ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ
ಪಿಳ್ಳೈ ಲೋಕಾಚಾರ್ಯರ ಹಿರಿಮೆ
ಶ್ರೇಷ್ಠವಾದ ಪಿಳ್ಳೈ ಲೋಕಾಚಾರ್ಯರನ್ನು ನಮ್ಮಾಳ್ವಾರ್ ಅವರ ಪುನರ್ಜನ್ಮ ಎಂದು ಪರಿಗಣಿಸಲಾಗಿದೆ. ಅವರ ಕಿರಿಯ ಸಹೋದರ, ಅಳಗಿಯ ಮಾನವಾಳ ಪೆರುಮಾಳ್ ನಾಯನಾರ್ ಅವರ ಕೃಪೆಯಲ್ಲಿ ಬೆಳೆದರು. ಅವರು ಇಲಯ ಪೆರುಮಾಳ್ (ಲಕ್ಷ್ಮಣನ್) ಮತ್ತು ಪೆರುಮಾಳ್ (ಶ್ರೀ ರಾಮರ್) ಹಾಗೆಯೇ ಕೃಷ್ಣ ಮತ್ತು ಬಲರಾಮರಂತೆ ಒಟ್ಟಿಗೆ ಬೆಳೆದರು. ಈ ಕೆಳಗಿನ ಪಾಶುರಂ ಮೂಲಕ ಅವರನ್ನು ಒಟ್ಟಿಗೆ ನೋಡಿದ ಮೇಲೆ ಪ್ರಶಂಸಿಸಲಾಯಿತು :
ತಂಬಿಯುಡನ್ ಧಾಸಾರಥಿಯುಂ ಸಂಗವನ್ನಾ
ನಂಬಿಯುಡನ್ ಪಿನ್ ನಡೆಂದು ವಂದಾನುಂ – ಪೊಂಗುಪುನಲ್
ಒಂಗು ಮುಡುಂಬೈ ಉಳಗಾರಿಯನುಂ ಅರನ್
ಧಾಂಗು ಮಾನವಳಾನುಮೇ ಥಾನ್
(ಧಾಸರಥಿ (ಶ್ರೀ ರಾಮರು) ತನ್ನ ಕಿರಿಯ ಸಹೋದರ (ಲಕ್ಷ್ಮಣ) ಜೊತೆ ನಡೆದಂತೆ ಮತ್ತು ಶಂಖದ ಮೈಬಣ್ಣವನ್ನು ಹೊಂದಿದ್ದ ತನ್ನ ಸಹೋದರನೊಂದಿಗೆ ಕೃಷ್ಣನಡೆದಂತೆ, ಮುಡುಂಬೈ ಎಂಬ ಶ್ರೇಷ್ಠ ಕುಲದ ಉಲಗಾರಿಯನ್ (ಪಿಳ್ಳೈ ಲೋಕಾಚಾರ್ಯರು) ಮತ್ತು ಅಳಗಿಯ ಮನವಾಳನ್ ಒಟ್ಟಿಗೆ ನಡೆಯುತ್ತಿದ್ದರು)
