ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ
ನಂತರ ನಾಯನಾರರಿಗೆ ತೀರ್ಥಪ್ರಸಾದ (ಪೆರುಮಾಳರ ಪವಿತ್ರ ನೀರು), ಶಠಾರಿ (ಅವರ ದೈವಿಕ ಪಾದಗಳನ್ನು ಸಂಕೇತಿಸುತ್ತದೆ) ಮತ್ತು ದೈವಿಕ ಮಾಲೆಗಳನ್ನು ಅರ್ಪಿಸಲಾಯಿತು.
“ನಾವು ಶ್ರೀರಂಗನಾಥನ ದೈವಿಕ ಕರುಣೆಗೆ ಪಾತ್ರರಾಗಿದ್ದೇವೆ” ಎಂದು ಭಾವಿಸಿ, [ರಾಜನಂತೆ] ಕಿರೀಟ ಮತ್ತು ಹೂಮಾಲೆಗಳನ್ನು ಪಡೆದಂತೆ ಅವನು ಸಂತೋಷಪಟ್ಟರು. ತಿರುಕ್ಕೋಟ್ಟೂರಿಲ್ ಅಣ್ಣರ್ ಅವರನ್ನು ನೋಡುತ್ತಾ, “ನಂಪೆರುಮಾಳ್ ನಿಮ್ಮ ಸಲುವಾಗಿ ಕರುಣೆ ತೋರಿದರು” ಎಂದು ಹೇಳಿ ಅವರು ಅಣ್ಣರ್ ಜೊತೆ ಅವರ ದೈವಿಕ ನಿವಾಸಕ್ಕೆ ತೆರಳಿದರು. ಅಷ್ಟರಲ್ಲೇ ಅಲ್ಲಿಗೆ ಪೆರುಮಾಳರು ಸೇವಿಸಿದ ಎಲ್ಲಾ ಪ್ರಸಾದಗಳನ್ನು ಭಟ್ಟರು ಕಳುಹಿಸಿದ್ದರು. ಅವರು ಅವುಗಳನ್ನು ಸ್ವೀಕರಿಸಿ ಸೇವಿಸಿದರು. ಅನಂತರ ಅಣ್ಣರ್ ಪೂರ್ವಾಚಾರ್ಯರ ಒಳ್ಳೆಯ ಮಾತುಗಳನ್ನು ಮತ್ತು ಸತ್ಕಾರ್ಯಗಳ ಕುರಿತು ಅವರಿಗೆ ಪ್ರವಚನ ನೀಡಿದರು. ನಂತರ, ಅವರು ಅಣ್ಣರ್ ಅವರೊಂದಿಗೆ ಪೂರ್ವಾಚಾರ್ಯರು ನೆಲೆಸಿದ ವಿವಿಧ ದೈವಿಕ ನಿವಾಸಗಳಿಗೆ ಹೋದರು. ಪಿಳ್ಳೈ ಲೋಕಾಚಾರ್ಯರ ತಿರುಮಾಳಿಗೆಗೆ ಹೋದಾಗ, ಅವರನ್ನು ನಮಸ್ಕರಿಸಿ ಅವರ ತನಿಯನನ್ನು ನೆನಪಿಸಿಕೊಂಡರು.
