ಆಳ್ವಾರ್ ತಿರುನಗರಿಯ ವೈಭವ – ಮಣವಾಳ ಮಾಮುನಿಗಳ ದಿವ್ಯ ಚರಿತ್ರೆ ಮತ್ತು ವೈಭವ

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ:

ಆಳ್ವಾರ್ ತಿರುನಗರಿಯ ವೈಭವ

<< ಹಿಂದಿನ ಲೇಖನವನ್ನು

ತಿರುವಾಯ್ಮೊಳಿ ಪಿಳ್ಳೈ ಅವರು ಆಳ್ವಾರ್ ತಿರುನಗರಿಯನ್ನು ಹೇಗೆ ಪುನರ್ ನಿರ್ಮಿಸಿ ಆದಿನಾಥರ್, ಆಳ್ವಾರ್ ಮತ್ತು ಎಮ್ಬೆರುಮಾನಾರ್‌ಗೆ ದೈನಂದಿನ ಕೈಂಕರ್ಯಗಳ (ಸೇವೆಗಳು) ವ್ಯವಸ್ಥೆ ಮಾಡಿದ್ದನ್ನು ನಾವು ಈಗಾಗಲೇ ಹಿಂದಿನ ಅಧ್ಯಾಯದಲ್ಲಿ ಓದಿದ್ದೇವೆ. ಆಳ್ವಾರ್ ತಿರುನಗರಿಯಲ್ಲಿ ಉಳಿದುಕೊಂಡು, ತಿರುವಾಯ್ಮೊಳಿ ಪಿಳ್ಳೈಯವರು ನಮ್ಮ ಸಂಪ್ರದಾಯವನ್ನು (ಶ್ರೀವೈಷ್ಣವ ಪರಂಪರೆ) ಸರಿಯಾಗಿ ನಿರ್ವಹಿಸುತ್ತಿದ್ದರು.

ಆ ಸಮಯದಲ್ಲಿ ಆಳ್ವಾರ್ ತಿರುನಗರಿಯಲ್ಲಿ ಐಪ್ಪಶಿ ತಿರುಮೂಲದ (ತುಲಾ ಮಾಸದ ಮೂಲ ನಕ್ಷತ್ರದ ದಿನ) ಪವಿತ್ರ ದಿನದಂದು ,ಆದಿಶೇಷಾಂಶರಾದ ಭಗವದ್ರಾಮಾನುಜರೇ ತಿರುನಾವೀರುಡೈಯ ಪಿರಾನ್ ಅವರ ಮಗನಾಗಿ ಅವತರಿಸಿದರು.ಆ ಮಗುವಿನಿಂದ ಹೊರ ಹೊಮ್ಮುವ ಭವ್ಯವಾದ ಕಾಂತಿಯನ್ನು ನೋಡಿ, ಅವರು ಮಗುವಿಗೆ ಶ್ರೀ ರಂಗನಾಥನ ದಿವ್ಯನಾಮವಾದ ಅಳಗಿಯ ಮಣವಾಳಪ್ಪೆರುಮಾಳ್ ನಾಯನಾರ್ ಎಂದು ಹೆಸರಿಟ್ಟನು. ಚಿಕ್ಕ ವಯಸ್ಸಿನಲ್ಲಿ, ಅಳಗಿಯ ಮಣವಾಳಪ್ಪೆರುಮಾಳ್ ನಾಯನಾರ್ ತಮ್ಮ ಮಾತಾಮಹರ (ತಾಯಿಯ ತಂದೆ) ಸ್ಥಳವಾದ ಸಿಕ್ಕಿಲ್ ಕಿಡಾರಂ ನಲ್ಲಿ ಬೆಳೆದರು. ಅವರ ಜೀವನದ ಸೂಕ್ತ ಹಂತಗಳಲ್ಲಿ, ವೇದಗಳಲ್ಲಿ ದೃಢಪಡಿಸಿದ ವಿವಿಧ ವೈದಿಕ ಸಂಸ್ಕಾರವನ್ನು ಪಡೆದು,ತಮ್ಮ ತೀರ್ಥರೂಪರಾದ ತಂದೆಯಿಂದ ಶಾಸ್ತ್ರಗಳನ್ನು ಕಲಿತುಕೊಂಡರು. ವಿವಾಹದ ನಂತರವೂ ಸಹ, ತನ್ನ ತಂದೆಯಿಂದ ನಾಲಾಯಿರ ದಿವ್ಯ ಪ್ರಬಂಧಗಳು (ಅರುಳಿಚ್ಚೇಯಲ್) ಮತ್ತು ರಹಸ್ಯಾರ್ಥಗಳನ್ನು ಕಲಿತು, ಭಕ್ತಿ,ಜ್ಞಾನ ಮತ್ತು ವೈರಾಗ್ಯದ ನಿಧಿಯಾಗಿ ಉಳಿದರು.
ಅವರ ತಂದೆ ಪರಮಪದವನ್ನು ಸೇರಿದ ನಂತರ, ಅಳಗಿಯ ಮಣವಾಳಪ್ಪೆರುಮಾಳ್ ನಾಯನಾರ್, ತಿರುವಾಯ್ಮೊಳಿ ಪಿಳ್ಳೈ ಅವರ ಮಹಿಮೆಯನ್ನು ಕೇಳಿ, ಆಳ್ವಾರ್ ತಿರುನಗರಿಗೆ ತಲುಪಿದರು ಮತ್ತು ತಿರುವಾಯ್ಮೊಳಿ ಪಿಳ್ಳೈರವರ ದಿವ್ಯ ಪಾದಗಳನ್ನು ತನ್ನ ಆಶ್ರಯವನ್ನಾಗಿ ಸ್ವೀಕರಿಸಿದರು. ನಾಯನಾರರ ಗುಣಗಳನ್ನು ನೋಡಿ ತಿರುವಾಯ್ಮೊಳಿ ಪಿಳ್ಳೈ ಸಂತೋಷಪಟ್ಟು, ಸಂಪ್ರದಾಯದ (ವಿಶಿಷ್ಟಾದ್ವೈತ) ಅರ್ಥಗಳನ್ನು ನಾಯನಾರರಿಗೆ ತಿಳಿಸಿದರು. ಎಮ್ಬೆರುಮಾನಾರರೇ ಆಶ್ರಯ ಎಂದು ನಾಯನಾರರಿಗೆ ತೋರಿಸಿ, ಭಗವದ್ರಾಮಾನುಜರ ಸನ್ನಿಧಿಯಲ್ಲಿ ದೈನಂದಿನ ಕೈಂಕರ್ಯ ಮಾಡಲು ನಿಯೋಜಿಸಿದರು. ನಾಯನಾರರು ಕೂಡ, ರಾಮಾನುಜರ ಮೇಲಿನ ಅಪಾರ ಪ್ರೀತಿಯಿಂದ ಕೈಂಕರ್ಯವನ್ನು ಮಾಡಿ, ಯತೀoದ್ರ ಪ್ರವಣ (ರಾಮಾನುಜಾಚಾರ್ಯರ ಮೇಲೆ ಅಪಾರ ಪ್ರೀತಿ ಇರುವವರು) ಎಂಬ ಹೆಸರನ್ನು ಪಡೆದುಕೊಂಡರು.

ತಿರುವಾಯ್ಮೋಳಿ ಪಿಳ್ಳೈ ತಮ್ಮ ಜೀವನದ ಕೊನೆಯ ದಿವಸಗಳಲ್ಲಿ “ಯಾರು ಈ ಸಂಪ್ರದಾಯವನ್ನು ಮುನ್ನೆಡೆಸುತ್ತಾರೆ?” ಎಂದು ಯೋಚಿಸಿ ದುಃಖ ಪಡುತ್ತಿದ್ದರು. ಆಗ ನಾಯನಾರ್ ಅವರಿಗೆ “ಅಡಿಯೇನ್ ತಮ್ಮ ಆಜ್ಞೆಯಂತೆ ಮಾಡುತ್ತೇನೆ” ಎಂದು ಹೇಳಿದರು. ತಿರುವಾಯ್ಮೋಳಿ ಪಿಳ್ಳೈ ಅವರು ಹೇಳಿದರು “ಮಾತುಗಳಿಂದ ಮಾತ್ರ ಸಾಕಾಗುವುದಿಲ್ಲ. ನೀವು ಪ್ರಮಾಣ ಮಾಡಬೇಕು” ಎಂದ ನಂತರ ನಾಯನಾರರು ಅದೇ ರೀತಿ ಮಾಡಿದರು. ತಿರುವಾಯ್ಮೋಳಿ ಪಿಳ್ಳೈ ಅವರು ಸಂತೋಷದಿಂದ ಅದನ್ನು ಸ್ವೀಕರಿಸಿದರು. ನಂತರ ಅವರು ನಾಯನಾರರಿಗೆ “ಸಂಸ್ಕೃತ ಶಾಸ್ತ್ರದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಬೇಡಿ; ತಿರುವಾಯ್ಮೊಳಿ ಮತ್ತು ಇತರ ಪ್ರಬಂಧಗಳನ್ನು ಚೆನ್ನಾಗಿ ಪ್ರಚಾರ ಮಾಡಿ” ಎಂದು ಆದೇಶಿಸಿದರು. ತಿರುವಾಯ್ಮೊಳಿ ಪಿಳ್ಳೈಯವರು ಶ್ರೀ ವೈಕುಂಠದ ತಿರುನಾಡಿಗೆ (ದಿವ್ಯ ಧಾಮ) ಏರಿದರು. ನಾಯನಾರ್ ಅವರು ಅಂತಿಮ ವಿಧಿ ವಿಧಾನಗಳನ್ನು ಶಾಸ್ತ್ರೋಕ್ತವಾಗಿ ನಡೆಸಿದರು.