ಅವರಿಬ್ಬರಲ್ಲಿ, ಪಿಳ್ಳೈ ಲೋಕಾಚಾರ್ಯರು ಹಲವಾರು ನಿಗೂಢ ಗ್ರಂಥಗಳನ್ನು (ಪ್ರಬಂಧಗಳು) ರಚಿಸಿದ್ದಾರೆ, ಇವುಗಳನ್ನು ಮಹಿಳೆಯರು ಮತ್ತು ಸಾಮಾನ್ಯರು ಉನ್ನತಿಗಾಗಿ ಕಲಿಯಬಹುದು, ಉದಾಹರಣೆಗೆ ತನಿಪ್ರಣವಂ, ತನಿಧ್ವಯಂ, ತನಿಚ್ಚರಮಂ, ಪರಂಧಪಡಿ , ಶ್ರೀಯ:ಪತಿಪಡಿ, ಯಾಧೃಚ್ಚಿಕಪ್ಪಡಿ , ಮುಮುಕ್ಷುಪ್ಪಾಡಿ , ಸಂಸಾರ ಸಾಮ್ರಾಜ್ಯಮ್ , ಸಾರಸಂಗ್ರಹಂ, ತತ್ವತ್ರಯಂ, ತತ್ವಶೇಖರಂ, ಪ್ರಪನ್ನಪರಿತ್ರಾಣಂ, ಪ್ರಮೇಯಶೇಖರಂ, ಅರ್ಚಿರಾಧಿ , ಅರ್ಥಪಂಚಕಂ, ನವವಿಧ ಸಂಬಂಧಂ, ನವರತ್ನಮಾಲೈ, ಶ್ರೀವಚನ ಭೂಷನ೦ ಇತ್ಯಾದಿ. ಅವರು ತಮ್ಮ ಕಿರಿಯ ಸಹೋದರನೊಂದಿಗೆ ವಾಸಿಸುತ್ತಿದ್ದ ಸಮಯದಲ್ಲಿ, ಶ್ರೇಷ್ಠ ಆಚಾರ್ಯರು ಪರಮಸಾತ್ವಿಕರಾದ (ಕೇವಲ ಸತ್ವ ಗುಣ ಅಥವಾ ಸಂಪೂರ್ಣವಾಗಿ ಉತ್ತಮ ಗುಣಗಳನ್ನು ಹೊಂದಿದ್ದಾರೆ) ಕುರಕುಲೋತ್ತಮ ಧಾಸರ್ ನಾಯನ್, ಮನಪ್ಪಕ್ಕತ್ತು ನಂಬಿ, ಕೊಲ್ಲಿ ಕಾವಲಧಾಸರ್ ಎಂದೂ ಕರೆಯಲ್ಪಡುತ್ತಿದ್ದ ಅಳಗಿಯ ಮನವಾಳಪ್ಪಿಲ್ಲೈ, ಕೊಟ್ಟೂರಿಲ್ ಅನ್ನರ್ , ತಿರುಮಲೈ ಆಳ್ವಾರ (ನಂತರ ಮನವಾಳ ಮಾಮುನಿಗಳಿಗೆ ಆಚಾರ್ಯರು), ವಿಲಂಜೊಲೈಪ್ ಪಿಳ್ಳೈ ಮತ್ತು ತಿರುಮಲೈ ಆಳ್ವಾರ್ ಅವರ ತಾಯಿಯಂತಹ ಪ್ರಸಿದ್ಧ ಮಹಿಳೆಯರು ಮತ್ತು ಇತರರು ಅವರ ದೈವಿಕ ಪಾದಗಳ ಅಡಿಯಲ್ಲಿ ಆಶ್ರಯ ಪಡೆದರು, ಎಂಪೆರುಮಾನ್ ಅನ್ನು ಸಹ ಪರಿಗಣಿಸದೆ ಎಲ್ಲಾ ಸಮಯಗಳಲ್ಲಿ ಮತ್ತು ಎಲ್ಲಾ ಅವಸ್ಥೆಗಳಲ್ಲೂ ಅವರಿಗೆ ಉದಾತ್ತ ಸೇವೆಗಳನ್ನು ಮಾಡಿದರು.
