ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೧೬

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ

ಪೂರ್ಣ ಸರಣಿ

<< ಹಿಂದಿನ ಲೇಖನವನ್ನು

ಈಗ, ಆಳ್ವಾರರನ್ನು ಕುರಿತು ಕೆಲವು ಘಟನೆಗಳು

ನ೦ಪೆರುಮಾಳ್ ಕೊೞಿಕ್ಕೋಡ್ ನಿಂದ ಹೊರಟಾಗ ಆ ಸ್ಥಾನದಲ್ಲಿರುವ ಜನರ ಅಸಮಂಜಸತೆಯಿಂದ (ಸ್ಥಾನನಾಥರು ಅಥವಾ ಅರ್ಚಕರು ಮತ್ತು ಇತರರು) ಆಳ್ವಾರರು ಅವರೊಂದಿಗೆ ಬರಲು ಸಾಧ್ಯವಾಗಲಿಲ್ಲ. ಹೀಗಾಗಿ, ಅವರು ಆಳ್ವಾರರನ್ನು ದಕ್ಷಿಣ-ಪಶ್ಚಿಮ ದಿಕ್ಕಿನಲ್ಲಿ ಬಹಳ ದೂರದವರೆಗೆ ಕರೆದೊಯ್ದರು. ದರೋಡೆಕಾರ ರಿಂದ ಭಯವಿದ್ದುದರಿಂದ, ಬೇರೆ ದಾರಿಯಿಲ್ಲದೆ, ಅವರು ಒಂದು ನಿರ್ದಿಷ್ಟ ಸ್ಥಳದಲ್ಲಿ ಪರ್ವತದ ಕೆಳೆಗೆ ಇಳಿಸಿದರು, ಆಳ್ವಾರರನ್ನು ಸುಂದರವಾದ ದೈವಿಕ ಪೆಟ್ಟಿಗೆ ಒಳಗೆ ವಿಶ್ರಾಂತಿ ಪಡಿಸಿದರು , ಪೆಟ್ಟಿಗೆಯನ್ನು ರಕ್ಷಣಾತ್ಮಕ ಸರಪಳಿಯಿಂದ ಸುತ್ತಿದರು, ಎಲ್ಲಾ ದೈವಿಕ ಆಭರಣಗಳು ಮತ್ತು ಸಂಪತ್ತನ್ನು ಇರಿಸಿದರು. ಹತ್ತಿರದ ಸುರಕ್ಷಿತ ಸ್ಥಳದಲ್ಲಿ ಆಳ್ವಾರರು ಪರ್ವತಗಳಿಂದ ಇಳಿಯಲು ಪ್ರಾರಂಭಿಸಿದರು. ಅವರ ದಾರಿಯಲ್ಲಿ, ಅವರು ದರೋಡೆಕಾರರಿಂದ ಹಲ್ಲೆಗೊಳಗಾದರು; ಅವರು ತಮ್ಮ ಬಳಿ ಇದ್ದ ಬೆಲೆಬಾಳುವ ವಸ್ತುಗಳನ್ನು ಒಪ್ಪಿಸಿ ತಮ್ಮ ತಮ್ಮ ಸ್ಥಳವನ್ನು ತಲುಪಿದರು.

ಅವರಲ್ಲಿ ಆಳ್ವಾರರ ಬಗ್ಗೆ ಅಪಾರ ಭಕ್ತಿ ಹೊಂದಿದ್ದತೋಳಪ್ಪರ್ ಕೂಡ ಇದ್ದರು. ಅವರು ಮಧುರೈಗೆ ಹೋದರು, ತಿರುಮಲೈ ಆಳ್ವಾರರನ್ನು [ತಿರುವಾಯ್ಮೊೞಿ ಪಿಳ್ಳೈ, ಮಣವಾಳ ಮಾಮುನಿಗಳ ಆಚಾರ್ಯರು] ಭೇಟಿಯಾಗಿ ಈ ಘಟನೆಗಳನ್ನು ಹೇಳಿದರು. ಅವರ ಮಾತುಗಳನ್ನು ಕೇಳಿದ ನಂತರ, ತಿರುಮಲೈ ಆಳ್ವಾರ್ ಅವರು ಮಲಯಾಳದ ರಾಜರಿಗೆ ವಿಶ್ವಾಸಾರ್ಹ ಜನರೊಂದಿಗೆ ಸಂದೇಶವನ್ನು ಕಳುಹಿಸಿದರು. ಅಂದಿನಿಂದ, ಆಕ್ರಮಣದ ತೊಂದರೆಗಳು ಕಡಿಮೆಯಾದವು, ಅವರು ತಿರುವಾಂಗೊಟ್ಟೂರ್ ತಲುಪಿದರು, ರಾಜನನ್ನು ಭೇಟಿಯಾದರು ಮತ್ತು ತಿರುಮಲೈ ಆಳ್ವಾರರ ಸಂದೇಶವನ್ನು ಪ್ರಸ್ತುತಪಡಿಸಿದರು. ಸಂದೇಶವನ್ನು ಓದಿದ ನಂತರ, ರಾಜನು ತೋಳಪ್ಪರ್ ಗೆ ಉಡುಗೊರೆಗಳನ್ನು ನೀಡಿ, ತನ್ನ ನಂಬಿಗಸ್ತ ಜನರನ್ನು ಮತ್ತು ವಸ್ತುಗಳನ್ನು ಕಳುಹಿಸಿ, ತಿರುಕ್ಕನಂಬಿಯಲ್ಲಿ ಆಳ್ವಾರರನ್ನು ಕರುಣೆಯಿಂದ ಪ್ರತಿಷ್ಠಾಪಿಸುವಂತೆ ಕೇಳಿಕೊಂಡನು.

