ಶ್ರೀಃ ಶ್ರೀಮತೇ ಶಟಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ
ಸೂತ್ರಮ್ – 60
ಪರಿಚಯ: ನಮ್ಮ ಹಿಂದಿನ ಬೋಧಕರು ಈ ‘ಉ’ ಕಾರವು ಶ್ರೀ ಮಹಾಲಕ್ಷ್ಮಿಗೆ ನಮ್ಮ ದಾಸ್ಯತ್ವವನ್ನು ತಿಳಿಸುತ್ತದೆ ಎಂದೂ ಕೂಡ ಅಭಿಪ್ರಾಯವಿದೆ.
ಪೆರಿಯ ಪಿರಾಟ್ಟಿಯರ್ಕು ಶೇಷಮ್ ಎಂಗಿಱದು ಎನ್ಱುಮ್ ಸೊಲ್ಲುವಾರ್ಗಳ್.
ಸರಳ ಅರ್ಥ: ಅವರು ಹೇಳುತ್ತಾರೆ, ಶ್ರೀ ಮಹಾಲಕ್ಷ್ಮಿಗೆ ನಾವು ಸೇವಕರೆಂದೂ ಇದು ಸೂಚಿಸುತ್ತದೆ.
ವ್ಯಾಖ್ಯಾನಮ್: ಭಗವತ್ ಶಾಸ್ತ್ರಮ್ ನಲ್ಲಿ (ಶ್ರೀ ಪಾಂಚರಾತ್ರಮ್) ನಲ್ಲಿರುವ ಪ್ರಕಾರ:
ಅಕಾರಶ್ಚಿತ್ಸ್ವರೂಪಸ್ಯ ವಿಷ್ಣೋರ್ವಾಚಕ ಇಶ್ಯತೇ।
ಉಕಾರಶ್ಚಿತ್ಸ್ವರೂಪಾಯಃ ಶ್ರಿಯೋ ವಾಚೀ ತಥಾ ವಿದುಃ ।
ಮಕಾರಸ್ತು ತಯೋರ್ದಾಸ ಇತಿ ಪ್ರಣವ ಲಕ್ಷಣಮ್॥
(ಶ್ರೀ ಪಾಂಚರಾತ್ರಮ್ : ಅಕಾರವು ವಿಷ್ಣುವನ್ನು(ಬುದ್ಧಿಗೆ ಪ್ರತಿಬಿಂಬವಾದ) ಸಂಬೋಧಿಸುತ್ತದೆ. ಮತ್ತು ಉ ಕಾರವು ಶ್ರೀದೇವಿಯನ್ನು ಸಂಬೋಧಿಸುತ್ತದೆ. (ಙ್ಞಾನದ ಪ್ರತಿಬಿಂಬವಾದ). ಮಕಾರವು ಜೀವವನ್ನು ಸಂಬೋಧಿಸುತ್ತದೆ, ಅದು ಈ ಎರಡಕ್ಕೂ ಸೇವಕನಾಗಿರುತ್ತದೆ. ಇದೇ ಪ್ರಣವದ ವಿವರಣೆ.)
ಮತ್ತೂ,
ಅಕಾರೇಣೋಚ್ಯತೇ ವಿಷ್ಣುಃ ಸರ್ವ ಲೋಕೇಶ್ವರೋ ಹರಿಃ।
ಉದ್ದೃತಾ ವಿಷ್ಣುನಾ ಲಕ್ಷ್ಮಿಃ ಉಕಾರೇಣೋಚ್ಯತೇ ಸದಾ।
ಮಕಾರಸ್ತು ತಯೋರ್ವಿಪ್ರ ಶ್ರೀನಾರಾಯಣೋಸ್ಸದಾ।
ಆತ್ಮನಸ್ ಶೇಷಭೂತಸ್ಯ ವಾಚಕಃ ಶೃತಿ ಚೋದಿತಃ॥
(ಶ್ರೀ ಪಂಚರಾತ್ರಂ : ಎಲ್ಲಾ ಲೋಕಗಳ ಅಧಿಪತಿ ಮತ್ತು ಎಲ್ಲವನ್ನೂ ವ್ಯಾಪಿಸಿರುವ ಹರಿಯನ್ನು ಅಕಾರದಲ್ಲಿ ಸಂಬೋಧಿಸಲಾಗಿದೆ; ಶ್ರೀ ಲಕ್ಷ್ಮಿ ದೇವಿಯು ವಿಷ್ಣುವಿನ ವಕ್ಷಸ್ಥಲದಲ್ಲಿ ನೆಲೆಸಿರುತ್ತಾಳೆ ಅವಳನ್ನು ಉ ಕಾರದಲ್ಲಿ ಸಂಬೋಧಿಸಲಾಗಿದೆ.ಓ ಬ್ರಾಹ್ಮಣ! ವೇದಾಂತದ ಪ್ರಕಾರ, ಜೀವಾತ್ಮವು ಯಾವಾಗಲೂ ಇವರಿಬ್ಬರ ದಾಸ್ಯದಲ್ಲಿರುತ್ತದೆ ಮತ್ತು ಅದನ್ನು ಮಕಾರದಿಂದ ಗುರುತಿಸಲಾಗುತ್ತದೆ.)
