ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ
ನಮ್ ಪೆರುಮಾಳ್ ಕೋಯಿಲ್‌ನಿಂದ ವಲಸೆ ಹೋಗುತ್ತಾರೆ
ಪಿಳ್ಳೈ ಲೋಕಾಚಾರ್ಯರು ಈ ರೀತಿಯಾಗಿ ಪ್ರಮಾಣಂ (ವೇದಗಳು ಮುಂತಾದ ಅಧಿಕೃತ ಗ್ರಂಥಗಳು), ಪ್ರಮೇಯಂ (ಎಂಪೆರುಮಾನ್) ಮತ್ತು ಪ್ರಮಾತೃ (ವಿವಿಧ ಗ್ರಂಥಗಳ ಲೇಖಕರು) ವೈಭವಗಳನ್ನು ಮಾಡುತ್ತಿದ್ದಾಗ, ಎಲ್ಲಾ ಚೇತನಗಳು (ಸಂವೇದನಾಶೀಲ ಘಟಕಗಳು) ಉನ್ನತಿ ಹೊಂದುವಂತೆ ಮಾಡಿದರು ಮತ್ತು ನ೦ಪೆರುಮಾಳ್ ಇಷ್ಟಪಡುವಂತೆ ಅವರ ಜೀವನವನ್ನು ನಡೆಸಿದರು .ಆ ಸಮಯದಲ್ಲಿ ಶ್ರೀರಂಗಂ ಟರ್ಕಿಯ [ಮತ್ತು ನೆರೆಯ ದೇಶಗಳ] ಆಕ್ರಮಣಕಾರರ ವಶಕ್ಕೆ ಒಳಗಾಯಿತು.ಪೆರಿಯ ಪೆರುಮಾಳ್ ಮತ್ತು ನ೦ಪೆರುಮಾಳ್ಗೆ ಯಾವುದೇ ಹಾನಿಯಾಗದಂತೆ, ಕಲ್ಲಿನ ಗೋಡೆಯನ್ನು ನಿರ್ಮಿಸಲಾಯಿತು, ಪೆರಿಯ ಪೆರುಮಾಳ್ ಅನ್ನು ಮರೆಮಾಡಲಾಯಿತು ಮತ್ತು ಗೋಡೆಯ ಮುಂಭಾಗದಲ್ಲಿ ಪೆರುಮಾಳ್ ವಿಗ್ರಹವನ್ನು ಸ್ಥಾಪಿಸಲಾಯಿತು. ನ೦ಪೆರುಮಾಳ್ ಅನ್ನು ಅವರ ಉಭಯ ನಾಚ್ಚಿಮಾರ್ಗಳೊಡನೆ (ಶ್ರೀದೇವಿ ಮತ್ತು ಭೂದೇವಿ) ಜೊತೆಗೆ ಪಲ್ಲಕ್ಕಿಯಲ್ಲಿ ದೇವಸ್ಥಾನದಿಂದ ಹೊರಗೆ ಕರೆದೊಯ್ಯಲಾಯಿತು.ಪೆರುಮಾಳ್ ತಿರುಮೊಳಿ 8-6 ರಲ್ಲಿ ಹೇಳಿರುವಂತೆ “ಸುಟ್ಟ್ರಮೆಲ್ಲಾಮ್ ಪಿನ್ ತೊಡರ ತ್ತೊಲ್ ಕಾನಮ್ ಅಡೈಂದು” ( ಶ್ರೀರಾಮನು ಆತ್ಮೀಯರ ಜೊತೆಯಲ್ಲಿ ಅರಣ್ಯವನ್ನು ತಲುಪಿದನು) ಮತ್ತು ಪೆರಿಯ ತಿರುಮೊಳಿ 5-10 “ತಂಬಿಯೊಡು ತಾಂ ಒರುವರ್ ತಂ ತುಣೈವಿ ಕಾದಲ್ ತುಣೈಯಾಗ ” ಎಂದು ಹೇಳಲಾಗಿದೆ. (ಶ್ರೀರಾಮನು ತನ್ನ ಕಿರಿಯ ಸಹೋದರ ಮತ್ತು ಪ್ರೀತಿಯ ಪತ್ನಿಯೊಂದಿಗೆ ಹೋದರು ) ನ೦ಪೆರುಮಾಳ್ ತನ್ನ ಗೌಪ್ಯ ಪರಿವಾರದ ಜೊತೆಗೆ ದೇವಾಲಯದಿಂದ ವಲಸೆ ಹೋದರು . ಲಕ್ಷ್ಮಣನು ತನ್ನ ಬಿಲ್ಲು ಮತ್ತು ಕತ್ತಿಯೊಂದಿಗೆ ಶ್ರೀರಾಮನ ಸೇವೆಯನ್ನು ಮಾಡಲು ಶ್ರೀರಾಮನ ಹಿಂದೆ ಹೋದಂತೆ, ಪಿಳ್ಳೈ ಲೋಕಾಚಾರ್ಯರು ಸಹ ನ೦ಪೆರುಮಾಳ್ ಹಿಂದೆ ಹೋದರು, ತಿರುವಾಯ್ಮೊಳಿ 8-3-7 ಪಾಸುರಂನಲ್ಲಿ ಉಲ್ಲೇಖಿಸಿರುವಂತೆಯೇ “ಉರುವಾರ್ ಚಕ್ಕರಂ ಶಂಗು ಶುಮಂದು ಇಂಗು ಉಮ್ಮೋಡು ಒರು ಪಾಡು ಉಜ್ಹಲ್ವಾನ್ ಓರಡಿಯಾನ್…” (ಅಲ್ಲಿ ಒಬ್ಬ ಸೇವಕ (ಭಕ್ತ) ನಿಮ್ಮೊಂದಿಗೆ ನಡೆದುಕೊಂಡು , ನಿಮ್ಮ ಸುಂದರವಾದ, ದಿವ್ಯವಾದ ಚಕ್ಕರಂ ಮತ್ತು ಶಂಖವನ್ನು ಹಿಡಿದುಕೊಂಡಿದ್ದಾರೆ) .ಲೋಕಾಚಾರ್ಯರು ಮತ್ತು ಇತರ ಪೀಠಾಧಿಪತಿಗಳು (ನ೦ಪೆರುಮಾಳ್ ಮತ್ತು ನಾಚ್ಚಿಮಾರ್ಗಳ್ ಜೊತೆಯಲ್ಲಿ ಹೋದರು) ನ೦ಪೆರುಮಾಳ್ ಅವರನ್ನು ಸ್ತುತಿಸುತ್ತಲೇ ಇದ್ದರು. ಸಂಕ್ಷೇಪ ರಾಮಾಯಣದಲ್ಲಿ ಹೇಳಿರುವಂತೆ “ಪ್ರವಿಶ್ಯತು ಮಹಾರಣ್ಯಂ ರಾಮೋ ರಾಜೀವಲೋಚನಾ ” (ಕಮಲದ ಕಣ್ಣುಗಳ೦ತಿರುವ ಶ್ರೀ ರಾಮನು ಬೃಹತ್ ಕಾಡುಗಳನ್ನು ಪ್ರವೇಶಿಸಿದನು) ಮತ್ತು ಶ್ರೀ ರಾಮಾಯಣಂ ಅಯೋಧ್ಯಾ ಕಾಂಡಂ 2-119-22 ರಲ್ಲಿ “ವನಂ ಸಭಾರ್ಯ: ಪ್ರವಿವೇಶ ರಾಘವ: ಸಲಕ್ಷ್ಮಣ: ಸೂರ್ಯ ಇವ ಅಭ್ರ ಮಂಡಲಂ” (ಶ್ರೀರಾಮನು ತನ್ನ ಹೆಂಡತಿ ಸೀತಾ ಪಿರಾಟ್ಟಿ ಯೊಂದಿಗೆ ಕಾಡುಗಳನ್ನು ಪ್ರವೇಶಿಸಿದರು ಮತ್ತು ಲಕ್ಷ್ಮಣನೂ, ಸೂರ್ಯ ಮೇಘಗಳನ್ನು ಪ್ರವೇಶಿಸಿದ೦ತೆ ಅರಣ್ಯವನ್ನು ಪ್ರವೇಶಿಸಿದನು). ಅವರು ಸಿಂಹ, ಕತ್ತೆಕಿರುಬ, ಕಾಡುಹಂದಿ, ಕರಡಿ ಮುಂತಾದ ಅನೇಕ ಘೋರ ಪ್ರಾಣಿಗಳು ವಾಸಿಸುವ ಕಾಡುಗಳ ದಾರಿಯಲ್ಲಿ ಹೋದರು , ಅವುಗಳು ಘರ್ಜಿಸುವ ಮತ್ತು ಭಯಾನಕ ಶಬ್ದಗಳನ್ನು ಮಾಡುತ್ತಿದ್ದವು; ತಮ್ಮ ಕೈಯಲ್ಲಿ ಬಿಲ್ಲುಗಳನ್ನು ಹೊಂದಿರುವ ಬೇಟೆಗಾರರು ಅಲ್ಲಿ ತಿರುಗಾಡುತ್ತಿದ್ದರು. ದರೋಡೆಕೋರರು ಹೆಚ್ಚಾಗಿರುವ ಪ್ರದೇಶವನ್ನು ತಲುಪಿದಾಗ, ನ೦ಪೆರುಮಾಳ್ ಕರುಣೆಯಿಂದ ತನ್ನ ಎಲ್ಲಾ ಸಂಪತ್ತನ್ನು ಕೆಲವು ಕಳ್ಳರಿಗೆ ನೀಡಿದರು.ಅದನ್ನು ಕೇಳಿದ ಪಿಳ್ಳೈ ಲೋಕಾಚಾರ್ಯರು ಕನಿಕರದಿಂದ ಹಿಂದೆ ಸರಿದು ಅದೇ ಕಳ್ಳರ ಮೇಲೆ ಸಂಪೂರ್ಣ ಕರುಣೆಯನ್ನು ಧಾರೆಯೆರೆದು ಹೊರಟುಹೋದರು. ನಂತರ ಅಂತಹ ಅರಣ್ಯವಾಸಿಗಳು ಬಂದು ಪಿಳ್ಳೈ ಲೋಕಾಚಾರ್ಯರಿಗೆ ಶರಣಾಗಿ ಅವರಿಗೆ ಕೆಲವು ಕಾಣಿಕೆಗಳನ್ನು ನೀಡಿದರು.