ವಾೞಿ ಉಳಗಾಸಿರಿಯನ್ ವಾೞಿ ಅವನ್ ಮನ್ನು ಕುಲಂ
ವಾೞಿ ಮುಡುಂಬೈ ಎನ್ನುಂ ಮಾನಗರಂ
ವಾೞಿ ಮನಂಶೂಳ್ನ್ದ ಪೇರಿನ್ಬಮಲ್ಗು ಮಿಗು ನಲ್ಲಾರ್
ಇನಂಶೂಳ್ನ್ದು ಇರುಕ್ಕಮ್ ಇರುಪ್ಪು
(ಪಿಳ್ಳೈ ಲೋಕಾಚಾರ್ಯರು ಚಿರಾಯುವಾಗಲಿ! ಅವರ ಮಹಾನ್ ಕುಲ ಚಿರಾಯುವಾಗಲಿ! ಮಹಾನ್ ಸ್ಥಳ ಮುಡುಂಬೈ ಚಿರಾಯುವಾಗಲಿ! ಮಹಾನ್ ವ್ಯಕ್ತಿಗಳು ಮನಸ್ಸನ್ನು ಸುತ್ತುವರೆದು ಅಪಾರ ಆನಂದವನ್ನು ತಂದ ರೀತಿ ದೀರ್ಘಕಾಲ ಬದುಕಲಿ.) ಆಗ ಅವರ ದಿವ್ಯ ಮನಸ್ಸಿನಲ್ಲಿ ಮತ್ತೊಂದು ಪಾಸುರವೂ ಉದಯಿಸಿತು:
ಮಣವಾಳನ್ ಮಾರನ್ ಮನಮುರೈತ್ತಾನ್ ವಾೞಿ
ಮಣವಾಳನ್ ಮನ್ನುಕುಲಮ್ ವಾೞಿ ಮಣವಾಳನ್
ವಾೞಿ ಮುಡುಂಬೈ ವಾೞಿ ವಡವೀದಿ ತಾನ್
ವಾೞಿಯವನ್ ಉರೈ ಸೇಯ್ದ ನೂಲ್
(ಅಳಗಿಯ ಮಣವಾಳ ಪೆರುಮಾಳ್ ನಾಯನಾರ್ (ಪಿಳ್ಳೈ ಲೋಕಾಚಾರ್ಯರ ಸಹೋದರ)ನಮ್ಮಾಳ್ವಾರರ ದಿವ್ಯ ಮನಸ್ಸನ್ನು ಹೇಳಿದರು. ಆ ಮಣವಾಳ ದೈವಿಕ ಕುಲವು ದೀರ್ಘಕಾಲ ಬದುಕಲಿ. ಮಣವಾಳನ್ ಚಿರಾಯುವಾಗಲಿ! ಮುಡು೦ಬೈ ದೀರ್ಘಕಾಲ ಬದುಕಲಿ! ವಡವೀದಿ (ಲೋಕಾಚಾರ್ಯರ ನಿವಾಸವನ್ನು ನಿರ್ಮಿಸಿದ ಬೀದಿ) ದೀರ್ಘಕಾಲ ಬದುಕಲಿ! ಅವರು ಬರೆದ ಪಠ್ಯವು ದೀರ್ಘಕಾಲ ಬದುಕಲಿ!).ಇದರ ನಂತರ ಇಬ್ಬರು ಆಚಾರ್ಯರ (ಪಿಳ್ಳೈ ಲೋಕಾಚಾರ್ಯರು ಮತ್ತು ಅಳಗಿಯ ಮಣವಾಳ ಪೆರುಮಾಳ್ ನಾಯನರ) ಅಪ್ರತಿಮ ಮಹಿಮೆಗಳ ಮೇಲೆ ಮೂರು ಶ್ಲೋಕಗಳು ಸಂಕಲಿಸಲ್ಪಟ್ಟವು:
ವಾಣೀಮ್ ಪುಣ್ಯಸುಧಾಪಕಾಮ್ ಶಠಜಿತ್ಸ್ವೈರಂ ವಿಗಾಹ್ಯಾಧರಾತ್
