ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೬೪

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ

ಪೂರ್ಣ ಸರಣಿ

<< ಹಿಂದಿನ ಲೇಖನವನ್ನು

ತರುವಾಯ, ಅಣ್ಣನು ದಯೆಯಿಂದ ಕಂದಾಡೈ ಅಣ್ಣನ ದಿವ್ಯ ನಿವಾಸಕ್ಕೆ ಹೊರಟರು. ಅಣ್ಣನು ಅವರನ್ನು ಸ್ವಾಗತಿಸಲು ಅವರ ಎದುರು ಬಂದನು ಮತ್ತು “ವೈಷ್ಣವೋ ವೈಷ್ಣವಂ ಧೃತ್ವಾ ದಂಡವತ್ ಪ್ರಾಣೇತ್ ಭುವಿ” (ಇಬ್ಬರು ಶ್ರೀವೈಷ್ಣವರು ಭೇಟಿಯಾದರೆ, ಅವರು ಪರಸ್ಪರ ನೆಲದ ಮೇಲೆ ನಮಸ್ಕರಿಸಬೇಕೆಂದು) ಹೇಳಿರುವಂತೆ, ಅವರು ಪರಸ್ಪರ ನಮಸ್ಕರಿಸಿ, ಅವರ ಯೋಗಕ್ಷೇಮವನ್ನು ವಿಚಾರಿಸಿ ಅಣ್ಣನ ದಿವ್ಯ ನಿವಾಸವನ್ನು ತಲುಪಿದರು. ವಾನಮಾಮಲೈ ಜೀಯರ್ ಆಕಸ್ಮಿಕವಾಗಿ ಅಲ್ಲಿಗೆ ತಲುಪಿರುವುದನ್ನು ಅವರು ಕಂಡುಕೊಂಡರು. ಅವರು ಅವರ ಮುಂದೆ ನಮಸ್ಕರಿಸಿದರು, “ದೇವರೀರ್ ಕರುಣಾಮಯಿ ಶ್ರೀವೈಷ್ಣವರಲ್ಲವೇ!” ಎಂದು ಜೀಯರ್ ಅವರನ್ನು ಪ್ರೀತಿಯಿಂದ ಅಪ್ಪಿಕೊಂಡರು. ನಂತರ ಅವರು ಮೂವರೂ ಯತಿ ಪುನರ್ವತಾರ (ರಾಮಾನುಜರ ಪುನರ್ಜನ್ಮ) ಎಂದು ಮಾಮುನಿಗಳ ಮಹಿಮೆಯನ್ನು ನೆನಪಿಸಿಕೊಂಡರು ಮತ್ತು ನಂತರ ದಯೆಯಿಂದ ಮಾತನ್ನು ತಲುಪಿದರು. ನಂತರ ಪ್ರತಿವಾದಿ ಭಯಂಕರಂ ಅಣ್ಣ ತಮ್ಮ ಕಾಣಿಕೆಗಳನ್ನು ಸಲ್ಲಿಸಿದರು. ಅವನು ತನ್ನ ಪತ್ನಿ ಮತ್ತು ಮೂವರು ಪುತ್ರರಾದ ಎಂಪೆರುಮಾನರಪ್ಪನ್, ಅನಂತಯ್ಯನಪ್ಪೈ ಮತ್ತು ತಿರುವಾಯ್ಮೊಳಿ ಪ್ಪೆರುಮಾಳ್ ಅವರನ್ನು ಕರೆದು ಜೀಯರ್ ಅವರ ದಿವ್ಯ ಪಾದಗಳಿಗೆ ನಮಸ್ಕರಿಸಿದರು. ನಂತರ ಅವರು ಶ್ರೀಪಾದ ತೀರ್ಥವನ್ನು (ಜೀಯರ್ ಅವರ ದಿವ್ಯ ಪಾದಗಳೊಂದಿಗೆ ಸಂಪರ್ಕ ಹೊಂದಿದ್ದ ದೈವಿಕ ನೀರು) ಸ್ವೀಕರಿಸಿದರು ಮತ್ತು ಪೆರುಮಾಳ್‌ಗೆ ಪ್ರಸಾದವನ್ನು ಅರ್ಪಿಸಿದರು. ಅಣ್ಣ ಜೀಯರ್ ಅವರ ದಿವ್ಯ ಪಾದಗಳಿಗೆ ಆಪ್ತಮಿತ್ರರಾಗಿ ಉಳಿದರು.ಜೀಯರ್ ಅವರಿಗೆ ಶ್ರೀವೈಷ್ಣವ ದಾಸಾನ್ (ಶ್ರೀವೈಷ್ಣವರ ಸೇವಕ) ಎಂಬ ದಾಸ್ಯನಾಮವನ್ನು ನೀಡಿದರು, ಅದನ್ನು ಅವರು ಹಿಂದೆ ಯಾರಿಗೂ ನೀಡಿರಲಿಲ್ಲ. ಅವರು ಅಣ್ಣ ನಿಗೆ “ಸೂಕ್ತ ಪ್ರಮಾಣ (ಪ್ರಾಮಾಣಿಕ ಪುರಾವೆ) ದೊಂದಿಗೆ ಇತರ ತತ್ವಶಾಸ್ತ್ರಗಳನ್ನು ತೆಗೆದುಹಾಕಿ ಮತ್ತು ವಿಶಿಷ್ಟಾದ್ವೈತ ತತ್ವಶಾಸ್ತ್ರವನ್ನು ದೃಢವಾಗಿ ಸ್ಥಾಪಿಸಿ, ಅದನ್ನು ಪೋಷಿಸಿ” ಎಂದು ಹೇಳಿದರು.

