ಅನಧ್ಯಯನ ಕಾಲ ಮತ್ತು ಅಧ್ಯಯನ ಉತ್ಸವ

ಶ್ರೀಃ  ಶ್ರೀಮತೇ ಶಠಕೋಪಾಯ ನಮಃ  ಶ್ರೀಮತೇ ರಾಮಾನುಜಾಯ ನಮಃ  ಶ್ರೀಮದ್ವರವರಮುನಯೇ ನಮಃ  ಶ್ರೀ ವಾನಾಚಲಮಹಾಮುನಯೇ ನಮಃ

ನಮ್ಮ ಶ್ರೀವೈಷ್ಣವ ಸಂಪ್ರದಾಯ ಉಭಯ ವೇದಾಂತ ಸಿದ್ಧಾಂತವನ್ನು  ಆಧರಿಸಿದೆ .ಉಭಯ ಅಂದರೆ  “ಎರಡು” (ಎರಡು ಅಂಶಗಳು ) ಮತ್ತು ವೇದಾಂತಮ್ ಅಂದರೆ  ವೇದದ ಕೊನೆಯ (ಎಲ್ಲದಕ್ಕೂ ಮೇಲೆ) ಅಂಶ. ನಮ್ಮ ಸಂಪ್ರದಾಯದಲ್ಲಿ  ಸಂಸ್ಕೃತ ವೇದ-(ಋಗ್ , ಯಜುರ್, ಸಾಮ ಮತ್ತೇ ಅಥರ್ವಣ ವೇದ) ಮತ್ತು ವೇದಾಂತಮ್ (ಉಪನಿಷಧಗಳು) ಇದರ  ಜೊತೆಯಲ್ಲಿ ದ್ರಾವಿಡ ವೇದ- ದಿವ್ಯ ಪ್ರಬಂಧಗಳು  ಮತ್ತು ವೇದಾಂತಮ್ (ವ್ಯಾಕರಣಗಳು ) ಇವೆ. ಇವೆರಡು ಸಿದ್ಧಾಂತಗಳು ಕಣ್ಣಂತೆ  ಮುಖ್ಯವಾದದ್ದು  – ಎರಡು ಸಮವಾದ ಪ್ರಾಮುಖ್ಯತೆ ಕೊಂಡಿದೇ. ಇನ್ನೂ ಎಂಪೆರುಮಾನ್ ರವರ ದೈವೀಕ ಆಶೀರ್ವಾದದಿಂದ ಕಳಂಕವಿಲ್ಲದ ಅಪಾರ ಜ್ಞಾನ ಕೊಂಡ  ಆಳ್ವಾರ್ಗಳು  ರಚಿಸಿರುವ ೪೦೦೦ ಪದ್ಯಗಳಿರುವ ದಿವ್ಯ ಪ್ರಭಂದಲ್ಲಿ ಸಂಸ್ಕೃತ ವೇದಾಂತದ ಮೂಲತತ್ವವನ್ನು ಎಲ್ಲರ ಉನ್ನತಿಗಾಗಿ ಸಂಪೂರ್ಣ ಗಮನ ನೀಡಲಾಗಿದ್ದು ಮತ್ತು  ಅದರ ಮೇಲೆ ನಮಗೆ ಹೆಚ್ಚು ಆಕರ್ಷಣೆ ಇದೆ.

ಅಧ್ಯಯನವಂದರೆ ಅಭ್ಯಾಸ ಮಾಡುವದು, ಕಲಿಯುವುದು , ಪುನರಾವರ್ತಿಸುವುದು , ಓದುವುದು. ವೇದವನ್ನು ಆಚಾರ್ಯರಿಂದ ಕೇಳಿ ಪುನರಾವರ್ತಿಸುವದರಿಂದ ಕಲಿಯುವುದು. ವೇದ ಮಂತ್ರಗಳನ್ನು ನಾವು ದಿನಚರಿ ನಿತ್ಯ ಅನುಷ್ಠಾನದ ಸಮಯದಲ್ಲಿ ಹೇಳಬೇಕು.   ಅನಧ್ಯಯನಂ ಅಂದರೆ ಓದದೇ ಅಥವ ಪಠಿಸದೆ ಇರುವುದು.  ವರ್ಷದ ಹಲವು ಕಾಲಗಳಲ್ಲಿ ವೇದವನ್ನು ಪಠಿಸುವುದಿಲ್ಲ .ಈ ಸಮಯವನ್ನು ನಮ್ಮ ಶಾಸ್ತ್ರದ  ಇತರ ಭಾಗವಾದ ಸ್ಮ್ರಿತಿ, ಇತಿಹಾಸ, ಪುರಾಣ ಇತ್ಯಾದಿ  ಕಲಿಯುವುದಕ್ಕಾಗಿ ಉಪಯೋಗ ಮಾಡಬಹುದು. ಪ್ರತಿ ತಿಂಗಳಲ್ಲಿ ಬರುವ ಅಮಾವಾಸ್ಯ, ಪೌರ್ಣಮಿ, ಪ್ರಥಮೈ ಇತ್ಯಾದಿ ದಿನಗಳಲ್ಲಿ ವೇದವನ್ನು ಓದುವುದು ಹಿತವಲ್ಲಾ . ದ್ರಾವಿಡ ವೇದಮ್ ಅನ್ನುವ ೪೦೦೦ ದಿವ್ಯಪ್ರಬಂಧಗಳನ್ನು ಸಂಸ್ಕೃತ ವೇದಕ್ಕೆ ಸಮವಾಗಿ ಭಾವಿಸುವ  ದಿವ್ಯ ಪ್ರಬಂಧವನ್ನು ಒಂದು ವರ್ಷಕಾಲದಲ್ಲಿ ಕೆಲುವು ದಿನಗಳು ಓದದೇ ಇರುವುದು ಮತ್ತೆ ಹೇಳದೇ ಇರುವುದು ಸಂಪ್ರದಾಯ.ನಾವು ಈಗ ದಿವ್ಯ ಪ್ರಭಂದಗಳ ಅನಧ್ಯಯನ ಕಾಲದ ಬಗೆ ಸ್ವಲ್ಪ ಜ್ಞಾನವನ್ನು ಅಭಿವೃದ್ಧಿ ಮಾಡೋಣ.

ಪ್ರತಿ ವರ್ಷ ಅಧ್ಯಯನ ಉತ್ಸವ ದಿನಗಳಲ್ಲಿ ಅನಧ್ಯಯನ ಕಾಲ ಸೇರಿಕೊಳ್ಳುತ್ತದೆ .ಅಧ್ಯಯನ ಉತ್ಸವನ್ನು ನಾವು  ನಮ್ಮಾಳ್ವಾರ್ ಪರಮಪದವನ್ನು, ಅಡೆಯುವ ದಿನವನ್ನು ವೈಭವದಿಂದ ಕೊಂಡಾಡುತ್ತೇವೆ.

ಶ್ರೀವೈಷ್ಣವ ಸಂಪ್ರದಾಯದಲ್ಲಿ ಅಧ್ಯಯನ ಉತ್ಸವ ಮತ್ತು ಅನಧ್ಯಯನ ಕಾಲದ ಪುರಾಣ ಒಂದಕ್ಕೆ ಸಂಬಂಧಿಸಿದೆ. ಈ ಪದ್ದತ್ತಿಯ ಬಗ್ಗೆ ವಿಸ್ತಾರವಾಗಿ “ಕಲಿಯನ್ ಅರುಳಪಾಡು ” ಎನ್ನುವ ಗ್ರಂಥದಲ್ಲಿ  (https://srivaishnava-literature.blogspot.in/p/kaliyan-arul-padu/)”ಪೆರಿಯವಾಚಾಮ್ ಪಿಳ್ಳೈ “ಅವರು ರಚಿಸಿದ್ದಾರೆ .(ಪುತ್ತೂರು  ಕೃಷ್ಣಸ್ವಾಮಿ ಅಯ್ಯಂಗಾರ್ ಅವರು ಪ್ರಕಟಿಸಲಾಗಿರುವ “ಪೆರಿಯವಾಚಾನ್ ಪಿಳ್ಳೈ ಶ್ರೀ ಸೂಕ್ತಿಮಾಲಾ ಮಲರ್ – 1” ಪುಸ್ತಕದ ಒಂದು ಭಾಗದಲ್ಲಿ ಕಾಣಬಹುದು) , ನಾವು ಇವಾಗ ಅಧ್ಯಯನ ಉತ್ಸವ ಕೊಂಡಾಡುವ ವೈಭವದ ಸಾರಾಂಶವನ್ನು ಈ ಪುಸ್ತಕದಲ್ಲಿ ಹೇಳಿರುವುದನ್ನು ಸ್ವಲ್ಪ ನೋಡೋಣ.

  • ಶ್ರೀಮನ್ನಾರಾಯಣ ತನ್ನ ಅಪಾರವಾದ ಕಾರುಣ್ಯದಿಂದ  ನಮ್ಮ ಎಲ್ಲರ ಉನ್ನತಿಗಾಗಿ ಭೂಲೋಕದಲ್ಲಿ  ವಿವಿಧ ಅರ್ಚಾವತಾರಗಳ  ರೂಪವನ್ನು ಕೊಂಡಿದ್ದಾರೆ . ಇಂತಹ ಪ್ರಮುಖವಾದ  ಅರ್ಚಾವತಾರ  ಕ್ಷೇತ್ರಗಳಾದ , ಕೋಯಿಲ್ ( ಎನ್ನುವ ಶ್ರೀರಂಗಂ ) , ತಿರುಮಲೆ ( ಎನ್ನುವ ತಿರುವೆಂಗಡಂ)  ,ಪೆರುಮಾಳ್ ಕೋಯಿಲ್ ( ಎನ್ನುವ ಕಾಂಚಿಪುರಂ)ನಲ್ಲಿ  ಹಾಗು ಇತ್ಯಾದಿ ದಿವ್ಯದೇಶಗಳಲ್ಲಿ ನಾವೆಲ್ಲರೂ  ಸುಲಭವಾಗಿ ಅವರನ್ನು ದರ್ಶನ ಮಾಡಿ  ಸೇವೆಯೆನ್ನು ಸಲ್ಲಿಸಿ  ಅನುಗ್ರಹಕ್ಕೆ ಪಾತ್ರವಾಗಬಹುದು.

     

  • ತಿರುಮಂಗೈ  ಆಳ್ವಾರ್ (ಆಳ್ವಾರ್ಗಳಲ್ಲಿ   ಕೊನೆಯವರು) ಭಗವಂತನ ಅಪಾರ ಕರುಣೆಯಿಂದ ಸುಧಾರಿಸದ  ಮೇಲೆ ಹಲವಾರು ಅರ್ಚಾವತಾರ ಪೆರುಮಾನನ್ನು ಪೂಜಿಸಿದರು. ಕಡೆಗೇ ಶ್ರೀರಂಗಂನಲ್ಲಿ  ವಾಸ ಮಾಡಿ ನಮ್ ಪೆರುಮಾಳ್ ಗೆ ಬಹಳ ಅದ್ಭುತವಾದ ಕೈಂಕರ್ಯಗಳನ್ನು ಮಾಡಿದರು.   ಅವರು ತನ್ನನ್ನು “irunthamizh nUl pulavan mangaiyALan” (irunthamizh nUl – thiruvAimozhi, pulavan – ಕವಿ , ತಿರುವಾಯ್ಮೋಳಿನಲ್ಲಿ ಪ್ರವೀಣರಾದವರು , ತಿರುಮಂಗೈಆಳನ್ -ತಿರುಮಂಗೈ  ಆಳ್ವಾರ್  )   ಮತ್ತು ಅವರು  ಆಳ್ವಾರ್ಗಳ  ಪಾಶುರದ ಮೇಲೆ ಮಹೋನ್ನತ ಪ್ರೀತಿ ಇರುವದರಿಂದ ಪಾಶುರಗಳನ್ನು ನಿರಂತರವಾಗಿ ಪಠಿಸುತ್ತಿದ್ದರು .

