ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ
ಆ ಸಮಯದಲ್ಲಿ, ಪಡುಗೈ ಚಕ್ರವರ್ತಿ ದೇವಸ್ಥಾನದ ಬಳಿ ದೇವರಾಜರ್ [ನಂಬೂರ್ ವರಧರಾಜರ್ ಎಂದೂ ಕರೆಯುತ್ತಾರೆ] ಎಂಬ ಹೆಸರಿನ ವ್ಯಕ್ತಿ ಪಡುಗೈ ಚಕ್ರವರ್ತಿ ದೇವಸ್ಥಾನದ ಬಳಿ ವಾಸಿಸುತ್ತಿದ್ದರು. ಅವರನ್ನು , ಪರಿಣಿತರು ಅಥವಾ ಸಾಮಾನ್ಯರು ಎಂಬ ಭೇದವಿಲ್ಲದೆ ಎಲ್ಲರಿಗೂ ಇಷ್ಟವಾಗಿದ್ದರು.ಅವರು ತುಂಬಾ ಕರುಣಾಮಯಿ ಮತ್ತು ಸತ್ವ( ಶುದ್ಧವಾಗಿ ಉತ್ತಮ ಗುಣಗಳು) ಗುಣಗಳನ್ನು ಪ್ರದರ್ಶಿಸುತ್ತಿದ್ದರು. ನಂಜೀಯರ್ ಅವರು ಒಂದು ದಿನ ಕನಸನ್ನು ಕಂಡರು, ಅದರಲ್ಲಿ ಅವರು ದೇವರರಾಜರನ್ನು ಕರೆಯಲು ಕೇಳಿಕೊಂಡರು, ಅವರಿಗೆ ವಿಶಿಷ್ಟಾದ್ವೈತ ತತ್ತ್ವಶಾಸ್ತ್ರಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಸೂಚನೆ ನೀಡಲು ಮತ್ತು ಅವರನ್ನು ಒನ್ಬದು ಆಯಿರಪಡಿ ಪ್ರತಿಗಳನ್ನು ಮಾಡಲು ಕೇಳಿದರು. ಇದಕ್ಕೆ ಆಳ್ವಾರರ ಕೃಪೆಯೇ ಕಾರಣ ಎಂದು ನಂಜೀಯರ್ ಭಾವಿಸಿ ತಮ್ಮ ಶಿಷ್ಯರಲ್ಲಿ ದೇವರಾಜರನ್ನು ಕುರಿತು ವಿಚಾರಿಸಿದರು. ದೇವರಾಜರನ್ನು ಅವರ ಬಳಿಗೆ ಕರೆತಂದರು. ನಂಜೀಯರ್ ಅವರನ್ನು ಆಶೀರ್ವದಿಸಿ, ತಾಳೆಗರಿಯನ್ನು ನೀಡಿ ಅದರ ಮೇಲೆ ಬರೆಯುವಂತೆ ಹೇಳಿದರು.ದೇವರಾಜರ್ ಬರೆದರು “ನಂಜೀಯರ್ ದೈವಿಕ ಪಾದಗಳೆ ಆಶ್ರಯ, ಭಟ್ಟರ ದೈವಿಕ ಪಾದಗಳೆ ಆಶ್ರಯ” ಮತ್ತು ಅವರ ದಿವ್ಯ ಪಾದಗಳನ್ನು ಹಿಡಿದುಕೊಂಡು ನಂಜೀಯರ್ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡಿದರು. ನಂಜೀಯರ್ ಸಂತೋಷಪಟ್ಟರು, ಅವರನ್ನು ಕರುಣೆಯಿಂದ ಆಶೀರ್ವದಿಸಿದರು ಮತ್ತು ತಿರುವಾಯ್ಮೊಳಿಯ ನಿಖರವಾದ ಅರ್ಥಗಳನ್ನು ಸಂಕ್ಷಿಪ್ತವಾಗಿ ಹೇಳಿದರು. ಅವರು ದೇವರಾಜರಿಗೆ ಖಾಲಿ ತಾಳೆಗರಿಗಳನ್ನು ಅರ್ಪಿಸಿದರು ಮತ್ತು ಒನ್ಬದು ಆಯಿರಪಡಿಯ ಅಚ್ಚುಕಟ್ಟಾದ ಪ್ರತಿಗಳನ್ನು ಮಾಡಲು ಹೇಳಿದರು. ದೇವರಾಜರು ಅವರಿಂದ ಅನುಮತಿ ಪಡೆದು ಕಾವೇರಿ ನದಿಯನ್ನು ದಾಟುತ್ತಿದ್ದಾಗ ನದಿಯಲ್ಲಿ ಹಠಾತ್ ಪ್ರವಾಹ ಉಂಟಾಯಿತು. ಉತ್ತಮ ಈಜುಗಾರ ರಾಗಿದ ದೇವರಾಜರು ಒನ್ಬದು ಆಯಿರಪಡಿಯ ಮೂಲ ಹಸ್ತಪ್ರತಿ ಹಾಗೂ ಖಾಲಿ ತಾಳೆ ಎಲೆಗಳನ್ನು ತಲೆಯ ಮೇಲೆ ಕಟ್ಟಿಕೊಂಡು ಈಜಲು ಆರಂಭಿಸಿದರು. ಪ್ರವಾಹವು ತೀವ್ರವಾಗಿದ್ದರಿಂದ, ಹಸ್ತಪ್ರತಿಗಳು ಮತ್ತು ಖಾಲಿ ತಾಳೆ ಎಲೆಗಳು ಅವರ ತಲೆಯಿಂದ ಜಾರಿದವು ಮತ್ತು ಪ್ರವಾಹದ ನೀರಿನಿಂದ ಒಯ್ಯಲ್ಪಟ್ಟವು. ದೇವರಾಜರು ತುಂಬಾ ದುಃಖಿತರಾದರು, “ನಾನು ನನ್ನ ಆಚಾರ್ಯ (ಶಿಕ್ಷಕ) ಮೇಲೆ ಘೋರ ಅಪರಾಧವನ್ನು ಮಾಡಿದ್ದೇನೆ” ಎಂದು ಭಾವಿಸಿ ಸಮಾಧಾನವಾಗಲಿಲ್ಲ.ಇಬ್ಬರು ಶ್ರೀವೈಷ್ಣವರು ಅವರ ಸ್ಥಿತಿಯನ್ನು ನೋಡಿ ಅವರನ್ನು ತಮ್ಮ ತಿರುಮಾಲಿಗೈಗೆ (ಅವರ ನಿವಾಸ) ಕರೆದೊಯ್ದರು. ಈ ಘಟನೆಯನ್ನು ಕೇಳಿ ಅವರ ಪತ್ನಿಯೂ ದುಃಖಿತರಾದರು. ಆ ದಿನ ಇಬ್ಬರೂ ಉಪವಾಸ ಆಚರಿಸಬೇಕೆಂದು ಯೋಚಿಸಿದರು. ನಂತರ ಅವಳು ಅವರಿಗೆ “ನಾವು ತಿರುವಾರಾಧನೆ ಮಾಡದೇ ಇರಬಾರದು” [ತಿರುವಾರಾಧನೆ ಎಂಪೆರುಮಾನ್ ಆರಾಧನೆಗೆ ಒಂದು ಸ್ಥಾಪಿತ ವಿಧಾನವಾಗಿದೆ]. ದೇವರಾಜರು ನಂತರ ಸ್ನಾನ ಮಾಡಿ, ಊರ್ಧ್ವಪುಂಡ್ರಗಳನ್ನು (ತಿರುಮನ್ ಕಾಪ್ಪು, ದೇಹದ ಭಾಗಗಳಲ್ಲಿ ಎಂಪೆರುಮಾನ್‌ನ ಸಂಕೇತ) ಅನ್ವಯಿಸಿದರು ಮತ್ತು ಅವರ ತಿರುವಾರಾಧನೆಯನ್ನು ಪ್ರಾರಂಭಿಸಿದರು. ಅವರು ತುಂಬಾ ಉತ್ಸುಕರಾಗಿದ್ದರಿಂದ ನಿದ್ರೆ ಅವರನ್ನು ಮೀರಿ ಏಕಾಏಕಿ ಸಂಭವಿಸಿತು, ಕೋಯಿಲಾಳ್ವಾರ್ (ಒಬ್ಬ ಶ್ರೀ ವೈಷ್ಣವರ ನಿವಾಸದಲ್ಲಿ ಇರುವ ಎಂಪೆರುಮಾನ್ ಅವರ ಗರ್ಭಗುಡಿ) ಒಳಗೆ ನೆಲೆಸಿದ್ದ ಶ್ರೀ ರಂಗರಾಜ ಪೆರುಮಾಳ್ ಅವರಿಗೆ “ಓ ದೇವರಾಜ! ಬಾ! ದುಃಖಿಸಬೇಡ.