ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೪೩

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ

ಪೂರ್ಣ ಸರಣಿ

<< ಹಿಂದಿನ ಲೇಖನವನ್ನು

ಕಂದಾಡೈ ಅಣ್ಣನ್ ‘ ಅವರ ಕನಸು

ಒಬ್ಬ ಶ್ರೀವೈಷ್ಣವನು ಮೇಲಂತಸ್ತುಗಳಿಂದ ಏಣಿಯೊಂದನ್ನು ಕೆಳಗಿಳಿಸಿ, ತನ್ನೊಂದಿಗೆ ತಂದ ಚಾವಟಿಯೊಂದಿಗೆ ಕಂದಾಡೈ ಅಣ್ಣನ್ ಮೇಲೆ ಹೊಡೆದರು . ಅಣ್ಣನಿಗೆ ಹೊಡೆತಗಳನ್ನು ತಡೆಯುವ ಸಾಮರ್ಥ್ಯವಿದ್ದರೂ, ಅವರು ಹಾಗೆ ಮಾಡಲಿಲ್ಲ. ತನ್ನ ಮೂಲಭೂತ ಸ್ವಭಾವಕ್ಕೆ ವಿರುದ್ಧವಾದ ಗುಣದಿಂದಾಗಿ ತನಗೆ ಈ ರೀತಿ ಶಿಕ್ಷೆ ನೀಡಲಾಗುತ್ತಿದೆ ಎಂದು ಆತ ಭಾವಿಸಿದಅವರು. “ಶಾಸ್ತ್ರಕ್ಷಾರಾಗ್ನಿ ಕರ್ಮಾಣಿ ಸ್ವಪುತ್ರಾಯ ಯಥಾ ಪಿತಾ “(ತನ್ನ ಮಗನ ಗಾಯವನ್ನು ಗುಣಪಡಿಸಲು ಮಾತ್ರ ತಂದೆ ತನ್ನ ಚರ್ಮವನ್ನು ಚಾಕುವಿನಿಂದ ಕತ್ತರಿಸುವುದು, ಕುಟುಕುವ ಔಷಧವನ್ನು ಹಚ್ಚುವುದು ಅಥವಾ ತೀವ್ರ ಶಾಖದ ದಂಡ ನಿಂದ ಹೊಡೆಯುವುದು ಮುಂತಾದ ಕೆಲಸಗಳಲ್ಲಿ ತೊಡಗುತ್ತಾನೆ) ಪದಗಳನ್ನು ನೆನಪಿಸಿಕೊಳ್ಳುತ್ತಾ , ಅವರು ಸುಮ್ಮನಿದ್ದರು. ಸ್ವಲ್ಪ ಸಮಯದ ನಂತರ ಚಾಟಿ ಹರಿದುಹೋಯಿತು ಮತ್ತು ಶ್ರೀವೈಷ್ಣವರು ತಮ್ಮ ದಿವ್ಯ ಕೈಯಿಂದ ಅಣ್ಣನನ್ನು ಎಳೆದರು. ಏನು ಮಾಡಬೇಕೆಂದು ಅಣ್ಣನನ್ನು ಕೇಳಿದರು; ಶ್ರೀವೈಷ್ಣವರು ಏಣಿಯನ್ನು ಹತ್ತಲು ಹೇಳಿದರು.ಅಣ್ಣನ್ ಏಣಿಯ ಮೂಲಕ ಮೇಲಕ್ಕೆ ಹೋದರು. ಶ್ರೀವೈಷ್ಣವರು ಅವರನ್ನು ಗೋಡೆಯ ಆಚೆಗೆ ಕರೆದೊಯ್ದರು, ಅಲ್ಲಿ ಒಬ್ಬ ಜೀಯರ್ (ಸನ್ಯಾಸಿ) ಒಂದು ಕಾಲು ಕೆಳಗೆ ನೇತುಹಾಕಿ, ಒಂದು ಕಾಲು ಒಳಗೆ ಹಾಕಿ, ಭುಜದ ಮೇಲೆ ತ್ರಿಧ೦ಡ (ಚಿತ್, ಅಚಿತ್ ಮತ್ತು ಈಶ್ವರ ಅಸ್ತಿತ್ವಗಳನ್ನು ಸೂಚಿಸುವ ಮೂರು ಕೋಲುಗಳಿಂದ ಕೂಡಿದ ಧ್ವಜಸ್ತಂಭ) ಹಿಡಿದು, ತನ್ನ ದಿವ್ಯ ಕೈಯಲ್ಲಿ ಚಾಟಿಯನ್ನು ಹಿಡಿದು, ಉರಿಯುತ್ತಿರುವ ಕಣ್ಣುಗಳೊಂದಿಗೆ ಕುಳಿತಿದ್ದರು.ಶ್ರೀವೈಷ್ಣವರು ಅಣ್ಣನನ್ನು ಆ ಜೀಯರ್ ಬಳಿಗೆ ಕರೆದೊಯ್ದರು. ಜೀಯರ್ ತಮ್ಮ ದಿವ್ಯ ಕೈಯಲ್ಲಿದ್ದ ಚಾಟಿಯಿಂದ ಅಣ್ಣನನ್ನು ಹೊಡೆಯಲು ಪ್ರಾರಂಭಿಸಿದರು. ಆ ಚಾಟಿಯೂ ಹರಿದು ಹೋಯಿತು. ಅವರನ್ನು ಮತ್ತಷ್ಟು ಹೊಡೆಯಲು, ಜೀಯರ್ ತ್ರಿಧ೦ಡದಿಂದ ಒಂದು ಕೋಲನ್ನು ತೆಗೆದುಕೊಂಡರು.ಶ್ರೀವೈಷ್ಣವರು ಅವರ ಮುಂದೆ ನಮಸ್ಕರಿಸಿದರು; ಅಂಜಲಿ ಮುದ್ರೆಯಲ್ಲಿ (ನಮಸ್ಕಾರ ಸಲ್ಲಿಸುತ್ತಾ) ಕೈಗಳನ್ನು ಹಿಡಿದು, ಜೀಯರ್ ಅವರ ದಿವ್ಯ ಮುಖವನ್ನು ನೋಡಿ ಹೇಳಿದರು, “ಅವರು ಚಿಕ್ಕವರು ಮತ್ತು ಬಹಳಷ್ಟು ಹೊಡೆತಗಳನ್ನು ಅನುಭವಿಸಿದ್ದಾರೆ. ದೇವರೀರ್ ಅವರ ದಿವ್ಯ ಮನಸ್ಸಿನಿಂದ ದಯವಿಟ್ಟು ಅವರ ಮೇಲೆ ಕರುಣೆ ತೋರಿಸಿ ಮತ್ತು ಅವರನ್ನು ಕ್ಷಮಿಸಿ”. ಜೀಯರ್ ಕೂಡ ಅಣ್ಣನ ಮೇಲೆ ಕರುಣೆ ತೋರಿ, ಅವರನ್ನು ತಮ್ಮ ತೊಡೆಯ ಮೇಲೆ ಕೂರಿಸಿಕೊಂಡು, ಅವರ ತಲೆಯನ್ನು ಮುದ್ದಿಸಿ, ತಮ್ಮ ದಿವ್ಯ ಶಿರಗಳಿಂದ ಅಣ್ಣನ ದಿವ್ಯ ರೂಪದಾದ್ಯಂತ ಸ್ಪರ್ಶಿಸಿದರು. ಅವರು ಒಬ್ಬ ಅಣ್ಣನಿಗೆ “ಉತ್ತಮ ನಂಬಿ ಮತ್ತು ನೀವು ಅಪರಾಧ ಮಾಡಿದ್ದೀರಿ” ಎಂದು ಹೇಳಿದರು “ಅಳಗಿಯ ಮಣವಾಳ ಜೀಯರ್ ಅಡಿಯೇನ್ ರ ಹಿರಿಮೆಯನ್ನು ಅರಿತುಕೊಳ್ಳದೆಯೇ ಅಸ್ಪಷ್ಟ ಮನಸ್ಸು ಹೊಂದಿದ್ದರು. “ದಯವಿಟ್ಟು ನನ್ನ ತಪ್ಪನ್ನು ಕ್ಷಮಿಸಿ” ಎಂದು ಹೇಳಿ ಅವರ ಪಾದಗಳಿಗೆ ಬಿದ್ದರು. ಜೀಯರ್ ಅವರ ಮೇಲೆ ಕರುಣೆ ತೋರಿ “ನಾವು ಭಾಷ್ಯಕಾರರು (ರಾಮಾನುಜರು) ಮತ್ತು ಅವರು [ಶ್ರೀವೈಷ್ಣವರು] ಮುದಲಿಯಾಂಡಾನ್” ಎಂದು ಹೇಳಿ ಶ್ಲೋಕವನ್ನು ಹೇಳಿದರು.