ಆನೀಯಾಮೃತ ಮಾತ್ರಚಕ್ರಧುಕುಭೌ ಲೋಕೋಪಕಾರಾತ್ಮಕೌ
ಯೌ ವಾಕ್ಭೂಷಣ ದೇಶಿಕೇಂದ್ರ ಹೃಧಯಾಪಿಕೌ ಪ್ರಬಂಧಾವಿಮೌ
ತೇ ವಂದೇ ಭುವನಾರ್ಯಸುಂದರವರೌ ಕೃಷ್ಣಾತ್ಮಜೌ ದೇಶಿಕೌ
(ವಡಕ್ಕು ತಿರುವೀದಿ ಪಿಳ್ಳೈ ಅವರ ಪುತ್ರರಾದ ಪಿಳ್ಳೈ ಲೋಕಾಚಾರ್ಯರು ಮತ್ತು ಅವರ ತಮ್ಮ ಅಳಗಿಯ ಮಣವಾಳ ಪೆರುಮಾಳ್ ನಾಯನಾರ್ ಅವರಿಗೆ ನಾನು ನಮಸ್ಕರಿಸುತ್ತೇನೆ, ಅವರು ಸಂಸಾರಿಗಳಿಗೆ (ಭೌತಿಕ ಲೋಕದ ನಿವಾಸಿಗಳು) ಸಹಾಯ ಮಾಡುವ ಸ್ವಭಾವದಿಂದ, ನಮ್ಮಾಳ್ವಾರರ ತಿರುವಾಯ್ಮೊಳಿ ಧಾರೆಯಲ್ಲಿ ಸಂಪೂರ್ಣ ಸಮರ್ಪಣೆಯೊಂದಿಗೆ ಮುಳುಗಿ ಅಮೃತ ಅರ್ಥಗಳೊಂದಿಗೆ ಹೊರಬಂದು ಕ್ರಮವಾಗಿ ಶ್ರೀವಚನ ಭೂಷಣ ಮತ್ತು ಆಚಾರ್ಯ ಹೃದಯವನ್ನು ರಚಿಸಿದರು.)
ಆರ್ಯಸೌಮ್ಯವರಶ್ಶಠಾರಿಕಳಿಜಿತ್ ಭಟ್ಟೇಶ ಮುಖ್ಯಾತ್ಮನಾಮ್
ಭಕ್ತಾನಾಮ್ ವಿಮಲೋಕ್ತಿ ಮೌಕ್ತಿಕಮಣಿನಾಥಾಯ ಚಕ್ರೇ ಬ್ರುಷಮ್
ಕ್ರುತ್ವಾ ಸಾಧುರಹಸ್ಯತ್ರ ಯಾರ್ಥಮ್ ಅಖಿಲಮ್ ಕೂಟಂ ವಿಸ್ಪಚಿತ್ರಿಯಂ
ಲೋಕಾರ್ಯಾವರಜಸ್ಸುಶಿಕ್ಷಕವರ ಚೂಡಾಮಣಿಷೋಭತೇ
ಅಳಗಿಯ ಮಣವಾಳ ಪೆರುಮಾಳ್ ನಾಯನಾರ್, ಪಿಳ್ಳೈ ಲೋಕಾಚಾರ್ಯರ ದೈವಿಕ ಸಹೋದರರಾಗಿದ್ದರು; ಅವರು ಸತ್ಸಂಪ್ರದಾಯ (ಒಳ್ಳೆಯ, ಸಾಂಪ್ರದಾಯಿಕ ತತ್ವಶಾಸ್ತ್ರ) ದ ಅರ್ಥಗಳನ್ನು ಕಲಿತರು; ಅವರು ಎಲ್ಲರಿಂದಲೂ ಪೂಜಿಸಲ್ಪಟ್ಟರು ಮತ್ತು ಅವರು ಬೆಲೆಬಾಳುವ ಆಭರಣವಾಗಿದ್ದರು. ನಮ್ಮಾಳ್ವಾರ್, ತಿರುಮಂಗೈ ಆಳ್ವಾರ್, ಪೆರಿಯಾಳ್ವಾರ್ ಮುಂತಾದ ಮಹಾನ್ ಭಕ್ತರ ಮುತ್ತುಗಳಂತಹ ಶುಧ್ಧ ಮಾತುಗಳಿಂದ, ಅವರು ರಹಸ್ಯತ್ರಯಂನ ಆಳವಾದ ಅರ್ಥಗಳನ್ನು (ಮೂರು ನಿಗೂಢ ಸಂದೇಶಗಳು, ಅಂದರೆ ತಿರುಮಂತ್ರಂ, ಧ್ವಯಂ ಮತ್ತು ಚರಮ ಶ್ಲೋಕಂ) ಪೂರ್ವಾಚಾರ್ಯರ ದಿವ್ಯ ಮನಸ್ಸಿಗೆ ಅನುಗುಣವಾಗಿ ಸ್ಪಷ್ಟವಾಗಿ ಹೊರತಂದರು ಮತ್ತು
ಯಸ್ಯಾಹಂ ಕುಲದೈವತಂ ರಘುಪತೇರ್ ಆದನಂ ಶ್ರೀಸಕಂ
ಕಾವೇರೀ ಸರಿತಿಂದರೀಪನಗರೀ ವಾಸಸ್ಥಲೀ ಪುಣ್ಯಭೂ:
ಕೃಷ್ಣೋ ಮಾನ್ಯಗುರುರ್ ವರೇಣ್ಯಮಹಿಮಾ ವೇದಾಂತ ವಿದ್ಯಾನಿಧಿ:
ಭ್ರಾತಾ ಸೌಮ್ಯವರಸ್ ಸ್ವಯಂತು ಭುವನಾಚಾರ್ಯೋಸಿ ಕಾಸ್ಥೇ ಸಮ:
(ಚಕ್ರವರ್ತಿ ತಿರುಮಗನ್ ಶ್ರೀರಾಮನ ತಿರುವಾರಾಧನ (ದೈವಿಕ ಪೂಜೆ) ವಿಗ್ರಹವಾಗಿದ್ದ ಅಳಗಿಯ ಮಣವಾಳನ್ [ಪೆರಿಯ ಪೆರುಮಾಳ್] ಯಾರಿಗೆ ಕುಲದೇವರು (ಕುಲದ ಪ್ರಧಾನ ದೇವರು), ಅವರಿಗೆ ದೈವಿಕ ಕಾವೇರಿಯ ಎರಡು ಹೊಳೆಗಳ ನಡುವೆ ಇರುವ ಶ್ರೀರಂಗಂ ದೇವಾಲಯದ ಪುಣ್ಯಭೂಮಿ ವಾಸಸ್ಥಾನವಾಗಿದೆ, ಅವರಿಗೆ ಪ್ರಸಿದ್ಧ ವ್ಯಕ್ತಿ ಮತ್ತು ಅತ್ಯಂತ ಗೌರವಾನ್ವಿತ ವ್ಯಕ್ತಿಯಾದ ವಡಕ್ಕು ತಿರುವೀದಿ ಪಿಳ್ಳೈ ತಂದೆ ಮತ್ತು ಆಚಾರ್ಯ ಇಬ್ಬರೂ ಆಗಿದ್ದರು, ಅವರಿಗೆ ವೇದಾಂತಗಳ (ಸಂಸ್ಕೃತ ಮತ್ತು ದ್ರಾವಿಡ ) ಸಂಪತ್ತಾಗಿದ್ದ ಅಳಗಿಯ ಮಣವಾಳ ಪೆರುಮಾಳ್ ನಾಯನಾರ್ ಅವರ ಕಿರಿಯ ಸಹೋದರರಾಗಿದ್ದರು, ಅಂತಹ ಪಿಳ್ಳೈ ಲೋಕಾಚಾರ್ಯರು ಇಡೀ ಜಗತ್ತಿಗೆ ಆಚಾರ್ಯರು. ಅಂತಹ ದೇವರೀರನ್ನು ಯಾರು ಸರಿಗಟ್ಟಬಲ್ಲರು?)
