ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ
ಶ್ರೀವಚನ ಭೂಷಣ ಶಾಸ್ತ್ರವು ನಮ್ ಪೆರುಮಾಳ್ ಆದೇಶದ ಮೇರೆಗೆ ಕರುಣಾಮಯವಾಗಿ ರಚಿಸಲ್ಪಟ್ಟಿದೆ ಎಂದು ಮಾನವಾಲ ಮಾಮುನಿಗಳು ಹೇಳಿರುವುದರಿಂದ, ಮೇಲೆ ಉಲ್ಲೇಖಿಸಿದ ಘಟನೆಯು ಒಬ್ಬರ ಮನಸ್ಸಿನಲ್ಲಿ ಅನುಮಾನವನ್ನು ಉಂಟುಮಾಡುತ್ತದೆ. ಈ ಬಗ್ಗೆ ಕಲಿತವರೊಂದಿಗೆ ಪರಿಶೀಲಿಸುವುದು ಉತ್ತಮ. ಮಾನವಾಲಾ ಮಾಮುನಿಗಳು, ಶ್ರೀವಚನ ಭೂಷನಂ ಅವರ ಭಾಷ್ಯದಲ್ಲಿ ಈ ಕೆಳಗಿನಂತೆ ಬರೆದಿದ್ದಾರೆ:
“ಸಂಸಾರಿಗಳು ಅನುಭವಿಸಿದ ದುಃಖಗಳನ್ನು ನೋಡುತ್ತಾ, ಅವರನ್ನು ಉನ್ನತೀಕರಿಸುವ ಸಲುವಾಗಿ, ಪಿಳ್ಳೈ ಲೋಕಾಚಾರ್ಯರು, ತಮ್ಮ ಮಹಾನ್ ಕರುಣೆಯಿಂದ ಅನೇಕ ಪ್ರಭಂಧಗಳನ್ನು ರಚಿಸಿದರು. ಪೂರ್ವಾಚಾರ್ಯರು ಸಂಪೂರ್ಣ ಗೌಪ್ಯವಾಗಿ ನೀಡಿದ ನಿಗೂಢ ಪ್ರವಚನಗಳನ್ನು ನೆನಪಿಸಿಕೊಳ್ಳುತ್ತಾ, ಅವರು ತಮ್ಮ ಹಿಂದಿನ ಕೃತಿಗಳಲ್ಲಿ ಆ ಅರ್ಥಗಳನ್ನು ಬಹಿರಂಗಪಡಿಸಿಲ್ಲ ಎಂದು ಖಚಿತಪಡಿಸಿಕೊಂಡರು. ಅವರ ಕರುಣೆಗಿಂತ ಹೆಚ್ಚಾಗಿ, ಪೆರುಮಾಳ್ ಅವರು ಕರುಣೆಯಿಂದ ಕೇಳಿದ್ದರಿಂದ, ಪಿಳ್ಳೈ ಲೋಕಾಚಾರ್ಯರು ದಯಾಪೂರ್ವಕವಾಗಿ ಶ್ರೀವಚನ ಭೂಷಣಂ ವನ್ನು ರಚಿಸಿದರು.
