೆ.

ಸೂತ್ರಮ್ – 88

ಪರಿಚಯ: ಲೋಕಾಚಾರ್ಯರು ಮುಂದಿನ ಮೂರು ವಾಕ್ಯಗಳಿಂದ ಇದನ್ನು ವಿವರಿಸುತ್ತಾರೆ.

“ತೊಲೈವಿಲ್ಲಿ ಮಂಗ್ಕಲಮ್ ತೊೞುಮ್”  ಎನ್ಗೈಯಾಲೇ ಸ್ವರೂಪಮ್ ಸೊಲ್ಲಿಱ್ಱು; 

“ವೇಂಗಡತ್ತುಱೈವಾರ್ಕ್ಕು ನಮ” ಎನ್ಗೈಯಾಲೇ ಉಪಾಯಮ್ ಸೊಲ್ಲಿಱ್ಱು;

“ಅನ್ದಿ ತೊೞುಮ್ ಸೊಲ್” ಎನ್ಗೈಯಾಲೇ  ಫಲಮ್ ಸೊಲ್ಲಿಱ್ಱು.

ಸರಳ ಅರ್ಥ: “ತೊಲೈವಿಲ್ಲಿ ಮಂಗ್ಕಲಮ್ ತೊೞುಮ್” ಇದರಿಂದ ಸ್ವರೂಪವು ಸಾಧಿಸಲ್ಪಡುತ್ತದೆ; 

“ವೇಂಗಡತ್ತು ಉರೈವಾರ್ಕ್ಕು ನಮ” ಎಂಬುದರಿಂದ ಉಪಾಯವು ಸಾಧಿಸಲ್ಪಡುತ್ತದೆ.

“ಅಂದಿ ತೊೞುಮ್ ಸೊಲ್” ಎಂಬುದರಿಂದ  ಫಲಮ್ ಸಾಧಿಸಲ್ಪಡುತ್ತದೆ.

ವ್ಯಾಖ್ಯಾನಮ್: “ತೊಲೈವಿಲ್ಲಿ ಮಂಕಲಮ್ ತೊೞುಮ್” ಎಂಬ ಪಾಸುರದಲ್ಲಿ ಪರಾಂಕುಶ ನಾಯಕಿಯು (ನಮ್ಮಾೞ್ವಾರರು) ಬಹಳ ದೂರದಲ್ಲಿರುವ ಅವನಿಗೆ ಪ್ರಿಯವಾಗಿರುವ  ಒಂದು ದಿವ್ಯದೇಶಕ್ಕೆ ಹೋಗಿ “ತೊೞುಮ್” ಎಂದರೆ ಅವನನ್ನು ಪೂಜಿಸುವ ಒಂದು ಕ್ರಿಯೆ, ಅದನ್ನು ಆತ್ಮದ ಸ್ವರೂಪವೆಂದು ಪರಿಗಣಿಸಲಾಗುತ್ತದೆ.

“ವೇನ್ಗಡತ್ತು ಉರೈವಾರ್ಕ್ಕು ನಮ” ಎಂಬ ಪಾಸುರದಲ್ಲಿ “ನಾನು ತಿರುವೇಂಕಟಮುಡೈಯಾನುಕ್ಕು ಒಬ್ಬ ಸೇವಕನೆಂದು ಮತ್ತು ತನಗೆ ಅಲ್ಲ” ಎಂದು ಹೇಳಲಾಗಿದೆ. ಇದರಿಂದ ನಾನು ನನ್ನನ್ನು ಕಾಪಾಡಿಕೊಳ್ಳಲು ಅರ್ಹನಾಗಿಲ್ಲವೆಂದು ಆದ್ದರಿಂದ ಪಾರತಂತ್ರ್ಯವಾದ ಉಪಾಯವನ್ನು ಹೇಳಿಕೊಡಲಾಗಿದೆ. 

“ಅಂಧಿ ತೊೞುಮ್ ಸೊಲ್” ಎಂಬ ಪಾಸುರದಲ್ಲಿ ಆತ್ಮದ ಕಡೆಯ ಕ್ಷಣಗಳಲ್ಲಿ ಅದು ಹೇಳುವ ಕೊನೆಯ ಮಾತುಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. ತೊೞುಮ್ ಸೊಲ್ ಎಂಬುದು “ನಮಃ” ಕ್ಕೆ ಸಾಟಿಯಾಗಿದೆ ಮತ್ತು ಅದು ಫಲವಾದ ಕೈಂಕರ್ಯವನ್ನು ತೋರಿಸುತ್ತದೆ.

ಸೂತ್ರಮ್ – 89

ಪರಿಚಯ: ಅವನ ಭಕ್ತರಿಗೆ ಸೇವಕರಾಗಿರುವುದನ್ನು (ತದೀಯ ಶೇಷತ್ವಮ್) ಸಹ ಇದು ಒಳಗೊಂಡಿದೆ. ಆದ್ದರಿಂದ ಲೋಕಾಚಾರ್ಯರು ಭಾಗವತ ಶೇಷತ್ವಮ್ ನನ್ನು ಈ ಸೂತ್ರದಲ್ಲಿ ವಿವರಿಸಿದ್ದಾರೆ.

