ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ
ಅಳಗಿಯ ಮನವಾಳ ಪೆರುಮಾಳ್ ಅವರಿಗೆ ಪಿಳ್ಳೈ ಅವರ ಅಂತಿಮ ಆದೇಶ
ಜ್ಞಾನ, ಭಕ್ತಿ ಮತ್ತು ನಿರ್ಲಿಪ್ತತೆಯ ದ್ಯೋತಕವಾಗಿ, ಈ ಗುಣಗಳಿಂದ ಬಂದ ಮಹಾನ್ ಮಹಿಮೆಯೊಂದಿಗೆ ಜೀವಿಸುತ್ತಾ, ಪಿಳ್ಳೈ ಅವರು ದೀರ್ಘಕಾಲದವರೆಗೆ ಕೈಂಕರ್ಯ ಶ್ರೀ (ಸೇವೆಯ ಸಂಪತ್ತು) ಯೊಂದಿಗೆ ವಾಸಿಸುತ್ತಿದ್ದರು. ಅನಂತರ ನಿತ್ಯವಿಭೂತಿಯಲ್ಲಿ (ಶ್ರೀವೈಕುಂಠಂ) ಶಾಶ್ವತ (ಅಡೆತಡೆಯಿಲ್ಲದ) ಸೇವೆಯ ಕುರಿತು ಯೋಚಿಸಿ, ಅವರು ತಮ್ಮ ಆಚಾರ್ಯರಾದ ಪಿಳ್ಳೈ ಲೋಕಾಚಾರ್ಯರ ಬಗ್ಗೆ ಯೋಚಿಸಿದರು.
ಉತ್ತಮನೇ ! ಉಳಗಾರಿಯನೇ ! ಮೆಟ್ರೊಪ್ಪಾರೈಯಿಲ್ಲಾ
ವಿತ್ತಗನೇ ! ನಲ್ಲ ವೇಧಿಯನೇ ! ತಣ್ಮುಡುಂಬೈ ಮನ್ನಾ !
ಶುಧ್ಧ ನನ್ ಜ್ಞಾನಿಯರ್ ನಟ್ಟ್ರುಣೈಯೇ! ಶುಧ್ಧಸತ್ತುವನೇ !
ಎತ್ತನೈ ಕಾಲಮಿರುಂದು ಉಜ್ಹಲ್ವೇನ್ ಇವ್ವುಡಂಬೈಕ್ಕೊಂಡೇ?
(ಓಹ್ ಸರ್ವೋತ್ತಮ ಜೀವಿ! ಓ ಲೋಕಾಚಾರ್ಯರೇ! ಯಾವುದೇ ಸಮಾನಾಂತರವಿಲ್ಲದ ಜ್ಞಾನಿಯೇ! ಓ ವೇದಗಳಲ್ಲಿ ಶ್ರೇಷ್ಠ ವಿದ್ವಾಂಸನೇ! ಓ ತಂಪಾದ ಮುಡುಂಬೈ ಕುಲದ ನಾಯಕನೇ! ಓಹ್ ಸಂಪೂರ್ಣ ಶುದ್ಧವಾಗಿರುವ ಜ್ಞಾನಿಗಳಿಗೆ ಒಡನಾಡಿ! ಈ ಭೌತಿಕ ರೂಪದಿಂದ ನಾನು ಇನ್ನೂ ಎಷ್ಟು ದಿನ ನರಳಬೇಕು?)
