ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ
ಈಯುಣ್ಣಿ ಮಾಧವಪೆರುಮಾಳ್ ಮಹಿಮೆ
ನಂಪಿಲ್ಲೈ ಅವರಿಂದ ಈಡು ಮುಪ್ಪತ್ಥರಾಯಿರಂ (ವಡಕ್ಕು ತಿರುವೀದಿಪ್ಪಿಳ್ಳೈ ಬರೆದ ವ್ಯಾಖ್ಯಾನ, ನಂಪಿಲ್ಲೈ ಅವರ ಪ್ರವಚನಗಳನ್ನು ಆಧರಿಸಿ) ಸ್ವೀಕರಿಸಿದ ನಂತರ, ಈಯುಣ್ಣಿ ಮಾಧವಪೆರುಮಾಳ್ ಅವರು ತಮ್ಮ ಮಗ ಈಯುಣ್ಣಿ ಪದ್ಮಾಭ ಪೆರುಮಾಳ್ ಅವರಿಗೆ ವ್ಯಾಖ್ಯಾನವನ್ನು ಕಲಿಸಿದರು. ಅವರು ಶ್ರೀವೈಷ್ಣವ ದರ್ಶನದಲ್ಲಿ ತೊಡಗಿಸಿಕೊಳ್ಳಲು ಇತರ ಹಲವಾರು ಶ್ರೀಸೂಕ್ತಿಗಳಿಂದ ಅವರಿಗೆ ಅಗತ್ಯವಾದ ನಿಗೂಢ ಅರ್ಥಗಳನ್ನು ಕಲಿಸಿದರು. ಶ್ರೀ ಪದ್ಮಾಭ ಪೆರುಮಾಳ್ ಅವರು ತಮ್ಮ ಶಿಷ್ಯರಾದ ಕೊಲವರಾಹ ನಾಯನಾರ್ ಅವರ ಇನ್ನೊಂದು ಹೆಸರಾದ ನಾಳೂರು ಪಿಳ್ಳೈ ಎಂಬ ಹೆಸರಿನಿಂದಲೂ ಸಹ ಕರೆಯಲ್ಪಡುವವರಿಗೆ ಕರುಣೆಯಿಂದ ಆ ಅರ್ಥಗಳನ್ನು ಬೋಧಿಸಿದರು, ಅವರನ್ನು ದರ್ಶನದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದರು. ಅವರು ಪ್ರತಿಯಾಗಿ, ತಮ್ಮ ಮಗನಾದ ನಾಲೂರಾಚ್ಚನ್ ಪಿಳ್ಳೈಗೆ ಜ್ಞಾನವನ್ನು ನೀಡಿದರು ಮತ್ತು ಅವರ ಮೇಲೆ ತಮ್ಮ ಕರುಣೆಯನ್ನು ಸುರಿಸಿದರು. ನಾಲೂರಾಚ್ಚನ್ ಪಿಳ್ಳೈ ಈ ಅರ್ಥಗಳನ್ನು ತಮ್ಮ ಶಿಷ್ಯರಾದ ತಿರುವಾಯ್ಮೊಳಿ ಪಿಳ್ಳೈ, ಮನವಾಳ ಮಾಮುನಿಗಳ ನೇರ ಗುರುಗಳು ಮತ್ತು ತಿರುನಾರಾಯಣಪುರತ್ತು ಆಯಿಗೆ ಮತ್ತು ತಿರುವಾಯ್ಮೊಳಿ ಆಚ್ಚಾನ್ ಪಿಳ್ಳೈ ಅವರಿಗೆ ಕಲಿಸಿದರು. ಇದನ್ನು ತನ್ನ ಉಪದೇಶ ರತ್ತಿನ ಮಾಲೈ 49 ಶ್ಲೋಕದಲ್ಲಿ “ ಅಂಗವರ್ಪಾಲ್ ಪೆಟ್ರ ಸಿರಿಯಾಜ್ವಾನ್ ಅಪ್ಪಿಲಾಯ್ ತಾಮ್ ಕೊಡುತ್ಥಾರ್ ತಮ್ ಮಗನಾರ್ ತಮ್ ಕೈಯಿಲ್, ಪಾಂಗುಡೇನೆ ನಾಲುರ್ಪಿಲ್ಲೈಯಿಕ್ ಅವರ್ಧಾಮ್ ನಲ್ಲ ಮಗನಾರ್ ಅವರ್ಧಾಮ್ ಮೇಲೊರ್ಕ್ಕಿಂಧಾರ್ ಅವರೇ ಮಿಕ್ಕು” (ಇದು ಈಡು ಮುಪ್ಪತ್ತರಾಯಿರಂನ ಅರ್ಥಗಳನ್ನು ಪಡೆಯುವಲ್ಲಿ ಈಯುನ್ನಿ ಮಾಧವಪೆರುಮಾಳ್ ನಿಂದ ತಿರುವಾಯ್ಮೊಳಿ ವರೆಗಿನ ವಂಶಾವಳಿಯನ್ನು ಗುರುತಿಸುತ್ತದೆ).
