ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ
ನ೦ಪೆರುಮಾಳ್ ಜ್ಯೋತಿಷ್ಕುಡಿಇಂದ ಹೊರಟು ತಿರುಮಾಲಿರುಂಜೋಲೈ ದಿವ್ಯದೇಶವನ್ನು ತಲುಪಿದರು, ಇದು ಶ್ರೀರಂಗಂನಂತೆಯೇ ಪರಿಗಣಿಸಲ್ಪಟ್ಟಿದೆ. ತಿರುಮಾಲಿರುಂಜೋಲೈಯು ಶ್ರೀರಂಗಂ ನಂತಹ ಉದ್ಯಾನವನಗಳಿಂದ ಸುತ್ತುವರಿದಿದ್ದರಿಂದ ಪಿಳ್ಳೈ ಲೋಕಾಚಾರ್ಯರ ಅಗಲಿಕೆಯಿಂದ ಉಂಟಾದ ದುಃಖವನ್ನು ಮರೆತು ಅಲ್ಲಿಯೇ ಉಳಿದರು. ಕೂರತ್ತಾಳ್ವಾನ್ (ಭಗವದ್ ರಾಮಾನುಜರ ಶಿಷ್ಯ), ತನ್ನ ಸುಂದರಭಾಹು ಸ್ತವಂ ಶ್ಲೋಕಂ 103 ರಲ್ಲಿ ತಿರುಮಾಲಿರುಂಜೋಲೈನಲ್ಲಿರುವ ಪೀಠಾಧಿಪತಿಯಾದ ಕಲ್ಅಳಗರ್ ಬಗ್ಗೆ ಹೇಳುತ್ತಾರೆ :
ಶಿಖರಿಷು ವಿಪಿನೇಷ್ವಪ್ಯಾಪಗಾಸ್ವಚ್ಛತೋಯಾಸ್ವನುಭವಸಿ
ರಸಜ್ಞೋ ದಂಡಕಾರಣ್ಯ ವಾಸಾನ್ I
ತದಿಹ ತದನುಭೂತೌ ಸಾಭಿಲಾಷೋದ್ಯ ರಾಮ ಶ್ರಯಸಿ
ವನಗಿರೀಂದ್ರಂ ಸುಂದರೀಭೂಯ ಭೂಯ: II
(ಓ ಶ್ರೀ ರಾಮ! ಸಕಲ ವಿದ್ಯಾ ಪಾರಂಗತರಾದ ನೀವು , ಅಪಾರ ಕರುಣೆಯಿಂದ ಪರ್ವತ ಪ್ರದೇಶವಾದ ಚಿತ್ರಕೂಟದಲ್ಲಿ ನೆಲೆಸಿ ಮತ್ತು ಕಾಡುಗಳ ಸಮೀಪ ಇರುವ , ಸ್ಫಟಿಕ ಶುಧ್ಧ ನೀರನ್ನು ಹೊಂದಿರುವ ಮಂದಾಕಿನಿ ನದಿಯ ದಾರಿಯಲ್ಲಿ ದಂಡಕಾರಣ್ಯ ಪ್ರದೇಶದ ಮೂಲಕ ನಿಮ್ಮ ಪ್ರಯಾಣವನ್ನು ತೊಡಗಿಸಿದಿರಿ. ಆ ಪ್ರದೇಶಗಳಲ್ಲಿ ನೆಲೆಸಿ ನೀವು ಸ್ವಾಧೀನಪಡಿಸಿಕೊಂಡ ಅಭಿರುಚಿಯಿಂದಾಗಿ, ಆ ಅನುಭವಗಳನ್ನು ಮತ್ತೆ ಮೆಲುಕು ಹಾಕಬೇಕೆಂದು ನಿಮ್ಮ ದಿವ್ಯ ಹೃದಯದಲ್ಲಿ ನಿರ್ಧರಿಸಿದ್ದೀರಿ ಆದ್ದರಿಂದ ನೀವು ಈ ತಿರುಮಾಲಿರುಂಜೋಲೈ ಅನ್ನು ನಿಮ್ಮ ನಿವಾಸವನ್ನಾಗಿ ಮಾಡಿಕೊಂಡಿದ್ದೀರಿ).