ಪೇರಾರುಲಾಲ ಪೆರುಮಾಳ್ (ಕಾಂಚಿ ದೇವ ಪೆರುಮಾಳ್) ಮನಪ್ಪಕ್ಕಂನಲ್ಲಿ ವಾಸಿಸುತ್ತಿದ್ದ ನಂಬಿಯನ್ನು ಕರುಣೆಯಿಂದ ನೋಡಿ ಮತ್ತು ಅವರ ಕನಸಿನಲ್ಲಿ ಕೆಲವು ಅರ್ಥಗಳನ್ನು ಸೂಚಿಸಿದರು. ಅವರು ನಂಬಿಗೆ ಒಂದು ದಿನ ಹೇಳಿದರು “ನೀನು ಎರಡು ನದಿಗಳ ಮಧ್ಯದಲ್ಲಿ ನೆಲೆಸು; ಅಲ್ಲಿ ನಾವು ನಿಮಗೆ ಹೆಚ್ಚಿನ ಅರ್ಥಗಳನ್ನು ಸ್ಪಷ್ಟ ಪಡಿಸುವ ರೀತಿಯಲ್ಲಿ ಹೇಳುತ್ತೇವೆ . ನಂಬಿ ಶ್ರೀರಂಗವನ್ನು ತಲುಪಿದರು (ಇದು ಎರಡು ನದಿಗಳಾದ ಕೊಲ್ಲಿಡಂ ಮತ್ತು ಕಾವೇರಿ ನಡುವೆ ಇದೆ). ಪ್ರತಿದಿನ ಅಲ್ಲಿ ಪೆರುಮಾಳ್ ಅನ್ನು ಪೂಜಿಸುತ್ತಾ, ದೇವರಾಜ ಪೆರುಮಾಳ್ ಹೇಳಿದ ಅರ್ಥಗಳನ್ನು ಯಾರೂ ಕೇಳದೆ, ಏಕಾಂತ ಸ್ಥಳದಲ್ಲಿ, ದೇವಸ್ಥಾನದಲ್ಲಿ [ ಕಾಟ್ ಅಲಗಿಯ ಸಿಂಗರ್ ದೇವಸ್ಥಾನದಲ್ಲಿ] ಪುನರಾವರ್ತಿಸುತ್ತಿದ್ದರು. ಪಿಳ್ಳೈ ಲೋಕಾಚಾರ್ಯರು ತಮ್ಮ ಶಿಷ್ಯರೊಂದಿಗೆ ಒಂದು ದಿನ ಅಕಸ್ಮಾತ್ತಾಗಿ ಆ ಸ್ಥಳವನ್ನು ತಲುಪಿದರು. ಅವರು ತಮ್ಮ ಶಿಷ್ಯರಿಗೆ ಶಾಸ್ತ್ರದ ನಿಗೂಢ ಅರ್ಥಗಳನ್ನು ಕಲಿಸಲು ಪ್ರಾರಂಭಿಸಿದರು. ದೇವ ಪೆರುಮಾಳ್ ಹೇಳಿದ ಅರ್ಥಗಳಿಗೆ ಇವು ಸಮಾನವಾದುದನ್ನು ಕಂಡು ಮನಪ್ಪಕ್ಕಂ ನಂಬಿ ತಮ್ಮ ಸ್ಥಳದಿಂದ ಹೊರಬಂದು ಪಿಳ್ಳೈ ಲೋಕಾಚಾರ್ಯರ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡಿದರು. ಅವರು ಲೋಕಾಚಾರ್ಯರನ್ನು ಕೇಳಿದರು “ನೀವು ಅವರೇ?” [ಅರ್ಥ – ನೀವೇ ಪೇರಾರುಲಾಲ ಪೆರುಮಾಳಾ ? ] ಲೋಕಾಚಾರ್ಯರು ಉತ್ತರಿಸಿದರು “ಹೌದು; ಯಾಕೆ ಕೇಳುತ್ತಿರಿ?” ನಂಬಿ ಅವರಿಗೆ ಪೇರಾರುಲಾಲ ಪೆರುಮಾನ್ ಈ ಎಲ್ಲಾ ಅರ್ಥಗಳನ್ನು ಹೇಗೆ ಸೂಚಿಸಿದ್ದಾರೆ ಮತ್ತು ಅವರು ಏನು ಮಾಡಲು ಹೇಳಿದರು ಎಂಬುದನ್ನು ವಿವರಿಸಿದರು. ಲೋಕಾಚಾರ್ಯರು ಈ ಮಾತುಗಳನ್ನು ಕೇಳಿ ಸಂತೋಷಪಟ್ಟರು ಮತ್ತು ನಂಬಿಯನ್ನು ಶಿಷ್ಯನನ್ನಾಗಿ ಸ್ವೀಕರಿಸಿದರು ಮತ್ತು ಅವರಿಗೆ ಎಲ್ಲಾ ನಿಗೂಢ ಅರ್ಥಗಳನ್ನು ಹೇಳಿದರು. ಒಂದು ದಿನ, ಪೆರುಮಾಳ್ ನಂಬಿಯ ಕನಸಿನಲ್ಲಿ ಬಂದು, ಈ ಅರ್ಥಗಳನ್ನು ಮರೆತುಬಿಡದ ಹಾಗೆ ಇವುಗಳನ್ನು ಬರೆಯಲು ತಮ್ಮ ಸೂಚನೆಯಂತೆ ಲೋಕಾಚಾರ್ಯರಿಗೆ ತಿಳಿಸಲು ಹೇಳಿದರು. ಲೋಕಾಚಾರ್ಯರು ಇದನ್ನು ಪೆರುಮಾಳ್ ಅವರ ಆದೇಶವೆಂದು ಸ್ವೀಕರಿಸಿದರು ಮತ್ತು ಅದನ್ನು ಪಾಲಿಸಲು ಒಪ್ಪಿದರು.
(ಇಲ್ಲಿಯವರೆಗೆ ಮನವಾಲಾ ಮಾಮುನಿಗಳ ಮಾತುಗಳಿವೆ- ಶ್ರೀವಚನ ಭೂಷಣ ಪ್ರಬಂಧದ ಪರಿಚಯಾತ್ಮಕ ವ್ಯಾಖ್ಯಾನದಲ್ಲಿ )
ತಿರುಪ್ಪಾವೈ ಸೇರಿದಂತೆ ಕೆಲವು ಪ್ರಬಂಧಗಳಿಗೆ ಅಳಗಿಯ ಮನವಾಲ್ ಪೆರುಮಾಳ್ ನಾಯನಾರ್ ಕರುಣೆಯಿಂದ ವ್ಯಾಖ್ಯಾನವನ್ನು ಬರೆದರು. ಇದನ್ನು ಗಮನದಲ್ಲಿಟ್ಟುಕೊಂಡು, ಜೀಯರ್ [ನಮ್ಮ ಸಂಪ್ರದಾಯದಲ್ಲಿ ಜೀಯರ್ ಎಂಬ ಪದವು ಮನವಾಲಾ ಮಾಮುನಿಗಳನ್ನು ಉಲ್ಲೇಖಿಸುತ್ತದೆ], ಅವರ ಪ್ರಬಂಧಂ ಉಪದೇಶ ರತ್ತಿನಮಾಲೈನಲ್ಲಿ ಬರೆದಿದ್ದಾರೆ “ಸೀರಾಲ್ ವೈಯ ಗುರುವಿನ್ ತಂಬಿ ಮನ್ನು ಮನವಾಲಾ ಮುನಿ ಸೇಯ್ಯುಂ ಅವೈ ತಾನುಂ ಸಿಲೈ” (ಅವರ ಸಹಾನುಭೂತಿಯ ಗುಣದಿಂದ, ಪಿಳ್ಳೈ ಲೋಕಾಚಾರ್ಯರ ಸಹೋದರ, ಮಾನವಲಾ ಪೆರುಮಾಳ್ ನಾಯನಾರ್ ಅವರು ಕೆಲವು ವ್ಯಾಖ್ಯಾನಗಳನ್ನು ಬರೆದಿದ್ದಾರೆ).