ಆ ಸಮಯದಲ್ಲಿ, ವಾಣಮಾಮಲೈಯ ದಿವ್ಯದೇಶಕ್ಕೆ ಸೇರಿದ ಅಳಗಿಯ ವರದರ್, ನಾಯನಾರರ ಶಿಷ್ಯರಾದರು. ಅವರು ಸನ್ಯಾಸ ಆಶ್ರಮವನ್ನು ಸ್ವೀಕರಿಸಿ, ವಾಣಮಾಮಲೈ ಮಠದ ಜೀಯರಾದರು. ನಾಯನಾರರ ತಿರುವಡಿ ಸಂಬಂಧವನ್ನು ಬಿಡದೆ, ಕೈಂಕರ್ಯವನ್ನು ಮಾಡಿದರು. ಅವರ ನಂತರ, ಇನ್ನೂ ಅನೇಕ ಜನರು ನಾಯನಾರರ ಶಿಷ್ಯರಾದರು.

ನಾಯನಾರ್, ತಮ್ಮ ತಿರುವುಳ್ಳಂ(ಅಂತರಂಗ) ನಲ್ಲಿ ಶ್ರೀರಂಗದಿಂದ ಸಂಪ್ರದಾಯವನ್ನು ಬೆಳೆಸಬೇಕೆಂದು ಯೋಚಿಸಿ, ಆಳ್ವಾರ್ ತಿರುನಗರಿಯನ್ನು ಬಿಡಲು ಆಳ್ವಾರರ ಅನುಜ್ಞೆಯನ್ನು ಪಡೆದರು.ಆಳ್ವಾರರ ಒಪ್ಪಿಗೆಯೊಂದಿಗೆ, ಅವರು ಶ್ರೀರಂಗವನ್ನು ತಲುಪಿದರು. ಶ್ರೀರಂಗದ ಮುಖ್ಯ ದೇವತೆಯಾದ ಪೆರಿಯ ಪೆರುಮಾಳ್, ನಾಯನಾರರ ಆಗಮನವನ್ನು ಸಂತೋಷದಿಂದ ಉತ್ಸವದಂತೆ ಆಚರಿಸಿ, ಶ್ರೀರಂಗದಲ್ಲಿ ಶಾಶ್ವತವಾಗಿ ನೆಲೆಯೂರಲು ನಾಯನಾರರಿಗೆ ಆದೇಶಿಸಿದರು.ಶ್ರೀರಂಗದಲ್ಲಿಯೇ ನೆಲೆಯಾದ ನಾಯನಾರರು, ಕಳೆದುಹೋಗಿದ್ದ ರಹಸ್ಯ ಗ್ರಂಥಗಳನ್ನು ಮರಳಿ ತಂದು, ಹಸ್ತಪ್ರತಿಗಳನ್ನು ಸರಿಯಾಗಿ ಮಾಡಿಸಿ, ಕಾಲಕ್ಷೇಪಗಳನ್ನು (ಪ್ರವಚನಗಳು) ನಡೆಸಿದರು. ನಂಪಿಳ್ಳೆಯವರ ಕೃಪೆಯಿಂದ ರಚಿಸಲ್ಪಟ್ಟ ತಿರುವಾಯ್ಮೊಳಿಯ ಈಡು ವ್ಯಾಖ್ಯಾನದಲ್ಲಿ ಪರಿಣತರಾಗಿರುವ ಅವರಿಗೆ, ಈಡು ಪೆರುಕ್ಕರ್ (ಈಡನ್ನು ಪೋಷಿಸಿ ಅದರ ಅರ್ಥಗಳನ್ನು ಹಲವು ಪಟ್ಟು ಹೆಚ್ಚಿಸಿದವರು) ಎಂಬ ದಿವ್ಯನಾಮವನ್ನು ನೀಡಲಾಯಿತು.