ಜೀಯರ್ ದಯೆಯಿಂದ ಮತ್ತೆ ತಿರುಮಲೈಗೆ ಹೊರಡುತ್ತಾರೆ; ದಾರಿಯಲ್ಲಿ ಕಾಂಚಿಯನ್ನು ತಲುಪುತ್ತಾರೆ.

ತರುವಾಯ, ತಿರುಮಲೈ ಮತ್ತು ಇತರ ದೈವಿಕ ನಿವಾಸಗಳಲ್ಲಿ ಎಂಪೆರುಮಾನ್ ಅವರ ದಿವ್ಯ ಪಾದಗಳನ್ನು ಪೂಜಿಸಲು ಜೀಯರರ ಅವರ ದಿವ್ಯ ಮನಸ್ಸಿನಲ್ಲಿ ಆಲೋಚನೆಯೊಂದಿಗೆ, “ಪ್ರತಿತೈರಪಿ ತದ್ಭೃತ್ಯೈ: ಪ್ರತಿವಾದಿ ಭಯಂಕರ:” ಎಂದು ಹೇಳಿರುವಂತೆ, ಜೀಯರ್ ಪ್ರತಿವಾದಿ ಭಯಂಕರರು ಹಾಗು ಅನೇಕ ಪ್ರಖ್ಯಾತಿ ಪಡೆದ ಶಿಷ್ಯರು ಜೊತೆಗೆ ಉತ್ತರ ಕಾವೇರಿಯ ಕಡೆಗೆ ಹೊರಟರು . ಕೆಳಗಿನ ಶ್ಲೋಕದಲ್ಲಿ ಉಲ್ಲೇಖಿಸಿರುವಂತೆಯೇ

ಅಥವಿ ಲೋನಲೋಕತಮೇನುತಂ ತ್ವಧವಲೋಕನತುಂಗ ಕುತೂಹಲಂ
ದ್ವಿರಥ ಶೈಲಶಿರೋಗೃಹ೦ ಮೇದಿನಂ ವರದಂ ಉತ್ತರವೇದಿ ವಿಭೂಷಣಮ್

