ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೫೮

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ

ಪೂರ್ಣ ಸರಣಿ

<< ಹಿಂದಿನ ಲೇಖನವನ್ನು

ಜೀಯರ್ ಕರುಣೆಯಿಂದ ವ್ಯಾಖ್ಯಾನಂಗಳನ್ನು ಬರೆಯುತ್ತಾರೆ

“ಭುತ್ವಾ ಭುಯೋ ವರವರಮುನಿರ್ ಭೋಗಿನಾಮ್ ಸಾರ್ವಭೌಮ ಶ್ರೀಮದ್ ರಂಗೇವಸತಿ ವಿಜಯೀ ವಿಶ್ವಸಂರಕ್ಷಣಾರ್ಥಂ” (ಆದಿಶೇಷನು, ಲೋಕವನ್ನು ರಕ್ಷಿಸುವ ಸಲುವಾಗಿ, ಮಣವಾಳ ಮಾಮುನಿಗಳಾಗಿ ಪುನರ್ಜನ್ಮ ಪಡೆದು ಶ್ರೀರಂಗದಲ್ಲಿ ವೈಭವಯುತವಾಗಿ ವಾಸಿಸುತ್ತಿದ್ದಾನೆ) ಎಂದು ಹೇಳಿರುವಂತೆ, ಲೋಕದ ರಕ್ಷಣೆಗಾಗಿ ಅವತರಿಸಿದ್ದರಿಂದ, ಪಿಳ್ಳೈ ಲೋಕಾಚಾರ್ಯರು ಕರುಣಾಮಯವಾಗಿ ರಚಿಸಿದ ರಹಸ್ಯಗಳಿಗೆ ವ್ಯಾಖ್ಯಾನಗಳನ್ನು ಕರುಣಾಮಯವಾಗಿ ಬರೆಯಬೇಕೆಂದು ತನ್ನ ದಿವ್ಯ ಮನಸ್ಸಿನಲ್ಲಿ ನಿರ್ಧರಿಸಿದರು .

ರಹಸ್ಯಗ್ರಂಥ ತಥ್ವೇಷು ರಮಯಾಮಾಸ ತತ್ಪ್ರಿಯಮ್
ವಾಕ್ಯಸಂಗತಿ ವಾಕ್ಯಾರ್ಥ ಥಾತ್ಪರ್ಯಾನಿ ಯಥಾಶ್ರುತಮ್
ವ್ಯಕುರ್ವನ್ನೇವ ಪೂರ್ವೇಶಂ ವರ್ತಮಾನ: ಪಥೇ
ಸ್ವಮನೀಶಾಗತಂ ನೈವ ಕಲ್ಪಯನ್ ಕಿಂಚಿದಾಪ್ಯಯಾಮ್
ಗುಪ್ತಾಮ ಸರ್ವೈರ್ ಗುರುತ್ವೇನ ಕೂಟಾನರ್ಥಾಂಧಿತಿಸತ್
ಶ್ರುತಿಸ್ ಸ್ಮೃತಿತಿಃಆಸೈಶ್ಚ ಶ್ರುತ್ಯನ್ತೈ: ಪಾಂಚರಾತ್ರತ:
ದೇಶಿಕಾನಾಮ್ ನಿಪಂಧೃಣಾಮ್ ಧರ್ಶಯನ್ನೇಕ ಕಾಂತಥಾಮ್
ವಾಕ್ಯಾಲಂಕಾರ ವಾಕ್ಯಾಕಿ ವ್ಯಾಛಕ್ಷಾನೋ ವಿಚಕ್ಷಣ:
ಸುಧಿಯಾ: ಸ್ವಾಧಯಾಮಾಸ ಸ್ವಸ್ವರೂಪಂ ಸುಧುರ್ಗೃಹಮ್

(ಮಣವಾಳ ಮಾಮುನಿಗಳು ಪೂರ್ವಾಚಾರ್ಯರು ಅನುಸರಿಸುವ ವಿಧಾನಗಳಲ್ಲಿ ದೃಢವಾಗಿ ಬೇರೂರಿದ್ದಾರೆ; ಅವರು ಸ್ವಲ್ಪ ಮಟ್ಟಿಗೆ ತಮ್ಮ ಮನಸ್ಸಿಗೆ ಇಷ್ಟವಾಗುವದನ್ನು ಹೇಳುವುದಿಲ್ಲ, ಆದರೆ ಅರ್ಥಗಳನ್ನು ಆಧರಿಸಿದ ವಾಕ್ಯಗಳಿಗಾಗಿ, ಶ್ಲೋಕ ಅಥವಾ ಪೌರುಷದ ಹಿಂದಿನ ಮತ್ತು ವರ್ತಮಾನದ ಭಾಗಗಳ ನಡುವಿನ ಸಂಪರ್ಕಕ್ಕಾಗಿ, ಪದಗಳ ಅರ್ಥಗಳು ಮತ್ತು ಭಾವನೆಗಳ ಅರ್ಥಗಳಿಗಾಗಿ [ಶ್ಲೋಕ ಅಥವಾ ಪೌರುಷದಲ್ಲಿ] ಆಚಾರ್ಯರಿಂದ ಕಲಿತದ್ದನ್ನು ಕೃಪೆಯಿಂದ ಹೇಳುತ್ತಾರೆ. ಅರ್ಥಗಳ ಶ್ರೇಷ್ಠತೆಯ ಕಾರಣದಿಂದಾಗಿ ಪೂರ್ವಾಚಾರ್ಯರು ಮರೆಮಾಡಿದ್ದ ವಿಶಿಷ್ಟ ಅರ್ಥಗಳನ್ನು ಅವರು ತಮ್ಮ ಕರುಣೆಯಿಂದ ಬಹಿರಂಗಪಡಿಸಿದರು. ಹೀಗೆ, ರಹಸ್ಯಗ್ರಂಥಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡವರು ಸತ್ಯಗಳ ಅರ್ಥಗಳೊಂದಿಗೆ ಸಂತೋಷಪಡುವಂತೆ ಮಾಡಿದರು. ಇದಲ್ಲದೆ, ಅದು ವೇದಗಳಾಗಲಿ ಅಥವಾ ವೇದಾಂತಗಳಾಗಲಿ (ಉಪನಿಷತ್ತುಗಳು) ಅಥವಾ ಇವುಗಳ ಬಗ್ಗೆ ಮಾತನಾಡುವ ಸ್ಮೃತಿಗಳಾಗಲಿ ಅಥವಾ ಶ್ರೀ ರಾಮಾಯಣ ಮುಂತಾದ ಇತಿಹಾಸಗಳಾಗಲಿ ಅಥವಾ ಶ್ರೀ ಪಂಚರಾತ್ರವಾಗಲಿ, ಈ ಅಧಿಕೃತ ಗ್ರಂಥಗಳ ಮೂಲಕ ಅವರು ಅನೇಕ ವಿಭಿನ್ನ ಗ್ರಂಥಗಳನ್ನು ರಚಿಸಿದ ಆಚಾರ್ಯರ ಏಕಾಭಿಪ್ರಾಯವನ್ನು ತೋರಿಸಿದರು. ಒಬ್ಬ ಪರಿಣಿತರಾಗಿ, ಅವರು ದಯಾಪರರಾಗಿ ಶ್ರೀವಚನಭೂಷಣದ ಸೂತ್ರಗಳಿಗೆ ವ್ಯಾಖ್ಯಾನ (ವ್ಯಾಖ್ಯಾನ) ಬರೆದರು, ಹೀಗಾಗಿ ಜ್ಞಾನಿಗಳು (ಬುದ್ಧಿವಂತರು) ಆತ್ಮಸ್ವರೂಪದ ನಿಜವಾದ ಸ್ವರೂಪವನ್ನು (ಆತ್ಮದ ಮೂಲ ಸ್ವರೂಪ) ಅನುಭವಿಸುವಂತೆ ಮಾಡುವ ಮೂಲಕ ಆನಂದಮಯರಾಗುವಂತೆ ಮಾಡಿದರು, ಇದು ತಿಳಿಯುವುದು ಕಷ್ಟ. ಇದನ್ನು ಗಮನದಲ್ಲಿಟ್ಟುಕೊಂಡು, ಅವರು ದಯಾಪರರಾಗಿ ತತ್ವರಹಸ್ಯಗಳಿಗೆ (ಸತ್ಯಗಳ ಮೇಲಿನ ನಿಗೂಢ ಗ್ರಂಥಗಳು) ವ್ಯಾಖ್ಯಾನಗಳನ್ನು ಬರೆಯಲು ಪ್ರಾರಂಭಿಸಿದರು ಮತ್ತು ನಂತರ ದಯಾಪರರಾಗಿ ಶ್ರೀವಚನಭೂಷಣಕ್ಕೆ ವ್ಯಾಖ್ಯಾನವನ್ನು ಬರೆದರು, ಇದು ಎಲ್ಲಾ ಆಳವಾದ ಅರ್ಥಗಳು ಮತ್ತು ವಿಶಿಷ್ಟ ಅರ್ಥಗಳನ್ನು ಬಹಿರಂಗಪಡಿಸುವ ಶ್ರೀವಚನಭೂಷಣಕ್ಕೆ ಒಂದು ವಿಶಿಷ್ಟ ಸಂಕಲನವೆಂದು ಮೆಚ್ಚುಗೆ ಪಡೆಯಿತು. ಅವರು ಶ್ರೀವಚನಭೂಷಣದ ಮಹಿಮೆಯನ್ನು ಧ್ಯಾನಿಸಿದರು ಮತ್ತು ಪಾಸುರವನ್ನು ಸಂಕಲಿಸಿದರು.

