ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ
ಸೂತ್ರಮ್ – 16
ಪರಿಚಯ: ಯಾವುದಾದರೂ ಸಂದರ್ಭದಲ್ಲಿ ಅವನು ದೂರದಲ್ಲಿದ್ದಾಗ ಅವನನ್ನು ಹೆಸರಿಸುವ ಈ ಶಬ್ದವು ನೆರವಾಗಿದೆಯೇ? ಎಂಬ ಪ್ರಶ್ನೆಗೆ ಲೋಕಾಚಾರ್‍ಯರು ದ್ರೌಪದಿಯು ಅತೀವ ಸಂಕಟದಲ್ಲಿದ್ದಾಗ ಅವಳಿಗೆ ವಸ್ತ್ರವನ್ನು ಕೊಡುವ ಮೂಲಕ ಈ ಪದವು ನೆರವಾಗಿದೆ ಎಂದು ಸೂತ್ರ 16 ರಲ್ಲಿ ಹೇಳಿದ್ದಾರೆ.
ದ್ರೌಪದಿಕ್ಕು ಆಪತ್ತಿಲೇ ಪುಡುವೈ ಸುರಂದದು ತಿರುನಾಮಮಿಱೇ.
ಸರಳ ಅರ್ಥ: ದ್ರೌಪದಿಯು ಆಪತ್ತಿನಲ್ಲಿರುವಾಗ ಅವಳಿಗೆ ಸೀರೆಯ ಭಂಡಾರವನ್ನೇ ಅವನ ಈ ದಿವ್ಯ ನಾಮವು (ತಿರುನಾಮಮ್) ಕೊಟ್ಟಿದೆ.
ವ್ಯಾಖ್ಯಾನಮ್: ದುಃಶ್ಶಾಸನನು ಹಿರಿಯ ಸಭೆಯಲ್ಲಿ ದ್ರೌಪದಿಯ ಸೀರೆಯನ್ನು ಎಳೆಯುವಾಗ, ದ್ರೌಪದಿಯು ಮಹರ್ಷಿ ವಸಿಷ್ಠರು ಬೋಧಿಸಿದ ಬಹಳ ಪುರಾತನವಾದ ಹೇಳಿಕೆಯನ್ನು ನೆನಪಿಸಿಕೊಂಡಳು, ಭಾರತಮ್ ಸಭಾ ಪರ್ವಮ್ – ದ್ಯೂತ ಪರ್ವಮ್ – 90-42:
ಮಹತ್ಯಾಪದಿ ಸಂಪ್ರಾಪ್ತೇ ಸ್ಮರ್ತವ್ಯೋ ಭಗವಾನ್ ಹರಿಃ
(ಅತೀ ಸಂಕಟಕ್ಕೊಳಗಾದಾಗ ಅವರು ಹರಿಯನ್ನು ನೆನಪಿಸಿಕೊಳ್ಳಬೇಕು.)
ಶಂಖ ಚಕ್ರ ಗದಾಪಾಣೇ ದ್ವಾರಕಾ ನಿಲಯ ಅಚ್ಯುತ ।
ಗೋವಿಂದ ಪುಣ್ಡರೀಕಾಕ್ಷ ರಕ್ಷ ಮಾಮ್ ಶರಣಾಂಗತಾಮ್ ॥
(ಶಂಖ ಚಕ್ರ, ಗದೆಯನ್ನು ಕೈಯಲ್ಲಿ ಹಿಡಿದಿರುವ ಓ ಭಗವಂತನೇ! ದ್ವಾರಕದಲ್ಲಿ ನೆಲೆಸಿರುವ ಅಚ್ಯುತ! ಗೋವಿಂದ! ಕಮಲದಂತಹ ಕಣ್ಣುಗಳನ್ನು ಹೊಂದಿರುವವನೇ! ನಿನ್ನನ್ನು ಶರಣು ಹೊಂದಿರುವ ನನ್ನನ್ನು ರಕ್ಷಿಸು).