ಈಯುನ್ನಿ ಮಾಧವಪೆರುಮಾಳ್ ಅವರ ದಿವ್ಯ ನಕ್ಷತ್ರ ಹಸ್ತಂ. ಅವರ ಥಣಿಯನ್
ವರಧಾರ್ಯಕೃಪಾಪಾತ್ರಂ ಶ್ರೀಮಾಧವಗುರುಂ ಭಜೆ
ಕುರುಕಾಧೀಸ ವೇಧಾಂತ ಸೆವೊನ್ಮೀಲಿತ ವೇಧಾನಾಮ್
(ನಂಪಿಳ್ಳೈಯ ಕರುಣೆಗೆ ಪಾತ್ರರಾದ ಈಯುಣ್ಣಿ ಮಾಧವಪೆರುಮಾಳ್ ಅವರನ್ನು ನಾನು ಶ್ಲಾಘಿಸುತ್ತೇನೆ, ಇವರನ್ನು ವರಧಾರಿಯರ್ ಎಂದೂ ಕರೆಯುತ್ತಾರೆ. ತಮಿಳಿನಲ್ಲಿ ಉಪನಿಷತ್ ಎಂದು ಪರಿಗಣಿಸಲ್ಪಟ್ಟಿರುವ ತಿರುವಾಯ್ಮೊಳಿಯಲ್ಲಿ ಪ್ರವಚನವನ್ನು ನಡೆಸುವುದರಿಂದ ನಂಪಿಳ್ಳೈ ಅವರಿಗೆ ಸ್ಪಷ್ಟ ಜ್ಞಾನವಿತ್ತು. )
ಈಯುನ್ನಿ ಪದ್ಮಾಭಪ್ಪೆರುಮಾಳ್ ಅವರ ದಿವ್ಯ ನಕ್ಷತ್ರ ಸ್ವಾತಿ. ಅವರ ಥಣಿಯನ್
ಎನಾವಗಾಹ್ಯ ವಿಮಲೊಸ್ಮಿ ಸಟಾರಿಸೂನೋರ್ ವಾಣಿಗಣಾರ್ಥ ಪರಿಬೋಧ ಸುಧಾಪಕಾಯಾಮ್
ಶ್ರೀಮನ್ ಮುಕುಂಧಾ ಚರಣಾಭ್ಜಮಧುವ್ರತಾಯಾ ಶ್ರೀ ಪದ್ಮನಾಭ ಗುರವೇ ನಾಮ ಆಚಾರಮ:
(ಶ್ರೀಯ:ಪತಿ ಮುಕುಂಧನ ದಿವ್ಯ ಪಾದಗಳಲ್ಲಿ ಜೀರುಂಡೆಯಂತಿರುವ ಆ ಪದ್ಮನಾಭಪ್ ಪೆರುಮಾಳ್ ಅವರನ್ನು ಪೂಜಿಸೋಣ ಮತ್ತು ಅವರ ಪ್ರಯತ್ನದಿಂದಾಗಿ ನಮ್ಮ ಮನಸ್ಸು ಅಮೃತ ಸಾಗರದಲ್ಲಿ ಮುಳುಗಿ ಶುದ್ಧವಾಗುತ್ತದೆ, ಅದು ನಮ್ಮಾಳ್ವಾರ್ ಅವರ ದೈವಿಕ ಸ್ತೋತ್ರಗಳ ವಿಶಿಷ್ಟ ಅರ್ಥಗಳಿಂದ ಪಡೆದ ಜ್ಞಾನವಾಗಿದೆ. )
ನಾಳೂರ್ ಪಿಳ್ಳೈ ಅವರ ದೈವಿಕ ನಕ್ಷತ್ರವು ಪುಷ್ಯಂ ಮತ್ತು ಅವರ ಥಣಿಯನ್ ಹಿಗಿದೆ