ಇದರಲ್ಲಿ ಉಲ್ಲೇಖಿಸಿರುವಂತೆ, ಅರಣ್ಯ ಪ್ರದೇಶದಲ್ಲಿ ವಾಸಿಸುವ ಬಯಕೆಯಿಂದ ನ೦ಪೆರುಮಾಳ್, ಅರಣ್ಯ ಮತ್ತು ಬೆಟ್ಟಗಳಿಂದ ಆವೃತವಾದ ಸ್ಥಳದಲ್ಲಿ ಸ್ವಲ್ಪ ಕಾಲ [ಸುಮಾರು ಒಂದು ವರ್ಷ] ವಿಶ್ರಾಂತಿ ಪಡೆದರು. ಅವರು ಧಾರ್ಮಿಕ ಮನುಷ್ಯನಾಗಿರುವುದರಿಂದ (ಉದಾರ ವ್ಯಕ್ತಿ) ಒಂದು ಅಳಗಿಯ ಮಣವಾಳ ಕಿಣರ್ (ನ೦ಪೆರುಮಾಳ್ ಸ್ವತ: ಬಾವಿಯನ್ನು ತೋಡಿದರು ) ; ತಣ್ಣೀರ್ಪ್ಪಂದಲ್ (ಬಾಯಾರಿದವರಿಗೆ ನೀರು ಕೊಡಲು ಗುಡಿಸಲು ) ರಚಿಸಿದರು . ತರುವಾಯ, ಕುಲಶೇಖರ ಆಳ್ವಾರರು “ಕೊಲ್ಲಿ ಕಾವಲನ್ ಕುಲ ನಾಯಗನ್ ಕೋಳಿಕ್ಕೋನ್ ಕುಲಸೇಗರನ್” (ಕೊಲ್ಲಿ ಪ್ರದೇಶದ ರಕ್ಷಕ, ಕೂಡಲ್ ಪ್ರದೇಶದ ನಾಯಕ ಮತ್ತು ಕೋಳಿ ಪ್ರದೇಶದ ಮುಖ್ಯಸ್ಥ) ಎಂದು ಉಲ್ಲೇಖಿಸಿದಂತೆ, ನ೦ಪೆರುಮಾಳ್ ಕುಲಶೇಖರ ಆಳ್ವಿಕೆಯ ಪ್ರದೇಶಗಳಲ್ಲಿ ವಾಸಿಸಲು ಬಯಸಿದರು. ಅವರು ತಿರುಮಾಲಿರುಂಜೋಲೈನಿಂದ ಪಶ್ಚಿಮಕ್ಕೆ ಹೋದರು, ದಾರಿಯಲ್ಲಿ ಕೆಲವು ಸ್ಥಳಗಳಲ್ಲಿ ತಂಗಿದರು ಮತ್ತು ಅಂತಿಮವಾಗಿ ಕೊಜಿಕ್ಕೋಡು ತಲುಪಿದರು.