ನಂತರ ಅವರು ಪಿಳ್ಳೈ ಲೋಕಾಚಾರ್ಯರ ದಿವ್ಯ ನಿವಾಸವನ್ನು ನೋಡಿ “ರಹಸ್ಯಂ ವಿಳೈನ್ದ ಮಣ್ ಅಣ್ಡ್ರೋ?” (ಇದು ನಿಗೂಢ ಅರ್ಥಗಳು ಹೊರಹೊಮ್ಮಿದ ಸ್ಥಳವಲ್ಲವೇ?) ಎಂದು ಉದ್ಗರಿಸಿದರು.ಅವರು ಸ್ವಲ್ಪ ಸಮಯ ಅಲ್ಲಿಯೇ ಇದ್ದು, ಕೋಟ್ಟೂರಿಲ್ ಅಣ್ಣರ್ ಅವರು ಪಿಳ್ಳೈ ಲೋಕಾಚಾರ್ಯರ ಮಹಿಮೆಗಳನ್ನು ವಿವರಿಸುವುದನ್ನು ಕೇಳುತ್ತಾ; ಕೃತಜ್ಞತೆಯಿಂದ, “ನಾವು ಎಷ್ಟು ಅದೃಷ್ಟವಂತರು!” ಎಂದು ಉದ್ಗರಿಸುತ್ತಾ ಅಣ್ಣರನ್ನು ಪೂಜಿಸಿದರು. ನಂತರ ಅವರು ದಯೆಯಿಂದ ಪೂರ್ವಾಚಾರ್ಯರ ನಿವಾಸದಂತಿದ್ದ ದೇವಾಲಯವನ್ನು ಪ್ರವೇಶಿಸಿದರು [ಅವರು ತಮ್ಮ ವಾಸಸ್ಥಳಕ್ಕಿಂತ ದೇವಾಲಯದ ಒಳಗೆ ಹೆಚ್ಚು ಸಮಯ ಕಳೆದರು]. ಪೆರುಮಾಳರು ಅವನಿಗೆ ಪವಿತ್ರ ಜಲ, ದೈವಿಕ ಹಾರ, ಪರಿಯಟ್ಟಂ (ತಲೆಯ ಸುತ್ತಲೂ ಧರಿಸಿರುವ ದೈವಿಕ ವಸ್ತ್ರ) ಮತ್ತು ಅವರ ದೈವಿಕ ಪಾದಗಳನ್ನು (ಶಠಾರಿ) ನೀಡಿದರು. ಕೆಳಗಿನ ಶ್ಲೋಕದಲ್ಲಿ ಹೇಳಲಾದಂತೆಯೇ.
ತಸ್ಮಿನ್ ಸಸ್ಮಿತ ನೇತ್ರೇನ ಶ್ರೀಮತಾ ಶೇಷಶಾಯಿನಾ
ಸತ್ಕ್ರುತ: ಕೃತವಾನ್ ವಾಸಂ ಕಿಂಚಿತ್ ತತ್ರ ತದಂತಿಕೇ
(ಅವರು ಶ್ರೀಮಾನ್ ಆಗಿರುವ ಪೆರಿಯಪೆರುಮಾಳರ ದಿವ್ಯ ಪಾದಗಳ ಕೆಳಗೆ ಸ್ವಲ್ಪ ಕಾಲ ವಾಸಿಸುತ್ತಿದ್ದರು . ಪೆರಿಯಪೆರುಮಾಳರು ಬೃಹತ್, ಉದ್ದ, ಅರಳಿದ ದಿವ್ಯ ಕಣ್ಣುಗಳನ್ನು ಹೊಂದಿದ್ದರು ಮತ್ತು ಅವರು ತಮ್ಮ ಅನುಗ್ರಹದಿಂದ (ಕರುಣೆಯಿಂದ) ಅವರನ್ನು ನೋಡುತ್ತಿದ್ದರು). ಪೆರಿಯ ಪೆರುಮಾಳರು ಅವರಿಗೆ “ನಮ್ಮ ಉಡಯವರ್‌ನಂತೆ, ನನ್ನ ನಿವಾಸದ [ದೇವಾಲಯ] ವ್ಯವಹಾರಗಳನ್ನು ನೋಡಿಕೊಳ್ಳುತ್ತಾ ಮತ್ತು ದರ್ಶನ ರಹಸ್ಯಗಳನ್ನು (ತತ್ವಶಾಸ್ತ್ರದ ನಿಗೂಢ ಅರ್ಥಗಳು) ವಿಶ್ಲೇಷಿಸುತ್ತಾ” ನಿನ್ನ ದೇಹವು ಬೀಳುವವರೆಗೂ ಇಲ್ಲೇ ಇರು, ಎಂದು ಹೇಳಿದರು. ನಾಯನಾರ್ ಅದಕ್ಕೆ ತಕ್ಷಣ ಒಪ್ಪಿಕೊಂಡರು, “ಮಹಾಪ್ರಸಾದಂ” (ಇದು ಒಂದು ದೊಡ್ಡ ಕೊಡುಗೆ) ಎಂದು ಹೇಳಿ ಅಲ್ಲಿ ವಾಸಿಸಿದರು.
