ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ
ನಾಯನಾರ್ ತಿರುವೇಂಗಡಂಗೆ ಹೊರಟರು
ನಾಯನಾರರು ತಮ್ಮ ದಿವ್ಯ ಮನಸ್ಸಿನಲ್ಲಿ ತಿರುವೇಂಗಡಂ ಮತ್ತು ದೇಶದ ಉತ್ತರ ಭಾಗಗಳಲ್ಲಿರುವ ಇತರ ದಿವ್ಯ ನಿವಾಸಗಳಿಗೆ ಹೋಗಿ ಅಲ್ಲಿಯ ಎಂಪೆರುಮಾನನ್ನು ಪೂಜಿಸಲು ಯಾತ್ರಾ (ಪ್ರಯಾಣ) ಕೈಗೊಳ್ಳಲು ಯೋಚಿಸಿದರು. ಅವರು ಪೆರಿಯ ಪೆರುಮಾಳ್ ಸನ್ನಿಧಿಗೆ ಹೋಗಿ ಪೂಜಿಸಿ, “ಅಡಿಯೇನ್ ತಿರುವೇಂಗಡಂಗೆ ತೆರಳಿ ಅಲ್ಲಿ ಎಂಪೆರುಮಾನ್ ದೈವೀಕ ಪಾದಗಳನ್ನು ಪೂಜಿಸಲು ದೇವರೀರ್ ಅನುಮತಿ ನೀಡಬೇಕು ಎಂದು ಕೋರಿದರು.” ಅವರಿಗೆ ತನ್ನ ಪವಿತ್ರ ತೀರ್ಥ, ಶಠಾರಿ, ದೈವಿಕ ಹಾರವನ್ನು ಅರ್ಪಿಸುವುದರ ಮೂಲಕ ಪೆರಿಯ ಪೆರುಮಾಳ್ ಒಪ್ಪಿಕೊಂಡರು. “ತಧಾಸ್ಥೇನಾಭ್ಯ ಅನುನ್ಗ್ಯಾತೋ ಯಾತೋ ಧಾರಣಿಂ ಉತ್ತರಾಂ ” ವಾಕ್ಯದಂತೆ (ಪೆರುಮಾಳರಿಂದ ಅನುಮತಿ ಪಡೆದು, ಅವರು ಉತ್ತರದ ದಿವ್ಯಧಾಮಗಳಿಗೆ ತೆರಳಿದರು) ಅವರು ತಮ್ಮ ಉತ್ತರದ ದಿವ್ಯಧಾಮಗಳ ಯಾತ್ರೆ ಆರಂಭಿಸಿದರು.
ತಿರುಕ್ಕೋವಲೂರ್, ತಿರುಕ್ಕಡಿಗೈ ಮಂಗಳಾಶಾಸನಂ
ಅಳಗಿಯ ಮಣವಾಳ ಪೆರುಮಾಳ್ ನಾಯನಾರ್ ತಕ್ಷಣ ತಿರುಮಲೈಗೆ ಹೊರಟರು. ಅವರು ತಿರುವೆಳ್ಳರೈನಲ್ಲಿ ಪಂಗಯಚ್ಚೆಲ್ವಿ ತಾಯಾರ್ (ಸೆಂಗಮಲವಲ್ಲಿ) ಅವರ ಪುರುಷಕಾರಂ (ಶಿಫಾರಸು) ದೊಂದಿಗೆ ಸೆಂತಾಮರೈಕ್ಕಣ್ಣನ್ ( ಪುಂಡರೀಕಾಕ್ಷ ಪೆರುಮಾಳ್) ಅವರನ್ನು ಪೂಜಿಸಲು ಮುಂದಾದರು, ಅಲ್ಲಿ, ಪೆರಿಯಾಳ್ವಾರ್ ಹೇಳಿರುವಂತೆ “ಮುಪ್ಪೋದುಮ್ ವಾನವರೇತ್ತುಮ್ ಮುನಿವರ್ಗಳ್” (ದೇವತೆಗಳು