ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ
ಅವರು ತಮ್ಮೊಂದಿಗೆ ಇದ್ದ ಅವರ ಮಗ ಅಪ್ಪನ್ ಪಿಳ್ಳೈ ಅವರನ್ನು ಸಮಾಧಾನಪಡಿಸಿ ಮತ್ತು ಅವರಿಗೆ ಹೇಳಿದರು “ದುಃಖಪಡಬೇಡ, ಏಕೆಂದರೆ ಅವರು ಆಳ್ವಾರರ ಕೈಂಕರ್ಯದಲ್ಲಿ ತನ್ನ ದಿವ್ಯ ರೂಪವನ್ನು ತ್ಯಜಿಸಿದ್ದಾರೆ ; ಆಳ್ವಾರರು ನಿನ್ನನ್ನು ತಮ್ಮ ಮಗನೆಂದು ಪರಿಗಣಿಸುತ್ತಾರೆ; ತೋಳಪ್ಪರಿಗೆ ಏನು ವಾಗ್ದಾನ ಮಾಡಲಾಗಿತ್ತೋ ಅದನ್ನು ನಿಮಗಾಗಿ ನೆರವೇರಿಸಲಾಗುವುದು” ಎಂದು ಹೇಳಿದರು . ನಂತರ ಅವರು ಆಳ್ವಾರರ ದೈವಿಕ ವಿಗ್ರಹವನ್ನು ಮುಂಡಿರಿಪ್ಪುಗೆ ತಂದರು, ಐದು ದಿನಗಳ ಕಾಲ ತಿರುಮಂಜನ (ದೈವಿಕ ಸ್ನಾನ) ನಡೆಸಿದರು.ಈ ಘಟನೆಗಳನ್ನು ಕೇಳಿ ಆ ಸ್ಥಳದ ಸುತ್ತಮುತ್ತ ವಾಸಿಸುತ್ತಿದ್ದ ದರೋಡೆಕೋರರು ಅಲ್ಲಿಗೆ ಬಂದು ಆಳ್ವಾರರನ್ನು ಪೂಜಿಸಿ, ಆಳ್ವಾರರಿಂದ ಮತ್ತು ಇತರರಿಂದ ಹಿಂದೆ ದೋಚಿದ್ದನ್ನೆಲ್ಲಾ ಹಿಂದಿರುಗಿಸಿ, ಆಳ್ವಾರರನ್ನು ತಿರುಕ್ಕನಂಬಿಗೆ ಕರೆದೊಯ್ಯಲು ಪಲ್ಲಕ್ಕಿಯನ್ನು ದಾನವಾಗಿ ನೀಡಿದರು ಮತ್ತು ಆಳ್ವಾರರು ಮತ್ತು ಪರಿವಾರದವರಿಗೆ ಸುರಕ್ಷಿತ ಮಾರ್ಗವನ್ನು ಖಾತ್ರಿಪಡಿಸಿದರು. ದೊಡ್ಡ ಗರುಡ ಪಕ್ಷಿ ( ಪೆರಿಯ ತಿರುವಡಿ ) ಆಳ್ವಾರರ ಮೇಲೆ ಹಾರುತ್ತಾ ತಿರುಕ್ಕನಂಬಿಯವರೆಗೂ ಹೋಗಿ, ಅಲ್ಲಿ ಮರದ ಮೇಲೆ ಗೂಡು ಕಟ್ಟಿಕೊಂಡು ವಾಸಿಸುತ್ತಿತ್ತು. ಇದನ್ನು ಆಶ್ಚರ್ಯದಿಂದ ನೋಡುತ್ತಾ, ಆ ಜನರು ಆಳ್ವಾರರನ್ನುಬಹಳ ಉತ್ಸಾಹದಿಂದ ಪೂಜಿಸಿದರು, ತಮ್ಮ ನಿಲುವಿಗೆ ಸೂಕ್ತವಾದ ನೈವೇದ್ಯಗಳನ್ನು ಮಾಡಿದರು . ಪ್ರತಿದಿನ ಪೂಜೆ ಮತ್ತು ವಿಶೇಷ ಸಂದರ್ಭಗಳಲ್ಲಿ ಉತ್ಸವವನ್ನು (ದೇವಾಲಯದಲ್ಲಿ ಉತ್ಸವ) ಆಚರಿಸಿದರು. ಈ ವಿಸ್ಮಯಕಾರಿ ಘಟನೆಗಳ ಬಗ್ಗೆ ಕೇಳಿ , ತಿರುವನಂತಪುರಂ, ತಿರುವಟ್ಟಾರು , ತಿರುವನ್ ಪರಿಸಾರಂ, ತಿರುವಳ್ಳವಾಜ್ಹ್ ಮೊದಲಾದ ಸುತ್ತಮುತ್ತಲಿನ ದಿವ್ಯದೇಶಗಳಲ್ಲಿರುವ ನಂಬೂದಿರಿ ಪೋಥಿತಿಮಾರ್ಗಳು (ಪುರೋಹಿತರ ಕುಲಕ್ಕೆ ಸೇರಿದವರು) ತಿರುಕ್ಕನಂಬಿಯ ಬಳಿಗೆ ಬಂದು ಆಳ್ವಾರರನ್ನು ಆರಾಧಿಸಿದರು ಮತ್ತು ಅವರನ್ನು ಬಿಟ್ಟು ಹೋಗಲು ಬಯಸಲಿಲ್ಲ. ಪ್ರತಿದಿನ, ಬೆಳಗಿನ ಸಮಯದಲ್ಲಿ, ಆಳ್ವಾರರಿಗೆ ಮೊಸರು ಅನ್ನ, ತುಪ್ಪದಿಂದ ಮಾಡಿದ ದೋಸೆ , ಅವಲಕ್ಕಿ ಬೆಲ್ಲದಿಂದ ಮಾಡಿದ ಸಿಹಿ ತಿನಿಸು ಇತ್ಯಾದಿಗಳನ್ನು ಮತ್ತು ಮಧ್ಯಾಹ್ನದವರೆಗೆ ಹಗಲಿನಲ್ಲಿ ವಿವಿಧ ರೀತಿಯ ಅನ್ನವನ್ನು ತಯಾರಿಸಲಾಯಿತು. ಆಳ್ವಾರರ ಮೇಲೆ ಆಳವಾದ ಪ್ರೀತಿಯಿಂದ ಈ ವ್ಯವಸ್ಥೆಗಳನ್ನು ಪೋಥಿತಿಮಾರ್ಗಳು ಮಾಡಿದರು. ಆಳ್ವಾರ ತಿರುನಗರಿ (ಆಳ್ವಾರ್ ಜನ್ಮಸ್ಥಳ ಮತ್ತು ಅವರ ವಿಗ್ರಹವನ್ನು ಮೂಲತಃ ಸ್ಥಾಪಿಸಿದ ಸ್ಥಳ, ಆಕ್ರಮಣಕಾರರಿಂದ ರಕ್ಷಿಸಲು ಸ್ಥಳಾಂತರಗೊಳ್ಳುವ ಮೊದಲು) ಪ್ರಕರಣದಂತೆ, ಎಲ್ಲಾ ಶಿಷ್ಯರು ಮತ್ತು ಮಠಾಧೀಶರು ಆಳ್ವಾರರ ಮೇಲಿನ ಆಳವಾದ ಪ್ರೀತಿಯಿಂದ ಅಲ್ಲಿಯೇ ಇದ್ದರು. ಸೂಕ್ತ ಸಮಯದಲ್ಲಿ ಹಬ್ಬಗಳನ್ನು ಆಚರಿಸುವುದು.
ಈಗ, ದೇವಸ್ಥಾನದಲ್ಲಿ (ಶ್ರೀರಂಗಂ) ಘಟನೆಗಳು
ನಂಪೆರುಮಾಳ್ ಶ್ರೀರಂಗವನ್ನು ತೊರೆದ ನಂತರ, ಶ್ರೀರಾಮನು ಅರಣ್ಯಕ್ಕೆ ತೆರಳಿದ ನಂತರ “ಅಭಿವೃಕ್ಷ: ಪರಿಮಲನಾ:” ಎಂಬ ಮಾತಿನಂತೆ ಅಯೋಧ್ಯೆಯು ತನ್ನ ಎಲ್ಲಾ ಶ್ರೀಮಂತಿಕೆ ಮತ್ತು ಸೌಂದರ್ಯವನ್ನು ಕಳೆದುಕೊಂಡಂತೆ, ಶ್ರೀರಂಗವೂ ತನ್ನ ಸೌಂದರ್ಯವನ್ನು ಕಳೆದುಕೊಂಡಿತು. ಆಳ್ವಾರರು ತಮ್ಮ ಪಾಸುರಂಗಳಲ್ಲಿ ” ಆಟ್ರಾಪಟ್ರಾರ್ ಸೂಟ್ರೀ ವಾಝುಂ ಅಂದನೀರ್ ರಂಗಂ” (ಲೌಕಿಕ ಅನ್ವೇಷಣೆಗಳಿಂದ ಸಂಪೂರ್ಣವಾಗಿ ವಿಮುಖವಾಗಿರುವ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುವ ತನ್ನ ಭಕ್ತರೊಂದಿಗೆ ಸುಂದರವಾದ ತಂಪಾದ ತಿರುವರಂಗ) ಮತ್ತು “ನಲ್ಲರ್ಗಳ್ ವಾಲುಮ್ ನಲರಿಯರಂಗಮ್ ” ಎಂದು ಶ್ಲಾಘಿಸಿದ ರೀತಿ ಇನ್ನು ಮುಂದೆ ಇರಲಿಲ್ಲ. ” (ತಂಪಾದ ತಿರುವರಂಗದಲ್ಲಿ ವಾಸಿಸುವ ಒಳ್ಳೆಯ ಜನರು). ಅದು ತನ್ನ ಸೌಂದರ್ಯವನ್ನು ಸಂಪೂರ್ಣವಾಗಿ ಕಳೆದುಕೊಂಡಿತ್ತು.
ಮುಸಲ್ಮಾನರ ಆಕ್ರಮಣಕಾರಿ ಸೇನೆಯ ನಾಯಕ ಶ್ರೀರಂಗಂಗೆ ಮತ್ತಷ್ಟು ಹಾನಿ ಮಾಡಿದ. ಅವರು ಬಲವಾದ ಗೋಡೆಯನ್ನು ಕೆಡವಿದರು ಮತ್ತು ಕಾನನೂರಿನ [ಇಂದಿನ ತಿರುವಾನಾಯ್ಕಾವಿಲ್ ] ಬಳಿ ವಾಸ ಮಾಡಲು ತೊಡಗಿಸಿದರು . ಅಲ್ಲಿ ವಾಸಿಸುವ ಜನರಿಗೆ ಮತ್ತಷ್ಟು ತೊಂದರೆಗಳನ್ನು ಸೃಷ್ಟಿಸಿದರು. ಪೆರಿಯಪೆರುಮಾಳ್ ಅವರ ಜಮೀನು ಆಸ್ತಿಯನ್ನು ನೋಡಿಕೊಳ್ಳುತ್ತಿದ್ದ ಸಿಂಗಪ್ಪಿರಾನ್ ಎಂಬ ವ್ಯಕ್ತಿ , ಅವರಿಗೆ ಸಹಾಯ ಮಾಡಲು ಬಯಸಿ ಆ ನಾಯಕನ ಬಳಿಗೆ ಹೋಗಿ ಗೋಡೆ, ಮಹಲುಗಳು, ಗೋಪುರಗಳು, ಬೀದಿಗಳು ಇತ್ಯಾದಿಗಳಿಗೆ ಹೆಚ್ಚಿನ ಹಾನಿಯಾಗದಂತೆ ನೋಡಿಕೊಂಡರು. ಇದರಿಂದ ತುಂಬಾ ಸಂತೋಷವಾಯಿತು ಮತ್ತು ಅವರನ್ನು ಹೊಗಳಿದರು.
ಅನುವಾದ – ಅಡಿಯೇನ್ ಸುಭದ್ರಾ ರಾಮಾನುಜ ದಾಸಿ
ಪುರಾವೆ ಓದುವಿಕೆ -ಅಡಿಯೇನ್ ಕೊದೈ ರಾಮಾನುಜ ದಾಸಿ
ಮೂಲ : https://granthams.koyil.org/2021/08/01/yathindhra-pravana-prabhavam-17-english/
ಆರ್ಕೈವ್ ಮಾಡಲಾಗಿದೆ – https://granthams.koyil.org
ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org
1 thought on “ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೧೭”