ಲೋಕಾಚಾರ್ಯರು ತಿರುಮಲೈಯಾಳ್ವಾರರನ್ನು ಸಂಪ್ರದಾಯಕ್ಕೆ ಕರೆತರುವಂತೆ ಆದೇಶಿಸಿ ಶ್ರೀವೈಕುಂಠಂಗೆ ತೆರಳುತ್ತಾರೆ.
ಅವರು ನಂಪೆರುಮಾಳ್ ಜೊತೆಗೆ ಮದುರೈ ಬಳಿಯ ಜ್ಯೋತಿಷ್ಕುಡಿ (ಇಂದಿನ ಕೊಡಿಕ್ಕುಲಂ) ಎಂಬ ಗ್ರಾಮವನ್ನು ತಲುಪಿದರು ಮತ್ತು ಅಲ್ಲಿ ತಮ್ಮ ನಿವಾಸವನ್ನು ಸ್ಥಾಪಿಸಿದರು. ಪಿಳ್ಳೈ ಲೋಕಾಚಾರ್ಯರು ಆಯಾಸದಿಂದ ಅನಾರೋಗ್ಯದಿಂದ ಮಲಗಿದ್ದರು. ಅವರ ಶಿಷ್ಯರು ದುಃಖಿತರಾದರು ಮತ್ತು ಯಾರ ಬಳಿ ಆಶ್ರಯ ಪಡೆಯಬೇಕೆಂದು ಕೇಳಿದರು.
ಪಿಳ್ಳೈ ಲೋಕಾಚಾರ್ಯರ ದಿವ್ಯ ಹೃದಯವು ತಿರುಮಲೈ ಆಳ್ವಾರರನ್ನು ಕುರಿತು ಚಿಂತಿಸಿತು ಮತ್ತು ಅವರು ದೊಡ್ಡ ಧ್ವನಿಯಲ್ಲಿ ತಿರುಮಲೈ ಆಳ್ವಾರರು ಲೌಕಿಕ (ಸಂಸಾರಕ್ಕೆ ಸಂಬಂಧಿಸಿದ) ಮತ್ತು ವೈದಿಕ ( ವೇದಕ್ಕೆ ಸಂಬಂಧಿಸಿದ) ಎರಡೂ ಅಂಶಗಳಲ್ಲಿ ಪರಿಣತರಾಗಿದ್ದಾರೆ ಮತ್ತು ಅವರು ಅಂದಿನ ಮದುರೈ ಸಾಮ್ರಾಜ್ಯದ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.ಅವರು ತಮ್ಮ ರಾಜಪ್ರಭುತ್ವದ ಕರ್ತವ್ಯಗಳನ್ನು ತ್ಯಜಿಸುವಂತೆ ಮತ್ತು ದರ್ಶನದ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತೆ ಹೇಳಿದರು. ಅವರಿಗೆ ಎಲ್ಲಾ ರಹಸ್ಯ ಗ್ರಂಥಗಳನ್ನು (ನಿಗೂಢ ಕೃತಿಗಳು) ಮತ್ತು ಅದರ ಅರ್ಥಗಳನ್ನು ಕುರಕುಲೋತ್ತಮ ಧಾಸ ನಾಯನಾರನ್ನು ಕಲಿಸಲು ; ತಿರುವಾಯ್‍ಮೊೞಿಯನ್ನು ಕಲಿಸಲು ತಿರುಕ್ಕಣ್ಣಂಗುಡಿಪ್ಪಿಳ್ಳೈ ಮತ್ತು ತಿರುಪುಟ್ಕುೞಿ ಜೀಯರಯನ್ನು ; ನಾಲುರ್ಪ್ಪಿಳ್ಳೈ ಅವರನ್ನು ಮುವಾಯಿರಪಡಿ ( ತಿರುಪ್ಪಾವೈ) ಕಲಿಸಲು ಹಾಗು ವಿಲಾನ್ಜೋಲೈಪ್ಪಿಳ್ಳೈ ಅವರಿಗೆ ಸಪ್ತಕಾಧೈ ಮತ್ತು ಇತರ ವಿಶಿಷ್ಟ ಅರ್ಥಗಳನ್ನು ಕಲಿಸಲು ಕೇಳಿಕೊಂಡರು .