ದೂರದಲ್ಲಿರುವ ಅವನು ಭಾರತಮ್ – ಉದ್ಯೋಗ ಪರ್ವಮ್-47-39ರಲ್ಲಿ ಉಲ್ಲೇಖಿಸಿರುವಂತೆ ,ಈ ರೀತಿ ಹೇಳುತ್ತಾನೆ, :
“ಗೋವಿಂದೇತಿ ಯದ್ ಆಕ್ರಂದತ್ ಕೃಷ್ಣಾ ಮಾಮ್ ದೂರವಾಸಿನಮ್”
(ದ್ರೌಪದಿಯು ದೂರದಲ್ಲಿದ್ದುಕೊಂಡು ನನ್ನನ್ನು “ಗೋವಿಂದ” ಎಂದು ಕರೆಯುತ್ತಿರುವುದು ನನಗೆ ತೀರಿಸಲಾರದ ಋಣವಾಗಿ ಬೆಳೆಯುತ್ತಿದೆ, ಅದು ನನ್ನ ಹೃದಯವನ್ನು ಬಿಟ್ಟು ಎಂದಿಗೂ ಹೋಗುವುದಿಲ್ಲ.)
ಅವನು ದ್ರೌಪದಿಗೆ ಗೋವಿಂದ ಎಂಬ ನಾಮವನ್ನು ಉಚ್ಚರಿಸಿದ್ದಕ್ಕಾಗಿ ವಸ್ತ್ರದ ಹೊಳೆಯನ್ನೇ ಹರಿಸಿದನು. ಗೋವಿಂದ ಎಂಬ ನಾಮವು ಆ ಅವತಾರಕ್ಕೆ ಮಾತ್ರ ಮೀಸಲಾದದ್ದು. ಈ ಒಂದು ನಾಮವು ನಾರಾಯಣ ಎಂಬ ದಿವ್ಯ ನಾಮದ ಒಂದೇ ಒಂದು ಭಾಗವನ್ನು ಪ್ರತಿಬಿಂಬಿಸುತ್ತದೆ. ಹಾಗಾದರೆ ಲೋಕಾಚಾರ್‍ಯರು ತಿರುನಾಮದ ಮಹತ್ವವನ್ನು, ಪರಿಣಾಮಕಾರಿತ್ವವನ್ನು ಯಾರಿಂದಲೂ ವರ್ಣಿಸಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ.
ಸೂತ್ರಮ್ – 17
ಪರಿಚಯ: ಲೋಕಾಚಾರ್‍ಯರು ಈ ದಿವ್ಯ ನಾಮದ ಶ್ರೇಷ್ಠತೆಯನ್ನು ಮತ್ತೂ ನಿರೂಪಿಸುತ್ತಾರೆ, 17ನೆಯ ಸೂತ್ರದಲ್ಲಿ ‘ಸೊಲ್ಲುಮ್ ಕ್ರಮಮ್ ಒೞಿಯ ಚೊನ್ನಾಲುಮ್’ ಎಂದು ಆರಂಭಿಸಿ.
ಸೊಲ್ಲುಮ್ ಕ್ರಮಮ್ ಒೞಿಯ ಚೊನ್ನಾಲುಮ್ ತನ್ ಸ್ವರೂಪಮ್ ಕೆಡ ನಿಲ್ಲಾದು.
ಸರಳ ಅರ್ಥ: ಈ ದಿವ್ಯ ನಾಮವನ್ನು ಅತ್ಯಂತ ಶ್ರದ್ಧೆಯಿಂದ ಪಠಿಸಲಾಗದಿದ್ದರೂ, ಅದು ತನ್ನ ಶ್ರೇಷ್ಠತೆಯನ್ನು , ಫಲವನ್ನೂ ಕಳೆದುಕೊಳ್ಳುವುದಿಲ್ಲ.
ವ್ಯಾಖ್ಯಾನಮ್: ಯಾವ ಮಂತ್ರವಾದರೂ ಅದನ್ನು ಉಚ್ಛರಿಸುವವರಿಗೆ ಬಯಸಿದ ಫಲವನ್ನು ಕೊಟ್ಟೇ ಕೊಡುತ್ತದೆ, ಆದರೆ ಅದನ್ನು ಪೂರ್ತಿಯಾಗಿ ನಂಬಿ ಪಠಿಸಿದಾಗ. ಈ ಸಾಮಾನ್ಯ ಆಚರಣೆಗೆ ವಿರುದ್ಧವಾಗಿ ಈ ಮಂತ್ರವು, ಇದನ್ನು ಸಾಧಾರಣವಾಗಿ ಪಠಿಸಿದರೂ, ಇದು ಅವರನ್ನು ರಕ್ಷಿಸುತ್ತದೆ ಎಂದು ಭಾಗವತಮ್ 6-3-14 ರಲ್ಲಿ ಹೇಳಲಾಗಿದೆ:
ಸಾಂಕೇತ್ಯಮ್ ಪಾರಿಹಾಸ್ಯಂಚ ಸ್ತೋಭಮ್ ಹೇಲನಮೇವ ವಾ
(ಈ ನಾಮವನ್ನು ಉಚ್ಛರಿಸುವವರು ಇದನ್ನು ಬೇರೆಯವರನ್ನು ಉದ್ದೇಶಿಸಿ, ಅಥವಾ ವ್ಯಂಗ್ಯೋಕ್ತಿ – ಕೊಂಕುನುಡಿಯಿಂದ, ಅಥವಾ ಅರ್ಥವನ್ನು ಮನಗಾಣದೇ, ಅಥವಾ ಹಾಸ್ಯಾಸ್ಪದವಾಗಿ ಉಚ್ಛರಿಸಿದರೂ, ವೈಂಕುಂಠನಾಥನ ನಾಮವು ಅವರ ಪಾಪಗಳನ್ನೆಲ್ಲಾ ತೊಳೆದುಹಾಕುತ್ತದೆ.)
ಇದು ಉಚ್ಛರಿಸುವವನ ಅವಶ್ಯಕತೆಗಳನ್ನು ಗುರುತಿಸಿ ಆದರೆ ಅವನ ಉದ್ದೇಶವನ್ನು, ಅದನ್ನು ಉಚ್ಛರಿಸುವ ರೀತಿಯನ್ನು, ಕಡೆಗಣಿಸುತ್ತದೆ. ಅದು ಅದರ ಮೂಲ ಸ್ವರೂಪವಾದ ರಕ್ಷಿಸುವ ಸ್ವಭಾವವನ್ನು ಬಿಡುವುದಿಲ್ಲ.
ಸೂತ್ರಮ್ – 18
ಪರಿಚಯ: ಈ 18ನೆಯ ಸೂತ್ರದಲ್ಲಿ ಲೋಕಾಚಾರ್‍ಯರು ಕರುಣೆಯಿಂದ , ಇದನ್ನು ಉಚ್ಛರಿಸುವವನ ಎಲ್ಲಾ ನಿರೀಕ್ಷೆಗಳನ್ನು, ಬಯಕೆಗಳನ್ನು, ಅವಶ್ಯಕತೆಗಳನ್ನು ಪೂರ್ತಿಯಾಗಿ ನೆರವೇರಿಸುತ್ತದೆ ಎಂದು ತಿಳಿಸಿದ್ದಾರೆ.
ಇದುದಾನ್ ‘ಕುಲಮ್ ತರುಮ್’ ಎಂಗಿಱಪ್ಪಾಡಿಯೇ ಎಲ್ಲಾ ಅಪೇಕ್ಷಿತಂಗಳೈಯುಮ್ ಕೊಡುಕ್ಕುಮ್.
ಸರಳ ಅರ್ಥ: ‘ಕುಲಮ್ ತರುಮ್’ ನಲ್ಲಿ ಹೇಳಿಕೆಯಿರುವ ಹಾಗೆ ಎಲ್ಲಾ ಅಪೇಕ್ಷೆಗಳನ್ನೂ ಇದು ಈಡೇರಿಸುತ್ತದೆ.
ವ್ಯಾಖ್ಯಾನಮ್: ಏನೆಂದರೆ, ಈ ಮಂತ್ರವು ಎಲ್ಲಾ ಪ್ರಯೋಜನಗಳನ್ನೂ ಮತ್ತು ಅಪೇಕ್ಷೆಗಳನ್ನೂ ತಿರುಮಂಗೈ ಆೞ್ವಾರರು ಅವರ ಪೆರಿಯ ತಿರುಮೊೞಿ 1-1-9 ‘ಕುಲಮ್ ತರುಮ್’ ಪಾಸುರದಲ್ಲಿ ಹೇಳಿರುವ ಹಾಗೆ ಅವರವರ ಯೋಗ್ಯತೆಗೆ ತಕ್ಕಂತೆ ಫಲವನ್ನು ಕೊಡುವುದು ಎಂದು ಅರ್ಥ.