“ಉಱ್ಱದುಮ್ ಉನ್ ಅಡಿಯಾರ್ಕ್ಕು ಅಡಿಮೈ” ಎನ್ಗಿಱಪಡಿಯೇ, ಇದಿಲೇ ಭಾಗವತ ಶೇಷತ್ವಮುಮ್ ಅನುಸಂಧೇಯಮ್.

ಸರಳ ಅರ್ಥ: “ಉಱ್ಱದುಮ್ ಉನ್ ಅಡಿಯಾರ್ಕ್ಕು ಅಡಿಮೈ” ಎಂಬ ಪಾಸುರದಲ್ಲಿ ಹೇಳಿರುವ ಹಾಗೆ ಭಾಗವತ ಶೇಷತ್ವವೂ ಇದರಲ್ಲಿ ಕಾಣಬಹುದು.

ವ್ಯಾಖ್ಯಾನಮ್: ಭಗವತ್ ಶೇಷತ್ವಮ್ ನಲ್ಲಿ ಅತ್ಯಂತ ಮನೋಹರವಾದ ಭಾಗವತ ಶೇಷತ್ವಮ್ ನನ್ನು ಈ ಪಾಸುರದಿಂದ ನೆನಪಿಸಿಕೊಳ್ಳುತ್ತಾರೆ. “ನಿನ್ ತಿರುವೆಟ್ಟು ಎೞುತ್ತುಮ್ ಕಱ್ಱು ನಾನ್ ಉಱ್ಱದುಮ್ ಉನ್ ಅಡಿಯಾರ್ಕ್ಕು ಅಡಿಮೈ” ಎಂಬ ಪಾಸುರದಲ್ಲಿ ಈ ರೀತಿಯ ಅರ್ಥವನ್ನು ವಿವರಿಸಿದ್ದಾರೆ: ತಿರುಮಂತ್ರವನ್ನು ಕಲಿಯುವಾಗ ನಾನು ನಿನ್ನ ಭಕ್ತರಿಗೂ ಅಡಿಯಾಳಾಗಬೇಕೆಂದು (ಎಟ್ಟು ಎೞುತ್ತು – ಅಷ್ಟಾಕ್ಷರ) ಕಲಿತುಕೊಂಡೆನು.

ಸೂತ್ರಮ್ – 90

ಪರಿಚಯ: ಭಾಗವತ ಶೇಷತ್ವವು ‘ನಮಃ’ ಎಂಬ ಅಕ್ಷರದಿಂದ ನೆನಪಿಸಿಕೊಳ್ಳುತ್ತೇವೆಂದರೂ, ಅಕಾರ ಮತ್ತು ಉಕಾರದಲ್ಲಿಯೂ ಸಹ ಇದು ಪ್ರಸ್ತುತವೆಂದು ಕೆಲವರು ಸಲಹೆ ಕೊಡುತ್ತಾರೆ.

ಇದು – ಅಕಾರತ್ತಿಲೇ ಎನ್ಱುಮ್ ಸೊಲ್ಲುವರ್ಗಳ್; ಉಕಾರತ್ತಿಲೇ ಎನ್ಱುಮ್ ಸೊಲ್ಲುವಾರ್ಗಳ್.

ಸರಳ ಅರ್ಥ: ಇದು ಅಕಾರ ಮತ್ತು ಉಕಾರದಿಂದಲೂ ಜನಿಸಿದೆ.

ವ್ಯಾಖ್ಯಾನಮ್:  ಭಗವತ್ ಶೇಷತ್ವವನ್ನು ಚತುರ್ಥಿ ವಿಭಕ್ತಿಯಲ್ಲಿ ಹೇಳಿರುವುದರಿಂದ, ಭಾಗವತ ಶೇಷತ್ವವನ್ನು ಅಕಾರದಲ್ಲಿ ಹೇಳಲಾಗುವುದು ಎಂದು ಕೆಲ ಅಧಿಕಾರಿಗಳು ಹೇಳುತ್ತಾರೆ. ಅನನ್ಯಾರ್ಹ ಶೇಷತ್ವಮ್ (ಅವನಿಗೆ ಮಾತ್ರ ಸೇವೆ ಸಲ್ಲಿಸುವುದು) ಎಂಬುದು ಭಾಗವತರ ಶೇಷತ್ವವನ್ನೂ ಸಹ ಹೊಂದಿದೆ ಎನ್ನುವವರು ಉಕಾರದಲ್ಲಿ ಅದನ್ನು ಹೇಳಲಾಗಿದೆ ಎಂದು ಭಾವಿಸುವರು. ಇದು ಒಂದರಿಂದ ಜನ್ಮಿಸಿದ ಅರ್ಥವಾದ್ದರಿಂದ, ಅದನ್ನು ಯಾವ ಪದದಿಂದಲೂ ಅರ್ಥೈಸಿಕೊಳ್ಳಬಹುದಾಗಿದೆ. ಆದರೆ ಇದನ್ನು ಅಡಚಣೆ(ವಿರೋಧಿ) ಗಳಿಂದ ನಿವಾರಿಸಿದ ಬಳಿಕ ಅರ್ಥೈಸಿದರೆ ಉತ್ತಮ ಎಂದು ಲೋಕಾಚಾರ್ಯರು ವಿವರಿಸಿದ್ದಾರೆ.

ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ.

ಮೂಲ : https://granthams.koyil.org/2020/06/28/mumukshuppadi-suthrams-81-90-english/

ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org

Leave a Comment