ಭಾಗವತ ಶಾಸ್ತ್ರದಲ್ಲಿ ನಮ್ಮ ಗುರುಗಳು ನಮಗೆ ತೋರಿಸಿದ ಅಧಿಕಾರದ ಪ್ರಕಾರ: ಅಕಾರವು ಭಗವಂತನನ್ನು ಉಲ್ಲೇಖಿಸುತ್ತದೆ ಎಂದು ಸೂಚಿಸಲಾಗಿದೆ, ಉಕಾರ ಶ್ರೀ ಮಹಾಲಕ್ಷ್ಮಿ, ಮತ್ತು ಮಕಾರ – ಇಬ್ಬರಿಗೂ ಅಧೀನನಾದ ಜೀವ; ಮತ್ತು ಆದ್ದರಿಂದ ಅವರು ಉಕಾರವು ಒತ್ತು ನೀಡುವುದನ್ನು ಉಲ್ಲೇಖಿಸುತ್ತಿಲ್ಲ ಆದರೆ ಅವಳಿಗೆ ದಾಸ್ಯವನ್ನು ಸೂಚಿಸುತ್ತದೆ ಎಂದು ಪರಿಗಣಿಸಿದರು.
ಸೂತ್ರಮ್ – 61
ಪರಿಚಯ: ಲೋಕಾಚಾರ್ಯರು ಸೂಕ್ಷ್ಮವಾಗಿ ವಿಚಾರ ಮಾಡುತ್ತಾರೆ. ಹಿಂದೆ ಮಾಡಿದ ಅವಲೋಕನೆಯೇ ಮುಖ್ಯವಾದದ್ದು. (ಅದೇನೆಂದರೆ, ನಾವು ಪೆರಿಯ ಪಿರಾಟ್ಟಿಗೆ ಸೇವಕರಾಗಿರುತ್ತೇವೆ. ಆದರೆ ಹೆಚ್ಚು ಮುಖ್ಯವಾಗಿ, ನಾವು ಬೇರೆ ಯಾರಿಗೂ ಅಧೀನರಾಗಿರುವುದಿಲ್ಲ.) ಇದೆಲ್ಲದಕ್ಕಿಂತ ಮುಖ್ಯವಾಗಿ, ನಮ್ಮ ದಾಸ್ಯತ್ವವನ್ನು ಇತರರಿಗಾಗಿ (ಎಂಪೆರುಮಾನರನ್ನು ಬಿಟ್ಟು) ಮೀಸಲಿಡುವುದನ್ನು ಇದು ನಿವಾರಿಸುತ್ತದೆ. (ಹೋಗಲಾಡಿಸುತ್ತದೆ, ಇಲ್ಲವಾಗಿಸುತ್ತದೆ) ಎಂದು ಅವರು 61ನೇ ಸೂತ್ರದಲ್ಲಿ ಹೇಳುತ್ತಾರೆ:
ಅದಿಲುಮ್ ಅನ್ಯ ಶೇಷತ್ವಮ್ ಕೞಿಗೈಯೇ ಪ್ರಧಾನಮ್.
ಸರಳ ಅರ್ಥ: ಅದಕ್ಕಿಂತಾ ಮುಖ್ಯವಾಗಿ ಅನ್ಯರಿಗೆ ಅಧೀನರಾಗಿರುವುದನ್ನು ಇದು ತೆಗೆದು ಹಾಕುತ್ತದೆ.
ವ್ಯಾಖ್ಯಾನಮ್:
ಮುಖ್ಯವಾದ ಅಗತ್ಯವೇನೆಂದರೆ ನಾವು ಅನ್ಯರಿಗೆ ಶರಣಾಗುವುದನ್ನು ತೆಗೆದುಹಾಕುತ್ತದೆ. ಇದು ನಮಗೆ ಎಂಪೆರುಮಾನರನ್ನು ಹೊಂದಲು ಇರುವ ತೊಂದರೆ(ವಿರೋಧಿ) , ಇದನ್ನು ಉಕಾರವು ಹೋಗಲಾಡಿಸುತ್ತದೆ. ಇದು ಶ್ರೀ ಮಹಾಲಕ್ಷ್ಮಿಗೆ ಇರುವ ಸೇವಕತ್ವಕ್ಕಿಂತಲೂ ಮಹತ್ತರವಾದ ಉಪಯೋಗ.
ಸೂತ್ರಮ್ – 62
ಪರಿಚಯ: ಬೇರೆಯವರಿಗೆ ಶರಣು ಹೊಂದುವುದು ಮಹಾ ಪಾಪವೇ ಮತ್ತು ಹಿಂಸೆಯಾದ ಕಾರ್ಯವೇ? ಎಂಬ ಪ್ರಶ್ನೆಗೆ ಲೋಕಾಚಾರ್ಯರು ಉದಾಹರಣೆಯೊಂದಿಗೆ ಉತ್ತರಿಸುತ್ತಾರೆ.
ದೇವರ್ಗಳುಕ್ಕು ಶೇಷಮಾನ ಪುರೋಡಾಶತ್ತೈ ನಾಯಿಕ್ಕು ಇಡುಮಾಪೋಲೇ, ಈಶ್ವರ ಶೇಷಮಾನ ಆತ್ಮ ವಸ್ತುವೈ ಸಂಸಾರಿಗಳುಕ್ಕು ಶೇಷಮಾಕ್ಕುಗೈ.
ಸರಳ ಅರ್ಥ: ಆತ್ಮವನ್ನು ಸಂಸಾರಿಗಳಿಗೆ ಅಧೀನವಾಗಿ ಮಾಡುವುದು, ಯಾಗದ ಪವಿತ್ರವಾದ ಫಲವನ್ನು ನಾಯಿಗಳಿಗೆ ಕೊಡುವಂತೆ.
ವ್ಯಾಖ್ಯಾನಮ್:
ಸಂಸಾರಿಗಳಿಗೆ ಸೇವೆಕತ್ವವನ್ನು ಹೊಂದಿರುವುದು ಅತ್ಯಂತ ಕೀಳ್ ಮಟ್ಟದಲ್ಲಿರುವ ಕಾರ್ಯವು. ಈಶ್ವರನಿಗೆ ಮಾತ್ರ ಅಧೀನದಲ್ಲಿರಬೇಕಾದ ಆತ್ಮವನ್ನು ಸಂಸಾರಿಗಳಿಗೆ ಕೊಟ್ಟರೆ, ಇದನ್ನು ದೇವತೆಗಳಿಗೆಂದು ಮೀಸಲಿಟ್ಟ ಯಙ್ಞದ ಫಲವನ್ನು ಅತೀ ನೀಚವಾದ ಪ್ರಾಣಿಯಾದ ಒಂದು ನಾಯಿಗೆ ಕೊಟ್ಟಹಾಗೆ – ಯಾವುದನ್ನು ನೋಡಲು ಮತ್ತು ಮುಟ್ಟಲು ಹಿಂಜರಿಯುತ್ತೇವೋ, ಈ ಕಾರ್ಯವನ್ನು ಅತ್ಯಂತ ನಿಕೃಷ್ಟವಾಗಿ ಹೋಲಿಸಿದ್ದಾರೆ.