ಹೀಗೆ, ಅವರಿಬ್ಬರೂ ಬದುಕುತ್ತಿರುವಾಗ, ಪಿಳ್ಳೈ ಲೋಕಾಚಾರ್ಯರು ತಮ್ಮ ಶಿಷ್ಯರಿಗೆ ಶ್ರೀವಚನ ಭೂಷಣದ ಕುರಿತು ಪ್ರವಚನ ನೀಡಲು ಪ್ರಾರಂಭಿಸಿದರು. ಅದೇ ಸಮಯದಲ್ಲಿ, ಅಳಗಿಯ ಮಾನವಾಳ ಪೆರುಮಾಳ್ ನಾಯನಾರ್ ಅವರು ತಮ್ಮ ಆಚಾರ್ಯ ಹೃದಯಂ ಎಂಬ ಕೃತಿಯನ್ನು ಪ್ರಾರಂಭಿಸಿದರು, ಇದನ್ನು ತಿರುವಾಯ್ಮೋಳಿ ಸಾರವೆಂದು ಪರಿಗಣಿಸಲಾಗಿದೆ ಅದಲಾದೆ ಶ್ರೀವಚನ ಭೂಷನದ ಸ್ಥಾಪನೆಗೆ ಅರ್ಥವಾಗಿದೆ. ಇವೆರಡೂ ಈಡುವಿನ ಅರ್ಥಗಳನ್ನು ತಿಳಿಸುವುದರಿಂದ, ಈಡುವಿನ ತನಿಯನ್ಗಳನ್ನು ಪಠಿಸುವಾಗ ಪಿಳ್ಳೈ ಲೋಕಾಚಾರಿಯರ್ ಮತ್ತು ಅಳಗಿಯ ಮಾನವಾಳ ಪೆರುಮಾಳ್ ನಾಯನಾರ್ ತನಿಯನ್ಗಳನ್ನು ಪಠಿಸಲಾಗುತ್ತದೆ.
ಇಬ್ಬರು ಸಹೋದರರು ತಮ್ಮ ಕೆಲಸಗಳಿಂದ ಪಡೆದ ಖ್ಯಾತಿ ಮತ್ತು ಅವರ ಕೃತಿಗಳನ್ನು ಕೇಳಲು ಜನರು ಅವರ ಅಡಿಯಲ್ಲಿ ಆಶ್ರಯ ಪಡೆದ ರೀತಿಯನ್ನು ಕೆಲವರು ಸಹಿಸಲಿಲ್ಲ. ತಮ್ಮ ಅಸೂಯೆಯಲ್ಲಿ, ಅವರು ನಮ್ ಪೆರುಮಾಳ್ ಗೆ ಮನವಿ ಮಾಡಿದರು, “ಓ ರಂಗನಾಥ! ಪಿಲ್ಲೈಲೋಕಾಚಾರ್ಯರು ಶ್ರೀವಚನ ಭೂಷನಂ ಎಂಬ ನಿಗೂಢ ಗ್ರಂಥವನ್ನು ಸಂಕಲಿಸಿದ್ದಾರೆ, ಇದು ದರ್ಶನದ ಅರ್ಥಗಳನ್ನು ನಿರರ್ಥಕವಾಗುವಂತೆ ಮಾಡುತ್ತಿದೆ.ಇದನ್ನು ಕೇಳಿದ ನಮ್ ಪೆರುಮಾಳ್ ಕೋಪಗೊಂಡರು ಮತ್ತು ಅರ್ಚಕರ ಮೂಲಕ ಪಿಳ್ಳೈ ಲೋಕಾಚಾರ್ಯರನ್ನು ಕರೆದರು. ಅವರು ಸ್ನಾನಕ್ಕೆ ಹೋಗಿದ್ದರಿಂದ, ಅಳಗಿಯ ಮಾನವಾಳ ಪೆರುಮಾಳ್ ನಾಯನಾರ್ ಅವರಿಂದ ಕರೆಯಲ್ಪಟ್ಟ ಉದ್ದೇಶವನ್ನು ತಿಳಿದುಕೊಂಡು ಅವರೊಂದಿಗೆ ಪೆರುಮಾಳ್ ಸನ್ನಿಧಿಗೆ ಹೋದರು. ಪೆರುಮಾಳ್ ಅವರನ್ನು ಅರ್ಚಕರ ಮೂಲಕ ಕೇಳಿದರು “ಓ ನಾಯನಾರ್! ಸದಾಚಾರದ ಆಳ್ವಿಕೆಯನ್ನು ಸ್ಥಾಪಿಸಲು ನಾವು