“ಶುಡರ್ಕೋಲ್ ಸೋದಿಯೈ ದೇವರುಮ್ ಮುನಿವರುಮ್ ತೊಡರ” ( ಹೇಗೆ ಎಂಪೆರುಮಾನ್ ಅವರನ್ನು ನಿತ್ಯಸೂರಿಗಳು ಮತ್ತು ಮುಕ್ತಾತ್ಮಾಗಳು ಅನುಸರಿಸುತ್ತಿದ್ದಾರೆಯೋ ) ನಲ್ಲಿ ಉಲ್ಲೇಖಿಸಿರುವಂತೆಯೇ, ಇತರ ದಿವ್ಯದೇಶ ಎಂಪೆರುಮಾನ್ಗಳು ಮತ್ತು ನಮ್ಮಾಳ್ವಾರ್ ಕೂಡ ಅದೇ ಸ್ಥಳವನ್ನು ತಲುಪಿದರು [ಮುಸ್ಲಿಮರ ಆಕ್ರಮಣದ ಪರಿಣಾಮವಾಗಿ]. ಆತನು ಅವರನ್ನೂ ರಕ್ಷಿಸಿದನು [ವಿವಿಧ ದಿವ್ಯದೇಶಗಳಿಂದ ಆಯಾ ವಿಗ್ರಹವನ್ನು ತಂದ ಎಲ್ಲಾ ಭಕ್ತರು]. ಅವರು ತಮ್ಮ ದಿವ್ಯ ಸಿಂಹಾಸನದಲ್ಲಿ [ಕೆತ್ತಿದ ಸಿಂಹಗಳಿಂದ ಬೆಂಬಲಿತವಾದ ರಾಜಸ್ಥಾನ] ನಮ್ಮಾಳ್ವಾರರಿಗೆ ಸ್ಥಾನವನ್ನು ನೀಡಿದರು ಮತ್ತು ಅವರನ್ನು ಕರುಣೆಯಿಂದ ನೋಡುತ್ತಿದ್ದರು. ನಂತರ ಅವರು ಆಳ್ವಾರರೊಂದಿಗೆ ತೇನೈಕ್ಕಿಡಂಬೈ (ತಿರಕಣಾಮ್ಬಿ ) ಎಂಬ ಸ್ಥಳಕ್ಕೆ ಹೊರಟರು, ಸ್ವಲ್ಪ ಸಮಯ ಅಲ್ಲಿಯೇ ಉಳಿದು ನಂತರ ಮುಂದೆ ಹೊರಟರು, ಅವರ ಜೊತೆಯಲ್ಲಿ ಹೋಗಲು ಬಯಸಿದ ಆಳ್ವಾರರನ್ನು
ಹಿಂದೆ ಬಿಟ್ಟು ಅವರು ಪುಂಗನೂರಿನ ಮೂಲಕ ತಿರುನಾರಾಯಣಪುರವನ್ನು ತಲುಪಿದರು, ಅಲ್ಲಿ ಸ್ವಲ್ಪ ಸಮಯ ತಂಗಿದನಂತರ ತಿರುವೆಂಗಡಮ್ ತಲುಪಿದರು. (ಆಳ್ವಾರರು ತಿರುವೆಂಗಡಮ್ ಅನ್ನು”ತಿಳಧಮುಳಗುಕ್ಕಾಯ್ ನಿನ್ರ ” (ಇಡೀ ಜಗತ್ತಿಗೆ ಅಲಂಕಾರಿಕ ದಿವ್ಯ ಮೂರ್ತಿಯಾಗಿ ನಿಂತಿದ್ದಾರೆ) ಎಂದು ಕರೆಯುತ್ತಾರೆ)
ಶ್ರೀ ರಾಮಾಯಣಂ ಅಯೋಧ್ಯಾ ಕಾಂಡಂ 2-56-38 ರಲ್ಲಿ ಹೇಳಿರುವಂತೆ
ಸುರಮ್ಯಮ್ ಆಸಾಧ್ಯತು ಚಿತ್ರಕೂಟಂ ನದೀಂ ಚ ತಾಂ ಮಾಲ್ಯವತೀಂ ಸುತೀರ್ಥಾಮ್ |
ನನನ್ದ ಹೃಷ್ಟೋ ಮೃಗಪಕ್ಷಿ ಜುಷ್ಟಾಮ್ ಜಹೌಚಾ ದುಃಖ್ಖಮ್ ಪುರವಿಪ್ರವಾಸಾತ್ ||