(ನಂತರ, ತನ್ನ ನೋಟದ ಮೂಲಕ ಲೌಕಿಕ ಜನರ ಅಜ್ಞಾನದ ಕತ್ತಲೆಯನ್ನು ಸಂಪೂರ್ಣವಾಗಿ ಹೋಗಲಾಡಿಸಿದವನಾಗಿ, ದೇವರೀರ್ ಮೇಲೆ ಕರುಣೆಯನ್ನು ಸುರಿಸುವುದರಲ್ಲಿ ಉತ್ಸುಕನಾಗಿ, ದೊಡ್ಡ ಹಸ್ತಿಗಿರಿ ಬೆಟ್ಟದ ಮೇಲೆ ಕರುಣೆಯಿಂದ ನೆಲೆಸಿರುವವನಾಗಿ, ದೈವಿಕ ಹಸ್ತಿಗಿರಿಯ (ಆನೆ ಬೆಟ್ಟ) ಉತ್ತರ ದಿಬ್ಬದ ಮೇಲಿನ ಧಾರ್ಮಿಕ ಸ್ಥಳಕ್ಕೆ ಅಲಂಕಾರದಂತಿರುವ ಪೇರ್ ಅರುಲಾಲನ) ಅವನು ಮೊದಲು ಕಾಂಚೀಪುರವನ್ನು ತಲುಪಿದರು , ಅದು ತನ್ನನ್ನು ಪ್ರಾರ್ಥಿಸುವವರೆಲ್ಲರ ಇಚ್ಛೆಗಳನ್ನು ಪೂರೈಸುವ ಪೇರ್ ಅರುಲಾಲನ (ವರಧರಾಜನ) ದಿವ್ಯ ಪಾದಗಳನ್ನು ಪೂಜಿಸಲು. ಆ ಪ್ರದೇಶದಲ್ಲಿ ವಾಸಿಸುತ್ತಿದ್ದ ಶ್ರೀವೈಷ್ಣವರು ಅವರನ್ನು ಸ್ವಾಗತಿಸಲು ಬೃಹತ್ ಸಮೂಹವಾಗಿ ಬಂದು ಅವರ ಮುಂದೆ ನಮಸ್ಕರಿಸಿದರು. ಅವರು ಅವರ ಮೇಲೆ ಕರುಣೆ ತೋರಿ ಅವರೊಂದಿಗೆ ದೇವಾಲಯಕ್ಕೆ ಹೋದರು. ಅಲ್ಲಿ ಪೂಜಿಸಬೇಕಾದ ಕ್ರಮವನ್ನು ನೀಡುವ ಎರಡು ಶ್ಲೋಕಗಳನ್ನು ರಚಿಸಿದರು:

ಶ್ರೀಮನ್ ದ್ವಾರವರಂ ಮಹತ್ತಿ ​​ಬಲಿಪೀಟಾಗ್ರ್ಯಂ ಪಾನೀಂದ್ರಹೃತಂ
ಗೋಪಿನಂ ರಾಮನಾಮಂ ವರಾಹವಪುಷಂ ಶ್ರೀಭಟ್ಟನಾಥಂ ತಥಾ
ಶ್ರೀಮಂತಂ ಶಟವೈರಿನಮಂ ಕಲಿರಿಪುಂ ಶ್ರೀಭಕ್ತಿಸಾರಂ ಮುನಿಂ
ಪೂರ್ಣಂ ಲಕ್ಷ್ಮಣ ಯೋಗಿನಾಂ ಮುನಿವರಾನಾಧ್ಯಾನಾಥ ದ್ವಾರಪೌ
ಶ್ರೀಮನ್ಮಂಜನ ಮಂಟಪಂ ಸರಸಿ ಜಾಮ್ ಹೇತಿಶ ಭೋಗೀಶ್ವರೌ
ರಾಮಂ ನೀಲಮನೀಂ ಮಹಾನಸವರಂ ತರ್ಕ್ಷ್ಯಂ ನೃಸಿಂಹಪ್ರಭುಮ್
ಸೇನಾನ್ಯಮ್ ಕರಿಭುತರಂ ತಾಧುಪರಿ ಶ್ರೀಪುನ್ಯಕೋಟಿಮ್ ತಥಾ
ತನ್ಮಧ್ಯೇ ವರಧಂ ರಮಾಸಹಚರಂ ವಂಧೇ ತಧೀಯೈರ್ ವೃತಮ್