 

  • ಒಂದು ಸಲ ತಿರುಕಾರ್ತಿಗೈ ದಿನದಂದು (ಕಾರ್ತಿಗೈ ದೀಪಂ ದಿನ ಸಾಧಾರಣವಾಗಿ ಕಾರ್ತಿಗೈ ತಿಂಗಳಿನಲ್ಲಿ , ಕಾರ್ತಿಗೈ ನಕ್ಷತ್ರ ದಿನದಂದು , ಪೌರ್ಣಮಿ ತಿಥಿ ಒಂದಾಗಿ ಬರುವುದು ) ನಮ್ ಪೆರುಮಾಳ್ ಶ್ರೀದೇವಿ ಭೂದೇವಿ ಸಮೇತರಾಗಿ ತಿರುಮಂಜನಂ ಸೇವೆಯ ನಂತರ ಭಕ್ತರ ಸಭೆಯಲ್ಲಿ ನಡುವೆ ಕುಳಿತಿದ್ದರು . ತಿರುಮಂಗೈ ಆಳ್ವಾರ್ ನಮ್ ಪೆರುಮಾಳ್ ಎದುರಿಗೆ “ತಿರುನೆಡುಂಥಾಂಡಕಮ್” (thirunedunthandagam)  ರಚಿಸಿ ದೈವೀಕ ಸಂಗೀತದೊಂದಿಗೆ ಅದನ್ನು ಹಾಡುತ್ತಾರೆ. ಆಳ್ವಾರ್ ರವರು ತಿರುವಾಯ್ಮೋಳಿ   ಇಂದ ಕೆಲವು ಪಾಶುರಗಳನ್ನು ದೈವೀಕ ಸಂಗೀತದೊಂದಿಗೆ ಹಾಡಿದರು.

     

  • ನಮ್ ಪೆರುಮಾಳ್ ಇಂಥ ಮಧುರವಾದ ಪ್ರಬಂಧ ಸಂಗೀತವನ್ನು ಕೇಳಿ ಭಾವಪರವಶವರಾಗಿ , ತಿರುಮಂಗೈ ಆಳ್ವಾರ್ ಅವರ  ಬಯಕೆ  ಏನೆಂದು ಕೇಳಿದರು .

  • ತಿರುಮಂಗೈ  ಆಳ್ವಾರ್ ಅವರ ಎರಡು ಬಯಕೆಯನ್ನು ಪೂರೈಸಲು ಕೇಳಿದರು.

    • ಎಂಪೆರುಮಾನ್ ರವರು   ಅಧ್ಯಯನ  ಉತ್ಸವವನ್ನು ಮಾರ್ಗಜ್ಹಿ ತಿಂಗಳಲ್ಲಿ  ಬರುವ ಶುಕ್ಲ ಪಕ್ಷದ ಏಕಾದಶಿಯಲ್ಲಿ (ವೈಕುಂಠ ಏಕಾದಶಿ  ) ಆನಂದವಾಗಿ  ಅನುಭವಿಸುವಾಗ ,ತಿರುವಾಯ್ಮೋಳಿ    ಪೂರ್ಣವಾಗಿ ಕೇಳಬೇಕು.

    • ತಿರುವಾಯ್ಮೋಳಿಯನ್ನು (ಸಂಸ್ಕೃತ ) ವೇದಕ್ಕೆ ಸಮಾನವಾಗಿ ಅಧಿಕೃತವಾಗಿ ಘೋಷಿಸಬೇಕು.

  • ಎಂಪೆರುಮಾನ್  ಸಂತೋಷವಾಗಿ ಒಪ್ಪಿಕೊಂಡು ಆನಂದವಾಗಿ ಎರಡೂ ಆಸೆಗಳನ್ನು ನೀಡಿದರು.

  • ಒಡನೆಯೇ , ಎಂಪೆರುಮಾನ್ ತನ್ನ  ಸಭೆಯನ್ನು ಕುರಿತು,  “ಕಲಿಯನ್ ದಿವ್ಯಪ್ರಬಂಧವೆನ್ನುವ ದೇವಗಾನವನ್ನು  ಸುಮಾರು ಸಮಯಗಳಾಗಿ ಹಾಡುತ್ತಿದ್ದಾರೆ , ಅವರ ಗಂಟಲಿಗೆ ತೊಂದರೆಯಾಗಬಹುದು. ಅದಕ್ಕಾಗಿ ತಿರುಕಾರ್ಥಿಗೈ ದೀಪದ  ಸಮಯದಲ್ಲಿ ತನ್ನ ದೇಹದ ಮೇಲೆ ಅನ್ವಯಿಸಿದ ತೈಲದ ಉಳಿದ ಎಣ್ಣೆಯನ್ನು ಕಲಿಯನಿಗೆ ಕೊಡಬೇಕು “ಎಂದು ಆದೇಶ ನೀಡಿದರು.

  • ನಂತರ  ಆಳ್ವಾರ್  ತಿರುನಗರಿಯಲ್ಲಿ ಅರ್ಚ ರೂಪವಾಗಿ ಇರುವ ನಮ್ಮಾಳ್ವಾರ್  ರವರಿಗೆ ಸಂದೇಶವನ್ನು ಕಳಿಸಿದ್ದರು. ಎಂಪೆರುಮಾನವರ ಸಂದೇಶವನ್ನು ಕೇಳಿ ನಮ್ಮಾಳ್ವಾರ್  ಶೀಘ್ರದಲ್ಲೇ ಶ್ರೀರಂಗಂ ಬಂದರು.

  • ತಿರುಮಂಗೈ  ಆಳ್ವಾರ್ ರವರು ವೈಕುಂಠ  ಏಕಾದಶಿ ದಿನದಂದು  ತಿರುವಾಯ್ಮೋಳಿಯನ್ನು ೧೦ ದಿನಗಳು ಪಾರಾಯಣ ಮಾಡಲು  ವ್ಯವಸ್ಥೆಯನ್ನು  ಮಾಡಿದ್ಧರು.ಮುಂಜಾನೆಯಲ್ಲಿ ವೇದ ಪಾರಾಯಣವಾಗುತ್ತದೇ,  ರಾತ್ರಿಯಲ್ಲಿ ತಿರುವಾಯ್ಮೋಳಿ  ಪಾರಾಯಣಾವಾಗುತ್ತದೇ .ಅಂತಿಮ ದಿನದಂದು ನಮ್ಮಾಳ್ವಾರ್  ತಿರುವಡಿ ತೊಳುದಲ್   ( ನಮ್ಮಾಳ್ವಾರ್ ಎಂಪೆರುಮಾನ ಪದ್ಮ ಪಾದವನ್ನು ತನ್ನ ತಲೆಯೊಂದಿಗೆ  ಸ್ಪರ್ಷಿಸುವ ) ವೈಭವ ಮಹಾನ್ ಉತ್ಸಾಹದಿಂದ ಜಾರಿಗೊಳಿಸಲಾಗಿದೆ.ಈ ವೈಭವ ಕಳಿದ ಮೇಲೆ ನಮ್ಮಾಳ್ವಾರ್ ತಿರುನಗರಿಗೆ ಹಿಂದಿರುಗುತ್ತಾರೆ .ಈ ಉತ್ಸವನ್ನು ಪ್ರತಿ ವರುಷವು ಕೊಂಡಾಡಲಾಗಿದೆ.

  • ಸ್ವಲ್ಪ ಸಮಯದ ನಂತರ, ಕಲಿಯುಗದ ಸ್ವಭಾವದಿಂದಾಗಿ, ವಿಷಯಗಳು ಕ್ಷೀಣಿಸುತ್ತಿವೆ, ದಿವ್ಯ ಪ್ರಭಂಧಗಳು ಕಳೆದುಹೋಗುತ್ತವೆ ಮತ್ತು ಆಳ್ವಾರ್  ಸಹ ಶ್ರೀರಂಗಂಗೆ ಭೇಟಿ ನೀಡುವುದಿಲ್ಲ.

  • ನಾಥಮುನಿಗಳ್ ಜನನ ತೆಗೆದುಕೊಳ್ಳುತ್ತಾರೆ  ಮತ್ತು ಅಂತಿಮವಾಗಿ ಭಗವಂತನ ಅನುಗ್ರಹದಿಂದ, ಅವರು ಆಳ್ವಾರ್  ಮತ್ತು  ದಿವ್ಯಪ್ರಭಂಧಮ್ ಬಗ್ಗೆ ಕೇಳುತ್ತಾರೆ. ಅವರು ಆಳ್ವಾರ್  ತಿರುನಗರಿಗೆ ಭೇಟಿ ನೀಡುತ್ತಾರೆ, ಮಧುರಕವಿ  ಆಳ್ವಾರ್ ಅವರ  ಕಣ್ಣಿನುಂಚಿರುಥಾಂಬು ( ನಮ್ಮಾಳ್ವಾರ್  ಅನ್ನು ವೈಭವೀಕರಿಸುತ್ತಾರೆ) ಮತ್ತು ನಮ್ಮಾಳ್ವಾರ್ ಅನುಗ್ರಹದಿಂದ ಅವರು 4000 ದಿವ್ಯಪ್ರಭಂಧಮ್ ಮತ್ತು ಅವುಗಳ ಅರ್ಥಗಳನ್ನು ಕಲಿಯುತ್ತಾರೆ.

     

  • ನಂತರ ಅವರು ತನ್ನ ಶಿಷ್ಯರ ಮೂಲಕ ಕಲಿಸುತ್ತಾರೆ  ಮತ್ತು ಶ್ರೀರಂಗ ಕ್ಷೇತ್ರಕ್ಕೆ ಆಗಮಿಸುತ್ತಾರೇ ಮತ್ತು ಪೂರ್ಣ  ಪಕ್ವವಾಗಿ  ಅಧ್ಯಯನ ಉತ್ಸವವನ್ನು ಪುನಃ ಸ್ಥಾಪಿಸುತ್ತಾರೇ . ಎಲ್ಲಾ  ಆಳ್ವಾರ್ಗಳು ಮತ್ತು 4000 ದಿವ್ಯ ಬಂಧಗಳ  ವೈಭವಗಳನ್ನು ನಮ್ಮಾಳ್ವಾರ್  ಮುಖೇನ  ಅರ್ಥಮಾಡಿಕೊಂಡು ನಂತರ, ನಾಥಮುನಿಗಳ್ ಮತ್ತೊಮ್ಮೆ ನಮ್ಮಾಳ್ವಾರ್  ಅವರ ಭೇಟಿಗೆ ವ್ಯವಸ್ಥೆ ಮಾಡುತ್ತಾರೆ.

  • ತಿರುವಾಯ್ಮೊಳಿಗೆ ವೇದ ಸಾಮ್ಯಮ್ ಸಮಾನವೆಂದು ಎಂಪೆರುಮಾನ್ ಅವರು ಘೋಷಿಸಿದರಿಂದ , ವೇದದ ಅನಧ್ಯಯನ ಕಾಲದಂತೆ .

