ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ
ತರುವಾಯ, ಅವರು ಕಾವೇರಿಯನ್ನು ತಲುಪಿದರು, ಇದನ್ನು “ಎಣ್ದಿಸೈ ಕಣಂಗಳುಂ ಇರೈನ್ಜಿಯಾಡು ತೀರ್ಥ ನೀರ್” ಎಂದು ವಿವರಿಸಲಾಗಿದೆ (ಎಂಟು ದಿಕ್ಕುಗಳಿಂದ ರಚಿಸಲಾದ ಎಲ್ಲಾ ಘಟಕಗಳು ಕಾವೇರಿಯಲ್ಲಿ ಉತ್ಸಾಹದಿಂದ ಪವಿತ್ರ ಸ್ನಾನವನ್ನು ಮಾಡುತ್ತಾರೆ ) ಮತ್ತು “ಗಂಗೈಯಿಲುಮ್ ಪುನಿದಮಾಯ ಕಾವೇರಿ ” (ಗಂಗೈಗಿಂತಲೂ ಪವಿತ್ರವಾದ ಕಾವೇರಿ) ಆ ದೈವಿಕ ಕಾವೇರಿಯಲ್ಲಿ ಪವಿತ್ರ ಸ್ನಾನವನ್ನು ಮಾಡಿದರು, ಕೇಶವಾದಿ ದ್ವಾದಶ ಊರ್ದ್ವಪುಂಡ್ರವನ್ನು (ಕೇಶವ ಎಂಬ ಹೆಸರಿನಿಂದ ಪ್ರಾರಂಭವಾಗುವ ಹನ್ನೆರಡು ದೈವಿಕ ಚಿಹ್ನೆಗಳು) ಅನ್ವಯಿಸಿ ಮತ್ತು ಭವ್ಯವಾದ ದೈವಿಕ ಪಟ್ಟಣವಾದ ತಿರುವರಂಗಂಗೆ ನಮಸ್ಕರಿಸಿದರು. ಅವರನ್ನು ಬರಮಾಡಿಕೊಳ್ಳಲು ತಿರುವರಂಗದ ಅಪಾರ ಸಂಖ್ಯೆಯ ಶಿಷ್ಯರು ಅಲ್ಲಿಗೆ ಬಂದರು. ಅವರ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡಿ ಅವರೊಡನೆ ಶ್ರೀರಂಗಂನ ತೋಟಗಳನ್ನು ದಾಟಿ ಹೋದರು. ನಂತರ ಅವರು ಈ ಕೆಳಗಿನ ಪಾಸುರಂನಲ್ಲಿ ಹೇಳಿದಂತೆ ಶ್ರೀರಂಗದ ಬೀದಿಗಳಲ್ಲಿ ಸಂಚರಿಸಿದರು :
ಮಾಡಮಾಳಿಗೈಶೂಳ್ ತಿರುವೀದಿಯುಮ್ ಮಣ್ಣುಸೇರ್ ತಿರುವಿಕ್ಕಿರಮನ್ ವೀದಿಯುಮ್
ಆಡಲ್ಮಾರನ್ ಅಗಳನ್ಗನ್ ವೀದಿಯುಮ್ ಆಲಿನಾಡನ್ ಅಮರ್ನ್ದುರೈ ವೀದಿಯುಮ್
ಕೂಡಲ್ ವಾಳ್ ಕುಲಶೇಖರನ್ ವೀದಿಯುಮ್ ಕುಲವು ರಾಸಮಗೇಂದಿರನ್ ವೀದಿಯುಮ್
ತೇಡುತನ್ಮಾ ವನ್ಮಾವಿನ್ ವೀದಿಯುಮ್ ತೆನ್ನರಂಗನರ್ ತಿರುವಾವರಣಮೇ