ಆನಿ (ಮಿಥುನಂ) ಮಾಸದ ಅಮವಾಸ್ಯೆಯ ನಂತರದ ದ್ವಾದಶಿ (12 ನೇ) ದಿನದಂದು ಅವರು ತಿರುನಾಡು (ಶ್ರೀವೈಕುಂಠಂ) ಗೆ ಹೊರಡಲು ನಿರ್ಧರಿಸಿದರು.ತನ್ನ ಕೊನೆಯ ದಿನಗಳವರೆಗೂ ತಿರುವನಂತಪುರಂನಲ್ಲಿ ನೆಲೆಸಲು ವಿಲಂಜೊಲೈಪ್ಪಿಳ್ಳೈ ಅವರನ್ನು ಕೇಳಿಕೊಂಡರು. ಅವರು ತಮ್ಮ ಆಚಾರ್ಯರು ಮತ್ತು ತಂದೆಯಾದ ವಡಕ್ಕುತ್ ತಿರುವೀದಿ ಪಿಳ್ಳೈ ಅವರ ದೈವಿಕ ಪಾದಗಳನ್ನು ನೆನಪಿಸಿಕೊಂಡು ತಿರುನಾಡುಗೆ ತೆರಳಿದರು. ಅವರ ಶಿಷ್ಯರೆಲ್ಲರೂ ದುಃಖದಲ್ಲಿ ಮುಳುಗಿದ್ದರೂ, ತಮ್ಮನ್ನು ತಾವು ಸಾಂತ್ವನಗೊಳಿಸಿ ಕೊಂಡು, ಅವರಿಗೆ ದಿವ್ಯವಾದ ಪರಿಯಟ್ಟಂ (ತಲೆಗೆ ಧರಿಸಿದ ಬಟ್ಟೆ), ನ೦ಪೆರುಮಾಳ್‌ಧರಿಸಿದ ದಿವ್ಯ ಮಾಲೆಗಳನ್ನು ತೊಡಿಸಿ ಅಂತಿಮ ವಿಧಿವಿಧಾನಗಳನ್ನು ನಡೆಸಿದರು.
ಪಿಳ್ಳೈ ಲೋಕಾಚಾರ್ಯರ ದಿವ್ಯ ನಕ್ಷತ್ರವು ಐಪ್ಪಸಿ (ತುಲಾ) ತಮಿಳು ತಿಂಗಳಿನ ಶ್ರಾವಣ. ಅವರ ತನಿಯನ್:
ಲೋಕಾಚಾರ್ಯಾಯ ಗುರವೇ ಕೃಷ್ಣ ಪಾದಸ್ಯ ಸೂನವೇ
ಸಂಸಾರಿ ಭೋಗಿ ಸಂಧಷ್ಟ ಜೀವಜೀವಾತವೇ ನಮ:
(ವಡಕ್ಕು ತಿರುವೀದಿಪ್ಪಿಳ್ಳೈ ಅವರ ಪುತ್ರ ಮತ್ತು ಸಂಸಾರ ಎಂಬ ವಿಷಕಾರಿ ಹಾವಿನ ಕಡಿತಕ್ಕೆ ಪ್ರತಿವಿಷವಾಗಿರುವ ಪಿಳ್ಳೈ ಲೋಕಾಚಾರ್ಯರಲ್ಲಿ ನಾನು ಆಶ್ರಯ ಪಡೆಯುತ್ತೇನೆ.)
ಅನುವಾದ – ಅಡಿಯೇನ್ ಸುಭದ್ರಾ ರಾಮಾನುಜ ದಾಸಿ
ಪುರಾವೆ ಓದುವಿಕೆ -ಅಡಿಯೇನ್ ಕೊದೈ ರಾಮಾನುಜ ದಾಸಿ
ಮೂಲ : https://granthams.koyil.org/2021/07/29/yathindhra-pravana-prabhavam-14-english/
ಆರ್ಕೈವ್ ಮಾಡಲಾಗಿದೆ – https://granthams.koyil.org
ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org
1 thought on “ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೧೪”