ನಿತ್ಯಶ್ರೀ (ಶಾಶ್ವತ ಸಂಪತ್ತು) ದಿಂದ ಹೊಳೆಯುವ ದೈವಿಕ ಗೋಪುರ ಪ್ರವೇಶದ್ವಾರ ; ಬಲಿಪೀಠ೦ (ದಿನದಲ್ಲಿ ನಿರ್ದಿಷ್ಟ ಸಮಯದಲ್ಲಿ ಆಹಾರವನ್ನು ಅರ್ಪಿಸುವ ಎತ್ತರದ ರಚನೆ) ಮುಂದೆ ಇರುವ ಅನಂತಸರಸ್’ಗಳು (ದಿವ್ಯವಾದ ದೇವಾಲಯದ ಕೊಳ); ಗೋಪಿಗಳಿಗೆ (ಗೋಕುಲದಲ್ಲಿ ಹಿಂಡಿನ ಹೆಣ್ಣುಮಕ್ಕಳಿಗೆ) ಆನಂದ ನೀಡುವ ವೇಣುಗೋಪಾಲನ್; ಜ್ಞಾನಪ್ಪಿರನ್ (ವರಾಹ ಪ್ಪೆರುಮಾಳ್); ಭಟ್ಟರ್ ಪಿರಾನ್ (ಪೆರಿಯಾಳ್ವಾರ್); ಶಟಗೋಪರ್ (ನಮ್ಮಾಳ್ವಾರ್) ಒಬ್ಬ ಶ್ರೀಮಾನ್; ಕಲಿಯುಗದ ಶತ್ರುವಾದ ತಿರುಮಂಗೈ ಆಳ್ವಾರ್; ತಿರುಮಳಿಸೈಪ್ಪಿರಾನ್ ; ಪೆರಿಯನಂಬಿ(ರಾಮಾನುಜರ ಆಚಾರ್ಯರು); ಎಂಪೆರುಮಾನಾರ್ (ರಾಮಾನುಜರ್); ಮೂದಲಾಳ್ವಾರರು ( ಮೊದಲ ಮೂರು ಆಳ್ವಾರರು , ಪೊಯ್ಗೈ ಆಳ್ವಾರ್ , ಭುದತ್ತ್ ಆಳ್ವಾರ್ ಮತ್ತು ಪೇಯ್ ಆಳ್ವಾರ್);ದ್ವಾರಪಾಲಕರು (ಪೆರುಮಾಳ್ ಸನ್ನಿಧಿಯ ಪ್ರವೇಶದ್ವಾರದಲ್ಲಿ ಕಾವಲುಗಾರರು); ದೈವಿಕ ಮಂಟಪದಲ್ಲಿ ದೈವಿಕ ಅಭಿಷೇಕವನ್ನು (ದೈವಿಕ ಸ್ನಾನ) ಪೆರುಮಾಳ್ಗೆ ನೀಡಲಾಗುತ್ತದೆ; ಕಮಲದ ಮೇಲೆ ವಾಸಿಸುವ ಪೆರುಂದೇವಿ ತಾಯರ್ ; ದೈವಿಕ ಆಳಿಯಾಳ್ವಾನ್ (ಡಿಸ್ಕ್), ತಿರುವನಂತಾಳ್ವಾನ್ (ಆದಿಶೇಷನ್); ಚಕ್ರವರ್ತಿ ತಿರುಮಗನ್ (ಶ್ರೀರಾಮ); ಕರಿಯ ಮಾಣಿಕ್ಕ ವರದಾರ; ತಿರುಮಡೈಪ್ಪಲ್ಲಿ ( ಪೆರುಮಾಳಿಗೆ ಪ್ರಸಾದವನ್ನು ತಯಾರು ಮಾಡುವ ಅಡಿಗೆ ಮನೆ ); ಗರುಡ; ಅಳಗಿಯ ಸಿಂಗರ್ (ನರಸಿಂಹನ್); ಶೆಣೈ ಮುದಲಿಯಾರ್ ( ವಿಶ್ವಕ್ಸೇನರ್ ); ದಿವ್ಯವಾದ ಆನೆ ಬೆಟ್ಟ; ಪುಣ್ಯಕೋಟಿ ವಿಮಾನ (ಗೋಪುರ) – ಈ ಕ್ರಮದಲ್ಲಿ ಪೂಜಿಸುತ್ತಾ,ಆ ವಿಮಾನದ ಕೆಳಗೆ ಶ್ರೀ ಮಹಾಲಕ್ಷ್ಮಿ,ಶ್ರೀದೇವಿ ಮತ್ತು ಭೂದೇವಿಯಿಂದ ಸುತ್ತುವರೆದಿರುವ ದೇವಪ್ಪೆರುಮಾಳನಿಗೆ ನಾನು ನಮಸ್ಕರಿಸುತ್ತೇನೆ ).