  • ಎಂಪೆರುಮಾನ್ ರು ತಿರುವಾಯ್ಮೊಳಿಗೆ ವೇದಕ್ಕೆ ಸಮಾನವೆಂದು ಘೋಷಿಸಿದರು. ವೇದಕ್ಕೆ ಅನಧ್ಯಯನ ಕಾಲವಿರುವ ಹಾಗೆ ತಿರುವಾಯ್ಮೊಳಿಗೆ ಮತ್ತೆ ಇತರ ಪ್ರಭಂದಗಳಿಗೂ ಅನಧ್ಯನ ಕಾಲ ಸ್ಥಾಪಿಸಿಧರು. ದಿವ್ಯ ಪ್ರಭಂದಗಳಿಗೆ  ತಿರುಕಾರ್ಥಿಗೈ ದೀಪದ ದಿನದಿಂದ  ,ಅನಧ್ಯಯನ ಕಾಲಂ ಪ್ರಾರಂಭವಾಗುತ್ತದೆ ಮತ್ತು ಅಧ್ಯಯನ ಉತ್ಸವಂ (ದೇವಾಲಯಗಳಲ್ಲಿ) ಪ್ರಾರಂಭವಾಗುವ ಮುಂಚೆ ಮುಗಿಯುತ್ತದೆ. ಅಧ್ಯಯನ (ವಾಚನ) ಕಾಲ ಅಧ್ಯಯನ ಉತ್ಸವದ ಮೊದಲ ದಿನದಲ್ಲಿ ಪ್ರಾರಂಭವಾಗುತ್ತದೆ ಮತ್ತು ತಿರುಕಾರ್ಥಿಗೈ ದೀಪ  ದಿನದಂದು  ಕೊನೆಗೊಳ್ಳುತ್ತದೆ.

  • ಭಗವಂತನ ಆದೇಶದ ಮೂಲಕ ನಮ್ಮಾಳ್ವಾರ್ ಅವರಿಗೆ  ಶ್ರೀರಂಗಂಗೆ ಬರಲು ಒಂದು ಸಂದೇಶವನ್ನು ಕಳುಹಿಸಲಾಗುವುದು . ಹೀಗೆ ಅವರು (ಮರು) ಸ್ಥಾಪಿಸುತ್ತಾರೆ. ಈ ಸಂದೇಶವು ಶ್ರೀವೈಷ್ಣವರಿಗೆ  ಸಹ ದಿವ್ಯ ಪ್ರಬಂಧಗಳನ್ನು ಪಠಿಸುವುದನ್ನು ತಡೆಹಿಡಿಯಲು ಸೂಚಿಸುತ್ತದೆ, ಅವರು ನಿರಂತರವಾಗಿ ಪಾಶುರಗಳನ್ನು ಮತ್ತು ಅರ್ಥಗಳನ್ನು ಅವರ ಹೃದಯದಲ್ಲಿ  ಧ್ಯಾನ ಮಾಡಬೇಕು.    (ಕೇವಲ ಜೋರಾಗಿ ಓದುವುದು ಮಾತ್ರ ಅನುಮತಿ ಇಲ್ಲಾ  – ಧ್ಯಾನ / ಮರುಪರಿಶೀಲನೆಯು ಯಾವಾಗಲೂ ಅಗತ್ಯವಾಗಿರುತ್ತದೆ).

  • ಅವರು ಎಂಪೆರುಮಾನ್ ತಿರುಕಾರ್ಥಿಗೈ  ದೀಪದ ದಿನದಂದು ಅಭಿಷೇಕಿಸಲಾದ ಎಣ್ಣೆಯ ಅವಶೇಷಗಳನ್ನು ನಮ್ಮಾಳ್ವಾರ್ ಗಂಟಲಿಗೆ (ಎಲ್ಲ ಆಳ್ವಾರ್ ಗೆ  ನಾಯಕರು), ಕಲಿಯನ್ ಮತ್ತು ಇತರ  ಆಳ್ವಾರ್ಗಳು  ಮತ್ತು ಅದರ ಅವಶೇಷಗಳನ್ನು ಶ್ರೀವೈಷ್ಣವರಿಗೆ ನೀಡಲು ವ್ಯವಸ್ಥೆ ಮಾಡಿದರು.

  • ನಮ್ಮಾಳ್ವಾರ್ ಅವರ ತಿರುವಿರುತ್ತಮ್ ,ತಿರುವಾಸಿರಿಯಮ್, ಪೇರಿಯ ತಿರುವಂದಾದಿ ಮತ್ತು ತಿರುವಾಯ್ಮೊಳಿಗೆ ಇವುಗಳು ನಾಲ್ಕು ವೇದಗಳಿಗೆ ಸಮನಾಗಿವೆ ಮತ್ತು  ಆಳ್ವಾರ್ಗಳ ದಿವ್ಯ ಪ್ರಭಂದಗಳು ವೇದಗಳಿಗೆ ಅಂಗಗಳು  ( ಭಾಗಗಳು – ಶಿಕ್ಷ , ವ್ಯಾಕರಣಮ್, ನಿರುಕ್ತಮ್ , ಚಂಧಸ್ , ಜ್ಯೋತಿಷಮ್ ) ಮತ್ತು ಉಪ ಉಪಾಂಗಕ್ಕೆ ( ಉಪ ಭಾಗಗಳಾಗಿ) ಸಮನಾಗಿವೆ. ಈ ಪ್ರಭಂಧಗಳು ತಿರುಮಂತ್ರಮ್, ದ್ವಯಮ್ ಮತ್ತು ಚರಮ ಶ್ಲೋಕಗಳ  ದೈವೀಕ ಅರ್ಥಗಳನ್ನು ವಿವರಿಸುತ್ತವೆ. ಇದಲ್ಲದೆ,  ನಾಥಮುನಿಗಳು   ಅಧ್ಯಯನ ಉತ್ಸವವನ್ನು ದೃಢಪಡಿಸಿದರು ಹಾಗೆಯೇ

    • ಅಧ್ಯಯನ ಉತ್ಸವದ ಮೊದಲ 10 ದಿನಗಳಲ್ಲಿ  ಮುದಲಾಯಿರಮ್ (ವೈಕುಂಠ ಏಕಾದಶಿಯಾ ಮೊದಲು ಪ್ರಾರಂಭವಾಗುವ ಅಮಾವಾಸ್ಯ)  (ತಿರುಪಲ್ಲಾಂಡು,  ಪೆರಿಯಾಳ್ವಾರ್ ತಿರುಮೊಳಿ  , ನಾಚ್ಚಿಯಾರ್ ತಿರುಮೊಳಿ , ತಿರುಚಂದ ವೃತ್ತಂ , ತಿರುಮಾಲೈ, ತಿರುಪ್ಪಳ್ಳಿ ಎಳುಚ್ಚಿ , ಅಮಲನಾದಿಪಿರಾನ್ ,ಕಣ್ಣಿನುಂಚಿರುಥಾಂಬು) ,ಪೆರಿಯ ತಿರುಮೊಳಿ , ತಿರುಕ್ಕುರುಥಾಂಡಕಮ್ , ತಿರುನೆಡುಂಥಾಂಡಕಮ್  ಓದಲಾಗುತ್ತದೆ.

    • ವೈಕುಂಠ ಏಕಾದಶಿಯ ದಿನದಲ್ಲಿ, ತಿರುವಾಯ್ಮೊಳಿ  ತೊಡಕ್ಕಮ್ (ಪ್ರಾರಂಭ) ನಡೆಯುತ್ತದೆ.

    • ಬೆಳಿಗ್ಗೆ ವೇದ  ಪಾರಾಯಣಂ ನಡೆಸಲಾಗುತ್ತದೆ ಮತ್ತು ಸಂಜೆ  ತಿರುವಾಯ್ಮೊಳಿಗೆ  10 ದಿನಗಳವರೆಗೆ ಓದಲಾಗುತ್ತದೆ  (1 ದಿನಕ್ಕೆ ನೂರು). ಕೊನೆಯ ದಿನದಂದು ನಮ್ ಆಳ್ವಾರ್ ತಿರುವಡಿ ತೋಜ್ಹಲ್ ವೈಭವ ವಿಶೇಷ ಶಾತ್ತುಮುರೈ  ಜೊತೆ ನಡೆಯುತ್ತದೆ.

    • 21 ನೇ ದಿನದಂದು, ಇಯರ್ಪಾ( ಮುದಲ್ ತಿರುವಂದಾದಿ, ಇರಾಂಡಮ್ ತಿರುವಂದಾದಿ, ಮುಂಡ್ರಾಮ್ ತಿರುವಂದಾದಿ,ನಾನ್ಗಾಮ್ ತಿರುವಂದಾದಿ, ತಿರುವಿರುತ್ತಮ್ ,ತಿರುವಾಸಿರಿಯಮ್, ಪೇರಿಯ ತಿರುವಂದಾದಿ ,ತಿರುವೆಳುಕೂತ್ತಿರುಕ್ಕೈ , ಸಿರಿಯ ತಿರುಮಡಲ್, ಪೆರಿಯ ತಿರುಮಡಲ್  ಓದುತ್ತಾರೆ. (ಗಮನಿಸಿ: ಎಂಪೆರುಮಾನರವರ ಕಾಲದಲ್ಲಿ ನಮ್ ಪೆರುಮಾಳ್  ಆದೇಶದ ಮೂಲಕ   ರಾಮಾನುಜ ನೂಟ್ರಂದಾದಿ ಸೇರಿಸಲಾಗುತ್ತದೆ ಮತ್ತು ಇದನ್ನು ಸಾಮಾನ್ಯವಾಗಿ 21 ನೇ ದಿನದ  ಪುರಪಾಡು ಆದ ನಂತರ ಶಾತ್ತುಮುರೈ  ನಂತರ ಪಾರಾಯಣ ವಾಗುತ್ತದೆ .)

  • ಬ್ರಾಹ್ಮಣರು ವೇದವನ್ನು ಕಲಿಯಲು ಅಗತ್ಯವಾಗಿರುವಂತಯೇ , ಪ್ರಪನ್ನರಾಗಿರುವ ಶ್ರೀವೈಷ್ಣವರ್ಗಳು , ದಿವ್ಯ ಪ್ರಬಂಧವನ್ನು ಕಲಿಯಬೇಕು ಎಂದು ನಾಥಮುನಿಗಳು  ಸ್ಥಾಪಿಸುತ್ತಾರೆ  .

  • ಮಾರ್ಗಜ್ಹಿ ತಿಂಗಳಲ್ಲಿ,(ಧನುರ್ ಮಾಸ ) ಮುಂಜಾನೆ ತೊಂಡರಡಿಪೊಡಿ ಆಳ್ವಾರ್ ಅವರ ತಿರುಪ್ಪಳ್ಳಿ ಎಳುಚ್ಚಿ ಮತ್ತು ಅಂಡಾಳ ತಿರುಪ್ಪಾವೈಗಳನ್ನು  ಓದಲಾಗುತ್ತದೆ ( ಅನಧ್ಯಯನ    ಕಾಲವಾದರೂ – ಈ ಎರಡು ಪ್ರಬಂಧಗಳು  ಅನುಕ್ರಮವಾಗಿ ಓದಬೇಕು  ಭಗವನ್ ಮತ್ತು ಭಾಗವತರಗಳನ್ನು ಮಾರ್ಗಜ್ಹಿ ತಿಂಗಳಲ್ಲಿ ಎಚ್ಚರಗೊಳಿಸಲು ಕೇಂದ್ರೀಕೃತವಾಗಿದೆ)  ಆಳ್ವಾರ್ಗಳ ಪಾಶುರಗಳನ್ನು ಪಾರಾಯಣ ಮಾಡಲು ವಿನಾಯಿತಿ ನೀಡಲಾಗುತ್ತದೆ).