ಶ್ರೀನಿವಾಸನಿಗೆ ಮಂಗಳಾಶಾಸನ ಮಾಡುವ ಸಲುವಾಗಿ , ಅವರ ಮಾರ್ಗಮಧ್ಯದಲ್ಲಿರುವ ಹಲವು ದಿವ್ಯ ದೇಶಗಳಿಗೆ ತೆರಳಿ, ಅಲ್ಲಿರುವ ಭಗವಂತನಿಗೆ ಮಂಗಳಾಶಾಸನವನ್ನು ನಡೆಸಿದರು. ಅವರು ತಿರುಮಲೆಯನ್ನು ತಲುಪಿ, ತಿರುವೆಂಗಡಮುಡಯಾನನ ಮತ್ತು ಅಲ್ಲಿನ ಅನೇಕ ಗೌರವಾನ್ವಿತ ಜನರ ಪ್ರೀತಿ ಮತ್ತು ವಾತ್ಸಲ್ಯಕ್ಕೆ ಪಾತ್ರರಾದರು. ನಂತರ ಅವರು ಕಾಂಚೀಪುರದ ದೇವಪ್ಪೆರುಮಾಳಿನ ದೇವಾಲಯವಾದ ಪೆರುಮಾಳ್ ಕೋಯಿಲಿಗೆ ತೆರಳಿ, ದೇವಪ್ಪೆರುಮಾಳನಿಗೆ ಮಂಗಳಾಸಾಸನವನ್ನು ನಡೆಸಿದರು. ಅವರು ನಂತರ ಶ್ರೀಪೆರಂಬುದೂರಿಗೆ ತೆರಳಿ, ಎಮ್ಬೆರುಮಾನಾರರಿಗೆ (ಭಗವದ್ರಾಮಾನುಜರು) ಮಂಗಳಾಶಾಸನವನ್ನು ನಡೆಸಿದರು. ಅವರು ಕಾಂಚೀಪುರದ ತಿರುವೆಕ್ಕಕ್ಕೆ ತೆರಳಿ ಕಿಡಂಬಿ ನಾಯನಾರ್ (ಕಿಡಂಬಿ ಆಚ್ಛಾನ್ ಅವರ ವಂಶಸ್ತರು ) ಅವರಿಂದ ಶ್ರೀಭಾಷ್ಯ ಕಾಲಕ್ಷೇಪದಲ್ಲಿ (ಉಪನ್ಯಾಸ ಮತ್ತು ಗ್ರಂಥಗಳನ್ನು ಕೇಳುವುದು) ತೊಡಗಿದರು. ನಾಯನಾರರ ದಿವ್ಯ ತೇಜಸ್ಸು ಮತ್ತು ಜ್ಞಾನವನ್ನು ನೋಡಿದ ಕಿಡಂಬಿ ಆಚ್ಚಾನ್ ಕಂಡು ತಮ್ಮ ನಿಜವಾದ ಸ್ವರೂಪವನ್ನು ತೋರಿಸಲು ವಿನಂತಿಸಿದರು. ಆಗ ನಾಯನಾರರು ತಮ್ಮ ಆದಿಶೇಷ ರೂಪವನ್ನು ತೋರಿಸಿದರು.ನಂತರ ಅವರು ಶ್ರೀರಂಗಕ್ಕೆ ಮರಳಿ, ಶ್ರೀವೈಷ್ಣವ ಸಂಪ್ರದಾಯವನ್ನು ಗೌರವಾನ್ವಿತ ರೀತಿಯಲ್ಲಿ ಪೋಷಿಸಿ ಬೆಳೆಸಿದರು.

ಅವರು ಒಮ್ಮೆ ಶ್ರೀರಂಗದಲ್ಲಿ ಕೈಂಕರ್ಯ ಮಾಡುತ್ತಿದ್ದಾಗ, ಅವರ ಕುಟುಂಬದಲ್ಲಿ ಒಂದು ಘಟನೆ ನಡೆಯಿತು. ಅದರಿಂದಾಗಿ ಅವರು ಅಶೌಚವನ್ನು ಆಚರಿಸಬೇಕಾಯಿತು. ಅವರು ತಮ್ಮ ತಿರುವುಳ್ಳಂ (ಮನಸ್ಸಿನಲ್ಲಿ) ನಲ್ಲಿ ಸನ್ಯಾಸ ಆಶ್ರಮವನ್ನು ಸ್ವೀಕರಿಸಬೇಕು ಎಂದು ನಿರ್ಧರಿಸಿದರು. ಅವರು ತಮ್ಮ ಯೌವನದ ದಿನಗಳಲ್ಲಿ ತನ್ನೊಂದಿಗೆ ಓದಿದ್ದ ಮತ್ತು ಈಗಾಗಲೇ ಸನ್ಯಾಸಿಯಾಗಿದ್ದ ಶ್ರೀ ಶಠಕೋಪ ಜೀಯರ ಬಳಿಗೆ ಹೋಗಿ ಅವರಿಂದ ಸನ್ಯಾಸ ದೀಕ್ಷೆಯನ್ನು ಪಡೆದರು. ಅವರು ನಂತರ ಪೆರಿಯ ಪೆರುಮಾಳ್ ದರ್ಶನಕ್ಕೆ ಹೋಗಿ ಪೂಜೆ ಸಲ್ಲಿಸಿದರು. ಪೆರಿಯ ಪೆರುಮಾಳ್ ಅವರಿಗೆ ಅಳಗಿಯ ಮಣವಾಳ ಮಾಮುನಿಗಳೆಂಬ ಪಟ್ಟವನ್ನು ನೀಡಿ, ಪಲ್ಲವರಾಯ ಮಠವನ್ನು (ದೇವಾಲಯದ ಸಮೀಪದ ಒಂದು ಮನೆ) ಉಪಯೋಗಕ್ಕೆ ನೀಡಿ, ಎಲ್ಲಾ ರೀತಿಯಿಂದಲೂ ಗೌರವಿಸಿದರು. ವಾಣಮಾಮಲೈ ಜೀಯರ ಸಹಾಯದಿಂದ, ಮಾಮುನಿಗಳು ಪಲ್ಲವರಾಯ ಮಠವನ್ನು ಪುನರ್ ನಿರ್ಮಿಸಿ, ಅಲ್ಲಿಂದ ತಮ್ಮ ಕಾಲಕ್ಷೇಪಗಳನ್ನು (ಪ್ರವಚನಗಳನ್ನು) ನಡೆಸಲು ಒಂದು ತಿರುಮಲೈ ಆಳ್ವಾರರ ಕೂಟವನ್ನು ನಿರ್ಮಿಸಿದರು.