ನೂತನ ತಾಳೆ ಎಲೆಗಳನ್ನು ತೆಗೆದುಕೊಂಡು ಬರೆಯಲು ಪ್ರಾರಂಭಿಸು. ನಾನು ನಿನ್ನೊಂದಿಗೆ ಇರುತ್ತೇನೆ.” ತಕ್ಷಣವೇ, ದೇವರಾಜರು “ಶ್ರೀಯ: ಪಥಿಯೇ” (ಶ್ರೀ ಮಹಾಲಕ್ಷ್ಮಿಯ ಪತ್ನಿಯಾಗಿ) ಎಂಬ ಪದದಿಂದ ಪ್ರಾರಂಭಿಸಿ, “ಅವರು ಕರುಣಾಮಯಿಯಾಗಿ ವಿಶಿಷ್ಠ ರೀತಿಯಲ್ಲಿ ಆಶೀರ್ವದಿಸಿದರು” ಎಂಬ ಪದಗಳೊಂದಿಗೆ ನಂಜೀಯರ್ ಅವರ ಮಾತುಗಳನ್ನು ನೆನಪಿಸಿಕೊಳ್ಳುತ್ತಾರೆ. ನಂಜೀಯರ್ ಅವರ ಎಲ್ಲಾ ಬೋಧನೆಗಳು ಅವರ ಆಲೋಚನೆಗಳಲ್ಲಿ ದೃಢವಾಗಿ ಬೇರೂರಿದ್ದರಿಂದ, ಅವರು ಅವುಗಳನ್ನು ನೆನಪಿಸಿಕೊಳ್ಳಲು ಮತ್ತು ತಾಳೆಗರಿಗಳ ಮೇಲೆ ಬರೆಯಲು ಸಾಧ್ಯವಾಯಿತು. ಅವರು ಎಂಪೆರುಮಾನ್‌ಗೆ ಕೋಯಿಲ್‌ಆಳ್ವಾರ್‌ನಲ್ಲಿ ಆಹಾರವನ್ನು ಅರ್ಪಿಸಿದರು, ಆ ಆಹಾರವನ್ನು ಸೇವಿಸಿದರು, ಒನ್ಬದು ಆಯಿರಪಡಿಯ ಸಂಪೂರ್ಣ ಶ್ರೀಕೋಸಂ (ಪುಸ್ತಕ ರೂಪದಲ್ಲಿ ದೈವಿಕ ಕೆಲಸ) ಮುಗಿಸಿದರು, ನಂಜೀಯರ್ ಗೆ ಹೋಗಿ, ಅವರ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡಿ, ಹಸ್ತಪ್ರತಿಯನ್ನು ಅರ್ಪಿಸಿದರು. ನಂಜೀಯರ್ ತುಂಬಾ ಸಂತೋಷಪಟ್ಟರು, ಹಸ್ತಪ್ರತಿಯನ್ನು ತೆಗೆದುಕೊಂಡು ಓದಲು ಪ್ರಾರಂಭಿಸಿದರು. ನಂಜೀಯರ್ ಗೆ ಸಂದೇಹವಿದ್ದ ಕೆಲವು ಸ್ಥಳಗಳಲ್ಲಿ ಮತ್ತು ಭಾಷ್ಯವನ್ನು ಸಂಪೂರ್ಣವಾಗಿ ಪೂರ್ಣಗೋಳಿಸದೆ ಇದ್ದಲ್ಲಿ , ದೇವರಾಜರು ಅರ್ಥಗಳನ್ನು ಚೆನ್ನಾಗಿ ವಿವರಿಸಲಾಗಿದೆ ಎಂದು ಅವರು ಕಂಡುಕೊಂಡರು. ಅವರು ದೇವರಾಜರನ್ನು ಕರೆದು ಹೇಳಿದರು “ಇದೇನು ವಿಸ್ಮಯ! ಇದು ಎಂತಹ ಬುದ್ಧಿವಂತಿಕೆ! ಇದು ಹೇಗಾಯಿತು?” ದೇವರಾಜರಿಗೆ ಸಂಭವಿಸಿದ ಎಲ್ಲವನ್ನೂ ಹೇಳಿದರು (ಅವರು ನಂಜೀಯರ್ ಸಭೆಯಿಂದ ಹೊರಬಂದ ಸಮಯದಿಂದ). ಜೀಯರ್ ಸಂತಸಗೊಂಡು ಎದ್ದು ದೇವರಾಜರನ್ನು ಅಪ್ಪಿಕೊಂಡು “ನೀನು ನಂಪಿಳ್ಳೈ ಯೇ?” ಎಂದು ಹೇಳಿದರು. (ನಮ್ಮ ಅಸಾಮಾನ್ಯ ಮಗ) ನಂತರ ಅವರು ತಮ್ಮ ತಿರುವಾರಾಧನೆ ಪೆರುಮಾಳ್ ” ಆಯರ್ಧೆವು” ಅನ್ನು ಪೂಜಿಸಿ, ದೇವರಾಜರಿಗೆ ನಂಪಿಳ್ಳೈ ಎಂಬ ಬಿರುದನ್ನು ನೀಡಿದರು, ಅವರನ್ನು ದರ್ಶನಂ ಮುಖ್ಯಸ್ಥರನ್ನಾಗಿ ಮಾಡಿದರು ಮತ್ತು ಅವರ ಆಚಾರ್ಯರಾದ ಭಟ್ಟರ ಅಪೇಕ್ಷೆಯಂತೆ ದರ್ಶನಂ ನ ನಾಯಕನಿಗೆ ಅರ್ಪಿಸಬೇಕಾದ ಉಂಗುರವನ್ನು , ನಂಪಿಳ್ಳೈಗೆ ನೀಡಿದರು. ಅವರು ನಂಪಿಳ್ಳೈ ಗೆ ಹೇಳಿದರು “ನಿಮ್ಮ ಬುದ್ಧಿಮತ್ತೆಗೆ ಅನುಗುಣವಾಗಿ, ತಿರುವಾಯ್ಮೊಳಿಯ ಭಾಷ್ಯವನ್ನು ಬರೆಯಿರಿ ಮತ್ತು ನಮ್ಮ ರಾಮಾನುಸ ದರ್ಶನವನ್ನು (ಶ್ರೀ ರಾಮಾನುಜರ ತತ್ತ್ವಶಾಸ್ತ್ರ) ಅಭಿವೃದ್ಧಿಪಡಿಸಿ” . ಅಂದಿನಿಂದ, ನಂಪಿಳ್ಳೈ ಅವರು ಜ್ಞಾನ, ಭಕ್ತಿ ಮತ್ತು ಲೌಕಿಕ ಅನ್ವೇಷಣೆಯಿಂದ ನಿರ್ಲಿಪ್ತತೆಗೆ ನಿಧಿಯಾದರು. ಅನೇಕ ಶ್ರೀವೈಷ್ಣವರು ಅವರನ್ನು ಹಿಂಬಾಲಿಸಲು ಪ್ರಾರಂಭಿಸಿದರು ಮತ್ತು ಅವರ ಪ್ರವಚನಗಳಿಗೆ ನೆರೆದಿದ್ದ ಜನಸಮೂಹವನ್ನು ನೋಡಿ, ಜನರು “ನಮ್ ಪೆರುಮಾಳ್ ಅವರ ಸಭೆಯೋ ಅಥವಾ ನಂಪಿಳ್ಳೈ ಅವರ ಸಭೆಯೋ” ಎಂದು ಆಶ್ಚರ್ಯಪಟ್ಟರು .
ಅನುವಾದ – ಅಡಿಯೇನ್ ಸುಭದ್ರಾ ರಾಮಾನುಜ ದಾಸಿ
ಪುರಾವೆ ಓದುವಿಕೆ -ಅಡಿಯೇನ್ ಕೊದೈ ರಾಮಾನುಜ ದಾಸಿ
ಮೂಲ : https://granthams.koyil.org/2021/07/19/yathindhra-pravana-prabhavam-4-english/
ಆರ್ಕೈವ್ ಮಾಡಲಾಗಿದೆ – https://granthams.koyil.org
ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org
3 thoughts on “ಯತೀಂದ್ರ ಪ್ರವಣ ಪ್ರಭಾವಂ – ಭಾಗ ೪”