ತನ್ನ ಆಚಾರ್ಯರನ್ನು ಸೇರಲು ಅಡ್ಡಿಯು ತನ್ನ ದೇಹವೆಂದು ಚೆನ್ನಾಗಿ ತಿಳಿದ ಅವರು ತನ್ನ ದೇಹದಿಂದ ತನ್ನನ್ನು ಬಿಡುಗಡೆ ಮಾಡುವಂತೆ ತನ್ನ ಆಚಾರ್ಯನನ್ನು ವಿನಂತಿಸಿದರು . ಅವರು ಅನಾರೋಗ್ಯಕ್ಕೆ ಒಳಗಾದರು ಮತ್ತು ಚಡಪಡಿಕೆ ಕಾರಣದಿಂದಾಗಿ ವಿಶ್ರಾಂತಿ ಪಡೆಯುತ್ತಿದ್ದರು. ಅವರು ಇದ್ದಕ್ಕಿದ್ದಂತೆ ದುಃಖದಿಂದ ಎಚ್ಚರಗೊಂಡರು . ನಾಯನಾರರು ಮತ್ತು ಇತರ ಶಿಷ್ಯರು “ಏನಾಯಿತು?” ಎಂದು ಕೇಳಿದರು. ಅವರು ಉತ್ತರಿಸಿದರು, “ಇದು ಕಲಿ ಕಾಲ. ಆಳ್ವಾರರ ಅರುಳಿಚ್ಚೆಯಲ್ (ನಾಲಯಿರ ದಿವ್ಯ ಪ್ರಬಂಧಂ) ದಿವ್ಯಸೂಕ್ತಿಗಳಲ್ಲಿ ಸಂಪೂರ್ಣ ಆಸಕ್ತಿ ಮತ್ತು ನಂಬಿಕೆಯೊಂದಿಗೆ ನಮ್ಮ ಧರ್ಶನವನ್ನು ಯಾರು ಮುಂದೆ ಕೊಂಡೊಯ್ಯುತ್ತಾರೆ? ಆದುದರಿಂದ ಅಡಿಯೇನ್ ತುಂಬಾ ಚಿಂತಿತನಾಗಿದ್ದೇನೆ” ಎಂದು ಹೇಳಿದರು . ನಾಯನಾರರು ಅವರಿಗೆ ಧೈರ್ಯ ಹೇಳಿದರು, ಅವರ ಪಾದಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿದ ನಂತರ “ಅಡಿಯೇನ್ ಅದನ್ನು ಮಾಡುತ್ತೇನೆ” ಎಂದು ಪಿಳ್ಳೈಗೆ ಹೇಳಿದರು. “ಕೇವಲ ಮಾತುಗಳು ಸಾಕಾಗುವುದಿಲ್ಲ, ಹಾಗೆಯೇ ಮಾಡಬೇಕು” ಎಂದು ಹೇಳಿದರು. ಪಿಳ್ಳೈಗೆ ಸಮಾಧಾನವಾಯಿತು; ಅವರು ನಾಯನಾರರನ್ನು ಕರುಣೆಯಿಂದ ಕರೆದು ಹೇಳಿದರು “ನಿಮ್ಮ ಗಮನವನ್ನು ಸಂಸ್ಕೃತ ಶಾಸ್ತ್ರಗಳ ಮೇಲೆ ಇಡಬೇಡಿ; ಶ್ರೀ ಭಾಷ್ಯವನ್ನು ಒಮ್ಮೆ ಆಲಿಸಿ, ಎಂಪೆರುಮಾನಾರಿಗೆ ಮತ್ತು ನಮಗೆ ಪ್ರಿಯವಾದ ಅರುಳಿಚ್ಚೆಯಲ್ ಗಳನ್ನು ಸದಾ ನಿರಂತರವಾಗಿ ವಿಶ್ಲೇಷಿಸಿ. ನಮ್ಮ ಪೀಠಾಧಿಪತಿಗಳಂತೆ, ಪೆರುಮಾಳನ್ನು ಪೂಜಿಸುತ್ತಾ ಇರಿ ಮತ್ತು ಕೋಯಿಲ್‌ನಲ್ಲಿ (ಶ್ರೀರಂಗಂ) ಶಾಶ್ವತವಾಗಿ ನೆಲೆಸಿರಿ”. ಅವರು ಇತರ ಶಿಷ್ಯರನ್ನು ಕರೆದು ಅವರಿಗೆ ಹೇಳಿದರು “ಅವರನ್ನು ವಿಶೇಷವಾದ ಅವತಾರವಾಗಿ ಬೆಂಬಲಿಸುತ್ತಾ ಇರಿ”. “ಮಾಗವೈಗುಂಢಮ್ ಕಾಣ ಎನ್ ಮನಂ ಏಗಮೆನ್ನಂ” ಎಂದು ತಿರುವಾಯ್ಮೊಳಿಯಲ್ಲಿ ಹೇಳಿರುವಂತೆ ಅವರು ಶ್ರೀವೈಕುಂಠವನ್ನು ತಲುಪಲು ನಿರಂತರವಾಗಿ ಯೋಚಿಸುತ್ತಿದ್ದರು, ಪಿಳ್ಳೈ ಲೋಕಾಚಾರ್ಯರ ದಿವ್ಯ ಪಾದಗಳನ್ನು ಧ್ಯಾನಿಸಿದರು. ಅವರು ವೈಖಾಸಿ (ಋಷಭ) ಮಾಸದ ಬಹುಲಾಷ್ಟಮಿಯಂದು (ಹುಣ್ಣಿಮೆಯ ನಂತರ ಎಂಟು ದಿನ) ದೈವಿಕ ನಿವಾಸಕ್ಕೆ ತೆರಳಿದರು.
ತಿರುವಾಯ್ಮೊಳಿ ಪಿಳ್ಳೈ ಅವರ ವೈಶಿಷ್ಟ್ಯ
ತರುವಾಯ, ನಾಯನಾರ್ ಮತ್ತು ಇತರ ಆಚಾರ್ಯರು ತಮ್ಮ ಆಚಾರ್ಯರಿಂದ ಪ್ರತ್ಯೇಕತೆಯನ್ನು ಸಹಿಸಲಾರದೆ ದುಃಖಿತರಾದರು . ಅವರು ತಮ್ಮ ದುಃಖವನ್ನು ಹೋಗಲಾಡಿಸಿಕೊಂಡು ಪಿಳ್ಳೈಗೆ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು ಮತ್ತು 13 ನೇ ದಿನದಂದು ತಿರುವಧ್ಯಯನಮ್ ಅನ್ನು ನಡೆಸಿದರು. ಅದರ ನಂತರ, ಪ್ರತಿ ವರ್ಷ, ವೈಖಾಸಿ ಮಾಸದ ಪೌರ್ಣಮಿಯ ನಂತರ 8 ನೇ ದಿನದಂದು, ನಾಯನಾರರು ಶ್ರೀವೈಷ್ಣವರಿಗೆ ಮೂರು ಹಣ್ಣುಗಳಿಂದ (ಮಾವು, ಬಾಳೆಹಣ್ಣು ಮತ್ತು ಹಲಸು) ಔತಣವನ್ನು ಏರ್ಪಡಿಸುತ್ತಾರೆ.