ಆ ಸಮಯದಲ್ಲಿ, ಅವರು ಪುರ್ವಾಚಾರ್ಯರ ರಹಸ್ಯಪ್ರಬಂಧಗಳ ಮೇಲೆ ಸಂಖಲಿಸಲಾದ ಎಲ್ಲಾ ಹಸ್ತಪ್ರತಿಗಳನ್ನು ಪರಿಶೀಲಿಸಿದರು, ಗೆದ್ದಲುಗಳಿಂದ ನಾಶವಾದವುಗಳನ್ನು ಪುನಃ ಬರೆದು ಬೆಳಕಿಗೆ ತಂದರು. ಒಂದು ದಿನ ವಾನಮಾಮಲೈ ಜೀಯರ್ ಅವರು, “ಪೆರುಮಾಳರ ತಿರುವಾರಾಧನದ ಉಸ್ತುವಾರಿ ವಹಿಸಿರುವ ಉತ್ತಮ ನಂಬಿ ತಮ್ಮ ಕೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲ; ಅವರು ಪೆರುಮಾಳರಿಗೆ ಅರ್ಪಿಸುವ ಆಹಾರದ ಪ್ರಮಾಣವನ್ನು ಕಡಿಮೆ ಮಾಡುತ್ತಿದ್ದಾರೆ” ಎಂದು ಹೇಳಿದರು. ನಾಯನಾರರು ತುಂಬಾ ನಮ್ರ ಗುಣವುಳ್ಳರಾದವರು, ಹಾಗಾಗಿ ಉತ್ತಮ ನಂಬಿಯ ಮೇಲೆ ಯಾವುದೇ ಕಠಿಣ ಕ್ರಮ ಕೈಗೊಳ್ಳಲು ಇಷ್ಟಪಡಲಿಲ್ಲ. ಅವರು ಪೆರುಮಾಳನ್ನು “ದೇವರೀರರ ತಿರುವಾರಾಧನೆಯನ್ನು ಯಾವುದೇ ಕೊರತೆಯಿಲ್ಲದೆ ನಡೆಸುವಂತೆ, ದಯವಿಟ್ಟು ಅವನನ್ನು ಸರಿಪಡಿಸಿ” ಎಂದು ಬೇಡಿಕೊಳ್ಳಲು ಜೀಯರ್‌ಗೆ ಹೇಳಿದರು ಮತ್ತು ಸ್ವತಃ ಪೆರುಮಾಳರಲ್ಲಿಅದೇ ರೀತಿ ವಿನಂತಿಸಿಕೊಂಡರು.
ಅನುವಾದ – ಅಡಿಯೇನ್ ಸುಭದ್ರಾ ರಾಮಾನುಜ ದಾಸಿ
ಪುರಾವೆ ಓದುವಿಕೆ -ಅಡಿಯೇನ್ ಕೊದೈ ರಾಮಾನುಜ ದಾಸಿ
ಮೂಲ : https://granthams.koyil.org/2021/08/16/yathindhra-pravana-prabhavam-32-english/
ಆರ್ಕೈವ್ ಮಾಡಲಾಗಿದೆ – https://granthams.koyil.org
ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org