ಕಮಲಾನಿವೇಶಿತಾನ್ಗ್ರಿಂ ಅಮಲಂ ಕಮಲಾಭರನಂ
ಗಣಮನೀ ಭೂಷಣ ಧ್ಯೂತಿಕತಾರಿತ ಗಾತ್ರರುಚಿಮ್
ಅಭಯಾಗತಾ ಸುದರ್ಶನ ಸರೋರುಹ ಚಾರುಕರಮ್
ಕರಿಗಿರಿ ಶೇಕರಂ ಕಿಮಪಿ ಚೇತಸಿ ಮೇ ನಿಧತೇ

(ಕಮಲದಂತಹ ದಿವ್ಯ ಪಾದಗಳನ್ನು ಕಮಲದ ಆಸನದ ಮೇಲೆ ದೃಢವಾಗಿ ಒತ್ತುವ, ಶ್ರೀ ಮಹಾಲಕ್ಷ್ಮಿಯ ಪ್ರಿಯ ಪತ್ನಿ, ಪರಮ ರತ್ನಗಳಿಂದ ಮಾಡಲ್ಪಟ್ಟ ದಿವ್ಯ ಆಭರಣಗಳ ಕಾಂತಿಯಿಂದ ತನ್ನ ದಿವ್ಯ ರೂಪದ ಮೇಲೆ ಚಿನ್ನದ ಬಣ್ಣವನ್ನು ಹೊಂದಿರುವ, ಅಭಯ ಮುದ್ರೆಯಲ್ಲಿ (“ಭಯಪಡಬೇಡ” ಎಂಬ ಸಂಜ್ಞೆ) ತನ್ನ ದಿವ್ಯ ಕೈಯನ್ನು ಹಿಡಿದಿರುವ, ಚಕ್ರ ಮತ್ತು ಶಂಖದ ದಿವ್ಯ ಆಯುಧಗಳನ್ನು ಹೊಂದಿರುವ ಮತ್ತು ಮೇಲೆ ತಿಳಿಸಿದ ಆಯುಧಗಳನ್ನು ಹಿಡಿದಿರುವ ಕೈಗಳಿಂದ ಹಸ್ತಗಿರಿ (ಆನೆ ಬೆಟ್ಟ) ಕ್ಕೆ ಅಲಂಕಾರವಾಗಿ ಹೊಳೆಯುವ ಮತ್ತು ವರ್ಣನಾತೀತ ಪೇರ್ ಅರುಲಾಲನಾದ ಆ ಎಂಪೆರುಮಾನನನ್ನು ನಾನು ಧ್ಯಾನಿಸುತ್ತೇನೆ).

ಮೂಲ : https://granthams.koyil.org/2021/09/20/yathindhra-pravana-prabhavam-64-english/

ಅನುವಾದ – ಅಡಿಯೇನ್ ಸುಭದ್ರಾ ರಾಮಾನುಜ ದಾಸಿ

ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org

Leave a Comment