ತಿರುವೆಳ್ಳರೈಯಲ್ಲಿ ದಿನವಿಡೀ ಎಂಪೆರುಮಾನನ್ನು ಸ್ತುತಿಸುತ್ತಲೇ ಇರುತ್ತಾರೆ, ಅಲ್ಲಿ ಜನರು ನಿರಂತರವಾಗಿ ನಿಮಗೆ ಶುಭವಾದ ವಿಷಯಗಳನ್ನು ಯೋಚಿಸುತ್ತಿರುತ್ತಾರೆ). ಅವರು ಎಂಪೆರುಮಾನನ್ನು ಪೂಜಿಸಿ, ಅಲ್ಲಿ ಪವಿತ್ರ ತೀರ್ಥ ಮತ್ತು ಪ್ರಸಾದವನ್ನು ಸ್ವೀಕರಿಸಿದರು. “ಪಾದೇಯಂ ಪುಂಡರೀಕಾಕ್ಷ ನಾಮಸಂಕೀರ್ತನಾಮೃತಂ” ದಲ್ಲಿ ಹೇಳಿರುವಂತೆ, ಪುಂಡರೀಕಾಕ್ಷ ಎಂಬ ದಿವ್ಯನಾಮವನ್ನು ಹೇಳುವ ಅಮೃತವೇ, ಮಾರ್ಗಕ್ಕೆ ಆಹಾರ. ಅವರು ದಾರಿಯಲ್ಲಿ ದ್ವಯ ವಚನವನ್ನು (ದ್ವಯ ಮಹಾಮಂತ್ರ) ಕುರಿತು ಧ್ಯಾನಿಸುತ್ತಾ ಸಾಗಿದರು. “ಪೂಂಗೋವಲೂರ್ ತೋೞುದುಮ್ ಪೋದು ನೇಂಜೇ” (ಓ ನನ್ನ ಒಳ್ಳೆ ಹೃದಯವೇ! ತಿರುಕ್ಕೋವಲೂರಿನ ಎಂಪೆರುಮಾನನ್ನು ಆರಾಧಿಸುತ್ತಿರು). ದಾರಿಯಲ್ಲಿ ಹಲವಾರು ಸ್ಥಳಗಳಲ್ಲಿ ವಿಶ್ರಾಂತಿ ಪಡೆದು ತಿರುಕ್ಕೋವಲೂರ್ ತಲುಪಿದರು. ಅವರು ಮೊದಲಾಳ್ವಾರರ ದಿವ್ಯ ಪಾದಗಳನ್ನು ಪೂಜಿಸಿದರು. (ಮೊದಲ ಮೂರು ಆಳ್ವಾರುಗಳು ತಿರುಕ್ಕೋವಲೂರ್ ನಲ್ಲಿ ಭೇಟಿಯಾದರು ಮತ್ತು ದೈವಿಕ ಪಾಸುರಗಳ ಮೊದಲ ಮೂರು ಶತಕಗಳನ್ನು ಪಠಿಸಿದರು, ನಂತರ ಇದನ್ನು ಒಟ್ಟಾರೆಯಾಗಿ ನಾಲಾಯಿರ ದಿವ್ಯ ಪ್ರಬಂಧ ಎಂದು ಕರೆಯಲಾಯಿತು) ಅವರ ಶಿಫಾರಸ್ಸಿನೊಂದಿಗೆ ಅವರು ತ್ರಿವಿಕ್ರಮ ಪೆರುಮಾಳ್ ಅವರನ್ನು ಪೂಜಿಸಿದರು. ಅವರು ತಿರುಮೊಳಿ ಪಾಸುರಂ 2.10.9 ಅನ್ನು “ತೂವಡಿವಿಲ್ ಪಾರ್ಮಹಳ್ ” (ಸುಂದರವಾದ ದೈವಿಕ ರೂಪವನ್ನು ಹೊಂದಿರುವ ಭೂಮಾದೇವಿ ) ದಿಂದ ಪ್ರಾರಂಭಿಸಿ ಮತ್ತು “ತಿರುಕ್ಕೋವಲೂರ್ ಅದನುಳ್ ಕಂಡೇನ್ ನಾನೇ ” (ನಾನು ತಿರುಕ್ಕೋವಲೂರ್ ದೈವಿಕ ನಿವಾಸದಲ್ಲಿ ಪೂಜಿಸಿದ್ದೇನೆ) ಎಂದು ಕೊನೆಗೊಳಿಸಿದರು. ಅವರು ಮುದಲ್ ತಿರುವಂದಾದಿ ಪಾಸುರಂ 86 “ನೀಯುಮ್ ತಿರುಮಹಳುಮ್ ನಿನ್ರಾಯಾಲ್” (ಶ್ರೀ ಮಹಾಲಕ್ಷ್ಮಿ ಮತ್ತು ನೀವು ನಿಮ್ಮ ಶಿಷ್ಯರ ಮೇಲೆ ನಿಮ್ಮ ಕರುಣೆಯನ್ನು ಧಾರೆ ಎರೆಯಲು ಒಟ್ಟಿಗೆ ನಿಂತಿದ್ದೀರಿ) ಅನ್ನು ಪಠಿಸಿದರು. ನಂತರ ಅವರು ತಿರುಕ್ಕೋವಲೂರ್ ಪೆರುಮಾನಿಗೆ ತಿರುಪ್ಪಾವೈ ಪಾಶುರ ೨೪ “ಅನ್ರಿ ಇವ್ವುಲಗಂ ಅಳಂದಾಯ್ ಅಡಿ ಪೋಟ್ರಿ ” (ಆ ದಿನ ನೀವು ಎಲ್ಲಾ ಲೋಕಗಳನ್ನು ಅಳೆದ ದಿವ್ಯ ಪಾದಗಳು ಚಿರಕಾಲ ಬದುಕಲಿ!) ಪಠಿಸುವ ಮೂಲಕ ಮಂಗಳಾಶಾಸನ ಮಾಡಿದರು. ಅವರು ಅಲ್ಲಿ ಪವಿತ್ರ ತೀರ್ಥ ಪ್ರಸಾದವನ್ನು ಸೇವಿಸಿದರು. ತಿರುಕ್ಕೋವಲೂರ್ ಎಂಪೆರುಮಾನನು ಅವರನ್ನು ಹಿಂದಕ್ಕೆ ಸೆಳೆದರು ಮತ್ತು ತಿರುವೇಂಗಡನಾಥನ ಕರುಣೆಯು ಅವರನ್ನು ಮುಂದಕ್ಕೆ ತಳ್ಳಿತು, ಹೀಗೆ ಅವರು ತಿರುಮಲೈ ಕಡೆಗೆ ಸಾಗಿದರು. ತಿರುವಾಯ್ಮೊಳಿ 3.3.8 ಪಾಸುರಂನಲ್ಲಿ ಹೇಳಿರುವಂತೆ “ಕುನ್ರಮ್ಏನ್ದಿ ಕುಳಿರ್ಮಜ್ಹೈ ಕಾತ್ತವನ್ ಅನ್ರು ಗ್ಯಾಲಮ್ ಅಳಂದ ಪಿರಾನ್ ಪರನ್ ಸೆನ್ಡ್ರು ಸೆರ್ ತಿರುವೇಂಗಡ ಮಾಮಲೈ ” (ಎಂಪೆರುಮಾನ್ ಗೋವರ್ಧನ ಪರ್ವತವನ್ನು ಎತ್ತಿ ಹಸುಗಳು ಮತ್ತು ಗೋಪಾಲಕರನ್ನು ಶೀತ ಮಳೆಯಿಂದ ರಕ್ಷಿಸಿದನು; ಅವನು ಎಲ್ಲಾ ಲೋಕಗಳನ್ನು ತನ್ನ ಪಾದಗಳಿಂದ ಅಳೆದನು; ಅಂತಹ ಎಂಪೆರುಮಾನ್ ತಿರುವೇಂಗಡಂನ ಬೃಹತ್ ಬೆಟ್ಟಗಳನ್ನು ತಲುಪಿದನು …),ಪಾಶುರದಲ್ಲಿ “ತಿರುವೇಂಗಡತ್ತಾಯನ್” (ತಿರುವೇಂಗಡಂನಲ್ಲಿ ವಾಸಿಸುವ ದನಕಾಯುವವನು) ಮತ್ತು “ಮೊಯ್ತ ಸೋಲೈ ಮೋಯ್ ಪೂಮ್ ತಡಂ” (ಒಂದಕ್ಕೊಂದು ಹತ್ತಿರವಿರುವ ಹಲವಾರು ತೋಟಗಳು ಮತ್ತು ಹಲವಾರು ಜಲಮೂಲಗಳನ್ನು ಹೊಂದಿರುವ) ನಲ್ಲಿ, ಅವರು ಸುಲಭವಾಗಿ ತಲುಪಬಹುದಾದ ತಿರುವೇಂಗಡಮುಡೈಯಾನ್ (ತಿರುಮಲೈಯನ್ನು ಹೊಂದಿರುವವನು) ನ ದಿವ್ಯ ಪಾದಗಳನ್ನು ಪೂಜಿಸುವ ದೈವಿಕ ಮನಸ್ಸಿನಿಂದ ಅಪಾರ ಶಿಷ್ಯರುಗಳೊಂದಿಗೆ ಮತ್ತು ಅಪಾರ ಹಂಬಲದಿಂದ ಮುಂದುವರೆದರು. ದಾರಿಯಲ್ಲಿ, ಅವರು ತಿರುಕ್ಕಡಿಗೈ (ಇಂದಿನ ಶೋಲಿಂಗಪುರಂ) ನಲ್ಲಿ ವಾಸಿಸುವ ತಕ್ಕನನ್ನು (ಎಂಪೆರುಮಾನ್) ಪೂಜಿಸಿದರು, ಅವರು ಉದ್ದವಾದ ತೋಟಗಳಿಂದ ಸುತ್ತುವರೆದಿದ್ದಾರೆ ಮತ್ತು ಶೋಲಿಂಗಪುರಂನಲ್ಲಿ ಬೆಟ್ಟದ ತುದಿಯಲ್ಲಿ ವಾಸಿಸುವ ಅಕ್ಕಾರಕ್ಕನಿ (ಸಕ್ಕರೆಯಿಂದ ಮಾಡಿದ ಸಿಹಿ ಹಣ್ಣು) ಯನ್ನು ಪೂಜಿಸಿದರು. ಶೋಲಿಂಗಪುರಂ ಬಳಿಯ ಎರುಂಬಿ ಎಂಬ ಸ್ಥಳದಿಂದ ಗಣ್ಯ ವ್ಯಕ್ತಿಗಳು ಅವರಿಗೆ ಸಾಮಗ್ರಿಗಳನ್ನು ಅರ್ಪಿಸಿ ಪೂಜಿಸಿದರು; ಅವರು ಅವರ ಮೇಲೆ ಪ್ರೀತಿಯನ್ನು ತೋರಿಸಿ ಅಲ್ಲಿಂದ ಹೊರಟುಹೋದರು.
ಅನುವಾದ – ಅಡಿಯೇನ್ ಸುಭದ್ರಾ ರಾಮಾನುಜ ದಾಸಿ
ಪುರಾವೆ ಓದುವಿಕೆ -ಅಡಿಯೇನ್ ಕೊದೈ ರಾಮಾನುಜ ದಾಸಿ
ಮೂಲ : https://granthams.koyil.org/2021/08/17/yathindhra-pravana-prabhavam-33-english/
ಆರ್ಕೈವ್ ಮಾಡಲಾಗಿದೆ – https://granthams.koyil.org
ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org