ಅವರು ಹಲಗೆ ಮತ್ತು ಸರಪಳಿಗಳೊಂದಿಗೆ ಮುಂಧಿರಿಪ್ಪು ಎಂಬ ಸ್ಥಳಕ್ಕೆ ಹೋಗಿ ಪರ್ವತವನ್ನು ಏರಲು ಪ್ರಾರಂಭಿಸಿದರು. ಆಳ್ವಾರರ ಸ್ಥಾನವನ್ನು ಹುಡುಕಲು ಇಳಿಯಬೇಕಾದ ಸ್ಥಳವನ್ನು ಅವರು ತಲುಪಿದಾಗ, ಅವರು ತಮ್ಮ ಪ್ರಾಣಭಯದಿಂದ, ಯಾರು ಇದಕ್ಕೆ ಸ್ವಯಂಸೇವಕರಾಗುತ್ತಾರೆ ಎಂದು ಯೋಚಿಸುತ್ತಿದ್ದರು. ತೋಳಪ್ಪರ್ ಸ್ವಯಂಪ್ರೇರಿತರಾಗಿ ಕಾರ್ಯವನ್ನು ನಿರ್ವಹಿಸಿದರು. ಅಲ್ಲಿಯ ನಿವಾಸದ ಜನರು, ದೇವಾಲಯದಲ್ಲಿ ವಕುಳಾಭರಣ ಭಟ್ಟರಿಗೆ ( ನಮ್ಮಾಳ್ವರ ದೈವಿಕ ಸ್ಥಳವಾದ ಆಳ್ವಾರ್ತಿರುನಗರಿಯಲ್ಲಿ ಪ್ರಮುಖ ಕೈಂಕರ್ಯಪರರು) ಸಮಾನವಾದ ಪಾಲು ಹೊಂದುವುದಾಗಿ ಮತ್ತು ಕೆಲವು ಸಂದರ್ಭಗಳಲ್ಲಿ ಆಳ್ವಾರರಿಗೆ ತಿರುಮಂಜನವನ್ನು ನೀಡಿದಾಗ, ಆಳ್ವಾರರ ದಿವ್ಯ ಶಿರಸ್ಸನ್ನು ಅಲಂಕರಿಸುವ ದಿವ್ಯ ಮಾಲೆಯನ್ನು “ಆಳ್ವಾರ್ ತೋಳಪ್ಪರ್” ಅರುಳಪ್ಪಾಡು ಎನ್ನುವ ಗೌರವದೊಂದಿಗೆ ಸಮರ್ಪಿಸಲಾಗುತ್ತದೆ. (ಅರುಳಪ್ಪಾಡು ಎನ್ನುವುದು ಗೌರವ ಸ್ವೀಕರಿಸುವವರ ಹೆಸರನ್ನು ಎಲ್ಲರೂ ಕೇಳುವಂತೆ ಜೋರಾಗಿ ಕರೆಯುವ ವಿಧಾನವಾಗಿದೆ). ನಂತರ ಅವರು ತಮ್ಮೊಂದಿಗೆ ತಂದಿದ್ದ ಸರಪಳಿಗಳಿರುವ ಹಲಗೆಯ ಮೇಲೆ ತೋಳಪ್ಪರನ್ನು ಕೆಳಗಿಳಿಸಿದರು, ಇದರಿಂದಾಗಿ ಅವರು ಆಳ್ವಾರರನ್ನು , ಪೆಟ್ಟಿಗೆಯನ್ನು ಕರುಣೆಯಿಂದ ರಕ್ಷಿಸಿದ ಸ್ಥಳವನ್ನು ತಲುಪಿದರು.ತೋಳಪ್ಪರ್ ಅವರು ಆಳ್ವಾರರನ್ನು ತೊರೆದ ಸ್ಥಳವನ್ನು ಹುಡುಕಲು ಪ್ರಾರಂಭಿಸಿದಾಗ, ಒಂದು [ಗರುಡ] ಪಕ್ಷಿಯು ನಿರ್ದಿಷ್ಟ ಸ್ಥಳದಲ್ಲಿ ಶಬ್ದ ಮಾಡಲು ಪ್ರಾರಂಭಿಸಿತು. ಇದು ಕಾಕತಾಳೀಯವಲ್ಲ ಎಂದು ಅರಿತುಕೊಂಡ ತೋಳಪ್ಪರ್ ,ಅಲ್ಲಿ ಒಂದು ಪೆಟ್ಟಿಗೆ ಇರುವುದನ್ನು ಕಂಡುಕೊಂಡರು. ಅವರು ಸಾಷ್ಟಾಂಗ ನಮಸ್ಕಾರ ಮಾಡಿ ಸ್ವಲ್ಪ ಕಾಲ ಆಳ್ವಾರರನ್ನು ಧ್ಯಾನಿಸಿದರು. ಹಕ್ಕಿ ಹಾರಿಹೋಯಿತು. ಅವರು ಪೆಟ್ಟಿಗೆಯನ್ನು ತೆರೆದು ಒಳಗೆ ಆಳ್ವಾರರನ್ನು ಕಂಡರು . ಮತ್ತೆ ಆಳ್ವಾರರ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡಿದರು. ಅವರು ಕೆಲವು ತಾಳೆಗರಿ ಮತ್ತು ಬರವಣಿಗೆಯ ಉಪಕರಣವನ್ನು ತೆಗೆದುಕೊಂಡಿದ್ದರಿಂದ, ಅವರು ಹಲಗೆಯಿಂದ ಇಳಿದ ಕ್ಷಣದಿಂದ ನೋಡಿದ ಎಲ್ಲವನ್ನೂ ಬರೆದರು. ನಂತರ ಅವರು ದೈವಿಕ ಪೆಟ್ಟಿಗೆಯನ್ನು ಹಲಗೆಯ ಮೇಲೆ ಇರಿಸಿದರು ಮತ್ತು ಮೇಲಿನ ಜನರಿಗೆ ಹಲಗೆಯನ್ನು ಎತ್ತುವಂತೆ ಸೂಚಿಸಿದರು. ಅವರು ಹಲಗೆಯನ್ನು ಎತ್ತಿ, ತೋೞಪ್ಪರವರು ಬರೆದಿದ್ದನ್ನೆಲ್ಲಾ ಓದಿ, ಆಳ್ವಾರರನ್ನು ಪೂಜಿಸಿದರು, ಹಲಗೆಯಿಂದ ಪೆಟ್ಟಿಗೆಯನ್ನು ತೆಗೆದುಹಾಕಿದರು ಮತ್ತು ತೋಳಪ್ಪರ್ ಹಿಂತಿರುಗಲು ಹಲಗೆಯನ್ನು ಮತ್ತೆ ಕೆಳಕ್ಕೆ ಇಳಿಸಿದರು.ಅವರು ತೋೞಪ್ಪರ ಜೊತೆ ಹಲಗೆಯನ್ನು ಎತ್ತಿದಾಗ, ಹಲಗೆಯು ಒಂದು ಅಡಚಣೆಗೆ ತಗುಲಿತು, ಕೆಳಗೆ ಬಿದ್ದ ತೋಳಪ್ಪರನ್ನು ಹಿಂಪಡೆಯಲು ಸಾಧ್ಯವಾಗಲಿಲ್ಲ.

ಅನುವಾದ – ಅಡಿಯೇನ್ ಸುಭದ್ರಾ ರಾಮಾನುಜ ದಾಸಿ
ಪುರಾವೆ ಓದುವಿಕೆ -ಅಡಿಯೇನ್ ಕೊದೈ ರಾಮಾನುಜ ದಾಸಿ

ಮೂಲ : https://granthams.koyil.org/2021/07/31/yathindhra-pravana-prabhavam-16-english/

ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org

1 thought on “ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೧೬”

Leave a Comment