  • ಈ ವಾಡಿಕೆಯು ಉಯ್ಯಕೊಂಡರ್,ಮಣಕ್ಕಾಲ್ ನಂಬಿ,   ಆಳವಂದಾರ್ , ಪೆರಿಯ ನಂಬಿ ಮತ್ತು ಎಂಬೆರುಮಾನಾರ್  ಕಾಲದಿಂದ ನಡೆಯುತ್ತದೆ.

  • ಒಂದು ಬಾರಿ  ಎಂಬೆರುಮಾನಾರ್ ಅವರ ಸಮಯದಲ್ಲಿ, ಕೆಲವು ಕಾರಣಗಳಿಂದಾಗಿ (ಸುರಕ್ಷತೆಯ ಕಾರಣಗಳು, ಇತ್ಯಾದಿ),  ನಮ್ಮಾಳ್ವಾರ್ ಅವರು ಶ್ರೀರಂಗಂ ಆಗಮಿಸಲಿಲ್ಲ. ಇದರಿಂದ  ನಮ್ಮಾಳ್ವಾರ್ ರವರ ಅರ್ಚ ವಿಗ್ರಹವನ್ನು ಇತರ  ಆಳ್ವಾರ್ ಜೊತೆಗೆ ತಕ್ಷಣವೇ ಸ್ಥಾಪಿಸಬೇಕು ಮತ್ತು ಎಲ್ಲಾ ದಿವ್ಯದೇಶಗಳಲ್ಲಿಯೂ ಮಾಡಬೇಕೆಂದು ಆದೇಶಗಳನ್ನು ಕೊಟ್ಟರು.  ತಿರುಮಲೈ ಬೆಟ್ಟವನ್ನು ಭಗವಂತನ ದೈವೀಕ  ದೇಹವೆಂದು ಪರಿಗಣಿಸಲಾಗಿದೆ.ಆದರಿಂದ  ತಿರುಮಲೈ ಬೆಟ್ಟದ ಕೆಳೆಗೆ ಆಳ್ವಾರ್ಗಳ  ಪ್ರತಿಮೆಗಳನ್ನು ಪ್ರತಿಷ್ಠಾಪಿಸಿದರು . ಅಧ್ಯಯನ ಉತ್ಸವವನ್ನು ಪ್ರತಿ ದಿವ್ಯ ಕ್ಷೇತ್ರಗಲ್ಲಿಯು ಭಾರಿ ರೀತಿಯಲ್ಲಿ ಆಚರಿಸಲಾಗಬೇಕು ಎಂದು ಅವರು ಆದೇಶಿಸುತ್ತಾರೆ.

     

  •   ತಿರುಕ್ಕುರುಗೈಪ್ಪಿರಾನ್ ಪಿಳ್ಳಾನ್ ತಿರುವಾಯ್ಮೊಳಿಗೆ  ಒಂದು ವ್ಯಾಖ್ಯಾನ ರಚಿಸಿ (ಎಂಬೆರುಮಾನಾರ್ ಅನುಮತಿಯೊಂದಿಗೆ) ಮತ್ತು ಅದನ್ನುಎಂಬೆರುಮಾನಾರವರಿಗೆ  ಪ್ರಸ್ತುತಪಡಿಸಿದರು. ಶ್ರೀಭಾಷ್ಯಮ್ ಜೊತೆಗೆ ಪ್ರತಿಯೊಬ್ಬರೂ ಅದನ್ನು ಕಲಿಯುಬೇಕು ಎಂದು ಎಂಬೆರುಮಾನಾರವರು ಆದೇಶಿಸುತ್ತಾರೆ.

  • ಎಂಪೆರುಮಾನಾರ್ ಶ್ರೀವೈಷ್ಣವರ ದೊಡ್ಡ ಸಭೆಯೊಂದಿಗೆ ದೀರ್ಘಕಾಲದವರೆಗೆ ಶ್ರೀರಂಗಂನಲ್ಲಿ ವಾಸಿಸುತ್ತಿದ್ದರು. ಅವರು ಅವರಿಗೆ ಅತ್ಯಂತ ಪ್ರಮುಖವಾದ ಮತ್ತು ಅಗತ್ಯವಾದ ತತ್ವಗಳನ್ನು ಕಲಿಸಿದರು ಮತ್ತು ಪೆರಿಯ ಪೆರುಮಾಳಿಗೆ ಮಂಗಲಾಶಾಸನಂ ನಿರಂತರವಾಗಿ ತೊಡಗಿಸಿಕೊಂಡರು.

  • ಎಂಪೆರುಮಾನಾರ್ ಪರಮಪದವನ್ನು ಆರೋಹಣ ಮಾಡಿದ ನಂತರ,ಭಟ್ಟರ್ ( ಆಳ್ವಾರ್ ರವರ ದೈವೀಕ ಪುತ್ರವಾಗಿರುವ ಮತ್ತು ಶ್ರೀ ರಂಗನಾಥ ಮತ್ತು ಶ್ರೀ ರಂಗನಾಯಕಿಯ ದತ್ತುಪುತ್ರ), ಪಿಳ್ಳಾನ್ (ಇವರೇ ಎಂಪೆರುಮಾನವರ ಅಭಿಮಾನ ಪುತ್ರ ), ಅರುಳಾಳ ಪೆರುಮಾಳ್ ಎಂಪೆರುಮಾನಾರ್, ಎಂಬಾರ್ , ಕಂದಾಡೈ ಆಂಡಾನ್  , ಇತ್ಯಾದಿ. ಎಂಪೆರುಮಾನ ಅರ್ಚ ವಿಗ್ರಹವನ್ನು ಶ್ರೀರಂಗಂನಲ್ಲಿ  ಎಂಪೆರುಮಾನ್ ಆದೇಶದ ಆದಾರದ ಮೇಲೆ ಪ್ರತಿಯೊಬ್ಬರ ಉನ್ನತಿಗಾಗಿ ಸ್ಥಾಪಿಸಿದ್ದರು . ಅದೇ ರೀತಿ ಎಲ್ಲಾ ಇತರ ದಿವ್ಯ ದೇಶಗಳಲ್ಲಿಯೂ ಮಾಡಲಾಗಿದೆ.

  • ನಾಥಮುನಿಗಳ್ ಕಣ್ಣಿನುಂಚಿರುಥಾಂಬಿನಾಲ್ ಎನ್ನುವ ಪ್ರಬಂಧ  ಅದ್ಭುತವಾದ  ಅರ್ಥಗಳಿಂದ ಕೂಡಿರುವ  4000 ದಿವ್ಯಪ್ರಭಂದಕ್ಕೆ ಸೇರಿಸಿದಂತೆ, ಎಂಪೆರುಮಾನ್,  ರಾಮಾನುಜ ನೂಟ್ರಂದಾದಿಯನ್ನು 4000 ದಿವ್ಯ ಪ್ರಬಂಧಕ್ಕೆ ಸೇರಿಸಬೇಕೆಂದು ಆದೇಶಿಸಿದರು . ಹೇಗೆ ಪ್ರತಿ ದಿನ ಬ್ರಾಹ್ಮಣನಿಗೆ ಗಾಯತ್ರಿ ಜಪ ಕಡ್ಡಾಯ , ಪ್ರಪನ್ನರಿಗೆ, ಪ್ರಪನ್ನಗಾಯತ್ರಿ ಎಂದು ಪ್ರಶಿಸ್ತಿಯಾಗಿರುವ ರಾಮಾನುಜ ನೂಟ್ರು ಅಂದಾದಿ  ಪ್ರತಿಯೊಬ್ಬರಿಗೂ ಅತ್ಯಗತ್ಯ.

  • ನಂತರದ ಎಲ್ಲಾ ಆಚಾರ್ಯರು ತಮ್ಮ ಸಮಯವನ್ನು ಎಂಪೆರುಮಾನವರ ಅತ್ತಿ ಉತ್ತಮವಾದ ತತ್ವಗಳನ್ನು ಎಲ್ಲರ ಉನ್ನತಿಗಾಗಿ ಹರಡುತ್ತಿದ್ದರು. ಹೀಗಾಗಿ ಕಲಿಯನ್ ಅರುಳಪಾಡು ಪ್ರಬಂಧಂ ಮುಗಿಯುತ್ತದೆ.

ತರುವಾಯ,ಪರಾಶರ ಭಟ್ಟರ್ ತಿರುನಾರಾಯಣಪುರಕ್ಕೆ ದೈವೀಕ ಪ್ರವಾಸ ಮಾಡುತ್ತಾರೆ. ಅಲ್ಲಿ ಒಂದು ವೇಧಾಂತಿಯೊಂದಿಗೆ   ಚರ್ಚಿಸುತ್ತಾರೆ.   ಚರ್ಚೆಯಲ್ಲಿ ಅವರು ಗೆಲ್ಲುತ್ತಾರೇ ಮತ್ತು ಆ ವೇಧಾಂತಿಯನ್ನು ಶಿಷ್ಯನಾಗಿ ಭಟ್ಟರ್ ಸ್ವೀಕರಿಸುತ್ತಾರೇ .ವೇಧಾಂತಿ ಭಟ್ಟರನ್ನು ತನ್ನ ಆಚಾರ್ಯರಾಗಿ ಸ್ವೀಕರಿಸುತ್ತಾರೆ ಮತ್ತು ಸನ್ಯಾಸಂ ತೆಗೆದುಕೊಳ್ಳುತ್ತಾರೆ. ಅವರನ್ನು ಪ್ರಖ್ಯಾತವಾಗಿ  ನಂಜೀಯರ್ ಎಂದು  ಕರೆಯುತ್ತಾರೆ. ಚರ್ಚೆಯಲ್ಲಿ ವೇಧಾಂತಿಯನ್ನು ಗೆದ್ದ ನಂತರ ಭಟ್ಟರ್ ಶ್ರೀರಂಗಕ್ಕೆ, ಅಧ್ಯಯನ ಉತ್ಸವಮ್ ಪ್ರಾರಂಭವಾಗುವ ದಿನಕ್ಕೆ ಮೊದಲು ದಿನ ಹಿಂದಿರುಗಿದರು . ಪೆರಿಯ ಪೆರುಮಾಳ್ ಚರ್ಚೆಯ ಬಗ್ಗೆ ಭಟ್ಟರನ್ನು  ಕೇಳುತ್ತಾರೆ ಮತ್ತು ಭಟ್ಟರ್ ತಾನು ತಿರುನೆಡುಂಥಾಂಡಕಮ್ ದಿವ್ಯ ಪ್ರಭಂಧಲ್ಲಿ ತಿರುಮಂಗೈ  ಆಳ್ವಾರ್  ವಿವರಿಸಿರುವ ತತ್ವಗಳನ್ನು ಬಳಸಿಕೊಂಡು ವೇದಾಂತಿಯನ್ನು  ಗೆದ್ದಿದ್ದಾರೆಂದು ವಿವರಿಸುತ್ತಾರೆ. ಪೆರಿಯ ಪೆರುಮಾಳ್ ಮಹತ್ತರವಾಗಿ ಸಂತಸಗೊಂಡು,  ಭಟ್ಟರನ್ನು ಮಹತ್ತರವಾಗಿ ವೈಭವೀಕರಿಸಲು ಆದೇಶಿಸಿದ್ದಾರೆ ಮತ್ತು  ಶ್ರೀರಂಗಂದಲ್ಲಿ  ತಿರುನೆಡುಂಥಾಂಡಕಮ್ ನಿರೂಪಣೆಯೊಂದಿಗೆ ಅಧ್ಯಯನ ಉತ್ಸವಮ್ ಆರಂಭವಾಗುತ್ತದೆ ಎಂದು ಸ್ಥಾಪಿಸುತ್ತಾರೆ  .ಹೀಗಾಗಿ ನಮ್ಮ ಸತ್ಸಂಪ್ರದಾಯದಲ್ಲಿ ಅಧ್ಯಯನ ಉತ್ಸವದ  ಇತಿಹಾಸವನ್ನು ಕೊನೆಗೊಳಿಸುತ್ತದೆ.