ತ್ವದೀಯಾನ್ ಅಪರಾಧನ್ಯೆರನ್ ತ್ವದ್ಸಂಬಂಧಿ ಕೃತಾನಪಿ
ಕ್ಷಮಾಮ್ಯಹಮ್ ಧಾಸಾರತೆಸ್ ಸಂಬಂಧಂ ಮಾನ್ಯಥಾಕೃತ:

(ನಾವು ನಿಮ್ಮ ತಪ್ಪುಗಳನ್ನು ಮತ್ತು ನಿಮಗೆ ಸಂಬಂಧಿಸಿದವರ ತಪ್ಪುಗಳನ್ನು ಕ್ಷಮಿಸಿದ್ದೇವೆ. ಮುದಲಿಯಾಂಡಾನೊಂದಿಗಿನ ನಿಮ್ಮ ಸಂಪರ್ಕವನ್ನು ವ್ಯರ್ಥವಾಗುವಂತೆ ಮಾಡಬೇಡಿ) ಮತ್ತು ಅಣ್ಣನಿಗೆ ಹೇಳಿದರು “ನಾವು ತಿರುವನಂಥಾಳ್ವಾನ್ ( ಆದಿಶೇಷನ್); ನಾವು ವರವರಮುನಿಗಳು (ಅಳಗಿಯ ಮಣವಾಳ ಜೀಯ).”ನೀವು ಮತ್ತು ನಿಮ್ಮ ಸಂಬಂಧಿಕರು ಅವನ ದಿವ್ಯ ಪಾದಗಳಿಂದ ಆಶ್ರಯ ಪಡೆದು ನಿಮ್ಮನ್ನು ಮೇಲಕ್ಕೆತ್ತಿಕೊಳ್ಳಿ”. ತಕ್ಷಣ ಅಣ್ಣನ್ ನಿದ್ರೆಯಿಂದ ಎಚ್ಚರಗೊಂಡು “ಈ ಕನಸು ಹೇಗೆ ಆಯಿತು!” ಎಂದು ಬಹಳ ಹೊತ್ತು ಯೋಚಿಸುತ್ತಿದ್ದರು. ಆಶ್ಚರ್ಯಚಕಿತರಾದ ಅವರು, ತನ್ನ ಕನಸಿನಲ್ಲಿ ನಡೆದ ಘಟನೆಗಳ ಬಗ್ಗೆ ಯೋಚಿಸುತ್ತಲೇ ಇದ್ದಅವರು . ನಂತರ ಅವರು ತನ್ನ ಸಹೋದರರನ್ನು ಎಬ್ಬಿಸಿ ತನ್ನ ಕನಸನ್ನು ಅವರೊಂದಿಗೆ ಹಂಚಿಕೊಂಡರು. ಅವರಿಗೆ ಘಟನೆಗಳನ್ನು ವಿವರಿಸುವಾಗ, ಅವರು ಕೆಲವೊಮ್ಮೆ ಮೂಕನಾಗಿದ್ದರು ಮತ್ತು ಕೆಲವೊಮ್ಮೆ ಮೂಕವಿಸ್ಮಿತನಾಗಿದ್ದರು.