ಅಂತ್ಯವಿಲ್ಲದ ಅವತಾರಗಳನ್ನು ತೆಗೆದುಕೊಂಡಿಲ್ಲವೇ? ಅದನ್ನು ನಿರರ್ಥಕವಾಗಿಸಲು ನೀವು ನಿಗೂಢ ಗ್ರಂಥಗಳನ್ನು ಏಕೆ ಸಂಕಲಿಸುತ್ತಿದ್ದೀರಿ?” ಅಳಗಿಯ ಮನವಾಳ ಪೆರುಮಾಳ್ ನಾಯನಾರ್ ಅವರು ಶ್ರೀವಚನ ಭೂಷನಂ ಸ್ಥಾಪನೆಗೆ ಪೂರಕವಾಗಿ ಸಂಕಲಿಸಿದ ಆಚಾರ್ಯ ಹೃದಯಂ ಪರಿಕಲ್ಪನೆಗಳನ್ನು ವಿವರಿಸುವ ಮೂಲಕ ಪ್ರತಿಕ್ರಿಯಿಸಿದರು. ಅವರು ತಮ್ಮ ವಿವರಣೆಯನ್ನು ಪೂರ್ಣಗೊಳಿಸಿದ ನಂತರ, ಪೆರುಮಾಳ್ ಬಹಳ ಸಂತೋಷಪಟ್ಟರು ಮತ್ತು “ಇವು ನಮ್ಮ ಅವತಾರಗಳಲ್ಲಿ ನಾವು ಹೇಳಿದ್ದಲ್ಲವೇ?” ಎಂದು ಕೇಳುವ ಮೂಲಕ ಅವರಿಗೆ ದೂರು ನೀಡಿದವರನ್ನು ತರಾಟೆಗೆ ತೆಗೆದುಕೊಂಡರು. ನಂತರ ಅವರು ದೇವಾಲಯದ ಎಲ್ಲಾ ಗೌರವಗಳನ್ನು ನಾಯನಾರ್‌ಗೆ (ಪವಿತ್ರ ನೀರು, ದೈವಿಕ ಶಠಾರಿ , ತುಳಸಿ ಪ್ರಸಾದ ಇತ್ಯಾದಿ) ಅರ್ಪಿಸಿದರು ಮತ್ತು ಅವರನ್ನು ಪಲ್ಲಕ್ಕಿಯಲ್ಲಿ ಅವರ ನಿವಾಸಕ್ಕೆ ಕಳುಹಿಸಿದರು. ಇದನ್ನು ಕೇಳಿದ ನಂತರ, ಪಿಳ್ಳೈ ಲೋಕಾಚಾರ್ಯರು ಸಂತೋಷಪಟ್ಟರು ಮತ್ತು ತಿರುನೆಡುತಾನ್ಡಕ೦ ಪಾಶುರಂನಲ್ಲಿ ಹೇಳಿರುವಂತೆ “ವಲರ್ಥದನಾಲ್ ಪಯನ್ ಪೆಟ್ಟ್ರೆನ್ ” (ನಾನು ನಿನ್ನನ್ನು ಪೋಷಿಸುವುದರ ಪ್ರಯೋಜನವನ್ನು ನಾನು ಅರಿತುಕೊಂಡೆ) ಎಂದು ತನ್ನ ಸಹೋದರನನ್ನು ತಬ್ಬಿಕೊಂಡರು.
ಅನುವಾದ – ಅಡಿಯೇನ್ ಸುಭದ್ರಾ ರಾಮಾನುಜ ದಾಸಿ
ಪುರಾವೆ ಓದುವಿಕೆ -ಅಡಿಯೇನ್ ಕೊದೈ ರಾಮಾನುಜ ದಾಸಿ
ಮೂಲ : https://granthams.koyil.org/2021/07/27/yathindhra-pravana-prabhavam-12-english/
ಆರ್ಕೈವ್ ಮಾಡಲಾಗಿದೆ – https://granthams.koyil.org
ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org