ಅವರು ಆ ಮಠದಲ್ಲೇ ಉಳಿದುಕೊಂಡು ಸಂಪ್ರದಾಯವನ್ನು ಗಣನೀಯವಾಗಿ ಬೆಳೆಸಿದರು. ಶ್ರೀರಂಗದಿಂದ ಮತ್ತು ಇತರ ಸ್ಥಳಗಳಿಂದಲೂ ಅನೇಕ ಗಣ್ಯರು ಮತ್ತು ವಿದ್ವಾಂಸರು ಅವರ ಬಳಿಗೆ ಬಂದು, ಪಂಚಸಂಸ್ಕಾರವನ್ನು (ಪಂಚಸಂಸ್ಕಾರ- ಎಮ್ಬೆರುಮಾನಿಗೆ ಶರಣಾಗುವ ಉದ್ದೇಶದಿಂದ ಆಚಾರ್ಯರ ಬಳಿಗೆ ಹೋಗಿ ಐದು ವಿಧಿಗಳನ್ನು ಪೂರೈಸುವ ಸಮಾರಂಭ) ಪಡೆದು ಅವರ ಶಿಷ್ಯರಾದರು.

ಮಾಮುನಿಗಳು ಸಂಸ್ಕೃತ ಪ್ರಬಂಧಗಳು, ತಮಿಳು ಪ್ರಬಂಧಗಳು ಮತ್ತು ರಹಸ್ಯ ಗ್ರಂಥಗಳಿಗೆ ಟೀಕೆಗಳನ್ನು ರಚಿಸಿದರು. ಅನೇಕ ವರ್ಷಗಳಿಂದ ನಿಂತು ಹೋಗಿದ್ದ ಕೈಂಕರ್ಯಗಳು ಮತ್ತು ಸ್ಥಳತ್ತಾರ್ ಗೌರವಗಳನ್ನು (ಶ್ರೀರಂಗಕ್ಕೆ ಸೇರಿದ ನಿಗದಿಪಡಿಸಿದ ಜನರಿಗೆ ದೇವಾಲಯ ಗೌರವಗಳು) ಪುನಃ ಸ್ಥಾಪಿಸಿದರು. ತಮ್ಮ ಶಿಷ್ಯರ ಮೂಲಕ ದೇಶದ ವಿವಿಧ ದಿವ್ಯ ಕ್ಷೇತ್ರಗಳಲ್ಲಿ ಕೈಂಕರ್ಯಗಳು ನಡೆಯುವಂತೆ ಮಾಡಿದರು. ವಾಣಮಾಮಲೈ ಜೀಯರನ್ನು ದೇಶದ ವಿವಿಧ ಸ್ಥಳಗಳಿಗೆ ಯಾತ್ರೆ ಕೈಗೊಳ್ಳುವಂತೆ ಕೇಳುವ ಮೂಲಕ, ಭಾರತ ದೇಶದಾದ್ಯಂತ ಶ್ರೀವೈಷ್ಣವ ಸಂಪ್ರದಾಯವನ್ನು ಸ್ಥಾಪಿಸಿದರು. ಮಾಮುನಿಗಳ ಹಿರಿಮೆಗೆ ಕಿರೀಟಪ್ರಾಯವೆನ್ನುವಂತೆ, ಪೆರಿಯ ಪೆರುಮಾಳಾದ ಶ್ರೀರಂಗನಾಥನು ಈಡು ವ್ಯಾಖ್ಯಾನದ ಕಾಲಕ್ಷೇಪ ನೀಡುವಂತೆ ಮಾಮುನಿಗಳಿಗೆ ಆದೇಶಿಸಿದನು (ವಡಕ್ಕುತ್ತಿರುವೀದಿ ಪಿಳ್ಳೈ ಅವರು ಅನುಗ್ರಹಿಸಿದ ತಿರುವಾಯ್ಮೋಳಿಯ ಈಡು ವ್ಯಾಖ್ಯಾನ), ಹತ್ತು ತಿಂಗಳ ಕಾಲ ಶ್ರೀರಂಗಂ ದೇವಸ್ಥಾನದಲ್ಲಿ ಅವನ ಎಲ್ಲಾ ಉತ್ಸವಾದಿಗಳನ್ನು ನಿಲ್ಲಿಸಿದರು.