ಎಂಪೆರುಮಾನಾರ್ ಮೂಲಕ ಕಂದಾಡೈ ಅಣ್ಣನ್ ಗೆ ನಡೆದ ಘಟನೆಗಳನ್ನು ಶ್ರೇಷ್ಠ ವ್ಯಕ್ತಿಗಳು ಈ ಕೆಳಗಿನ ಶ್ಲೋಕಗಳ ಮೂಲಕ ಸೆರೆಹಿಡಿದಿದ್ದಾರೆ:

ವಾಧುಲಧುರ್ಯ ವರಧಾರ್ಯ ಗುರೋರ್ ಪಪಾಣಾ
ಸ್ವಪನೇ ಯತೀಂದ್ರ ವಪುರ್ಥ್ಯ ಕೃಪಾಪರೋನ್ಯ:
ಶೇಷೋಪ್ಯಹಂ ವರವರೊಮುನಿರಪ್ಯಹಂ ತ್ವಮ್
ಮಾಮಾಶ್ರಯೇಥಿತಂ ಅಹಂ ಕಲಯಾಮಿ ಚಿತ್ತ್ತೆ

ಅತ್ಯ೦ತ ಪಾಪನಿರತ: ಕಥಮಾರ್ಯವರ್ಯ
ತ್ವಾಮಾಶ್ರಯೇಹಮಿತಿ ತಂ ಕೃಪಣಂ ವದ್ಹಂತಂ
ಧೃಷ್ಟವಾ ಖಮಾಮಿ ನಾನುಧಾಸಾರತೆಸ್ ತ್ವದ್ಧಿಯ
ಸರ್ವಾಪರಾಧಮಿತಿ ತಂ ಪ್ರವಾದ್ಹಂತಮೀಡೇ