ಸೂತ್ರಮ್ – 63
ಪರಿಚಯ: ಲೋಕಾಚಾರ್ಯರು ಈಶ್ವರನನ್ನು ಬಿಟ್ಟು,ಅಂತಹ ಖಂಡನೀಯವಾದ, ನೀಚವಾದ ಕಾರ್ಯವಾದ ಬೇರೆಯವರಿಗೆ ಅಧೀನರಾಗಿರುವುದನ್ನು ಹೋಗಲಾಡಿಸುವುದು, ಈಶ್ವರನಿಗೆ ಅಧೀನನಾಗಿರುವುದಕ್ಕಿಂತಾ ಮುಖ್ಯವಾಗಿರುವ ಕೆಲಸ. ಇದೇ ಆತ್ಮಗಳಿಗೆ ಅತ್ಯಂತ ಅಗತ್ಯವಾಗಿರುವ ಮೊದಲ ಕರ್ತವ್ಯ.
ಭಗವತ್ ಶೇಷತ್ವತ್ತಿಲುಮ್ ಅನ್ಯ ಶೇಷತ್ವಮ್ ಕೞಿಗೈಯೇ ಪ್ರಧಾನಮ್.
ಸರಳ ಅರ್ಥ: ಅವನಿಗೆ ದಾಸ್ಯತ್ವಕ್ಕಿಂತಲೂ, ಬೇರೆಯವರಿಗೆ ದಾಸ್ಯತ್ವವನ್ನು ತೊಡೆದುಹಾಕುವುದು ಮುಖ್ಯ. ಇದನ್ನು 63ನೆಯ ಸೂತ್ರದಲ್ಲಿ ವಿವರಿಸಲಾಗಿದೆ.
ವ್ಯಾಖ್ಯಾನಮ್: ಶ್ರೀ ಮಹಾಲಕ್ಷ್ಮಿಗೆ ನಾವು ಮಾಡುವ ಸೇವೆಕ್ಕಿಂತಲೂ, (ನಮ್ಮ ದಾಸ್ಯತ್ವಕ್ಕಿಂತಲೂ) ನಮ್ಮ ಇತರರಿಗೆ ಅಧೀನರಾಗಿರುವುದನ್ನು ತೊಡೆದುಹಾಕುವುದು ಅತ್ಯಂತ ಮಹತ್ವಪೂರ್ಣವಾದ ಕೆಲಸವಾಗಿದೆ. ಇದು ಭಗವಂತನಿಗೆ ನಾವು ಸಂಪೂರ್ಣ ಅಧೀನರಾಗಿರುವುದಕ್ಕಿಂತಾ ಮುಖ್ಯವಾಗಿದೆ.
ಸೂತ್ರಮ್ – 64
ಪರಿಚಯ: ಲೋಕಾಚಾರ್ಯರು ಇದಕ್ಕೆ ಪ್ರಮಾಣವನ್ನು (ಅಧಿಕೃತ ಸಾಕ್ಷಿಯನ್ನು) ತೋರಿಸುತ್ತಾರೆ. ತಿರುಮೞಿಸೈ ಆೞ್ವಾರರ ಶ್ರೀ ಸೂಕ್ತಿಯಿಂದ ಹೇಳಿಕೆಯನ್ನು ಇಲ್ಲಿ ಅನುಮೋದಿಸಲಾಗಿದೆ.
“ಮಱಂದುಮ್ ಪುಱಮ್ ತೊೞಾ ಮಾಂದರ್” ಎಂಗೈಯಾಲೇ
ಸರಳ ಅರ್ಥ: ಏಕೆಂದರೆ, ಮರೆತು ಕೂಡಾ ಒಬ್ಬರು ಬೇರೆಯವರಿಗೆ (ಇತರ ದೇವತೆಗಳಿಗೆ) ಪೂಜಿಸಬಾರದು. ಎಂದು ಹೇಳಲಾಗಿದೆ.