ಪಿಳ್ಳೈ ಲೋಕಾಚಾರ್ಯರ ಒಂದು ವಿಶಿಷ್ಟವಾದ ಗುಣವೆಂದರೆ ಅವರು ಮಹಿಳೆಯರು ಮತ್ತು ಅಜ್ಞಾನಿಗಳು ಸಹ ಅರ್ಥಮಾಡಿಕೊಳ್ಳಬಹುದಾದ ಅತ್ಯಂತ ಸಮಗ್ರವಾದ ರೀತಿಯಲ್ಲಿ ವಿಶಿಷ್ಟವಾದ ಅರ್ಥಗಳನ್ನು ನೀಡಿದರು. ಎಂಪೆರುಮಾನ್‌ನಿಂದ ಬೇರ್ಪಟ್ಟು ಅವರು ತನ್ನನ್ನು ತಾನೇ ಉಳಿಸಿಕೊಳ್ಳಲು ಸಾಧ್ಯವಿಲ್ಲದೆ ನಿರಂತರವಾಗಿ ಅವರಿಗೆ ಸೇವೆಗಳನ್ನು ನಡೆಸುತ್ತಿದ್ದರು. ಶಿಷ್ಯನ ಗುರುತಿಗಾಗಿ ಹೇಳುವಂತೆಯೇ “ಶರೀರಮರ್ಥಂ ಪ್ರಾಣಂಚ ಸದ್ಗುರುಭ್ಯೋ ನಿವೇಧಯೇತ್” (ಒಬ್ಬರ ದೇಹ, ಸಂಪತ್ತು ಮತ್ತು ಜೀವನವನ್ನು ಒಬ್ಬರ ಆಚಾರ್ಯರಿಗಾಗಿ ಬಳಸಬೇಕು). ಆಳ್ವಾರ್ ತಿರುನಗರಿಯಲ್ಲಿ, ತಿರುವಾಯ್ಮೊಳಿ ಪಿಳ್ಳೈ ಅವರು ಪರಮಾಚಾರ್ಯರ (ಪರಾಂಕುಶ (ನಮ್ಮಾಳ್ವಾರ್) ಮತ್ತು ಅವರ ಅತ್ಯಂತ ಪ್ರೀತಿಯ ಶಿಷ್ಯರಾದ ಉಡೈಯವರ್) ವಿಗ್ರಹಗಳನ್ನು ಪವಿತ್ರಗೊಳಿಸಿದರು. ಇದು ತಿರುವಾಯ್ಮೊಳಿ ಪಿಳ್ಳೈ ಅವರ ಗಮನಾರ್ಹವಾದ ಕೈಂಕರ್ಯವಾಗಿತ್ತು. ಆಳ್ವಾರರ ಅರುಳಿಚ್ಚೆಯಲ್ ಬಗ್ಗೆ ಅವರಿಗಿದ್ದ ಅಪಾರವಾದ ಒಳಗೊಳ್ಳುವಿಕೆ ಮತ್ತು ಅಭಿರುಚಿ ಹಾಗೂ ದೃಢತೆಯೊಂದಿಗೆ ಅವರು ಇದನ್ನು ಪ್ರಚಾರ ಮಾಡಿರುವುದು ಅವರಿಗೆ ಮತ್ತೊಂದು ವಿಶಿಷ್ಟವಾದ ಗುಣವಾಗಿದೆ. ಅವರ ದೈವಿಕ ನಕ್ಷತ್ರವು ವೈಕಾಶಿ (ಋಷಭ ) ತಿಂಗಳಲ್ಲಿ ವಿಶಾಖಾ ಆಗಿದೆ. ಅವರ ತನಿಯನ್ :
ನಮ: ಶ್ರೀಶೈಲನಾಥಾಯ ಕುಂತೀನಗರಜನ್ಮನೆ
ಪ್ರಸಾಧಲಬ್ದ ಪರಮಪ್ರಾಪ್ಯ ಕೈಂಕರ್ಯ ಶಾಲಿನೇ
(ಕುಂತೀಪುರದಲ್ಲಿ ಕರುಣಾಮಯವಾಗಿ ಅವತರಿಸಿರುವ ಶ್ರೀಶೈಲೇಶರ್ ಎಂದೂ ಕರೆಯಲ್ಪಡುವ ತಿರುವಾಯ್ಮೊಳಿ ಪಿಳ್ಳೈ ಅವರಿಗೆ ನಾನು ನಮಸ್ಕರಿಸುತ್ತೇನೆ. ನಮ್ಮಾಳ್ವಾರರ ಅನುಗ್ರಹದಿಂದ ಅವರು ಅಪ್ರತಿಮ ಕೈಂಕರ್ಯವನ್ನು ಪಡೆದರು ಮತ್ತು ಅದರ ನಿಮಿತ್ತ ವೈಭವಯುತರಾಗಿದ್ದರು.)