 

ಸಾಮಾನ್ಯ ಆಚರಣೆಗಳು ಕೆಳಗಿನ ದಿನಚರಿಯನ್ನು 21 ದಿನಗಳ ಕಾಲ ಹೆಚ್ಚಿನ ದಿವ್ಯ ದೇಶಗಳಲ್ಲಿ ಒಳಗೊಂಡಿರುತ್ತವೆ.

  • ಎಂಪೆರುಮಾನ್ , ನಾಚ್ಚಿಯಾರ್,   ಆಳ್ವಾರ್ಗಳು    ಮತ್ತು ಆಚಾರ್ಯಗಳು 21 ದಿನಗಳ ಕಾಲ ದೊಡ್ಡ ಸಭೆಯಲ್ಲಿ ಕುಳಿತುಕೊಳ್ಳುತ್ತಾರೆ.

    • ಎಂಪೆರುಮಾನ್ ಮತ್ತು  ನಾಚ್ಚಿಯಾರ್ಗಳು  ನೇರವಾಗಿ ಸಭೆಯ ಮಧ್ಯದಲ್ಲಿ ಕುಳಿತಿರುವಾಗ ,  ಆಳ್ವಾರ್ಗಳು  ಮತ್ತು ಆಚಾರ್ಯಗಳು ಇಬ್ಬರು ಪರಸ್ಪರರ ಮುಖಾಮುಖಿಯಾದ ಎರಡು ಸಾಲುಗಳಲ್ಲಿ (ಎರಡು ಬದಿಗಳಲ್ಲಿ) ಮಂಟಪದ ಎರಡು ಪಕ್ಕದಲ್ಲಿಯೂ ಕುಳಿತುಕೊಳ್ಳುತ್ತಾರೆ.

    •  ಬಹಳಷ್ಟು ದಿವ್ಯ ದೇಶಗಳಲ್ಲಿ  ನಮ್ಮಾಳ್ವಾರ್ ಮತ್ತೆ ತಿರುಮಂಗೈ ಆಳ್ವಾರ್ ಮತ್ತು ಎಂಬೆರುಮಾನಾರ್ (ನಮ್ಮ ಶ್ಶ್ರೀವೈಷ್ಣವ   ಸತ್  ಸಂಪ್ರದಾಯಕ್ಕೆ  ಅವರ ಮಹತ್ವದ ಕೊಡುಗೆಯ ಕಾರಣದಿಂದ) ಕುಳಿತುಕೊಂಡು ಆಳ್ವಾರ್ ಮತ್ತೆ ಆಚಾರ್ಯರ ಸಭೆಗೆ ನೇತೃತ್ವ ವಹಿಸುತ್ತಾರೆ.

    • ವಾನಮಾಮಲೈ ,ತಿರುಕುರುಂಗುಡಿ, ಮುಂತಾದ ದಿವ್ಯ ದೇಶಗಳಲ್ಲಿ , ನಮ್ಮಾಳ್ವಾರ್  ಅರ್ಚ ವಿಗ್ರಹ  ಇಲ್ಲದೆ ಇರುವ ಕ್ಷೇತ್ರಗಳಲ್ಲಿ,    ಕಲಿಯನ್ ( ತಿರುಮಂಗೈಆಳ್ವಾರ್ ) ಮತ್ತೆ ಎಂಪೆರುಮಾನಾರ್  ಆಚರಣೆಗಳ ಅಧ್ಯಕ್ಷತೆ ವಹಿಸುತ್ತಾರೆ

    • ಶ್ರೀಪೆರುಂಬೂದೂರಿನಲ್ಲಿ  , ಆಂಡಾಳ್  ನಾಚ್ಚಿಯಾರ್ ,ಆಳ್ವಾರ್ ಗೋಷ್ಠಿ  ಯೊಂದಿಗೆ ಸೇರಿಕೊಳ್ಳುತ್ತಾರೇ.(ಎಂಪೆರುಮಾನ್  ಮತ್ತು ನಾಚ್ಚಿಯಾರ್ಗಳ  ಜೊತೆಗೆ ಕುಳಿತುಕೊಳ್ಳುವ ಬದಲು).  ಇಲ್ಲಿ  ಎಂಪೆರುಮಾನಾರ್ ಹೆಚ್ಚಿನ ಪ್ರಾಮುಖ್ಯತೆಯನ್ನು  ಕೊಡಲಾಗಿದೆ .ಅಂಡಾಳ್ ನಾಚ್ಚಿಯಾರ್ ತನ್ನ ಹಿರಿಯ ಸಹೋದರನಾಗಿ (ಆಕೆ ಆಳ್ವಾರ್ / ಎಂಪೆರುಮಾನಾರ್ ಗೋಷ್ಠಿ ಯೊಂದಿಗೆ ಸೇರಿಕೊಳ್ಳುತ್ತಾರೇ ) ಅಂಗೀಕರಿಸುತ್ತಾರೇ.

    •   ವೈಕುಂಠ ಏಕಾದಶಿ ದಿನ ಪರಮಪದ ಬಾಗಿಲು ತೆರೆಯಲಾಗುತ್ತದೆ. ನಮ್ಮಾಳ್ವಾರ್ (ಮತ್ತು ಇತರ ಆಳ್ವಾರ್ಳು/ ಆಚಾರ್ಯಗಳು ದಿವ್ಯ ದೇಶಗಳ ಅಭ್ಯಾಸವನ್ನು ಅವಲಂಬಿಸಿ) ಬಾಗಿಲು  ಹೊರಗೆ ಕಾಯುವರು ಮತ್ತು ಆಳ್ವಾರ್ ಗಳಿಗೆ ಮಂಗಲಶಾಸನವನ್ನು ಪ್ರದರ್ಶಿಸುತ್ತಾರೆ ಮತ್ತು ಪುರಪ್ಪಾಡುಗೆ (ಮೆರವಣಿಗೆ) ಮುಂದುವರಿಯುತ್ತಾರೆ.

  • 10 ದಿನಗಳ ಮುದಲಾಯಿರಮ್ ಮತ್ತು ಪೆರಿಯ ತಿರುಮೊಳಿಯನ್ನು ಅಧ್ಯಯನ ಮಾಡುತ್ತಾರೆ – ಪಗಲ್ ಪತ್ತು (ಮೊದಲ 10 ದಿನಗಳು – ತಿರುಮೊಳಿ ತಿರುನಾಳ್ ). ಮೆರವಣಿಗಗೆ ಇರುವ ದಿವ್ಯ ದೇಶಗಳಲ್ಲಿ , ಉಪದೇಶ ರತ್ತಿನಮಾಲೈ ಮೆರವಣಿಗೆಯ ಸಮಯದಲ್ಲಿ ಓದಲಾಗುತ್ತದೆ.

  • ವೈಕುಂಠ ಏಕಾದಶಿ ದಿನದಿಂದ ತೊಡಗಿ 10 ದಿನಗಳ ತಿರುವಾಯ್ಮೊಳಿ ತಿರುನಾಳ್ (ರಾತ್ರಿಯ ಸಮಯದಲ್ಲಿ)  (ಮುಂದಿನ 10 ದಿನಗಳು – ತಿರುವಾಯ್ಮೊಳಿ ತಿರುನಾಳ್).

  • 20 ನೇ ದಿನ ಆಲ್ವಾರ್ ತಿರುವಡಿ  ತೋಜ್ಹಲ್ ಮತ್ತು ತಿರುವಾಯ್ಮೊಳಿ  ಶಾತ್ತುಮುರೈ ಜೊತೆ  ಕೊನೆಗೊಳ್ಳುತ್ತದೆ. ನಮ್ಮಾಳ್ವಾರ್ ಅವರನ್ನು  ಅರ್ಚಕರು ಕೈಯಲ್ಲಿ  ಎಂಪೆರುಮಾನ್ವರೆಗೆ  ಸಾಗಿಸಲಾಗುವುದು ಮತ್ತು ನಮ್ಮಾಳ್ವಾರ್  ತಲೆಯು ಎಂಪೆರುಮಾನರ ಕಮಲಪದಗಳಲ್ಲಿ ಇಡಲಾಗುತ್ತದೆ. ತರುವಾಯ ಅವರನ್ನು ತುಳಸಿ ಎಲೆಗಳಿಂದ ಮುಚ್ಚಲ್ಪಡುತ್ತಾರೇ.

     

  • 21 ನೇ ದಿನ (ಕೆಲವು ದಿವ್ಯ ದೇಶಗಳಲ್ಲಿ , ಇರಾಪತ್ತು ಸಮಯದಲ್ಲಿ, ಇಯರ್ಪಾ ಓದುತ್ತಾರೇ)

    • ಸಂಜೆ – ಇಯರ್ಪಾ ನಿರೂಪಣೆ

    • ರಾತ್ರಿ – ಪುರಪ್ಪಾಡು (ಮೆರವಣಿಗೆ)  ರಾಮಾನುಜ ನೂಟ್ರಂದಾದಿ ಗೋಷ್ಠಿ ಮತ್ತು ಇಯಲ್ ಸಾಟ್ರು.

  • 22 ನೇ ದಿನ – ತಿರುಪಲ್ಲಾಂಡು ತೋಡಕ್ಕಂ (ಆರಂಭ) ಮತ್ತು ನಿಯಮಿತ 4000 ದಿವ್ಯ ಪ್ರಭಂದಗಳು ನಿರೂಪಣೆ ಪ್ರಾರಂಭವಾಗುತ್ತದೆ,

ಅಧ್ಯಯನ  ಉತ್ಸವದ ಸಂಬಂಧಿಸಿದಂತೆ ಕೆಲವು ದಿವ್ಯ ದೇಶಗಳಲ್ಲಿ   ಕೆಲವು ವಿಶೇಷ ಅಂಶಗಳಿವೆ. ಈಗ ಅವುಗಳನ್ನು ನೋಡೋಣ.

  • ಶ್ರೀರಂಗ:

    • 22 ದಿನಗಳ ಆಚರಣೆಗಳು – ಒಂದು ದಿನ ಅಧಿಕವಾಗಿ ಪ್ರಾರಂಭ , ಅಂದರೆ, ಮೊದಲ ದಿನ ತಿರು ನೆಡುಂಥಾಂಡಕಂ  ನಿರೂಪಣೆ, ನಂತರ 21 ದಿನಗಳು ಉತ್ಸವ.

