ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ
ನಂಪಿಳ್ಳೈ ಅವರಿಗೆ ಇಬ್ಬರು ಪತ್ನಿಯರಿದ್ದರು. ಒಂದು ದಿನ ಮೊದಲ ಹೆಂಡತಿ ಅಡುಗೆ ಮಾಡಿದರೆ ಮರುದಿನ ಕಿರಿಯ ಹೆಂಡತಿ ಅಡುಗೆ ಮಾಡುತ್ತಿದ್ದರು . ವಿಷಯಗಳು ಹೀಗೆ ನಡೆಯುತ್ತಿರುವಾಗ, ನಂಪಿಳ್ಳೈ ತನ್ನ ಮೊದಲ ಹೆಂಡತಿಯನ್ನು ಕರೆದು ಅವಳನ್ನು “ನಿಮ್ಮ ಮನಸ್ಸಿನಲ್ಲಿ ನನ್ನ ಬಗ್ಗೆ ಏನು ಯೋಚಿಸುತ್ತೀರಿ?” ಎಂದು ಕೇಳಿದರು . ಅದಕ್ಕೆ ಅವಳು ಅವರಿಗೆ ತನ್ನ ನಮಸ್ಕಾರಗಳನ್ನು ಅರ್ಪಿಸಿ , ನಾಚಿಕೆ ಹಾಗು ಭಯದಿಂದ ಉತ್ತರಿಸಿದಳು: “ನೀವು ನಮ್ ಪೆರುಮಾಳ್ ಮತ್ತು ನನ್ನ ಆಚಾರ್ಯರ ಪುನರ್ಜನ್ಮ. ನಿಮ್ಮ ದೈವಿಕ ಪಾದಗಳಲ್ಲಿ ನಾನು ಮಾಡುವ ಯಾವುದೇ ಕೈಂಕರ್ಯಗಳು (ಸೇವೆ) ಮತ್ತು ನಿಮ್ಮ ಮಾತುಗಳ ಅನುಸರಣೆಯೇ ನನ್ನ ಪೋಷಣೆ. ನಂತರ ಅವರು ತನ್ನ ಎರಡನೇ ಹೆಂಡತಿಗೆ ಅದೇ ಪ್ರಶ್ನೆಯನ್ನು ಕೇಳಿದರು . ಅವಳು ಸಂಕೋಚ ಹಾಗು ಭಯದಿಂದ ಉತ್ತರಿಸಿದಳು, “ನೀವು ಗಂಡ ಮತ್ತು ನಾನು ನಿಮ್ಮ ಹೆಂಡತಿ” ಎಂದು ಹೇಳಿದಳು . ಅವಳ ಪ್ರತಿಕ್ರಿಯೆಯನ್ನು ಕೇಳಿದ ನಂಪಿಳ್ಳೈ ತನ್ನ ಮೊದಲ ಹೆಂಡತಿಯನ್ನು ಪ್ರತಿದಿನ ಅಡುಗೆ ಮಾಡಲು ಮತ್ತು ಎರಡನೇ ಹೆಂಡತಿಗೆ ಅವಳ ಸೇವೆಯನ್ನು ಮಾಡಲು ನೇಮಿಸಿದರು. ಮೊದಲ ಹೆಂಡತಿಗೆ ಅಡುಗೆ ಮಾಡಲು ಸಾಧ್ಯವಾಗದ ಆ ದಿನಗಳಲ್ಲಿ ಎರಡನೇ ಹೆಂಡತಿ ಅಡುಗೆ ಮಾಡುತಿದ್ದಳು . ಅವರು ಎಂಪೆರುಮಾನ್‌ಗೆ ಆಹಾರವನ್ನು ಅರ್ಪಿಸಿದರು ಮತ್ತು ನಂತರ ಆ ಪ್ರಸಾದವನ್ನು ಉನ್ನತ ದರ್ಜೆಯಲ್ಲಿ [4 ನೇ ವರ್ಣ] ಜನಿಸಿದ ಪ್ರಿಯ ಶ್ರೀವೈಷ್ಣವರು ಸ್ಪರ್ಶಿಸುವಂತೆ ಮಾಡುತಿದ್ದರು, ಅವರು ರಾಸಾಯನಿಕ ಚಿನ್ನದಂತೇ ಸ್ಪರ್ಶಿಸಿದ ವಸ್ತುಗಳೆಲ್ಲಾ ಚಿನ್ನವಾಗಿ ಪರಿವರ್ತಿಸುವುದು , ಅವರು ಶುದ್ಧ ಹಾಗು ಸತ್ವ ಗುಣದಲ್ಲಿ ಮುಳುಗಿದ್ದಾರೆ ಮತ್ತು ಶ್ರೀವೈಷ್ಣವರಲ್ಲಿ ಅತ್ಯುತ್ತಮವಾಗಿದ್ದರು . ನಂತರ ಆ ಪ್ರಸಾದವನ್ನು ಸೇವಿಸುತ್ತಿದರು . ಇದರೊಂದಿಗೆ, ಅವರ ಎರಡನೆಯ ಹೆಂಡತಿಗೆ ಶುದ್ಧತೆಯ ಕೊರತೆಯಿರುವುದರಿಂದ, ಭಗವಂತನು ಆಹಾರವನ್ನು ಸ್ವೀಕರಿಸಿದರೂ ಸಹಾ , ಅದನ್ನು ಶುದ್ಧ ಶ್ರೀವೈಷ್ಣವರಿಂದ ಸ್ಪರ್ಶಿಸಬೇಕಾಗಿದೆ ಎಂದು ತಿಳಿಯುತ್ತದೆ.