ನಂತರ, ನಾಯನಾರರು ಕೂಡ ತಮ್ಮ ಆಚಾರ್ಯರಿಂದ [ತಿರುವಾಯ್ಮೊಳಿ ಪಿಳ್ಳೈ] ದೀಕ್ಷೆ ಪಡೆದಂತೆ, ತಿರುವಾಯ್ಮೊಳಿ ಮುಂತಾದ ಅರುಳಿಚ್ಚೆಯಲ್ಗಳನ್ನೂ ಕುರಿತು ಪ್ರವಚನ ನೀಡಲು ಪ್ರಾರಂಭಿಸಿದರು. ಈ ಕೆಳಗಿನ ಶ್ಲೋಕದಲ್ಲಿ ಉಲ್ಲೇಖಿಸಿರುವಂತೆಯೇ :
ತದಸ್ತು ಮೂಲಭೂತೇಷು ತೇಷು ದಿವ್ಯೇಷು ಯೋಗಿಷು
ವವೃತೇ ವರ್ಧಯನ್ಭಕ್ತಿಮ್ ವಕುಳಾಭರಣಾಧಿಷು
ತಥಾ ತಧ್ಧಾತ್ ಪ್ರಪನ್ನಾರ್ಥ ಸಂಪ್ರಧಾಯಮ್ ಪ್ರವರ್ತಕಾನ್
ಅಯಮಾಧ್ರಿಯತ ಶ್ರೀಮಾನ್ ಆಚಾರ್ಯಾನಾಧಿಮಾನಪಿ
(ತರುವಾಯ, ಶ್ರೀಮಾನ್ (ಕೈಂಕರ್ಯ ಸಂಪತ್ತನ್ನು ಹೊಂದಿರುವ) ಅಳಗಿಯ ಮನವಾಳ ಪೆರುಮಾಳ್ ನಾಯನಾರ್ ಅವರು ಅಪ್ರತಿಮ ನಮ್ಮಾಳ್ವಾರ್ ಅವರಂತಹ ಆಳ್ವಾರರ ಕಡೆಗೆ ಭಕ್ತಿಯನ್ನು ಬೆಳೆಸಿದರು, ಹೀಗೆ ಸ್ವತಃ ಪೋಷಿಸಿದರು. ಅದೇ ರೀತಿ ಅವರು ಆಳ್ವಾರರು ಹೇಳಿರುವುದರ ಸಂಪ್ರದಾಯದ ಅರ್ಥಗಳನ್ನು ತಮ್ಮ ಜೀವನದಲ್ಲಿ ಅಭ್ಯಾಸ ಮಾಡಿದ ಪೂರ್ವಾಚಾರ್ಯರ ಬಗ್ಗೆ ಹೆಚ್ಚಿನ ಗೌರವವನ್ನು ತೋರಿಸಿದರು). ವಿಶಿಷ್ಟವಾದ ಪ್ರಮಾಣಗಳು (ಗ್ರಂಥಗಳು), ಪ್ರಮೇಯಂ (ಸರ್ವೇಶ್ವರನ್) ಮತ್ತು ಪ್ರಮಾತಾ (ಗ್ರಂಥಗಳ ಲೇಖಕರು) ಗಳಿಗೆ ಹೆಚ್ಚಿನ ಗೌರವವನ್ನು ತೋರಿಸುತ್ತಾ, ಅವರು ಆಳ್ವಾರ್ ತಿರುನಗರಿಯಲ್ಲಿ ಧರ್ಶನವನ್ನು ಪೋಷಿಸುವುದನ್ನು ಮುಂದುವರೆಸಿದರು.
ಅನುವಾದ – ಅಡಿಯೇನ್ ಸುಭದ್ರಾ ರಾಮಾನುಜ ದಾಸಿ
ಪುರಾವೆ ಓದುವಿಕೆ -ಅಡಿಯೇನ್ ಕೊದೈ ರಾಮಾನುಜ ದಾಸಿ
ಮೂಲ : https://granthams.koyil.org/2021/08/12/yathindhra-pravana-prabhavam-28-english/
ಆರ್ಕೈವ್ ಮಾಡಲಾಗಿದೆ – https://granthams.koyil.org
ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org