    • ಪಾಶುರಗಳನ್ನು  ಅಭಿನಯದೊಂದಿಗೆ  ಅರೈಯರ್ಗಳು (ನೃತ್ಯದ ನಾಟಕದ ಸ್ವರೂಪದಲ್ಲಿ ಚಿಹ್ನೆಗಳು ಮತ್ತು ಕ್ರಿಯೆಗಳನ್ನು ಬಳಸುವ ವಿವಿಧ ಅಂಶಗಳನ್ನು ನಾಟಕವಾಗಿ ಮಾಡುತ್ತಾರೇ ) ಎಂಪೆರುಮಾನ್  , ನಾಚ್ಚಿಯಾರ್ ಮತ್ತು ಆಳ್ವಾರ್/ ಆಚಾರ್ಯ ಮುಂಭಾಗದಲ್ಲಿ ಅಭಿನಯಿಸುತ್ತಾರೆ .

    • ಅರೈಯರ್ ಸೇವೆಯ ಸಮಯದಲ್ಲಿ, ನಮ್ ಪೆರುಮಾಳ್  ಮತ್ತು ನಾಚ್ಚಿಯರ್ಗಳು ಎತ್ತರದ ಮಂಟಪದಲ್ಲಿ ಕುಳಿತುಕೊಳ್ಳುತ್ತಾರೆ, ಆದರೆ ಆಳ್ವಾರ್ / ಆಚಾರ್ಯರಗಳು ನಮ್ ಪೆರುಮಾಳ್  ಎದುರು ಭಾಗದಲ್ಲಿ ಕುಳಿತಿರುತ್ತಾರೆ .

       

  • ಆಳ್ವಾರ್ ತಿರುನಗರಿ:

    • ಅರೈಯರ್ ಸೇವೈ  ಪಾಶುರಗಳನ್ನು   ಕ್ರಿಯೆಗಳೊಂದಿಗೆ ಪ್ರದರ್ಶನ ನೀಡಲಾಗುತ್ತದೆ . ಒಂದು ನಿರ್ದಿಷ್ಟ ದಿನದಂದು ಅರೈಯರ್ ಅವರಿಂದ ಪಠಿಸಿರುವ ಪಾಶುರಗಳ್ಳನ್ನು , ಮರುದಿನ ಗೋಷ್ಠಿಯಲ್ಲಿ ಅಧ್ಯಾಪಕರು ಓದುತ್ತಾರೆ.

    • ಪಗಲ್ಪತ್ತಿನ 10 ನೇ ದಿನ ( ದಶಮಿ  – ವೈಕುಂಟ ಏಕಾದಶಿಗೆ ಮುಂಚೆ),  ನಮ್ಮಾಳ್ವಾರ್ ಮತ್ತು ಎಂಪೆರುಮಾನವರ ವಿಶೇಷ ದರ್ಶನ   – ನಮ್ಮಾಳ್ವಾರ್  ಶ್ರೀರಂಗನಾಗಿ ಶಯನ ತಿರುಕೋಲದಲ್ಲಿಯೂ ಮತ್ತೆ ಎಂಬೆರುಮಾನಾರ್ ಶ್ರೀರಂಗನಾಚ್ಚಿಯರಾಗಿ ಅವರ ಕಮಲಪಾದಗಳಲ್ಲಿ  ಕುಳಿತಿರುತ್ತಾರೆ .

 

ನಮ್ಮಾಳ್ವಾರ್- ಎಂಪೆರುಮನಾರ್

  • ಎಲ್ಲೆಡೆ ಇದು ಇರಾಪತ್ತಿನ ಕೊನೆಯ ದಿನದಂದು (20 ನೇ ದಿನ) ತಿರುವಿಡಿ ತೋಳುದಲ್ (ನಮ್ಮಾಳ್ವಾರ್ – ಎಂಪೆರುಮಾನ ಕಮಲಪಾದಗಳಿಗೆ ತಲುಪುತ್ತಿದ್ದಾರೆ).

  • ಆದರೆ ಇಲ್ಲಿ, ಇದು ತಿರುಮುಡಿ ತೋಳುದಲ್  – ಎಂಪೆರುಮಾನನ್ನು  ಅರ್ಚಕರ ಕೈಯಲ್ಲಿ ಕೊಂಡು    ನಮ್ಮಾಳ್ವಾರ್  ತಲೆಯ ಮೇಲೆ ತನ್ನ ಕಮಲದ ಅಡಿಗಳನ್ನು ಇಡುತ್ತಾರೇ . ಇದನ್ನು ನೋಡಲು ಅದ್ಭುತ ದೃಶ್ಯ ಮತ್ತು ಪರಗತ ಸ್ವೀಕಾರದ ತತ್ವ ಸ್ಪಷ್ಟ ಸ್ಥಾಪನೆಯಾಗುತ್ತದೆ (ಇದು ಎಂಪೆರುಮಾನ್ ಸ್ವ ಇಚ್ಛೆಯಿಂದ ಮತ್ತು ಮನೋಹರವಾಗಿ ಜೀವಾತ್ಮವನ್ನು ತನ್ನ ಪಾದಕ್ಕೇ ಸ್ವೀಕರಿಸುತ್ತಾರೆ).

    • 22 ದಿನಗಳ ಆಚರಣೆಗಳು – ಒಂದು ದಿನ ಅಧಿಕವಾಗಿ   “ವಿಡು ವಿಡೈ ತಿರುಮಂಜನಮ್” (ವಿಶೇಷ ಸ್ನಾನದ ಸಮಾರಂಭ)

    • ಈ ಅಂತಿಮ ದಿನದಂದು, ಪೋಲಿಂದು ನಿನ್ಡ್ರಾ ಪಿರಾನ್ ಎನ್ನುವ ಎಂಪೆರುಮಾನ್   ಎಲ್ಲರ ಉನ್ನತಿಗಾಗಿ ನಮ್ಮಾಳ್ವಾರ್  ಅವರು ಲೀಲಾ ವಿಭೂತಿಗೆ ಹಿಂತಿರುಗುತ್ತಾರೆ .

    • ನಂತರದ ವಿಶಾಖ ನಕ್ಷತ್ರದ ದಿನಂದಂದು (ನಮ್ಮಾಳ್ವಾರ್ ತಿರುನಕ್ಷತ್ರಮ್) ತಿರುಪಲ್ಲಾಂಡು ತೊಡಕ್ಕಂ (ಆರಂಭ) ಆಗುತ್ತದೆ.

  • ತಿರುತುಲೈವಿಲ್ಲಿಮಂಗಲಂ

    • ನಮ್ಮಾಳ್ವಾರ್ ತಿರುವಾಯ್ಮೊಳಿಯಲ್ಲಿ ದೇವಪಿರಾನ್ ಎಂಪೆರುಮಾನಾರ್ ತನ್ನ ತಂದೆ ಮತ್ತು ತಾಯಿ ಎಂದು ಘೋಷಿಸುತ್ತಾರೆ. ಈ ದಿವ್ಯ ದೇಶದ ಮೇಲೆ ಅವರು ಹೆಚ್ಚಿನ ಬಾಂಧವ್ಯವನ್ನು ಹೊಂದಿದ್ದಾರೆ. ಹಳೆಯ ದಿನಗಳಲ್ಲಿ, ಆಳ್ವಾರ್ ಅವರು ಶ್ರೀರಂಗಂನಿಂದ ಹಿಂದಿರುಗಿದಾಗ, ಅವರು ತುಲೈವಿಲ್ಲಿಮಂಗಲಂಗೆ ಆಗಮಿಸುತ್ತಾರೆ ಮತ್ತು ಅಲ್ಲಿ ಎಂಪೆರುಮಾನ್ ಜೊತೆಯಲ್ಲಿ ಮಾಸಿ ವಿಸಾಖಂ ತನಕ ಇದ್ಧು ಮತ್ತೇ ಆಳ್ವಾರ್ ತಿರುನಗರಿಗೆ ಹೋಗುತ್ತಾರೆ.

    • ಇದರ ನೆನಪಿಗಾಗಿ, ನಮ್ಮಾಳ್ವಾರ್  ಈ ದಿವ್ಯ ದೇಶದಲ್ಲಿ ಮಾಸಿ ವಿಶಾಖದ ದಿನದಂದು ಆಗಮಿಸುತ್ತಾರೆ.  ( ಆಳ್ವಾರ್ ತಿರುನಗರಿಯಲ್ಲಿ ಆಚರಿಸಲಾಗುವ ಮಾಸಿ ತಿಂಗಳಲ್ಲಿ 13 ದಿನಗಳ ಉತ್ಸವದ ಕೊನೆಯಲ್ಲಿ) . ಅವರು ಇಡೀ ದಿನವು ಎಂಪೆರುಮಾನ್ ಜೊತೆಯಲ್ಲಿ ಇರುತ್ತಾರೆ, ತಿರುಮಂಜನಮ್, ಘೋಷ್ಠಿ , ಇತ್ಯಾದಿಗಳನ್ನು ಆನಂದಿಸುತ್ತಾರೆ ಮತ್ತು ದಿನದ ಅಂತ್ಯದಲ್ಲಿ ತಿರುನಗರಿಗೆ  ತೆರಳುತ್ತಾರೆ.

    • ಮರುದಿನ, ತಿರುಪಲ್ಲಾಂಡು ತೋಡಕ್ಕಂ (ಅದುವರೆಗೂ ಈ ದೇವಸ್ಥಾನದಲ್ಲಿ  ಅನಧ್ಯಯನ  ಕಾಲಂ ).

  • ತಿರುವಾಲಿ / ತಿರುನಗರಿ ಮತ್ತು ತಿರುನಾಂಗುರ್ ದಿವ್ಯದೇಶಗಳಲ್ಲಿ .

    • ಸಾಮಾನ್ಯವಾಗಿ ತಿರುಕಾರ್ಥಿಗೈ ದೀಪಂ ಮತ್ತು ಕಲಿಯನ್ ರವರ ತಿರುನಕ್ಷತ್ರಮ್   (ಕಾರ್ಥಿಗೈ/ ಕಾರ್ಥಿಗೈ) ಒಂದಾಗಿ ಬರುತ್ತದೆ .  ಆದರೆ ಕೆಲವೊಮ್ಮೆ ತಿಂಗಳಲ್ಲಿ ಎರಡು ಕಾರ್ತಿಗೈ ನಕ್ಷತ್ರಗಳು ಇದ್ದರೆ, ಎರಡನೆಯದನ್ನು ತಿರುಮಂಗೈ ಆಳ್ವಾರ್ ತಿರುನಕ್ಷತ್ರ ಎಂದು ಆಚರಿಸಲಾಗುತ್ತದೆ. ತಿರುಕಾರ್ಥಿಗೈ ದೀಪಂ ಸಮಯದಲ್ಲಿ ಅನಧ್ಯಯನ  ಕಾಲಂ  ಎಲ್ಲಾ ದಿವ್ಯ ದೇಶಗಳಲ್ಲಿಯು ಪ್ರಾರಂಭವಾಗಿದ್ದರೂ ಕೂಡ, ತಿರುಮಂಗೈ ಆಳ್ವಾರ್ ತಿರುನಕ್ಷತ್ರ ಉತ್ಸವವಾಗಿ 4000 ದಿವ್ಯ ಪ್ರಭಂದಂ ನಿರೂಪಣೆ ಮತ್ತು ಭವ್ಯವಾದ ರೀತಿಯಲ್ಲಿ ಆಚರಣೆಯನ್ನು ಮುಗಿಸಿದನಂತರ ಇಲ್ಲಿ ಪ್ರಾರಂಭವಾಗುತ್ತದೆ.