(ಅವರು ಬೃಹತ್ ಮಹಲುಗಳನ್ನು ಹೊಂದಿದ್ದ ಬೀದಿಗಳನ್ನು ದಾಟಿದರು, ತಿರುವಿಕ್ರಮನ ಬೀದಿಯ ಹಿಂದೆ, ಅಗಳನ್ಗನ್ ಬೀದಿ, ತಿರುಮಂಗೈ ಆಳ್ವಾರರ ಬೀದಿ, ಕುಲಶೇಖರನ ಬೀದಿ, ರಾಜಮಹೇಂದ್ರನ ಬೀದಿ, ಶ್ರೀರಂಗದ ಎಲ್ಲಾ ರಕ್ಷಣಾತ್ಮಕ ಪದರಗಳನ್ನು (ಬೀದಿಗಳು) ದಾಟಿದರು). ಅವರು ದಿವ್ಯವಾದ ಮಹಲುಗಳನ್ನು, ದಿವ್ಯವಾದ ಬೀದಿಗಳನ್ನು ಹಾಗು ಗೋಪುರಗಳನ್ನು ನೋಡುತ್ತಾ ಬಹಳ ಸಂತೋಷಪಟ್ಟರು ಮತ್ತು ಅಲ್ಲಿ ಅವರಂತೆಯೇ ಆಚಾರ್ಯರಾದ ಕೋಟ್ಟೂರಿಲ್ ಅಣ್ಣರ್ ತಿರುಮಾಳಿಗೈಯನ್ನು (ದೈವಿಕ ನಿವಾಸ) ತಲುಪಿದರು. ಕೋಟ್ಟೂರಿಲ್ ಅಣ್ಣರ್ ಅವರು ಈ ಹಿಂದೆ ತಿರುಮೆಯ್ಯಂನ ದಿವ್ಯ ನಿವಾಸದಲ್ಲಿ ತಿರುವಾಯ್ಮೊಳಿ ಇರುಬತ್ಥಿನಾಲಾಯಿರಮ್ (ಪೆರಿಯವಾಚ್ಚಾನ್ ಪಿಳ್ಳೈ ರಚಿಸಿರುವ ತಿರುವಾಯ್ಮೊಳಿ ವ್ಯಾಖ್ಯಾನ) ಕುರಿತು ಪ್ರವಚನ ನೀಡಿದ್ದರು ಮತ್ತು ನಮ್ಪೆರುಮಾಳ್ ಶ್ರೀರಂಗಂಗೆ ಮರಳಿದ ನಂತರ ಅವರೂ ಶ್ರೀರಂಗಂಗೆ ಶಾಶ್ವತವಾಗಿ ಮರಳಿದರು. ನಾಯನಾರರು ಅವರಿಗೆ ನಮನ ಸಲ್ಲಿಸಿದರು. ನಾಯನಾರರು ಒಬ್ಬ ವಿಶಿಷ್ಠ ಅವತಾರ ಎಂಬುದನ್ನು ಮನಗಂಡ ಕೊಟ್ಟೂರಿಲ್ ಅಣ್ಣರ್, ನಾಯನಾರರನ್ನು ದೇವಸ್ಥಾನಕ್ಕೆ ಕರೆದೊಯ್ಯಲು, ಆ ಸಮಯದಲ್ಲಿ ಶ್ರೀರಂಗಂ ದೇವಸ್ಥಾನದ ಮುಖ್ಯಸ್ಥರಾಗಿದ್ದ ತಿರುಮಾಲೈ ತಂದ ಪೆರುಮಾಳ್ ಭಟ್ಟರ ನಿವಾಸಕ್ಕೆ ಹೋದರು. ಭಟ್ಟರು ಅವರನ್ನು ಸ್ವೀಕರಿಸಲು ಬಹಳ ಸಂತೋಷಪಟ್ಟರು ಮತ್ತು ತಿರುವಾಯ್ಮೊಳಿ ಪಾಸುರಂನ ಅರ್ಥಗಳನ್ನು ಕರುಣೆಯಿಂದ ನೀಡುವಂತೆ ನಾಯನಾರರನ್ನು ವಿನಂತಿಸಿದರು. ನಮ್ಮಾಳ್ವರ ಮಹಿಮೆಯನ್ನು ಪ್ರತಿಬಿಂಬಿಸುವ ಪಾಸುರಂನ ಅರ್ಥಗಳನ್ನು ನಾಯನಾರರು ನಿರೂಪಿಸಿದ್ದಾರೆ. [ಈಡು ಅವತಾರಿಕೈ (ಈಡು ಭಾಷ್ಯದಲ್ಲಿ ನೀಡಲಾದ ದಶಮಾನ 6.5 ರ ಪರಿಚಯ) ತಿರುವಾಯ್ಮೊಳಿ 6.5.1 ‘ತುವಳಿಲ್ ಮಣಿಮಾಡಮ್ ‘ನಮ್ಮಾಳ್ವಾರರ ಸ್ವಭಾವವನ್ನು ಸ್ಪಷ್ಟವಾಗಿ ಹೇಳುತ್ತದೆ ಎಂದು ನಮ್ಮ ಬೋಧಕರು ಹೇಳುತ್ತಿದ್ದರು ]. ಭಟ್ಟರು ಅರ್ಥಗಳನ್ನು ಕೇಳಿ ಬಹಳ ಸಂತೋಷಪಟ್ಟರು ಮತ್ತು “ಅವರು [ನಾಯನಾರ್] ಮುಪ್ಪತ್ತಾರಾಯಿರಪೆರುಕ್ಕರ್ (ಈಡುವನ್ನು ಬಹು ಅರ್ಥಗಳೊಂದಿಗೆ ಸ್ಪಷ್ಟವಾಗಿ ವಿವರಿಸುವವರು ) ಎಂದು ತೋರುತ್ತಾರೆ” ಎಂದು ಹೇಳಿದರು ನಂತರ ಅವರು ಪೆರುಮಾಳ್ಗೆ ಮಂಗಳಾಶಾಸನವನ್ನು ಮಾಡಲು ಅವರನ್ನು ಆಹ್ವಾನಿಸಿದರು ಮತ್ತು ಇತರ ಶ್ರೀವೈಷ್ಣವರಿಗೂ ಸೇರಲು ಹೇಳಿದರು. ಎಲ್ಲರೂ ಒಟ್ಟಾಗಿ ಹೊರಟರು, ಆರಂಭದಲ್ಲಿ ಎಂಪೆರುಮಾನಾರ್ ಅವರ ಸನ್ನಿಧಿಗೆ ಇರಾಮಾನುಸ ನೂಟ್ರಂದಾದಿ ಪಾಸುರಂ ಪೊನ್ನರಂಗಮೆನ್ನಿಲ್ ಮಯಲೇ ಪೆರುಗುಂ ಇರಾಮಾನುಸನ್ (‘ಶ್ರೇಷ್ಠ ಶ್ರೀರಂಗಂ’ ಎಂಬ ಪದಗಳನ್ನು ಕೇಳಿದ ಕ್ಷಣದಲ್ಲಿ ರಾಮಾನುಜರು ಸಂಪೂರ್ಣವಾಗಿ ವ್ಯಾಮೋಹಕ್ಕೊಳಗಾಗುತ್ತಾರೆ). ಅವರೆಲ್ಲರೂ ಅವರ ದೈವಿಕ ಪಾದಗಳನ್ನು ಪೂಜಿಸಿದರು, ಯೋನಿತ್ಯಂ ಅಚ್ಯುತದಿಂದ ಪ್ರಾರಂಭಿಸಿ ಮತ್ತು ರಾಮಾನುಜಸ್ಯ ಚರಣೌ ಶರಣಂ ಪ್ರಪಧ್ಯೆ ಎಂದು ಕೊನೆಗೊಳ್ಳುವ ಸಾಮಾನ್ಯ ತನಿಯನ್ಗಳನ್ನು ಪಠಿಸಿದರು.
ಇವ್ವುಲಗ೦ದನ್ನಿಲ್ ಯತಿರಾಸರ್ ಕೊಂಡರುಳುಂ
ಎವ್ವುರುವುಮ್ ಯಾನ್ ಸೆನ್ರಿರೈನ್ಜಿನಕ್ಕಾಯ್ – ಅವ್ವುರುವಂ
ಎಲ್ಲಾಮ್ ಇನಿದೇಲುಮ್ ಎಳಿಲ್ ಅರಂಗತ್ತು ಇರುಪ್ಪುಪ್ಪೋಲ್
ನಿಲ್ಲಾದೆನ್ ನೆಂಜು ನಿರೈಂದು
(ನಾನು ಈ ಜಗತ್ತಿನಲ್ಲಿ ಎಲ್ಲಿಯಾದರೂ ರಾಮಾನುಜರ ಯಾವುದೇ ದಿವ್ಯ ರೂಪವನ್ನು ಪೂಜಿಸುತ್ತೇನೆಯೋ, ಆ ಎಲ್ಲಾ ರೂಪಗಳು ಶ್ರೀರಂಗದಲ್ಲಿ ಅವರ ದಿವ್ಯ ರೂಪದಂತೆ ಗೋಚರಿಸುತ್ತವೆ ಮತ್ತು ನನ್ನ ಹೃದಯವನ್ನು ತುಂಬುತ್ತವೆ).
ಅನುವಾದ – ಅಡಿಯೇನ್ ಸುಭದ್ರಾ ರಾಮಾನುಜ ದಾಸಿ
ಪುರಾವೆ ಓದುವಿಕೆ -ಅಡಿಯೇನ್ ಕೊದೈ ರಾಮಾನುಜ ದಾಸಿ
ಮೂಲ : https://granthams.koyil.org/2021/08/14/yathindhra-pravana-prabhavam-30-english/
ಆರ್ಕೈವ್ ಮಾಡಲಾಗಿದೆ – https://granthams.koyil.org
ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org