ವ್ಯಾಖ್ಯಾನಮ್: ತಿರುಮೞಿಸೈ ಆೞ್ವಾರರು “ತಿರುಮ್ಬೇನ್ಮಿನ್ ಕಣ್ಡೀರ್” ನಲ್ಲಿ ಪಾಸುರದ ಮೂಲಕ ಹೇಳಿದ್ದಾರೆ. ಈ ಪಾಸುರಗಳು ಯಮ ಮತ್ತು ಅವನ ಸೇವಕರಿಗೆ (ಯಮ ದೂತರಿಗೆ) ನಡುವಿನ ಸಂಭಾಷಣೆಯ ರೀತಿಯಲ್ಲಿದೆ. ಇದರಲ್ಲಿ ಭಾಗವತರ ಗುಣಗಳನ್ನು ಹೇಳಲಾಗಿದೆ. : “ತಿರುವಡಿ ತನ್ ನಾಮಮ್ ಮಱಂಧುಮ್ ಪುಱಮ್ ತೊೞಾ ಮಾಂದರ್” – ಅವರು ಎಂಪೆರುಮಾನರ ದಿವ್ಯ ನಾಮವನ್ನು ಮರೆತರೂ (ತಕ್ಷಣದಲ್ಲಿ) ಅವನ ಭಕ್ತರು ಅನ್ಯರಿಗೆ ಶರಣು ಹೋಗುವುದಿಲ್ಲ.
ಸೂತ್ರಮ್ – 65
ಪರಿಚಯ: ಲೋಕಾಚಾರ್ಯರು ಉ ಕಾರವು ತನಗೇ ಸೇವಕತ್ವವನ್ನು ಮತ್ತು ಅನ್ಯರಿಗೆ ಸೇವಕತ್ವವನ್ನು ಹೋಗಲಾಡಿಸುತ್ತದೆ. ಎಂದು ತೀರ್ಪಿಸುತ್ತಾರೆ.
ಇತ್ತಾಲ್ ತನಕ್ಕುಮ್ ಪಿಱರ್ಕ್ಕುಮ್ ಉರಿತ್ತನ್ಱು ಎಂಗಿಱದು.
ಸರಳ ಅರ್ಥ: ಇದರಿಂದ ಆತ್ಮವು ತನ್ನ ಸ್ವಂತಕ್ಕೂ ಮತ್ತು ಬೇರೆಯವರಿಗೂ ಸ್ವತ್ತಾಗಿರುವುದನ್ನು ಉಕಾರವು ಹೋಗಲಾಡಿಸುತ್ತದೆ.
ವ್ಯಾಖ್ಯಾನಮ್: ಉ ಕಾರವು ಆತ್ಮವು ತನಗೆ ತಾನೇ ಮತ್ತು ಇತರ ಜೀವಿಗಳಿಗೆ ಶರಣಾಗುವುದನ್ನು ತಡೆಗಟ್ಟುತ್ತದೆ. ಈ ಆತ್ಮವು ತನಗೆ ಮತ್ತು ತನ್ನಂತೇ ಇರುವ ಇತರ ಆತ್ಮಗಳಿಗೆ ಸೇರಿದ್ದಲ್ಲ, ಏಕೆಂದರೆ ಆ ಇತರ ಆತ್ಮಗಳೂ ಭಗವಂತನ ಸ್ವತ್ತು .
ಸೂತ್ರಮ್ – 66
ಪರಿಚಯ: ಆದ್ದರಿಂದ ಲೋಕಾಚಾರ್ಯರು ಉಕಾರದ ಅರ್ಥವನ್ನು ಸಾರಾಂಶವಾಗಿ ವಿಶ್ಲೇಷಿಸಿದ್ದಾರೆ. ಈಗ ಅವರು ಮೂರನೆಯ ಅಕ್ಷರವಾದ ಮಕಾರವನ್ನು ವಿಮರ್ಶಿಸಲು ತೊಡಗುತ್ತಾರೆ.
ಮಕಾರಮ್ ಇರುಬತ್ತಂಜಾಮ್ ಅಕ್ಷರಮಾಯ್ ಙ್ಞಾನ ವಾಸಿಯುಮಾಯ್ ಇರುಕ್ಕೈಯಾಲೇ, ಆತ್ಮಾವೈ ಚೊಲ್ಲುಗಿಱದು.
ಸರಳ ಅರ್ಥ: ಮಕಾರವು ವರ್ಣಮಾಲೆಯಲ್ಲಿ 25ನೆಯ ಅಕ್ಷರವಾಗಿದ್ದು, ಮತ್ತು ಙ್ಞಾನದ ಸ್ವರೂಪವಾಗಿದ್ದು, ಆತ್ಮವನ್ನು ಪ್ರತಿರೂಪಿಸುತ್ತದೆ.