ಶ್ರೀ ಪದ್ಮನಾಭ ಕುರುತ ಶಟಜಿನ್ ಮುನೀಂದ್ರ ಶ್ರೀಸುಕ್ತಿಭಾಷ್ಯ ಮಧಿಗಮ್ಯ ಸಮೃಧ್ಧಭೋಧ:
ತತ್ ಧೇವರಾಜಗುರವೇ ಹ್ಯತಿ ಸಚತುಷ್ ಪೂರ್ವಸೇತ್ಥ ಕೋಲವರ ದೇಶಿಕಾಮಶ್ರಯೇ ತಾಮ್
(ನಾಳೂರಿನಲ್ಲಿ ನೆಲೆಸಿರುವುದರಿಂದ ಪ್ರಕಾಶಮಾನವಾಗಿರುವ ಕೋಲವರಾಹಾರ್ [ನಾಳೂರ್ಪ್ ಪಿಳ್ಳೈ] ಅವರ ದಿವ್ಯ ಪಾದಗಳನ್ನು ನಾನು ಹಿಡಿದಿದ್ದೇನೆ. ಅವರು ಈಡುವಿನ ಸಂಪೂರ್ಣ ಜ್ಞಾನವನ್ನು ಹೊಂದಿದ್ದರು, ಇದು ನಮ್ಮಾಳ್ವಾರ್ ಅವರ ದೈವಿಕ ಪ್ರಬಂಧದ [ತಿರುವಾಯ್ಮೊಳಿ] ದಿವ್ಯ ವಿವರಣೆಯಾಗಿದೆ, ಇದನ್ನು ಶ್ರೀ ಪಧ್ಮನಾಭ ಪೆರುಮಾಳ್ ಅವರಿಂದ ಪಡೆದುಕೊಂಡಿದರು . ಕೊಲವರಾಹರು ಕರುಣಾಪೂರ್ವಕವಾಗಿ ಈಡುವಿನ ಜ್ಞಾನವನ್ನು ನಾಲೂರಾಚ್ಚಾನ್ ಪಿಳ್ಳೈಗೆ ದಯಪಾಲಿಸಿದ್ದರು).
ನಾಳೂರಾಚ್ಚಾನ್ ಪಿಳ್ಳೈ ಅವರ ಥಣಿಯನ್ :
ನಮೋಸ್ತು ದೇವರಾಜಾಯಚತುರ್ ಗ್ರಾಮಣಿ ವಾಸಿನೇ
ರಾಮಾನುಜಾರ್ಯಧಾಸಸ್ಯ ಸುಥಾಯ ಗುಣಸಾಲಿನೇ
(ನಾಳೂರಿನಲ್ಲಿ ನೆಲೆಸಿರುವ ದೇವರಾಜರೆಂದು ಕರೆಯಲ್ಪಡುವ ನಾಳೂರ್ ಪಿಳ್ಳೈಯವರಿಗೆ ನನ್ನ ನಮಸ್ಕಾರಗಳನ್ನು ಸಲ್ಲಿಸುತ್ತೇನೆ, ಅವರು ನಾಳೂರ್ ಪಿಳ್ಳೈಯವರ ಮಗ, ಶ್ರೀ ರಾಮಾನುಜ ಧಾಸಾರ್ ಎಂದೂ ಕರೆಯುತ್ತಾರೆ. ನಾಳೂರ್ ಪಿಳ್ಳೈ ಎಲ್ಲಾ ಗುಣಗಳಲ್ಲಿಯೂ ಪರಿಪೂರ್ಣರಾಗಿದ್ದಾರೆ).