(ವಾದುಲ ಕುಲದ ಶ್ರೇಷ್ಠ ವ್ಯಕ್ತಿಯಾದ ಕಂದಾಡೈ ಅಣ್ಣನ್ ಅವರ ಕನಸಿನಲ್ಲಿ ಎಂಪೆರುಮಾನಾರ್ ಅವರ ದಿವ್ಯ ರೂಪದಲ್ಲಿ ಕಾಣಿಸಿಕೊಂಡ ಆ ಕರುಣಾಮಯಿ ಜೀಯರ್ ಅವರನ್ನು ನಾನು ಪೂಜಿಸುತ್ತೇನೆ. ಅವರು ಆ ಕನಸಿನಲ್ಲಿ “ನಾವು ಆದಿಶೇಷರು, ನಾವು ಮಾಮುನಿಗಳು” ಎಂದು ಹೇಳಿದ್ದರು.” ನೀವು ನಮ್ಮ ಆಶ್ರಯ ಪಡೆಯಿರಿ”. ನಾನು ಅವರನ್ನು ಮನಸ್ಸಿನಲ್ಲಿ ಧ್ಯಾನಿಸುತ್ತೇನೆ. ಕಂದಾಡೈ ಅಣ್ಣನು ದುರ್ಬಲ ಧ್ವನಿಯಲ್ಲಿ ಅವರಿಗೆ , ಅವರು ಪಾಪ ಕಾರ್ಯಗಳಲ್ಲಿ ದೃಢವಾಗಿ ತೊಡಗಿಸಿಕೊಂಡಿದ್ದಾನೆ ಮತ್ತು ಅವರನ್ನು ಹೇಗೆ ಆಶ್ರಯಿಸುವುದು ಎಂದು ಯೋಚಿಸುತ್ತಿದ್ದಾಗ, ಅವರು [ರಾಮಾನುಜರು] ಅಣ್ಣನಿಗೆ ಹೇಳಿದರು “ಓ ಅಣ್ಣಾ! “ಮುದಲಿಯಾಂಡಾನ ಸಲುವಾಗಿ, ನಿಮ್ಮ ಎಲ್ಲಾ ತಪ್ಪುಗಳನ್ನು ನಾವು ಕ್ಷಮಿಸುತ್ತೇವೆ” ಎಂದು ಅಣ್ಣನು ತನ್ನ ಸಹೋದರರೊಂದಿಗೆ ಶ್ರೀವಿಷ್ಣು ಪುರಾಣ ೫-೧೭-೩ ರಲ್ಲಿ ಹೇಳಿದಂತೆ “ಆಧ್ಯಮೇ ಸಪಲಂ ಜನ್ಮ ಸುಪ್ರಭಾದಾಸಮೇ ನಿಶಾ” (ನನ್ನ ಜನ್ಮ ಇಂದು ತನ್ನ ಗುರಿಯನ್ನು ಸಾಧಿಸಿತು; ನಿನ್ನೆ ರಾತ್ರಿ ನನಗೆ ಒಂದು ದೊಡ್ಡ ಉದಯವಾಯಿತು)) ಎಂದು ಹೇಳಿ ಆಚ್ಚಿಗೆ ನಮಸ್ಕರಿಸಿದರು.
ಅವಳು ಭಯಪಡದಂತೆ ನೋಡಿಕೊಳ್ಳುತ್ತಾ, ಅಣ್ಣನ್ ಅವಳಿಗೆ ಹಿಂದಿನ ರಾತ್ರಿಯ ತನ್ನ ಕನಸಿನ ಬಗ್ಗೆ ಹೇಳಿದರು. ನಂತರ ಆಚ್ಚಿ ಅವರಿಗೆ , ತಾನು ಜೀಯರ್ ಬಳಿ ಆಶ್ರಯ ಪಡೆದಿದ್ದಾಗಿ ಹೇಳಿದಳು ಮತ್ತು ಅವರ ಪಾದ ರಕ್ಷೆಗಳನ್ನು ತಲೆಯ ಮೇಲೆ ತೆಗೆದುಕೊಂಡ ಘಟನೆಯನ್ನು ಮತ್ತು ಆ ನೀರು ಅವಳನ್ನು ಹೇಗೆ ಶುದ್ಧೀಕರಿಸಿತು ಎಂಬುದನ್ನು ವಿವರಿಸಿದಳು. ಜೀಯರ್ ಸ್ನಾನ ಮಾಡಿದ ನಂತರ ನೀರು ಹರಿಯುತ್ತಿದ್ದ ಸ್ಥಳದಲ್ಲಿ ತನ್ನ ತಂದೆ ಕಾವೇರಿ ನದಿಯಲ್ಲಿ ಸ್ನಾನ ಮಾಡಿದ್ದರ ಬಗ್ಗೆ ಮತ್ತು ನಂತರ ಅವರಿಗೆ ಜ್ಞಾನೋದಯವಾದ ಬಗ್ಗೆಯೂ ಅವಳು ಅವರಿಗೆ ಹೇಳಿದಳು. ಇದನ್ನು ಕೇಳಿದ ಅಣ್ಣನ್ ತುಂಬಾ ಆನಂದಪರವಶನಾಗಿ ಸಿಂಗರಾಯರ್ ಬಳಿಗೆ ಹೋಗಿ ಎಲ್ಲವನ್ನೂ ದಯೆಯಿಂದ ವಿವರಿಸಿದಳು , ನಂತರ ದಿವ್ಯ ನದಿಯಾದ ಕಾವೇರಿಗೆ ಹೋಗಿ ಸ್ನಾನ ಮಾಡಿ, ದೈನಂದಿನ ಕೆಲಸಗಳನ್ನು ಮಾಡಿ ನಂತರ ಜೀಯರ್‌ಗಳನ್ನು ಭೇಟಿಯಾಗಲು ಹೊರಟರು.

ಮೂಲ : https://granthams.koyil.org/2021/08/16/yathindhra-pravana-prabhavam-43-english/

ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org

ಅನುವಾದ – ಅಡಿಯೇನ್ ಸುಭದ್ರಾ ರಾಮಾನುಜ ದಾಸಿ
ಪುರಾವೆ ಓದುವಿಕೆ -ಅಡಿಯೇನ್ ಕೊದೈ ರಾಮಾನುಜ ದಾಸಿ

1 thought on “ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೪೩”

Leave a Comment