ವ್ಯಾಖ್ಯಾನಮ್: ಮ ಎಂಬುದು ಆತ್ಮವನ್ನು ಪ್ರತಿನಿಧಿಸುತ್ತದೆ. ಇದನ್ನು ಪಾದ್ಮೋತ್ತರ ಪುರಾಣಮ್ 254-25, 26, 27 ರಲ್ಲಿ ಅಧಿಕಾರಯುಕ್ತವಾಗಿರುವ ಹೇಳಿಕೆಗಳಲ್ಲಿ ತಿಳಿದುಬರುತ್ತದೆ.
ಭೂತಾನಿ ಚ ಕವರ್ಗೇಣ ಚವರ್ಗೇಣೋಂಧ್ರಿಯಾಣಿಚ |
ಟವರ್ಗೇಣ ತವರ್ಗೇಣ ಙ್ಞಾನ ಗಂಧಾದಯಸ್ತಥಾ।
ಮನಃ ಪಕರೇಣೈವೋಕ್ತಮ್ ಫಕಾರೇಣ ತ್ವಹಂಕೃತಿ।
ಬಕಾರೇಣ ಭಕಾರೇಣ ಮಹಾನ್ ಪ್ರಕೃತಿರುಚ್ಯತೇ ।
ಆತ್ಮಾತು ಸ ಮಕಾರೇಣ ಪಂಚವಿಂಶಃ ಪ್ರಕೀರ್ತಿತಃ॥
(ಭೂಮಿ ಮತ್ತಿತರ ಐದು ಭೂತ ವಸ್ತುಗಳು ಐದು ಅಕ್ಷರಗಳಾದ ಕ, ಖ, ಗ, ಘ, ಙ ದಿಂದ ಗುರುತಿಸಲ್ಪಡುತ್ತದೆ. ಐದು ಭೌತಿಕ ಅಂಗಗಳು ಚ ಎಂಬ ಐದು ಅಕ್ಷರಗಳಿಂದ ಗುರುತಿಸಲ್ಪಡುತ್ತದೆ. ಐದು ಸಂವೇದನಾ ಇಂದ್ರಿಯಗಳು ‘ಟ’ ಎಂಬ ಅಕ್ಷರ ವರ್ಗದಿಂದ ಗುರುತಿಸಲ್ಪಡುತ್ತವೆ. ಐದು ಭೌತಿಕ ವಸ್ತುಗಳಾದ ವಾಸನೆ ಮತ್ತಿತರ ವಸ್ತುಗಳು ‘ತ’ ಅಕ್ಷರದ ವರ್ಗದಿಂದ ಗುರುತಿಸಲ್ಪಡುತ್ತದೆ.’ ಪ’ ಎಂಬುದು ಮನಸ್ಸನ್ನು ಸೂಚಿಸಿದರೆ,’ಫ’ ಎಂಬ ಅಕ್ಷರವು ಅಹಂಕಾರವನ್ನು ಸೂಚಿಸುತ್ತದೆ.’ ಬ’ ಎಂಬುದು ಮಹಾನನ್ನು ಸೂಚಿಸಿದರೆ, ಭ ಎಂಬುದು ಪ್ರಕೃತಿಯನ್ನು ಸೂಚಿಸುತ್ತದೆ. ಜೀವ ಎಂಬ 25ನೆಯ ವಸ್ತುವು, 25ನೆಯ ಅಕ್ಷರವಾದ ‘ಮ’ ಕಾರದಿಂದ ಗುರುತಿಸಲ್ಪಡುತ್ತದೆ.)
‘ಮನ ಙ್ಞಾನೇ’ ಎಂಬ ಕೃತಿಯಿಂದ ಇದನ್ನು ಆರಿಸಲಾಗಿದೆ.
ಮನ-ಅವಬೋಧನೇ ಎಂಬ ಮೂಲದಿಂದಲೂ ಇದನ್ನು ಸಾಧಿಸಲ್ಪಟ್ಟಿದೆ.
ಪಂಚ ವಿಂಶೋಯಮ್ ಪುರುಷಃ (ಈ ಆತ್ಮವು 25ನೆಯದು)
ಪಂಚ ವಿಂಶ ಆತ್ಮಾ ಭವತಿ – ಯಲ್ಲಿ 25ನೆಯದು ಆತ್ಮವು ಎಂದು ಹೇಳಲಾಗಿದೆ.