ಸೂತ್ರಮ್ – 19
ಪರಿಚಯ: ಲೋಕಾಚಾರ್‍ಯರು ಇದನ್ನು ನಂತರದ 19ನೆಯ ಸೂತ್ರದಲ್ಲಿ ತಿಳಿಸಿದ್ದಾರೆ.
ಐಶ್ವರ್‍ಯ ಕೈವಲ್ಯ ಬಗವಲ್ಲಾಬಂಗಳೈ ಆಸೈಪ್ಪಟ್ಟವರ್ಗಳುಕ್ಕು ಅವಱ್ಱೈ ಕೊಡುಕ್ಕುಮ್.
ಸರಳ ಅರ್ಥ: ಇದು ಐಶ್ವರ್‍ಯ, ಕೈವಲ್ಯ ಮತ್ತು ಭಗವದ್ ಪ್ರಾಪ್ತಿಗಳನ್ನು ಆಯಾ ಯಾಚಕರ ಅನುಸಾರವಾಗಿ ಕೊಡುವುದು.
ವ್ಯಾಖ್ಯಾನಮ್: ಈ ಮಂತ್ರವನ್ನು ಪಠಿಸುವವರಿಗೆ ಯಾರಿಗೆ ಲೌಕಿಕ ಆಸಕ್ತಿಯಿರುವವರಿಗೆ ಈ ಲೋಕದಲ್ಲಿ ಮತ್ತು ಮುಂದಿನ ಲೋಕದಲ್ಲಿಯೂ ಐಶ್ವರ್‍ಯವನ್ನು ಕೊಡುತ್ತದೆ. ಕೈವಲ್ಯವನ್ನು ಯಾರು ಜನನ ಮರಣಗಳಿಂದ ಮುಕ್ತಿಯನ್ನು ಬಯಸುತ್ತಾರೋ ಅವರಿಗೆ ಕೊಡುತ್ತದೆ. ಮತ್ತು ಅತಿ ಉಚ್ಛವಾದ ವರವಾದ ಸರ್ವೇಶ್ವರನ ಪಾದಕಮಲಗಳನ್ನು ನಿರಂತರವಾಗಿ ಸೇವೆ ಮಾಡುವ ಭಾಗ್ಯವನ್ನು ಪ್ರಪನ್ನರಿಗೆ ಅವರವರ ಧ್ಯಾನ ಮತ್ತು ಪರಿತ್ಯಾಗಗಳಿಗೆ ಅನುಸಾರವಾಗಿ ವೃದ್ಧ ಹಾರಿತ ಸ್ಮೃತಿ 6-50 ರಲ್ಲಿ ಹೇಳಿರುವ ಹಾಗೆ ಕೊಡುತ್ತದೆ:
ಐಹ ಲೌಕಿಕಮ್ ಐಶ್ವರ್‍ಯಮ್ ಸ್ವರ್ಗಾಧ್ಯಮ್ ಪಾರ ಲೌಕಿಕಮ್ ।
ಕೈವಲ್ಯಮ್ ಭಗವಂತಂಚ ಮಂತ್ರೋಯಮ್ ಸಾಧಯಿಶ್ಯತಿ ॥
( ಈ ಮಂತ್ರವು ಲೌಕಿಕ ಐಶ್ವರ್‍ಯವನ್ನೂ, ಬೇರೆ ಲೋಕಗಳ ಐಶ್ವರ್‍ಯವನ್ನು ಸ್ವರ್ಗವನ್ನೂ, ಅಥವಾ ತನ್ನ ಆತ್ಮವನ್ನೇ ತಾನು ಆನಂದಿಸುವ ಕೈವಲ್ಯವನ್ನೂ, ಅಥವಾ ಭಗವಂತನ ಅನುಭವ ಪಡೆಯುವುದನ್ನು ಅವರವರ ಇಚ್ಛೆಗೆ ಅನುಗುಣವಾಗಿ ಕೊಡುತ್ತದೆ.)
ಸೂತ್ರಮ್ – 20
ಪರಿಚಯ: ನಂತರದಲ್ಲಿ ಲೋಕಾಚಾರ್‍ಯರು ಹೇಗೆ ಕರ್ಮ ಜ್ಞಾನ ಭಕ್ತಿ ಯೋಗದಲ್ಲಿ ಮುಳುಗಿರುವವರಿಗೆ ಪೂರಕವಾಗಿ ಮುಂದೆ ತರಲು ಪ್ರಯತ್ನಿಸುತ್ತದೆ ಎಂದು 20ನೆಯ ಸೂತ್ರದಲ್ಲಿ ವಿವರಿಸಿದ್ದಾರೆ.