  • ತಿರುಮೆಯ್ಯಮ್

    • ನಿಯಮಿತ 21 ದಿನದ ಆಚರಣೆಗಳಿಗೆ ಹೆಚ್ಚುವರಿಯಾಗಿ, ಕಲಿಯನ್ ತಿರುವಡಿ ತೋಳುದಲ್ (ಕಲಿಯನ್ ಅವರು ಎಂಪೆರುಮಾನ ಪದ್ಮಪಾದ ವನ್ನು ಪೂಜೆ ಮಾಡುತ್ತಾರೆ )  ಹಾಗು  ಕೊನೆಯ ದಿನ ಪಗಲ್ಪತ್ತು  ಆಚರಿಸಲಾಗುತ್ತದೆ.

  • ಶ್ರೀಪೆರುಂಬೂದೂರ್

    • ಗುರು ಪುಷ್ಯವನ್ನು ಥೈ (ಮಕರ / ಥೈ) ತಿಂಗಳ ಪುಸಮ್ (ಪುಷ್ಯ) ನಕ್ಷತ್ರದ ಮೇಲೆ ಕೊನೆಗೊಳ್ಳುವ 3 ದಿನಗಳ ಕಾಲ ಆಚರಿಸಲಾಗುತ್ತದೆ. ಈ ದಿನ ಎಂಬೆರುಮಾನಾರ್ ಅರ್ಚಾ ವಿಗ್ರಹವನ್ನು ಶ್ರೀಪೆರುಂಬೂದೂರ್ಅಲ್ಲಿ ಸ್ಥಾಪಿಸಿಧರು. ಇದು ಇಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಅಧ್ಯಯನ ಉತ್ಸವಂ ಗುರು ಪುಶ್ಯಮ್ ಜೊತೆಜೊತೆಗೆ ಹೋದರೆ, ಅಧ್ಯಯನ ಉತ್ಸವವನ್ನು ಮೊದಲು ಆಚರಿಸಲಾಗುತ್ತದೆ.

  • ತಿರುಚೇರೈ, ತಿರುಮಳಿಸೈ ಮುಂತಾದ ಕೆಲವು ದಿವ್ಯ ದೇಶಗಳಲ್ಲಿಯು ಅದೇ ರೀತಿ ಬ್ರಹ್ಮೋತ್ಸವಂ ಅಧ್ಯಯನ ಉತ್ಸವದೊಂದಿಗೆ ಬರುವ  ಸಮಯದಲ್ಲಿ   – ಅಧ್ಯಯನ ಉತ್ಸವವನ್ನು ಮುಂಚಿತವಾಗಿ ಆಚರಿಸಲಾಗುತ್ತದೆ.

ಇಯರ್ಪಾ ಪೂರ್ಣಗೊಂಡ ನಂತರದ ದಿನ, ಸಾಮಾನ್ಯವಾಗಿ ದೇವಾಲಯಗಳಲ್ಲಿ,ತಿರುಪಲ್ಲಾಂಡು ಅಧ್ಯಯನ ಪ್ರಾರಂಭವಾಗುತ್ತದೆ ಮತ್ತು ಸಾಮಾನ್ಯವಾಗಿ ನಿರೂಪಣೆಯಾಗುವ ದಿವ್ಯ ಪ್ರಬಂಧದ ಅಧ್ಯಯನ ಪುನರಾರಂಭಿಸುತ್ತಾರೆ .

ಇವುಗಳು ಅನೇಕ ದಿವ್ಯ ದೇಶಗಳಲ್ಲಿ ನಿರ್ದಿಷ್ಟವಾದ ಅನೇಕ ಅದ್ಭುತ ವಿಶೇಷತೆಗಳಿವೆ.

ಮನೆಗಳಲ್ಲಿ, ಅಧ್ಯಯನ  ಕಾಲದಲ್ಲಿ  ದಿವ್ಯ ಪ್ರಬಂಧಗಳ ನಿರೂಪಣೆ ವಿಭಿನ್ನ ದಿವ್ಯ ದೇಶಗಳಲ್ಲಿ  ವಿಭಿನ್ನವಾಗಿ ಅನುಸರಿಸಲಾಗುತ್ತದೆ.

  • ಬಹಳಷ್ಟು ದಿವ್ಯ ದೇಶಗಳಲ್ಲಿ, ಅಧ್ಯಯನ ಕಾಲದಲ್ಲಿ ಮನೆಯಲ್ಲಿ ಪ್ರಬಂಧಗಳ ಹೇಳುವ ಸಂಪ್ರದಾಯ ದೇವಾಲಯದ ಅಭ್ಯಾಸವನ್ನು ನಿಕಟವಾಗಿ ಅನುಸರಿಸಾಲುಗತ್ತದೆ. ಉದಾಹರಣೆಗೆ, ತಿರುಕಾರ್ಥಿಗೈ ದೀಪಂ (ಅಥವಾ ಅಧ್ಯಯನ ಕಾಲ ದೇವಸ್ಥಾನದಲ್ಲಿ ಪ್ರಾರಂಭಿಸಿದಾಗ) ನಂತರ ದಿನದಿಂದ ದಿವ್ಯ ಪ್ರಭಂಧವನ್ನು ಹೇಳುವುದಿಲ್ಲ . ದೇವಸ್ಥಾನದಲ್ಲಿ ತಿರುಪಲ್ಲಾಂಡ್ (ಪ್ರಾರಂಭವಾಗುವ ) ದಿನದಂದು ಪ್ರಭಂದಗಳನ್ನು  ಹೇಳಲು ಪುನರಾರಂಭಿಸಲಾಗುತ್ತದೆ (ಇದು ಸಾಮಾನ್ಯವಾಗಿ ಇಯರ್ಪ್ಪ ಶಾತ್ತುಮುರೈ ನಂತರದ ದಿನ).

  • ಕೆಲವರು  ದಿವ್ಯ ಪ್ರಭಂದಗಳ  ವಾಚನವನ್ನು ತೈತಿಂಗಳ ಹಸ್ತತಂ ( ಕೂರತ್ತಾಳ್ವಾನ್   ತಿರುನಕ್ಷತ್ರಮ್) ನಿಂದ ಮನೆಗಳಲ್ಲಿ ಪುನರಾರಂಭಿಸಲಾಗುತ್ತದೆ. ಹಳೆಯ ದಿನಗಳಲ್ಲಿ, ಶ್ರೀವೈಷ್ಣವರು  ನಮ್ ಪೆರುಮಾಳ್  ಮತ್ತು ನಮ್ಮಾಳ್ವಾರ್ ಅವರ ಜೊತಗೆ ಇರಬೇಕೆಂದು  ಅಧ್ಯಯನ ಉತ್ಸವಕ್ಕೆ ಶ್ರೀರಂಗಂಗೆ ಸೇರುತ್ತಾರೆ  . ಒಮ್ಮೆ ಉತ್ಸವ ಮುಗಿದ ನಂತರ, ತಮ್ಮ ಮನೆಗಳಿಗೆ/ಪಟ್ಟಣಗಳಿಗೆ ಹಿಂತಿರುಗಲು ಹಲವಾರು ದಿನಗಳನ್ನು ತೆಗೆದುಕೊಳ್ಳುತ್ತದೆ. ಇದನ್ನು ನೆನಪಿಸಲು, ಮನೆಗಳಲ್ಲಿ, ಜನರು ತೈತಿಂಗಳ ಹಸ್ತ ನಕ್ಷತ್ರದಲ್ಲಿ ದಿವ್ಯ ಪ್ರಭಂದದ ನಿರೂಪಣೆ ಪ್ರಾರಂಭಿಸುತ್ತಾರೆ.

ಪ್ರತಿಯೊಬ್ಬರು ತಮ್ಮ ದಿವ್ಯ ದೇಶಗಳಲ್ಲಿ  ಸಾಮಾನ್ಯ ಅಭ್ಯಾಸದ ಬಗ್ಗೆ ತಮ್ಮ ಹಿರಿಯರನ್ನು ಕೇಳುವುದು ಮತ್ತು ಅದೇ ತತ್ವವನ್ನು ಅನುಸರಿಸುವುದು ಒಳ್ಳೆಯದು . ಅನಧ್ಯಯನ ಕಾಲದಲ್ಲಿ ಏನು  ಕಲಿಯಲು ಮತ್ತು ಓದಬೇಕು? ಕೆಳೆಗೆ ಒಂದೊಂದಾಗಿ ನೋಡೋಣ:

  • ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ, ಅಧ್ಯಯನ  ಕಾಲದಲ್ಲಿ , ತಿರುಪ್ಪಾವೈ ಬದಲಾಗಿ ಉಪದೇಶ ರತ್ತಿನ ಮಾಲೈಯನ್ನು ಓದಲಾಗುತ್ತದೆ .ಮತ್ತು  ಕೋಯಿಲ್  ನೂಟ್ರಂದಾದಿ /ರಾಮಾನುಜ  ನೂಟ್ರಂದಾದಿ ಬದಲಾಗಿ ತಿರುವಾಯ್ಮೊಳಿನೂಟ್ರಂದಾದಿಓದಲಾಗುತ್ತದೆ

  • ಮಾರ್ಗಜ್ಹಿ ತಿಂಗಳಲ್ಲಿ  ತಿರುಪ್ಪಾವೈ ಮತ್ತು ತಿರುಪಳ್ಳಿಯೇಜ್ಹುಚಿ ಹೇಳಲು ಪುನರಾರಂಭವಾಗುತ್ತದೆ.

  • ದೇವಾಲಯಗಳಲ್ಲಿ, ಅಧ್ಯಯನ ಉತ್ಸವದ ಸಮಯದಲ್ಲಿ, ಎಲ್ಲಾ 4000 ಪಾಶುರಗಳನ್ನು ಒಮ್ಮೆ ಓದಲಾಗುತ್ತದೆ.

  • ಮನೆಗಳಲ್ಲಿ, ತಿರುವಾರಾಧನೇ ಸಮಯದಲ್ಲಿ, 4000 ದಿವ್ಯ ಪ್ರಬಂಧದ ಪಾಶುರಗಳನ್ನು ಅಧ್ಯಯನ  ಕಾಲದಲ್ಲಿ ಹೇಳುವುದಿಲ್ಲ . (ಮಾರ್ಗಜ್ಹಿ ತಿಂಗಳಲ್ಲಿ  ದೇವಾಲಯಗಳಂತೆ ಮನಿಯಲ್ಲಿಯೂ ತಿರುಪ್ಪಾವೈ ಮಾತು ತಿರುಪ್ಪಳ್ಳಿ ಎಳುಚ್ಚಿ ಓದಲಾಗುತ್ತದೆ).

    • ಕೋಯಿಲ್ ಆಳ್ವಾರ್ ತೆರೆಯುವಾಗ, ನಾವು “ಜಿತಂತೆ ” ಸ್ತೋತ್ರಮ್ (ಮೊದಲ 2 ಶ್ಲೋಕಗಳು ), ” ಕೌಸಲ್ಯ ಸುಪ್ರಜಾ ರಾಮ”  ಶ್ಲೋಕ , “ಕುರ್ಮಾಧೀನ್” ಶ್ಲೋಕ (ಇವುಗಳನ್ನು ಸಾಮಾನ್ಯವಾಗಿ ಓದಲಾಗುತ್ತದೆ) ಮತ್ತು ನೇರವಾಗಿ ಬಾಗಿಲು ತೆರೆಯುತ್ತವೇ. ಮತ್ತೊಮ್ಮೆ, ಬಾಗಿಲು ತೆರೆಯುವಾಗ ಆಳ್ವಾರ್ ಪಾಶುರಗಳನ್ನು ಮನಸ್ಸಿನಲ್ಲಿ/ ನೆನಪಿಸುವುದು / ಧ್ಯಾನ ಮಾಡುವುದಕ್ಕೆ ಯಾವುದೇ ಮಿತಿಯಿಲ್ಲ.