ಯಜುರ್ ಅಷ್ಟಕಮ್ 1-2-47 ರಲ್ಲಿ 25ನೆಯ ವಿಷಯವು ಆತ್ಮದ್ದಾಗಿದೆ.
ವಿಙ್ಞಾತಾರಮರೇ ಕೇನ ವಿಜಾನೀಯಾತ್ – ಇದು ನಮಗೆ ತಿಳಿದುಕೊಳ್ಳಲು ಪೂರಕವಾಗಿದೆ.
ಭ್ರೂಧಾರಣ್ಯಕ 6-5-15 ರಲ್ಲಿ (ಓ ಶಿಷ್ಯ! ಯಾವ ಮೂಲಕ ನೀನು ಜೀವನನ್ನು ತಿಳಿಯಲು ಸಾಧ್ಯವಾಯಿತು, ಯಾರು ಆ ಜ್ಞಾನಿ?)
ಆದ್ದರಿಂದ ಮಕಾರವು ಜೀವ, ಆತ್ಮವನ್ನು ಸೂಚಿಸುತ್ತದೆ. ಅದು ಙ್ಞಾನಮಯವಾಗಿರುತ್ತದೆ. ಮತ್ತು ಙ್ಞಾನದ ಗುಣವನ್ನು ಹೊಂದಿರುತ್ತದೆ.
ಸೂತ್ರಮ್ – 67
ಪರಿಚಯ: ಲೋಕಾಚಾರ್ಯರು ಮುಖ್ಯವಾಗಿ ಮೂರು ರೀತಿಯ ಆತ್ಮಗಳನ್ನು ಗುರುತಿಸುತ್ತಾರೆ.
ಇದು ತಾನ್ ಸಮಷ್ಠಿ ವಾಚಕಮ್.
ಸರಳ ಅರ್ಥ: ಇದು ಒಂದು ಗುಂಪು ವಾಚಕ ನಾಮ ಪದ.
ವ್ಯಾಖ್ಯಾನಮ್: ಮಕಾರ ಎಂಬುದು ಎಲ್ಲಾ ರೀತಿಯ ಆತ್ಮಗಳನ್ನು ಸಂಬೋಧಿಸುತ್ತದೆ.
ಸೂತ್ರಮ್ – 68
ಪರಿಚಯ: ಒಂದೇ ಪದವು ಹೇಗೆ ಸಮಷ್ಠಿ ವಾಚಕವಾಗುತ್ತದೆ? ಎಂಬ ಗೊಂದಲವುಂಟಾಗುತ್ತದೆ.
ಜಾತ್ಯೇಕ ವಚನಮ್.
ಸರಳ ಅರ್ಥ: ಆ ಪದವು ಪೂರ್ತಿ ವರ್ಗದ ಜೀವಿಗಳನ್ನು ಪ್ರತಿನಿಧಿಸುತ್ತದೆ.
ವ್ಯಾಖ್ಯಾನಮ್: ಒಬ್ಬ ವ್ಯಕ್ತಿಯು ಭತ್ತದ ತೆನೆಯನ್ನು ನೋಡಿ, ಇದು ಒಂದು ಭತ್ತದ ತೆನೆ ಎಂದು ಹೇಳುತ್ತಾನೆ. ಆ ಪದವು ಪೂರಾ ಭತ್ತವನ್ನು ಪ್ರತಿನಿಧಿಸುತ್ತದೆ. (ಒಂದೇ ಒಂದು ಭತ್ತದ ಕಣವನ್ನಲ್ಲ.) ಅದೇ ರೀತಿ, ಆತ್ಮ ಎಂದರೆ ಆತ್ಮಗಳ ವರ್ಗವನ್ನು ಪ್ರತಿನಿಧಿಸುತ್ತದೆ.
ಸೂತ್ರಮ್ – 69
ಪರಿಚಯ: ಈ ಮಕಾರದಿಂದ ಯಾವ ರೀತಿಯ ಆತ್ಮವನ್ನು ಸಂಬೋಧಿಸುತ್ತದೆ?