ಕೋಲಾಧಿಪಾಧ್ವಿಧುವಾರಭ್ಯ ಸಹಸ್ರಗೀತೆರ್ಭಾಷ್ಯಮ್ ಹಿ ಪೂರ್ವಥನಾ ದೇಸಿಕವರ್ಯಗುಪ್ತಮ್
ತ್ರೆಥಾ ಪ್ರವರ್ಥ್ಯ ಭುವಿಯ: ಪ್ರಥಾಯಾಂಚಕಾರ ಶ್ರೀ ದೇವರಾಜ ಗುರುವರ್ಯಮಹಂ ಭಜೇ ತಂ
( ಪೂರ್ವಾಚಾರ್ಯರು ತಮ್ಮ ತಂದೆ ಕೋಲಾಧಿಪರ್‌ನಿಂದ ಸುರಕ್ಷಿತವಾಗಿ ರಕ್ಷಿಸಲ್ಪಟ್ಟಿರುವ ವ್ಯಾಖ್ಯಾನಂ (ವ್ಯಾಖ್ಯಾನ) ಈಡುವನ್ನು ಪಡೆದ ಆ ಮಹಾನ್ ಆಚಾರ್ಯ ದೇವರಾಜ (ನಾಲೂರಾಚ್ಚನ್ ಪಿಳ್ಳೈ) ಅವರನ್ನು ನಾನು ಸ್ತುತಿಸುತ್ತೇನೆ ಮತ್ತು ನಮಸ್ಕರಿಸುತ್ತೇನೆ, ಮತ್ತು ಮೂವರು ಆಚಾರ್ಯರ ಮೂಲಕ ಇದನ್ನು ಬಹಿರಂಗಪಡಿಸಿದರು [ತಿರುವಾಯ್ಮೊಳಿ ಪಿಳ್ಳೈ, ಆಯಿ ಜನನಯಾಚಾರಿಯರ್ ಮತ್ತು ತಿರುವಾಯ್ಮೊಳಿ ಆಚ್ಚನ್ ಪಿಳ್ಳೈ])
ಶ್ರೀಶೈಲನಾಥಗುರು ಮಾತೃಗುರುಥಥಾಮಾಭ್ಯಾಮ್ ಶ್ರೀಶುಕ್ತಿ ದೇಶಿಕವರೇಣ ಚ ಯಸ್ತ್ರಿಧೈವಂ–
ವ್ಯಕ್ತಸ್ ಸಟಾರಿಕೃತಿ ಭಾಷ್ಯ ಸುಸಂಪ್ರಧಯೋ ವಿಸ್ಥಾರಮೇತಿ ಸಹಿ ವೈಷ್ಣವಪುಂಗವೇಷು
(ಮೂರು ಆಚಾರ್ಯರಾದ ತಿರುವಾಯ್ಮೊಳಿ ಪಿಳ್ಳೈ, ತಿರುನಾರಾಯಣ ಪುರತ್ತು ಆಯಿ ಮತ್ತು ತಿರುವಾಯ್ಮೊಳಿ ಆಚ್ಚನ್ ಪಿಳ್ಳೈ ಆಚಾರ್ಯರ ಮೂಲಕ ವೈಭವವನ್ನು ಗಳಿಸಿದ ತಿರುವಾಯ್ಮೊಲಿಯ ಮೇಲಿನ ಭಾಷ್ಯಂ (ವ್ಯಾಖ್ಯಾನ) ಅನ್ನು , ಈಡುವಿನ ಸತ್ಸಂಪ್ರದಾಯವು (ಸಂಪೂರ್ಣವಾಗಿ ಉತ್ತಮ ಸಂಪ್ರದಾಯ) ಶ್ರೀವೈಷ್ಣವದ ಹಿರಿಯರಲ್ಲಿ ಮೇಲುಗೈ ಸಾಧಿಸಿತು.)
ಅನುವಾದ – ಅಡಿಯೇನ್ ಸುಭದ್ರಾ ರಾಮಾನುಜ ದಾಸಿ
ಪುರಾವೆ ಓದುವಿಕೆ -ಅಡಿಯೇನ್ ಕೊದೈ ರಾಮಾನುಜ ದಾಸಿ
ಮೂಲ : https://granthams.koyil.org/2021/07/25/yathindhra-pravana-prabhavam-10-english/
ಆರ್ಕೈವ್ ಮಾಡಲಾಗಿದೆ – https://granthams.koyil.org
ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org
1 thought on “ಯತೀಂದ್ರ ಪ್ರವಣ ಪ್ರಭಾವಂ – ಭಾಗ ೧೦”