ಮಾಮುನಿಗಳೂ ಸಹ ಭಗವದಾಜ್ಞೆಯ ಪ್ರಕಾರ , ತಿರುವಾಯ್ಮೋಳಿಯ ಈಡು ವ್ಯಾಖ್ಯಾನದ ಮೇಲೆ ಕಾಲಕ್ಷೇಪವನ್ನು ನೀಡಿದರು. ಭಗವಂತನು ಮತ್ತು ತನ್ನ ದಿವ್ಯ ಮಹಿಷಿಯರಾದ ಶ್ರೀದೇವಿ ಭೂದೇವಿಯರು,ಆಳ್ವಾರರು ಮತ್ತು ಆಚಾರ್ಯರು ಸಭೆಯಲ್ಲಿ ಆಸೀನರಾಗಿ ಕಾಲಕ್ಷೇಪವನ್ನು ಕೇಳಲು, ಶ್ರೀರಂಗದ ನಿವಾಸಿಗಳಿಗೆ ತಿರುವಾಯ್ಮೊಳಿ ಪ್ರಬಂಧವನ್ನು ಅರ್ಥಮಾಡಿಕೊಳ್ಳಲು ಮತ್ತು ಆನಂದಿಸಲು ಸುಲಭ ರೀತಿಯಲ್ಲಿ ಅರ್ಥಗಳನ್ನು ಸ್ಪಷ್ಟವಾಗಿ ವಿವರಿಸಿದರು.ಕಾಲಕ್ಷೇಪದ ಕೊನೆಯ ದಿನ, ಆನಿ ಮಾಸದ ಮೂಲ ನಕ್ಷತ್ರದಂದು, ಪೆರಿಯ ಪೆರುಮಾಳ್ ದೇವಾಲಯದ ಅರ್ಚಕರ (ಸನ್ನಿಧಿ ಪೂಜಾರಿ) ಮಗನ ರೂಪವನ್ನು ತಾಳಿ , ದಿವ್ಯವಾದ ಈ ತನಿಯನ್ ನನ್ನು ಅರ್ಪಿಸಿದನು.

ಶ್ರೀಶೈಲೇಶ ದಯಾಪಾತ್ರಮ್ ಧೀಭಕ್ತ್ಯಾದಿ ಗುಣಾರ್ಣವಮ್ |
ಯತೀಂದ್ರ ಪ್ರವಣವಂನ್ದೇ ರಮ್ಯ ಜಾಮಾತರಂ ಮುನಿಮ್ ||

ಮಾಮುನಿಗಳನ್ನು ಅವನ ಆಚಾರ್ಯರಾಗಿ ಸ್ವೀಕರಿಸಿ, ದಿವ್ಯ ತನಿಯನ್ ನನ್ನು ಅರ್ಪಿಸಿದನು. ಎಲ್ಲೆಡೆ ಸೇವಾಕಾಲ (ನಾಲಾಯಿರ ದಿವ್ಯ ಪ್ರಬಂಧ ಪಾರಾಯಣ) ಪ್ರಾರಂಭವಾಗುವ ಮೊದಲು ಈ ತನಿಯನ್ ನನ್ನು ಪಠಿಸಬೇಕು ಎಂದು ಆದೇಶಿಸಿದನು.

ಅಷ್ಟು ಮಹತ್ವದ ಸಾಧನೆಗಳೊಂದಿಗೆ, ವಯಸ್ಸಾದ ಕಾರಣದಿಂದ ಮಾನವಾಳ ಮಾಮುನಿಗಳು ತಿರುನಾಡಿಗೆ (ಮೋಕ್ಷಕ್ಕೆ) ಏರಿದರು. ಮಾಮುನಿಗಳ ಅಂತಿಮ ಸಂಸ್ಕಾರಗಳನ್ನು ಅವರ ಶಿಷ್ಯರು ಅದ್ಭುತ ರೀತಿಯಲ್ಲಿ ನಡೆಸಿದರು. ಈಗ ನಾವು ಮಾಮುನಿಗಳ ಕೆಲವು ವಿಶೇಷಗಳನ್ನು ಸಂಕ್ಷಿಪ್ತವಾಗಿ ನೋಡೋಣ:

ಶಿಷ್ಯರು:

ಅಷ್ಟ ದಿಗ್ಗಜರು – ಪೊನ್ನಡಿಕ್ಕಾಲ್ ಜೀಯರ್, ಕೋಯಿಲ್ ಅಣ್ಣನ್, ಪತಂಗಿ ಪರವಸ್ತು ಪಟ್ಟರ್ಪಿರಾನ್ ಜೀಯರ್, ತಿರುವೇಂಕಟ ಜೀಯರ್, ಎರುಂಬಿಯಪ್ಪಾ, ಪ್ರತಿವಾದಿ ಭಯಂಕರಂ ಅಣ್ಣನ್, ಅಪ್ಪಿಳ್ಳೈ, ಅಪ್ಪಿಳ್ಳಾರ್.

ನವ ರತ್ನಗಳು – ಸೇನೈ ಮುದಲಿಯಾಂಡಾನ್ ನಾಯನಾರ್, ಶಠಕೋಪ ದಾಸರ್ (ನಾಲೂರ್ ಸಿಱ್ಱಾತ್ತಾನ್), ಕನ್ಧಾಡೈ ಪೋರೇಱ್ಱು ನಾಯನ್, ಯೇಟ್ಟುರ್ ಸಿನ್ಗರಾಚಾಯರ್, ಕನ್ಧಾಡೈ ಅಣ್ಣಪ್ಪನ್, ಕನ್ಧಾಡೈ ತಿರುಕ್ಕೋಪುರತ್ತು ನಾಯನಾರ್, ಕನ್ಧಾಡೈ ನಾರಣಪ್ಪೈ, ಕನ್ಧಾಡೈ ತೋಳಪರಪ್ಪೈ, ಕನ್ಧಾಡೈ ಅಳೈತ್ತು ವಾಳ್ವಿತ್ತ ಪೆರುಮಾಳ್. ಅವರಿಗೆ ಹಲವು ತಿರುವಂಶಗಳು, ತಿರುಮಾಳಿಗೈಗಳು ಮತ್ತು ದಿವ್ಯ ದೇಶಗಳಿಂದ ತುಂಬ ಶಿಷ್ಯರಿದ್ದರು.

ಪರಮಪದ ಹೊಂದಿದ ಸ್ಥಳ: ತಿರುವರಂಗಂ (ಶ್ರೀರಂಗಂ)

ಕೃತಿಗಳು

ಪ್ರಬಂದಂಗಳು: ಶ್ರೀ ದೇವರಾಜ ಮಂಗಳಂ, ಯತಿರಾಜ ವಿಂಶತಿ, ಉಪದೇಶ ರತ್ನಮಾಲೈ, ತಿರುವಾಯ್ಮೊಳಿ ನೂತ್ತಾಂದಾದಿ, ಆರ್ತಿ ಪ್ರಬಂಧಂ
ವ್ಯಾಖ್ಯಾನಗಳು: ಮುಮುಕ್ಷುಪಡಿ, ತತ್ತ್ವ ತ್ರಯಂ, ಶ್ರೀವಚನ ಭೂಷನಂ, ಆಚಾರ್ಯ ಹೃದಯಂ, ಪೆರಿಯಾೞ್ವಾರ್ ತಿರುಮೊೞಿ (ಪೆರಿಯವಾಚ್ಚಾನ್ ಪಿಳ್ಳೈಯವರ ವ್ಯಾಖ್ಯಾನದಿಂದ ಉಳಿದವು ), ರಾಮಾನುಜ ನೂತ್ತಂದಾದಿ.
ಪ್ರಮಾಣ ಸಂಗ್ರಹ (ಶ್ಲೋಕ, ಶಾಸ್ತ್ರ ವಾಕ್ಯಗಳ ಸಂಕಲನ): ಈಡು 36000 ಪಡಿ, ಜ್ಞಾನ ಸಾರಂ, ಪ್ರಮೇಯ ಸಾರಂ, ತತ್ತ್ವ ತ್ರಯಂ, ಶ್ರೀವಚನ ಭೂಷನಂ

ಮಣವಾಳ ಮಾಮುನಿಗಳ ತನಿಯನ್

ಶ್ರೀಶೈಲೇಶ ದಯಾಪಾತ್ರಮ್ ಧೀಭಕ್ತ್ಯಾದಿ ಗುಣಾರ್ಣವಮ್ |
ಯತೀoದ್ರ ಪ್ರವಣವಂನ್ದೇ ರಮ್ಯಜಾಮಾತರಂ ಮುನಿಮ್ ||

ಅಡಿಯೇನ್ (ಶ್ರೀ ರಂಗನಾಥನ್) ಪೂಜಿಸುವ ಮಣವಾಳ ಮಾಮುನಿಗಳ್ ಅವರನ್ನು ತಿರುವಾಯ್ಮೊಳಿ ಪಿಳ್ಳೈ ಅವರ ದಯೆ ಗುರಿಯಾಗಿಸಿಕೊಂಡಿದ್ದಾರೆ, ಇವರು ಜ್ಞಾನ, ಭಕ್ತಿ, ವೈರಾಗ್ಯ, ಇತ್ಯಾದಿಗಳ ಸಾಗರ ಮತ್ತು ಎಮ್ಬೆರುಮಾನಾರ್ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ.