ನಂಪಿಳ್ಳೈ ಅವರಿಗೆ ಅವರ ಎರಡನೇ ಹೆಂಡತಿಯ ಮೂಲಕ ಒಬ್ಬ ಮಗ ಜನಿಸಿದನು. ಶ್ರೀವೈಷ್ಣವರು ಇದನ್ನು ಘೋಷಿಸಿದ ತಕ್ಷಣ, ತಿರುಪ್ಪೇರಾಚ್ಚನೆಂಬ ವ್ಯಕ್ತಿಯೊಬ್ಬರು ಹೇಳಿದರು “ನನಗೆ ಒಬ್ಬ ಅಣ್ಣ ಅವತರಿಸಿದ್ದಾನೆ” ಇದರ ಅರ್ಥವೇನೆಂದರೆ, ಆಚಾರ್ಯರ ಮಗ ಚಿಕ್ಕವನಾದರೂ ಅವರನ್ನು ಹಿರಿಯರೆಂದು ಪರಿಗಣಿಸಲಾಗುತ್ತದೆ.
ಒಂದು ದಿನ ನಂಪಿಳ್ಳೈ ಅವರು ಪಿನ್ಬ್ಅಲಗಿಯ ಪೆರುಮಾಳ್ ಜೀಯರ್ (ಅವರ ಶಿಷ್ಯ) ಮಠದಲ್ಲಿ (ವಾಸಿಸುವ ಕೊಠಡಿಯಲ್ಲಿ ) ಕರುಣೆಯಿಂದ ಉಪಸ್ಥಿತರಿದ್ದರು. ಅವರ ಶಿಷ್ಯರು ಅವರನ್ನು ಕೇಳಿದರು “ನಾವು ಗುರಿಯನ್ನು ಸಾಧಿಸಲು ಆಳ್ವಾರರಂತೆ ಇರಬೇಕು, ನಾವು ಇನ್ನೂ ಮಹಿಳೆಯರು, ಆಹಾರ, ಪಾನೀಯಗಳು ಇತ್ಯಾದಿಗಳಲ್ಲಿ ತೊಡಗಿಸಿಕೊಂಡಿದ್ದೇವೆ. ನಾವು ಈಗ ಏನು ಮಾಡಬೇಕು?” . ಅದಕ್ಕೆ ನಂಪಿಳ್ಳೈ ಕರುಣೆಯಿಂದ ಹೇಳಿದರು- “ನಾವು ಇನ್ನೂ ಪ್ರಾಪಂಚಿಕ ವಿಷಯಗಳಲ್ಲಿ ನಿರತರಾಗಿದ್ದರೂ, ದೇಹವನ್ನು ತೊರೆದ ನಂತರ ಮತ್ತು ಕೈಂಕರ್ಯದ ಅಂತಿಮ ಗುರಿಯನ್ನು ಸಾಧಿಸುವ ಮೊದಲು, ಎಂಪೆರುಮಾನ್ ನಮಗೆ ಆಳ್ವಾರರ ಸ್ಥಿತಿಯನ್ನು ಪಡೆದುಕೊಳ್ಳುವಂತೆ ಮತ್ತು ಅದನ್ನು ಸಾಧಿಸುವಂತೆ ಮಾಡುತ್ತಾರೆ” . ಇದಕ್ಕೆ ಪ್ರಮಾಣಂ (ಪ್ರಾಮಾಣಿಕ ಪುರಾವೆ) “ನಕಲು ಭ,ಗವತಾ ಯಮ ವಿಷಯಂ ಗಚ್ಛಂತ” (ಎಂಪೆರುಮಾನ್‌ಗೆ ಮೀಸಲಾದ ಶ್ರೀ ವೈಷ್ಣವರು ಯಮನ (ಸದಾಚಾರದ ದೇವತೆ) ವಾಸಸ್ಥಾನವನ್ನು ತಲುಪುವುದಿಲ್ಲ) ಮತ್ತು ಮುದಲ್ ತಿರುವಂಧಾಧಿ ೫೫ ನೆಯ ಪಾಸುರಂ ” “ಅವನ್ ತಮರ್ ಎವ್ವಿಣೈಯರಾಗಿಲುಮ್ ಎಂಗೊನ್ ಅವನ್ ತಮರೇ ಎನ್ರು ಓಜ್ಹಿವಧಾಳ್ಳಲ್ ನಮನ್ ತಮರಾಲ್ ಆರಾಯಪಟ್ಟಾರಿಯರ್ ಕಂಡಿರ್” (ಯಮದ ದೂತರು ಶ್ರೀವೈಷ್ಣವರ ಕರ್ಮಗಳನ್ನು ಲೆಕ್ಕಿಸದೆ “ಅವರು ನಮ್ಮ ಎಂಪೆರುಮಾನ್‌ನ ಅನುಯಾಯಿಗಳಲ್ಲವೇ!” ಎಂದು ಹೊಗಳುವುದನ್ನು ಹೊರತುಪಡಿಸಿ ಶ್ರೀವೈಷ್ಣವರನ್ನು ಪ್ರಶ್ನಿಸುವುದಿಲ್ಲ ಎಂದು ನೀವು ನೋಡುತ್ತೀರಿ). ಹೀಗೆ ಈ ಅತ್ಮಗಳು (ಆತ್ಮ; ಸಂವೇದನಾಶೀಲ ಘಟಕವನ್ನು ಉಲ್ಲೇಖಿಸುತ್ತದೆ) ನಿರಂತರವಾಗಿ ತಮ್ಮನ್ನು ತಾವು ಉನ್ನತಿಗೇರಿಸುವುದರಲ್ಲಿ ಮಗ್ನವಾಗಿರುತ್ತವೆ.ಆತ್ಮವು ತನ್ನ ದೇಹದಿಂದ ಬೇರ್ಪಡುವ ಸಮಯದಲ್ಲಿ, ಎಂಪೆರುಮಾನ್ ತನ್ನ ದೇಹದಲ್ಲಿ ಆತ್ಮಕ್ಕೆ ಅಸಹ್ಯವನ್ನು ಉಂಟುಮಾಡುತ್ತಾನೆ ಮತ್ತು ಅದು ಅರ್ಚಿರಾಧಿ ಮಾರ್ಗದಲ್ಲಿ (ಶ್ರೀವೈಕುಂಠಕ್ಕೆ ಹೋಗುವ ಪ್ರಕಾಶದ ಮಾರ್ಗ) ಪ್ರಯಾಣವನ್ನು ಪ್ರಾರಂಭಿಸಿದಾಗ, ಆತ್ಮಕ್ಕೆ ಅವನು ತನ್ನ ದೈವಿಕ ರೂಪವನ್ನು ತೋರಿಸುತ್ತಾನೆ ಹೇಗೆ , ಅವರು ಶ್ರೀಮಾಲಾಕಾರರಿಗೆ (ಕೃಷ್ಣಾವತಾರ ಕಾಲದಲ್ಲಿ ಮಾಲೆ ಮಾರಾಟಗಾರ) ತೋರಿದಂತೆಯೇ, ಆತ್ಮದಲ್ಲಿ ಪರಭಕ್ತಿ, ಪರಜ್ಞಾನ ಮತ್ತು ಪರಮಭಕ್ತಿಯ ಗುಣಗಳನ್ನು ಸೃಷ್ಟಿಸಿದರು ( ಕ್ರಮವಾಗಿ ಎಂಪೆರುಮಾನ್ ಬಗ್ಗೆ ಜ್ಞಾನ, ಎಂಪೆರುಮಾನ್ ಅನುಪಸ್ಥಿತಿಯಲ್ಲಿ ಉಳಿಯಲು ಅಸಮರ್ಥತೆ ಮತ್ತು ಅಂತಿಮವಾಗಿ ಎಂಪೆರುಮಾನ್ ನನ್ನು ತಲುಪಲು).
ಅನುವಾದ – ಅಡಿಯೇನ್ ಸುಭದ್ರಾ ರಾಮಾನುಜ ದಾಸಿ
ಪುರಾವೆ ಓದುವಿಕೆ -ಅಡಿಯೇನ್ ಕೊದೈ ರಾಮಾನುಜ ದಾಸಿ
ಮೂಲ : https://granthams.koyil.org/2021/07/21/yathindhra-pravana-prabhavam-6-english/
ಆರ್ಕೈವ್ ಮಾಡಲಾಗಿದೆ – https://granthams.koyil.org
ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org
2 thoughts on “ಯತೀಂದ್ರ ಪ್ರವಣ ಪ್ರಭಾವಂ – ಭಾಗ ೬”