ಇತ್ತಾಲ್, ಆತ್ಮಾಜ್ಞಾತಾವೆನ್ಱು ದೇಹತ್ತಿಲ್ ವ್ಯಾವೃತ್ತಿ ಸೊಲ್ಲಿಱ್ಱಾಯಿಱ್ಱು.
ಸರಳ ಅರ್ಥ: ಇದರಿಂದ, ಆತ್ಮವು ಙ್ಞಾನಮಯ ಮತ್ತು ಅದು ಶರೀರದಿಂದ ವಿಭಿನ್ನವಾಗಿದೆ ಎಂದು ಸಾಧಿಸಲಾಗಿದೆ.
ವ್ಯಾಖ್ಯಾನಮ್: ಆದ್ದರಿಂದ, 25ನೆಯ ಅಕ್ಷರದಿಂದ ಸೂಚಿಸಲ್ಪಟ್ಟ ಆತ್ಮವು ಙ್ಞಾನದ ಸಂಕೇತವಾಗಿದೆ ಮತ್ತು ಪರಿಗ್ರಹಿಕೆಯಿಲ್ಲದ ಜಡವಾದ ಶರೀರದಿಂದ ವಿಭಿನ್ನವಾಗಿದೆ ಎಂದು ಈ ಮಕಾರವು ಸೂಚಿಸುತ್ತದೆ.
ಸೂತ್ರಮ್ – 70
ಪರಿಚಯ: ಜನರು ” ನಾನು ಗಂಡು”,” ನಾನು ದಪ್ಪನಾಗಿದ್ದೇನೆ”, “ನಾನು ಸಣ್ಣ” ಎಂದು ಶರೀರವನ್ನು ಆತ್ಮಕ್ಕೆ ಹೋಲಿಸುತ್ತಾರೆ. ನಾವು ಹೇಗೆ ಆತ್ಮವನ್ನು ಶರೀರದಿಂದ ಬೇರ್ಪಡಿಸುವುದು? ಎಂಬ ಗೊಂದಲಕ್ಕೆ ಲೋಕಾಚಾರ್ಯರು ಹೇಳುತ್ತಾರೆ, “ತತ್ತ್ವಶೇಕರಮ್” ಒಂಬ ಗ್ರಂಥದಲ್ಲಿ ಆತ್ಮದ ಮತ್ತು ಶರೀರದ ವ್ಯತ್ಯಾಸವನ್ನು ವಿವರಿಸಲಾಗಿದೆ.
ದೇಹತ್ತಿಲ್ ವ್ಯಾವೃತ್ತಿ ತತ್ತ್ವಶೇಕರತ್ತಿಲೇ ಸೊನ್ನೋಮ್.
ಸರಳ ಅರ್ಥ: “ತತ್ತ್ವಶೇಕರಮ್” ಎಂಬ ಕೃತಿಯಲ್ಲಿ ಆತ್ಮಕ್ಕೂ ಮತ್ತು ಶರೀರಕ್ಕೂ ಇರುವ ವ್ಯತ್ಯಾಸವನ್ನು ವಿವರವಾಗಿ ಹೇಳಿದ್ದೇವೆ. ಎಂದು ಹೇಳುತ್ತಾರೆ.
ವ್ಯಾಖ್ಯಾನಮ್: ನಾವು ತತ್ತ್ವಶೇಕರ ಎಂಬ ಕೃತಿಯಲ್ಲಿ ಬಹಳ ಉದಾಹರಣೆ ಮತ್ತು ಕಾರಣಗಳಿಂದ ಆತ್ಮದ ಮತ್ತು ದೇಹದ ನಡುವಿನ ವ್ಯತ್ಯಾಸವನ್ನು ದೇಹದ ಅನಾತ್ಮತ್ವಮ್ (ಆತ್ಮದಿಂದ ಬೇರೆಯಾಗಿರುವುದನ್ನು) ನನ್ನು ವಿವರವಾಗಿ ಹೇಳಲಾಗಿದೆ.
ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ.
ಮೂಲ : https://granthams.koyil.org/2020/06/21/mumukshuppadi-suthrams-60-70-english/
ಆರ್ಕೈವ್ ಮಾಡಲಾಗಿದೆ – https://granthams.koyil.org
ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org