ಮಣವಾಳ ಮಾಮುನಿಗಳ ವಾೞಿ ತಿರುನಾಮಮ್

ಇಪ್ಪುವಿಯಿಲ್ ಅರನ್ಗೇಶರ್ಕ್ಕು ಈಡು ಅಳಿತ್ತಾನ್ ವಾೞಿಯೇ
ಎೞಿಲ್ ತಿರುವಾಇಮೊೞಿಪ್ ಪಿಳ್ಳ್ಳೈ ಇಣೈಯಡಿಯೋನ್ ವಾೞಿಯೇ
ಐಪ್ಪಸಿಯಿಲ್ ತಿರುಮೂಲತ್ತು ಅವದರಿತ್ತಾನ್ ವಾೞಿಯೇ
ಅರವರಸಪ್ ಪೆರುಮ್ ಶೋದಿ ಅನನ್ದನ್ ಎನ್Rಉಮ್ ಆೞಿಯೇ
ಎಪ್ಪುವಿಯುಮ್ ಶ್ರೀಶೈಲಮ್ ಏತ್ತವನ್ದೋನ್ ವಾೞಿಯೇ
ಏರಾರುಮ್ ಎದಿರಾಸರ್ ಎನ ಉದಿತ್ತಾನ್ ವಾೞಿಯೇ
ಮುಪ್ಪಿರಿನೂಲ್ ಮಣಿವಡಮುಮ್ ಮುಕ್ಕೋಲ್ ದರಿತ್ತಾನ್ ವಾೞಿಯೇ
ಮೂದಱಿಯ ಮಣವಾಳ ಮಾಮುನಿವನ್ ವಾೞಿಯೇ

(ತಿರುನಾಳ್ ಪಾಟ್ಟು- ತಿರುನಕ್ಷತ್ರವಾದ ಮೂಲ ನಕ್ಷತ್ರದ ದಿನಗಳಂದು ಪಠಿಸಲಾಗುತ್ತದೆ)

ಶೆಂದಮಿಳ್ ವೇದಿಯರ್ ಶಿಂದೈ ತೆಳಿಂದು ಶಿರಂದು ಮಗಿಳ್ನ್ದಡುನಾಳ್
ಶೀರ್ ಉಲಗಾರಿಯರ್ ಶೆಯ್ದರುಳ್ ನರ್ಕಲೈ ತೇರು ಪೊಲಿಂದಿರುನಾಳ್
ಮಂದ ಮದಿ ಪ್ಪುವಿ ಮಾನಿಡರ್ ತಂಗಳೈ ವಾನಿಲ್ ಉಯರ್ತ್ತೀಡುನಾಳ್
ಮಾಶರು ಜ್ಞಾನಿಯರ್ ಶೇಖರ್ ಎದಿರಾಶರ್ ತಂ ವಾಳ್ವು ಮುಳೈತ್ತಿಡುನಾಳ್
ಕಂದ ಮಲರ್ ಪ್ಪೊಳಿಲ್ ಶೂಳ್ ಕುರುಗಾದಿಬನ್ ಕಲೈಗಳ್ ವಿಳಂಗಿಡುನಾಳ್
ಕಾರಮರ್ ಮೇನಿ ಅರಂಗ ನಗರ್ ಕ್ಕಿರೈ ಕಣ್ಗಳ್ ಕಳಿತ್ತಿಡುನಾಳ್
ಅಂದಮಿಲ್ ಶೀರ್ ಮಣವಾಳ ಮುನಿಪ್ಪರನ್ ಅವದಾರಂ ಶೆಯ್ದಿಡುನಾಳ್
ಅಳಗು ತಿಗಳ್ನ್ದಿ ಡುಂ ಐಪ್ಪಶಿಯಿಲ್ ತಿರುಮೂಲಂ ಅದೆನು ನಾಳೇ
ಮಣವಾಳ ಮಾಮುನಿಗಳ್ ತಿರುವಡಿಗಳೇ ಶರಣಂ

ಅಡಿಯೇನ್ ಕಸ್ತೂರಿ ರಂಗನ್ ರಾಮಾನುಜ ದಾಸನ್

ಮೂಲ : https://granthams.koyil.org/2022/12/05/azhwarthirunagari-vaibhavam-4-english/

ಆರ್ಕೈವ್ ಮಾಡಲಾಗಿದೆ – https://granthams.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org

Leave a Comment