ಹೀಗೆ, ಲೋಕಾಚಾರ್ಯರು ಮತ್ತು ಅಳಗಿಯ ಮನವಾಳ ಪೆರುಮಾಳ್ ನಾಯನರು ಪ್ರಾಪಂಚಿಕ ವಿಷಯಗಳ ಬಗ್ಗೆ ಸಂಪೂರ್ಣ ನಿರ್ಲಿಪ್ತತೆಯಿಂದ ಜೀವಿಸುತ್ತಿದ್ದಾಗ, ಮನವಾಳ ಪೆರುಮಾಳ್ ನಾಯನಾರ್ ಅವರು ಶ್ರೀವೈಕುಂಠವನ್ನು ಪಡೆದರು. ಪಿಳ್ಳೈ ಲೋಕಾಚಾರ್ಯರು, ಅಗಲಿಕೆಯಿಂದ ತುಂಬಾ ದುಃಖಿತರಾಗಿ, ಮನವಾಳ ಪೆರುಮಾಳ್ ನಾಯನಾರ್ ಅವರ ತಲೆಯನ್ನು ತಮ್ಮ ಮಡಿಲಲ್ಲಿ ಇಟ್ಟುಕೊಂಡು ಹೇಳಿದರು “ಮುಡುಂಬೈ ಮಹಾನ್ ಕುಲದ ಮನವಾಳ ಪೆರುಮಾಳ್ ಕೂಡ ಶ್ರೀವೈಕುಂಠಂಗೆ ಹೊರಟರೆ, ಎಂಟು ಅಕ್ಷರಗಳ ಆಂತರಿಕ ಅರ್ಥವನ್ನು ಯಾರು ಬಹಿರಂಗಪಡಿಸುತ್ತಾರೆ. [ಅಷ್ಟಾಕ್ಷರಂ, ತಿರುಮಂತ್ರಂ ಎಂದೂ ಕರೆಯುತ್ತಾರೆ] ಮತ್ತು ಮಾಮ್ ಪದದ ಅರ್ಥವನ್ನು ತಿಳಿಸಿಕೊಡುತ್ತಾರೆ [ಶ್ರೀ ಭಗವತ್ಗೀತೆ 18.66 ರಲ್ಲಿ ಕೃಷ್ಣನ್ನು ಹೇಳಿದಂತೆ, ಮಾಮ್ ಏಕಂ ಶರಣಂ ವ್ರಜ]?”.
ಅಳಗಿಯ ಮನವಾಳ ಪೆರುಮಾಳ್ ನಾಯನಾರ್ ಅವರ ತನಿಯನ್ :
ದ್ರಾವಿಡಾ೦ನಾಯ ಹೃದಯಂ ಗುರುಪರ್ವಕ್ರಮಾಗತಂ
ರಮ್ಯಜಾಮಾತೃ ದೇವೇನ ಧರ್ಷಿತಂ ಕೃಷ್ಣ ಸೂನುನಾ
(ದೈವಿಕ ಗ್ರಂಥ೦ ಆಚಾರ್ಯ ಹೃದಯವನ್ನು ಕರುಣಾಪೂರ್ವಕವಾಗಿ ಅಳಗಿಯ ಮನವಾಳ ಪೆರುಮಾಳ್ ನಾಯನರು ರಚಿಸಿದ್ದಾರೆ, ಅವರು ವಡಕ್ಕುತ್ ತಿರುವೀದಿ ಪ್ಪಿಳ್ಳೈ ಅವರ ಪುತ್ರರಾಗಿದ್ದಾರೆ, ಅವರನ್ನು ಕೃಷ್ಣನೆಂದು ಕರೆಯುತ್ತಿದ್ದರು)
ಅನುವಾದ – ಅಡಿಯೇನ್ ಸುಭದ್ರಾ ರಾಮಾನುಜ ದಾಸಿ
ಪುರಾವೆ ಓದುವಿಕೆ -ಅಡಿಯೇನ್ ಕೊದೈ ರಾಮಾನುಜ ದಾಸಿ
ಮೂಲ : https://granthams.koyil.org/2021/07/28/yathindhra-pravana-prabhavam-13-english/
ಆರ್ಕೈವ್ ಮಾಡಲಾಗಿದೆ – https://granthams.koyil.org
ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org
1 thought on “ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೧೩”