    • ಅದೇ ರೀತಿ, ತಿರಿಮಂಜನಂ ಸಮಯದಲ್ಲಿ, ಸುಕ್ತಗಳನ್ನು ಓದಿದ ನಂತರ, ನಾವು “ವೆನ್ನಯ್ ಅಲೈನ್ಡ್ ಕುನುಂಗುಮ್ ” ಪದಿಗಮ್ ಮತ್ತು ಕೆಲವು ಹೆಚ್ಚುವರಿ ಪಾಶುರಗಳನ್ನು ಪಠಿಸುತ್ತೇವೆ – ಅನಧ್ಯಯನ ಕಾಲದ ಸಮಯದಲ್ಲಿ, ನಾವು ಸುಕ್ತಗಳೊಂದಿಗೆ ಮಾತ್ರ ನಿಲ್ಲಿಸುತ್ತೇವೆ.

    • ಮಂತ್ರ ಪುಷ್ಪ ಸಮಯದಲ್ಲಿ, ನಾವು ಸಾಮಾನ್ಯವಾಗಿ ” ಸೆಂಡ್ರಾಲ್ ಕುಡೈಯಾಮ್  “ಪಾಶುರಗಳನ್ನು ಪಠಿಸುತ್ತೇವೆ. ಅನಧ್ಯಯನ ಕಾಲದ ಸಮಯದಲ್ಲಿ, ನಾವು ಆ ಸ್ಥಳದಲ್ಲಿ “ಎಂಪೆರುಮಾನಾರ್ ದರಿಸನಂ ಎನ್ರೆ” ಪಾಶುರವನ್ನು ಪಠಿಸುತ್ತೇವೆ.

    • ಶಾತ್ತುಮುರೈ ಸಮಯದಲ್ಲಿ ನಾವು “ಚಿತ್ರಂ ಚಿರು “,” ಪಲ್ಲಾಂಡ್ ಪಲ್ಲಾಂಡ್ “,”ವಂಗಕ್ಕಡಲ್ “ಪಾಶುರಗಳಿಗೆ ಬದಲಾಗಿ ಉಪದೇಶ ರತ್ತಿನಮಾಲೈ ಮತ್ತೆ ತಿರುವಾಯ್ಮೊಳಿ ನೂಟ್ರು ಅಂದಾದಿ ಪಾಶುರಗಳನ್ನು ಓದುತ್ತೇವೆ. ನಂತರ “ಸರ್ವ ದೇಶ ದಶಾ ಕಾಲೇ  …” ವಾಡಿಕೆಯ ಮತ್ತು “ವಾಜ್ಹಿ ತಿರುನಾಮಮ್” ಓದಲಾಗುತ್ತದೆ .

  • ಈ ಸಮಯದಲ್ಲಿ ಸಂಸ್ಕೃತ (ಕೆಲವೇ ಇವೆ) ಮತ್ತು ತಮಿಳು ಪ್ರಭಂಧಗಳು ಜ್ಞಾನ ಸಾರಮ್, ಪ್ರಮೇಯ ಸಾರಮ್, ಸಪ್ತ ಕಾಧೈ,ಉಪದೇಶ ರತ್ತಿನಮಾಲೈ , ತಿರುವಾಯ್ಮೊಳಿನೂಟ್ರಂದಾದಿ ಮುಂತಾದವುಗಳನ್ನು ಕಲಿಯ ಬಹುದು. ನಮ್ಮ ಪೂರ್ವಚಾರ್ಯ ಸ್ತೋತ್ರ ಗ್ರಂಥಗಳನ್ನು ಕಲಿಯಲು ಇದು ಒಳ್ಳೆಯ ಸಮಯ. ಈ ಸಮಯದಲ್ಲಿ ನಮ್ಮ ಆಚಾರ್ಯರ ತನಿಯನ್ಗಳನ್ನು   ಮತ್ತು ವಾಜ್ಹಿ ತಿರುನಾಮನ್ಗಲ್ ಕಲಿಯ ಬಹುದು.

  • ಅಲ್ಲದೆ, ಈ ಸಮಯದಲ್ಲಿ ರಹಸ್ಯ ಗ್ರಂಥಗಳನ್ನು ಕಲಿಯಲು ತೊಡಗಬಹುದು ಮತ್ತು ಅದೇ ರೀತಿಯಲ್ಲಿ ನೆನಪಿಟ್ಟುಕೊಳ್ಳಬಹುದು.

ಈ ಸಮಯದಲ್ಲಿ ದಿವ್ಯ ಪ್ರಭಂದಗಳನ್ನು ಹೇಳುವುದಾಗಲಿ ಕಲಿಯುವದಾಗಲಿ ಇಲ್ಲದಿದ್ದರೂ, ಸಂತೋಷ ಪಡಲು ಬಹಳಷ್ಟು ಅನುಭವಿಸಲು ಕೆಲವು ಅಂಶಗಳು ಇಲ್ಲಿವೆ:

  • ಹೆಚ್ಚು ನಿರೀಕ್ಷಿತ ಮತ್ತು ಅದ್ಭುತವಾದ ಅಧ್ಯಯನ  ಉತ್ಸವ – ಇದು ವೈಷ್ಣವರಿಗೆ ಮುಖ್ಯವಾಗಿರುವ ಉತ್ಸವ – 20  ಬಹಳ ಸುಂದರವಾದ ದಿನಗಳು ಪೂರ್ಣ ಭಗವತ್ ಅನುಭವ.

  • ಬಹುನಿರೀಕ್ಷಿತ ಮತ್ತು ಸುಂದರವಾದ ಮಾರ್ಗಜ್ಹಿ (ಧನುರ್) ತಿಂಗಳು ಮತ್ತು ಆಂಡಾಳ್ ನಾಚ್ಚಿಯಾರ್ ಕೃಪೆಯಿಂದ ನಮಗೆ ಪಡೆದಿರುವ ತಿರುಪ್ಪಾವೈ ಅನುಭವ.

  • ನಮ್ಮ ಪೂರ್ವಚಾರ್ಯ ಅತ್ಯಂತ ಅದ್ಭುತವಾದ ಶಾಸ್ತ್ರಗಳ ಸಾರದಿಂದ ತುಂಬಿರುವ ಸ್ತೋತ್ರ ಗ್ರಂಥಗಳ್ಳನ್ನು,  ಸರಳ ಮತ್ತು ದೈವಿಕ ಸಂಸ್ಕೃತ ಭಾಷೆಯಲ್ಲಿ ಕಲಿಯುವ ಅವಕಾಶ ಮತ್ತು ಪೂರ್ವಾಚಾರ್ಯರ , ತಮಿಳು ಪ್ರಭಂಧಗಳನ್ನು ಕಲಿಯಲು ಮತ್ತು ಪಾಲಿಸಲು ಒಳ್ಳೆಯ ಸಮಯ .

ಹೀಗಾಗಿ ನಾವು ಈ ಲೇಖನದಲ್ಲಿ ಅನಧ್ಯಯನ ಕಾಲ ಮತ್ತು ಅಧ್ಯಯನ ಉತ್ಸವದ ಕೆಲವು ಅಂಶಗಳನ್ನು ಗಮನಿಸಿದ್ದೇವೆ.ಇಡೀ ಪ್ರಪಂಚದ ಉನ್ನತಿಗಾಗಿ ದಿವ್ಯ ಪ್ರಭಂಧದ ದೈವಿಕ ತತ್ವಗಳನ್ನು ಕಲಿಸಲು ಮನವಾಳ ಮಾಮುನಿಗಳ್ ಅವರ ಜೀವನ ಪೂರ್ತಿ ಕಾಲ ಕಳೆದುಕೊಂಡ ನಂತರ ನಮ್ಮಾಳ್ವಾರ್ ಮತ್ತು ತಿರುವಾಯ್ಮೊಳಿಯ ಕೀರ್ತಿಗಳು ಉತ್ತುಂಗಕ್ಕೇರಿತು.ಅಷ್ಟೇ ಅಲ್ಲದೆ, ಅವರು ಆಳ್ವಾರ್ ಮಾತು ಆಚಾರ್ಯರ ಅದ್ಭುತವಾದ ಸಾಹಿತ್ಯದಲ್ಲಿ ಹೇಳಿರುವ ಶ್ರೀವೈಷ್ಣವರ ಮಹಾ ಗುಣಗಳನ್ನು ಪ್ರಾಯೋಗಿಕವಾಗಿ ಪ್ರದರ್ಶಿಸಿದರು.ಅದಕ್ಕಾಗಿಯೇ  ನಮ್ ಪೆರುಮಾಳ್  ಸ್ವತಃ ಮಾಮುನಿಗಳ ವಿಶಿಷ್ಟ / ಅದ್ಭುತವಾದ ಗುಣವನ್ನು ಒಪ್ಪಿಕೊಂಡರು ಮತ್ತು ಇಡೀ ವರ್ಷ ಭಗವತ್ ವಿಷಯ್ಯ (ನಮಪಿಳ್ಳೈ ಅವರ “ಈಡು ವ್ಯಾಖ್ಯ್ಯಾನಮ್” ಮತ್ತು “ತಿರುವಾಯ್ಮೊಳಿ ಮತ್ತು ಇತರ ವ್ಯಾಖ್ಯಾನಗಳ್ಳನ್ನು” ) ಉಪನ್ಯಾಸಗಳನ್ನು ನೀಡಲು ಆದೇಶಿಸಿದರು.ಉಪನ್ಯಾಸ ಸರಣಿಯನ್ನು ಪೂರ್ಣಗೊಳಿಸಿದಾಗ,ಉತ್ತಮ ಆನಿ ತಿರುಮೂಲಂ ದಿನದಂದು ಶ್ರೀ ರಂಗನಾಥ ಚಿಕ್ಕ ಹುಡುಗನಂತೆ ಕಾಣುತ್ತಾನೆ ಮತ್ತು “ಶ್ರೀ  ಶೈಲೇಶ ದಯಾ ಪಾತ್ರಮ್ “ಥಣಿಯನ್ನು ಮೆಚ್ಚಿ ನಮ್ಮಗೆ  ಕೊಟ್ಟನ್ನು ಮತ್ತು ಮಾಮುನಿಗಳನ್ನು ಅವನ ಆಚಾರ್ಯರಾಗಿ ಸ್ವೀಕರಿಸುತ್ತಾನೆ.

 

ಸದ್ಯದಲ್ಲಿಯೇ ಪ್ರಾರಂಭಿಸಲಿರುವ ಈ ಮಹಾ ಆಚರಣೆಗಳಿಗಾಗಿ ನಾವು ನಮ್ಮನ್ನು ತಯಾರು ಮಾಡೋಣ.

ಅಡಿಯೆನ್ ಶ್ರೀ ಲತಾ ರಾಮಾನುಜ ದಾಸಿ

ಮೂಲ: https://granthams.koyil.org/2013/11/anadhyayana-kalam-and-adhyayana-uthsavam/

ರಕ್ಷಿತ ಮಾಹಿತಿ:  https://granthams.koyil.org

 

ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಧರ್ಮಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – https://pillai.koyil.org

 

2 thoughts on “ಅನಧ್ಯಯನ ಕಾಲ ಮತ್ತು ಅಧ್ಯಯನ ಉತ್ಸವ”

Leave a Comment