ಶೀರ್ವಚನಬೂಡನಾಮಾಮ್ ದೈವಕ್ಕುಳಿಗೈ ಪ್ಪೇಟ್ರೋಮ್
ಪಾರ್ ಥಾನೈ ಪ್ಪೊನ್ನುಲಗ ಅಪ್ಪಾರ್ಕ್ಕ ವಲ್ಲೋಂ – ತೇರಿಲ್ ನಮಕ್ಕು
ಒಪ್ಪಾರ್ ಇನಿ ಯಾರ್ ಉಳಗಾಸಿರಿಯನ್ ಅರುಳ್
ತಪ್ಪಾಮಲ್ ಒಧಿಯಪಿನ್ ತಾನ್

(ನಾವು ಶ್ರೀವಚನಭೂಷಣ ಎಂಬ ದಿವ್ಯ ಗುಳಿಕೆಯನ್ನು ಪಡೆದುಕೊಂಡಿದ್ದೇವೆ, ಇದರಿಂದಾಗಿ ನಾವು ಈ ಸಂಸಾರವನ್ನು ಪರಮಪದ (ಶ್ರೀವೈಕುಂಠಂ) ಎಂದು ನೋಡಲು ಸಾಧ್ಯವಾಗುತ್ತದೆ. ಪಿಳ್ಳೈ ಲೋಕಾಚಾರ್ಯರ ಕರುಣೆಯ ಬಗ್ಗೆ ಮಾತನಾಡಿದ ನಂತರ, ನಾವು ವಿಶ್ಲೇಷಿಸಿದರೆ, ಯಾರು ನಮಗೆ ಸಮಾನರು?)

ಅವರ ಶಿಷ್ಯರು ಸಹ ಮಾಮುನಿಗಳ ಸ್ತುತಿಯಲ್ಲಿ ಈ ಕೆಳಗಿನ ಶ್ಲೋಕವನ್ನು ರಚಿಸಿದ್ದಾರೆ:

ವಾಕ್ಭೂಷಣಂ ವಕುಲಭೂಷಣ ಶಾಸ್ತ್ರಸಾರಂ ಯೋ ಮಾಧೃಸಂಚ ಸುಖಮಂ ವ್ಯಾವೃಣೋದ್ಧಯಾಲು:
ರಂಯೋಪಯಂತ್ರಮುನಯೇ ಯಾಮಿನಾಮ್ ವಾರಾಯ ತಸ್ಮೈ ನಮಸ್ಸಮದಮಾಧಿ ಗುಣಾರ್ಣವಾಯ

(ಸಮ (ಮನಸ್ಸಿನ ಮೇಲಿನ ನಿಯಂತ್ರಣ), ಧಮ (ಪಂಚೇಂದ್ರಿಯಗಳ ಮೇಲಿನ ನಿಯಂತ್ರಣ) ಮುಂತಾದ ಶುಭ ಗುಣಗಳ ಸಾಗರನಾದ ಮತ್ತು ತಿರುವಾಯ್ಮೋಳಿಯ ಸಾರವಾದ ಶ್ರೀವಚನಭೂಷಣಕ್ಕೆ ವಿವರವಾದ ವ್ಯಾಖ್ಯಾನವನ್ನು ನೀಡಿದ ಆ ಮಣವಾಳ ಮಾಮುನಿಗಳಿಗೆ ನಾವು ನಮಸ್ಕರಿಸುತ್ತೇವೆ, ಇದನ್ನು ನಮ್ಮಂತಹ ಮಂದ ಮೆದುಳುಳ್ಳ ಜನರು ಸಹ ಅರ್ಥಮಾಡಿಕೊಳ್ಳುವಂತೆ ವಕುಲಾಮಾಳ (ಸುವಾಸನೆಯ ಹೂವು) ಧರಿಸಿದ ನಮ್ಮಾಳ್ವಾರ್ ಕರುಣೆಯಿಂದ ಬರೆದಿದ್ದಾರೆ).