ಕರ್ಮ ಜ್ಞಾನ ಬಕ್ತಿಗಳಿಲೇ ಇೞಿಂದವರ್ಗಳುಕ್ಕು ವಿರೋಧಿಯೈ ಪ್ಪೋಕ್ಕಿ ಅವಱ್ಱೈ ತಲೈಕಟ್ಟಿ ಕೊಡುಕ್ಕುಮ್.
ಸರಳ ಅರ್ಥ: ಯಾರು ಕರ್ಮ, ಜ್ಞಾನ , ಭಕ್ತಿ ಯೋಗಗಳಲ್ಲಿ (ಕಾರ್ಯಗಳು, ಅರಿವು, ಮತ್ತು ಭಕ್ತಿಯೆಂಬ ಮಾರ್ಗಗಳಿಂದ) ತೊಡಗಿರುವವರಿಗೆ, ಅವರವರ ಅಡ್ಡಿ ಆತಂಕಗಳನ್ನು ತೊಡೆದು ಹಾಕಿ, ಅವರಿಗೆ ಅಂತಿಮ ಫಲವನ್ನು ಕೊಡುತ್ತದೆ.
ವ್ಯಾಖ್ಯಾನಮ್: ಕರ್ಮ ಯೋಗಿಗಳಿಗೆ, ಅವರ ಧ್ಯಾನ, ಪದ್ಧತಿಗಳಿಗೆ ಅನುಸಾರವಾಗಿ ಪೂರಕವಾಗಿ ಈ ಮಂತ್ರವು ಅವರ ಕರ್ಮಯೋಗದ ಪ್ರಾರಂಭದಲ್ಲಿ ಅಡ್ಡಿಯಾಗಿರುವ ಪಾಪಗಳನ್ನು ತೊಡೆದುಹಾಕಿ, ಅವರಿಗೆ ಅವರು ಬಯಸಿದ ಕರ್ಮ ಯೋಗದ ಫಲವನ್ನು ದಯಪಾಲಿಸುವುದು. ಜ್ಞಾನ ಯೋಗಿಗಳಿಗೆ, ಇದು ಜ್ಞಾನವನ್ನು ಪಡೆಯಲು ಬರುವ ಅಡ್ಡಿ ಆತಂಕಗಳನ್ನು ಕರ್ಮ ಯೋಗದ ಮೂಲಕ ತೊಡೆದು ಹಾಕಿ, ಅದಕ್ಕೆ ಅಡ್ಡಿಯಾಗಿರುವ ಪಾಪಗಳನ್ನು ಅಳಿಸಿ, ಅವರ ಬುದ್ಧಿಯನ್ನು ಪ್ರಕಾಶಮಾನಗೊಳಿಸಿ, ದಿನದಿಂದ ದಿನಕ್ಕೆ ಅವರಿಗೆ ಪರಮಾನಂದವನ್ನು ಹೆಚ್ಚಿಸುವುದು. ಯಾರು ಭಕ್ತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೋ, ಅವರು ಈ ಮಂತ್ರವನ್ನು ಪೂರಕವಾಗಿ ಅಳವಡಿಸಿಕೊಂಡರೆ, ಅಂತಹ ಭಕ್ತಿಗೆ ಅವರ ಪ್ರಾರಂಭದಲ್ಲಿನ ಪಾಪಗಳನ್ನು ನಾಶಪಡಿಸಿ, ಅವರ ಭಕ್ತಿಯನ್ನು ಇನ್ನೂ ಮುಂದಕ್ಕೆ ತೆಗೆದುಕೊಂಡು ಹೋಗಿ ಅವರ ಉದ್ದೇಶವನ್ನು ಸಫಲಗೊಳಿಸುತ್ತದೆ.
ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ.
ಮೂಲ : https://granthams.koyil.org/2020/06/11/mumukshuppadi-suthrams-16-20-english/
ಆರ್ಕೈವ್ ಮಾಡಲಾಗಿದೆ – https://granthams.koyil.org
ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org
2 thoughts on “ಮುಮುಕ್ಷುಪ್ಪಡಿ – ಸೂತ್ರಮ್ 16 – 20”