ಸುಂದರವಾದ ಚಿತ್ರಕೂಟ ಪರ್ವತ ಮತ್ತು ಮಾಲ್ಯಾವತಿ ನದಿಯನ್ನು ತಲುಪಿ ಸಂತೋಷಗೊಂಡರು , ಅತ್ಯುತ್ತಮ ಪವಿತ್ರ ಸ್ಥಳಗಳು ದೊರೆತು, ನಿರಂತರವಾಗಿ ಪಕ್ಷಿಗಳು ಹಾಗು ಪ್ರಾಣಿಗಳು ಬರುವುದರಿಂದ (ಸೀತಾ, ರಾಮ ಮತ್ತು ಲಕ್ಷ್ಮಣರು) ಅಯೋಧ್ಯಾ ನಗರದಿಂದ ಗಡಿಪಾರು ಮಾಡಿದ ಸಂಕಟವನ್ನು ಸ್ವಲ್ಪ ಮರೆತರು. ನ೦ಪೆರುಮಾಳ್ ಅವರು ತಿರುಮಳಿಸೈ ಆಳ್ವಾರರಿಂದ ಶ್ಲಾಘಿಸಲ್ಪಟ್ಟಿರುವ ತಿರುವೆಂಗಡಂ ಅನ್ನು ತಲುಪಿ ಸಂತೋಷಪಟ್ಟರು , ಇದನ್ನು ತಮ್ಮ ನಾನ್ ಮುಗನ್ ತಿರುವಂದಾದಿ ಪಾಸುರಂ 47 ರಲ್ಲಿ ” ನನ್ಮಣಿವಣ್ಣನೂರ್…” (ಮಹಾ ರತ್ನದ ಮೈಬಣ್ಣವನ್ನು ಹೊಂದಿರುವ ಸರ್ವೇಶ್ವರನ ವಾಸಸ್ಥಳ) ಎಂದು ಕೊಂಡಾಡಿದ್ದಾರೆ. ತಿರುಪ್ಪಾಣಾಳ್ವಾರ್ ಅವರು ತಮ್ಮ ಅಮಲನಾದಿಪಿರಾನ್ ಪಾಸುರಂ 3 ರಲ್ಲಿ ಹೇಳಿರುವಂತೆ “ಮಂದಿಪಾಯ್ ವಡವೇಂಗಡಮಾಮಲೈ ವಾನವರ್ಗಳ್ ಸಂಧಿ ಸೆಯ್ಯ ನಿನ್ರಾನ್ ಅರಂಗತ್ತರವಿನಣೆಯಾನ್ …”( ತಿರುವರಂಗಂನಲ್ಲಿ (ಶ್ರೀರಂಗಂ) ಹಾವಿನ ಹಾಸಿಗೆಯ ಮೇಲೆ ಮಲಗಿರುವ ಎಂಪೆರುಮಾನನು ನಿತ್ಯಸೂರಿಗಳು ಹೂವಿನಿಂದ ಪೂಜಿಸಲು, ಉತ್ತರ ದಿಕ್ಕಿನಲ್ಲಿರುವ ತಿರುವೇಂಗಡಂ ಬೆಟ್ಟಗಳಲ್ಲಿ ನಿಂತಿದ್ದಾನೆ), ಏಕೆಂದರೆ ಇಬ್ಬರು (ಅರಂಗನಾಥನ್ ಮತ್ತು ತಿರುವೇಂಗಡತ್ತಾನ್ ಇಬ್ಬರು ಒಂದೇ ರೂಪವನ್ನು ಹೊಂದಿದ್ದರು) ಕರುಣೆಯಿಂದ ತಿರುವೇಂಗಡಂನಲ್ಲಿ ಬಹಳ ಕಾಲ ದೈವಿಕ ಉತ್ಸವಗಳನ್ನು (ದೇವಾಲಯದ ಉತ್ಸವಗಳು) ಆನಂದಿಸುತ್ತಿದ್ದರು .
ಅನುವಾದ – ಅಡಿಯೇನ್ ಸುಭದ್ರಾ ರಾಮಾನುಜ ದಾಸಿ
ಪುರಾವೆ ಓದುವಿಕೆ -ಅಡಿಯೇನ್ ಕೊದೈ ರಾಮಾನುಜ ದಾಸಿ
ಮೂಲ : https://granthams.koyil.org/2021/07/30/yathindhra-pravana-prabhavam-15-english/
ಆರ್ಕೈವ್ ಮಾಡಲಾಗಿದೆ – https://granthams.koyil.org
ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org
1 thought on “ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೧೫”