ತರುವಾಯ, ಮಾಮುನಿಗಳು ಇರಾಮಾನುಷ ನೂಟ್ರುಅಂದಾದಿಗೆ ವ್ಯಾಖ್ಯಾನವನ್ನು ಬರೆದರು, ಇದು ಶ್ರೀವಚನಭೂಷಣಕ್ಕೆ ಆಧಾರವಾಗಿದೆ ಮತ್ತು ಇದು ಚರಮಪರ್ವನಿಷ್ಠೈ (ಅಂತಿಮ ಸಾಧನದಲ್ಲಿ ದೃಢವಾಗಿರುವುದು, ಅಂದರೆ ಆಚಾರ್ಯರನ್ನು ಸಾಧನವಾಗಿ ತೊಡಗಿಸಿಕೊಳ್ಳುವುದು) ಹಾಗೂ ಜ್ಞಾನ ಸಾರ ಮತ್ತು ಪ್ರಮೇಯ ಸಾರ [ರಾಮಾನುಜರ ಶಿಷ್ಯರಾದ ಅರುಳಾಲಪ್ಪೆರುಮಾಳ್ ಎಂಪೆರುಮಾನಾರ್ ರಚಿಸಿದ ಪ್ರಬಂಧಗಳು] ಗಳಿಗೆ ವ್ಯಾಖ್ಯಾನವನ್ನು ಬರೆದರು. ಅವರು ಹಿಂದೆ ಇಲ್ಲದಿದ್ದ ತಿರುವಾಯ್ಮೊಳಿ ಮುಂತಾದ ಅರುಳಿಚ್ಚೆಯಲ್‌ಗಳನ್ನು ನಿರಂತರವಾಗಿ ಪ್ರಚಾರ ಮಾಡುವ ಮೂಲಕ ಅವುಗಳಿಗೆ ಶ್ರೇಷ್ಠತೆಯನ್ನು ತಂದುಕೊಟ್ಟರು. ಆ ಸಮಯದಲ್ಲಿ, ಅವರ ಶಿಷ್ಯರು ತಮ್ಮ ದಿವ್ಯ ತುಟಿಗಳ ಮೂಲಕ ತಿರುವಾಯ್ಮೊಳಿ ಬಗ್ಗೆ ಪ್ರಬಂಧವನ್ನು ದಯೆಯಿಂದ ರಚಿಸುವಂತೆ ಕೇಳಿಕೊಂಡರು ಮತ್ತು ಅವರು ತಿರುವಾಯ್ಮೊಳಿನೂಟ್ರುಅಂಧಾಧಿಯನ್ನು ಸರಿಯಾಗಿ ರಚಿಸಿದರು. ಅವರು ತವತ್ರಯಂ (ಪಿಳ್ಳೈ ಲೋಕಾಚಾರ್ಯರಿಂದ ಬರೆದ ರಹಸ್ಯಂ) ಮತ್ತು ಈಡು (ತಿರುವಾಯ್ಮೋಳಿ ಗೆ ನಂಪಿಳ್ಳೈ ಅವರ ವ್ಯಾಖ್ಯಾನ) ಗಾಗಿ ಪ್ರಮಾಣತಿರಟ್ಟು (ಉಲ್ಲೇಖಗಳ ಸಂಕಲನ) ಅನ್ನು ಪಟ್ಟಿ ಮಾಡಿದರು.ಅವರು ಕನಿಕರಿಂದ ಉಪದೇಶ ರತ್ತಿನಮಾಲೈ ಅನ್ನು ರಚಿಸಿದ್ದಾರೆ, ಇದು ಆಚಾರ್ಯರ ಉಪದೇಶಗಳ (ಸೂಚನೆಗಳು) ವಂಶಾವಳಿಯನ್ನು ವಿವರಿಸುತ್ತದೆ, ಇದು ದರ್ಶನದ ಅರ್ಥಗಳನ್ನು ನೀಡುತ್ತದೆ.ಅವರು ಕರುಣೆಯಿಂದ ಉಡಯವರ್ ಅವರ ನಿತ್ಯಂ (ತಿರುವಾರಾಧನ ಕ್ರಮ ಅಥವಾ ಒಬ್ಬರ ಮನೆಯಲ್ಲಿ ಪೆರುಮಾಳ್ ಪೂಜಿಸುವ ಕ್ರಮ) ಕುರಿತು ಸಂಕ್ಷಿಪ್ತ ಬರಹವನ್ನು ನೀಡಿದರು.

ಮೂಲ : https://granthams.koyil.org/2021/08/16/yathindhra-pravana-prabhavam-58-english/

ಅನುವಾದ – ಅಡಿಯೇನ್ ಸುಭದ್ರಾ ರಾಮಾನುಜ ದಾಸಿ

ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org

Leave a Comment